ಮಿತ್ರ ಓದುಗರೇ, ಇದೊಂದು ನನ್ನ ಹೊಸಮಾಲಿಕೆ 'ಸರಿಗಮಪದನಿ' . ಈಗಷ್ಟೇ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಿತು ನೆಟ್ ನಲ್ಲೇ! ಕರೆಯಲು ಮರೆತಿದ್ದೆ, ಇರ್ಲಿ ಬಿಡಿ ಈಗ ಬನ್ನಿ ಓದಿ- ಇದರಲ್ಲಿ ನಿಮ್ಮೊಂದಿಗೆ ಕಂಗ್ಲಿಷ್ ಹಾಗೂ ಕೆಲವು ಧ್ವನಿ ವಾಹಿನಿ ಮತ್ತು ವೀಡಿಯೋಗಳನ್ನು ಕೊಡುವ ಪ್ರಯತ್ನ, ಮೊಟ್ಟಮೊದಲಾಗಿ ಇಂದು ಕಂಗ್ಲಿಷ್ ಕವನ. ಇದು ಪಕ್ಕಾ ಭಾವಗೀತೆಯಲ್ಲ, ಆದರೆ ಸ್ವಲ್ಪ ಹಾಸ್ಯ, ಸ್ವಲ್ಪ ನೋವು, ಸ್ವಲ್ಪ ನಲಿವು, ಸ್ವಲ್ಪ ತುರಿಕೆ ಹೀಗೇ ಎಲ್ಲವುಗಳ ಮಿಶ್ರಣದ ಮಿಸಳ್ ಭಾಜಿ ಈ ಮಾಲಿಕೆ. ಅನಿಸಿದ್ದನ್ನು ಯಾವ ಭಿಡೆಯವೂ ಇಲ್ಲದೇ ಹಾಗಿಂದ ಹಾಗೇ ಪ್ರಸ್ತುತ ಪಡಿಸುವ ಮಾಲಿಕೆ ಇದು.
ಇದರಲ್ಲಿ ಸ್ವಾನುಭವ, ಸ್ನೇಹಿತಾನುಭವ, ಪರಕಾಯಪ್ರವೇಶ, ಛೂ-ಮಂತರ್ ಇಂದ್ರಜಾಲ, ಕಷ್ಟಾನಿಷ್ಟ, ಸರಸ-ವಿರಸ-ಸಮರಸ, ಹಬ್ಬದ ಕಾಯಿ ಹೋಳಿಗೆ, ಅಬ್ಬರಿಸಿದ ಯಜಮಾನ, ಹಳಸಿದ ಹುಳಿಯನ್ನ, ಮುಗ್ಗಿದ ಬಟ್ಟೆ, ಒದ್ದೆ ತಲೆ, ಘಾಟಿನ ಒಗ್ಗರಣೆ, ಬ್ರಹ್ಮಾಂಡದಂತ ಹೊಟ್ಟೆ, ಅಂಬೊಡೆ-ಪತ್ರೊಡೆ-ಚಿತ್ರಾನ್ನ, ಗಜಕೇಸರಿ ಯೋಗದ ಜ್ಯೋತಿಷ್ಯ, ಪರರಗಂಟಿಗೇನಪಾಯ, ಸಪ್ತ ಸಮುದ್ರಗಳ ಮೇರೆ ಮೀರಿ, ಅಧಿಕ ಪ್ರಸಂಗ-ಅತ್ಯಧಿಕ ಪ್ರಸಂಗ, ಹಾರ್ಮೋನು-ಹಾರ್ಮೋನಿಯಮ್ಮು-ಇಂಬ್ಯಾಲೆನ್ಸು-ಮೊಬೈಲ್ ನಲ್ಲಿ ನೋ ಬ್ಯಾಲೆನ್ಸು ! ಇತ್ಯಾದಿ ಹಲವು ಹತ್ತು ಅನಿಸಿಕೆಗಳನ್ನೆಲ್ಲ ಮಧ್ಯೆ ಮಧ್ಯೆ ಒಂಚೂರು ಅದೂ ಇದೂ ಅಂತ ಕೊಡಲು ಉದ್ಯುಕ್ತನಾಗಿದ್ದೇನೆ. ಸ್ವಾಗಿತಿಸುವಿರಲ್ಲವೇ ? ಹೌದಾದರೆ ಓದಿ ಇಂದಿನ ಕವನ--ನಮಸ್ಕಾರ

ಮನದ ಹರತಾಳ
ಏಕೋ ಮುನಿಸಿದೆ ಈ ಮನವಿಂದು
ಬಿಕೋ ಎನ್ನುವುದು ಬರೆಯದ ಬದಕೊಂದು
ತಕೋ ಲೆಕ್ಕಣಿಕೆಯ ಕೈಯ್ಯೊಳಗೆ
ನಕೋ ಎನ್ನದಿರು ಈ ಘಳಿಗೆ !
ಯಾಕಾದರೂ ಈ ದಿನ ಬಂತು
ಬೇಕಾಗಿತ್ತೇ ಬಡಪಾಯ್ಗೆ ?
ನಾಕಾದರೂ ಊಟವೇ ಇಲ್ಲ
ಸಾಕಾಯಿತು ತುಸು ತೆರಪಿಲ್ಲ !
ಬೆಳಗೆದ್ದು ದೇವರ ನೆನೆದೆ
ಒಳಗಡೆಗೆ ಬಿಸಿ ಚಾ ಕುಡಿದೆ
ಕಳುವಾಗಿದೆ ಎನ್ನುವ ಫೋನು !
ತಳಮಳಿಸದೆ ತಿರುಗಿದೆ ಫ್ಯಾನು
ಸಂಪಾದಕ ಕರೆಯನು ಮಾಡಿ
ಸೊಂಪಾಗಿದೆ ಕವನವದೆಂದ
ತಂಪಾದ ಗಾಳಿಯದಷ್ಟೇ
ಕೆಂಪಾಯ್ತು ಕಾಸಿಗೆ ಕಣ್ಣು !
ಬೈಟೂ ಕಾಫಿಯ ವ್ಯವಹಾರ
ಸೈಟಿಲ್ಲದ ಮನೆ ವ್ಯಾಪಾರ !
ಹೈಟಾಗಿದೆ ನೋಡುವುದಕ್ಕೆ
ಕೈಕಟ್ಟಿದೆ ಖರ್ಚಿಗದಕ್ಕೆ