'ಹಿಂದೂ ಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು-ಭಾಗ ೩'
ಕಳೆದವಾರ ವಿದ್ಯೆ , ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಓದಿದಿರಿ. ಈಗ ಮತ್ತೆ ಕೆಲವು ಪರೀಕ್ಷೆಗಳ ಬಗ್ಗೆ ನೋಡೋಣ-
ವ್ಯಕ್ತಿಯೋರ್ವನ ವ್ಯಕ್ತಿತ್ವದಲ್ಲಿ ಅಂತಹುದೇನಿದೆ ಎಂದು ಕೆದಕ ಹೊರಟರೆ ಅದು ದಿನವೊಂದಕ್ಕೆ ಹೊಸ ಹೊಸ ಅಧ್ಯಾಯವನ್ನು ವಿಸ್ತಾರದಿಂದ ತೋರಿಸುವ ಸಾಗರದೋಪಾದಿಯ ವಿಷಯವಾಗಿ ತನ್ನನ್ನೇ ತೋರ್ಪಡಿಸುತ್ತದೆ. ನಾವು ಸಮಾಜದಲ್ಲಿ ಅನೇಕ ತೆರನಾದ ವ್ಯಕ್ತಿಗಳನ್ನು ನೋಡುತ್ತೇವೆ. ಎಲ್ಲರೂ ಎಲ್ಲಾ ಕೆಲಸಕ್ಕೂ ಅರ್ಹರಾಗಿರುವುದಿಲ್ಲ. ಯಾರಿಗೆ ಯಾವಕೆಲಸದಲ್ಲಿ ಪರಿಣತಿ, ಪರಿಪಕ್ವತೆ ಇರುತ್ತದೋ ಅಂಥವರಿಗೆ ಅಂತಂತಹ ಕೆಲಸಗಳನ್ನು ಮಾತ್ರ ಮಾಡಲು ಸಾಧ್ಯ! ಒಳ್ಳೆಯ ಅಡುಗೆ ಮಾಡುವವ ಉತ್ತಮ ಬರಹಗಾರನಾಗಲು ಇಷ್ಟಪಡುವುದಿಲ್ಲ ; ಹಾಗೇ ಇಷ್ಟಪಡದೇ ಬರೆದರೆ ಆ ಬರಹಗಳು ಓದುವುದಕ್ಕೆ ಕಷ್ಟವಾದ ಬರಹಗಳಾಗುತ್ತವೆ! ಉತ್ತಮ ವಾಗ್ಮಿ ಒಳ್ಳೆಯ ಪೇಂಟರ್ ಆಗಲು ಹೋಗುವುದಿಲ್ಲ, ಸಿನಿಮಾ ಹೀರೋ ಸಾಹಿತಿಯಾಗುವುದಿಲ್ಲ, ಒಳ್ಳೆಯ ಮೇಷ್ಟ್ರು ಸಕ್ರಿಯರಾಜಕಾರಣಿಯಾಗಲು ಇಷ್ಟಪಡುವುದಿಲ್ಲ, ಗಾರೆ ಕೆಲಸದವ ನಾಟಕದಲ್ಲಿ ಒಳ್ಳೆಯ ಪಾತ್ರ ಪೋಷಣೆ ಮಾಡಲಾರ, ಒಬ್ಬಮಾರ್ಕೆಟಿಂಗ್ ಹೆಡ್ ಸಾಹಿತ್ಯ -ಕಾವ್ಯಗಳ ಓದು/ಬರೆಹದಲ್ಲಿ ತೊಡಗಿಸಿಕೊಳ್ಳಲು ಅನುವಾಗುವುದಿಲ್ಲ; ಅವರಿಗೆ ಅದೆಲ್ಲಾ ಅರ್ಥವಿಲ್ಲದ ಕೆಲಸಗಳು, ಒಬ್ಬ ಉತ್ತಮ ವೈದ್ಯಉತ್ತಮ ಮೆಕಾನಿಕ್ ಆಗಿರುವುದಿಲ್ಲ ಹೀಗೇ ಒಂದೊಂದು ವ್ಯಕ್ತಿತ್ವವೂ ವಿಭಿನ್ನ ಮತ್ತು ವಿಶಿಷ್ಟ !
ವ್ಯಕ್ತಿ ತನ್ನ ಮೂಲ ಆಸಕ್ತಿ ಮತ್ತು ಅರ್ಹತೆಯನ್ನು ಗುರುತಿಸಿಕೊಂಡು ನಡೆದರೆ ಆ ವ್ಯಕ್ತಿಗೂ ಮತ್ತು ಸಮಾಜಕ್ಕೂ ಅದರಿಂದ ಒಳಿತು. ವ್ಯಕ್ತಿತ್ವದ ಅರಿವಿರದೇ ಎಲ್ಲರೂ 'ರಾಷ್ಟ್ರಪತಿ'ಗಳಾಗುವ ಕನಸು ಕಂಡರೆ ಆ ಕನಸು ಕನಸೇ ಹೊರತು ಅದು ಸಾಧ್ಯತೆಗಳ ಹಂದರದಲ್ಲಿ ಬರುವ ಅರ್ಹ ಕನಸಲ್ಲ. ಇಂತಹ ಸನ್ನಿವೇಶದಲ್ಲಿ ಅನೇಕ ಪರೀಕ್ಷೆಗಳು ವ್ಯಕ್ತಿ 'ಏನಾಗಲು ಯೋಗ್ಯ' ಎಂಬುದನ್ನುತೋರಿಸಿಕೊಡುತ್ತವೆ. ಅದರ ಮುಖೇನ ವ್ಯಕ್ತಿ ತನ್ನನು ಹಾಗೇ ಗುರುತಿಸಿಕೊಳ್ಳಲು ಸುಲಭವಾಗುತ್ತದೆ. ಹಣವನ್ನು ವಿಕಸನಕ್ಕೆಸರಿಯಾದ ಮಾರ್ಗದಲ್ಲಿ ತೊಡಗಿಸುವಲ್ಲಿ ಹೇಗೆ ಇನ್ವೆಸ್ಟ್ಮೆಂಟ್ ಅಡ್ವೈಸರ್ ನ್ನು ಕಾಣುತ್ತೇವೋ ಹಾಗೇ ಸರಿಯಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಸಹಾಯಮಾಡುತ್ತದೆ.
ಸ್ವತಂತ್ರ ಉದ್ಯಮಿಯಾಗುವ ಅರ್ಹತೆಗಳ ಪರೀಕ್ಷೆಗಳು

ಟೈಪ್ T ಪರ್ಸನಾಲಿಟಿ ಟೆಸ್ಟ್
ಇಂದು ಜಾಗತಿಕ ಆರ್ಥಿಕ ಮುಗ್ಗಟ್ಟನ್ನು ನೋಡುತ್ತಾ ಇದ್ದೀರಿ. ಮಾರ್ಕೆಟ್ಟಿನಲ್ಲಿ ಎಷ್ಟೇ ಬದಲಾವಣೆ ಆಗುತ್ತಿದೆ ಎಂದರೂ ಅದು ಕೇವಲ ಪುಸ್ತಕಗಳಲ್ಲಿ ಲೆಕ್ಕ ಹೊಂದಿಸುವಲ್ಲಿ ಮಾತ್ರವೇ ಹೊರತು ಕ್ರಿಯಾತ್ಮಕವಾಗಿ ಚಾಲ್ತಿಯಲ್ಲಿ ಹೊಸ ಬದಲಾವಣೆ ಬಂದಿದ್ದನು ಬಹುತೇಕ ಕಂಪನಿಗಳು ಪಡೆಯಲಾಗುತ್ತಿಲ್ಲ ! ಇಂತಹ ಆರ್ಥಿಕ ಪರಿಸ್ತಿತಿಯ ಹಿನ್ನೆಲೆಯಲ್ಲಿ ಯಾವರೀತಿಯಲ್ಲಿ ಮುನ್ನಡೆ ಸಾಧಿಸ ಬಹುದು ಎಂಬುದನ್ನು ಒಂದರ್ಥದಲ್ಲಿ ರಭಸದಿಂದ ಹರಿವ ನೀರಿಗೆ ಎದುರಾಗಿ ಈಜುವುದು ಹೇಗೆ ಎಂಬುದನ್ನು ವ್ಯಕ್ತಿಗೆ ಕೊಟ್ಟು ಪರೀಕ್ಷಿಸುವುದು. ವ್ಯಕ್ತಿ ತನ್ನ ಸ್ವಂತಿಕೆಯಿಂದ ಯಾವೆಲ್ಲ ದಾರಿಗಳನ್ನು, ಹಲವಾರು ಚಿಂತನಶೀಲ ಯೋಜನೆಗಳನ್ನು ಹೇಳ ಹೊರಡುತ್ತಾನೆ/ಳೆ ಎನ್ನುವುದನ್ನು ನಿಗದಿತ ಸಮಯದಲ್ಲಿ ಪರಿವೀಕ್ಷಿಸುವುದು. ಇದನ್ನು ಪ್ರಶ್ನೋತ್ತರ ರೂಪದಲ್ಲಿ ಕೂಡ ಮಾಡಬಹುದು.
ಮಾರ್ಕೆಟಿಂಗ್ ಖ್ವಿಜ್
ಮಾರುಕಟ್ಟೆಯ ಬಗ್ಗೆ ವ್ಯಕ್ತಿಗೆ ಏನು ಗೊತ್ತಿದೆ? ಮಾರುಕಟ್ಟೆಗೆ ಹೊಸ ವಸ್ತು ಅಥವಾ ಪ್ರಾಡಕ್ಟ್ ನ್ನು ಪರಿಚಯಿಸುವುದು ಹೇಗೆ, ಹಾಗೇ ಪರಿಚಯಿಸಲು ಸುಮಾರು ಎಷ್ಟು ಹಣ ಬೇಕಾಗಬಹುದು? ಯಾವ ಯಾವ ರೀತಿಯಲ್ಲಿ ಎಲ್ಲೆಲ್ಲಿ ಮಾರುಕಟ್ಟೆಗೆ ಪರಿಚಯಿಸಬೇಕು ಮುಂತಾದ ಸುಮಾರು ೧೫-೨೦ ಪ್ರಶ್ನೆಗಳು ಇರುತ್ತವೆ, ಸಮಯ ಮಿತಿ ಪ್ರಯೋಗ.
ಮಾರ್ಕೆಟ್ ರಿಸರ್ಚ್
ಮಾರುಕಟ್ಟೆಯಲ್ಲಿ ಜನ ಏನನ್ನು ಬಯಸುತ್ತಿದ್ದಾರೆ? ಯಾವ ಬೆಲೆಯಲ್ಲಿ ಬಯಸುತ್ತಾರೆ ? ನಮಗೆ ಸ್ಪರ್ಧೆಯೊಡ್ಡುವ ಬೇರೆ ಕಂಪನಿಗಳು ಯಾವವು ? ನಮ್ಮ ತಯಾರಿಕೆಯಲ್ಲಿನ ತೊಂದರೆ ಏನು ? ಮಧ್ಯವರ್ತಿಗಳು ಏನು ಹೇಳುತ್ತಿದ್ದಾರೆ ಮುಂತಾಗಿ ಹಲವಾರು ಪ್ರಶ್ನೆಗಳು, ಪುನಃ ಸಮಯಮಿತಿ ಪ್ರಯೋಗ !
ಸಾಹಸೀ ಪ್ರವೃತ್ತಿ ಪರೀಕ್ಷೆ
ವ್ಯಕ್ತಿ ಎಷ್ಟರಮಟ್ಟಿಗೆ ಜವಾಬ್ದಾರಿ ತೆಗೆದುಕೊಂಡು ಕೆಲಸಮಾಡಲು ಸಿದ್ಧ ? ಪರಿಸ್ಥಿತಿ ಹೇಗಿದ್ದರೂ ಮಾರ್ಕೆಟ್ ನಲ್ಲಿ ಹೇಗೇ ಮಾಡಿಯಾದರೂ ಬದುಕಬಲ್ಲೆನೆಂಬ ಸಾಹಸೀ ಮನೋಭಾವ ವ್ಯಕ್ತಿಗಿದೆಯೇ ? ಒದರ್ಥದಲ್ಲಿ ವ್ಯಕ್ತಿಯ ಗಟ್ಟಿತನವನ್ನು ಪರೀಕ್ಷೆಗೆ ಒಡ್ಡುವ ಕೆಲವು ಪ್ರಶ್ನೆಗಳು, ಸಮಯಮಿತಿ ಪ್ರಯೋಗ.
ಲೀಡರ್ಶಿಪ್ ಕ್ವಾಲಿಟಿ ಟೆಸ್ಟ್
ಉತ್ತಮ ನಾಯಕರು ಹುಟ್ಟಿನಿಂದಲೇ ಆ ಥರ ಇರುತ್ತಾರೆ ಎಂಬ ಹೇಳಿಕೆಯನ್ನು ಪಕ್ಕಕ್ಕಿಟ್ಟು ವ್ಯಕ್ತಿಯೊಳಗಿನ ಸುಪ್ತ ಶಕ್ತಿಯನ್ನು ಜಾಗೃತಿಗೊಳಿಸಿ ತಕ್ಕುದಾದ ಪರಿಸ್ಥಿತಿ ಮತ್ತು ಸಹಾಯ ಸಿಕ್ಕರೆ ಆತ/ಆಕೆ ಎಷ್ಟರಮಟ್ಟಿಗೆ ಸೃಜನಶೀಲ ಸ್ವಭಾವತೋರಿಸುತ್ತಾನೆ/ಳೆ ಎಂಬುದನ್ನು ಒರೆಗೆ ಹಚ್ಚುವುದು. ಇದರಲ್ಲಿ ವ್ಯಕ್ತಿಯ ಔಟ್ ಸ್ಟೇನ್ದಿಂಗ್
ಅಥವಾ ಅತೀ ಅಪರೂಪದ ವಿಶಿಷ್ಟ ಪ್ರತಿಕ್ರಿಯೆಯನ್ನು ಗುರುತಿಸುವುದು. ಹಲವಾರು ಪ್ರಶ್ನೆಗಳು, ಪುನಃ ಸಮಯಮಿತಿ ಪ್ರಯೋಗ !
ಯೋಗ್ಯತಾ ಪರೀಕ್ಷೆಗಳು
ಎಸ್ಸರ್ರ್ಟಿವ್ ನೆಸ್ ಪರೀಕ್ಷೆ ಅಥವಾ ವೈಯಕ್ತಿಕ ನೇರ ನುಡಿಯ ಪರೀಕ್ಷೆ
ಯಾವುದೇ ಪರಿಸರ, ಪರಿಸ್ಥಿತಿ ಇದ್ದರೂ, ಯಾರೇ ಇದ್ದರೂ ಯಾವುದೇ ಅಂಜಿಕೆ ಇಲ್ಲದೇ ತನ್ನ ವೈಯಕ್ತಿಕ ಕರಾರುವಾಕ್ಕಾದ ಅಭಿಪ್ರಾಯಗಳನ್ನು ವ್ಯಕ್ತಿ ಮಂಡಿಸುವಲ್ಲಿ ಎಷ್ಟರಮಟ್ಟಿಗೆ ಉತ್ತೀರ್ಣ ಎಂಬುದರ ಪರೀಕ್ಷೆ. ಬೇರೆಯವರ ಒತ್ತಡ ಮತ್ತು ಒತ್ತಾಸೆಗೆ ಬಲಿಯಾಗುತ್ತಾನೋ/ಳೋ ಅಥವಾ ತನ್ನದೇ ಅಭಿಪ್ರಾಯವನ್ನು ಮಂಡಿಸುತ್ತಾನೋ/ಳೋ ಅನ್ನುವುದನ್ನು ಒರೆಗೆ ಹಚ್ಚುವುದು. ಕೆಲವು ಪ್ರಶ್ನೆಗಳು ; ಸ್ಮಯಮಿತಿ ಪ್ರಯೋಗ.
ಬುದ್ಧಿ ತೀಕ್ಷ್ಣತೆಯ ಪರೀಕ್ಷೆ
ಹಲವಾರು ಸಂಬಂಧಿತ ಕೆಲಸಗಳನ್ನೊಡ್ಡಿ ಅವುಗಳನ್ನು ಅನುಕ್ರಮವಾಗಿ ಹೇಗೆ ಜೋಡಿಸುತ್ತಾರೆ ಮತ್ತು ಅದನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಲು ಹೇಗೆ ಸಮಯವನ್ನು ಪರಿಗಣಿಸುತ್ತಾರೆ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಇದು ಅತಿಯಾದ ಸಮಯಮಿತಿಯ, ಮಹತ್ವದ ಚಾಣಕ್ಯ ಅಥವಾ ಚಾಣಾಕ್ಷತನದ ಪರೀಕ್ಷೆ.
ನುಮೇರಿಕಲ್ ರೀಸನಿಂಗ್ ಟೆಸ್ಟ್ ಅಥವಾ ಅಂಕೆ-ಸಂಖ್ಯೆಗಳ ಮಹತ್ವದ ಪರೀಕ್ಷೆ
ಇದರಲ್ಲಿ ಅಂಕೆಯ ದೇ ಪವಾಡ, ಅಂಕೆಗಳನ್ನು ಒಪಯೋಗಿಸಿಕೊಂಡು ಯಾವ ಯಾವ ಅಂಕೆಗೆ ಎಷ್ಟೆಷ್ಟು ಮಹತ್ವ ಕೊಡುತ್ತಾರೆ ಮತ್ತು ಅಂಕೆಯನ್ನು ಯಾವ ಕೆಲಸಕ್ಕೆ ಮೀಸಲಿಡುತ್ತಾರೆ ಭಾವನೆಗಳು ಮತ್ತು ವಿಚಾರ ಲಹರಿಯ ಮೇಲೆ ಹೇಗೆಮುಂದುವರಿಯುತ್ತಾರೆ ಎಂಬುದನ್ನು ಪರೀಕ್ಷಿಸುವುದು. ಇದು ಕೂಡ ಅತಿಯಾದ ಸಮಯಮಿತಿಯ, ಮಹತ್ವದ ಚಾಣಕ್ಯ ಅಥವಾ ಚಾಣಾಕ್ಷತನದ ಪರೀಕ್ಷೆ.
ವರ್ಬಲ್ ರೀಸನಿಂಗ್ ಟೆಸ್ಟ್ ಅಥವಾ ಶಬ್ಧ ಪ್ರಯೋಗ ಪರೀಕ್ಷೆ
ಕೆಲವೊಂದು ಶಬ್ದಗಳನ್ನು ಮುಂದಿಟ್ಟು ಅವುಗಳನ್ನು ಉಪಯೋಗಿಸಲು ಹೇಳುವುದು ಮತ್ತು ಅವುಗಳನ್ನು ವ್ಯಕ್ತಿ ಎಷ್ಟು ಸಮಂಜಸವಾಗಿ ಉಪಯೋಗಿಸುತ್ತಾನೆ/ಳೆ ಎಂಬುದನ್ನು ಪರಿವೀಕ್ಷಿಸುವುದು. ಕಾಲೋಚಿತವಾಗಿ ಎಲ್ಲೆಲ್ಲಿ ಯಾವರೀತಿ ಮಾತನಾಡುತ್ತಾರೆ ಎಂಬುದನ್ನು ಇದರಲ್ಲಿ ವಿವೇಚಿಸಲಾಗುತ್ತದೆ.
ಫೈರ್ ಫೈಟಿಂಗ್ ಟೆಸ್ಟ್ ಅಥವಾ ಆಪತ್ಕಾಲಿಕ /ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಪರೀಕ್ಷೆ
ಕೊಟ್ಟ ಸಮಯದಲ್ಲಿ, ಬರಬಹುದಾದ ಯಾವುದೇ ಅನಿರೀಕ್ಷಿತ ಸನ್ನಿವೇಶಗಳಲ್ಲಿ ವ್ಯಕ್ತಿ ಹೇಗೆ ಸಕ್ರಿಯವಾಗಿ, ಮುಂದಾಲೋಚನೆಯಿಂದ, ಸೌಜನ್ಯದಿಂದ ವರ್ತಿಸಿ ಕೆಲಸ ನಿಭಾಯಿಸುತ್ತಾನೆ/ಳೆ ಎಂಬುದನ್ನು ಸಮಯ ಮಿತಿಯಲ್ಲಿ ಪ್ರಶ್ನೆಗಳ ಮತ್ತು ದೃಶ್ಯ ಸನ್ನಿವೇಶಗಳಮೂಲಕ ಪರೀಕ್ಷಿಸುವುದು.

[ಮುಂದಿನವಾರ ನೋಡೋಣ ................]
nice article
ReplyDeleteಸೀತಾರಾಮ್, ಬರೇ ಕಾಮಿಡಿಗಾಗಿ ನಾನು ಬರೆಯುವುದಿಲ್ಲ, ಪ್ರತಿಕ್ರಿಯೆಗಾಗಿ ಕಾಯುವುದೂ ಇಲ್ಲ, ಹಲವುಜನ ಇಂಥದ್ದನ್ನು ಓದೋದೇ ಇಲ್ಲ, ವಿವಿಧ ವಿಷಯಗಳನ್ನು ಕೊಡುತ್ತಿದ್ದೇನೆ, ಇದು ಈ ವಿಷಯದಲ್ಲಿ ಮೂರನೇ ಕಂತು,ನೀವು ಇಷ್ಟಪಟ್ಟು ಓದಿದಿರಿ, ಮೊದಲಿನೆರಡು ಕಂತುಗಳನ್ನೂ ಸಾಧ್ಯವಾದರೆ ಓದಿ ಅದು 'ವ್ಯಕ್ತಿತ್ವ ವಿಕಸನ' ಮಾಲಿಕೆಯಲ್ಲಿದೆ,ಧನ್ಯವಾದಗಳು
ReplyDeleteಲೇಖನದ ಮೊದಲ ೧೦ ಸಾಲುಗಲು ತುಂಬಾ ಅರ್ಥಗರ್ಭಿತವಾಗಿವೆ. ಮಾರ್ಕೆಟಿಂಗ್
ReplyDeleteಮ್ಯಾನೇಜ್ಮೆಂಟ್ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಇಲ್ಲಿ ಅರ್ಥ ಮಾಡಿಕೊಳ್ಳಲು ಎರೆಡುಬಾರಿ ಓದಿದೆ. ಪರಾವಗಿಲ್ಲ , ಅರ್ಥಮಾಡಿಕೊಂಡೆ ಎನಿಸಿದೆ. ಸಮಯಮಿತಿಯ ಪರೀಕ್ಷೇಗಳ ಬಗ್ಗೆ ಚೆನ್ನಾಗಿ ಹೇಳಿದ್ದೀರಿ. ಮುಂದುವರಿಸಿ......ಧನ್ಯವಾದ
ಧನ್ಯವಾದ, ಮುಂದುವರಿಸುತ್ತೇನೆ
ReplyDeleteಭಟ್ಟರೆ, ನಿಮ್ಮ ಪ್ರಾರ೦ಭದ ಪ್ರಾಸ್ತಾವನೆಯ ಬಗ್ಗೆ ನನಗೊ೦ದಿಷ್ಟ್ಟು ಅಭಿಪ್ರಾಯ ವ್ಯತ್ಯಾಸವಿದೆ.
ReplyDeleteವ್ರುತ್ತಿ,ಮತ್ತು ಪ್ರವ್ರುತ್ತಿ ಬೇರೆ ಬೇರೆಯಾಗಿರುವ ಎಷ್ಟೊ ವ್ಯಕ್ತಿಗಳನ್ನು ನಾವು ಹೆಚ್ಚಾಗಿ ಕಾಣುತ್ತೇವೆ.ಹೇಳುವುದಾದರೆ ಅದ್ಯಾಪನ ಮಾಡುವವ ಯಕ್ಷಗಾನ ಅರ್ಥದಾರಿಯಾಗಿರುವುದು,ತಬ್ಲಾವಾದಕನಾಗಿರುವುದು,ಕೃಷಿಕನಾಗಿರುವವ ವಿದ್ಯುತ್ತು ಉತ್ಪಾದನಾ ಯತ್ರವೊ೦ದನ್ನು ತಯಾರಿಸುವುದು.. ಹೀಗೆ.ಹಾಗಾಗಿ ಅವರವರ ಪ್ರವೃತ್ತಿಯೇ ವೃತ್ತಿಯಾಗಬೇಕೆ೦ದೇನೂ ಇಲ್ಲವಲ್ಲ.ವಿಷವಿಷ್ಟೇ ಒಳ್ಳೆಯ ಪೇ೦ಟರ್ ಒಳ್ಳೆಯ ಭಾಷಣಗಾರ ಆಗಬಹುದಲ್ಲವೇ?.
ಇದರ ಹೊರತಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳಿಸಿಕೊಟ್ಟಿದ್ದೀರಿ.ಮಾಹಿತಿಪೂರ್ಣವಾಗಿದೆ.ಅಭಿನ೦ದನೆಗಳು
ನೀವುಹೇಳಿದ್ದರಲ್ಲೇ ಉತ್ತರವಿದೆ ನೋಡಿ, ಇರುವ ಎಲ್ಲಾ ಪೇಂಟರ್ ಭಾಷಣಕಾರರಲ್ಲ, ಆತ ಭಾಷಣಕಲೆಯಲ್ಲಿ ಅಷ್ಟೊಂದು ಹಿಡಿತಸಾಧಿಸಿದ್ದರೆ ಅದನ್ನೇ ವೃತ್ತಿಯನ್ನಾಗಿಸಿದ್ರೆ? ಮತ್ತೊಂದು ಅಧ್ಯಾಪನ ಮತ್ತು ತಬ್ಲಾವಾದನ-ಇವೆರಡರಲ್ಲಿ ಯಾವುದು ಇಷ್ಟವೋ ಆತ ಅದ್ರಲ್ಲಿ shine ಆಗುತ್ತಾನೆ, ಅಂದರೆ ನಾವು ವೃತ್ತಿಮಾರ್ಗದರ್ಶನದಲ್ಲಿ ಅದನ್ನೇ ಮುಖ್ಯವಾಗಿ ಗುರುತಿಸಿ,ಅಳೆದು-ತೂಗಿ,ತೂಕ ಜಾಸ್ತಿ ಇದ್ದುದ್ದನ್ನು ಅವರ ಆಯ್ಕೆಗೆ ಕೊಡುತ್ತೇವೆ,ಇನ್ನು ಅವರವರಿಗೆ ಬಿಟ್ಟಿದ್ದು, ಹೀಗೆ ಹಲವರು ಬೇರೆ ಬೇರೆ ರಂಗದಲ್ಲಿ ತೊಡಗಿದ್ದರೆ ಎಲ್ಲದರಲ್ಲೂ ಅವರಿಗೆ ತತ್ಸಮಾನ ಪರಿಣತಿ ಇರುವುದಿಲ್ಲ; ಯವುದೋ ಒಂದರಲ್ಲಿ ಮಾತ್ರ ಅವರು ಬೆಳಗುತ್ತಾರೆ, ಇದು ದಾಸರು ಹೇಳಿದ ಹಾಗೆ ’ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ! ಅರ್ಥವಾಯಿತಲ್ಲ? ಧನ್ಯವಾದಗಳು
ReplyDeleteಭಟ್ಟರೆ, ನಿಮ್ಮ ವೃತ್ತಿಮಾರ್ಗದರ್ಶನದ ಬಗ್ಗೆ ನನ್ನ ಆಕ್ಷೇಪಣೆಯೇನೂ ಇಲ್ಲ.
ReplyDeleteಒ೦ದು ವೃತ್ತಿಯಲ್ಲಿರುವವನು ಇನ್ನೊ೦ದು ಪ್ರವೃತ್ತಿಯಲ್ಲಿ ಪರಿಣತಿಯನ್ನು ಸಾಧಿಸಲಾರ ಎನ್ನುವುದು ನಮ್ಮನ್ನು ನಾವು ಸ೦ಕ್ಷೇಪಿಸಿದ೦ತೆ ಆಗುವುದಿಲ್ಲವೇ?.ಸಾದ್ಯತೆಗಳ ಅಗಾಧತೆಯಲ್ಲಿ ನಮಗೆ ನಾವೇ ಪರಿಧಿಯನ್ನು ಹಾಕಿಕೊಳ್ಳುವುದು ಸಮ೦ಜಸವೇ?
"ಅನ೦ತವೇ ಮಿತಿ.ಅಸಾದ್ಯವಾದುದು ಯಾವುದೂ ಇಲ್ಲ" ಎನ್ನುವ ಸ೦ಸ್ಕೃತಿಯಲ್ಲವೇ ನಮ್ಮದು?,
ಏನ೦ತೀರಿ
ಹೊಟ್ಟೆಯ ಅನ್ನಕ್ಕೆ ಒಂದು ವೃತ್ತಿ, ಮನಸ್ಸಿನ ಅನ್ನಕ್ಕೆ ಇನ್ನೊಂದು ಅದು ಪ್ರವೃತ್ತಿ, ಯಾವುದು ಮನಸ್ಸಿಗೆ ಹಿತಕರವೆನಿಸಿ ಅದರಲ್ಲೇ ಜಾಸ್ತಿ ತಲ್ಲೀನನಾಗಿ ದುಡಿಯಬೇಕೆಂದು ಮನಸ್ಸು ತುಡಿಯುತ್ತದೋ ಲೌಕಿಕವಾಗಿ ಬದುಕಿನಲ್ಲಿ ಅದು ದುಡಿಮೆಯ ಮುಖ್ಯಮಾರ್ಗ, ಒಂದರಲ್ಲೇ ವಿಕಸಿತರಾಗಿ ಹೆಸರು, ಹಣ ಸಂಪಾದನೆ ಸಾಧ್ಯ, ಉದಾಹರಣೆಗೆ - ಶ್ರೀ ಬಾಲಮುರಳೀಕೃಷ್ಣ ,ಶ್ರೀ ಕದ್ರಿ ಗೋಪಾಲನಾಥ್ ಇವರೆಲ್ಲ ಇದ್ದಾರಲ್ಲವೇ? ಅವರೆಲ್ಲ ಅದದೇ ಕಲೆ-ಕೆಲಸವನ್ನು ವೃತ್ತಿ ಅಂತ ತೆಗೆದುಕೊಂಡಿದ್ದಾರೆ, ಒಂದು ಕಡೆ ಹೊಟ್ಟೆ ತುಂಬಿದರೆ ಇನ್ನೊಂದು ಕಡೆ ವಿಚಾರ ಯಾಕೆ ಸ್ವಾಮೀ? ಇನ್ನು ಹವ್ಯಾಸಕ್ಕಾಗಿ ಏನನ್ನೂ ಮಾಡಬಹುದು, ಅದರಲ್ಲಿ ತಪ್ಪೂ ಇಲ್ಲ, ಕೀಳರಿಮೆಯೂ ಇಲ್ಲ, ಮಿತಿಯೂ ಇಲ್ಲ, 'ನಾನು ನಿಧಾನಕ್ಕೆ ಆ ರಂಗಕ್ಕೆ ಹೋಗುತ್ತೇನೆ,ಅಲ್ಲಿ ದುಡಿಮೆ ಇದೆ' ಎಂದು ನಾವಂದುಕೊಳ್ಳುವುದು ನಮಗೆ ಈಗಿರುವ ರಂಗದಲ್ಲಿ ಗತಿ ಇಲ್ಲದಾದಾಗ ಮಾತ್ರ, ಇದಕ್ಕೆ ನಾವು ಇಂಗ್ಲೀಷ್ ನಲ್ಲಿ job ಉನ್ಸತಿಸ್ಫಾಕ್ಟೊರಿ ಅಂತ ಕರೆಯುತ್ತೇವೆ, ತಿಳಿಯಿತಲ್ಲವೇ?
ReplyDeleteಆಸಕ್ತಿ ಇದ್ದಲ್ಲಿ -ವೃತ್ತಿ/ಪ್ರವೃತ್ತಿ ಯಲ್ಲಿ ವಿಭಿನ್ನತೆ ಇರಬಹುದು. ವಿವಿಧ ವೃತ್ತಿ ಕೌಶಲ್ಯತೆಯನ್ನು ಒಬ್ಬ ವ್ಯಕ್ತಿ ಹೊ೦ದಬಹುದು. ನಾನು ಓದಿದ್ದು ಭೂಗರ್ಭಶಾಸ್ತ್ರ ಕೆಲಸ ಮಾಡಿದ್ದು -ಗಣಿ ಭೂಗರ್ಭ ವಿಜ್ಞಾನಿ ಮತ್ತು ಗಣಿ ವ್ಯವಸ್ಥಾಪಕನೆ೦ದು. ಗಣಿಗಾರಿಕೆ ಓದಿರದಿದ್ದರೂ ಪೃವ್ರುತ್ತಿಯಿ೦ದ ಅದರ ಪ್ರಾವೀಣ್ಯತೆ ಪಡೆದು ಅಗತ್ಯ ಪರೀಕ್ಷೆ ಬರೆದು, ಅರ್ಹತಾ ಪತ್ರ ಪಡೆದು ಗಣಿ ಮುಖ್ಯಸ್ಥನಾದೆ. ಹಾಗೇ ಎಮ್-ಬಿ-ಏ ಮಾನವ ಸ೦ಪನ್ಮೂಲದಲ್ಲಿ ಮಾಡಿ ನನ್ನ ಆಡಳಿತ ವೈಖರಿಯನ್ನೇ ಗಣಿಗಾರಿಕೆಯಲ್ಲಿ ವಿನೂತನವಾಗಿಸಿದೆ. ಸಾಮಾನ್ಯವಾಗಿ ಗಣಿಗಾರಿಕೆಯಲ್ಲಿರುವ ಆದೇಶ ಆಡಳಿತವನ್ನ ಸ್ವ-ಶಕ್ತ ಆಡಳಿತವನ್ನಾಗಿಸಿ ಹೆಚ್ಚಿನ ಯಸಸ್ಸನ್ನು ನಮ್ಮ ತ೦ಡದಿ೦ದ ಹೊ೦ದಿದೆವು.
ReplyDeleteನನ್ನ ತ೦ಡದಲ್ಲಿ ಪ್ರತಿಯೊಬ್ಬರಿಗೂ ಕನಿಷ್ಟಪಕ್ಷ ಎರಡು ಕೆಲಸ ಕಾರ್ಯಕ್ಷೇತ್ರದಲ್ಲಿ ಅನುಭವವನ್ನು ಬರುವ೦ತೆ ತರಬೇತಿ ನೀಡಲಾಗಿತ್ತು. ಕೆಲವೊಬ್ಬರೂ ಆಲ್-ರೌ೦ಡರಗಳಿದ್ದರು.
ಕೆಲಸದಲ್ಲಿ ಆಸಕ್ತಿ, ತನ್ನದು ಎನ್ನುವ ಅಭಿಮಾನ ಮತ್ತು ಜವಾಬ್ದಾರಿ ಹೊ೦ದಿದಲ್ಲಿ- ವೃತ್ತಿ -ಪ್ರವೃತ್ತಿಗಳನ್ನು ಮೀರಿ ಅಭಿರುಚಿಗಳು ಬೆಳೆದು ವ್ಯವಹಾರಿಕ ಜೀವನದಲ್ಲಿ ಯಶಸ್ಸು ಹೊ೦ದಬಹುದು. ನನ್ನ
ಬ್ಲೊಗ್-ನಲ್ಲಿನ 'ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT)" ಈ ಲೇಖನದ ನಾಲ್ಕು ಕ೦ತನ್ನು ಓದಿ.
Link :
1. http://nannachutukuhanigavanagalu.blogspot.com/2009/12/blog-post_12.html
2.
http://nannachutukuhanigavanagalu.blogspot.com/2009/12/story-around-human-resources-management.html
3.
http://nannachutukuhanigavanagalu.blogspot.com/2009/12/blog-post_27.html
4.
http://nannachutukuhanigavanagalu.blogspot.com/2010/01/blog-post_05.html
ಸೀತಾರಾಮ್ ರವರೇ, ವಿಶ್ವವಿದ್ಯಾಲಯ ಹುಟ್ಟಿಕೊಂಡಿದ್ದು ಮನುಷ್ಯರನೇಕರು ಸೇರಿ ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ಅದನ್ನು ಅಧ್ಯಯನ ಯೋಗ್ಯವಾಗಿಸಿದಾಗಲ್ಲವೇ ? ಹಾಗೇ ಪ್ರತಿಯೊಬ್ಬರ ಅನುಭವವೂ ಒಂದೊಂದೇ ಗರಿಯನ್ನು ಕೊಡುತ್ತ ಕೊಡುತ್ತ ಕೊನೆಗೆ ಅದು ನವಿಲುಗರಿ ಬೀಸಣಿಗೆಯಾಗುತ್ತದೆ, ಹಾಗೆಯೇ ನೀವುಹೇಳಿದ ವಿಷಯದಲ್ಲೂ ಸ್ವಲ್ಪ ಸಮಯ ಬೇಕಾಗಬಹುದು, ಖಂಡಿತ ಪ್ರಯತ್ನಿಸುತ್ತೇನೆ,ಧನ್ಯವಾದಗಳು
ReplyDeleteನೀವು ವೃತ್ತಿ ಮತ್ತು ಪ್ರವೃತ್ತಿಯನ್ನು ಸಮೀಕರಿಸುವುದು ಯಾಕೆ೦ದು ನನಗೆ ಅರ್ಥವಾಗುವುದಿಲ್ಲ? ಹಾಗಾಗಿಯೇ ನೀವುಹೇಳಿದ ಈ ಕೆಳಗಿನ ವಿಷಯಗಳು ನನಗೆ ಸದ್ಯಕ್ಕೆ ಒಪ್ಪಿಯಾಗಿಲ್ಲ
ReplyDelete(ಒಳ್ಳೆಯ ಅಡುಗೆ ಮಾಡುವವ ಉತ್ತಮ ಬರಹಗಾರನಾಗಲು ಇಷ್ಟಪಡುವುದಿಲ್ಲ ; ಹಾಗೇ ಇಷ್ಟಪಡದೇ ಬರೆದರೆ ಆ ಬರಹಗಳು ಓದುವುದಕ್ಕೆ ಕಷ್ಟವಾದ ಬರಹಗಳಾಗುತ್ತವೆ! ಉತ್ತಮ ವಾಗ್ಮಿ ಒಳ್ಳೆಯ ಪೇಂಟರ್ ಆಗಲು ಹೋಗುವುದಿಲ್ಲ, ಸಿನಿಮಾ ಹೀರೋ ಸಾಹಿತಿಯಾಗುವುದಿಲ್ಲ, ಒಳ್ಳೆಯ ಮೇಷ್ಟ್ರು ಸಕ್ರಿಯರಾಜಕಾರಣಿಯಾಗಲು ಇಷ್ಟಪಡುವುದಿಲ್ಲ, ಗಾರೆ ಕೆಲಸದವ ನಾಟಕದಲ್ಲಿ ಒಳ್ಳೆಯ ಪಾತ್ರ ಪೋಷಣೆ ಮಾಡಲಾರ, ಒಬ್ಬಮಾರ್ಕೆಟಿಂಗ್ ಹೆಡ್ ಸಾಹಿತ್ಯ -ಕಾವ್ಯಗಳ ಓದು/ಬರೆಹದಲ್ಲಿ ತೊಡಗಿಸಿಕೊಳ್ಳಲು ಅನುವಾಗುವುದಿಲ್ಲ;)ವ್ಯಕ್ತಿಯಲ್ಲಿ ಇಚ್ಚಾ ,ಕ್ರಿಯಾ,ಬುದ್ಧಿಶಕ್ತಿ ಜಾಗ್ರತವಾಗಿರುವವರೇಗೆ ಇವೆರಡೂ ಬೇರೆಬೇರೆಯಗಿರುವುದರಿ೦ದ ಔನತ್ಯಕ್ಕೆ ಧಕ್ಕೆಯೇನೂ ಇಲ್ಲ.ನನಗೆ ತಿಳಿದ೦ತೆ ಹೆಸರಾ೦ತ ವೈದ್ಯರೊಬ್ಬರು ಒಳ್ಳೆಯ ಕೊಳಲು ವಾದಕರು.ಹಣಕಾಸು ಸ೦ಸ್ಥೆಯೊ೦ದರ ಮುಖ್ಯಸ್ಥರು ಸ೦ಗೀತ ಕಚೇರಿಗಳಲ್ಲಿ ಘಟ೦ ವಾದಕರು.ಆದುದರಿ೦ದ ವೃತ್ತಿ ಮತ್ತು ಪ್ರವೃತ್ತಿಗೆ ಸಮಾನ ಬದ್ಧತೆಯನ್ನು ಕೊಟ್ಟರೆ ತಪ್ಪೇನು?ವೃತ್ತಿಯಲ್ಲಿ ವಿಕಸಿಸುವುದಕ್ಕೆ ಉಳಿದವುಗಳು ಪೂರಕವಾಗಬಹುದಲ್ಲವೇ?