ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, January 29, 2011

ಕುಮಾರಾಮಾಯಣ ಮತ್ತು ಸುಮಾಭಾರತ !



ಕುಮಾರಾಮಾಯಣ ಮತ್ತು ಸುಮಾಭಾರತ !

ಕುಮಾರಾಮಾಯಣ

ಪೂರ್ವಂ ಕುಮಾರ ಬೆಂಗಳೂರಾದಿ ಗಮನಂ
ಥರಥರದ ಸರ್ಕಸ್ಗಳುಂ |
ರಾಧಿಕಾ ಪಾಣಿಗ್ರಹಣಂ ಶಮಿಕಾ ಜನನಂ
ಕಸ್ತೂರಿಪರಿಶಿಂಚನಂ |
ಖುರ್ಚಿ ವೇದನ ಶಾಸಕಾನರ್ಹ ಯುದ್ಧಂ
ಮೀಡಿಯಾ ಸಂಭಾಷಣಂ |
ಪಶ್ಚಾದರ್ಥಮನರ್ಥಂ ನವಿಜಯಂ
ಏತಧ್ಯ ಕುಮಾರಾಮಾಯಣಂ ||


ಸುಮಾಭಾರತ

ಆದೌ ಶಿವಮೊಗ್ಗ ಜಿಲ್ಲೆಯಲ್ಲಿ ಜನನಂ
ರಾಸ್ವಂಸ ಸೇವಾರ್ಪಣಂ |
ಮಾಯಾಜಾಲವನೇಕಮಂ ಜಯಿಸುತಂ
ತಾ ಗೆದ್ದು ಖುರ್ಚಿಂಗಳಂ |
ನ್ಯಾಯಚ್ಛೇದನ ಭೂಮಿಖಾತೆ ಹರಣಂ
ತಾ ನುಂಗುತಂ ಗುಳುಗುಳುಂ |
ಶೋಭಾಯಾತ್ರೆಯೇ ಪ್ರಖರಮುಂ
ಮಿಕ್ಕೆಲ್ಲ ಹಿರಿಯರ್ಗೆ ಧಿಕ್ಕಾರವುಂ |
ಫೆವಿಕಾಲ್ ಆನೋಬಾಂಡಾದಿ ರಹಿತಂ
ಖುರ್ಚಿಮಾತ್ರಂ ಅಚಲವುಂ|
ಊರ್ಮೇಲ್ ಊರ್ಬಿದ್ರೆ ಯಾರಪ್ನ ಗಂಟ್ಹೋಯ್ತುಂ ?
ಕೇಳಿ ಸುಮಹಾಭಾರತಂ ||

10 comments:

  1. vyangyadalliyu koushalya...mechchuge aaytu..bhat sir..

    ReplyDelete
  2. ರಾಮಾಯಣ, ಮಹಾಭಾರತ ಕಾವ್ಯಗಳ ಹೊಸ ಆವೃತ್ತಿಗಳನ್ನು ಓದಿ ಆನಂದತುಂದಿಲನಾದೆ. ಇವುಗಳನ್ನು ರಚಿಯಿಸಿದ ಹೊಸ ಕವಿಗೆ ಹಾಗು ಓದುಗರಿಗೆ ನಿತ್ಯವೂ ಶುಭವಾಗುವದರಲ್ಲಿ ಸಂಶಯವಿಲ್ಲ.

    ReplyDelete
  3. ಅಂದದಿ ಪ್ರಸ್ತುತ ವಿಷಯಂಗಳ ಬಗ್ಗೆ ಹಳೆಗನ್ನಡದಲ್ಲಿ ಕಾವ್ಯ ರಚಿಸಿದ ಭಟ್ಟರಿಗೆ ಮಂಗಳವಾಗಲಿ ಎಂದು ಆ ಚೆನ್ನಕೇಶವನಲ್ಲಿ ಬಿನ್ನಯಿಪೆ.

    ReplyDelete
  4. ಭಟ್ ಸರ್ ಹಳೆಗನ್ನಡ ಮಾದರಿಯಾಗಿಸಿಕೊಂದು ಹಳೇ ಎಕ್ಕಡ್ ತೆಗೆದು ಈ ಮಹನೀಯರಿಗೆ ಬಾರಿಸಿದ ರೀತಿ
    ಸೂಪರ್ರು...!
    ನನ್ನ ಹೊಸಾ ಬ್ಲಾಗು http://www.vartamaana.blogspot.com ಗೆ ಬನ್ನಿರಿ ನಿಮ್ಮ ಅನಿಸಿಕೆ ಹಂಚಿಕೊಳ್ರಿ..

    ReplyDelete
  5. ಪರೀಕ್ಷೆಗೆ ಓದಿ ಬೋರಾಗಿ ಬ್ಲಾಗುಗಳತ್ತ ಕಣ್ಣು ಹಾಯಿಸಿದಾದ ನಿಮ್ಮ ಕವನ ಅಲ್ಲಲ್ಲ ಕಾವ್ಯ ಕಾಣಿಸಿತು.... ತು೦ಬಾ ನಗು ತರಿಸಿತು....ಮನಸು ಉಲ್ಲಸಿತಗೊ೦ಡಿತು :)

    ReplyDelete
  6. ತುಂಬಾ ಚೆನ್ನಾಗಿದೆ ಸಾರ್..

    "ಫೆವಿಕಾಲ್ ಆನೋಬಾಂಡಾದಿ ರಹಿತಂ
    ಖುರ್ಚಿಮಾತ್ರಂ ಅಚಲವುಂ|
    ಊರ್ಮೇಲ್ ಊರ್ಬಿದ್ರೆ ಯಾರಪ್ನ ಗಂಟ್ಹೋಯ್ತುಂ ?
    ಕೇಳಿ ಸುಮಹಾಭಾರತಂ ||"

    ಈ ಕೊನೆಯ ಸಾಲುಗಳು ತುಂಬಾ ವಿಡಂಬನಾತ್ಮಕವಾಗಿ ಮೂಡಿ ಬಂದಿದೆ!

    ReplyDelete
  7. ನಿಮ್ಮ ರಾಮಾಯಣ ಮಹಾಭಾರತದ ಹೊಸ ಆಖ್ಯಾನ ಚೆನ್ನಾಗಿದೆ, ಈ ಮಾಲಿಕೆಯನ್ನು ಮು೦ದುವರಿಸಿ

    ReplyDelete
  8. ಓದಿದ,ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ವಂದನೆಗಳು. ನನಗೆ ಹಲವು ಬ್ಲಾಗ್ ಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ, ಸದ್ಯದಲ್ಲೇ ಬರುತ್ತೇನೆ, ಕ್ಷಮೆಯಿರಲಿ.

    ReplyDelete