'ಹಿಂದೂ ಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು-ಭಾಗ ೩'
ಕಳೆದವಾರ ವಿದ್ಯೆ , ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಓದಿದಿರಿ. ಈಗ ಮತ್ತೆ ಕೆಲವು ಪರೀಕ್ಷೆಗಳ ಬಗ್ಗೆ ನೋಡೋಣ-
ವ್ಯಕ್ತಿಯೋರ್ವನ ವ್ಯಕ್ತಿತ್ವದಲ್ಲಿ ಅಂತಹುದೇನಿದೆ ಎಂದು ಕೆದಕ ಹೊರಟರೆ ಅದು ದಿನವೊಂದಕ್ಕೆ ಹೊಸ ಹೊಸ ಅಧ್ಯಾಯವನ್ನು ವಿಸ್ತಾರದಿಂದ ತೋರಿಸುವ ಸಾಗರದೋಪಾದಿಯ ವಿಷಯವಾಗಿ ತನ್ನನ್ನೇ ತೋರ್ಪಡಿಸುತ್ತದೆ. ನಾವು ಸಮಾಜದಲ್ಲಿ ಅನೇಕ ತೆರನಾದ ವ್ಯಕ್ತಿಗಳನ್ನು ನೋಡುತ್ತೇವೆ. ಎಲ್ಲರೂ ಎಲ್ಲಾ ಕೆಲಸಕ್ಕೂ ಅರ್ಹರಾಗಿರುವುದಿಲ್ಲ. ಯಾರಿಗೆ ಯಾವಕೆಲಸದಲ್ಲಿ ಪರಿಣತಿ, ಪರಿಪಕ್ವತೆ ಇರುತ್ತದೋ ಅಂಥವರಿಗೆ ಅಂತಂತಹ ಕೆಲಸಗಳನ್ನು ಮಾತ್ರ ಮಾಡಲು ಸಾಧ್ಯ! ಒಳ್ಳೆಯ ಅಡುಗೆ ಮಾಡುವವ ಉತ್ತಮ ಬರಹಗಾರನಾಗಲು ಇಷ್ಟಪಡುವುದಿಲ್ಲ ; ಹಾಗೇ ಇಷ್ಟಪಡದೇ ಬರೆದರೆ ಆ ಬರಹಗಳು ಓದುವುದಕ್ಕೆ ಕಷ್ಟವಾದ ಬರಹಗಳಾಗುತ್ತವೆ! ಉತ್ತಮ ವಾಗ್ಮಿ ಒಳ್ಳೆಯ ಪೇಂಟರ್ ಆಗಲು ಹೋಗುವುದಿಲ್ಲ, ಸಿನಿಮಾ ಹೀರೋ ಸಾಹಿತಿಯಾಗುವುದಿಲ್ಲ, ಒಳ್ಳೆಯ ಮೇಷ್ಟ್ರು ಸಕ್ರಿಯರಾಜಕಾರಣಿಯಾಗಲು ಇಷ್ಟಪಡುವುದಿಲ್ಲ, ಗಾರೆ ಕೆಲಸದವ ನಾಟಕದಲ್ಲಿ ಒಳ್ಳೆಯ ಪಾತ್ರ ಪೋಷಣೆ ಮಾಡಲಾರ, ಒಬ್ಬಮಾರ್ಕೆಟಿಂಗ್ ಹೆಡ್ ಸಾಹಿತ್ಯ -ಕಾವ್ಯಗಳ ಓದು/ಬರೆಹದಲ್ಲಿ ತೊಡಗಿಸಿಕೊಳ್ಳಲು ಅನುವಾಗುವುದಿಲ್ಲ; ಅವರಿಗೆ ಅದೆಲ್ಲಾ ಅರ್ಥವಿಲ್ಲದ ಕೆಲಸಗಳು, ಒಬ್ಬ ಉತ್ತಮ ವೈದ್ಯಉತ್ತಮ ಮೆಕಾನಿಕ್ ಆಗಿರುವುದಿಲ್ಲ ಹೀಗೇ ಒಂದೊಂದು ವ್ಯಕ್ತಿತ್ವವೂ ವಿಭಿನ್ನ ಮತ್ತು ವಿಶಿಷ್ಟ !
ವ್ಯಕ್ತಿ ತನ್ನ ಮೂಲ ಆಸಕ್ತಿ ಮತ್ತು ಅರ್ಹತೆಯನ್ನು ಗುರುತಿಸಿಕೊಂಡು ನಡೆದರೆ ಆ ವ್ಯಕ್ತಿಗೂ ಮತ್ತು ಸಮಾಜಕ್ಕೂ ಅದರಿಂದ ಒಳಿತು. ವ್ಯಕ್ತಿತ್ವದ ಅರಿವಿರದೇ ಎಲ್ಲರೂ 'ರಾಷ್ಟ್ರಪತಿ'ಗಳಾಗುವ ಕನಸು ಕಂಡರೆ ಆ ಕನಸು ಕನಸೇ ಹೊರತು ಅದು ಸಾಧ್ಯತೆಗಳ ಹಂದರದಲ್ಲಿ ಬರುವ ಅರ್ಹ ಕನಸಲ್ಲ. ಇಂತಹ ಸನ್ನಿವೇಶದಲ್ಲಿ ಅನೇಕ ಪರೀಕ್ಷೆಗಳು ವ್ಯಕ್ತಿ 'ಏನಾಗಲು ಯೋಗ್ಯ' ಎಂಬುದನ್ನುತೋರಿಸಿಕೊಡುತ್ತವೆ. ಅದರ ಮುಖೇನ ವ್ಯಕ್ತಿ ತನ್ನನು ಹಾಗೇ ಗುರುತಿಸಿಕೊಳ್ಳಲು ಸುಲಭವಾಗುತ್ತದೆ. ಹಣವನ್ನು ವಿಕಸನಕ್ಕೆಸರಿಯಾದ ಮಾರ್ಗದಲ್ಲಿ ತೊಡಗಿಸುವಲ್ಲಿ ಹೇಗೆ ಇನ್ವೆಸ್ಟ್ಮೆಂಟ್ ಅಡ್ವೈಸರ್ ನ್ನು ಕಾಣುತ್ತೇವೋ ಹಾಗೇ ಸರಿಯಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಸಹಾಯಮಾಡುತ್ತದೆ.
ಸ್ವತಂತ್ರ ಉದ್ಯಮಿಯಾಗುವ ಅರ್ಹತೆಗಳ ಪರೀಕ್ಷೆಗಳು

ಟೈಪ್ T ಪರ್ಸನಾಲಿಟಿ ಟೆಸ್ಟ್
ಇಂದು ಜಾಗತಿಕ ಆರ್ಥಿಕ ಮುಗ್ಗಟ್ಟನ್ನು ನೋಡುತ್ತಾ ಇದ್ದೀರಿ. ಮಾರ್ಕೆಟ್ಟಿನಲ್ಲಿ ಎಷ್ಟೇ ಬದಲಾವಣೆ ಆಗುತ್ತಿದೆ ಎಂದರೂ ಅದು ಕೇವಲ ಪುಸ್ತಕಗಳಲ್ಲಿ ಲೆಕ್ಕ ಹೊಂದಿಸುವಲ್ಲಿ ಮಾತ್ರವೇ ಹೊರತು ಕ್ರಿಯಾತ್ಮಕವಾಗಿ ಚಾಲ್ತಿಯಲ್ಲಿ ಹೊಸ ಬದಲಾವಣೆ ಬಂದಿದ್ದನು ಬಹುತೇಕ ಕಂಪನಿಗಳು ಪಡೆಯಲಾಗುತ್ತಿಲ್ಲ ! ಇಂತಹ ಆರ್ಥಿಕ ಪರಿಸ್ತಿತಿಯ ಹಿನ್ನೆಲೆಯಲ್ಲಿ ಯಾವರೀತಿಯಲ್ಲಿ ಮುನ್ನಡೆ ಸಾಧಿಸ ಬಹುದು ಎಂಬುದನ್ನು ಒಂದರ್ಥದಲ್ಲಿ ರಭಸದಿಂದ ಹರಿವ ನೀರಿಗೆ ಎದುರಾಗಿ ಈಜುವುದು ಹೇಗೆ ಎಂಬುದನ್ನು ವ್ಯಕ್ತಿಗೆ ಕೊಟ್ಟು ಪರೀಕ್ಷಿಸುವುದು. ವ್ಯಕ್ತಿ ತನ್ನ ಸ್ವಂತಿಕೆಯಿಂದ ಯಾವೆಲ್ಲ ದಾರಿಗಳನ್ನು, ಹಲವಾರು ಚಿಂತನಶೀಲ ಯೋಜನೆಗಳನ್ನು ಹೇಳ ಹೊರಡುತ್ತಾನೆ/ಳೆ ಎನ್ನುವುದನ್ನು ನಿಗದಿತ ಸಮಯದಲ್ಲಿ ಪರಿವೀಕ್ಷಿಸುವುದು. ಇದನ್ನು ಪ್ರಶ್ನೋತ್ತರ ರೂಪದಲ್ಲಿ ಕೂಡ ಮಾಡಬಹುದು.
ಮಾರ್ಕೆಟಿಂಗ್ ಖ್ವಿಜ್
ಮಾರುಕಟ್ಟೆಯ ಬಗ್ಗೆ ವ್ಯಕ್ತಿಗೆ ಏನು ಗೊತ್ತಿದೆ? ಮಾರುಕಟ್ಟೆಗೆ ಹೊಸ ವಸ್ತು ಅಥವಾ ಪ್ರಾಡಕ್ಟ್ ನ್ನು ಪರಿಚಯಿಸುವುದು ಹೇಗೆ, ಹಾಗೇ ಪರಿಚಯಿಸಲು ಸುಮಾರು ಎಷ್ಟು ಹಣ ಬೇಕಾಗಬಹುದು? ಯಾವ ಯಾವ ರೀತಿಯಲ್ಲಿ ಎಲ್ಲೆಲ್ಲಿ ಮಾರುಕಟ್ಟೆಗೆ ಪರಿಚಯಿಸಬೇಕು ಮುಂತಾದ ಸುಮಾರು ೧೫-೨೦ ಪ್ರಶ್ನೆಗಳು ಇರುತ್ತವೆ, ಸಮಯ ಮಿತಿ ಪ್ರಯೋಗ.
ಮಾರ್ಕೆಟ್ ರಿಸರ್ಚ್
ಮಾರುಕಟ್ಟೆಯಲ್ಲಿ ಜನ ಏನನ್ನು ಬಯಸುತ್ತಿದ್ದಾರೆ? ಯಾವ ಬೆಲೆಯಲ್ಲಿ ಬಯಸುತ್ತಾರೆ ? ನಮಗೆ ಸ್ಪರ್ಧೆಯೊಡ್ಡುವ ಬೇರೆ ಕಂಪನಿಗಳು ಯಾವವು ? ನಮ್ಮ ತಯಾರಿಕೆಯಲ್ಲಿನ ತೊಂದರೆ ಏನು ? ಮಧ್ಯವರ್ತಿಗಳು ಏನು ಹೇಳುತ್ತಿದ್ದಾರೆ ಮುಂತಾಗಿ ಹಲವಾರು ಪ್ರಶ್ನೆಗಳು, ಪುನಃ ಸಮಯಮಿತಿ ಪ್ರಯೋಗ !
ಸಾಹಸೀ ಪ್ರವೃತ್ತಿ ಪರೀಕ್ಷೆ
ವ್ಯಕ್ತಿ ಎಷ್ಟರಮಟ್ಟಿಗೆ ಜವಾಬ್ದಾರಿ ತೆಗೆದುಕೊಂಡು ಕೆಲಸಮಾಡಲು ಸಿದ್ಧ ? ಪರಿಸ್ಥಿತಿ ಹೇಗಿದ್ದರೂ ಮಾರ್ಕೆಟ್ ನಲ್ಲಿ ಹೇಗೇ ಮಾಡಿಯಾದರೂ ಬದುಕಬಲ್ಲೆನೆಂಬ ಸಾಹಸೀ ಮನೋಭಾವ ವ್ಯಕ್ತಿಗಿದೆಯೇ ? ಒದರ್ಥದಲ್ಲಿ ವ್ಯಕ್ತಿಯ ಗಟ್ಟಿತನವನ್ನು ಪರೀಕ್ಷೆಗೆ ಒಡ್ಡುವ ಕೆಲವು ಪ್ರಶ್ನೆಗಳು, ಸಮಯಮಿತಿ ಪ್ರಯೋಗ.
ಲೀಡರ್ಶಿಪ್ ಕ್ವಾಲಿಟಿ ಟೆಸ್ಟ್
ಉತ್ತಮ ನಾಯಕರು ಹುಟ್ಟಿನಿಂದಲೇ ಆ ಥರ ಇರುತ್ತಾರೆ ಎಂಬ ಹೇಳಿಕೆಯನ್ನು ಪಕ್ಕಕ್ಕಿಟ್ಟು ವ್ಯಕ್ತಿಯೊಳಗಿನ ಸುಪ್ತ ಶಕ್ತಿಯನ್ನು ಜಾಗೃತಿಗೊಳಿಸಿ ತಕ್ಕುದಾದ ಪರಿಸ್ಥಿತಿ ಮತ್ತು ಸಹಾಯ ಸಿಕ್ಕರೆ ಆತ/ಆಕೆ ಎಷ್ಟರಮಟ್ಟಿಗೆ ಸೃಜನಶೀಲ ಸ್ವಭಾವತೋರಿಸುತ್ತಾನೆ/ಳೆ ಎಂಬುದನ್ನು ಒರೆಗೆ ಹಚ್ಚುವುದು. ಇದರಲ್ಲಿ ವ್ಯಕ್ತಿಯ ಔಟ್ ಸ್ಟೇನ್ದಿಂಗ್
ಅಥವಾ ಅತೀ ಅಪರೂಪದ ವಿಶಿಷ್ಟ ಪ್ರತಿಕ್ರಿಯೆಯನ್ನು ಗುರುತಿಸುವುದು. ಹಲವಾರು ಪ್ರಶ್ನೆಗಳು, ಪುನಃ ಸಮಯಮಿತಿ ಪ್ರಯೋಗ !
ಯೋಗ್ಯತಾ ಪರೀಕ್ಷೆಗಳು
ಎಸ್ಸರ್ರ್ಟಿವ್ ನೆಸ್ ಪರೀಕ್ಷೆ ಅಥವಾ ವೈಯಕ್ತಿಕ ನೇರ ನುಡಿಯ ಪರೀಕ್ಷೆ
ಯಾವುದೇ ಪರಿಸರ, ಪರಿಸ್ಥಿತಿ ಇದ್ದರೂ, ಯಾರೇ ಇದ್ದರೂ ಯಾವುದೇ ಅಂಜಿಕೆ ಇಲ್ಲದೇ ತನ್ನ ವೈಯಕ್ತಿಕ ಕರಾರುವಾಕ್ಕಾದ ಅಭಿಪ್ರಾಯಗಳನ್ನು ವ್ಯಕ್ತಿ ಮಂಡಿಸುವಲ್ಲಿ ಎಷ್ಟರಮಟ್ಟಿಗೆ ಉತ್ತೀರ್ಣ ಎಂಬುದರ ಪರೀಕ್ಷೆ. ಬೇರೆಯವರ ಒತ್ತಡ ಮತ್ತು ಒತ್ತಾಸೆಗೆ ಬಲಿಯಾಗುತ್ತಾನೋ/ಳೋ ಅಥವಾ ತನ್ನದೇ ಅಭಿಪ್ರಾಯವನ್ನು ಮಂಡಿಸುತ್ತಾನೋ/ಳೋ ಅನ್ನುವುದನ್ನು ಒರೆಗೆ ಹಚ್ಚುವುದು. ಕೆಲವು ಪ್ರಶ್ನೆಗಳು ; ಸ್ಮಯಮಿತಿ ಪ್ರಯೋಗ.
ಬುದ್ಧಿ ತೀಕ್ಷ್ಣತೆಯ ಪರೀಕ್ಷೆ
ಹಲವಾರು ಸಂಬಂಧಿತ ಕೆಲಸಗಳನ್ನೊಡ್ಡಿ ಅವುಗಳನ್ನು ಅನುಕ್ರಮವಾಗಿ ಹೇಗೆ ಜೋಡಿಸುತ್ತಾರೆ ಮತ್ತು ಅದನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಲು ಹೇಗೆ ಸಮಯವನ್ನು ಪರಿಗಣಿಸುತ್ತಾರೆ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಇದು ಅತಿಯಾದ ಸಮಯಮಿತಿಯ, ಮಹತ್ವದ ಚಾಣಕ್ಯ ಅಥವಾ ಚಾಣಾಕ್ಷತನದ ಪರೀಕ್ಷೆ.
ನುಮೇರಿಕಲ್ ರೀಸನಿಂಗ್ ಟೆಸ್ಟ್ ಅಥವಾ ಅಂಕೆ-ಸಂಖ್ಯೆಗಳ ಮಹತ್ವದ ಪರೀಕ್ಷೆ
ಇದರಲ್ಲಿ ಅಂಕೆಯ ದೇ ಪವಾಡ, ಅಂಕೆಗಳನ್ನು ಒಪಯೋಗಿಸಿಕೊಂಡು ಯಾವ ಯಾವ ಅಂಕೆಗೆ ಎಷ್ಟೆಷ್ಟು ಮಹತ್ವ ಕೊಡುತ್ತಾರೆ ಮತ್ತು ಅಂಕೆಯನ್ನು ಯಾವ ಕೆಲಸಕ್ಕೆ ಮೀಸಲಿಡುತ್ತಾರೆ ಭಾವನೆಗಳು ಮತ್ತು ವಿಚಾರ ಲಹರಿಯ ಮೇಲೆ ಹೇಗೆಮುಂದುವರಿಯುತ್ತಾರೆ ಎಂಬುದನ್ನು ಪರೀಕ್ಷಿಸುವುದು. ಇದು ಕೂಡ ಅತಿಯಾದ ಸಮಯಮಿತಿಯ, ಮಹತ್ವದ ಚಾಣಕ್ಯ ಅಥವಾ ಚಾಣಾಕ್ಷತನದ ಪರೀಕ್ಷೆ.
ವರ್ಬಲ್ ರೀಸನಿಂಗ್ ಟೆಸ್ಟ್ ಅಥವಾ ಶಬ್ಧ ಪ್ರಯೋಗ ಪರೀಕ್ಷೆ
ಕೆಲವೊಂದು ಶಬ್ದಗಳನ್ನು ಮುಂದಿಟ್ಟು ಅವುಗಳನ್ನು ಉಪಯೋಗಿಸಲು ಹೇಳುವುದು ಮತ್ತು ಅವುಗಳನ್ನು ವ್ಯಕ್ತಿ ಎಷ್ಟು ಸಮಂಜಸವಾಗಿ ಉಪಯೋಗಿಸುತ್ತಾನೆ/ಳೆ ಎಂಬುದನ್ನು ಪರಿವೀಕ್ಷಿಸುವುದು. ಕಾಲೋಚಿತವಾಗಿ ಎಲ್ಲೆಲ್ಲಿ ಯಾವರೀತಿ ಮಾತನಾಡುತ್ತಾರೆ ಎಂಬುದನ್ನು ಇದರಲ್ಲಿ ವಿವೇಚಿಸಲಾಗುತ್ತದೆ.
ಫೈರ್ ಫೈಟಿಂಗ್ ಟೆಸ್ಟ್ ಅಥವಾ ಆಪತ್ಕಾಲಿಕ /ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಪರೀಕ್ಷೆ
ಕೊಟ್ಟ ಸಮಯದಲ್ಲಿ, ಬರಬಹುದಾದ ಯಾವುದೇ ಅನಿರೀಕ್ಷಿತ ಸನ್ನಿವೇಶಗಳಲ್ಲಿ ವ್ಯಕ್ತಿ ಹೇಗೆ ಸಕ್ರಿಯವಾಗಿ, ಮುಂದಾಲೋಚನೆಯಿಂದ, ಸೌಜನ್ಯದಿಂದ ವರ್ತಿಸಿ ಕೆಲಸ ನಿಭಾಯಿಸುತ್ತಾನೆ/ಳೆ ಎಂಬುದನ್ನು ಸಮಯ ಮಿತಿಯಲ್ಲಿ ಪ್ರಶ್ನೆಗಳ ಮತ್ತು ದೃಶ್ಯ ಸನ್ನಿವೇಶಗಳಮೂಲಕ ಪರೀಕ್ಷಿಸುವುದು.

[ಮುಂದಿನವಾರ ನೋಡೋಣ ................]