ಆಯುರ್ಭಾವ
ನವರಸಗಳು ತುಂಬಿದ ಬೇರುಗಳಾ
ನವವಿಧದಾ ಭಾವದ ನಾರುಗಳಾ
ಹವಣಿಸಿ ತಂದೂ ನೆನೆಸೀ ಕಾಸಿ
ಹವೆಯಾಡಿಳಿಸಿದ ಪಾನಕ ಸೋಸಿ
ಭವದೊಳಗಿರುವುದು ಆರುದಿನ
ಅವ ಇವ ಎನ್ನುತ ಮೂರುದಿನ
ಯುವಜನತೆಯು ಕಣ್ತೆರೆಯುವ ಹೊತ್ತಿಗೆ
ಜವ ತೆರೆವನು ತನ್ಹೊತ್ತಗೆ ಮೆತ್ತಗೆ
ಹವನಿಸಿ ಮನಸಿನ ಮೆಣಸುಗಳಾ
ಭವಣೆಯು ತುಂಬಿದ ಕನಸುಗಳಾ
ನವೆಯಾಗಲಿ ಉಸಿರಾಡಲೂ ಆಗದೆ
ಅವನೋಡಲಿ ಮತ್ತೆಂದಿಗೂ ಬಾರದೆ !
ಕವನದ ಕಷಾಯ ಕುಡಿಯುತಿರಿ
ಚ್ಯವನಪ್ರಾಶವ ಜಡಿಯುತಿರಿ
ನವಯೌವ್ವನ ನಮದಾಗಿಸೆ ಸತತವು
ಅವು ಕೊಡುವಾ ಖುಷಿಯಪರಿಮಿತವು
ಭಟ್ಟರ ಕಷಾಯವು ಅದ್ಭುತವಾಗಿದೆ!
ReplyDeleteBhatre,,
ReplyDeletenimma kashaya tumbaane saviyagide...Very Sweeet...
ಈ ಕಷಾಯ ಕುಡಿದು ನಿಮ್ಮ ಗ೦ಟಲು ಸರಿ ಆಯ್ತೆನಿಸುತ್ತದೆ.
ReplyDeletechennaagide
ReplyDeletenice... :))
ReplyDeleteOh.. bahala chennagidri kashaya.. adarakko sihi udarakku sihi.. kaasi kottare inta kashayava chambo....
ReplyDeletePravi
ಭಟ್ಟರಿಗೆ ನಮಸ್ಕಾರ: ಚೆನ್ನಾಗಿದೆ. ಅಭಿನಂದನೆಗಳು.
ReplyDeleteಆತ್ಮೀಯ ಓದುಗ ಮಿತ್ರರೇ, ತಮ್ಮೆಲ್ಲರ ಸ್ಪಂದಿಸುವಿಕೆಗೆ ಸದಾ ತಲೆಬಾಗುತ್ತಿದ್ದೇನೆ. ಕಾರಣಾಂತರಗಳಿಂದ ಹಲವು ಬ್ಲಾಗ್ ಗಳಿಗೆ ಬರಲಾಗಲಿಲ್ಲ, ಶೀಘ್ರವೇ ಬರುತ್ತೇನೆ. ತಮ್ಮೆಲ್ಲರ ಈ ಪ್ರೀತಿ ವಿಶ್ವಾಸಕ್ಕೆ ಚಿರಋಣಿ.
ReplyDeleteಭಟ್ ಸಾರ್...
ReplyDeleteಕಷಾಯದ ಕವನ ನಿಜಕ್ಕೂ ಚೆನ್ನಾಗಿದೆ....
ಶ್ಯಾಮಲ
Kashaya andre henu anta keluvaga, nenapisidira.
ReplyDeleteChennagide.