ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, September 15, 2012

’ಆರ್ಯರು ಭಾರತಕ್ಕೆ ಬಂದರು’ -ಎಂಬ ಕಟ್ಟು ಕಥೆ !

 ಸುಮಾರಾಗಿ ಆರ್ಯಾವರ್ತವನ್ನು ತೋರಿಸುವ ನಕಾಶೆಯ ಕೃಪೆ: ಅಂತರ್ಜಾಲ
’ಆರ್ಯರು ಭಾರತಕ್ಕೆ ಬಂದರು’ -ಎಂಬ ಕಟ್ಟು ಕಥೆ !

ವೃಷಭೋ ಮರುದೇವ್ಯಾಶ್ಚ ವೃಷಭಾತ್ ಭರತೋ ಭವೇತ್ |
ಭರತಾದ್ಭಾರತಂ ವರ್ಷಂ ಭರತಾತ್ ಸುಮತಿಸ್ತ್ವಭೂತ್ ||

ಪುಣ್ಯಭೂಮಿ ಭಾರತವನ್ನು ಅದೆಷ್ಟೋ ಆಳರಸರು ಆಳಿದರು. ಭಾರತಕ್ಕೆ ಮೊದಲು ಭರತವರ್ಷ ಎಂಬ ಹೆಸರೂ ಇತ್ತು! ನಮ್ಮ ವೇದಮಂತ್ರ ಸಂತುಲಿತ ಮಂಗಲಕಾರ್ಯಗಳ ಆಚರಣೆಯ ಪೂರ್ವಭಾವೀ ಸಂಕಲ್ಪದಲ್ಲಿ ಇಂದಿಗೂ ನಾವು ’ಭರತಖಂಡೇ ಭರತವರ್ಷೇ ಭಾರತದೇಶೇ’ ಎಂದು ದೇಶಕಾಲಗಳನ್ನು ಸಂಕೀರ್ತನೆ ಮಾಡುವ ಕ್ರಮವಿದೆ. ಆರ್ಯಾವರ್ತದಲ್ಲಿ, ಆರ್ಯರ ರಾಜನಾದ ನಾಭಿ-ಮರುದೇವಿಯರ ಮಗುವಾಗಿ ವೃಷಭದೇವ ಜನಿಸಿ ರಾಜ್ಯವಾಳಿದ. ರಾಜಾ ವೃಷಭದೇವನ ಮಗನಾಗಿ ಹುಟ್ಟಿದವ ಚಕ್ರವರ್ತಿ ಭರತ. ಆತನ ಮಹಾಪರಾಕ್ರಮದಿಂದ ಹಿಂದೂಸ್ಥಾನಕ್ಕೆ ಭರತವರ್ಷ ಎಂಬ ಹೆಸರೂಕೂಡ ನೀಡಲ್ಪಟ್ಟಿತ್ತು. [ದುಷ್ಯಂತ-ಶಕುಂತಲೆಯರ ಮಗನಾದ ಭರತನೂ ಚಕ್ರವರ್ತಿಯೇ, ಆತನಿಂದ ಭಾರತ ಎಂಬ ಹೆಸರನ್ನು ಪಡೆಯಿತು!] [ಪ್ರಾಗೈತಿಹಾಸ ಇನ್ನೂ ಹಿಂದಕ್ಕೆ ಹೋಗುತ್ತದೆ, ಸಮಯ, ದೇಶ, ಕೋಶಗಳ ಪರಿಮಿತಿಯನ್ನವಲಂಬಿಸಿ ಇಲ್ಲಿಂದ ಆರಂಭಿಸಿದ್ದೇನೆ] ಇಂತಹ ಭರತವರ್ಷ ಎಲ್ಲಿಂದ ಎಲ್ಲಿಯವರೆಗಿತ್ತು ಎಂಬುದನ್ನು ಸ್ಥೂಲವಾಗಿ ಹೀಗೆ ಹೇಳಿದ್ದಾರೆ:

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಮ್ |
ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ ||
ಸೂಚ್ಯ ಭರತವರ್ಷ

ಅರ್ಥ ಹೀಗಿದೆ : ಸಮುದ್ರಕ್ಕೆ ಉತ್ತರದಿಕ್ಕಿನಲ್ಲಿಯೂ ಹಿಮಾದ್ರಿ ಶಿಖರಗಳ ದಕ್ಷಿಣಕ್ಕೂ ಇರುವ ಭಾರತದೇಶವನ್ನು ಭಾರತವರ್ಷವೆಂದು ತಿಳಿಯಬೇಕು ಮತ್ತು ಇಲ್ಲಿ ವಾಸಿಸುವವರು ಭಾರತೀಯರು. [ಈ ಶ್ಲೋಕದ ರೀತಿಯಲ್ಲಿಯೂ ಅಲ್ಲದೇ ಹೇಳುವುದಾದರೆ ಚಕ್ರವರ್ತಿ ಭರತನ ರಾಜ್ಯ ಪ್ರಪಂಚವ್ಯಾಪಿಯಾಗುತ್ತದೆ ಎಂಬುದನ್ನು ಗಮನಿಸಬೇಕು. ಇದು ಪ್ರಸಕ್ತ ಇರುವ ನಕಾಶೆಗೆ ಸಂಬಂಧಿಸುವುದಿಲ್ಲ, ಪ್ರಸಕ್ತ ಭಾರತ ಆತನ ಆಳ್ವಿಕೆಗೇ ಒಳಪಟ್ಟಿತ್ತು ಎಂಬುದನ್ನೂ ಗಮನಿಸಬೇಕು. ವಿಸ್ತಾರವನ್ನು ಹೇಳಲು ಸೂಚ್ಯವಾಗಿ ಈ ಶ್ಲೋಕವನ್ನು ಬಳಸಿದ್ದಿರಬಹುದು, ರಾಮಾಯಣ ಕಾಲದಲ್ಲಿ ಮಾಡಿದ ಶ್ಲೋಕವಾದ್ದರಿಂದ, ಪ್ರಳಯದ ನಂತರ ಭೂಭಾಗದಲ್ಲಿ ವ್ಯತ್ಯಾಸವಾಗಿರಬಹುದು]  ಇಂತಹ ಭಾರತಕ್ಕೆ ಇನ್ನೂ ಹಲವು ಹೆಸರುಗಳಿದ್ದವು, ಅವುಗಳೆಂದರೆ : ಹಿಂದ್, ಸಿಂಧ್, ಫೈವ್ ಇಂಡೀಸ್, ಇಂಡೋಯಿ, ಇಂಡೋಯು, ಇಂಡಿಯಾ, ಇಂಡುಕಿ, ಹಿಂದುಷ್, ತೆಂಜಿಕು, ಯಿಂದು, ತಿಯಾಂಝು ಇಷ್ಟೆಲ್ಲಾ ನಾಮಧೇಯಗಳನ್ನು ಹಿಂದೂಸ್ಥಾನ ಪಡೆದಿತ್ತು. ಇದ್ಯಾವುದನ್ನೂ ಅರಿಯದ ನಮಗೆ ನಾವು ಕಲಿಯುವಾಗ ಬೋಧಿಸಿದ ಪಠ್ಯದಲ್ಲಿ ’ಆರ್ಯರು ಭಾರತಕ್ಕೆ ಬಂದುದು’ ಎಂಬ ಪಾಠವಿತ್ತು. ಆರ್ಯರು ಭಾರತಕ್ಕೆ ಬಂದುದು ನಿಜವೇ? ಅವರು ಎಲ್ಲಿನವರು? ಇಲ್ಲಿಗೆ ಯಾಕಾಗಿ ಬಂದರು? ಅವರ ಭಿನ್ನತೆಗಳೇನು?- ಈ ಬಗ್ಗೆ ತಲೆಹೊಕ್ಕಿದ ಹುಳ ಹೊರಬೀಳದೇ ಕೊರೆಯುತ್ತಿದ್ದು ಬಹಳಕಾಲವಾಗಿತ್ತು. ಸತತವಾದ ಕೆಲಸಗಳ ಮಧ್ಯೆ ಅದಕ್ಕೆ ತಕ್ಕುದಾದ ಉತ್ತರದ ನಿರೀಕ್ಷೆಯಲ್ಲಿ ನಾನಿದ್ದೆ. ಹಲವು ಆಕರ ಗ್ರಂಥಗಳನ್ನು ಬಳಸಿ ತೆವಳುತ್ತಾ ತೆವಳುತ್ತಾ ಅಂತೂ ಒಳಗಿನ ಗೂಢವಾದ ಗುಹೆಗೊಂದುಕಂಡು ಅದರ ದ್ವಾರ ಸಿಕ್ಕಿತು. ಆ ಜಾಡಿನಲ್ಲಿ ಒಳಹೊಕ್ಕು ಸಾಗುತ್ತಾ ಸಾಗುತ್ತಾ ಮತ್ತೆ ತಿಂಗಳುಗಳೇ ಸಂದವು. ದಾಖಲೆಗಳು ಹಲವು ಸಿಕ್ಕರೂ ಯಾವುದು ನಂಬಲರ್ಹ ದಾಖಲೆ ಎಂಬುದೇ ಪ್ರಶ್ನೆಯಾಗಿರುತ್ತಿತ್ತು. ಸಂದಿಗ್ಧಗಳಿಗೆ ಮತ್ತೆ ಮತ್ತೆ ಉತ್ತರಹುಡುಕುತ್ತಾ ನಡೆದಾಗ, ಬ್ರಿಟಿಷರು-ಕ್ರೈಸ್ತ ಮಿಶನರಿಗಳು ತಿರುಚಿದ ಪ್ರಾಗೈತಿಹಾಸ ಕಂಡುಬರಹತ್ತಿತು. ಅದನ್ನೇ ವಿಸ್ತರಿಸಿ ನಿಮ್ಮೆಲ್ಲರಿಗೂ ಸತ್ಯವನ್ನು ತಿಳಿಸುವ ಉದ್ದೇಶದಿಂದ ಈ ಲೇಖನ ಸಿದ್ಧಗೊಂಡಿತು.  

ಮಿಶನರಿಗಳ ಪ್ರಕಾರ: ಆರ್ಯರು ಸಿಂಧೂನದಿಯ ಮುಖಜ ಭೂಮಿ ವಾಸಿಗಳು. ಅಲ್ಲಿಂದ ಭಾರತದೊಳಕ್ಕೆ ನುಸುಳಿದರು! ಆಗ ದಸ್ಯುಗಳೆಂಬ ಕಪ್ಪು ದಪ್ಪ ಚರ್ಮದ ದ್ರಾವಿಡರು ಇಡೀ ದೇಶವನ್ನು ಆಳುತ್ತಿದ್ದರು. ಭಾರತಕ್ಕೆ ನುಗ್ಗಿದ ಆರ್ಯರು ತಮ್ಮ ವಿಶೇಷವಾದ ವೇದ-ಶಾಸ್ತ್ರಗಳಾಧಾರಿತ ಜೀವನಕ್ರಮವನ್ನು ಇಲ್ಲಿನ ಜನರಮೇಲೆ ಹೇರಿದರು.---ಇದು ಭಾರತೀಯರಲ್ಲೇ ಭಿನ್ನಾಭಿಪ್ರಾಯ ಹುಟ್ಟಿಸಿ ಒಡೆದು ಆಳುವ ನೀತಿಗಾಗಿ ಸೃಷ್ಟಿಸಿದ ಕಟ್ಟುಕಥೆ ಎಂದರೆ ಆಶ್ಚರ್ಯಪಡಬೇಡಿ. ಹಾಗಾದರೆ ಆರ್ಯರು ಭಾರತದಲ್ಲೇ ಇದ್ದವರೇ ಅಥವಾ ಭಾರತದ ಮೂಲನಿವಾಸಿಗಳೇ ಎಂಬ ಪ್ರಶ್ನೆಗೆ ನನ್ನ ನೇರ ಉತ್ತರ: ನೂರಕ್ಕೆ ನೂರು ಅವರು ಭಾರತೀಯರೇ ಮತ್ತು ಭಾರತದಲ್ಲೇ ಇದ್ದವರು. ಇದನ್ನು ಅರಿಯಬೇಕಾದರೆ ’ಆರ್ಯಾವರ್ತ’ವನ್ನು ತಿಳಿದುಕೊಳ್ಳಬೇಕು. ಆರ್ಯಾವರ್ತ ಎಲ್ಲಿಂದ ಎಲ್ಲಿಯವರೆಗೆ ಯಾವ ಅಳತೆಯಲ್ಲಿ ವ್ಯಾಪಿಸಿತ್ತು ಎಂಬುದನ್ನು ಋಷಿ ವಶಿಷ್ಠರ ಧರ್ಮಸೂತ್ರ ವಿವರವಾಗಿ ತಿಳಿಸುತ್ತದೆ. 

ಹಾಗಾದರೆ ವಶಿಷ್ಠರು-ವಿಶ್ವಾಮಿತ್ರರು ಇಂತಹ ಮುನಿಗಳ ಕಥೆಯೆಲ್ಲಾ ಕೇವಲ ಕರ್ಣಾನಂದಕರವಾದ ಕಥೆಗಳಿಗಾಗಿ ಇದ್ದ ಪಾತ್ರಗಳಲ್ಲವೇ ಎಂದರೆ, ಅಲ್ಲಾ...ಹಿಂದೊಂದು ಕಾಲದಲ್ಲಿ ಅವರೆಲ್ಲಾ ಇದೇ ನಮ್ಮ ಭಾರತದಲ್ಲಿ ಜೀವಿಸಿದ್ದರು; ಭಾರತೀಯರಿಗಾಗಿ, ಜಗತ್ತಿಗಾಗಿ ಅನೇಕ ಕೃತಿಗಳನ್ನು ಬರೆದರು. ಹಾಗಾದರೆ ಋಷಿಗಳೂ ಆರ್ಯರೇ? ನೋ ಡೌಟ್, ಮೂಲದಲ್ಲಿ ಋಷಿಗಳೇ ಆರ್ಯರು. ಮನುಸ್ಮೃತಿಯಲ್ಲಿಯ ಪ್ರಕಾರ ಆರ್ಯಾವರ್ತ ಎಂಬ ಈ ಆರ್ಯಸಾಮ್ರಾಜ್ಯ ಉತ್ತರಕ್ಕೆ ಹಿಮಾಲಯ ಮತ್ತು ದಕ್ಷಿಣಕ್ಕೆ ವಿಂಧ್ಯಪರ್ವತಗಳು, ಪೂರ್ವಕ್ಕೆ ಪೂರ್ವಸಮುದ್ರ[ಬಂಗಾಳಕೊಲ್ಲಿ] ಮತ್ತು ಪಶ್ಚಿಮಕ್ಕೆ ಪಶ್ಚಿಮ ಸಮುದ್ರ[ಅರಬ್ಬೀ ಸಮುದ್ರ]ದ ವರೆಗಿನ ವ್ಯಾಪ್ತಿಯಲ್ಲಿತ್ತು. ವಶಿಷ್ಠರ ಧರ್ಮಸೂತ್ರ ಹೇಳುತ್ತದೆ: ಸರಸ್ವತೀ ನಡಿ ಗುಪ್ತಗಾಮಿನಿಯಾಗಿ ಹರಿಯುವ ಆರಂಭದ ಬಿಂದುವಿನಿಂದ ಪೂರ್ವಕ್ಕೆ ಮತ್ತು ಕಲಕಾವನದ ಪಶ್ಚಿಮಕ್ಕೆ, ಉತ್ತರಕ್ಕೆ ಹಿಮಾಲಯ, ದಕ್ಷಿಣಕ್ಕೆ ವಿಂಧ್ಯಪರ್ವತಗಳನ್ನುಳ್ಳ ಭೂಭಾಗವೇ ಆರ್ಯಾವರ್ತ. ಬೌಧಾಯನ ಶ್ರೌತ ಸೂತ್ರ ಮತ್ತು ಪತಂಜಲೀ ಮಹಾಭಾಷ್ಯ ಇದನ್ನು ಪುಷ್ಟೀಕರಿಸುತ್ತವೆ.

ಇಂಥಾ ಆರ್ಯಾವರ್ತದಲ್ಲಿ ಯಾವ ಯಾವ ರಾಜ್ಯಗಳಿದ್ದವು[ದೇಶ]ಎಂದರೆ : ಗಾಂಧಾರ[ಇಂದಿನ ಕಂದಹಾರ್], ಮಾದ್ರ, ಬಲ್ಹಿಕ [ಇಂದಿನ ಬಾಲ್ಕ್], ಕುರು, ಪಾಂಚಾಲ, ಕೋಸಲ, ವಿದೇಹ, ಮಗಧ, ಅಂಗ, ಕಾಶಿ,  ಕೈಕತ, ಬನಸ್, ಚೇದಿ ಮೊದಲಾದವುಗಳು. ಗಂಗಾ, ಯಮುನಾ, ಸರಯೂ, ಸಿಂಧು, ವಿತಸ್ತ, ಅಸಿಕ್ನಿ, ಪರುಸ್ನಿ, ಶುತುದ್ರಿ ಮೊದಲಾದ ಪುಣ್ಯನದಿಗಳು ಅಲ್ಲಿ ಹರಿಯುತ್ತಿದ್ದವು. ಸರಸ್ವತಿ ಒಂದಷ್ಟು ದೂರ ಹರಿದು ಆಮೇಲೆ ಗುಪ್ತಗಾಮಿನಿಯಾಗುತ್ತಿದ್ದಳು. ವಿದರ್ಭ, ವರ್ಣು, ಕಾಂಬೋಜ ಇವು ಆರ್ಯಾವರ್ತದ ಸುತ್ತಲ ರಾಜ್ಯಗಳು. ಸಮೃದ್ಧವಾದ ಆರ್ಯಾವರ್ತದಲ್ಲಿ ಗಾಂಧಾರ ದೇಶದ ಭಾಗವಾದ ಕಾಶ್ಮೀರದಲ್ಲಿ ಈ ಪ್ರಪಂಚದ ಮೊಟ್ಟಮೊದಲ ವಿಶ್ವವಿದ್ಯಾಲಯವಿತ್ತು! ಅದೇ ಕಾಶ್ಮೀರದ ಶಾರದಾ ಪೀಠ! ಆರ್ಯಾವರ್ತದ ಆರ್ಯರು ನಿತ್ಯ ಪೂಜಿಸುತ್ತಿದ್ದ ದೇವಿ ಶಾರದೆ-ಸರಸ್ವತಿ. ಸರಸ್ವತಿಯನ್ನು ಆರಾಧಿಸುವ ಸಂಸ್ಕೃತಿಯುಳ್ಳವರಾಗಿದ್ದು, ಸುಸಂಸ್ಕೃತರಾಗಿದ್ದುದರಿಂದ, ಸಂಸ್ಕೃತದ ಉತ್ತಮ ಪದಗಳಾದ ಆರ್ಯ, ಆರ್ಯೆ ಎಂಬುದನ್ನೇ ಸಂಬೋಧನೆ ಬಳಸುತ್ತಿದ್ದ ಈ ಜನರನ್ನು ಜನ ಆರ್ಯರೆಂದೇ ಗುರುತಿಸಿದ್ದರು.

Vedic Maths sample

ಇಂತಹ ಆರ್ಯಕುಲ ಸಿಂಧೂನದಿಯ ಸುತ್ತಲ ಪ್ರದೇಶವೂ ಸೇರಿದಂತೇ ಇಡೀ ಆರ್ಯಾವರ್ತದಲ್ಲಿ ವ್ಯಾಪಿಸಿತ್ತು.ಇಂತಹ ಆರ್ಯಾವರ್ತದಲ್ಲೇ ಆಯೋಧ್ಯೆ ಕೂಡ ಇದೆ ಎಂಬುದನ್ನು ಗಮನಿಸಬೇಕು. ಬ್ರಹ್ಮಮಾನಸಪುತ್ರರಾದ ವಶಿಷ್ಠರೂ ಸೇರಿದಂತೇ ಹಲವು ಮಹರ್ಷಿಗಳು ಇಲ್ಲಿನ ಸಂಸ್ಕೃತಿಗೆ ಭದ್ರ ಬುನಾದಿಯನ್ನು ಹಾಕಿದ್ದರು. ಅಪೌರುಷೇಯವಾದ ವೇದಗಳು, ಉಪನಿಷತ್ತುಗಳು, ಪುರಾಣಗಳು ಮೊದಲಾದವುಗಳ ಬಗ್ಗೆ ಆಳವಾದ ಅಧ್ಯಯನಗಳು ಕಾಶ್ಮೀರದ ವಿಶ್ವವಿದ್ಯಾಲಯದಲ್ಲಿ ನಡೆಸಲ್ಪಡುತ್ತಿದ್ದವು. ವೇದಾಂಗಗಳು [೧. ಶಿಕ್ಷಾ-ದೂರವಾಣಿ ಮತ್ತು ಸಂವಹನಾ ಕ್ರಮಗಳು,೨.ಕಲ್ಪ-ಕೈಂಕರ್ಯಗಳು-ಸಂಪ್ರದಾಯಗಳು, ೩. ವ್ಯಾಕರಣ, ೪.ನಿರುಕ್ತ-ಪದದ ವ್ಯುತ್ಫತ್ತಿ ಧಾತು ಮೊದಲಾದ ಮಾಹಿತಿ ಸಂಗ್ರಹ,೫. ಛಂದಸ್-ಲಘು ಗುರು ಇತ್ಯಾದಿ ಮಾಪನಾ ಮಾತ್ರೆಗಳ ಬಳಕೆ, ೬. ಜ್ಯೋತಿಷ್ಯ] ಅನುಷ್ಠಾನದಲ್ಲಿದ್ದವು. ಇದಲ್ಲದೇ, ಇಹಜೀವಿತಕ್ಕೆ ಬೇಕಾಗುವ ಉಪವಿದ್ಯೆಗಳಾದ ತಂತ್ರಜ್ಞಾನ, ಆಯುರ್ವೇದ [ಋಗ್ವೇದ], ಗಾಂಧರ್ವವೇದ [ಯಜುರ್ವೇದ], ಧನುರ್ವೇದ[ಬಿಲ್ಲುವಿದ್ಯೆ,ಸಾಮವೇದ], ಶಸ್ತ್ರಾಸ್ತ್ರ[ಅಥರ್ವವೇದ], ಸ್ಥಾಪತ್ಯವೇದ[ಆರ್ಕಿಟೆಕ್ಚರ್], ಶಿಲ್ಪಶಾಸ್ತ್ರ, ಲೋಹಶಾಸ್ತ್ರ ಮೊದಲಾದ ಹಲವು ವಿದ್ಯೆಗಳು ಕಲಿಸಲ್ಪಡುತ್ತಿದ್ದವು.  ಹುಡುಕುತ್ತಾ ಹೋದರೆ ಇಡೀ ಈ ವಿಶ್ವವೇ ಒಂದುಕಾಲಕ್ಕೆ ಹಿಂದೂ ವೈದಿಕ ಸಂಪ್ರದಾಯಗಳನ್ನು ಪರಿಪಾಲಿಸುತ್ತಿತ್ತು. ಭಾರತ ಅದಕ್ಕೆ ರಾಜಧಾನಿಯಂತಿತ್ತು. ಇದಕ್ಕೆ ತಕ್ಕಮಟ್ಟಿಗಿನ ಪುರಾವೆಯಾಗಿ ಪಾರ್ಸಿಗಳು ಕಾಣುತ್ತಾರೆ, ಪಾರ್ಸಿಗಳ ಸಂಪ್ರದಾಯಗಳಲ್ಲಿ ಹಿಂದೂ ಸಂಸ್ಕೃತಿಯ ಕೆಲವು ಕುರುಹುಗಳು ಕಾಣುತ್ತವೆ. ಕೃತಯುಗದ ಆದಿಯಲ್ಲಿಯಿಂದಲೂ ಈ ಆರ್ಯಾವರ್ತ ಇತ್ತೆಂಬುದಕ್ಕೆ ಹಲವು ಪುರಾವೆಗಳು ಪ್ರಾಗೈತಿಹಾಸವಾದ ರಾಮಾಯಣ ಮತ್ತು ಮಹಾಭಾರತಗಳ ಕಥಾನಕಗಳಲ್ಲಿ ಸಿಗುತ್ತವೆ.     

ಆರ್ಯರನ್ನು ಕಾಲಾನಂತರದಲ್ಲಿ ಬ್ರಾಹ್ಮಣರು ಎನ್ನಲಾಯ್ತು. ಬ್ರಹ್ಮಜ ಜ್ಞಾನವನ್ನು ಪಡೆದ-ಅಧ್ಯಯನಮಾಡಿದ, ಅನುಷ್ಠಾನಮಾಡಿದ ಜನರನ್ನು ಬ್ರಾಹ್ಮಣರು ಎಂದರು. ಬ್ರಹ್ಮಬಲದಿಂದ ಪ್ರೇರಣೆಗೊಂಡ ಈ ಜನ ’ವಿಪ್ರ’ರು ಎಂದೂ ಯಜ್ಞೋಪವೀತವನ್ನು ಧರಿಸಿ ಉಪನಯನ ಸಂಸ್ಕಾರವನ್ನು ಪಡೆಯುವುದರಿಂದ ಎರಡನೇ ಜನ್ಮ ಅದು ಎಂಬ ದೃಷ್ಟಿಯಿಂದ ’ದ್ವಿಜ’ರು ಎಂದೂ ಕರೆಯಲ್ಪಟ್ಟಿದ್ದಾರೆ. ವೇದಕಾಲ ಅಂದರೆ ಕೃತಯುಗಾನಂತರ ಬ್ರಾಹ್ಮಣರು ಬರೇ ವೇದಾಚರಣೆ ಒಂದೇ ಅಲ್ಲದೇ ಹಲವು ವೃತ್ತಿಗಳಲ್ಲಿ ತೊಡಗಿಕೊಂಡರಾದರೂ ಅವರ ಪ್ರಮುಖ ಕೆಲಸ ವೇದಾಧ್ಯಯನ ಮತ್ತು ಪೌರೋಹಿತ್ಯವಾಗಿತ್ತು. ಹಾಗಂತ ಅನೇಕರು ಅಧ್ಯಾಪನ, ವೈದ್ಯ, ಸಾರಸ್ವತ[ಬರಹ], ಜಮೀನ್ದಾರ, ರಾಜ, ಮಂತ್ರಿ, ತಂತ್ರಜ್ಞ, ಜ್ಯೋತಿಷ್ಯ ಹೀಗೇ ಹಲವು ಉಪವೃತ್ತಿಗಳಲ್ಲಿ ತೊಡಗಿಕೊಂಡವರೂ ಇದ್ದರು. ಆರ್ಯಾವರ್ತದಲ್ಲಿ ಆರಂಭವಾದ ಕೆಲವು ರಾಜವಂಶದ ರಾಜರು ಬ್ರಹ್ಮಕ್ಷತ್ರಿಯರೆನಿಸಿ ಭಾರತದ ನಾನಾ ರಾಜ್ಯಗಳನ್ನು ಆಳಿದ ವಿಷಯ ತಿಳಿದುಬರುತ್ತದೆ. ಉಚ್ಚಮಟ್ಟದ ಸಂಸ್ಕಾರ-ಸಂಸ್ಕೃತಿಗಳನ್ನು ಪಡೆದಿದ್ದರಿಂದ ಈ ಜನ ಇಡೀ ಭಾರತಕ್ಕೇ ಇಷ್ಟವಾಗಿದ್ದರು ಅಲ್ಲದೇ ತಮ್ಮ ಸಂಸ್ಕಾರದಿಂದ ಭಾರತದ ಸಕಲ ಜನತೆಯಮೇಲೆ ಪ್ರಭಾವ ಬೀರಿದ್ದರು. 


Gods, Sages and Kings: Vedic Secrets of Ancient Civilization- A history book by Devid Frawley


ನಿಷ್ಪಕ್ಷಪಾತವಾಗಿ ಸಂಶೋಧಿಸಿದ ಇತಿಹಾಸ ತಜ್ಞ ಡೇವಿಡ್ ಫ್ರಾಲೆ ಎನ್ನುವವರು ತಮ್ಮ "Gods, Sages and Kings: Vedic Secrets of Ancient Civilization" ಎಂಬ ಪುಸ್ತಕದಲ್ಲಿ ಆರ್ಯರು ಭಾರತಕ್ಕೆ ಬಂದರು ಎಂಬುದು ಸುಳ್ಳು ಮತ್ತು ಅವರು ಭಾರತದವರೇ ಆಗಿದ್ದರು ಎಂಬುದನ್ನು ಉದಾಹರಣೆಗಳ ಸಮೇತ ಪ್ರತಿಪಾದಿಸಿದ್ದಾರೆ. ಅನೇಕ ಇತಿಹಾಸ ತಜ್ಞರು ಎಲ್ಲಿ ಎಡವಿದರು ಮತ್ತು ಕ್ರಿಸ್ತಿಯನ್ ಮಿಶನರಿ ಪ್ರೇರಿತ ಸಂಶೋಧಕರು ಬುದ್ಧ್ಯಾ "ಆರ್ಯರು ಹೊರಗಿನವರು, ಯುರೋಪ ಮೂಲದವರಾಗಿದ್ದು ಮಧ್ಯಏಷ್ಯಾಕಡೆಗಿಂದ ಭಾರತಕ್ಕೆ ಬಂದರು" ಎಂದಿದ್ದಾರೆ ಎನ್ನುತ್ತಾರೆ. ಲೋಹಗಳ ಪರಿಚಯ ಬಹಳ ಚೆನ್ನಾಗೇ ಇದ್ದ ಆರ್ಯರ ಎಲ್ಲಾ ಪುಸ್ತಕಗಳಲ್ಲಿ ’ಅಯಸ್’ ಎಂಬ ಪದವನ್ನು ಕಾಣಬಹುದು. ಅಯಸ್ ಎಂಬುದು ಆರ್ಯರು ಲೋಹಕ್ಕೆ ಬಳಸುವ ಸಾಮಾನ್ಯ ಪದ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಋಗ್ವೇದದಲ್ಲಿ ಸ್ವರ್ಣ ಲೋಹದ ಬಗ್ಗೆ ಮತ್ತೆ ಮತ್ತೆ ಹೇಳಿದೆಯಾದರೂ ಯಕುರ್ವೇದ, ಅಥರ್ವವೇದಗಳಲ್ಲಿ ಅಯಸ್ ಎಂಬ ಪದದ ಉಲ್ಲೇಖ ಬಂದಾಗ ಕೆಂಪು ಮತ್ತು ಕಪ್ಪು ಅಯಸ್ ಗಳ ವರ್ಣನೆಯನ್ನು ಕಾಣಬಹುದಾಗಿದೆ. ಆದರೆ ಬಹುತೇಕ ಇತಿಹಾಸಕಾರರು ಅಯಸ್ ಎನ್ನುವುದು ಕಬ್ಬಿಣಕ್ಕೆ ಸಮಾನಾಂತರ ಪದವೆಂದೂ ಅಯಸ್ ಎಂದೆ ಕಬ್ಬಿಣವೆಂತಲೂ ಹೇಳಿದ್ದಾರೆ ಎನ್ನುತ್ತಾರೆ. 

ಆರ್ಯರು ಅಲೆಮಾರಿಗಳು ಎಂಬರ್ಥದಲ್ಲಿ ಬಿಂಬಿಸಿರುವ ಹಲವು ಇತಿಹಾಸ ತಜ್ಞರು ಮಧ್ಯಏಷ್ಯಾದಿಂದ ಕುದುರೆಗಾಡಿಗಳಲ್ಲಿ ಆರ್ಯರು ಭಾರತಕ್ಕೆ ಬಂದರು ಎಂದೂ ಹೇಳಿದ್ದಾರೆ. ಕಬ್ಬಿಣದ ಶಸ್ತ್ರಾಸ್ತ್ರಗಳ ಸಹಿತ ಧಾವಿಸಿದ ಅವರು ಆಗಿನ ಭಾರತದ ಪಟ್ಟಣಗಳಮೇಲೆ ತಮ್ಮ ಅತ್ಯಧುನಿಕ ಶಸ್ತ್ರಸ್ತ್ರಗಳಿಂದ ದಾಳಿ ನಡೆಸಿ ಗೆದ್ದುಕೊಂಡರು ಎಂದು ಹೇಳಿದ್ದಾರೆ. ಯಾವುದೇ ಇತಿಹಾಸ ತಜ್ಞರಿಗೆ ಸಿಂಧೂ ಕಣಿಯೆವ ನಾಗರಿಕತೆಯಲ್ಲಿ ಕುದುರೆಯ, ಕಬ್ಬಿಣದ ಶಸ್ತ್ರಾಸ್ತ್ರಗಳ ಯಾ ಕುದುರೆಗಾಡಿಗಳ ಪಳೆಯುಳಿಕೆ-ಅವಶೇಷ ಸಿಗಲಿಲ್ಲ ಎಂದು ಡೆವಿಡ್ ವಾದಿಸುತ್ತಾರೆ. ಬಹುತೇಕ ಆರ್ಯರು ಸಂಸ್ಕೃತವನ್ನೇ ಮಾತನಾಡುತ್ತಿದ್ದರು. ಬರಹ ದೇವನಾಗರೀ ಲಿಪಿಯಲ್ಲೇ ಸಾಗುತ್ತಿತ್ತು. ತಮ್ಮದೇ ಆದ ನೂರಾರು ನಗರಗಳನ್ನು ಅವರು ಹೊಂದಿದ್ದರು ಎಂಬುದು ಋಗ್ವೇದದಲ್ಲಿ ಕಾಣಬಹುದಾಗಿದೆ ಎನ್ನುತ್ತಾರೆ. ಈಜಿಪ್ಟ್ ಮತ್ತು ಮೆಸಪಟೋಮಿಯಾ ರಾಜರುಗಳೂ ಕೂಡ ನಾಶಪಡಿಸುವ ಮತ್ತು ಸೋಲಿಸುವ ಅರ್ಥಗಳುಳ್ಳ ನಗರಗಳನ್ನು ಹೊಂದಿದ್ದರು ಎಂದಾಗ ಆರ್ಯರು ಅಂತಹ ಹೆಸರುಗಳನ್ನು ತಮ್ಮ ನಗರಗಳಿಗೆ ಬಳಸಿದ್ದರೆ ಅದು ಕೇವಲ ದುರುದ್ದೇಶ ಪೂರಿತವಲ್ಲ.

ಗಮನಿಸಿ : ಇತಿಹಾಸ ತಜ್ಞರು ಕಾಲಗಣನೆ ಮಾಡುವುದು ಮೂರು-ನಾಲ್ಕು ರೀತಿಯಲ್ಲಿ. ಸಿ.ಇ.[ಕಾಮನ್ ಎರಾ], ಬಿ.ಸಿ.ಇ[ಬಿಫೋರ್ ಕಾಮನ್ ಎರಾ] ಮತ್ತು ಎ.ಡಿ [ ಅನ್ನೊ ಡಾಮಿನಿ], ಬಿ.ಸಿ [ಬಿಫೋರ್ ಕ್ರಿಸ್ತ್]. ಯಾವುದನ್ನೇ ಲೆಕ್ಕಕ್ಕೆ ತೆಗೆದುಕೊಂಡರು ಯಾವುದೇ ಅಧಿಕೃತ ನಗದು ದಾಖಲೆಗಳು ೪೦೦೦ ವರ್ಷಗಳಿಗೂ ಹಿಂದಕ್ಕೆ ಹೋಗುವುದಿಲ್ಲ. ಕೇವಲ ಕಾರ್ಬನ್ ಡೇಟಿಂಗ್ ಮೂಲಕ ಮತ್ತು ಬೇರೆ ಬೇರೇ ಸಂಗ್ರಹಿತ ಭೌಗೋಳಿಕ ಮಾಹಿತಿಗಳ ಮೂಲಕ ಕಾಲಗಣನೆಯನ್ನು ಮಾಡಲಾಗುತ್ತದೆ. ಸಿಂಧೂ ನದಿಯ ನಾಗರಿಕತೆಯ ಅಳಿವಿಗೆ ಕಾರಣ ಅಲ್ಲಿನ ನದಿಯ ಪ್ರವಾಹದಿಂದಲೂ ಆಗಿರಬಹುದು ಅಥವಾ ಭೂಕಂಪ/ಪ್ರಕೃತಿ ವಿಕೋಪಗಳೂ ಆಗಿರಬಹುದು. ಹೀಗಾಗಿ ಸಿಂಧೂ ನದಿಯ ನಾಗರಿಕತೆಯನ್ನೇ ಎಲ್ಲೆಡೆಗೂ ಪಸರಿಸುತ್ತಾ ಬಂದರು ಎಂಬುದು ಸರಿಯಾಗಿವುದಿಲ್ಲ. ಅಷ್ಟಕ್ಕೂ ಸಿಂಧೂನದಿ ಆರ್ಯಾವರ್ತದಲ್ಲೇ ಇದೆ! ವ್ಹೀಲರ್ ಮೊದಲಾದ ಸಂಶೋಧಕರು ಹಿಂದೂಧರ್ಮವನ್ನು ಆಳವಾಗಿ ಅಭ್ಯಸಿಸಲಿಲ್ಲ. ಹಿಂದೂಗಳ ಬಗ್ಗೆ ತಿಳಿಯದೇ ಆರ್ಯರ ಕುರುಹುಗಳನ್ನು ಹುಡುಕುವುದು ಸಂಪೂರ್ಣ ಸಾಧ್ಯವಾಗುವುದಿಲ್ಲ. ಗುಜರಾತಿನ ಲೋಥಲ್, ರಾಜಸ್ಥಾನದ ಕಲಿಬಂಗನ್ ಪ್ರದೇಶಗಳಲ್ಲಿ ಅಗೆದಾಗ ವೈದಿಕ ಕಾಲದ ಎತ್ತುಗಳ ಅಸ್ತಿಗಳು, ಒಡೆದ ಮಡಕೆ-ಕುಡಿಕೆಗಳು, ಬಳಸಿದ ಆಭರಣಗಳು, ಯಜ್ಞಕುಂಡಗಳು ಸಿಕ್ಕಿದ್ದು ಎಲ್ಲವೂ ವೇದಗಳಲ್ಲಿ ವರ್ಣಿಸಿದಂಥವೇ ಆಗಿವೆ. ಹೀಗಾಗಿ ಸಿಂಧೂನದಿ ನಾಗರಿಕತೆಯಲ್ಲಿ ಸಿಕ್ಕಿರುವ ಈ ಸಾಕ್ಷ್ಯಗಳು ವೇದಪಂಡಿತರು ಈ ನೆಲದಲ್ಲೇ ಬಹಳಕಾಲ ಇದ್ದರು ಎಂಬುದನ್ನು ಪುಷ್ಟೀಕರಿಸಿವೆ; ಹಾಗಾಗಿ ಆರ್ಯರು ಅಲೆಮಾರಿಗಳಲ್ಲ! ಒಂದು ಮಾತು ನೆನಪಿಡಬೇಕು-ಕೇವಲ ಅವಶೇಷಗಳು ಮಾತ್ರ ನಾಗರಿಕತೆಯನ್ನು ಒಪ್ಪುವುದಕ್ಕೆ ಆಧಾರವೆನ್ನುವುದಕ್ಕಿಂತಾ ಅವರು ಬಿಟ್ಟುಹೋದ ಗ್ರಂಥಗಳಲ್ಲಿ ಅವರ ವಸಾಹತುಗಳ ವರ್ಣನೆಗಳಿದ್ದು ಅವರ ಹೇಳಿಕೆಗಳನ್ನು ಒಪ್ಪುವಂತಹ ಕುರುಹುಗಳೇ ದೊರೆತಿವೆ. 

ಆರ್ಯರ ಬಣ್ಣ ಬಿಳಿ ಇದ್ದು ಇದನ್ನೇ ಆಧಾರವಾಗಿಟ್ಟುಕೊಂಡು ಯುರೋಪಿಯನ್ನರು ಕಪ್ಪು-ಬಿಳುಪಿನವರಲ್ಲಿ ಭೇದ ಗಣಿಸಿದ ಹಾಗೇ ಭಾರತದಲ್ಲೂ ಅವರು ಐರೋಪ್ಯರಾಷ್ಟ್ರಗಳ ಕಡೆಯಿಂದಲೇ ಬಂದು ನೆಲೆಸಿದರು ಎಂಬುದು ಕೇವಲ ತುಲನೆ. ಈಜಿಪ್ಟ್ ಮತ್ತು ಪರ್ಸಿಯಾ ಗಳಲ್ಲಿ ನಡೆದಹಾಗೇ ಕಪ್ಪುಬಣ್ಣದವರ ಮತ್ತು ಬಿಳಿವರ್ಣದವರ ನಡುವೆ ಕದನ ನಡೆಯಿತು ಎಂಬುದೆಲ್ಲಾ ಕೇವಲ ಸಂಶೋಧಕರ ಮನೋಕಲ್ಪನೆ ಅಷ್ಟೇ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈ ಕಪ್ಪು-ಬಿಳುಪು ವಿವಾದ ಇದೆ. ಭಾರತಕ್ಕೂ ಅದನ್ನೇ ಅನ್ವಯಿಸಿ ಹೇಳಿದ್ದಾರೆಯೇ ಹೊರತು ಇಲ್ಲಿ ಬಣ್ಣಗಳನ್ನಾಧರಿಸಿ ವಾದ-ವಿವಾದಗಳು, ಕದನಗಳು ನಡೆಯಲಿಲ್ಲ. ಗುಜರಾತ್, ಪಂಜಾಬ್ ಪ್ರಾಂತಗಳಲ್ಲಿ ೪೦೦೦ ವರ್ಷಗಳ ಹಿಂದೆಯೂ ಇಂಡೋ-ಆರ್ಯನ್ ಭಾಷೆಯನ್ನು ಬಳಸುತ್ತಿದ್ದರು; ಈಗಲೂ ಅದನ್ನೇ ಕಾಣಬಹುದಾಗಿದೆ. ಕ್ರಿಸ್ತನ್ ಜನನಕ್ಕೂ ೨೦೦೦ ವರ್ಷಗಳಷ್ಟು ಪೂರ್ವದಲ್ಲಿ, ಮೂರು ಗುಂಪುಗಳಲ್ಲಿ ಸಂಪ್ರದಾಯ, ಕಾಯ್ದೆ-ಕಾನೂನು ಮೊದಲಾದವುಗಳ ಸಾಮ್ಯತೆಯನ್ನು ಕಾಣಬಹುದಾದರೂ ಒಂದು ಗುಂಪು ಪ್ರಬಲವಾಗಿತ್ತು. | ಸಮಾನ ಶೀಲೇಷು ವ್ಯಸನೇಷು ಸಖ್ಯಂ | ಎನ್ನುವಹಾಗೇ ಒಂದೇ ಸಂಪ್ರದಾಯದ ಹಲವು ಜನ ತಾವಿದ್ದ ಗುಂಪಿಗೆ ಆರ್ಯರು ಎಂದು ಅವರೇ ಕರೆದುಕೊಂಡಿದ್ದರು.

ಇನ್ನೂ ಮುಂದಕ್ಕೆ ಹೋದರೆ, ಸಂಶೋಧಕರಿಗೆ ಸಿಕ್ಕಿದ ವಸ್ತುಗಳು ಸಿಂಧೂನದಿಯ ಪೂರ್ವಭಾಗದಲ್ಲಿ ಸಿಕ್ಕವೇ ಹೊರತು ಪಶ್ಚಿಮ ಭಾಗದಲ್ಲಲ್ಲ. ಪಂಜಾಬ್ ಮತ್ತು ರಾಜಸ್ಥಾನದ ಬಹುಭಾಗಗಳಲ್ಲಿ ಇವತ್ತು ಬತ್ತಿಹೋಗಿರುವ ಸರಸ್ವತಿ ಮತ್ತು ವೃಷದ್ವತಿ ನದಿಗಳ ಪ್ರದೇಶದಲ್ಲಿ ಈ ಜನರು ನೆಲೆಸಿದ್ದರು. ಸರಸ್ವತಿ ನದಿಯನ್ನು ಬಹುವಾಗಿ ಅವಲಂಬಿಸಿದ್ದ ಈ ಜನರಿಗೆ ಗಂಗೆಯಂತೆಯೇ ಸರಸ್ವತಿ ಅತ್ಯಂತ ಪವಿತ್ರ ನದಿಮಾತೆಯಾಗಿದ್ದಳು. ಹಿಮಾಲಯದಲ್ಲಿ ಹುಟ್ಟಿ ಸಮುದ್ರ ಸೇರುವವರೆಗೂ ಈ ನದಿ ಪವಿತ್ರವಾಗಿದ್ದುದರಿಂದ ಜನ ಸರಸ್ವತೀ ನದಿ ತೀರದಲ್ಲಿ ವಾಸಿಸಲು, ತಮ್ಮ ಯಜ್ಞ ಯಾಗಾದಿಗಳನ್ನು ನಡೆಸಲು ಇಷ್ಟಪಡುತ್ತಿದ್ದರು. ಸದಾ ಸರಸ್ವತೀ ದಡದಲ್ಲೇ ವಾಸವಿದ್ದರು. ಇತಿಹಾಸ ಪೂರ್ವದಲ್ಲಿ ಒಮ್ಮೆ ಸಟ್ಲೆಜ್[ಸಿಂಧೂ], ಗಂಗಾ, ಯಮುನಾ ನದಿಗಳೂ ಕೂಡ ಬತ್ತಿಹೋಗಿದ್ದವು! ಈಗ ಅವುಗಳ ಹರಿವು ಕೂಡ ಬದಲಾಗಿಹೋಗಿವೆ. ಸರಸ್ವತೀ ನದಿ ಭೌಗೋಳಿಕವಾಗಿ ಭಾರತದ ದೊಡ್ಡ ನದಿಗಳಲ್ಲಿ ಒಂದು ಎಂಬುದರಲ್ಲಿ ಅನುಮಾನವಿಲ್ಲವಾದರೂ ಬತ್ತಿಹೋಗಿರುವು[ಗುಪ್ತಗಾಮಿನಿಯಾಗಿರುವು]ದರಿಂದ ಈಗ ಗಣನೆಗೆ ಬರುತ್ತಿಲ್ಲ. ಸಿಂಧೂಕಣಿವೆಯ ನಾಗರಿಕತೆಯ ಅಂತ್ಯವಾಗುವ ಹೊತ್ತಿಗೆ ಅಜಮಾಸು ಕ್ರಿ.ಪೂ.೧೫೦೦ ಕ್ಕೂ ಮುಂಚೆ ಸರಸ್ವತಿ ಗುಪ್ತಗಾಮಿನಿಯಾದಳು! ಋಗ್ವೇದದಲ್ಲಿ ಸರಸ್ವತಿ ನದಿಯ ವರ್ಣನೆ ಇದ್ದು ಅದು ಸಿಂಧೂ ಕಣಿವೆಯ ನಾಗರಿಕತೆಗೂ ಪೂರ್ವದ್ದಾಗಿದೆ. ಹರಿವ ನೀರಿಲ್ಲದಿದ್ದರೆ ಗೊತ್ತಿದ್ದೂ ಆರ್ಯರು ಸರಸ್ವತಿ ದಡದಲ್ಲಿ ಇರುತ್ತಿದ್ದರೇ? ಸಾಧ್ಯವಿಲ್ಲ.

ವೈದಿಕ ಗಣಿತ [ವೇದಿಕ್ ಮೆಥ್ಮೆಟಿಕ್ಸ್] ಬಹಳ ಉತ್ತಮವಾಗಿದೆ! ವೇದಾಂಗ ಜ್ಯೋತಿಷ್ಯದಲ್ಲಿ ಪಂಚಾಂಗ[ವೇದಿಕ್ ಕ್ಯಾಲೆಂಡರ್]ಇದ್ದಿತ್ತು. ಸೂರ್ಯಪಥ ಭೂಮಧ್ಯ ರೇಖೆಯಿಂದ ಬದಲಾಗುವುದುದನ್ನು ಅವರು ನಿಖರವಾಗಿ ಹೇಳುತ್ತಿದ್ದಾರೆ. ಈ ಪಂಚಾಂಗ ಮೂಲವನ್ನು ಹುಡುಕುತ್ತಾ ಸಾಗಿದರೆ ಅದು ಕ್ರಿ.ಪೂ. ೨೪೦೦ ಕ್ಕೂ ಹಿಂದಕ್ಕೆ ಸಾಗುತ್ತದೆ. ಇಂತಹ ಅತ್ಯದ್ಭುತ ಮತ್ತು ಅತ್ಯುನ್ನತ ಖಗೋಳ ಮಾಹಿತಿಯನ್ನು ಅವರ ಪಂಚಾಂಗ ಅದಾಗಲೇ ಶ್ರುತಪಡಿಸಿತ್ತು ಎಂದರೆ ಅವರ ಕಾಲ ಅದಕ್ಕೂ ಹಿಂದಿನಿಂದಲೂ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ಪಾಶ್ಚಿಮಾತ್ಯ ಸಂಶೋಧಕರು ಮೇಲಿಂದಮೇಲೆ ಗಣನೆಗೆ ತೆಗೆದುಕೊಂಡ ಅಂಶಗಳು ಇನ್ನೂ ಬಲಿಯುವ ಮೊದಲೇ ಪಕ್ವವಾಗಿರುವ ಹಣ್ಣುಗಳಂತೆಯೇ ಇವೆ! ವೈದಿಕ ಸಾಹಿತ್ಯಗಳಾದ ’ಶತಪಥ ಬ್ರಾಹ್ಮಣ’ ಮತ್ತು ’ಐತಿರೇಯ ಬ್ರಾಹ್ಮಣ’ ಗಳಲ್ಲಿ ಖಗೋಳ ಮಾಹಿತಿಗಳು ದೊರಕುತ್ತಿದ್ದು ೧೧ ಗುಂಪುಗಳ ವೈದಿಕ ರಾಜರ ಹೆಸರುಗಳ ಯಾದಿಯನ್ನೂ ಅವು ಒಳಗೊಂಡಿವೆ.  ಹಿಂದೊಮ್ಮೆ ಕೃತ್ತಿಕಾ ನಕ್ಷತ್ರದಲ್ಲಿ ಭೂಮಧ್ಯ ರೇಖೆಯಿಂದ ಸೂರ್ಯಪಥ ಬದಲಾಗಿದ್ದನ್ನು ಆರ್ಯರು ವರ್ಣಿಸಿದ್ದು ಅದು ಕ್ರಿ.ಪೂ. ೨೪೦೦ ಕ್ಕೂ ಮುಂಚಿನದಾದುದರಿಂದ ಆರ್ಯರು ಅದಕ್ಕೂ ಮೊದಲೇ ಇಲ್ಲಿ ವಾಸವಿದ್ದರು ಎಂಬುದು ಸಾಬೀತಾಗುತ್ತದೆ! ಬಹುತೇಕ ಇತಿಹಾಸಕಾರರು ವೈದಿಕ ಸಾಹಿತ್ಯವನ್ನು ಪರಿಗಣಿಸದೇ ಹಾಗೇ ಇತಿಹಾಸವನ್ನು ಬರೆದಿದ್ದಾರೆ. ವೇದ ಸಾಹಿತ್ಯದಲ್ಲಿ ಇತ್ತೀಚಿನ ರಾಜರುಗಳ ಹೆಸರುಗಳು ಅಡಕವಾಗಿಲ್ಲ ಎಂಬ ಪೊಳ್ಳುನೆಪಕೊಟ್ಟು ಈ ರೀತಿ ಅಸಡ್ಡೆಮಾಡಿ ಆರ್ಯರು ಭಾರತಕ್ಕೆ ನುಗ್ಗಿದರು ಎಂಬುದನ್ನೇ ಸಮರ್ಥಿಸಿಬಿಟ್ಟಿದ್ದಾರೆ! ವೇದಸಾಹಿತ್ಯಗಳ ಪದಗಳ ಅರ್ಥವನ್ನು ಅನರ್ಥಮಾಡಿಕೊಂಡಿದ್ದೂ ಕೆಲಮಟ್ಟಿಗೆ ಕಾರಣವಾಗುತ್ತದೆ.

ಇತಿಹಾಸ ತಜ್ಞರ ಪ್ರಕಾರ: ಆರ್ಯರು ಮಧ್ಯಏಷ್ಯಾದಿಂದ ವಲಸಿಗರಾಗಿ ಭಾರತಕ್ಕೆ ಬಂದರು. ಋಗ್ವೇದದಲ್ಲಿ ನೂರಾರು ಸರ್ತಿ ಸಮುದ್ರಗಳ ಬಗ್ಗೆ ಹೇಳಲ್ಪಟ್ಟಿದೆ ಮತ್ತು ಅನೇಕಾವರ್ತಿ ಹಡಗುಗಳ ಯಾನಗಳ ಬಗ್ಗೆ ಮಾಹಿತಿ ಇದೆ. ವೇದಕಾಲದ ಮನು, ತುರ್ವಾಶ, ಯದು, ಭುಜ್ಯು ಮೊದಲಾದವರು ಸಮುದ್ರದಲ್ಲಿ ಸಾಗುವಾಗ ತಮ್ಮನ್ನು ರಕ್ಷಿಸಿಕೊಂಡ ಉಲ್ಲೇಖಗಳಿವೆ. ವೈದಿಕ ಸಾಹಿತ್ಯಗಳ ಪ್ರಕಾರ, ವರುಣ ಅನೇಕ ಮಹರ್ಷಿಗಳಿಗೆ ತಂದೆ; ಅದರಲ್ಲೂ ವಶಿಷ್ಠ, ಅಗಸ್ತ್ಯ ಮತ್ತು ಬೃಗು ಮಹರ್ಷಿಗಳಿಗೆ ತಂದೆ. ವೇದಗಳಲ್ಲಿ ಹೇಳಿದ ’ಸಮುದ್ರ’ ಎಂಬ ಪದ ಸಾಗರಗಳಿಗೆ ಹೇಳಿದ್ದಲ್ಲವೆಂತಲೂ ಸಿಂಧೂ ನದಿಯಂತಹ ದೊಡ್ಡಮಟ್ಟದ ನೀರಿನ ಹರಿವಿಗೆ ಅವರು ಬಳಸಿದ್ದೆಂತಲೂ ಪಾಶ್ಚಾತ್ಯ ಇತಿಹಾಸಕಾರರ ಹೇಳಿಕೆಯಾಗಿದೆ. ಗ್ರಿಪ್ಫಿತ್ ಎಂಬ ಇತಿಹಾಸಕಾರ ಋಗ್ವೇದವನ್ನು ಮನಸ್ಸಿಗೆ ಬಂದಹಾಗೇ ಅರ್ಥೈಸಿ ಬರೆದಿದ್ದಾನೆ. ಒಂದೊಮ್ಮೆ ಸಮುದ್ರ ಎಂಬ ಪದ ಸಾಗರಗಳನ್ನುದ್ದೇಶಿಸಿ ಬಳಸಲ್ಪಡದೇ ಇದ್ದಿದ್ದಾದರೆ ಋಗ್ವೇದದಲ್ಲಿ ಅದೇಕೆ ಸಾಗರಗಳ ಬಗ್ಗೆ ಅಷ್ಟೊಂದು ಸಂಬಂಧ ಹೇಳಲ್ಪಡುತ್ತಿತ್ತು ? ಉತ್ತರ ಭಾರತದ ಗಂಗಾ ಯಮುನಾ ನದಿಗಳ ಭಾಗದಲ್ಲಿ ನಡೆಸಿದ ಇತ್ತೀಚಿನ ಸಂಶೋಧನೆಯೊಂದರಲ್ಲಿ ಬಣ್ಣಗಳ ಚಿತ್ತಾರಗಳು ಮುದ್ರಿಸಲ್ಪಟ್ಟ ಬೂದು ಬಣ್ಣದ ಪಾತ್ರೆಗಳು ದೊರೆತಿವೆ ಮತ್ತು ಅವುಗಳ ಕಾಲ ಕ್ರಿ.ಪೂ. ೧೦೦೦ ಎಂದು ಪರಿಗಣಿತವಾಗಿದೆ. ಈ ಪಾತ್ರೆಗಳು ಆರ್ಯರ ಅತ್ಯಾಧುನಿಕ ಕೌಶಲವನ್ನು ಎತ್ತಿತೋರುತ್ತವೆ. ಮೇಲಾಗಿ ಹಿಟ್ಟಿಟಿ ಎಂಬ ಜನಾಂಗ ಮಧ್ಯ ಏಷ್ಯಾ ಪ್ರದೇಶದಲ್ಲೇ ಕ್ರಿ.ಪೂ. ೨೨೦೦ ಕ್ಕೂ ಮುಂಚೆ ನೆಲೆಸಿತ್ತು ಎಂಬುದು ತಿಳಿದುಬಂದಿದೆ. ಅಂತಹ ಹಿಟ್ಟಿಟಿಗಳೂ ಸಹಿತ ಸೂರ್ಯ, ಇಂದ್ರ, ಮರುತ್ ಇತ್ಯಾದಿ ದೇವರುಗಳನ್ನು ಆರಾಧಿಸುತ್ತಿದ್ದರು. ಅವರ ರಥಗಳಮೇಲೆ ಸಂಸ್ಕೃದಲ್ಲಿ ಬರೆದದ್ದು ಕಂಡುಬರುತ್ತದೆ. ಹಿಟ್ಟಿಟಿ ಮತ್ತು ಮಿಟ್ಟಾನಿ ಜನಾಂಗದವರು ಇಂಡೋ-ಆರ್ಯನ್ ಭಾಷೆಯನ್ನೇ ಮಾತನಾಡುತ್ತಿದ್ದರು ಎನ್ನಲಾಗಿದೆ. ಅಲ್ಲಿಯೂ ವೈದಿಕ ಧರ್ಮವೇ ವ್ಯಾಪಿಸಿತ್ತು ಎಂಬುದರಲ್ಲಿ ಸಂಶಯವಿಲ್ಲ. ಆರ್ಯರು ಅವರ ಪುರೋಹಿತರುಗಳಾಗಿದ್ದಿರಬಹುದಷ್ಟೇ.     

 ದ್ವಾಪರ ಯುಗದಲ್ಲಿ ಇದ್ದಿರಬಹುದಾದ ಭಾರತದ  ನಕಾಶೆ

ಸಿಂಧೂ ನಾಗರಿಕತೆಯಲ್ಲಿ ಭಾಷೆಗೆ ಲಿಪಿ ಇತ್ತು, ಸಂಶೋಧನಾ ಸಮಯದಲ್ಲಿ ಅನೇಕ ಠಸ್ಸೆಗಳು ದೊರಕಿವೆಯಾದರೂ ಅವು ದ್ರಾವಿಡ ಜನಾಂಗದವಾಗಿರಬಹುದೆಂದು ಕಲ್ಪಿಸಲಾಗಿದೆ. ಇದು ಕೇವಲ ಊಹೆ ಅಷ್ಟೇ. ಅಸ್ಪಷ್ಟವಾದ ಲಿಪಿಗಳು ಇರುವುದರಿಂದ ಅದು ಯಾವ ಭಾಷೆ ಎಂದು ನಿರ್ಧಾರಿತವಾಗಿಲ್ಲ. ತಡವಾಗಿ ಬೆಳಕಿಗೆ ಬಂದದ್ದು-ಅವು ಹಿಂದೂ ಬ್ರಾಹ್ಮಿ ಲಿಪಿಗೆ ಹತ್ತಿರವಾಗಿವೆ ಎಂಬುದಾಗಿ! ಸಿಂಧೂ ಕಣಿವೆಯ ನಾಗರಿಕತೆಯ ಮೇಲೆ ಮಧ್ಯ ಏಷ್ಯಾದ ಸುಮೇರಿಯಾ ಪ್ರಾಂತದ ಪ್ರಭಾವ ಕೂಡ ಇತ್ತು ಎಂದು ಊಹಿಸಲಾಗಿದೆ! ತೀರಾ ಇತ್ತೀಚಿನ ಬೆಳವಣಿಗೆಯಲ್ಲಿ ಮೆಹ್ರಗಹ್ರ ಎಂಬಲ್ಲಿ, ಫ್ರೆಂಚ್ ಸಂಶೋಧನೆಯೊಂದರಲ್ಲಿ ಭಾಷಾ ವ್ಯಾಕರಣಕ್ಕೆ ಸಂಬಂಧಿಸಿದ ಮಾಹಿತಿಯೂ ಸಿಕ್ಕಿದ್ದು ಅದು ಸಿಂಧೂಕಣಿವೆಯ ನಾಗರಿಕತೆಗೆ ಸಂಬಂಧಿಸಿದ್ದು ಸ್ಪಷ್ಟವಾಗಿದೆ. ಮತ್ತು ಅದರ ಕಾಲಮಾನ ಕ್ರಿ.ಪೂ ೬೦೦೦ ಎಂದು ಅಂದಾಜಿಸಲಾಗಿದೆ! ಅಂದರೆ ಈಗೀಗ ಪಾಶ್ಚಾತ್ಯ ಪಂಡಿತರು ಎಚ್ಚೆತ್ತುಕೊಂಡು ಆರ್ಯರು ಭಾರತಕ್ಕೆ ಬಂದರು ಎಂಬುದು ಸರಿಯಲ್ಲಾ ಅವರು ಭಾರತದಲ್ಲೇ ಇದ್ದರು ಮತ್ತು ಅವರ ಕಾರ್ಯಕ್ಷೇತ್ರ ಮಧ್ಯಏಷ್ಯಾದವರೆಗೂ ಹಬ್ಬಿತ್ತು ಎಂದು ಹೇಳಹೊರಟಿದ್ದಾರೆ!

ಕಾಲಕಾಲಕ್ಕೆ ಬದಲಾಗುತ್ತಾ ಬಂದ ನಾಗರಿಕತೆಯನ್ನು ಇಂಥದ್ದೇ ಎಂದು ಹೇಳುವುದು ಬಹಳ ತರ್ಕಕ್ಕೆ ನಿಲುಕುವ ಜವಾಬ್ದಾರಿ. ಈಗೀಗ ವೇದಗಳಲ್ಲಿ ಹೇಳಿದ ಉಲ್ಲೇಖಗಳಿಗೂ ಮತ್ತು ಉತ್ಖನನ ನಡೆಸಿ ತೆಗೆದ ಅವಶೇಷಗಳಿಗೂ ಪರಸ್ಪರ ತಾಳೆಹಾಕಿ ನೋಡಲು ಯತ್ನಿಸುತ್ತಿದ್ದಾರೆ. ಇತಿಹಾಸದ ಇನ್ನೊಬ್ಬ ಪಾಶ್ಚಾತ್ಯ ಸಂಶೋಧಕ ಕಾಲಿನ್ ರೆನ್ಫ್ರೆವ್ ಅವರ ಪ್ರಕಾರ ಇಂಡೋ-ಯುರೋಪಿಯನ್ ನಾಗರಿಕತೆ ಗ್ರೀಸ್ ನಲ್ಲಿ ಕ್ರಿ.ಪೂ ೬೦೦೦ಕ್ಕೂ ಮೊದಲೇ ಇತ್ತು ಎನ್ನುತ್ತಾರೆ. ಋಗ್ವೇದವೂ ಸೇರಿದಂತೇ ಯಾವುದೇ ವೇದಗಳಲ್ಲಾಗಲೀ ವೇದ ಸಾಹಿತ್ಯಗಳಲ್ಲಾಗಲೀ ಆಕ್ರಮಣಕಾರೀ ಪ್ರವೃತ್ತಿ ಕಂಡುಬರುವುದಿಲ್ಲ; ಅತಿಕ್ರಮಣ ಬುದ್ಧಿ ಅವರಲ್ಲಿರಲಿಲ್ಲ. ಅಂದಾಗ ಇಂಡೋ-ಯುರೋಪ್ ಮೂಲದ ಆರ್ಯರು ಭಾರತಕ್ಕೆ ಬಂದರು ಎಂಬುದು ಹಾಸ್ಯಾಸ್ಪದವಾಗಿ ತೋರುತ್ತದೆ. ಸಂಶೋಧಕ ವ್ಹೀಲರ್ ಪ್ರಕಾರ: ಆರ್ಯರ ಕಾರ್ಯಕ್ಷೇತ್ರ ೭ ನದಿಗಳ ಜಾಗ-ಅದು ಪಂಜಾಬ್, ಆದರೆ ವೇದಗಳಲ್ಲಿ ಈ ಜಾಗಗಳು ಮಾತ್ರ ವೇದಾಚರಣೆಗೆ ಸಂಬಂಧಿಸಿದ್ದು ಎಂದು ಹೇಳಲಿಲ್ಲ. ಅಥವಾ ಆರ್ಯರು ಭಾರತಕ್ಕೆ ಬಂದರು ಎಂಬ ಯಾವುದೇ ಉಲ್ಲೇಖ ವೇದಗಳಲ್ಲಿ ಹೇಳಲ್ಪಟ್ಟಿಲ್ಲ. ಒಂದು ಮೂಲದ ಪ್ರಕಾರ ಭಾರತದಲ್ಲಿ ಆರ್ಯರೇ ಮೂಲನಿವಾಸಿಗಳು ಮತ್ತು ದಸ್ಯುಗಳು ಹೊರಗಿನಿಂದ ಬಂದವರು.

ವ್ಹೀಲರ್ ಹೇಳಿದ ಮಾತುಗಳನ್ನೇ ತೆಗೆದುಕೊಂಡರೂ, ಸಿಂಧೂ ಕಣಿವೆಯ ಇಂಡೋ-ಆರ್ಯನ್ ನಾಗರಿಕತೆಗಿಂತಾ ಪೂರ್ವದಲ್ಲಿ ಮತ್ತು ಆರ್ಯ ಸಂಸ್ಕೃತಿಗೆ ಹೊರತಾದ ಯಾವ ನಾಗರಿಕತೆ ಅಲ್ಲಿ ಇತ್ತು ಎಂಬುದಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ. ಹೀಗಾಗಿ ಇಂಡೋ-ಆರ್ಯನ್ ನಾಗರಿಕತೆಯೇ ’ಸಿಂಧೂ ಕಣಿವೆಯ ನಾಗರಿಕತೆ’ ಎಂದು ಕರೆಯಲ್ಪಟ್ಟ ನಾಗರಿಕತೆಗೂ ಹಿಂದಿನದು ಎಂದು ಕಾಲಿನ್ ರೆನ್ ಫ್ರೆವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ೬ನೇ ಸಹಸ್ರಮಾನಕ್ಕೂ ಮುಂಚೆ ಮಧ್ಯಏಷ್ಯಾ, ಉತ್ತರಭಾರತ, ಇಂದಿನ ಪಾಕಿಸ್ತಾನ, ಇರಾನ್ ಮೊದಲಾದ ಭಾಗಗಳಲ್ಲಿ ಇಂಡೋ-ಆರ್ಯನ್ ಭಾಷೆಯೇ ಬಳಕೆಯಲ್ಲಿತ್ತು ಮತ್ತು ಈ ಎಲ್ಲ ಪ್ರಾಂತಗಳ ಜನ ಉತ್ತಮ ಸೌಹಾರ್ದ ಮನೋಭಾವವನ್ನು ಹೊಂದಿದ್ದರು. ವೇದಗಳ ಹೇಳಿಕೆಯನ್ನು ಗ್ರಹಿಸದೇ ಅಥವಾ ತಮಗೆ ಬೇಕಾದ ರೀತಿಯಲ್ಲಿ ಅರ್ಥೈಸಿಕೊಂಡು ’ಆರ್ಯರು ಭಾರತಕ್ಕೆ ಬಂದರು’ ಎಂಬ ಕಥೆಯ ಪೂರ್ಣತೆಗಾಗಿ ಪರಿಶ್ರಮಿಸಿದ ಪಾಶ್ಚಾತ್ಯ ಪಂಡಿತರದು ನಿಜವಾದ ಸಂಶೋಧನೆಯಲ್ಲಾ ಎನ್ನುತ್ತಾರೆ ಡೆವಿಡ್ ಫ್ರಾಲೆ. ವೇದಗಳ ಸಂಸ್ಕೃತಿ ಭಾರತದಲ್ಲಿ ಸಿಂಧೂ ನಾಗರಿಕತೆಗೂ ಮುಂಚೆಯೇ ಇತ್ತು ಎಂಬುದು ಅವರ ವಾದವಾಗಿದೆ. ಸರಸ್ವತೀ ನದಿ ಮೈದುಂಬಿ ಹರಿಯುವ ಕಾಲದಲ್ಲಿ ವೇದಾಚರಣೆಗಳು ಅತ್ಯುನ್ನತ ಮಟ್ಟದಲ್ಲಿ ನಡೆಯುತ್ತಿದ್ದವು ಎಂದೂ ಅವರು ಹೇಳುತ್ತಾರೆ.

ಈ ಲೇಖನದ ಕೊನೆಯ ಭಾಗವನ್ನು ಡೆವಿಡ್ ಫ್ರಾಲೆಯವರ ಮಾತುಗಳಲ್ಲೇ ಮುಗಿಸೋಣ ಎನಿಸುತ್ತದೆ. ಯಾಕೆಂದರೆ ಅವರ ಹೇಳಿಕೆಗಳು ಈ ಪ್ರಪಂಚದ ಅತ್ಯಂತ ಹಳೆಯದಾದ ಅಥವಾ ಮೂಲ ಸಂಸ್ಕೃತಿಯೊಂದರ ಮೇಲೆ ಬೆಳಕುಚೆಲ್ಲುತ್ತವೆ:

The acceptance of such views would create a revolution in our view of history as shattering as that in science caused by Einstein's theory of relativity. It would make ancient India perhaps the oldest, mediumst and most central of ancient cultures. It would mean that the Vedic literary record already the mediumst and oldest of the ancient world even at a 1500 BC date would be the record of teachings some centuries or thousands of years before that. It would mean that the 'Vedas' are our most authentic record of the ancient world. It would also tend to validate the Vedic view that the Indo-Europeans and other Aryan peoples were migrants from India, not that the Indo-Aryans were invaders into India. Moreover, it would affirm the Hindu tradition that the Dravidians were early offshoots of the Vedic people through the seer Agastya, and not unaryan peoples.

In closing, it is important to examine the social and political implications of the Aryan invasion idea:

First, it served to divide India into a northern Aryan and southern Dravidian culture which were made hostile to each other. This kept the Hindus divided and is still a source of social tension. Second, it gave the British an excuse in their conquest of India. They could claim to be doing only what the Aryan ancestors of the Hindus had previously done millennia ago.Third, it served to make Vedic culture later than and possibly derived from Middle Eastern cultures. With the proximity and relationship of the latter with the Bible and Christianity, this kept the Hindu religion as a sidelight to the development of religion and civilization to the West. Fourth, it allowed the sciences of India to be given a Greek basis, as any Vedic basis was mediumly disqualified by the primitive nature of the Vedic culture. 

This discredited not only the 'Vedas' but the genealogies of the 'Puranas' and their long list of the kings before the Buddha or Krishna were left without any historical basis. The 'Mahabharata', instead of a civil war in which all the main kings of India participated as it is described, became a local skirmish among petty princes that was later exaggerated by poets. In short, it discredited the most of the Hindu tradition and almost all its ancient literature. It turned its scriptures and sages into fantacies and exaggerations.

This served a social, political and economical purpose of domination, proving the superiority of Western culture and religion. It made the Hindus feel that their culture was not the great thing that their sages and ancestors had said it was. It made Hindus feel ashamed of their culture that its basis was neither historical nor scientific. It made them feel that the main line of civilization was developed first in the Middle East and then in Europe and that the culture of India was peripheral and secondary to the real development of world culture.

Such a view is not good scholarship or archeology but merely cultural imperialism. The Western Vedic scholars did in the intellectual spehere what the British army did in the political realm discredit, divide and conquer the Hindus. In short, the compelling reasons for the Aryan invasion theory were neither literary nor archeological but political and religious that is to say, not scholarship but prejudice. Such prejudice may not have been intentional but deep-seated political and religious views easily cloud and blur our thinking.

It is unfortunate that this this approach has not been questioned more, particularly by Hindus. Even though Indian Vedic scholars like Dayananda saraswati, Bal Gangadhar Tilak and Arobindo rejected it, most Hindus today passively accept it. They allow Western, generally Christian, scholars to interpret their history for them and quite naturally Hinduism is kept in a reduced role. Many Hindus still accept, read or even honor the translations of the 'Vedas' done by such Christian missionary scholars as Max Muller, Griffith, Monier Williams and H. H. Wilson. Would modern Christians accept an interpretation of the Bible or Biblical history done by Hindus aimed at converting them to Hinduism? Universities in India also use the Western history books and Western Vedic translations that propound such views that denigrate their own culture and country.

The modern Western academic world is sensitive to criticisms of cultural and social biases. For scholars to take a stand against this biased interpretation of the 'Vedas' would indeed cause a reexamination of many of these historical ideas that can not stand objective scrutiny. But if Hindu scholars are silent or passively accept the misinterpretation of their own culture, it will undoubtedly continue, but they will have no one to blame but themselves. It is not an issue to be taken lightly, because how a culture is defined historically creates the perspective from which it is viewed in the modern social and intellectual context. Tolerance is not in allowing a false view of one's own culture and religion to be propagated without question. That is merely self-betrayal. ಧನ್ಯವಾದಗಳು ಡೆವಿಡ್, ತಾವು ಭಾರತೀಯ ವೇದಗಳನ್ನು ಅದೆಷ್ಟು ಆಳವಾಗಿ ಚಿಂತಿಸಿದಿರಿ ಎಂಬುದು ನಮಗೀಗ ಅರ್ಥವಾಗುತ್ತಿದೆ.

ನಮ್ಮ ಭಾರತದ ಆರ್ಷೇಯ ಋಷಿಮೂಲ ಸಂಸ್ಕೃತಿ ಎಷ್ಟು ಸಮರ್ಪಕವಾಗಿದೆ ಎಂದು ಇಲ್ಲಿ ತಿಳಿಯುತ್ತದೆ. ಕೃತ, ತ್ರೇತಾ, ದ್ವಾಪರ ಮುಗಿದು ಕಲಿಯುಗದ ೫೦೦೦ ವರ್ಷಗಳು ಸಂದುಹೋಗಿವೆ. ಕಾಲಿಟ್ಟ ಕಲಿಯ ಕಾಲದ ಮಹಿಮೆಯಲ್ಲಿ ಈ ಪ್ರಪಂಚದಾದ್ಯಂತ ಹಲವು ಮತಗಳು ಹುಟ್ಟಿವೆ, ವಿಜೃಂಭಿಸುತ್ತಿವೆ. ಯುಗಕ್ಕೊಂದು ರೂಪವನ್ನು ಮೊದಲೇ ಹೇಳಿದ ವೇದ ಕಲಿಯುಗಕ್ಕೂ ಒಂದು ಪ್ರಮಾಣವನ್ನು ಘೋಷಿಸಿದೆ. ಯುಗ ಯುಗಗಳು ಕಳೆದರೂ ವೇದಗಳು, ವೇದ ಸಾಹಿತ್ಯಗಳು ನಾಶವಾಗುವುದಿಲ್ಲ-ಯಾಕೆಂದರೆ ಅವು ಅಪೌರುಷೇಯ. ಯಾರಲ್ಲಿಯೂ ಹಾರ್ಡ್ ಕಾಪಿ ಇಲ್ಲದಿದ್ದರೂ ಭಗವಂತನಾದ ಸೂರ್ಯನಾರಾಯಣನಲ್ಲಿ ಅವು ಇವೆ-ಆತ ಆಂಜನೇಯನಿಗೆ ಆ ವಿಷಯದಲ್ಲಿ ಗುರು ಅಲ್ಲವೇ? ನಮ್ಮ ಕಣ್ಣಿಗೆ ಕಾಣುವುದಷ್ಟೇ ಜಗತ್ತಲ್ಲಾ ಬೇರೇ ಇನ್ನೇನೋ ಇದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 

ಹಾಳುಗೆಡವಲ್ಪಟ್ಟ  ಶ್ರೀಶಾರದಾದೇವಿ ದೇವಸ್ಥಾನ, ಕಾಶ್ಮೀರ, ಹೆಚ್ಚಿನ ಚಿತ್ರಗಳು ನನ್ನ ಫೇಸ್ ಬುಕ್ ಆಲ್ಬಂ ನಲ್ಲಿವೆ
ಈ ಜಗತ್ತಿನ ಮೊಟ್ಟಮೊದಲ ವಿಶ್ವವಿದ್ಯಾಲಯ ಇಲ್ಲೇ ನಡೆಯುತ್ತಿತ್ತು ಎಂದು ತಿಳಿದು ಬರುತ್ತದೆ.

ಕಲಿಯುಗದಲ್ಲಿ ಕಾಶ್ಮೀರದಲ್ಲಿಯೇ ಇನ್ನೂ ನೆಲೆಸಿದ್ದ ಶಾರದೆಗೆ [ಸಾಂಕೇತಿಕವಾಗಿ ಅಲ್ಲಿ ನೆಲೆಸಿದ್ದ ಅಲೌಕಿಕ ಶಕ್ತಿಯ ಮೂರ್ತರೂಪಕ್ಕೆ] ಲೌಕಿಕವಾಗಿ ಅನನುಕೂಲವಾಗದಿರಲಿ ಎಂಬ ಭಾವದಿಂದ, ಬ್ರಹ್ಮಜ್ಞಾನಿಯಾದ ಶ್ರೀ ಆದಿ ಶಂಕರರು ಸರಸ್ವತಿಯನ್ನು ಹಾಗೇ ನಡೆಸಿತಂದರು ಎಂಬುದು ಒಂದು ಪ್ರತೀತಿ. ಬರುವಾಗ ಸರಸ್ವತಿ ಕರಾರೊಂದನ್ನು ಮುಂದಿತ್ತಳಂತೆ "ಶಂಕರಾ, ನಾನು ಬರುತ್ತಿರುವುದು ನಿನಗೆ ನನ್ನ ಕಾಲಂದುಗೆಯ ಸಪ್ಪಳದಿಂದ ತಿಳಿಯುತ್ತದೆ, ನೀನು ಹಿಂದಿರುಗಿ ನೋಡಬಾರದು. ಒಂದೊಮ್ಮೆ ನೀನು ತಿರುಗಿ ನೋಡಿದ್ದಾದರೆ ನಾನು ಅಲ್ಲಿಯೇ ಪ್ರತಿಷ್ಠಿತಳಾಗಿಬಿಡುತ್ತೇನೆ." ಶಂಕರರು ’ತಥಾಸ್ತು"[ಹಾಗೇ ಆಗಲಿ] ಎಂದರು. ಉತ್ತರದ ಕಾಶ್ಮೀರದಿಂದ ಜೊತೆಯಾಗಿ ಬಂದ ಶಾರದೆಯನ್ನು. ಮಹರ್ಷಿ ವಿಭಾಂಡಕ-ಋಷ್ಯಶೃಂಗರ ತಪೋಭೂಮಿಯಾದ ಶೃಂಗೇರಿಗೆ ಕರೆತಂದಾಗ, ಗೆಜ್ಜೆಯ ಸಪ್ಪಳ ನಿಂತಂತೆನಿಸಿ ಹಿಂದಿರುಗಿ ನೋಡಿದರಂತೆ; ಶಾರದೆ ಅಲ್ಲಿಯೇ ಪ್ರತಿಷ್ಠಿತಳಾದಳು ಎಂದು ಭಕ್ತ-ಭಾವುಕರ ಅಭಿಪ್ರಾಯಪಡುತ್ತಾರೆ. ಇದೇ ಕಲಿಯುಗ ಅಂತ್ಯಗೊಳ್ಳುವ ಮುನ್ನವೇ ಮತ್ತೆ ಅಖಂಡ ಭಾರತ ನಮ್ಮದಾಗುತ್ತದೆ ಎಂಬುದರಲ್ಲಿ ಸಂಶಯಪಡುವ ಅಗತ್ಯವಿಲ್ಲ. ಪಾಕಿಗಳು ತಾವು ಆಕ್ರಮಿಸಿಕೊಂಡ ಹಿಂದೂಸ್ಥಾನದ ಭೂಭಾಗವನ್ನು ಆಜಾದ್ ಜಮ್ಮು-ಕಾಶ್ಮೀರ್ [ಎ.ಜೆ.ಕೆ.] ಎಂದು ಕರೆಯುತ್ತಾರೆ. ಯಾರೆಲ್ಲಾ ಹಾಗೆ ಕರೆಯುತ್ತಾರೋ ಅವರೆಲ್ಲಾ ಪಾಕಿಗಳ ಬೆಂಬಲಿಗರು ಎಂದೇ ಪರಿಗಣಿಸಬೇಕಾಗಿದೆ. ಕರ್ನಾಟಕದ ಜನತೆಯ ಸೌಭಾಗ್ಯ ಶಾರದೆ ನಮ್ಮಲ್ಲಿಯೇ ನೆಲೆಸಿದ್ದಾಳೆ. ಅಮ್ಮ ನಮ್ಮನ್ನೆಲ್ಲಾ ಬೌದ್ಧಿಕವಾಗಿ ಬೆಳೆಸಿ ಮತ್ತೆ ವೇದಕಾಲವನ್ನೇ ಅನುಗ್ರಹಿಸಲಿ ಎಂಬ ಪ್ರಾರ್ಥನೆಯೊಂದಿಗೆ ’ಆರ್ಯರು ಭಾರತಕ್ಕೆ ಬಂದರು’ ಎಂಬುದು ಕಟ್ಟು ಕಥೆ ಎಂಬುದನ್ನು ನಿಮ್ಮ ಮುಂದೆ ಬಿಚ್ಚಿ ಹರಡಿದ್ದಕ್ಕೆ ಖುಷಿಪಡುತ್ತಿದ್ದೇನೆ, ನಮಸ್ಕಾರ.