ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, April 15, 2011

ಹನಿ ಹನಿ ನೀರ ಹನಿಯಾ ಸಿಂಚನಾ.......


ಹನಿ ಹನಿ ನೀರ ಹನಿಯಾ ಸಿಂಚನಾ.......

ಇವತ್ತು ಮತ್ತೇನೂ ಬರೆಯಲಾರದ ಕೆಲಸದೊತ್ತಡ. ಅದಕ್ಕೇ ಬಹಳದಿನಗಳಿಂದ ಪೆಂಡಿಂಗ್ ಇದ್ದ ನಮ್ಮ ಕಂಗ್ಲೀಷ್ ಹನಿಗವನದ ಡುಂಡಿರಾಜರ ಹನಿಗವನವೊಂದನ್ನು ಬೇರೇ ಬೇರೇ ವ್ಯಕ್ತಿಗಳಿಗೆ ಅಳವಡಿಸಿ ಸ್ವಲ್ಪ ಮಜಾ ತಗೊಳ್ಳೋಣ ಬನ್ನಿ -

ಕಾಮುಕ ಶಿಕ್ಷಕನಿಗೆ ಕೊಟ್ಟಾಗ ಅದು ಮಾರ್ಪಾಟಾಗಿದ್ದು ಹೀಗೆ:

ಕ್ಲಾಸಿನಲ್ಲಿ ಸಿಕ್ಕಳು
ಪಾಠಕೇಳಿ ನಕ್ಕಳು
ಏನೇನೋ ಅಂತಾವೆ ಮಾಧ್ಯಮದ ನನ್ಮಕ್ಕಳು !


ಹುಣಿಸೆ ಮುಪ್ಪಾದರೂ ಹುಳಿ ಮುಪ್ಪಲ್ಲ ಅಂತಾರಲ್ಲ ಅದ್ಕೇ ನೋಡೋಣ ಅಂತ ಎಮ್. ಎಫ್. ಹುಸೇನ್ ಎಂಬ ಹುಚ್ಚುಕಲಾವಿದನಿಗೆ ಕೊಟ್ಟಾಗ :

ಕುಂಚಕೆಂದು ಸಿಕ್ಕಳು
ಕೊಂಚ ಬಿಚ್ಚಿ ನಿಂತಳು
ಮಂಚನೆನೆದು ಬಾ ಎನ್ನಲು ಮಿಂಚಿ ಮಾಯವಾದಳು !


ದಾರಿಯಲ್ಲಿ ಸಿಕ್ಕ ಕಂಜೂಸಿ ಅಂಗಡಿಯಾತನಿಗೆ ಕೇಳಿದಾಗ :

ಮೊನ್ನೆ ತಾನೇ ಸಿಕ್ಕಳು
ಎರಡು ಮೂರು ಮಕ್ಕಳು
ಸಾವಿರ್ ರೂಪಾಯ್ ಸಾಲ ಪಡೆದು ನಂಗೇ ಕೈಕೊಟ್ಟಳು !


ನಿಂತಿದ್ದ ಕ್ಯಾಬ್ ಡ್ರೈವರ್ ಹತ್ತಿರ ಕೇಳಿದಾಗ :

ಎಂಥಾ ಫಿಗರು ಸಿಕ್ಕಳು !
ಕುಂತು ನೋಡಿ ನಕ್ಕಳು
ನಿಂತಾಗ ಲೋ ಜೀನ್ಸಗೆ ಕಾಣಿಸ್ತದೆ ಹೊಕ್ಕಳು !


ಟೆಂಟಿನ ಹುಡುಗನ ವ್ಯವಹಾರ ನೋಡಿ :

ಟೆಂಟಿನಲ್ಲಿ ಸಿಕ್ಕಳು
ಸೊಂಟ ಕುಣಿಸಿ ನಕ್ಕಳು
ನೆಂಟಸ್ತಿಕೆಮಾಡೋಕ್ಮುಂಚೆಕಟ್ಟು ತಾಳಿಎಂದಳು


ಪಂಕ್ಚರ್ ಶಾಪ್ ಹುಡುಗನ ಅಹವಾಲು :

ಪಂಕ್ಚರ್ ಹಾಕ್ವಾಗ್ ಸಿಕ್ಕಳು
ಬಾಗಿ ನಿಂತು ನಕ್ಕಳು
೨೦ರ ನೋಟು ಕೊಟ್ಟು ಥ್ಯಾಂಕ್ಸ್ ಎಂದುಬಿಟ್ಟಳು


[ಅಹಾಹಾಹಾ ಎಂಥೆಂಥಹಾ ಅತಿರಥರಯ್ಯ ನಮ್ಮ ಮೌಲ್ಯಯುತ ಶೈಕ್ಷಣಿಕ ರಂಗದಲ್ಲಿ, ದಿನಕ್ಕೊಂದು ಹೊಸ ವಾರ್ತೆ! ಇದಕ್ಕೆಲ್ಲಾಕಾರಣ ಅಪಾತ್ರರಿಗೆ ಕೇವಲ ವಿದ್ಯಾರ್ಹತೆ ಅವಲಂಬಿಸಿ ಸ್ಥಾನ ಕೊಟ್ಟಿದ್ದು ಅನಿಸುವುದಿಲ್ಲವೇ?] ಯಲಹಂಕ ಬಿ.. ತಿಮ್ಮೇಗೌಡನಕಥೆ :

ಬೆಳ್ಳಬೆಳ್ಳಗಿದ್ದಳು
ವಿಧವೆಯೆಂದು ಹೇಳ್ದಳು
ಒಳ್ಳೆದಾಯ್ತು ಬಾಎಂದರೆ ಹೋಗಿ ದೂರು ಕೊಟ್ಟಳು !


ನಿಮ್ಮೆಲ್ಲರಗೌರವಕ್ಕೆ ಅದಾಗಲೇ ಪಾತ್ರನಾದ ಬಿಡದಿ ನಿತ್ಯಾನಂದ ಉವಾಚ :

ರಂಜಿತಾ ಇಲ್ಲಿದ್ದಳು
ಅಂಜುತಲೇ ನಕ್ಕಳು
ನಂಜಿಲ್ಲದೆಸೇವೆ’ ’ಮುಕ್ತವಾಗಿ’ ನಡೆಸಿಕೊಟ್ಟಳು !


ಬ್ರಾಡ್ ಮೈಂಡೆಡ್ಎನಿಸಿಕೊಂಡ ಬಿ.ಪಿ. ದವರಿಗೆ :

ಬಿ.ಪಿ. ದಲ್ಲಿ ಸಿಕ್ಕಳು
ಒಪಿನಿಯನ್ನು ಕೊಟ್ಟಳು
ಅಪರೂಪಕ್ಕೊಮ್ಮೆಅದಕೆಅನುವುಮಾಡಿಕೊಟ್ಟಳು.


ನೆಟ್ಟಿನ ಮಹಿಮೆ :

ನೆಟ್ಟಿನಲ್ಲಿ ಸಿಕ್ಕಳು
ಭೆಟ್ಟಿಯಾಗುತಿದ್ದಳು
ಹೊಟ್ಟೆಬರಿಸಿ ಬಿಟ್ಟಮೇಲೆ ಇನ್ನೊಬ್ಬಳು ಸಿಕ್ಕಳು !


ಮತ್ತೆ ಸಿಗೋಣ ಬಾಯ್ ಬಾಯ್ !!!

9 comments:

  1. ಬೇರೆ ಬೇರೆಯವರ ಬಾಯಲ್ಲಿ ಹನಿಗವನಗಳು ಸೊಗಸಾಗಿ ಮೂಡಿ ಬಂದಿವಿ.ಬ್ಲಾಗಿಗೆ ಬನ್ನಿ .ನಮಸ್ಕಾರ.

    ReplyDelete
  2. hhahahaha

    nava dundiraajara kavana super

    nimma haasya shaili chennagide

    aadaroo jeevanada bagge sampoorna heluva dundiraajara aa saalugalu matte matte nenapaguttive

    ReplyDelete
  3. ನೆಟ್ಟಿನಲ್ಲಿ ಬಂದಳು
    ನೆಟ್ಟಗಾಗಿ ನಕ್ಕಳು
    ಭಟ್ಟರ ಕೈಗೆ ಸಿಕ್ಕ ಮೇಲೆ
    ಸೊಟ್ಟಗಾಗಿ ಹೋದಳು!

    ReplyDelete
  4. ha ha ha....nakku nakku hotte hunnaitu....Simply sooperrrrrrrr Bhatre....

    ReplyDelete
  5. hha hha...... majavaagide......... sir.... chennaagide....

    ReplyDelete
  6. ಸರ್.

    ತಮಾಷೆಯ ಹನಿಗವನಗಳನ್ನು ಓದಿ ನಗುಬಂತು.

    ReplyDelete
  7. ಭಟ್ಟರೇ, ನಿಮ್ಮ ಈ ಹನಿಗವನ ಯಾಕೋ ನನಗೆ ಹಿಡಿಸಲಿಲ್ಲ. ಡು೦ಡಿರಾಜರು ನವಿರು ಹಾಸ್ಯದೊ೦ದಿಗೆ ಅಶ್ಲೀಲತೆಯ ಸುಳುಹಿಲ್ಲದೆ ಬರೆದ ಚುಟುಕನ್ನು ನೀವು
    ಪಡ್ಡೆ ಹುಡುಗರಿಗೆ ಪ್ರಿಯವಾಗುವ ರೀತಿಯಲ್ಲಿ ತಿರುಚಿ ಬರೆದಿದ್ದೀರಿ. ಇದು ಕೀಳು ಅಭಿರುಚಿಯ ಪರಾಕಾಷ್ಟೆ. ಅನೇಕ ಗಹನ ವಿಚಾರಗಳ ಮೇಲೆ ಪಾ೦ಡಿತ್ಯಪೂರ್ಣವಾಗಿ ಬರೆಯಬಲ್ಲ ನಿಮಗಿದು ಸರ್ವಥಾ ಸಲ್ಲ. ಬೇಸರಿಸದಿರಿ, ನೀವು ಖಾಸಾ ಮಿತ್ರರಾದ್ದರಿಂದ ನೇರ ನಿಷ್ಟುರ ಅಭಿಪ್ರಾಯ

    ReplyDelete
  8. ನಿಜಕ್ಕೂ ಕೀಳು ಅಭಿರುಚಿಯ ಬರಹ. ಬೇಜಾರಾಯ್ತು ಓದಿ.

    ReplyDelete
  9. ಸನ್ಮಾನ್ಯ ಪರಾಂಜಪೆಯವರೇ, ರವಿ ಬೆಳಗೆರೆಯೆ ಕಾಯಂ ಓದುಗರಾದ ನಿಮಗೆ ಇಲ್ಲಿ ಬಳಸಿದ ಶಬ್ದಗಳು ಅಶ್ಲೀಲವೆನಿಸಿದ್ದು ಆಶ್ಚರ್ಯ! ಇರಲಿ ನಾನು ಕೆವಲ ಇಂಥಾ ಪ್ರಾಕಾರಕ್ಕೇ ಎಂದು ನನ್ನನ್ನು ಸೀಮಿತಗೊಳಿಸಿಕೊಂಡಿಲ್ಲ. ನನ್ನಿಂದ ಸಾಧ್ಯವಾಗಬಹುದಾದ ಎಲ್ಲಾ ಪ್ರಾಕಾರಗಳಲ್ಲೂ ಓದುವ ಬರೆಯುವ ಹವ್ಯಾಸ ನನ್ನದು. ಅಂತಲೇ ಪ್ರತಿಕ್ರಿಯೆಗಳು ಹೇಗೇ ಬರಲಿ ನೇರವಾಗಿ ಸ್ವೀಕರಿಸುವ ಜಾಯಮಾನದವನಾಗಿ ಬರೆಯುತ್ತಿದ್ದೇನೆ. ತಮಾಷೆಗಾಗಿ ಹೀಗೆ ಬರೆದೆನೆಂದು ಹೇಳಿಕೊಂಡೂ ಇದ್ದೇನೆ ಆದರೂ ’ಸರ್ವಥಾ ಸಲ್ಲ’ ಎಂಬ ದಿಗ್ಬಂಧನ ವಿಧಿಸಿದ್ದೀರಲ್ಲ ಎನಿಸಿತು. ನಿಮ್ಮ ಜೊತೆ ಮಧು ಎನ್ನುವವರೂ ’ಬಹಳ ಕೀಳು ಮಟ್ಟದ ಬರಹ’ ಎಂದುಬಿಟ್ಟರು! ನೋಡೀ ಕೀಳು ಅಭಿರುಚಿ ಇಟ್ಟುಕೊಂಡು ಬರೆದ ಬರಹ ಇದಲ್ಲ, ಅದನ್ನು ಅಭಿವ್ಯಕ್ತಗೊಳಿಸುವ ಇರಾದೆ ಕೂಡ ಇಲ್ಲ. ಕೇವಲ ತುಂಟಾಟಕ್ಕಾಗಿ ಹಲವು ವಿಭಿನ್ನ ಪ್ರಸಂಗಗಳಲ್ಲಿ ಮೂಲ ಹನಿಗವನವನ್ನು ತೊಡಗಿಸಿ ಬರೆದಿದ್ದಿರುತ್ತದೆಯೇ ವಿನಃ ಸಮಾಜದ ದಾರಿತಪ್ಪಿಸುವ ಅಥವಾ ಎಳಬರ ಚಪಲಕ್ಕೆ ಆಹಾರ ಒದಗಿಸುವ ಕೆಲಸವಲ್ಲ, ವಾಸ್ತವದ ಕಟು ಸತ್ಯವನ್ನು ವ್ಯಂಗ್ಯಭರಿತ ಹಾಸ್ಯರೂಪದಲ್ಲಿ ಪರಿವರ್ತಿಸಿದ ಈ ಹನಿಗಳ ಜೀರ್ಣ ನಿಮಗಾಗಲಿಲ್ಲವೇ ?

    ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು .

    ReplyDelete