ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, July 26, 2012

|| ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||

 ಚಿತ್ರಗಳು: ಅಂತರ್ಜಾಲ
|| ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ 
ಜಾತವೇದೋ ಮ ಆವಹ ||
ವೇದ ಎಂಬುದು ವಿಜ್ಞಾನ; ವೇದಮಂತ್ರಗಳ ಅರ್ಥವನ್ನು ಅರಿಯಲಾಗದ ಜನರಿಗೆ ಅದು ಕಬ್ಬಿಣದ ಕಡಲೆ ಎನ್ನಿಸಿ ಯಾರೋ ವೈದಿಕರಿಗೆ ದಕ್ಷಿಣೆ ಕಾಸು ಕೊಟ್ಟರೆ ಪೂಜೆ ಮಾಡುತ್ತಾರೆ ಎಂಬಂತಾಗಿಬಿಟ್ಟಿದೆ; ಎಷ್ಟೋ ಜನ ಪೂಜೆ ನಡೆಸುತ್ತಿರುವಾಗ ಯಾರಲ್ಲಿಯೋ ಮಾತನಾಡುತ್ತಿರುವುದು, ಬಂದ ಅತಿಥಿ-ಅಭ್ಯಾಗತರಲ್ಲಿ ಹರಟುವುದು, ದೂರವಾಣಿ ಸಂಭಾಷಣೆ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಅಸಂಬದ್ಧ ಪ್ರಲಾಪ..ಇವನ್ನೆಲ್ಲಾ ನಡೆಸುತ್ತಿರುತ್ತಾರೆ. ಪುರೋಹಿತರು "ಮಂಗಲಾರ್ತಿ ಮಾಡಬಹುದೇ ?" ಎಂದಾಗ ಎಚ್ಚೆತ್ತುಕೊಳ್ಳುತ್ತಾರೆ! ಇದು ಪೂಜೆಯ ಸರಿಯಾದ ಕ್ರಮವಲ್ಲ. ಪೂಜೆ ಮಾಡಿಸುವಾಗ/ಮಾಡುವಾಗ ನಮ್ಮ ಗಮನ ಮಂತ್ರಗಳ ಅರ್ಥವ್ಯಾಪ್ತಿಯನ್ನು ಗ್ರಹಿಸುತ್ತಿರಬೇಕು, ನಾವು ಆರಾಧಿಸುವ ಸಗುಣರೂಪದಲ್ಲಿ ನಮ್ಮ ಮನ ನೆಟ್ಟಿರಬೇಕು. ಶ್ರದ್ಧೆ ಎಲ್ಲದಕ್ಕೂ ಮೂಲವಾಗಿ ಬೇಕು. ಶ್ರೀಸೂಕ್ತದ ಮಂತ್ರಭಾಗಗಳಿಗೆ ಅಲ್ಪ ಪ್ರಮಾಣದ, ನೇರ ನೋಟದ ಅರ್ಥವನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದೇನೆ:

ಈ ಭೂಮಿಯ ಮೇಲೆ ನಾವು ಬದುಕಬೇಕೆಂದರೆ ಸಿರಿಯ ಕಟಾಕ್ಷ ಇರಲೇ ಬೇಕು. ಅದು ನಗದೋ, ವಸ್ತುವೋ, ಧಾನ್ಯವೋ, ಸಂತಾನವೋ, ಆಭರಣವೋ, ಧೇನುವೋ, ಮತ್ತೊಂದೋ ಎಲ್ಲವೂ ಲಕ್ಷ್ಮಿಯ ಬಹುರೂಪಗಳೇ. ಲಕ್ಷ್ಮಿಯ ಒಲುಮೆ ಇಲ್ಲದ ವ್ಯಕ್ತಿಗೆ ಇಲ್ಲಿನ ಬದುಕು ದುರ್ಭರವೇ ಸರಿ. ಜಗನ್ನಿಯಾಮಕ ಶಕ್ತಿಯನ್ನೇ ಸಿರಿದೇವೀ ರೂಪದಲ್ಲಿ ಕಂಡವರು ನಮ್ಮ ಋಷಿಮುನಿಗಳು. ಆಮೇಲಿನ ಕಥೆ ನಮಗೆ ತಿಳಿದೇ ಇದೆ: ದೇವತೆಗಳ-ರಕ್ಕಸರ ಸಮುದ್ರ ಮಥನದ ಕಾಲದಲ್ಲಿ ಚಂದ್ರ ಸಹೋದರಿಯಾಗಿ ಹುಟ್ಟಿದವಳು ಶ್ರೀಲಕ್ಷ್ಮೀ ಎಂಬುದು ಒಂದು ಕಥೆ. ಸಾಗರ ರಾಜ ತನ್ನ ಪ್ರೀತಿಯ ಮಗಳಾದ ಲಕ್ಷ್ಮಿಯನ್ನು ಮದುವೆ ಮಾಡುವಾಗ ಯಾರಿಗೆ ಕೊಡಲಿ ಎಂದು ಚಣಕಾಲ ಚಿಂತಿಸಿದನಂತೆ. ಬ್ರಹ್ಮನನ್ನು ನೋಡಿದರೆ ವರಸಾಮ್ಯ ಕಂಡುಬರಲಿಲ್ಲ; ಮಹಾದೇವನನ್ನು ದರ್ಶಿಸಿದರೆ ಆತ ಸ್ಮಶಾನವಾಸಿ-ಬೂದುಬಡಕ-ಗಜಚರ್ಮಾಂಬರ ಧಾರಿ; ಹೀಗೇ ಅವಲೋಕಿಸುತ್ತಾ ಮುನ್ನಡೆದ ಸಾಗರ ಮಹಾರಾಜನಿಗೆ ಪೀತಾಂಬರಧಾರಿಯಾದ ಮಹಾವಿಷ್ಣು ಕಾಣಿಸಿದ-ಅವನೇ ತಕ್ಕವನೆಂದು ತನ್ನ ಮಗಳನ್ನು ಧಾರೆಯೆರೆದ ಎಂಬುದು ಇನ್ನೊಂದು ಕಥೆ! ನಾವೇ ಸೃಷ್ಟಿಸಿದ ದೇವರ ಸಗುಣರೂಪಗಳಲ್ಲಿ ಭಿನ್ನ-ಭೇದವನ್ನು ಹೇಳುವವರೂ ನಾವೇ ಆಗಿದ್ದೇವೆ. ಮಿತಿಯುಳ್ಳ ನಮ್ಮ ಚಕ್ಷುಗಳಿಗೆ ಮೂಲದ ಅರಿವಾದರೂ ಬರಲು ಸಾಧ್ಯವೇ?    

ಮನದನ್ನೆಯಾಗಿ ಬಂದ ಲಕ್ಷ್ಮಿಯನ್ನು ಸಿರಿಗೇ ಒಡತಿ ಎಂದನಂತೆ ಅಚ್ಯುತ. ಅಂತಹ ಮಹಾಲಕ್ಷ್ಮಿ ಸಿರಿರಮಣನ ಕಾಂತೆಯಾಗಿ ವೈಭವದಿಂದ ಕ್ಷೀರಸಾಗರದಲ್ಲಿ ಶೇಷಶಯನನಾದ ಆತನ ಕಾಲು ಒತ್ತುತ್ತಾ ಇರುವಂತೆಯೇ ಲೋಕಸಂಚಾರಮಾಡುತ್ತಾ ಇರುತ್ತಾಳೆ ಎಂಬುದು ಬಲ್ಲವರ ನಂಬಿಕೆ. ನಮ್ಮಲ್ಲಿ ಹಳ್ಳಿಗಳಲ್ಲಿ ಮುಸ್ಸಂಜೆಯ ಹೊತ್ತು ಮನೆಯ ಹೊರಗೂ ಒಳಗೂ ದೀಪಮುಡಿಸಿ ಲಕ್ಷ್ಮಿ ಬರುವ ಹೊತ್ತು ಎಂದು ಬಾಗಿಲು ತೆರೆದಿಡುವ ಪದ್ಧತಿ ಇತ್ತು; ಈ ಕಲಿಯುಗದಲ್ಲಿ ಕಳ್ಳರ, ದರೋಡೆಕೋರರ ಕಥೆಗಳನ್ನು ಟಿವಿಗಳಲ್ಲಿ ಕಂಡಿದ್ದೇ ಲಕ್ಷ್ಮಿದೇವಿಯನ್ನು "ನೀನು ಹಗಲು ಹೊತ್ತೇ ಬಾರಮ್ಮಾ, ಸಂಜೆ ನಮಗೆ ಬಾಗಿಲು ತೆರೆದಿಡಲು ಭಯವಾಗುತ್ತಿದೆ" ಎಂದು ಪ್ರಾರ್ಥಿಸುತ್ತಾರೆ ಎನಿಸುತ್ತಿದೆ; ಯಾಕೆಂದರೆ ಈಗೀಗ ಹಳ್ಳಿಗಳಲ್ಲೂ ಕೂಡ ಬಾಗಿಲು ತೆರೆದಿಡುವ ಪರಿಪಾಟ ಕಮ್ಮಿಯಾಗುತ್ತಿದೆ.

ಚಂಚಲ ಮನಸ್ಕಳಾದ ಲಕ್ಷ್ಮಿ ನಿಂತಲ್ಲಿ ನಿಲ್ಲುವುದಿಲ್ಲ ಎಂಬ ಮಾತೊಂದಿದೆ. ಆಕೆ ಒಂದಷ್ಟು ದಿನ ಒಂದು ಕಡೆ ಇದ್ದರೆ ಮತ್ತೊಂದಷ್ಟು ದಿನ ಮತ್ತೆಲ್ಲಿಗೋ ತೆರಳುತ್ತಾಳೆ ಎಂದು ಜಿಜ್ಞಾಸುಗಳು ಹೇಳುತ್ತಾರೆ. || ಸದಾವಲಂಬಮ್ || ಎಂದು ಸದಾ ಲಕ್ಷ್ಮಿಯನ್ನೇ ಕಾಲು ಹಿಡಿದು ಬದುಕದಿದ್ದರೆ ಆಕೆ ನಿಲ್ಲುವುದೇ ಇಲ್ಲ. ಆಕೆಯ ಒಲಿಕೆಗೆ ಬೇಕಾಗಿ ನಾನಾ ವಿಧದ ಪೂಜೆ,ಪ್ರಾರ್ಥನೆ, ಜಪ-ತಪ, ಹೋಮ-ನೇಮ ಇತ್ಯಾದಿಗಳೆಲ್ಲಾ ನಡೆಯುತ್ತಲೇ ಇರುತ್ತವೆ. ದೇಶದಲ್ಲಿ: ಮಹಾಲಕ್ಷ್ಮಿ ದೇವಸ್ಥಾನ-ದಹನು,ಅಷ್ಟಲಕ್ಷ್ಮಿ ಕೋವಿಲ್-ಚೆನ್ನೈ, ಅಷ್ಟಲಕ್ಷ್ಮಿ ದೇವಸ್ಥಾನ-ಹೈದರಾಬಾದ್, ಮಹಾಲಕ್ಷ್ಮಿ ದೇವಸ್ಥಾನ-ಕೊಲ್ಹಾಪುರ, ಮಹಾಲಕ್ಷ್ಮಿ ದೇವಸ್ಥಾನ-ಮುಂಬೈ, ಮಹಾಲಕ್ಷ್ಮಿ ದೇವಸ್ಥಾನ-ಗೊರವನಹಳ್ಳಿ[ಬೆಂಗಳೂರಿನ ಹತ್ತಿರ], ಮಹಾಲಕ್ಷ್ಮಿ ದೇವಸ್ಥಾನ-ಕೋಯಮತ್ತೂರು ..ಇವು ಹೆಸರುವಾಸಿ ಪೂಜಾ ಮಂದಿರಗಳಾಗಿವೆ. ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನ ದೇಶದ ೧೮ ಪ್ರಮುಖ ಶಕ್ತಿಕೇಂದ್ರಗಳಲ್ಲೇ ಒಂದು ಎಂದು ಖ್ಯಾತವಾಗಿದೆ.

ಧನವಿಲ್ಲದ ಜೀವನ ಬಣಬಣ. ಧನ ಎಂಬ ಪದದ ವಿರುದ್ಧಾರ್ಥಕ ಪದ ಋಣ ! ಋಣಮುಕ್ತನಾಗಿ ಬದುಕುವ ವ್ಯಕ್ತಿಗೆ ಧನಕನಕ ಪ್ರಾಪ್ತಿ ಅನಿವಾರ್ಯ-ಸಹಜ. ಮಗು ಹುಟ್ಟಿದಾಗಿನಿಂದ ಅಥವಾ ಹುಟ್ಟುವಾಗಿನ ಆಸ್ಪತ್ರೆಯ ಖರ್ಚಿನಿಂದ ಆರಂಭವಾಗುವ ಇಹಜೀವನದ ಯಾತ್ರೆಗೆ ತಗಲುವ ವೆಚ್ಚ ಇಂತಿಷ್ಟು ಎಂದು ಹೇಳಲು ಸಾಧ್ಯವಾಗುವುದಿಲ್ಲ; ಬರುವಾಗ ಯಾರೂ ತರುವುದಿಲ್ಲಾ-ಹೋಗುವಾಗ ಒಯ್ಯುವುದಿಲ್ಲಾ ಎಲ್ಲಾ ಸರಿ ಆದರೆ ಇಲ್ಲಿರುವವರೆಗೆ ಎಲ್ಲರಿಗೂ ಅದು ಬೇಕು. ಧನವಿದ್ದರೇ ವಿದ್ಯೆ, ಉದ್ಯೋಗ, ಆರೋಗ್ಯ, ಮನೆ-ಮಕ್ಕಳು-ಸಂಸಾರ ಹೀಗೇ ಎಲ್ಲಾ.

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ |
ಪದವೀಂ ಪೂರ್ವಪುಣ್ಯಾನಾಂ ಲಿಖ್ಯತೇ ಜನ್ಮಪತ್ರಿಕಾ ||

ಎಂಬುದೊಂದು ಉಲ್ಲೇಖವನ್ನು ಪ್ರಾಜ್ಞರು ತಿಳಿಸಿಕೊಟ್ಟಿದ್ದಾರೆ. ಈ ಭುವಿಯಲ್ಲಿ-ಈ ಜನ್ಮದಲ್ಲಿ ದುಡಿದಿದ್ದಕ್ಕಿಂತಾ ಹೆಚ್ಚಾಗಿ ಹಿಂದಿನ ಜನ್ಮಗಳ ಸುಕೃತವೋ ಕುಕೃತವೋ ಆ ಸಂಚಿತ ಕರ್ಮಫಲಗಳನ್ನು ವ್ಯಕ್ತಿ ಅನುಭವಿಸುತ್ತಿರುತ್ತಾನೆ. ಕೆಲವರು ೨೪ ಗಂಟೆ ಶ್ರಮಜೀವಿಗಳಾದರೂ ಅವರಲ್ಲಿ ಹಣವಿರುವುದಿಲ್ಲ, ಇನ್ನು ಕೆಲವರು ಬೀಡಾಡಿಗಳಾಗಿ ಕಾಲಹರಣಮಾಡುತ್ತಿದ್ದರೂ ಅದೆಲ್ಲಿಂದಲೋ ಅವರ ಕೈಗೆ ಹಣಪ್ರಾಪ್ತವಾಗುತ್ತಿರುತ್ತದೆ. || ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯ || ಎಂದೂ ತಿಳಿಸಲು ನಮ್ಮ ಪೂರ್ವಜರು ಮರೆಯಲಿಲ್ಲ. ಕಷ್ಟಾರ್ಜಿತದಲ್ಲೇ ಮನೆಯನ್ನು ಕಟ್ಟಿದರೂ ಮನೆಯಲ್ಲಿ ಉಳಿಯುವ/ಮನೆಯನ್ನು ಉಳಿಸಿಕೊಳ್ಳುವ ಅದೃಷ್ಟ ವ್ಯಕ್ತಿಗಿರದೇ ಹೋಗಬಹುದು. ಬೆಂಗಳೂರಿನ ಒಬ್ಬ ಶೆಟ್ಟರು ಕುಲಕಸುಬಿನಿಂದ ವ್ಯಾಪಾರೀ ವೃತ್ತಿಯಲ್ಲಿದ್ದರು. ಕಷ್ಟದಲ್ಲೇ ಮನೆಯೊಂದನ್ನು ಬಹಳ ಆಸ್ಥೆವಹಿಸಿ ಕಟ್ಟಿದ್ದರು. ಕೊನೇಹಂತದಲ್ಲಿ ಹಣ ಕಮ್ಮಿಯಾಗಿ ಬ್ಯಾಂಕಿನ ಸಾಲ ಪಡೆದರು. ಕಟ್ಟಿದಮನೆಯಲ್ಲಿ ಕೆಲವರುಷ ಕಳೆದರು. ಹೆಂಡತಿ-ಮಕ್ಕಳ ಆರೋಗ್ಯ ಸರಿಯಿರದಾಯ್ತು, ವ್ಯಾಪಾರ-ವಹಿವಾಟು ಹದಗೆಟ್ಟಿತು; ಬ್ಯಾಂಕಿನ ಸಾಲಕ್ಕೆ ಬಡ್ಡಿಯನ್ನೂ ಕೊಡುವ ತಾಕತ್ತು ಉಳಿಯಲಿಲ್ಲ; ಮನೆಯನ್ನು ಮಾರಿ ಬಾಡಿಗೆಮನೆಯನ್ನು ಹಿಡಿದರು! ಕಟ್ಟಿದ ಮನೆಯನ್ನೂ ಹುಟ್ಟಿದ ಮಗುವನ್ನೂ ಕಳೆದುಕೊಳ್ಳುವ ನೋವು ಬಣ್ಣಿಸಲು ಸಾಧ್ಯವಾಗುವಂಥದ್ದಲ್ಲ. ಬಡವ ನಿರೀಕ್ಷೆಗೂ ಮೀರಿ ಶ್ರೀಮಂತನಾಗುತ್ತಾನೆ; ಕೋಟ್ಯಧಿಪತಿ ಧಡಾರನೆ ಕುಸಿದು ಕೂರುತ್ತಾನೆ!  ಇದೇ ಈ ಲಕ್ಷ್ಮಿಯ ಮಹಿಮೆ.

ಲಕ್ಷ್ಮಿಯ ಒಲುಮೆಗಾಗಿ ಆಚರಿಸಲ್ಪಡುವ ವ್ರತಗಳಲ್ಲಿ ಶ್ರಾವಣದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮಿ ವ್ರತವೂ ಒಂದು. [ಮಹಾದೇವ ಶಿವ ತನ್ನ ಮಡದಿ ಪಾರ್ವತಿಗೆ ಸಂಪತ್ಪ್ರಾಪ್ತಿಗಾಗಿ ಈ ವ್ರತವನ್ನು ಬೋಧಿಸಿದನೆಂದೂ, ತಮ್ಮ ಕಷ್ಟಗಳ ನಿವಾರಣೆಗೆ ಕನಸಿನಲ್ಲಿ ಕಂಡು ಶ್ರೀಲಕ್ಷ್ಮಿ ಬೋಧಿಸಿದ ಈ ವ್ರತವನ್ನು ಪೂರ್ವದಲ್ಲಿ ಮಗಧದೇಶದಲ್ಲಿ ವಾಸವಿದ್ದ ಕುಂಡಿನಪುರದ  ಚಾರುಮತಿ ಎಂಬ ಸಾಧ್ವಿ ಮತ್ತವಳ ಪತಿ ಭುವಿಯಲ್ಲಿ ಆರಂಭಿಸಿದರೆಂದೂ ಸಾರುವ ಕಥೆಗಳಿವೆ. ಚಾರುಮತಿಗೆ ಈ ಪೂಜೆಯಿಂದ ಇಷ್ಟಾರ್ಥ ಪ್ರಾಪ್ತಿಯಾದುದನ್ನು ಕಂಡ ಆ ಭೂಭಾಗದ ತಾವೂ ವ್ರತವನ್ನು ಅಚರಿಸಿದರೆಂದೂ ತಿಳಿದುಬರುತ್ತದೆ. ] ಮನೆ ಚೊಕ್ಕಟಗೊಳಿಸಿ, ಮನೆಯ ಮುಂದೆ ಸಾರಿಸಿ, ವಿಧವಿಧದ ರಂಗೋಲಿಗಳನ್ನಿಟ್ಟು, ಸ್ನಾನಮಾಡುವ ಮಹಿಳೆಯರು ಶುಚಿರ್ಭೂತರಾದ ಬಳಿಕ ಶಕ್ತ್ಯಾನುಸಾರ ಬಂಗಾರ/ಬೆಳ್ಳಿ/ತಾಮ್ರ/ಹಿತ್ತಾಳೆ ಕಲಸ್೦ಹಪಾತ್ರೆಯಲ್ಲಿ ಶುದ್ಧ ನೀರನ್ನು ತುಂಬಿ, ಆ ಪಾತ್ರೆಯನ್ನು ಅಗ್ರದ ಬಾಳೆಲೆ[ಕುಡಿಬಾಳೆ]ಅಥವಾ ಹರಿವಾಣದಲ್ಲಿ ಇಟ್ಟ ಬೊಗಸೆಗೂ ಅಧಿಕ ಅಕ್ಕಿರಾಶಿಯ ಮಧ್ಯದಲ್ಲಿ ಪ್ರತಿಷ್ಠಾಪಿಸುತ್ತಾರೆ.  ಅದರಮೇಲೆ ಐದು ಎಲೆಗಳಿರುವ ಮಾವಿನ ತುಂಕೆಯನ್ನಿರಿಸಿ, ತೆಂಗಿನ ಕಾಯಿಯನ್ನಿಟ್ಟು ಅರಿಶಿನ-ಕುಂಕುಮ, ಮಂಗಲ ದ್ರವ್ಯಗಳಿಂದ ಅಲಂಕರಿಸುತ್ತಾರೆ. ಅನೇಕರು ಆಡಂಬರ ತೋರುವವರಾಗಿ ಲಕ್ಷ್ಮಿಯ ವಿಗ್ರಹ ಅಥವಾ ಅಕೃತಿಯನ್ನು ಸೃಜಿಸಿ ಕಲಶಕ್ಕೆ ಜೋಡಿಸುತ್ತಾರೆ. ಒಂಬತ್ತು ಗಂಟುಗಳ ದಾರಗಳನ್ನು ಕಲಶಕ್ಕೆ ಕಟ್ಟಿ ಇನ್ನೊಂದನ್ನು ತಮ್ಮ ಕೈಗೆ ಕಟ್ಟಿಕೊಳ್ಳುತ್ತಾರೆ. ಸೀರೆ-ಆಭರಣ-ವಿವಿಧ ಹೂವುಗಳೇ ಮೊದಲಾದ ಅಲಂಕಾರಿಕ ಪರಿಕರಗಳಿಂದಲೂ ಬಂಗಾರ/ಬೆಳ್ಳಿ ಮುಖವಾಡಗಳಿಂದಲೂ ಲಕ್ಷ್ಮಿಯನ್ನು ಅಲಂಕರಿಸಿ ಎಲ್ಲರಿಗೂ ತೋರಿಸಿ ಹೆಮ್ಮೆಪಡುತ್ತಾರೆ. ನವವಿಧ ಭಕ್ಷ್ಯಗಳನ್ನು ನಿವೇದಿಸಿ ಮಂಗಲಾರತಿ ಬೆಳಗುತ್ತಾರೆ. ಅಕ್ಕಪಕ್ಕದ ಮುತ್ತೈದೆಯರನ್ನು ಕರೆದು ಅರಿಶಿನ-ಕುಂಕುಮ,ಫಲ-ತಾಂಬೂಲ ಕೊಟ್ಟು ನಮಸ್ಕರಿಸುತ್ತಾರೆ. ಈ ವ್ರತದಲ್ಲಿ ವೈದಿಕ ವಿಧಿಗಿಂತ ಪ್ರಾಕೃತ ವಿಧಿಗಳೇ ಜಾಸ್ತಿ ಮತ್ತು ಇದನ್ನು ಹೆಂಗಸರೇ ನೆರವೇರಿಸುವುದು ವಾಡಿಕೆ. ದೇಶದ ದಕ್ಷಿಣಪ್ರಾಂತದಲ್ಲಿ ಮಾತ್ರ ಈ ವ್ರತ ಜಾಸ್ತಿ ಕಂಡುಬರುತ್ತದೆ. 

ದಾರಿದ್ರ್ಯ ಹನನಕ್ಕಾಗಿ, ಜನ್ಮಾಂತರದ ಕುಕೃತಫಲಗಳ ನಿವಾರಣೆಗಾಗಿ ಋಗ್ವೇದದಲ್ಲಿ ಹೇಳಲಾದ ಶ್ರೀಸೂಕ್ತವನ್ನು ಬಳಸುವುದು ಸನಾತನ ಪೂಜಾಪಾದ್ಧತಿಯ ಅವಿಭಾಜ್ಯ ಅಂಗವೇ ಎನ್ನಬೇಕು. ಶ್ರೀಸೂಕ್ತವನ್ನು ವೈದಿಕರು ರಾಗವಾಗಿ ಪಠಿಸುವಾಗ ಕೇಳಿದ್ದೇವೆಯೇ ಹೊರತು ಅದರ ಅರ್ಥವ್ಯಾಪ್ತಿಯ ಬಗೆಗೆ ನಾವೆಂದೂ ತಲೆಕೆಡಿಸಿಕೊಂಡವರಲ್ಲ ಅಲ್ಲವೇ? ವೇದ ಎಂಬುದು ವಿಜ್ಞಾನ; ವೇದಮಂತ್ರಗಳ ಅರ್ಥವನ್ನು ಅರಿಯಲಾಗದ ಜನರಿಗೆ ಅದು ಕಬ್ಬಿಣದ ಕಡಲೆ ಎನ್ನಿಸಿ ಯಾರೋ ವೈದಿಕರಿಗೆ ದಕ್ಷಿಣೆ ಕಾಸು ಕೊಟ್ಟರೆ ಪೂಜೆ ಮಾಡುತ್ತಾರೆ ಎಂಬಂತಾಗಿಬಿಟ್ಟಿದೆ; ಎಷ್ಟೋ ಜನ ಪೂಜೆ ನಡೆಸುತ್ತಿರುವಾಗ ಯಾರಲ್ಲಿಯೋ ಮಾತನಾಡುತ್ತಿರುವುದು, ಬಂದ ಅತಿಥಿ-ಅಭ್ಯಾಗತರಲ್ಲಿ ಹರಟುವುದು, ದೂರವಾಣಿ ಸಂಭಾಷಣೆ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಅಸಂಬದ್ಧ ಪ್ರಲಾಪ..ಇವನ್ನೆಲ್ಲಾ ನಡೆಸುತ್ತಿರುತ್ತಾರೆ. ಪುರೋಹಿತರು "ಮಂಗಲಾರ್ತಿ ಮಾಡಬಹುದೇ ?" ಎಂದಾಗ ಎಚ್ಚೆತ್ತುಕೊಳ್ಳುತ್ತಾರೆ! ಇದು ಪೂಜೆಯ ಸರಿಯಾದ ಕ್ರಮವಲ್ಲ. ಪೂಜೆ ಮಾಡಿಸುವಾಗ/ಮಾಡುವಾಗ ನಮ್ಮ ಗಮನ ಮಂತ್ರಗಳ ಅರ್ಥವ್ಯಾಪ್ತಿಯನ್ನು ಗ್ರಹಿಸುತ್ತಿರಬೇಕು, ನಾವು ಆರಾಧಿಸುವ ಸಗುಣರೂಪದಲ್ಲಿ ನಮ್ಮ ಮನ ನೆಟ್ಟಿರಬೇಕು. ಶ್ರದ್ಧೆ ಎಲ್ಲದಕ್ಕೂ ಮೂಲವಾಗಿ ಬೇಕು. ಶ್ರೀಸೂಕ್ತದ ಕೆಲವು ಆಯ್ದ ಭಾಗಗಳಿಗೆ ಅಲ್ಪ ಪ್ರಮಾಣದ, ನೇರ ನೋಟದ ಅರ್ಥವನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದೇನೆ:    


हरिः ॐ
Harihi Om

हिरण्यवर्णां हरिणीं सुवर्णरजतस्रजाम् ।
चन्द्रां हिरण्मयीं लक्ष्मीं जातवेदो म आवह ॥१॥
Hirannya-Varnnaam Harinneem Suvarnna-Rajata-Srajaam |
Candraam Hirannmayeem Lakssmeem Jaatavedo Ma Aavaha ||1||

Meaning:
1.1: (Harihi Om. O Jatavedo, Invoke for me that Lakshmi) Who is of Golden Colour, Beautiful and Adorned with Gold and Silver Garlands.
(Gold represents Sun or the Fire of Tapas; Silver represents Moon or the Bliss and Beauty of Pure Sattva.)
1.2: Who is like the Moon with a Golden Aura, Who is Lakshmi, the Embodiment of Sri; O Jatavedo, please Invoke for Me that Lakshmi.
(Moon represents the Bliss and Beauty of Pure Sattva and the Golden Aura represents the Fire of Tapas.)

ಸ್ವರ್ಣಮಯಿಯಾದ ಸಿರಿಲಕ್ಷ್ಮಿಯೇ, ಸಾತ್ವಿಕ ಶಕ್ತಿಯ ಸಾಕ್ಷಾತ್ ರೂಪವಾದ ಚಂದ್ರನ ಸೌಂದರ್ಯದಿಂದ ರಾರಾಜಿಸುವವಳೇ, ಬಂಗಾರ-ಬೆಳ್ಳಿಯ ಹಾರಗಳನ್ನು ಧರಿಸಿದವಳೇ ನನ್ನಲ್ಲಿ ಆವಾಹಿತಳಾಗು ತಾಯೀ, ನನಗೂ ಅದನ್ನು ಅನುಗ್ರಹಿಸುವವಳಾಗು.

तां म आवह जातवेदो लक्ष्मीमनपगामिनीम् ।
यस्यां हिरण्यं विन्देयं गामश्वं पुरुषानहम् ॥२॥
Taam Ma Aavaha Jaatavedo Lakssmeem-Anapagaamineem |
Yasyaam Hirannyam Vindeyam Gaam-Ashvam Purushaan-Aham ||2||

Meaning:
2.1: (Harihi Om) O Jatavedo, Invoke for Me that Lakshmi, Who does not Go Away,
(Sri is Non-Moving, All-Pervasive and the Underlying Essence of All Beauty. Devi Lakshmi as the Embodiment of Sri is thus Non-Moving in Her essential nature.)
2.2: By Whose Golden Touch, I will Obtain Cattle, Horses, Progeny and Servants.
(Golden Touch represents the Fire of Tapas which manifests in us as the Energy of Effort by the Grace of the Devi. Cattle, Horses etc are external manifestations of Sri following the effort.)

ದೇವೀ ನಮಗಿವನ್ನು ಕೊಡುವವಳಾಗು: ಚಲನೆಯಿಲ್ಲದವಳು ಎಂದು ನಿನ್ನನ್ನು ಭಾವಿಸುತ್ತೇವೆ, ಸತತ ನಮ್ಮ ಮನೆಯಲ್ಲಿ ನೆಲೆನಿಂತು ಧೇನು-ಅಶ್ವ ಮೊದಲಾದ ಎಲ್ಲಾ ವಿಧದ ಸಂಪತ್ತುಗಳನ್ನೂ ನೀಡುವವಳಾಗು.

अश्वपूर्वां रथमध्यां हस्तिनादप्रबोधिनीम् ।
श्रियं देवीमुपह्वये श्रीर्मा देवी जुषताम् ॥३॥
Ashva-Puurvaam Ratha-Madhyaam Hastinaada-Prabodhineem |
Shriyam Deveem-Upahvaye Shreermaa Devee Jushataam ||3||

Meaning:
3.1: (Harihi Om. O Jatavedo, Invoke for me that Lakshmi) Who is Abiding in the Chariot of Sri ( in the Middle ) which is driven by Horses in Front and Whose Appearance is Heralded by the Trumpet of Elephants,
(Chariot represents the Abode of Sri and Horses represents the Energy of Effort. The Trumpet of Elephants represents the Awakening of Wisdom.)
3.2: Invoke the Devi who is the Embodiment of Sri Nearer so that the Devi of Prosperity becomes Pleased with Me.
(Prosperity is the external manifestation of Sri and is therefore pleased when Sri is Invoked.)

ಸಿರಿಯನ್ನು/ಸಂಪತ್ತನ್ನು ಹೊತ್ತ ರಥವನ್ನು ಏರಿ ಬರುವವಳೇ ನಿನ್ನ ರಥವನ್ನು ಎಳೆಯುವ ಅಶ್ವಗಳನ್ನು ಕಂಡು ಆನೆಗಳು ಘೀಳಿಡುವವೋ, ಅಂತಹ ದಿವ್ಯ ಸಾನ್ನಿಧ್ಯವನ್ನು ನಮ್ಮ ಮನೆಯಲ್ಲಿ ನೆಲೆಗೊಳಿಸು.   

कां सोस्मितां हिरण्यप्राकारामार्द्रां ज्वलन्तीं तृप्तां तर्पयन्तीम् ।
पद्मे स्थितां पद्मवर्णां तामिहोपह्वये श्रियम् ॥४॥
Kaam So-Smitaam Hirannya-Praakaaraam-Aardraam Jvalanteem Trptaam Tarpayanteem |
Padme Sthitaam Padma-Varnnaam Taam-Iho[a-u]pahvaye Shriyam ||4||

Meaning:
4.1: (Harihi Om. O Jatavedo, Invoke for me that Lakshmi) Who is Having a Beautiful Smile and Who is Enclosed by a Soft Golden Glow; Who is eternally Satisfied and Satisfies all those to whom She Reveals Herself,
(Beautiful Smile represents the Trancendental Beauty of Sri Who is Enclosed by the Golden Glow of the Fire of Tapas.)
4.2: Who Abides in the Lotus and has the Colour of the Lotus; (O Jatavedo) Invoke that Lakshmi Here, Who is the Embodiment of Sri.
(Lotus represents the Lotus of Kundalini.)

ಕಮಲದ ಹೂವಿನಲ್ಲಿ ಕುಳಿತು ಕಮಲದ ಬಣ್ಣವನ್ನೇ ಹೊಂದಿರುವ, ನಾಜೂಕಿನ ಬಂಗಾರದ ಹೊಳಪನ್ನು ಪಡೆದಿರುವ ಸಿರಿಯೇ ನಿನ್ನ ಮೋಹಕ ಮಂದಸ್ಮಿತವನ್ನು ಯಾವನು ದರ್ಶಿಸುತ್ತಾನೋ ಆತ ಜೀವನದಲ್ಲಿ ಎಲ್ಲಾ ಸಂಪತ್ತುಗಳನ್ನೂ ಪಡೆದ ಸಮೃದ್ಧ ಜೀವಿಯಾಗುತ್ತಾನೆ/ಳೆ, ಅಂತಹ ದೈವೀ  ಮುಗುಳ್ನಗುವನ್ನು ನನ್ನೆಡೆಗೆ ಬೀರುವವಳಾಗು ತಾಯಿ

चन्द्रां प्रभासां यशसा ज्वलन्तीं श्रियं लोके देवजुष्टामुदाराम् ।
तां पद्मिनीमीं शरणमहं प्रपद्येऽलक्ष्मीर्मे नश्यतां त्वां वृणे ॥५॥
Candraam Prabhaasaam Yashasaa Jvalanteem Shriyam Loke Deva-Jussttaam-Udaaraam |
Taam Padmineem-Eem Sharannam-Aham Prapadye-[A]lakssmeer-Me Nashyataam Tvaam Vrnne ||5||

Meaning:
5.1: (Harihi Om. O Jatavedo, Invoke for me that Lakshmi) Who is the Embodiment of Sri and Whose Glory Shines like the Splendour of the Moon in all the Worlds; Who is Noble and Who is Worshipped by the Devas.
5.2: I take Refuge at Her Feet, Who Abides in the Lotus; By Her Grace, let the Alakshmi (in the form of Evil, Distress and Poverty) within and without be Destroyed.
(Lotus represents the Lotus of Kundalini.)

ಯಾರನ್ನು ದೇವಾನುದೇವತೆಗಳು ಪೂಜಿಸುತ್ತಾರೋ, ಯಾರು ಚಂದ್ರಮನ ಕಾಂತಿಯಿಂದ ಜಗದೆಲ್ಲೆಡೆ ಕಂಗೊಳಿಸುತ್ತಾರೋ, ಯಾರು ಕಮಲ ಪುಷ್ಪದಲ್ಲಿ ನಿಂದಿರುತ್ತಾರೋ ಅಂತಹ ಸಿರಿಯ ಪಾದದಲ್ಲಿ ನಾನು ಆಶ್ರಯ ಬಯಸುತ್ತೇನೆ. ತನ್ಮೂಲಕ ನಮ್ಮ ಮನೆಯಲ್ಲಿರಬಹುದಾದ ದುಃಖ-ದಾರಿದ್ರ್ಯ-ಬಡತನಗಳೆಂಬ ಅಲಕ್ಷ್ಮಿ ನಾಶವಾಗಲಿ ಎಂದು ಮಾತೆ ಶ್ರೀಲಕ್ಷ್ಮಿಯಲ್ಲಿ ಪ್ರಾರ್ಥಿಸುತ್ತೇನೆ

आदित्यवर्णे तपसोऽधिजातो वनस्पतिस्तव वृक्षोऽथ बिल्वः ।
तस्य फलानि तपसानुदन्तु मायान्तरायाश्च बाह्या अलक्ष्मीः ॥६॥
Aaditya-Varnne Tapaso[a-A]dhi-Jaato Vanaspatis-Tava Vrksso[ah-A]tha Bilvaha |
Tasya Phalaani Tapasaa-Nudantu Maaya-Antaraayaashca Baahyaa Alakssmeehi ||6||

Meaning:
6.1: (Harihi Om. O Jatavedo, Invoke for me that Lakshmi) Who is of the Colour of the Sun and Born of Tapas; the Tapas which is like a Huge Sacred Bilva Tree,
(The Golden Colour of the Sun represents the Fire of Tapas.)
6.2: Let the Fruit of That Tree of Tapas Drive Away the Delusion and Ignorance Within and the Alakshmi (in the form of Evil, Distress and Poverty) Outside.

ಯಾರು ಸೂರ್ಯನ ಬಣ್ಣವನ್ನು ಹೊಂದಿದವಳೋ ಯಾರು ತಪಸ್ಸಿನಿಂದ ಜನಿಸಿದವಳೋ; ಬಹುದೊಡ್ಡ ದೈವೀ ಭಿಲ್ವಪತ್ರೆಯ ಮರದಂತಹ ತಪಸ್ಸಿನ ರೂಪದವಳೋ ಅಂತಹ ಕಮಲಮುಖಿಯನ್ನು ಧ್ಯಾನಿಸುತ್ತೇನೆ. ತಪಸ್ಸೆಂಬ ಆ ಮರದ ಹಣ್ಣುಗಳು ನನ್ನೊಳಗಿನ ಅಂಧಕಾರವನ್ನು, ಅಜ್ಞಾನವನ್ನು ತೊಡೆಯಲಿ ಮತ್ತು ಹೊರಗಿನ ಅಲಕ್ಷ್ಮಿ[ಅಸುರೀಭಾವ, ದಾರಿದ್ರ್ಯ-ದುಃಖ-ಬಡತನ]ಯನ್ನು ನಾಶಪಡಿಸಲಿ. 

उपैतु मां देवसखः कीर्तिश्च मणिना सह ।
प्रादुर्भूतोऽस्मि राष्ट्रेऽस्मिन् कीर्तिमृद्धिं ददातु मे ॥७॥
Upaitu Maam Deva-Sakhah Keertish-Ca Manninaa Saha |
Praadurbhuuto[ah-A]smi Raassttre-[A]smin Keertim-Ruddhim Dadaatu Me ||7||

Meaning:
7.1: (Harihi Om. O Jatavedo, Invoke for me that Lakshmi) By Whose Presence will Come Near me the Companions of the Devas along with Glory (Inner Prosperity) and various Jewels (Outer Prosperity),
7.2: And I will be Reborn in the Realm of Sri (signifying Inner Transformation towards Purity) which will Grant me Inner Glory and Outer Prosperity.

ದೇವತೆಗಳೊಡಗೂಡಿ ಇರುವ ಯಾರ ಉಪಸ್ಥಿತಿಯಿಂದ ಸಕಲ ದೇವತೆಗಳ ಅನುಗ್ರಹ ಲಭಿಸುವುದೋ, ಯಾರಿಂದ ಕೀರ್ತಿ ಮತ್ತು ಮುತ್ತುರತ್ನ ಕನಕಾದಿಗಳು ಪ್ರಾಪ್ತವಾಗುವುದೋ ಅಂತಹ ಸಿರಿಲಕುಮಿಯನ್ನು ಆವಾಹಿಸುತ್ತೇನೆ. ಪುಣ್ಯಭೂಮಿಯಾದ ಈ ದೇಶದಲ್ಲಿ ಹುಟ್ಟಿದ ಜನ್ಮತಳೆದ ನನ್ನ ದೇಶಕ್ಕೆ ಕೀರ್ತಿಯನ್ನೂ ಅಭಿವೃದ್ಧಿಯನ್ನೂ ಅನುಗರಹಿಸುವವಳಾಗು. ಲಕ್ಷ್ಮಿಯ ಕಟಾಕ್ಷದಲ್ಲಿ ಮರುಹುಟ್ಟು ಬಯಸುತ್ತಾ ನನ್ನೊಳಗಿನ ನನ್ನನ್ನು ಪರಿಶುದ್ಧತೆಯೆಡೆಗೆ ನಡೆಸುವುದರ ಜೊತೆಗೆ ನನ್ನೊಳಗಿನ ವೈಭವವನ್ನು ಗ್ರಹಿಸಲು ಅನುವುಮಾಡಿಕೊಡುವ ಮತ್ತು ಲೌಕಿಕ ಸಂಪತ್ತನ್ನು ಅನುಗ್ರಹಿಸುವ ಶ್ರೀದೇವಿಯನ್ನು ಸ್ಮರಿಸುತ್ತೇನೆ

क्षुत्पिपासामलां ज्येष्ठामलक्ष्मीं नाशयाम्यहम् ।
अभूतिमसमृद्धिं च सर्वां निर्णुद मे गृहात् ॥८॥
Kshut-Pipaasaa-Malaam Jyesstthaam-Alakssmeem Naashayaamy-Aham |
Abhuutim-Asamrddhim Ca Sarvaam Nirnnuda Me Grhaat ||8||

Meaning:
8.1: (Harihi Om. O Jatavedo, Invoke for me that Lakshmi) Whose Presence will Destroy Hunger, Thirst and Impurity associated with Her Elder Sister Alakshmi,
8.2: And Drive Away the Wretchedness and Ill-Fortune from My House.

ಯಾರ ಉಪಸ್ಥಿತಿಯು ಹಸಿವು, ನೀರಡಿಕೆ, ಕೊಳೆ, ದಾರಿದ್ರ್ಯ ಮೊದಲಾದವುಗಳನ್ನು ಒಳಗೊಂಡ ಅವಳಕ್ಕ ಅಲಕ್ಷ್ಮಿಯನ್ನು ಹೊಡೆದೋಡಿಸುವುದೋ ಅಂತಹ ಲಕ್ಷ್ಮಿಯನ್ನು ಆಹ್ವಾನಿಸುತ್ತೇನೆ. ಆ ಮೂಲಕ ನಮ್ಮ ಮನೆಯ ಸಕಲ ದುಃಖ-ದಾರುದ್ರ್ಯಾದಿಗಳನ್ನು ಕಳೆದುಕೊಳ್ಳುತ್ತೇನೆ.

गन्धद्वारां दुराधर्षां नित्यपुष्टां करीषिणीम् ।
ईश्वरींग् सर्वभूतानां तामिहोपह्वये श्रियम् ॥९॥
Gandha-Dvaaraam Duraadharssaam Nitya-Pussttaam Kareessinneem |
Eeshvareeng Sarva-Bhuutaanaam Taam-Iho[a-u]pahvaye Shriyam ||9||

Meaning:
9.1: (Harihi Om. O Jatavedo, Invoke for me that Lakshmi) Who is the Source of All Fragrances, Who is Difficult to Approach, Who is Always Filled with Abundance and leaves a Residue of Abundance wherever She Reveals Herself.
9.2: Who is the Ruling Power in All Beings; (O Jatavedo) Please Invoke Her Here, Who is the Embodiment of Sri.

ಯಾರು ಎಲ್ಲಾ ಸುಗಂಧಗಳ ಆಕರವಾಗಿರುತ್ತಾಳೋ, ಯಾರನ್ನು ಸಂಪರ್ಕಿಸುವುದೂ ದರುಶನ ಪಡೆಯುವುದೂ ಬಲು ಕಠಿಣವೋ, ಯಾರ ಸಂಪತ್ತು ಎಣಿಸಲಸದಳವೋ ಮತ್ತು ತನ್ನ ಬಂದುಹೋಗುವಿಕೆಯಿಂದಲೂ ಯಾರು ಭಾಗಶಃ ತನ್ನಲ್ಲಿರುವ ಅಸದಳ ಸಂಪತ್ತನ್ನು ಕರುಣಿಸಿ ತೆರಳುತ್ತಾಳೋ ಅಂತಹ ಲಕ್ಷ್ಮಿಯನ್ನು ಆರಾಧಿಸುತ್ತೇನೆ. ಎಲ್ಲವನ್ನೂ ಅಳುವ ಆ ದಿವ್ಯ ಶಕ್ತಿಯನ್ನು ಆವಾಹಿಸುತ್ತೇನೆ.

मनसः काममाकूतिं वाचः सत्यमशीमहि ।
पशूनां रूपमन्नस्य मयि श्रीः श्रयतां यशः ॥१०॥
Manasah Kaamam-Aakuutim Vaacah Satyam-Asheemahi |
Pashuunaam Ruupam-Annasya Mayi Shreeh Shrayataam Yashah ||10||

Meaning:
10.1: (Harihi Om. O Jatavedo, Invoke for me that Lakshmi) For Whom my Heart Truly Yearns and to Whom my Speech Truly tries to Reach,
10.2: By Whose Presence will come Cattle, Beauty and Food in my Life as (External) Prosperity and Who will Reside (i.e. Reveal) in me as (Inner) Glory of Sri.

ಯಾರಿಗಾಗಿ ನನ್ನ ಹೃದಯ ಹಂಬಲಿಸುತ್ತಿದೆಯೋ, ಯಾರನ್ನು ನನ್ನ ಮಾತುಗಳು ತಲುಪಲು ಹಾತೊರೆಯುತ್ತವೆಯೋ, ಯಾರ ಉಪಸ್ಥಿತಿ ನನ್ನ ಮನೆಯಲ್ಲಿ ಧನಕನಕಾದಿ ಅಷ್ಟೈಶ್ವರ್ಯಗಳನ್ನೂ ತಂದಿತ್ತು, ಪಶು-ಪತ್ನಿ-ಸುತ-ಮನೆ ಇತ್ಯಾದಿ ಸಕಲ ಭೋಗಭಾಗ್ಯವನ್ನೂ ನೀಡುವುದೋ, ಯಾರ ಉಪಸ್ಥಿತಿ ನನ್ನ ಮನೆಯನ್ನು ಸಕಲ ವಿಧದಲ್ಲೂ ಬೆಳಗುವುದೋ ಅಂತಹ ದೇವಿಯನ್ನು ಸಂಪ್ರಾರ್ಥಿಸುತ್ತೇನೆ.

कर्दमेन प्रजाभूता मयि सम्भव कर्दम ।
श्रियं वासय मे कुले मातरं पद्ममालिनीम् ॥११॥
Kardamena Prajaa-Bhuutaa Mayi Sambhava Kardama |
Shriyam Vaasaya Me Kule Maataram Padma-Maalineem ||11||

Meaning:
11.1: (Harihi Om. O Kardama, Invoke for me your Mother) As Kardama ( referring to Earth represented by Mud ) acts as the substratum for the Existence of Mankind, Similarly O Kardama (now referring to sage Kardama, the son of Devi Lakshmi) you Stay with me,
11.2: And be the cause to bring your Mother to Dwell in My Family; Your Mother who is the Embodiment of Sri and Encircled by Lotuses.

ಮಹಾಲಕ್ಷ್ಮಿ ಪುತ್ರನಾಗಿ ಭುವಿ[ಕರ್ದಮ] ಯಲ್ಲಿ ಜನಿಸಿದ, ಕರ್ದಮ[ಋಷಿ]ನೇ ನೀನು ನಮ್ಮ ಮನೆಯಲ್ಲೇ ಉಳಿದುಬಿಡು, ನೀನೇ ಕಾರಣೀಕರ್ತನಾಗಿ ನಿನ್ನ ಅಮ್ಮನನ್ನು ಪ್ರಾರ್ಥಿಸಿ ಕರೆದು ನಮ್ಮ ಮನೆಯಲ್ಲೇ ನೆಲೆಗೊಳಿಸು; ಸಂಪತ್ತಿನ ಅಧಿದೇವತೆಯಾದ ನಿನ್ನಮ್ಮನನ್ನು ಸುಂದರ ವಾರಿಜಗಳು ಸುತ್ತುವರಿದಿವೆ.  

आपः सृजन्तु स्निग्धानि चिक्लीत वस मे गृहे ।
नि च देवीं मातरं श्रियं वासय मे कुले ॥१२॥
Aapah Srjantu Snigdhaani Cikleeta Vasa Me Grhe |
Ni Ca Deveem Maataram Shriyam Vaasaya Me Kule ||12||

Meaning:
12.1: (Harihi Om. O Chiklita, Invoke for me your Mother) As Chiklita ( referring to Moisture represented by Water ) Creates Loveliness in all things by its presence, similarly O Chiklita (now referring to Chiklita, the son of Devi Lakshmi) you Stay with me,
12.2: And by your presence bring your Mother, the Devi who is the Embodiment of Sri (and essence of all Loveliness) to Dwell in my Family.

ಆರ್ದ್ರತೆ[ಚಿಕ್ಲೀತ] ಎಲ್ಲವುದರಲ್ಲೂ ಪ್ರೇಮವನ್ನು ಹೆಚ್ಚಿಸುತ್ತದೆ. ಓ ಚಿಕ್ಲೀತ[ಲಕ್ಷ್ಮೀಪುತ್ರ]ನೇ ನೀನು ನಮ್ಮಲ್ಲೇ ಉಳಿದುಬಿಡು. ಇಲ್ಲಿ ನೀನಿರುವವನಾಗಿ ಆ ಮೂಲಕ ನಿನ್ನ ಅಮ್ಮನನ್ನು ಕರೆದು ತಾ; ಪ್ರೇಮದೇವಿಯವಳ ಕರುಣೆಯಿಂದ ನಮ್ಮ ಮನೆಯಲ್ಲಿ ಪ್ರೇಮಮಯ ವಾತಾವರಣವೇ ತುಂಬಿರಲಿ.


आर्द्रां पुष्करिणीं पुष्टिं पिङ्गलां पद्ममालिनीम् ।
चन्द्रां हिरण्मयीं लक्ष्मीं जातवेदो म आवह ॥१३॥
Aardraam Pushkarinneem Pussttim Pinggalaam Padma-Maalineem |
Candraam Hirannmayeem Lakssmeem Jaatavedo Ma Aavaha ||13||

Meaning:
13.1: (Harihi Om. O Jatavedo, Invoke for me that Lakshmi) Who is like the Moisture of a Lotus Pond which Nourishes a Soul (with Her Soothing Loveliness); and Who is Encircled by Light Yellow Lotuses,
13.2: Who is like a Moon with a Golden Aura; O Jatavedo, please Invoke that Lakshmi for me.
(Devi Lakshmi in the form of a Moon represents the Transcendental Bliss and Beauty of Sri. This Soothing Loveliness is compared with the Moisture of a Lotus Pond which Nourishes a Soul. )

ಸರೋವರದ ತುಂಬ ಕಮಲಗಳ ಮೇಲಿನ ಆರ್ದ್ರತೆ ಮನಸ್ಸಿಗೆ ಆಹ್ಲಾದವನ್ನು ತಂಡುಕೊಡುತ್ತದೆ. ಅದೇ ತೆರನಾಗಿ ಆಹ್ಲತೆ ನೀಡುವ ಲಕ್ಷ್ಮಿಯ ಸುತ್ತ ನಸುಹಳದಿ ಬಣ್ಣದ ಕಮಲಗಳೇ ತುಂಬಿವೆ. ಯಾರು ಬಂಗಾರದ ಕಳೆಹೊತ್ತ ಚಂದ್ರನ ಕಾಂತಿಯನ್ನು ಹೊಂದಿರುವಳೋ ಅಂತಹ ಲಕ್ಷ್ಮಿಯನ್ನು ಪ್ರಸನ್ನೀಕರಿಸುತ್ತೇನೆ.

आर्द्रां यः करिणीं यष्टिं सुवर्णां हेममालिनीम् ।
सूर्यां हिरण्मयीं लक्ष्मीं जातवेदो म आवह ॥१४॥
Aardraam Yah Karinneem Yassttim Suvarnnaam Hema-Maalineem |
Suuryaam Hirannmayeem Lakssmeem Jaatavedo Ma Aavaha ||14||

Meaning:
14.1: (Harihi Om. O Jatavedo, Invoke for me that Lakshmi) Who is like the Moisture (figuratively representing Energy) which Supports the Performance of Activities; and Who is Encircled by Gold (Glow of the Fire of Tapas),
14.2: Who is like a Sun with a Golden Aura; O Jatavedo, please Invoke that Lakshmi for me.
(Devi Lakshmi in the form of a Sun represents the Fire of Tapas. This Fire is compared with the moisture within activities, the moisture figuratively signifying energy. The Fire of Tapas manifests as the Energy of Activities.)

ಅಮ್ಮಾ ಮಹಾಲಕ್ಷ್ಮೀ, ನೀನು ಜಗತ್ತಿನ ಕರ್ತೃತ್ವ ಶಕ್ತಿಯಾಗಿದ್ದೀಯೆ, ಸೂರ್ಯನಂತೇ ಬಂಗಾರಮಯವಾಗಿ ಕಾಂತಿಯುತಳಾಗಿದ್ದೀಯೆ, ಓ ಜಾತವೇದ ನನಗಾಗಿ ಆ ಮಹಾಲಕ್ಷ್ಮಿಯನ್ನು ಕರೆದು ತಾ.

तां म आवह जातवेदो लक्ष्मीमनपगामिनीम् ।
यस्यां हिरण्यं प्रभूतं गावो दास्योऽश्वान् विन्देयं पूरुषानहम् ॥१५॥
Taam Ma Aavaha Jaatavedo Lakssmeem-Anapagaamineem |
Yasyaam Hirannyam Prabhuutam Gaavo Daasyo-[A]shvaan Vindeyam Purushaan-Aham ||15||

Meaning:
15.1: (Harihi Om). O Jatavedo, Invoke for me that Lakshmi, Who does not Go Away,
(Sri is Non-Moving, All-Pervasive and the Underlying Essence of All Beauty. Devi Lakshmi as the Embodiment of Sri is thus Non-Moving in Her essential nature.)

15.2 By Whose Golden Touch I will obtain (i.e. Sri will be manifested as) Abundant Cattle, Servants, Horses and Progeny.
(Golden Touch represents the Fire of Tapas which manifests in us as the Energy of Effort by the grace of the Devi. Cattle, Horses etc are external manifestations of Sri following the effort.)

ಓ ಜಾತವೇದ, ನನಗಾಗಿ ಮಹಾಲಕ್ಷ್ಮಿಯನ್ನು ಕರೆದುಕೊಂಡು ಬಾ. ಅಚಲಳಾದ ಆ ತಾಯಿ ಎಲ್ಲದರ ಗಂಧಗಳ ಹಿಂದಿನ ಸೌಂದರ್ಯವಾಗಿದ್ದಾಳೆ. ಹಾಗೆ ನೋಡಿದಾಗ ಎಲ್ಲೆಲ್ಲಿಯೂ ನಿಂತ ಮಹಾಲಕ್ಷ್ಮಿ ಅಚಲಳಾಗಿದ್ದಾಳೆ. ಯಾರ ಒಂದು ಸ್ಪರ್ಶಮಾತ್ರದಿಂದ ಪಶುಗಳನ್ನೂ, ಸೇವಕರನ್ನೂ, ಅಶ್ವಗಳನ್ನೂ ಸಂಪತ್ತನ್ನೂ ಪಡೆಯಲು ಸಾಧ್ಯವೋ ಅಂತಹ ಲಕ್ಷ್ಮಿಯ ಆಗಮನಕ್ಕಾಗಿ ನಿರೀಕ್ಷಿಸುತ್ತಿದ್ದೇನೆ. 

यः शुचिः प्रयतो भूत्वा जुहुयादाज्यमन्वहम् ।
सूक्तं पञ्चदशर्चं च श्रीकामः सततं जपेत् ॥१६॥
Yah Shucih Prayato Bhuutvaa Juhu-Yaad-Aajyam-Anvaham |
Suuktam Pan.cadasharcam Ca Shreekaamah Satatam Japet ||16||

Meaning:
16.1: Those who after Becoming Bodily Clean and Devotionally Disposed perform Sacrificial Offering with Butter Day after Day,
16.2: By Constantly Reciting the Fifteen Verses of Sri Suktam will have their Longing for Sri Fulfilled by the Grace of Devi Lakshmi.

ಯಾರು ನಿತ್ಯ ಶುಚಿರ್ಭೂತರಾಗಿ, ಆಸ್ತಿಕರಾಗಿ, ಭಾವುಕ ಭಕ್ತರಾಗಿ ಬೆಣ್ಣೆಯಂತಹ ಸುವಸ್ತುಗಳನ್ನು ಪ್ರತಿನಿತ್ಯ ಅರ್ಪಿಸುತ್ತಾ, ಶ್ರೀಸೂಕ್ತದ ಹದಿನೈದು ಶ್ಲೋಕಗಳನ್ನು-ಅನುವಾಕಗಳನ್ನು ಪಠಿಸುತ್ತಾರೋ, ಅವರ ಜೀವನದಲ್ಲಿ ಸಕಲ ಸಂಪತ್ತು-ಭೋಗಭಾಗ್ಯಗಳನ್ನು ದೇವಿಯ ಕರುಣೆಯಿಂದ ಗಳಿಸಲು ಅರ್ಹರಾಗುತ್ತಾರೆ.

पद्मानने पद्म ऊरु पद्माक्षी पद्मासम्भवे ।
त्वं मां भजस्व पद्माक्षी येन सौख्यं लभाम्यहम् ॥१७॥
Padma-[A]anane Padma Uuru Padma-Akssee Padmaa-Sambhave |
Tvam Maam Bhajasva Padma-Akssee Yena Saukhyam Labhaamy[i]-Aham ||17||

Meaning:
17.1: (Harihi Om, Salutations to Mother Lakshmi) Whose Face is of Lotus, Who is supported (indicated by Thigh ) by Lotus, Whose Eyes are of Lotus and Who is Born of Lotus.
(Lotus indicates Kundalini. Face indicates the nature of a person, thighs indicate support and eyes indicate the spiritual vision. This verse describes the transcendental nature of Mother Lakshmi. She is born of Yoga, united with Yoga and revealed to a devotee in his spiritual vision.)
17.2: O Mother, You manifest in Me in the Spiritual Vision (indicated by Lotus Eyes ) born of intense Devotion by Which I am filled with (i.e. Obtain ) Divine Bliss.

ಕಮಲದ ಮುಖವುಳ್ಳವಳೂ, ಕಮಲವನ್ನೇ ಆಸನವನ್ನಾಗಿ ಮಾಡಿಕೊಂಡವಳೂ, ಕಮಲವನ್ನೇ ನಯನಗಳನ್ನಾಗಿ ಪಡೆದವಳೂ, ಕಮಲದಲ್ಲೇ ಜನಿಸಿದವಳೂ ಆದ ಭಗವತಿ ಲಕ್ಷ್ಮಿಯನ್ನು  ಸೇವಿಸುತ್ತೇನೆ. ನಿನ್ನ ಸ್ಫುರಣೆಯಿಂದ ನನ್ನೊಳಗಿನ ದಿವ್ಯಚಕ್ಷುಗಳು ತೆರೆಯುವಂತಾಗಲಿ. ಆ ಮೂಲಕ ದೈವೀ ಮನೋಲ್ಲಾಸವನ್ನು ನಾನು ಪಡೆಯುವಂತಾಗಲಿ.

अश्वदायि गोदायि धनदायि महाधने ।
धनं मे जुषतां देवि सर्वकामांश्च देहि मे ॥१८॥
Ashva-Daayi Go-Daayi Dhana-Daayi Mahaa-Dhane |
Dhanam Me Jussataam Devi Sarva-Kaamaamsh-Ca Dehi Me ||18||

Meaning:
18.1: (Harihi Om, Salutations to Mother Lakshmi) Who is the Giver of Horses, Cows and Wealth to all; and Who is the Source of the Great Abundance in this World.
18.2: O Devi, Please be Gracious to grant Wealth (both inner and outer) to Me and Fulfil All my Aspirations.

ಅಶ್ವವನ್ನು ಕೊಡುವವಳೂ, ಆವುಗಳನ್ನು ಕೊಡುವವಳೂ, ಸಂಪತ್ತನ್ನು ಕೊಡುವವಳೂ ಆದ ಮಾತೆಯೇ ಈ ಬ್ರಹ್ಮಾಂಡದಲ್ಲಿ ನೀನೇ ಅಸದಳ ಸಂಪತ್ತಿನ ಆಕರವಾಗಿರುವೆ. ಅಮ್ಮಾ, ದಯಮಾಡಿ ನನಗೆ ಸಂಪತ್ತನ್ನು [ಐಹಿಕ ಮತ್ತು ಪಾರಮಾರ್ಥಿಕ] ಅನುಗ್ರಹಿಸಿ ನನ್ನೆಲ್ಲ ಅಭಿಲಾಷೆಗಳನ್ನೂ ಕಾಮನೆಗಳನ್ನೂ ಈಡೇರಿಸಿಕೊಡುವವಳಾಗು.

पुत्रपौत्र धनं धान्यं हस्त्यश्वादिगवे रथम् ।
प्रजानां भवसि माता आयुष्मन्तं करोतु माम् ॥१९॥
Putra-Pautra Dhanam Dhaanyam Hasty-Ashva-[A]adi-Gave Ratham |
Prajaanaam Bhavasi Maataa Aayussmantam Karotu Maam ||19||

Meaning:
19.1: (Harihi Om, Salutations to Mother Lakshmi) O Mother, bestow us with Children and Grandchildren to continue our lineage; and Wealth, Grains, Elephants, Horses, Cows and Carriages for our daily use.
19.2: We Are Your Children, O Mother; Please make our lives Long and full of Vigour.

ಮಾತೆಯೇ, ಮಕ್ಕಳನ್ನೂ ಮೊಮ್ಮಕ್ಕಳನ್ನೂ ನೀಡುವ ಮೂಲಕ ನಮ್ಮ ವಂಶವನ್ನು ಮುನ್ನಡೆಸುತ್ತಾ ಬೇಕಾದ ಸಂಪತ್ತು, ಧನ-ಧಾನ್ಯ,ಆನೆಗಳು, ಕುದುರೆಗಳು, ಗೋವುಗಳು, ರಥಗಳನ್ನು ಕರುಣಿಸಿ ನಮ್ಮ ದೈನಂದಿನ ಜೀವನವನ್ನು ಸಮೃದ್ಧಮಯವಾಗಿಸು. ನಾವೆಲ್ಲಾ ನಿನ್ನ ಮಕ್ಕಳು ಅಮ್ಮಾ, ನಮ್ಮ ಜೀವನ ಸುದೀರ್ಘವಾಗಿರುವಂತೆಯೂ ಮತ್ತು ಸಶಕ್ತ, ಸಂತೃಪ್ತವಾಗಿರುವಂತೆಯೂ ನಡೆಸು.

धनमग्निर्धनं वायुर्धनं सूर्यो धनं वसुः ।
धनमिन्द्रो बृहस्पतिर्वरुणं धनमश्नुते ॥२०॥
Dhanam-Agnir-Dhanam Vaayur-Dhanam Sooryo Dhanam Vasuhu |
Dhanam-Indro Bruhaspatir-Varunnam Dhanam-Ashnute ||20||

Meaning:
20.1: (Harihi Om, Salutations to Mother Lakshmi) O Mother, You (indicated by Dhanam) are the Power behind Agni (the God of Fire), You are the Power behind Vayu (the God of Wind), You are the Power behind Surya (the God of Sun), You are the Power behind the Vasus (celestial beings).
20.2: You are the Power behind Indra, bRuhaspati and Varuna (the God of Water); You are the All-Pervading Essence behind Everything.

ಮಾತೆಯೇ, ಅಗ್ನಿಯ ಹಿಂದಿನ ಶಕ್ತಿ ನೀನೇ, ವಾಯುವಿನ ಹಿಂದಿನ ಶಕ್ತಿಯೂ ನೀನೇ, ಸೂರ್ಯನ ಹಿಂದಿರುವ ಶಕ್ತಿಯೂ ನೀನೇ, ನೀನೇ ಅಷ್ಟಾವಸುಗಳು ಹಿಂದಿನ ಶಕ್ತಿಯೂ ಆಗಿರುವೆ. ಇಂದ್ರ, ಬೃಹಸ್ಪತಿ, ವರುಣ ಮೊದಲಾದ ಎಲ್ಲಾ ದೇವಾನುದೇವತೆಗಳ ಹಿಂದಿರುವ ಶಕ್ತಿಯೂ ನೀನೇ. ಎಲ್ಲವುದಕ್ಕೂ ಆಧಾರಶಕ್ತಿ ನೀನೇ ಆಗಿರುವೆ.  

वैनतेय सोमं पिब सोमं पिबतु वृत्रहा ।
सोमं धनस्य सोमिनो मह्यं ददातु सोमिनः ॥२१॥
Vainateya Somam Piba Somam Pibatu Vrtrahaa |
Somam Dhanasya Somino Mahyam Dadaatu Sominah ||21||

Meaning:
21.1: (Harihi Om, Salutations to Mother Lakshmi) Those who carry Sri Vishnu in their Heart (like Garuda, the son of Vinata carries Him on his back) always drink Soma (the Divine Bliss within); Let all Drink that Soma by Destroying their inner Enemies of desires (thus gaining nearness to Sri Vishnu).
21.2: That Soma originates from Sri Who is the embodiment of Soma (the Divine Bliss); O Mother, please Give that Soma to Me too, You Who are the possessor of that Soma.


ಯಾರು ಸದಾ ಗರುಡ ಮಹಾವಿಷ್ಣುವನ್ನು ಹೊತ್ತು ಸೇವಿಸುವಂತೆಯೇ ಸದಾ ಹೃದಯದಲ್ಲಿಟ್ಟು ಸೇವಿಸುವರೋ, ಯಾರು ಸದಾ ಸೋಮರಸವನ್ನು ಕುಡಿಯುವರೋ, ಅವರೊಳಗಿನ ಅರಿಷಡ್ವರ್ಗಗಳು ನಾಶವಾಗುವುದರ ಮೂಲಕ ಮಹಾವಿಷ್ಣುವಿಗೆ ಅವರು ಹತ್ತಿರವಾಗಲಿ. ಸೋಮ ಎಂಬ ಪಾನೀಯ ಸಿರಿಯಿಂದಲೇ ದೊರೆಯುವಂಥಾದ್ದು, ಸೋಮವನ್ನು ತಯಾರಿಸುವ ಮತ್ತು ಅದನ್ನು ಧರಿಸಿದ ಸಿರಿದೇವಿಯೇ ನನಗದನ್ನು ಕೊಡುವವಳಾಗು.

न क्रोधो न च मात्सर्य न लोभो नाशुभा मतिः ।
भवन्ति कृतपुण्यानां भक्तानां श्रीसूक्तं जपेत्सदा ॥२२॥
Na Krodho Na Ca Maatsarya Na Lobho Na-Ashubhaa Matih |
Bhavanti Krtapunnyaanaam Bhaktaanaam Shreesuuktam Japet-Sadaa ||22||

Meaning:
22.1: (Harihi Om, Salutations to Mother Lakshmi) Neither Anger Nor Jealousy, Neither Greed Nor Evil Intentions ...
22.2: Can Exist in the Devotees who have acquired Merit by Always Reciting with Devotion the great Sri Suktam.

ಕ್ರೋಧರಹಿತ, ಮತ್ಸರ ರಹಿತ, ಲೋಭರಹಿತ, ಅಶುಭರಹಿತ ಮನಸ್ಸು ನನ್ನದಾಗಲಿ. ಶ್ರೀ ಸೂಕ್ತವನ್ನು ಪಠಿಸುವ ಭಕ್ತರಲ್ಲೆಲ್ಲಾ ನಿನ್ನ ಅಸ್ಥಿತ್ವ ನೆಲೆಗೊಳ್ಳಲಿ.

वर्षन्तु ते विभावरि दिवो अभ्रस्य विद्युतः ।
रोहन्तु सर्वबीजान्यव ब्रह्म द्विषो जहि ॥२३॥
Varssantu Te Vibhaavari Divo Abhrasya Vidyutah |
Rohantu Sarva-Beeja-Anyava Brahma Dvisho Jahi ||23||

Meaning:
23.1: (Harihi Om, Salutations to Mother Lakshmi) O Mother, Please Shower Your Light of Grace like Lightning in a Sky filled with Thunder-Cloud ...
23.2 And Ascend All the Seeds of Differentiation to a higher spiritual plane; O Mother, You are of the nature of Brahman and Destroyer of all Hatred.

ಗುಡುಗುಸಹಿತದ ಮೋಡಗಳು ತುಂಬಿದ ಆಗಸದಲ್ಲಿ ಮಿಂಚು ಕಾಣಿಸುವ ಹಾಗೇ ನಿನ್ನ ಕೃಪೆಯೆಂಬ ಮಿಂಚು ನಮ್ಮ ಜೀವನದಾಗಸದಲ್ಲಿ ಮೂಡುತ್ತಿರಲಿ. ಎಲ್ಲಾ ಬೀಜಗಳನ್ನೂ ಮೇಲ್ದರ್ಜೆಗೆ ಕೊಂಡೊಯ್ಯುವಂತಾಗಲಿ. ನೀನೇ ಪರಬ್ರಹ್ಮ ಶಕ್ತಿ, ನೀನೇ ಎಲ್ಲಾ ವಿಧ್ವಂಸಕ ಶಕ್ತಿಗಳನ್ನು ನಾಶಪಡಿಸುವವಳು.

पद्मप्रिये पद्मिनि पद्महस्ते पद्मालये पद्मदलायताक्षि ।
विश्वप्रिये विष्णु मनोऽनुकूले त्वत्पादपद्मं मयि सन्निधत्स्व ॥२४॥
Padma-Priye Padmini Padma-Haste Padma-[A]alaye Padma-Dalaayata-Akssi |
Vishva-Priye Vissnnu Mano-[A]nukuule Tvat-Paada-Padmam Mayi Sannidhatsva ||24||

Meaning:
24.1: (Harihi Om, Salutations to Mother Lakshmi) Who is Fond of Lotuses, Who is the Possessor of Lotuses, Who Holds Lotuses in Her Hands, Who Dwells in the Abode of Lotuses and Whose Eyes are like Lotus Petals.
(Lotus indicates Kundalini)
24.2: Who is Fond of the Worldly Manifestations which are Directed towards (i.e. Agreeable to) Sri Vishnu (i.e. follows the path of Dharma); O Mother, bless me so that I Gain Nearness to Your Lotus Feet Within Me.

ಪದ್ಮಪ್ರಿಯಳೇ, ಪದ್ಮಿನಿಯೇ, ಪದ್ಮವನ್ನು ಧರಿಸಿದವಳೇ, ಪದ್ಮಾಲಯವೆಂಬ ಸನ್ನಿಧಿಯಲ್ಲಿ ನೆಲೆಸಿರುವವಳೇ, ನಿನ್ನ ಕಣ್ಣುಗಳೂ ಕೂಡ ಕಲಮದಳಗಳಂತೆಯೇ ಇವೆ. ಶಬ್ದರೂಪದಿಂದ ಧ್ಯಾನಿಸುವವರನ್ನೂ ಭಜಿಸುವವರನ್ನೂ ಪ್ರೀತಿಯಿಂದ ಕಾಣುವ ಜಗನ್ಮಾತೆಯೇ, ನಿನ್ನ ದಯೆಯಿಂದ ನಿನ್ನನ್ನೇ ಧ್ಯಾನಿಸುತ್ತಾ ನಿನ್ನ ಪದಕಮಲಗಳೆಡೆಗೆ ನನ್ನೊಳಗಿನ ನಾನು ಸಾಗುವಂತಾಗಲಿ

या सा पद्मासनस्था विपुलकटितटी पद्मपत्रायताक्षी ।
गम्भीरा वर्तनाभिः स्तनभर नमिता शुभ्र वस्त्रोत्तरीया ॥२५॥
Yaa Saa Padma-[A]asana-Sthaa Vipula-Katitatee Padma-Patraayata-Akshee |
Gambheeraa Varta-Naabhih Stanabhara Namitaa Shubhra Vastro[a-u]ttareeyaa ||25||

Meaning:
25.1: (Harihi Om, Salutations to Mother Lakshmi) Who Stands on Lotus with Her Beautiful Form, with Wide Hip and Eyes like the Lotus Leaf.
25.2: Her Deep Navel (indicating Depth of Character) is Bent Inwards, and with Her Full Bosom (indicating Abundance and Compassion) She is slightly Bent Down (towards the Devotees); and She is Dressed in Pure White Garments.

ಯಾರು ಸುಂದರವಾದ ಕಮಲದಮೇಲೆ ಸುಂದರವಾಗಿ ನಿಂತಿದ್ದಾಳೋ, ಯಾರು ಸಿಂಹಕಟಿಯವಳೋ, ಯಾರ ಕಣ್ಣುಗಳು ಕಮಲದಳಗಳಂತೇ ಇವೆಯೋ ಆ ತಾಯಿಗೆ ನಮಸ್ಕಾರ.ಯಾರ ಕೆಳಹೊಟ್ಟೆ ಒಳಭಾಗ ತುಸು ಬಾಗಿದೆಯೋ, ಯಾರು ಸ್ವಲ್ಪ ಕೆಳಗೆ ಬಾಗಿದ್ದಾಳೋ, ಯಾರು ಶುಭ್ರ ಶ್ವೇತವಸ್ತ್ರ ಧಾರಿಣಿಯೋ  ಆ ತಾಯಿಗೆ ನಮಸ್ಕಾರ.

लक्ष्मीर्दिव्यैर्गजेन्द्रैर्मणिगणखचितैस्स्नापिता हेमकुम्भैः ।
नित्यं सा पद्महस्ता मम वसतु गृहे सर्वमाङ्गल्ययुक्ता ॥२६॥
Lakssmeer-Divyair-Gajendrair-Manni-Ganna-Khacitais-Snaapitaa Hema-Kumbhaih |
Nityam Saa Padma-Hastaa Mama Vasatu Grhe Sarva-Maanggalya-Yuktaa ||26||

Meaning:
26.1: (Harihi Om, Salutations to Mother Lakshmi) Who is Bathed with Water from Golden Pitcher by the Best of Celestial Elephants who are Studded with Various Gems,
26.2: Who is Eternal with Lotus in Her Hands; Who is United with All the Auspicious Attributes; O Mother, Please Reside in My House and make it Auspicious by Your Presence.

ಯಾರು ಆನೆಗಳ ಸೊಂಡಿಲಿನಿಂದ ಎತ್ತಿಹಿಡಿಯಲ್ಪಟ್ಟ,  ವಜ್ರ-ಮಾಣಿಕ್ಯ ವೈಢೂರ್ಯಾದಿ ನವರತ್ನ ಖಚಿತವಾದ ಬಂಗಾರದ ಕಲಶಗಳಿಂದ ಸುರಿಯುವ ನೀರಲ್ಲಿ ಸ್ನಾನಮಾಡುತ್ತಾರೋ, ಯಾರ ಕೈಯ್ಯಲ್ಲಿ ದಿವ್ಯ ಕಮಲಗಳಿವೆಯೋ, ಯಾರು ಎಲ್ಲದರೊಳಗೊಂದಾಗಿ ಈ ಜಗವನಾಳುವಳೋ, ಹೇ ಮಹಾತಾಯಿಯೇ ನನ್ನ ಮನೆಯಲ್ಲಿ ನೀನು ನೆಲೆಸುವವಳಾಗು ಮತ್ತು ನನ್ನ ಮನೆಯನ್ನು ನಿನ್ನ ನೆಲೆಸುವಿಕೆಯಿಂದ ವಿಶೇಷವಾಗಿ ಶೋಭಿಸಲಿ.

लक्ष्मीं क्षीरसमुद्र राजतनयां श्रीरङ्गधामेश्वरीम् ।
दासीभूतसमस्त देव वनितां लोकैक दीपांकुराम् ॥२७॥
Lakssmeem Ksseera-Samudra Raaja-Tanayaam Shreerangga-Dhaame[a-Ee]shvareem |
Daasee-Bhuuta-Samasta Deva Vanitaam Loka-i[e]ka Deepa-Amkuraam ||27||

Meaning:
27.1: (Harihi Om, Salutations to Mother Lakshmi) Who is the Daughter of the King of Ocean; Who is the Great Goddess Residing in Kseera Samudra (literally Milky Ocean), the Abode of Sri Vishnu.
27.2: Who is Served by the Devas along with their Servants, and Who is the One Light in all the Worlds which Sprouts behind every Manifestation.


ಸಾಗರ ರಾಜನ ಮಗಳೇ, ಅತಿದೊಡ್ಡ ದೇವಿಯಾಗಿ ಕ್ಷೀರಸಾಗರದಲ್ಲಿ ನೆಲೆನಿಂತವಳೇ, ಸಕಲ ದೇವಾನುದೇವತೆಗಳು ಅವರ ಸೇವಕರುಗಳ ಸಮೇತ ಸೇವಿಸುವ ಸಿರಿದೇವಿ ಲಕ್ಷ್ಮಿಯೇ, ಸಕಲ ಜಗತ್ತಿಗೂ ನೀನೇ ಬೆಳಕಾಗಿದ್ದೀಯೆ.   


श्रीमन्मन्दकटाक्षलब्ध विभव ब्रह्मेन्द्रगङ्गाधराम् ।
त्वां त्रैलोक्य कुटुम्बिनीं सरसिजां वन्दे मुकुन्दप्रियाम् ॥२८॥
Shreeman[t]-Manda-Kattaakssa-Labdha Vibhava Brahme(a-I)ndra-Ganggaadharaam |
Tvaam Trai-Lokya Kuttumbineem Sarasijaam Vande Mukunda-Priyaam ||28||

Meaning:
28.1: (Harihi Om, Salutations to Mother Lakshmi) By Obtaining Whose Grace through Her Beautiful Soft Glance, Lord Brahma, Indra and Gangadhara (Shiva) become Great,
28.2: O Mother, You blossom in the Three Worlds like a Lotus as the Mother of the Vast Family; You are Praised by All and You are the Beloved of Mukunda.

ನಿನ್ನ ಕರುಣೆಯಿಂದ ಬ್ರಹ್ಮ, ಇಂದ್ರ, ಗಂಗಾಧರಾದಿ ದೇವರುಗಳು ದೊಡ್ಡವರಾದರು. ಮೂಜಗದಲ್ಲೂ ಕಮಲದಂತೇ ಅರಳುವ ನಿನ್ನ ಕುಟುಂಬ ಬಹಳ ದೊಡ್ಡದು! ನಿನ್ನನ್ನು ಎಲ್ಲರೂ ಸ್ತುತಿಸುತ್ತಾರೆ ಮತ್ತು ನೀನು ಮುಕುಂದನ ಪ್ರಿಯತಮೆಯಾಗಿರುತ್ತೀಯೆ.

सिद्धलक्ष्मीर्मोक्षलक्ष्मीर्जयलक्ष्मीस्सरस्वती ।
श्रीलक्ष्मीर्वरलक्ष्मीश्च प्रसन्ना मम सर्वदा ॥२९॥
Siddha-Lakshmeer-Mokssa-Lakshmeer-Jaya-Lakshmees-Sarasvatee |
Shree-Lakshmeer-Vara-Lakshmeeshca Prasannaa Mama Sarvadaa ||29||

Meaning:
29.1: (Harihi Om, Salutations to Mother Lakshmi) O Mother, May Your different Forms - Siddha Lakshmi, Moksha Lakshmi, Jaya Lakshmi, Saraswati ...
29.2: Sri Lakshmi and Vara Lakshmi ... Always be Gracious to Me.

ಸಿದ್ಧಲಕ್ಷ್ಮಿ, ಮೋಕ್ಷಲಕ್ಷ್ಮಿ, ಜಯಲಕ್ಷ್ಮಿ,  ಸರಸ್ವತಿ, ಶ್ರೀಲಕ್ಷ್ಮಿ, ವರಲಕ್ಷ್ಮಿ ಎಂಬ ನಿನ್ನ ಬಹುರೂಪಗಳಿಂದ ನನ್ನನ್ನು ಹರಸು

वरांकुशौ पाशमभीतिमुद्रां करैर्वहन्तीं कमलासनस्थाम् ।
बालार्क कोटि प्रतिभां त्रिणेत्रां भजेहमाद्यां जगदीस्वरीं त्वाम् ॥३०॥
Vara-Angkushau Paasham-Abheeti-Mudraam Karair-Vahanteem Kamala-[A]asana-Sthaam |
Baala-[A]arka Kotti Pratibhaam Tri-Netraam Bhaje-[A]ham-Aadyaam Jagad-Eesvareem Tvaam ||30||

Meaning:
30.1: (Harihi Om, Salutations to Mother Lakshmi) From Your Four Hands - first in Vara Mudra ( Gesture of Boon-Giving ), second Holding Angkusha ( Hook ), third Holding a Pasha ( Noose ) and fourth in Abhiti Mudra ( Gesture of Fearlessness ) - Flows Boons, Assurance of Help during Obstacles, Assurance of Breaking our Bondages and Fearlessness; As You Stand on the Lotus (to shower grace on the devotees).
30.2: I Worship You, O Primordial Goddess of the Universe, from Whose Three Eyes Appear Millions of Newly Risen Suns (i.e. different worlds).

ವರ ಮುದ್ರೆಯಲ್ಲಿರುವ, ಅಂಕುಶ ಧರಿಸಿರುವ, ಪಾಶವನ್ನು ಧರಿಸಿರುವ, ಅಭೀತಿ ಮುದ್ರೆಯನ್ನು ತೋರುತ್ತಿರುವ ಹೀಗೇ ನಾಲ್ಕುಕೈಗಳಿಂದ ಶೋಭಿಸುವ ವರದಾಯಿಸಿಯಾದ ನಿನ್ನನ್ನು ನಾನು ಪೂಜಿಸುತ್ತೇನೆ. ಬ್ರಹ್ಮಾಂಡದ ಉತ್ಫತ್ತಿಗೆ ಕಾರಣಳಾದವಳೇ ನಿನ್ನ ಮೂರು ಕಣ್ಣುಗಳಿಂದ ಮಿಲಿಯನ್ ಗಟ್ಟಲೆ ಸೂರ್ಯರು ಬೇರೇ ಬೇರೇ ಜಗತ್ತಿನಲ್ಲಿ ಜನಿಸುತ್ತಾರೆ.

सर्वमङ्गलमाङ्गल्ये शिवे सर्वार्थ साधिके ।
शरण्ये त्र्यम्बके देवि नारायणि नमोऽस्तु ते ॥३१॥

Sarva-Manggala-Maanggalye Shive Sarva-Artha Saadhike |
Sharannye Try-Ambake Devi Naaraayanni Namostu Te ||31||

Meaning:
31.1: (Harihi Om, Salutations to Mother Lakshmi) Who is the Auspiciousness in All the Auspicious, Auspiciousness Herself and Complete with All the Auspicious Attributes,
31.2: I Salute You O Narayani, the Devi Who is the Giver of Refuge and with Three Eyes,

ಸರ್ವವೂ ಮಂಗಲಮಯವಾದ, ಸ್ವತಃ ಸುಮಂಗಲಿಯಾದ, ಶಿವೆಯೂ, ಸರಸ್ವತಿಯೂ, ಲಕ್ಷ್ಮಿಯೂ ಆದ ತ್ರಿಗುಣಾತ್ಮಕ ತ್ರಿನಯನ ಧಾರೀ ದೇವಿಯೇ ನಿನ್ನ ಆಶ್ರಯ ಬಯಸಿ ಪ್ರಾರ್ಥಿಸುತ್ತಿದ್ದೇನೆ. ನಿನಗೆ ನನ್ನ ನಮಸ್ಕಾರಗಳು

सरसिजनिलये सरोजहस्ते धवलतरांशुक गन्धमाल्यशोभे ।
भगवति हरिवल्लभे मनोज्ञे त्रिभुवनभूतिकरि प्रसीद मह्यम् ॥३२॥
Sarasija-Nilaye Saroja-Haste Dhavalatara-Amshuka Gandha-Maalya-Shobhe |
Bhagavati Hari-Vallabhe Manojnye Tri-Bhuvana-Bhuuti-Kari Praseeda Mahyam ||32||

Meaning:
32.1: (Harihi Om, Salutations to Mother Lakshmi) Who Abides in Lotus and Holds Lotus in Her Hands; Dressed in Dazzling White Garments and Decorated with the most Fragrant Garlands, She Radiates a Divine Aura,
32.2: O Goddess, You are Dearer than the Dearest of Hari and the most Captivating; You are the Source of Wellbeing and Prosperity of all the Three Worlds; O Mother, Please be Gracious to Me.

ಸರಸಿಜ ನಿಲಯೆಯಾಗಿ, ಕಮಲಗಳನ್ನು ಕೈಯ್ಯಲ್ಲಿ ಹಿಡಿದು, ಶ್ವೇತವಸ್ತ್ರಧಾರಿಯಾಗಿ, ಸುಗಂಧಭರಿತ ಪುಷ್ಪಮಾಲಿಕೆಗಳನ್ನು ಧರಿಸಿ ನಿಂದವಳೇ, ಎಲ್ಲೆಲ್ಲೂ ನಿನ್ನ ಪ್ರಭೆಯೇ ಹರಡಿದೆ. ಓ ದೇವೀ, ಆತ್ಮೀಯನೆನಿಸಿದ ವಿಷ್ಣುಪರಮಾತ್ಮನಿಗಿಂತಲೂ ನೀನೆ ಹತ್ತಿರದವಳು ಮತ್ತು ಹೆಚ್ಚು ಮೆಚ್ಚಿಕೊಳ್ಳುವವಳು. ಒಳ್ಳೆಯ  ಬದುಕಿಗೆ, ಉತ್ತಮ ಆರೋಗ್ಯವನ್ನು ಪಡೆಯಲಿಕ್ಕೆ, ಸಕಲ ಸುಖ-ಸಮೃದ್ಧಿಗೆ ಮೂರುಲೋಕದಲ್ಲೂ ನೀನೇ ಕಾರಣಿಕ ಶಕ್ತಿಯಾಗಿದ್ದೀಯೆ. ಓ ಅಮ್ಮಾ, ನನ್ನನ್ನು ಹರಸು. 

विष्णुपत्नीं क्षमां देवीं माधवीं माधवप्रियाम् ।
विष्णोः प्रियसखीं देवीं नमाम्यच्युतवल्लभाम् ॥३३॥
Vissnnu-Patneem Kssamaam Deveem Maadhaveem Maadhava-Priyaam |
Vissnnoh Priya-Sakheem Deveem Namaamy-Acyuta-Vallabhaam ||33||

Meaning:
33.1: (Harihi Om, Salutations to Mother Lakshmi) O Devi, You are the Consort of Sri Vishnu and the embodiment of Forbearance; You are One with Madhava (in essence) and extremely Dear to Him.
33.2: I Salute You O Devi Who is the Dear Companion of Sri Vishnu and extremely Beloved of Acyuta (another name of Sri Vishnu literally meaning Infallible).

ವಿಷ್ಣು ಪತ್ನಿಯಾಗಿ, ಮಾಧವನಿಗೆ ಪ್ರಿಯ ಮಾಧವಿಯಾಗಿ, ಮಹಾವಿಷ್ಣುವಿನ ಪ್ರಿಯಸಖಿಯಾದ ನಿನ್ನಲ್ಲಿ ಕ್ಷಮಿಸೆಂದು ಪ್ರಾರ್ಥನೆ. ಅಚ್ಯುತನ ಮನದನ್ನೆಯಾದ ನೀನು ಅರಿತೋ ಅರಿಯದೆಯೋ  ನಾನು ಮಾಡಿದ ತಪ್ಪುಗಳನ್ನು ಕ್ಷಮಿಸು.

महालक्ष्मी च विद्महे विष्णुपत्नी च धीमहि ।
तन्नो लक्ष्मीः प्रचोदयात् ॥३४॥
Mahaalakssmee Ca Vidmahe Vissnnu-Patnee Ca Dheemahi |
Tan[t]-No Lakshmeeh Pracodayaat ||34||

Meaning:
34.1: (Harihi Om, Salutations to Mother Lakshmi) May we Know the Divine Essence of Mahalakshmi by Meditating on Her, who is the Consort of Sri Vishnu,
34.2: Let That Divine Essence of Lakshmi Awaken our Spiritual Consciousness.

ಮಹಾಲಕ್ಷ್ಮಿಯಾದ ನಿನ್ನನ್ನು ಧ್ಯಾನಿಸುವುದರ ಮೂಲಕ ವಿಷ್ಣುಪತ್ನಿಯಾದ ನಿನ್ನ ಬಗ್ಗೆ ತಿಳಿದುಕೊಳ್ಳಬಹುದೇ? ನಿನ್ನ ದೈವೀ ಶಕ್ತಿ ನಮ್ಮನ್ನು ಜಾಗ್ರತಗೊಳಿಸಲಿ, ನಮ್ಮ ಮನಸ್ಸಿಗೆ ಒಳ್ಳೆಯದನ್ನು / ಉತ್ತಮವಾದುದನ್ನು ಪ್ರೇರೇಪಿಸಲಿ.

----

ಅತ್ಮೀಯ ಓದುಗರೇ, ವೇದಮಂತ್ರಗಳಿಗೆ ಶಬ್ದಶಹ ಅರ್ಥಗಳನ್ನು ಕನ್ನಡದಲ್ಲಿ ಬರೆದಿದ್ದರೂ ಆಂಗ್ಲಭಾಷೆಯನ್ನು ಬಳಸಿ ಅವುಗಳ ಗೂಢಾರ್ಥವನ್ನೂ ತಿಳಿಯುವ/ತಿಳಿಸುವ ಪ್ರಯತ್ನ ನಡೆಸಿದ್ದೇನೆ. ಮಂತ್ರಗಳ ಅರ್ಥ ಮೇಲ್ನೋಟಕ್ಕೆ ತೀರಾ ಹಗುರವಾಗಿ ಕಾಣಬಹುದು, ಬರೆದದ್ದನ್ನೇ ಬರೆದಿದ್ದಾರಲ್ಲಾ ಎನಿಸಲೂಬಹುದು. ಆದರೆ  ಈ ಮಂತ್ರಗಳ ಅರ್ಥವ್ಯಾಪ್ತಿ ವಿಸ್ತೃತವಾಗಿರುತ್ತದೆ ಎಂಬುದನ್ನು ಮರೆಯಕೂಡದು!  ಕವಿಹೃದಯಿಯೊಬ್ಬ ಇನ್ನೊಬ್ಬ ಕವಿಯ ಕಾವ್ಯವೊಂದಕ್ಕೆ ಅರ್ಥ ಹಚ್ಚಲು ಪ್ರಯತ್ನಿಸಿದಂತೇ ಮಂತ್ರವೊಂದಕ್ಕೆ ಕಿಲೋಮೀಟರು ಉದ್ದರ ಭಾಷ್ಯವನ್ನು ಬರೆಯುವ ತಾಕತ್ತುಳ್ಳವರೂ ಇದ್ದಾರೆ! ಗಹನವಾದ ವೇದಮಂತ್ರಗಳ ಸಾರವನ್ನು ಅರಿತು ಪೂಜೆಯಲ್ಲಿ ತೊಡಗಲಿ ಎಂಬ ಸದಾಶಯದ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿಯನ್ನು ಮುಂದಿಟ್ಟುಕೊಂಡು ಈ ಲೇಖನ ಬರೆದೆ. ದೇವಿ ಶ್ರೀಮಹಾಲಕ್ಷ್ಮಿಯ ದಿವ್ಯ ಸಾನ್ನಿಧ್ಯ ನಿಮ್ಮೆಲ್ಲರ ಮನೆಗಳಲ್ಲೂ ಸದಾ ಇರಲಿ ಎಂಬ ಶುಭಹಾರೈಕೆಗಳೊಡನೆ ಮುಂದಿನ ಮಂತ್ರಗಳಿಂದ ಮತ್ತೊಮ್ಮೆ ನಿಮಗೆ ಶಾಸ್ತ್ರೋಕ್ತವಾಗಿ ಹಾರೈಸುತ್ತಾ ಸದ್ಯಕ್ಕೆ ಬೀಳ್ಕೊಡುತ್ತೇನೆ:

-----
श्रीवर्चस्यमायुष्यमारोग्यमाविधात् पवमानं महियते ।
धनं धान्यं पशुं बहुपुत्रलाभं शतसंवत्सरं दीर्घमायुः ॥३५॥
Shree-Varchasyam-Aayussyam-Aarogyamaa-Vidhaat Pavamaanam Mahiyate |
Dhanam Dhaanyam Pashum Bahu-Putra-Laabham Shatasamvatsaram Deergham-Aayuh ||35||

Meaning:
35.1: (Harihi Om, Salutations to Mother Lakshmi) O Mother, Let Your Auspiciousness Flow in our lives as the Vital Power, making our lives Long and Healthy, and filled with Joy.
35.2: And let Your Auspiciousness manifest around as Wealth, Grains, Cattle and Many Offsprings who live Happily for Hundred Years; who live Happily throughout their Long Lives.

ತಾಯೀ, ನಿನ್ನ ಅನುಗ್ರಹದಿಂದ ಆಯುಷ್ಯ, ಆರೋಗ್ಯ, ಐಶ್ವರ್ಯ, ಧಾನ್ಯ-ಪಶು-ಮಕ್ಕಳು-ಧನ-ಕನಕಾದಿ ಸಕಲ ಭೋಗ-ಭಾಗ್ಯಗಳು ಲಭಿಸಿ ಸಮೃದ್ಧ-ಸಂತೃಪ್ತ ಶತಸಂವತ್ಸರಗಳ ಜೀವನ ನಡೆಸುವಂತಾಗಲಿ.  

ऋणरोगादिदारिद्र्यपापक्षुदपमृत्यवः ।
भयशोकमनस्तापा नश्यन्तु मम सर्वदा ॥३६॥
Runa-Roga-[A]adi-Daaridrya-Paapa-Kshud-Apamrtyavah |
Bhaya-Shoka-Manastaapaa Nashyantu Mama Sarvadaa ||36||

Meaning:
36.1: (Harihi Om, Salutations to Mother Lakshmi) O Mother, (please remove my) Debts, Illness, Poverty, Sins, Hunger and the possibility of Accidental Death ...
36.2: and also remove my Fear, Sorrow and Mental Anguish; O Mother, Please Remove them Always.

ಋಣ, ರೋಗ, ದಾರಿದ್ರ್ಯ, ಪಾಪ, ಅಪಸ್ಮಾರ, ಅಪಮೃತ್ಯು, ಭಯ, ಶೋಕ, ಮನಸ್ತಾಪ ಇಂತಹ ಅಲಕ್ಷ್ಮೀ ಕಳೆಗಳು ನಿವಾರಣೆಯಾಗಿ  ನನಗೆ [ಇಲ್ಲಿ -ನಿಮಗೆ]ಮತ್ತು ಎಲ್ಲರಿಗೂ ಜೀವನ ಸುಖಮಯವಾಗಲಿ