ಚಿತ್ರಕೃಪೆ: ಅಂತರ್ಜಾಲ
ಕೂಪಮಂಡೂಕದೊಡನೆ ಸಂವಾದ !
[ಆತ್ಮೀಯ ಓದುಗಮಿತ್ರರೇ, ಜಗದಮಿತ್ರನ ಕಾವ್ಯದ ೨೯ನೇ ಕಂತನ್ನು ಲೋಕಾರ್ಪಣೆಗೈದಿದ್ದೇನೆ. ವಾಸ್ತವದಲ್ಲಿ ಇದು ೩೩ನೇ ಕಂತು, ೩-೪ ವಿಶೇಷ ಕಂತುಗಳನ್ನು ಇಲ್ಲಿ ಪ್ರಕಟಿಸದೇ ಮುಂಬರುವ ’ಜಗದಮಿತ್ರನ ಕಗ್ಗ’ ಪುಸ್ತಕಕ್ಕಾಗಿ ಕಾಯ್ದಿರಿಸಿದ್ದೇನೆ]
ಮೊಲಕೆ ಮೂರೇಕಾಲು ನಾಕು ಇಲ್ಲೆಂದೆನುತ
ಹೊಲದ ಕೂಪದ ಕಪ್ಪೆ ಆಗುವುದು ತರವೇ?
ಬಿಲವೆ ಮಹಲೆನಗೆಂಬ ಇಲಿಗುಂಟೆ ಹುಲಿಯರಿವು ?
ಗೆಲುವು ಅರಿತಾಮೇಲೆ | ಜಗದಮಿತ್ರ
ಅದು ಕಾಣುವಾವರೆಗೆ ನಿನ್ನರಿವು ಇದಕೆ ಮಿತ
ಇದುವದುವು ಅಳಿಯುವುದು ನವ್ಯದರಿವಿನಲಿ !
ಕೆದಕುತ್ತ ನಡೆವಂಗೆ ಕೊನೆಯಿಲ್ಲ ಶೋಧನೆಗೆ
ಬದುಕು ವೈಶಾಲ್ಯದಲಿ | ಜಗದಮಿತ್ರ
ಮುಕ್ತಮನದಿಂದೊಮ್ಮೆ ನಿತ್ಯ ಹೊಸದನು ಅರಿತು
ವ್ಯಕ್ತಿತ್ವ ಬೆಳೆಸಿಕೊಳು ಹಲವು ಹರವಿನಲಿ
ತ್ಯಕ್ತವಪ್ಪುದೆ ನಿಜವು ತ್ಯಜಿಸೆ ಕೆಲಜನವದನ ?
ಶಕ್ತ ನೀನಾಗರಿತು | ಜಗದಮಿತ್ರ
ಅಣುವ ಕಾಣುವ ಮುನ್ನ ಅಣುವಿಗಾಗಿಯೆ ಶೋಧ
ಪಣತೊಟ್ಟು ಹುಡುಕಿದರು ಪರಮಾಣುಗಳನು
ಕಣಕಣವು ದೈವತವು ವಿಜ್ಞಾನ ಸೀಮಿತವು
ಗುಣದಲ್ಲೆ ನಿರ್ಗುಣವು | ಜಗದಮಿತ್ರ
ಮಡಿಯುಟ್ಟು ದೇವಳದಿ ಇಡಿದಿನವ ಕಳೆಯುತ್ತ
ಕಡೆಗೊಮ್ಮೆ ಶಿವನೆ ಕೇಶವನೆ ಗತಿಯೆನದೆ
ತೊಡಗಿ ಕರ್ತವ್ಯದಿಂ ನಡೆಸು ಜೀವನವನ್ನು
ಬಡವಧನಿಕನು ನೀನೆ ! ಜಗದಮಿತ್ರ
ಚಂದ್ರಲೋಕಕೆ ತೆರಳಿ ತಂದರದೊ ಮೃತ್ತಿಕೆಯ
ಇಂದ್ರಲೋಕವು ಕಂಡರಚ್ಚರಿಯೆ ತಡದಿ ?
ಮಂದ್ರದಲಿ ಸುಳ್ಳೆಸುಳ್ಳೆನುತ ವಾದಿಪಗಿಲ್ಲಿ
ಸಂದ್ರ ಸಂಶೋಧಕಗೆ | ಜಗದಮಿತ್ರ
ವೇದಗಳು ಹೇಳಿದವು ಮೂಲರೂಪದ ಮಹಿಮೆ
ಶೋಧನೆಗೆ ಆಕಾಶ ಅವಕಾಶ ಇಹದಿ
ಭೇದಿಸಲು ಅದನೊಂದ ಮತ್ತೊಂದು ಕಾಣುವುದು
ಸಾಧನೆಗೆ ಫಲವುಂಟು | ಜಗದಮಿತ್ರ
ಮಡಿಯು ಪಂಚೆಯಲಲ್ಲ ಮನದಲ್ಲಿ ಭಾವದಲಿ
ಬಡಿದಾಟ ಮೇಲ್ತನಕೆ ಬರಿದೆ ಬಡಿವಾರ
ತೊಡೆದುಹಾಕಾನಿನ್ನ ಕಲ್ಮಶವನನುದಿನವು
ಬಡವ ನೀನ್ ಜ್ಞಾನದೊಳು | ಜಗದಮಿತ್ರ
ಮೆರವಣಿಗೆ ಜೈಕಾರ ಹಿತಮಿತದಿ ಇರಲಷ್ಟೆ
ಬರಹಗಳ ಸುಳ್ಳು ದಾಖಲೆ ಕಂತೆ ಬೇಕೆ ?
ತೆರೆದಿರಿಸು ಮನವನಾಗಸದೆತ್ತರಕೆ ಎಲ್ಲು
ಬಿರಿದು ದೊಡ್ಡವನಾಗು | ಜಗದಮಿತ್ರ
ನಾವು ಕಂಡಿದ್ದೆಲ್ಲ ಸತ್ಯವೇ ಇರಬಹುದು
ಹಾವು ಹುತ್ತದೊಳಿರಲು ತೋರುವುದು ಹೇಗೆ?
ಭಾವುಕತೆ ಬದಿಗೊತ್ತಿ ಮನದ ಮೇಲ್ಸ್ತರದಲ್ಲಿ
ಠಾವು ಅದ್ವೈತಮಯ | ಜಗದಮಿತ್ರ
This comment has been removed by the author.
ReplyDeleteHi V R Bhat, pls note u as a journalist should stand on neutral platform n analyse the things but it seems u hv a strong mind set to defaming a particular philosophy or a grp of people, tat should not b the case...offcourse u cannot harm its status even a .00000000000001%, but pls dont go by people , pls go by topic( not vyakthi it should b vichara vinimaya not a personal fight) because u had many such debates in the past tats the grtness of our vedik culture , v critically analyse before accepting whether Dwaith-advaitha-vishishtadvaitha, for ur kind info Aadi Sankara ru also had debate with many scholars in those days do u say he did fight..? no na then y it comes to others? pls think urself..
ReplyDeleteಹೋದೆಯಾ ಪಿಶಾಚಿ ಅ೦ದ್ರೆ ಬ೦ದೆ ಗವಾಕ್ಷೀಲಿ ಅನ್ನೋ ಹಾಗೆ ನಿಮ್ಮ "ಪ್ರತಿವಾದಿ ಭಯಂಕರ" ಮಿತ್ರರು ಇಲ್ಲೂ ಬಿಜಯ೦ಗೈಸಿದ್ದಾರಲ್ರೀ ಭಟ್ರೇ!!!! ನೀವು ಕಗ್ಗದ ಹೆಸರಲ್ಲಿ ಹೊಸೆದ ಹಾಡು ಅವರಿಗೆ ನಾಟಿದೆ ಎನಿಸುತ್ತಿದೆ. ರೇಷ್ಮೆ ರುಮಾಲಿನಲ್ಲಿ ಸುತ್ತಿ ಹೊಡೆಯುವ ಕಲೆ ನಿಮಗೂ ಸಿದ್ಧಿಸಿದೆ ಅಲ್ಲವೇ? ಹಾ ಹಾ ಹಾ, ಮು೦ದುವರೆಸಿ.
ReplyDeleteದಿ.ವಿ.ಜಿ.ಯವರ ಮಂಕು ತಿಮ್ಮನ ಕಗ್ಗಡ ೮೦೯ ನೇ ಪದ್ಯ ಇಂತಿದೆ;
ReplyDeleteದ್ವೈತವೇನ್ ಅದ್ವೈತವೇನ್ ಆತ್ಮ ದರ್ಶನಿಗೆ?
ಶ್ರೌತಾ ವಿಧಿಯೇನು? ತಪ ನಿಯಮವೇನು?
ನೀತಿ ಸರ್ವಾತ್ಮ ಮತಿ ಅದರಿನ್ ಅಮಿತ ಪ್ರೀತಿ
ಭೀತಿ ಇಲ್ಲದನ್ ಅವನು- ಮಂಕು ತಿಮ್ಮ.
ಅದಕ್ಕೆ ಶ್ರೀಕಾಂತ್ ಅವರು ಕೊಟ್ಟ ತಾತ್ಪರ್ಯ ಇಂತಿದೆ;
ಪರಮಾತ್ಮನನ್ನು ಅರಿತು ಕೊಂಡವನಿಗೆ ದ್ವೈತ,ಅದ್ವೈತಗಳೆರಡೂ ಒಂದೇ.ಅವನು ಶ್ರುತಿಗಳನ್ನು ಓದಬೇಕಿಲ್ಲ.ಅವನು ತಪಸ್ಸು ಮತ್ತು ವ್ರತಗಳನ್ನು ಪಾಲಿಸಬೇಕಿಲ್ಲ.ಪ್ರಪಂಚದ ಎಲ್ಲದರಲ್ಲೂ ತನ್ನನ್ನೇ ಕಾಣುವ ಸ್ವಭಾವದಿಂದ ಅವನು ಎಲ್ಲದರಲ್ಲೂ ಅತಿಶಯವಾದ ಪ್ರೀತಿಯನ್ನು ಹೊಂದಿರುತ್ತಾನೆ.ಆದ್ದರಿಂದ ಅವನು ಭೀತಿ ಇಲ್ಲದವನು.
Quantum Physics ನ ಪಿತಾಮಹನಾದ ಮ್ಯಾಕ್ಸ್ ಪ್ಲಾಂಕ್ ನ ಪ್ರಕಾರ "AT THE SUB ATOMIC LEVEL A WAVE CAN EITHER BE SEEN AS A WAVE OR A PARTICLE.IT ALL DEPENDS ON THE SEER.IF YOU WANT TO SEE A WAVE YOU WILL SEE A WAVE AND IF YOU WANT TO SEE A PARTICLE YOU WILL SEE A PARTICLE."
ದ್ವೈತ ಅದ್ವೈತ ಸಿದ್ಧಾಂತಗಳೂ ಅಷ್ಟೇ ಎನ್ನುವುದು ನನ್ನ ಅನಿಸಿಕೆ.ನಮಸ್ಕಾರ.
ಸರ್,
Deleteತಮ್ಮ ಈ ಹೇಳಿಕೆಯನ್ನು ನಾನು ಸದಾ ಒಪ್ಪುತ್ತೇನೆ. ಒಳಗಿರುವ ಅವನಿಗೆ ಎಲ್ಲವೂ ಒಂದೇ ಅಥವಾ ಭೇದವೇ ಐಲ್ಲ. ಪಂಚಭೂತಾತ್ಮಕವಾದ್ ಈ ಪ್ರಪಂಚದಲ್ಲಿ ಸೃಷ್ಟಿಯೇ ಶೂನ್ಯದಿಂದ ಮತ್ತು ವಿನಾಶದ ನಂತರ ಆ ಶೂನ್ಯವೇ ಉಳಿಯುತ್ತದೆ. ಹಾಗಾದ್ರೆ ಆ ಶೂನ್ಯ ಶೂನ್ಯವೇ? ಅಲ್ಲ ನಮ್ಮ ದೃಷ್ಟಿಗೆ ಅದು ಶೂನ್ಯ, ಆದರೆ ಅದು ಅಗಾಧ.
It is only intensive intellectual property of one’s mind where one starts feeling “from one to all form all to one” ! There is no dualism in the invisible real world which is one & unique, there are only multiple views depending on how the on looker look at it!
ತಮಗೆ ಧನ್ಯವಾದಗಳು.
Dear V.R.Bhat.
ReplyDeleteನಿಜವಾದ ಅದ್ವೈತದ ಅನುಭೂತಿಗೆ ದೇವರ ಕಲ್ಪನೆಯ ಅವಶ್ಯಕತೆ ಇದೆಯೇ? ಅದ್ವೈತದ ಅನುಭೂತಿಗೆ ನೀವು ಒಪ್ಪುವ ಪ್ರಮಾಣ ವೇನು ?
Sir Prabhakar, naavu eethara nidanake yogya reeti inda mathadtidivi..., adre avrige charche madadu hege annode gothilde bari jagala madodu, kopa madkondu kettadagi innobba mathada gnanigallana avahelana madodashte imp , so prayojana illa bidi inthor hatra vaada madi... adike spl qualities irbeku, vaada madakke, thakathu irbeku, sumne jagala adidange alla...bere bere id use madi namanna bayode ivr kelsa hahaa.........
ReplyDeleteDear Pradeep,
ReplyDeleteI always believe argument is an exchange of ignorance whereas dialogue is an exchange of intelligence.let us see .I can understand your concern. Any how thanks for your views.
Regards
ಮಡಿಯು ಪಂಚೆಯಲಲ್ಲ ಮನದಲ್ಲಿ ಭಾವದಲಿ
ReplyDeleteಬಡಿದಾಟ ಮೇಲ್ತನಕೆ ಬರಿದೆ ಬಡಿವಾರ
ತೊಡೆದುಹಾಕಾನಿನ್ನ ಕಲ್ಮಶವನನುದಿನವು
ಬಡವ ನೀನ್ ಜ್ಞಾನದೊಳು | ಜಗದಮಿತ್ರ
Very Nice sir.....