ಕನ್ನಡದ ಅಡಿಗೆ !
ಕನ್ನಡ ರಾಜ್ಯೋತ್ಸವದ ಶುಭ ಅವಸರದಲ್ಲಿ ಈ ಸರ್ತಿ ಕನ್ನಡಮಾತೆಗೆ ಅರ್ಪಿಸಿದ ಹಾರ-ಆಹಾರ ಇದು. ಕನ್ನಡದಲ್ಲಿ ಹಿಂದಿನಿಂದ ಇಂದಿನವರೆಗೆ ಅದೆಷ್ಟೋ ಮಹಾನುಭಾವರುಗಳು ಬರೆದರು, ಕನ್ನಡ ಗುಡಿಯ ಸಾರಿಸಿ ರಂಗವಲ್ಲಿ ಇಟ್ಟು, ಚಂದದ ಅಡುಗೆಯನ್ನು ಮಾಡಿ ಹಬ್ಬವನ್ನು ಆಚರಿಸಿದರು. ಈ ಹಬ್ಬ ಸದಾ ಇರಲಿ, ಈ ಹಡಗು ಚಲನೆಯಲ್ಲಿರಲಿ ಎಂಬ ಸದಾಶಯದೊಂದಿಗೆ ಕನ್ನಡ ಜನತೆಗೆ ಮತ್ತೊಮ್ಮೆ ಹಾರ್ದಿಕ ಶುಭಾಶಯಗಳೊಂದಿಗೆ ಸದ್ಯಕ್ಕೆ ಸ್ವೀಕರಿಸಿ ಈ ಅಡಿಗೆ:
ಅಡಿಗೆ ಸಿದ್ಧವಿದೆ ಕರೆಯಿರಿ ಗೆಳೆಯರೆ
ಅಡಿಗಡಿಗೆ ನಿಮ್ಮ ಸ್ನೇಹಿತರ
ಗುಡಿ ಕನ್ನಡದಲಿ ನಡೆದಿದೆ ಉತ್ಸವ
ಸಡಗರ ಮುಗಿಯದು ಸ್ನೇಹಪರ
ಗಡಬಡಿಸದೆ ಕಾರಂತರು ತಂದರು
ಒಡಲೊಳ ಬೆಟ್ಟದ ಜೀವಗಳ
ಬಿಡದೆ ಕಟ್ಟಿದರು ನಾಕುತಂತಿಯನು
ತುಡಿತದಿ ಬೇಂದ್ರೆಯು ಕನಸುಗಳ
ಬಿಡಿಬಿಡಿಯಾದರು ಭಗವದ್ಗೀತೆಯು
ನುಡಿಗಟ್ಟಿನ ಡೀವೀಜಿಯದು
ಕಿಡಿಕಿಡಿ ರೂಪದ ಹಾಸ್ಯದ ಪಲ್ಯವು
ಒಡನಾಡೀ ನಮ್ಮ ಬೀಚಿಯದು
ಕೊಡಮಾಡಿದರಾನವ್ಯ ನವೋದಯ
ಅಡಿಗರು ಗುಡುಗುತ ಬೇರೆದನಿ
ತಡಮಾಡದೆ ಮಕ್ಕಳ ಮನವರಿತರು
ಸಿಡಿಸುತ ರತ್ನನು ಪದಗಳನು
ಕಡೆದು ರಾಮಾಯಣ ಮೊಸರಲಿ ಬೆಣ್ಣೆಯ
ಗಡಿಗೆ ತುಂಬಿಸುತ ಕುವೆಂಪುವು
ಹಡಗು ಕಟ್ಟಿದರು ಬಿಎಂಶ್ರೀಗಳು
ಒಡೆಯದಂತೆ ಕೃಷ್ಣರಾಯ್ರುಗಳು
ಪೊಡವಿಯ ಕಥೆಗಳ ಆಸ್ತಿಯು ಮಾಸ್ತಿಯು
ಹುಡಿ ರಂಗೋಲಿಯ ಗೋರೂರು
ಪೊಡಮಡುವೆವು ಭುವನೇಶ್ವರಿ ನಿನಗೆ ನಾವ್
ಬೆಡಗಿದು ನಮ್ಮಯ ತವರೂರು
ಕನ್ನಡಮ್ಮನಿಗೆ ಅತ್ಯುತ್ತಮ ನಮನ, ಭರ್ತಿ ಲಯವಿದೆ ಭಟ್ಟರೇ ಮಕ್ಕಳು ಹಾಡಿಕೊಳ್ಳಲೂ ತಕ್ಕುದಾಗಿದೆ. ಭೇಷ್!
ReplyDeleteನಿಜ ಭಟ್ಟರೇ, ಮಕ್ಕಳಿಗೆ ಎಲ್ಲಾ ಕವಿಶ್ರೇಷ್ಠರ ಮತ್ತು ಅವರ ಚಿಂತನೆಯ ಪರಿಚಯವನ್ನು ಸು೦ದರವಾಗಿ ಮಾಡಿಕೊಟ್ಟಿರುವಿರಿ. ಶಿಕ್ಷಣ ಇಲಾಖೆಗೆ ಕಳಿಸಿ.ಮಕ್ಕಳ ಕನ್ನಡ ಭಾಷಾ ಪುಸ್ತಕಕ್ಕೆ ಸೂಕ್ತವಾದ ತರಗತಿಗೆ ಅಳವಡಿಸುಕೊಳ್ಳುವ ಮನಸ್ಸು ಮಾಡಲಿ.ನಿಮ್ಮ ತಪಸ್ಸಿಗೆ ಶರಣು.
ReplyDeleteSir thumba chennagide...
ReplyDeleteತುಂಬಾ ಚೆನ್ನಾಗಿದೆ ಸರ್.
ReplyDeleteಸ್ವರ್ಣ
ಚಂದದ ಕವನ.ಅಭಿನಂದನೆಗಳು.
ReplyDeleteಭಟ್ಟರೆ,
ReplyDeleteಅಡಿಗೆ ನಳಪಾಕವಾಗಿದೆ. ಇಂತಹ ತಿನಿಸನ್ನು ಇನ್ನಷ್ಟು ನೀಡಿರಿ!
innu halavu jnana peethigalannu bittiddiraa...
ReplyDeleteಓದಿ ಮೆಚ್ಚದ ಸರ್ವಶ್ರೀ ಬದರೀನಾಥ ಪಲವಳ್ಳಿ, ಹರಿಹರಪುರ ಶ್ರೀಧರ್, ಗಿರೀಶ್, ಡಾ|ಕೃಷ್ಣಮೂರ್ತಿ, ಸುಧೀಂಧ್ರ ದೇಶಪಾಂಡೆ, ಸೀತಾರಾಮ ಮತ್ತು ಸ್ವರ್ಣಾ ಎಲ್ಲರಿಗೂ ನನ್ನ ವಂದನೆಗಳು ಮತ್ತು ಅಭಿನಂದನೆಗಳು.
ReplyDeleteನೇಪಥ್ಯದ ಓದುಗರಿಗೂ ನನ್ನ ನಮಸ್ಕಾರಗಳು.
ಓಓಓ..... ಕನ್ನಡದ ಕವಿಗಳೇ ,ಕನ್ನಡದ ಋಷಿಗಳೆ ತಲೆಭಾಗಿನಮಿಪೆ
ReplyDeleteಕನ್ನಡದ ಕವಿಗಳೇ, ನಿಮ್ಮ ಕನ್ನಡದ ಕವಿಗಳ ಕುರಿತ ಕವನ ತುಂಬಾ
ಅಂದವಾಗಿ ಮೂಡಿಬಂದಿದೆ,ನಿಮ್ಮಗೆ ಕನ್ನಡದ ನಮಸ್ಕಾರ
ಧನ್ಯವಾದ ಕಂಜಥಾರವರೇ !
ReplyDelete