ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, March 5, 2011

ಭಾವದಪ್ಸರೆ !

ಚಿತ್ರಕೃಪೆ : ಅಂತರ್ಜಾಲ

ಭಾವದಪ್ಸರೆ !

ಬರೆಯಲು ಕುಳಿತಾ ಆ ಕ್ಷಣದಿ
ಭಾವಗಳಾ ಬುಗ್ಗೆಗಳ್ ತಕ್ಷಣದಿ
ತಾನೇ ಮೊದಲು ತಾ ಮೊದಲೆನ್ನುವ ಪೈಪೋಟಿಯೊಳು ಕ್ಷಣಕ್ಷಣದಿ

ಬೆತ್ತಲೆ ನಿಂತಾ ಭಾವಗಳು
ಮತ್ತಲ್ಲೇ ಕತ್ತನು ಆಡಿಸುತಾ
ಹುತ್ತದೊಳಿಹ ಹಾವಿನ ತಲೆಯಾಪರಿ ಹೊರಸುಳಿದವು ತುಸು ನಸುನಗುತಾ

ಮನದಾ ವೇದಿಕೆ ಏರಿದವು
ತಮ್ಮೊಳಗೇ ಹಿರಿಹಿರಿ ಹಿಗ್ಗಿದವು
ರೂಪದರ್ಶಿಗಳ ಬೆಕ್ಕಿನ ನಡತೆಯ ಅನುಕರಿಸುತ ಹಾರೋಡಿದವು !

ಒಂದಕ್ಕಿಂತಲೂ ಇನ್ನೊಂದು
ಅದು ಬರದೇ ಹೋದರೆ ಮತ್ತೊಂದು
ಬಣ್ಣಹಲವಿರುವ ದಿರಿಸನು ಧರಿಸುತ ಸಣ್ಣನೆ ನಡುವನು ಕುಣಿಸಿದವು

ಒಂದರ ಕೆನ್ನೆ ಬಲು ನುಣುಪು
ಇನ್ನೊಂದರ ಕೂದಲು ಬಲು ಸೊಂಪು
ಹಂದರದೊಳಗಿಹ ಮದುವಣಗಿತ್ತಿಯ ನಾಚಿಕೆ ಇರುವಳು ನರುಗೆಂಪು

ಯಾವುದು ಚೆಂದವು ನಿರ್ಧರಿಸೆ
ಮನಕಾಗದು ಮಂಕು ಆವರಿಸೆ
ತಾವೆಲ್ಲರು ತೂಗುತ ತೀರ್ಮಾನಿಸಿ ಆವಳು ಈ ಜಗದಪ್ಸರೆಯು !

7 comments:

  1. ನಿಮ್ಮ ಮನದಲ್ಲಿ ಪೈಪೋಟಿಗಿಳಿದ ಅಪ್ಸರೆಯರ ಬಗ್ಗೆ ಕೇಳಿ ಆಶ್ಚರ್ಯವಾಯಿತು.. ಅಬ್ಬ! ಎಂಥ ಹೋಲಿಕೆ! ತುಂಬಾ ಚೆನ್ನಾಗಿದೆ.. ಅಂದ ಹಾಗೆ ಜಗದಪ್ಸರೆ ಯಾರೆಂದು ಸ್ವಲ್ಪ ನಿಧಾನವಾಗಿ ತೀರ್ಮಾನಿಸೋಣ.. ತಿಳಿದ ಕೂಡಲೇ ಉಳಿದ ಅಪ್ಸರೆಯರೆಲ್ಲ ಹೊರಟು ಹೋಗುವರಲ್ಲ ಅದಕ್ಕೆ.. Fashion show ಹೀಗೆ ನಡೆಯುತ್ತಿರಲಿ..

    ReplyDelete
  2. ಭಾವದಪ್ಸರೆಯರ ಪೈಪೋಟಿ ನಿಮ್ಮ ಮನದಲ್ಲಿ! ಆಶ್ಚರ್ಯಕರ ಕಲ್ಪನೆ!

    ReplyDelete
  3. ಏನ್ಸಾರ್ ರೋಮ್ಯಾಂಟಿಕ್ ಮೂಡ್‍ನಲ್ಲಿ ಬರೆದಿದ್ದೀರಾ?!

    ReplyDelete
  4. ವಿ.ಆರ್.ಬಿ ಸರ್....ಯಾಕೋ ಮುಂದಿನ ಬೆಂಗಳೂರ್ ಸುಂದರಿಯ ಸ್ಪರ್ಧೆ ಆಯೋಜನೆಗೋ ಅಥವಾ ತೀರ್ಪುಗಾರರಾಗಿಯೋ ಯಾವುದೋ ತಯಾರಿ ನಡೀತಿರೋ ಹಾಗಿದೆ,,,!!! ಹಹಹ ಚನ್ನಾಗಿದೆ ನಿಮ್ಮ ಸೌಂದರ್ಯೋಪಾಸನಾ ವೈಖರಿ...ಹಹಹ

    ReplyDelete
  5. haha enu sir samachara... enta kalpane azad sir heLida haagenadru plan ideya heLi...

    kavana chennagide neevu yavagalu vibhinnateya saalugaLanne bariteeri

    ReplyDelete
  6. ನಿಮ್ಮ ಮನದಲ್ಲಿ ಭಾವನೆಗಳು ಇಷ್ಟು ಚೆಂದಾಚಂದದ ರೂಪ ತಾಳಿ ಬರುತ್ತವೆಯಲ್ಲ!
    ಭಟ್ಟರೆ, ಅಸೂಯೆಯಾಗತ್ತೆ ನನಗೆ!

    ReplyDelete
  7. ಓದಿದ, ಸ್ಪಂದಿಸಿದ ಎಲ್ಲರಿಗೂ ಅನೇಕಾವರ್ತಿ ಕೃತಜ್ಞತೆಗಳು.

    ಹೊಸದಾಗಿ ಬ್ಲಾಗಿಗೆ ಲಿಂಕಿಸಿಕೊಂಡವರಿಗೆ ಸ್ವಾಗತ ಮತ್ತು ನಮನ.

    ReplyDelete