ಬರ್ನರ್ ಕೊಡಿ ರೊಕ್ಕ ತಗಳಿ !
[ ಸ್ನೇಹಿತರೇ ಪುನರಪಿ ನಮಸ್ಕಾರಗಳು, ಮುಂದುವರಿದ ಹಾಸ್ಯಸಪ್ತಾಹದಲ್ಲಿ ಇಂದು ನಾಲ್ಕನೇ ದಿನಕ್ಕೆ ಬಂದು ನಿಂತಿದೆ ನಮ್ಮ ರಥ. ದಿನವೂ ಹಲವು ಜನ ಓದುತ್ತಾ ಪ್ರತಿಕ್ರಿಯಿಸುತ್ತಿರುವುದು ಸಂತಸತಂದಿದೆ, ಜನ್ಮದಲ್ಲೇ ನೋವಿಲ್ಲದ ಜೀವನ ಯಾವ ಜೀವಿಯದ್ದೂ ಅಲ್ಲ. ಬುದ್ಧಿಜೀವಿ ಎನಿಸಿಕೊಂಡ ಮಾನವನಿಗಂತೂ ಬದುಕಿನ ಹಲವು ಮಗ್ಗಲುಗಳಲ್ಲಿ ವಿಧಿಯ ನೋವಿನ ಚಾಟಿ ಏಟು ಬೀಳುತ್ತಲೇ ಇರುತ್ತದೆ. ಆದರೆ ಅದನ್ನೇ ಅಲವತ್ತುಕೊಳ್ಳುತ್ತ ಕೂರಲಾಗುವುದೇ? ಶಾರೀರಿಕ ನೋವನ್ನು ಮರೆಯಲು ಮಾತ್ರೆಗಳನ್ನು ನುಂಗುತ್ತೀರಿ, ಮಾನಸಿಕ ನೋವನ್ನು ಯೋಗ-ಧ್ಯಾನಗಳಿಂದ ಕಮ್ಮಿಮಾಡಿಕೊಳ್ಳಬಹುದಾದರೂ ಹಲವರಿಗೆ ಅದು ಇನ್ನೂ ಅಪಥ್ಯ. ಹೀಗಾಗಿ ತಾತ್ಕಾಲಿಕವಾಗಿಯಾದರೂ ಉಪಶಮನ ಪಡೆಯಲು ಹಾಸ್ಯಲಹರಿ ಸೂಕ್ತ ಮಾರ್ಗ. ವೃತ್ತಿ ಜೀವನದ ನೋವುಗಳನ್ನೇ ನಲಿವಾಗಿ ಕಂಡ ನನ್ನ ಸ್ವಾನುಭವದ ಸ್ವಾರಸ್ಯಗಳಲ್ಲಿ ಕೆಲವನ್ನು ಇಂದು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ, ತಡಮಾಡಬೇಡಿ : ’ಬರ್ನರ್ ಕೊಡಿ ರೊಕ್ಕ ತಗಳಿ’ ]
ವೃತ್ತಿ ಜೀವನದ ಕೆಲವು ಸ್ವಾರಸ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಕಾಲ. ನನ್ನ ವೃತ್ತಿಯ ಒಂದು ಭಾಗ ಗಣಕಯಂತ್ರ ಹಾಗೂ ತತ್ಸಂಬಂಧೀ ಉಪಕರಣಗಳು, ಜೋಡಣೆಗಳು ಇವುಗಳನ್ನು ಮಾರುವುದು, ಸರಬರಾಜುಮಾಡುವುದು. ಇಲ್ಲಿ ನಾವು ನಡೆಸುವ ವೃತ್ತಿಯಲ್ಲೇ ಹೇಗೆ ಹಾಸ್ಯದ ಸನ್ನಿವೇಶಗಳು ಸಿಗುತ್ತವೆ ಎಂಬುದನ್ನು ಹೇಳಹೊರಟಿದ್ದೇನೆ.
ಗಣಕಯಂತ್ರಕ್ಕೆ ವೈರಸ್ ಅಟ್ಯಾಕ್ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ; ಆದರೆ ವೈರಸ್ ಎಂದರೆ ಅದೊಂದು ಥರದ ಯಾವುದೋ ಕ್ರಿಮಿ ಮನುಷ್ಯ ಶರೀರವನ್ನು ಪ್ರವೇಶಿಸಿದಂತೇ ಗಣಕಯಂತ್ರವನ್ನೂ ಹೊಕ್ಕು ಹಾಳುಗೆಡವುತ್ತದೆ ಅಂತಲೋ ತಿಂದುಹಾಕುತ್ತದೆ ಎಂತಲೋ ತಿಳಿದುಕೊಂಡವರೇ ಜಾಸ್ತಿ ಎಂತ ನನ್ನ ಭಾವನೆ. ಎಲ್ಲೋ ಕೆಲವು ಜನರಿಗೆ ಅದೇನೋ ಬೇರೇ ಥರದ್ದು ಎಂಬ ಸಂಶಯವಿದ್ದರೂ ಅವರಿಗಿರುವ ಕೀಳರಿಮೆ ಅಥವಾ ಅಹಂ ನಿಂದ ಸಮಸ್ಯೆ ಏನು ಎಂದು ತಿಳಿದುಕೊಳ್ಳಲು ಅವರು ಮುಂದಾಗುವುದಿಲ್ಲ. ಹಿಂದೊಮ್ಮೆ ೯೬-೯೭ರಲ್ಲಿ ಹಲವು ವಯಸ್ಕರಿಗೆ ಅವರ ಮಕ್ಕಳು ಗಣಕಯಂತ್ರ ಉಪಯೋಗಿಸುವುದನ್ನು ಕಲಿತಿದ್ದರೂ ತಮಗೇ ಬರುವುದಿಲ್ಲವಲ್ಲಾ ಎಂಬ ಬೇಗುದಿಯಿತ್ತು. ಶ್ರೀಮಾನ್ ದೇವೇಗೌಡರು ಪ್ರಧಾನಿಯಾಗಿದ್ದ ತರಾತುರಿಯಲ್ಲಿ ಅನಿವಾರ್ಯ ಬಳಕೆಗೆ ಬೇಕಾಗಿ ಬರದ ಹಿಂದೀ ಭಾಷೆಯನ್ನು ರಾತ್ರೋರಾತ್ರಿ ಯಾವುದೋ ಪಂಡಿತರಿಂದ ಕಲಿತುಕೊಳ್ಳಲು ಮುಂದಾಗಿದ್ದರಂತೆ! ಅದೇ ರೀತಿ ಇಲ್ಲೂ ಆ ಪಾಲಕರು ಕದ್ದೂ ಮುಚ್ಚಿ ಕಲಿತು ತಮಗೂ ಬರುತ್ತದೆ ಎಂದು ಹೇಳಿಕೊಳ್ಳಲು ತೊಡಗಿದ್ದರು. ಇಲ್ಲೊಂದು ಮಾತು- ಮನುಷ್ಯ ಹುಟ್ತಾ ಯಾವುದೂ ಬಂದಿರುವುದಿಲ್ಲ[ಉಮಹೆ ಬಿಟ್ಟು!]ಮಿಕ್ಕಿದ್ದನ್ನೆಲ್ಲಾ ಕಲಿಯಲೇಬೇಕು. ಗೊತ್ತಿರದ ವಿಷಯವನ್ನು ಗೊತ್ತಿರುವವರಿಂದ ಅಭ್ಯಸಿಸಿದರೆ ಮರ್ಯಾದೆಯೇನು ಹೋಗುತ್ತದೆ ಗಂಟು ? ಅದಕ್ಕೆ ಸಿಗ್ಗಾಗುವುದೇಕೆ?
ಗಣಕಯಂತ್ರಕ್ಕೆ ತಗಲುವ ವೈರಸ್‍ಗೆ ಒಂದೇ ವ್ಯಾಖ್ಯೆ ಕೊಡುತ್ತೇನೆ ನೋಡಿ - ವೈರಸ್ ಈಸ್ ಆಲ್ಸೋ ಎ ಸಾಫ್ಟ್ ವೇರ್ ಡಿಸ್ಟ್ರಕ್ಟಿವ್ ಇನ್ ನೇಚರ್ ! ವೈರಸ್ ಎಂಬುದೂ ಒಂದು ತಂತ್ರಾಂಶ ಹಾಳುಗೆಡವುವ ಸ್ವಭಾವವುಳ್ಳದ್ದು. ವೈರಸ್‍ನಲ್ಲಿ ವಿಭಿನ್ನ ತರಗತಿಯ ವಿಭಿನ್ನ ರೀತಿಯ ವೈರಸ್‍ಗಳಿವೆ. ಈಗಗಲೇ ಸರಿಸುಮಾರು ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯ ಗುರುತಿಸಲ್ಪಟ್ಟ ವೈರಸ್‍ಗಳಿವೆ. ಇನ್ನು ಗುರುತಿಸದೇ ಇರುವಂಥದ್ದರ ಬಗ್ಗೆ ತಿಳಿದಿಲ್ಲ. ನಿರುದ್ಯೋಗಿ ತಂತ್ರಾಂಶ ಅಭಿಯಂತರರು ಸ್ವ-ಉದ್ಯೋಗ ಸೃಷ್ಟಿಗಾಗಿ ರೂಪಿಸಿಕೊಂಡ ಒಂದು ಮಾರ್ಗ ಇದು. ಆದರೆ ಯಾವ ವೈರಸ್ಸನ್ನು ಎಲ್ಲಿ ಯಾರು ಬರೆಯುತ್ತಾರೆ ಹೇಗೆ ಕಳಿಸುತ್ತಾರೆ ಎಂಬುದು ಯಾರೂ ತಲೆಕೆಡಿಸಿಕೊಳ್ಳದ ವಿಷಯ! ವೈರಸ್ ತಯಾರಿಸುವುದು ಸೈಬರ್ ಕಾನೂನು ಪ್ರಕಾರ ನಿಷೇಧ. ಆದರೆ ತಯಾರಿಸುವವರನ್ನು ಹುಡುಕಲೇ ಆಗದ ತಂತ್ರಜ್ಞಾನ ಅದಾಗಿದೆ. ಮುಖ್ಯವಾಗಿ ಅಂತರ್ಜಾಲದಲ್ಲಿ ಆಮೇಲೆ ಒಂದು ಯಂತ್ರದಿಂದ ಇನ್ನೊಂದಕ್ಕೆ, ಕೆಲವೊಮ್ಮೆ ಉಪಗ್ರಹಗಳ ಮೂಲಕ ಹೀಗೇ ಹಲವಾರು ದಾರಿಗಳಲ್ಲಿ ತೂರಿಬರುವ ವೈರಸ್ ಗಣಕಯಂತ್ರದ ಸ್ವಾಸ್ಥ್ಯ ಸಂಹಿತೆಗೆ ಮಾರಕ.ವೈರಸ್ ಬಂದ ಗಣಕಯಂತ್ರ ಕಾಯಿಲೆಯಿಂದ ಬಳಲುವ ಮನುಷ್ಯನಂತೇ ಆಗುತ್ತದೆ. ಹಲವು ಕೆಲಸಗಳು ಸರಿಯಾಗಿ ನಡೆಯುವುದಿಲ್ಲ, ಯಂತ್ರದ ಬಿಡಿಭಾಗಗಳು ಹಾಳುಗೆಡವಲ್ಪಡಬಹುದು, ಕೂಡಿಟ್ಟ ಮಾಹಿತಿ-ದತ್ತಪದಗಳು ನಿಶ್ಶೇಷವಾಗಬಹುದು, ಯಂತ್ರ ತನ್ನ ಕೆಲಸವನ್ನೇ ಸಂಪೂರ್ಣ ಸ್ಥಗಿತಗೊಳಿಸಲೂ ಬಹುದು. ಬಂದ ’ಅತಿಥಿ’ಯನ್ನು ಅವಲಂಬಿಸಿ ಯಂತ್ರದ ತಿಥಿ ನಡೆಯುತ್ತದೆ!
ವೈರಸ್ ಏನೆಂಬುದೇ ಗೊತ್ತಿರದ ಜನ ನನ್ನಲ್ಲಿ ಕೇಳುವುದಿತ್ತು. ಅದಕ್ಕೆ ಯಾವ ಔಷಧಿ ಹಾಕಬೇಕು. ಮೆಟಾಸಿನ್ ಹಾಕಬಹುದೇ? ಹಿಟ್ ಸ್ಪ್ರೇ ಮಾಡಬಹುದೇ ? ಬೋರಿಕ್ ಆಸಿಡ್ ಹಾಕಿದರೆ ಹೇಗೆ? ಇವೆಲ್ಲಾ ಥರಥರದ ಪ್ರಶ್ನೆಗಳು ಹಲವುವರ್ಷಗಳ ಕಾಲ ನಮ್ಮ ಮುಂದೆ ಬರುತ್ತಿದ್ದವು. ಗೊತ್ತಿರದ ಜನರ ಮುಗ್ಧ ಮನೋಭಾವಕ್ಕೆ ನಗು ಬರುವಂತಾದರೂ ತಿಳಿದುಕೊಳ್ಳಲು ಪ್ರಯತ್ನಿಸದ ಅವರ ಅಹಂಭಾವಕ್ಕೆ ಕೋಪವೂ ಬರುತ್ತಿತ್ತು. ಆದರೂ ನಕ್ಕರೆ ಕೋಪಮಾಡಿಕೊಂಡರೆ ಗಿರಾಕಿ ತಪ್ಪಿಹೋಗ್ಬಹುದಲ್ವೇ ? ಅದಕ್ಕೇ ದಂಧೆಯ ಸಹಜ ಸ್ವಾರ್ಥಪರತೆಯಿಂದ ದಂಧೆಯಲ್ಲಿ ಸಣ್ಣ ವೈಶ್ಯರೇ ಆದ ನಾವು ನಮ್ಮಲ್ಲಿ ಉದ್ಭವಿಸುವ ಆ ಭಾವನೆಗಳನ್ನು ಅದುಮಿಕೊಂಡು ಕೂರುತ್ತಿದ್ದೆವು. ಆ ತರಬೇತಿಯಿಂದ ಇಂದಿಗೂ ಸುತ್ತಲ ಹತ್ತುಸಾವಿರ ಜನ ನಕ್ಕರೂ ಏನೂ ಆಗಿಲ್ಲವೆಂಬಂತೇ ಸುಮ್ಮನೇ ಭಾವರಹಿತವಾಗಿ ಇರಲು ಅಭ್ಯಾಸವಾಗಿದೆ, ನಗಲೂ ಬರುತ್ತದೆ-ಶಿಲ್ಪಾ ಶೆಟ್ಟಿಯ ನಗುವಿನ ಹಾಗೇ ಬೇಕಾದ್ರೆ ಆನು ಬೇಡಾಂದ್ರೆ ಆಫು! ನಗುವಿನಲ್ಲೂ ಹತ್ತುಪೈಸೆ ನಗು, ನಾಲ್ಕಾಣೆ ನಗು, ಮಿನಿನಗು, ಮೆಗಾನಗು ಹೀಗೇ ಸಂದರ್ಭೋಚಿತವಾಗಿ ನಗಲು ನಮಗೆ ಬೆಂಗಳೂರಿಗರು ಕಲಿಸಿದ್ದಾರೆ!
ಇರಲಿ, ವೈರಸ್‍ಗಳ ನಿರ್ವಹಣೆಯೇ ಒಂದು ಜವಾಬ್ದಾರಿಯುತ ಕೆಲಸ. ಆ ಕೆಲಸಕ್ಕೆ ಕೆಲವು ಕಂಪನಿಗಳು ತಮ್ಮ ಉತ್ಫನ್ನಗಳನ್ನು ಕೊಟ್ಟು ಒಡಂಬಡಿಕೆ ಮಾಡಿಕೊಳ್ಳುತ್ತವೆ. ವರ್ಷಪೂರ್ತಿ ಯಾವುದೇ ವೈರಸ್ ಬರದ ಹಾಗೇ ಗೇಟ್ ಕೀಪರ್ ಕೆಲಸ ಮಾಡುವ ತಂತ್ರಾಂಶಗಳಿವೆ; ಅದಕ್ಕೆ ಪೂರಕ ಹಾರ್ಡ್‍ವೇರ್ ಗಳೂ ಇವೆ. ನಮ್ಮ ಕಂಪನಿಯಲ್ಲಿ ನಾವು ನಮ್ಮ ಗ್ರಾಹಕರಿಗೆ ಪರಿಹಾರ ಹೇಳುವುದು ಹೀಗಿದೆ-- ಯಾರು ’ಆಂಟಿವೈರಸ್’ ಅಥವಾ ವೈರಸ್ ವ್ಯಾಕ್ಸಿನ್ ತಯಾರಿಸುತ್ತಾರೋ ಅವರನ್ನು ನಮ್ಮ ಕಕ್ಷೆಗೆ ಸಿಕ್ಕಿಸಿಕೊಂಡು ನಿಮ್ಮ ಯಂತ್ರಗಳಿಗೆ ಪರಿಪೂರ್ಣ ವಿಶ್ವಾಸಾರ್ಹ ಪರಿಹಾರವನ್ನು ಕಾಣಿಸುತ್ತೇವೆ, ಜೊತೆಗೆ ಒಂದು ವರ್ಷದ ಕಾಲ ನಡೆಯುವ ಈ ಕೆಲಸಕ್ಕೆ ನೀವು ಅಲ್ಪಪ್ರಾಮಾಣದ ಹಣವನ್ನು ಕೊಡಬೇಕಾಗುತ್ತದೆ ಎಂಬುದಾಗಿ. ಹಾಗೆ ತೆಗೆದುಕೊಂಡ ಹಣ ವ್ಯಾಕ್ಸಿನ್ ತಯಾರಕ ಕಂಪನಿಗೆ ಸೇರುತ್ತದೆ. ಅವರು ಕಾಲಕಲಕ್ಕೆ ಅಂತರ್ಜಾಲದ ಮೂಲಕ ಅವರ ಸರ್ವರ್ ಯಂತ್ರಗಳಿಂದ ನಿಭಾಯಿಸಲು ಬೇಕಾದ ವ್ಯಾಕ್ಸಿನ್ ಕಳಿಸುತ್ತಿರುತ್ತಾರೆ; ಅಪ್‍ಡೇಟ್ / ಅಪ್‍ಗ್ರೇಡ್ ಮಾಡುತ್ತಿರುತ್ತಾರೆ. ವರ್ಷದ ನಂತರ ಮತ್ತೆ ಹೊಸ ಒಡಂಬಡಿಕೆ. ಇದರಿಂದ ಮಾತ್ರ ಮುಕ್ತಿ ಸಾಧ್ಯವೇ ಹೊರತು ಇಲ್ಲದಿದ್ದರೆ ವೈರಸ್‍ಗಳು ಅಲ್ಲಲ್ಲೇ ಅಡಗಿರುತ್ತವೆ. ಅಂತರ್ಜಾಲದಲ್ಲಿ ಸಿಗುವ ಯಾವುದೇ ಫ್ರೀ ವ್ಯಾಕ್ಸಿನ್ ಉಪಯೋಗವಿರುವುದಿಲ್ಲ-ಬಿಟ್ಟಿಯಲ್ಲಿ ಅವರೇಕೆ ಕೊಡುತ್ತಾರೆ ಎಂಬುದನ್ನು ಒಮ್ಮೆ ಯೋಚಿಸಿ! ಎಮ್ಮೆ ಕಟ್ಟಿದ ಮೇಲೆ ದಾಬ [ಹಗ್ಗ] ತೆಗೆದುಕೊಳ್ಳಲು ಸಾಧ್ಯವಿಲ್ಲವೇ?
ಒಬ್ಬ ಮಹಾಶಯ ಬಾಡಿಗೆ ಮನೆಯಲ್ಲಿ ವಾಸವಿದ್ದ. ಗಣಕಯಂತ್ರವನ್ನು ನಮ್ಮಿಂದಲೇ ಖರೀದಿಸಿದ. ಯಂತ್ರಕ್ಕೆ ಗ್ರೌಂಡಿಂಗ್ [ಅರ್ಥಿಂಗ್]ಬೇಕು ಎಂದು ತಿಳಿಸಿದ್ದೆವು. ನನಗೆ ತೀರಾ ಆಪ್ತನೂ ಆದ ಅವರ ಮನೆಗೆ ನಾನೂ ಹುಡುಗರ ಜೊತೆಯಲ್ಲಿ ಸ್ಥಾಪನೆಗೆ ಅಲ್ಲಿಗೆ ಹೋದೆ. ಅಲ್ಲಿನ ದೃಶ್ಯ ಬೇಡವೆಂದರೂ ಮರೆಯುವುದಿಲ್ಲ! ಕಂಪ್ಯೂಟರಿಗೆ ಹಾಕಿರುವ ಪ್ಲಗ್ ಪಾಯಿಂಟ್‍ನಿಂದ ಒಂದು ತಾಮ್ರದ ತಂತಿಯನ್ನು ಎಳೆದು ಸ್ವಲ್ಪ ದೂರದಲ್ಲಿ ಮೇಜಿನ ಕೆಳಗಿರುವ, ಮಣ್ಣು ತುಂಬಿರುವ ಬಕೆಟ್ ನಲ್ಲಿ ಚುಚ್ಚಲಾಗಿತ್ತು! ಅರ್ಥಿಂಗ್ ತಾನೇ ಬೇಕು. ಭೂಮಿಯ ಭಾಗವನ್ನೇ ಬಕೆಟ್‍ನಲ್ಲಿ ತುಂಬಿದ್ದೇನೆ ಸಾಲದೇ ? ಎನ್ನುವ ಪ್ರಶ್ನೆ ಕೇಳಿ ಬಾಯಿಯ ನರಗಳೆಲ್ಲಾ ಸಡಿಲವಾಗಿ ಹೋದವು! ಅರ್ಥಿಂಗ್ ಎಂದರೆ ನಮ್ಮ ಶರೀರದ ಹಾಗೂ ಯಂತ್ರದ ಸ್ವಾಸ್ಥ್ಯದ ರಕ್ಷಣೆಗೆ ಬೇಕಾಗಿ ಅನಿಯಂತ್ರಿತ ವಿದ್ಯುತ್ ಪೂರೈಕೆಗೊಂಡಾಗ ಬ್ಯಾಲೆನ್ಸ್ ತಪ್ಪಿದಾಗ ಆಗುವ ಹೆಚ್ಚುವರಿ ವಿದ್ಯುತ್ತು ತಂತಿಯ ಮೂಲಕ ಭೂಗರ್ಭ ಸೇರುವ ವ್ಯವಸ್ಥೆ. ಅದಕ್ಕೆ 6 x 2 x 2 or 6 x 1 x 1 ಅಳತೆಯಲ್ಲಿ ಹೊಂಡ ತೆಗೆದು ಇದ್ದಿಲು, ಉಪ್ಪು, ಮರಳು ಇತ್ಯಾದಿ ಸಾಮಗ್ರಿಗಳನ್ನು ಗೊತ್ತಾದ ಪರಿಮಾಣಗಳಲ್ಲಿ ಹಾಕಿ ಸರಿಯಾಗಿ ಮಾಡಬೇಕಾದ ವ್ಯವಸ್ಥೆ ಅರ್ಥಿಂಗ್. ಅದರ ಬದಲು ಬಕೆಟ್ನಲ್ಲೇ ಅರ್ಥಿಂಗ್ ಮಾಡಿದ ಅತ್ಯದ್ಭುತ ಕೌಶಲ್ಯ ಆಶ್ಚರ್ಯವೂ ಮರುಕವೂ ಆಯ್ತು; ಆತ ಏನಾದ್ರೂ ತಿಳಕೊಳ್ಲಿ ಅಂತ ತಡೆಯಲಾರದೇ ನಕ್ಕುಬಿಟ್ಟೆ ಕಣ್ರಿ.
ಇನ್ನೊಬ್ಬ ಮಹಾಶಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚೊಂದರ ಮ್ಯಾನೇಜರು. ಆತ ನಮ್ಮಲ್ಲಿ ಆಗ್ರಹ ಪೂರ್ವಕವಾಗಿ ಆರ್ಡರ್ ಕೊಟ್ಟ. ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ಬಂದ ಪ್ರತಿಯೊಂದೂ ಸಾಫ್ಟ್ ವೇರ್ ಹೆಸರನ್ನೂ ಬರೆದು ಪಟ್ಟಿಮಾಡಿದ್ದ ಆತ ಎಲ್ಲವನ್ನೂ ತನ್ನ ಕಂಪ್ಯೂಟರಿಗೆ ಹಾಕಿಕೊಡಬೇಕು ಎಂಬ ತಾಕೀತು ಮಾಡಿದ. ಗಣಕಯಂತ್ರಕ್ಕೆ ಎಲ್ಲವನ್ನೂ ತುರುಕುವುದಲ್ಲ, ಆಯಾ ಉಪಯೋಗಕ್ಕೆ ತಕ್ಕಂತೇ ತಂತ್ರಾಂಶಗಳನ್ನು ಹಾಕಿಕೊಳ್ಳಬೇಕಾಗುತ್ತದೆಯೇ ಹೊರತು ಕಂಡಕಂಡ ಎಲ್ಲಾ ತಂತ್ರಾಂಶವನ್ನೂ ಹಾಕಿದರೆ ಅದು ಕೆಲಸಮಾಡುವ ಬದಲು ಗೊಂದಲದ ಗೂಡಾಗಿ ನಿಷ್ಕ್ರಿಯವಾಗುತ್ತದೆ ಎಂದು ಎಷ್ಟೇ ತಿಳಿಸಿ ಹೇಳಿದರೂ ಕೇಳಲಿಲ್ಲ! ಕೊನೆಗೆ ಅವನ ಹತ್ತಿರದ ಬಳಗದಲ್ಲಿ ಯಾರದರೂ ಸಾಫ್ಟ್ ವೇರ್ ಎಂಜಿನೀಯರ್ ಇದ್ದಾರಾ ಎಂಬುದನ್ನು ತಿಳಿದೆವು, ಹಾಗೊಬ್ಬ ಇರುವುದಾಗಿ ತಿಳಿಯಿತು, ಗಾಡ್ ಈಸ್ ಗ್ರೇಟ್ ನಾವು ಸದ್ಯ ಬದುಕಿದೆವು! ಆತನಿಗೆ ವಿನಂತಿಸಿ ನಿಮ್ಮ ಈ ಸಂಬಂಧಿಕರಿಗೆ ಸ್ವಲ್ಪ ವಿವರಿಸಿ ಹೇಳಿ ಎಂದು ಕೇಳಿಕೊಂಡೆವು. ಆತ ಫೋನಿನಲ್ಲೇ ಮುಕ್ಕಾಲು ಗಂಟೆ ಮಾತನಾಡಿ ತಿಳಿಸಿ ಹೇಳಿದಮೇಲೆ ಗಿರಾಕಿ ಸುಮ್ಮನಾದ!
ಸುಮಾರು ೮ ವರ್ಷಗಳ ಹಿಂದೆ ಉತ್ತರ ಕರ್ನಾಟಕ ಮೂಲದ ಗ್ರಾಹಕರೊಬ್ಬರು ನಮಗೆ ಆರ್ಡರ್ ಕೊಟ್ಟರು. ಮಾತಿನಂತೇ ೧೦ ಗಣಕಯಂತ್ರಗಳನ್ನು ಅವರಿಗೆ ಪುರವಟೆ ಮಾಡಿ ಅವರ ಕಚೇರಿಯಲ್ಲಿ ಸ್ಥಾಪಿಸಲಾಯಿತು. ಕೆಲಸಗಳೆಲ್ಲಾ ಮುಗಿದಮೇಲೆ ನಮಗೆ ಬರಬೇಕಾದ ಬಾಕಿ ಹಣಕ್ಕಾಗಿ ಕೇಳಿದೆವು. " ನೀರೋ ಬರ್ನರ್ ಗಳು ಬರ್ತಾವಂತಲ್ಲಾ ಅವನ್ನೆಲ್ಲಾ ಕೊಡ್ರಿ ಆಮೇಲೆ ನಿಮ್ಮ ಹಣ ಚುಕ್ತಾ ಮಾಡ್ತೀವಿ. ಬರ್ನರ್ ಕೊಡಿ ರೊಕ್ಕ ತಗಳಿ " ಒಂದೇ ಗೋಳು. ನೀರೋ ಬರ್ನರ್ ಎಂದರೆ ಗ್ಯಾಸ್ ಸ್ಟವ್ ಬರ್ನರ್ ಇದ್ದಹಾಗೇ ಯಾವುದೋ ಬಿಡಿಭಾಗ ಇರಬೇಕೆಂದುಕೊಂಡಿದ್ದ ಆಸಾಮಿಗೆ ಅದೊಂದು ತಂತ್ರಾಂಶವೆಂದೂ ಅದನ್ನು ಸೀಡಿ ಬರೆಯಲು ಬಳಸುತ್ತಾರೆಂದೂ ಎಷ್ಟೇ ಹೇಳಿದರೂ ನಂಬಿಕೆಯೇ ಇರಲಿಲ್ಲ! ಯಾರ್ಯಾರಿಗೋ ಫೋನು ಮಾಡಿದರು, ಆ ಬಗ್ಗೆ ಹಲವಾರು ಗಂಟೆಗಳ ಕಾಲ ಚರ್ಚೆ ನಡೆಸಿದರು. ಆಮೇಲೆ ಅಂತೂ ಅದು ಸಾಫ್ಟ್ ವೇರ್ ಎಂಬುದು ಖಾತ್ರಿಯಾದ ಮೇಲೇ ಹಣ ಪಾವತಿಸಿದರು.