ಕುಮಾರಾಮಾಯಣ ಮತ್ತು ಸುಮಾಭಾರತ !
ಕುಮಾರಾಮಾಯಣ ಪೂರ್ವಂ ಕುಮಾರ ಬೆಂಗಳೂರಾದಿ ಗಮನಂ
ಥರಥರದ ಸರ್ಕಸ್ಗಳುಂ |
ರಾಧಿಕಾ ಪಾಣಿಗ್ರಹಣಂ ಶಮಿಕಾ ಜನನಂ
’ಕಸ್ತೂರಿ’ ಪರಿಶಿಂಚನಂ |
ಖುರ್ಚಿ ವೇದನ ಶಾಸಕಾನರ್ಹ ಯುದ್ಧಂ
ಮೀಡಿಯಾ ಸಂಭಾಷಣಂ |
ಪಶ್ಚಾದರ್ಥಮನರ್ಥಂ ನವಿಜಯಂ
ಏತಧ್ಯ ಕುಮಾರಾಮಾಯಣಂ ||
ಸುಮಾಭಾರತ
ಆದೌ ಶಿವಮೊಗ್ಗ ಜಿಲ್ಲೆಯಲ್ಲಿ ಜನನಂ
ರಾಸ್ವಂಸ ಸೇವಾರ್ಪಣಂ |
ಮಾಯಾಜಾಲವನೇಕಮಂ ಜಯಿಸುತಂ
ತಾ ಗೆದ್ದು ಖುರ್ಚಿಂಗಳಂ |
ನ್ಯಾಯಚ್ಛೇದನ ಭೂಮಿಖಾತೆ ಹರಣಂ
ತಾ ನುಂಗುತಂ ಗುಳುಗುಳುಂ |
’ಶೋಭಾ’ಯಾತ್ರೆಯೇ ಪ್ರಖರಮುಂ
ಮಿಕ್ಕೆಲ್ಲ ಹಿರಿಯರ್ಗೆ ಧಿಕ್ಕಾರವುಂ |
ಫೆವಿಕಾಲ್ ಆನೋಬಾಂಡಾದಿ ರಹಿತಂ
ಖುರ್ಚಿಮಾತ್ರಂ ಅಚಲವುಂ|
ಊರ್ಮೇಲ್ ಊರ್ಬಿದ್ರೆ ಯಾರಪ್ನ ಗಂಟ್ಹೋಯ್ತುಂ ?
ಕೇಳಿ ಸುಮಹಾಭಾರತಂ ||