ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, December 30, 2011

ಬದುಕಿಗೊಂದು ನಿತ್ಯ ಪಾಠ


ಬದುಕಿಗೊಂದು ನಿತ್ಯ ಪಾಠ

[ಸ್ನೇಹಿತರೆಲ್ಲರಿಗೂ ೨೦೧೨ ಹಾರ್ದಿಕ ಶುಭಾಶಯಗಳು]

ಬದುಕಿಗೊಂದು ನಿತ್ಯ ಪಾಠ ಆಟ ಹಾಸ್ಯ ಹೂರಣ
ಕೆದಕಿತೆಗೆದು ಭಾವಗಳನು ಅದಕೆ ಕಟ್ಟಿ ತೋರಣ !

ಮುಗಿಯದಿರಲಿ ಮಂದಹಾಸ ಲಘುವಿಗದುವೆ ಕಾರಣ
ತೆಗೆದು ಬಿಸುಡಿ ಕೋಪತಾಪ ಜೀವಕದುವೆ ಮಾರಣ !

ನಡೆವ ಹಾದಿಯಲ್ಲಿ ನಾವು ನಮ್ಮಷ್ಟಕೇ ವಾರಣ!!
ಪಡೆವ ಕಷ್ಟ-ಸುಖಗಳೆಲ್ಲ ಖರ-ನಂದನ-ತಾರಣ !

ಗೆಲುವು-ಸೋಲು ಮಜದ ಮಜಲು ತಾರದಿರಲಿ ದಾರುಣ
ಒಲವು-ಸ್ನೇಹ ಎಳೆದುತರಲಿ ಕೊರತೆ ಭರಿಸೆ ಪೂರಣ

ನವನವೀನ ಜಾಯಮಾನ ನಾಗರಿಕತೆ ಪ್ರೇರಣ
ಜನರಾಶಿಯು ಅರಿತು ಬದುಕೆ ದಿನವು ನವ್ಯ ಚಾರಣ !

5 comments:

 1. ಕವನದ ಆಶಯ ತುಂಬ ಚೆನ್ನಾಗಿದೆ ಸರ್
  ನಿಮಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಸರ್ ಧನ್ಯವಾದಗಳು....

  ReplyDelete
 2. ನಮ್ಮ ಖುಶಿಗೆ ನಿಮ್ಮ ಬ್ಲಾಗ್ ಲೇಖನಗಳೇ ಕಾರಣ!
  ಹೊಸ ವರುಷದ ಶುಭಾಶಯಗಳ ಸ್ವೀಕರಿಸಲು ಬಾರಣ!

  ReplyDelete
 3. nimagu hosa varshada shubhashayagalu

  ReplyDelete
 4. ಪ್ರಾಸ-ಪೂರ್ಣ, ಸುಂದರ ಕವನ ಸರ್....ನಿಮಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು...

  ReplyDelete
 5. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ವಂದನೆಗಳು, ಧನ್ಯವಾದಗಳು.

  ReplyDelete