ಜೀವ ಪರಿಧಿ
ಪರಿಧಿಯೊಳಗೆ ಅದರ ಹೊರಗೆ
ಪರಿಕಿಸುತ್ತ ಹಲವು ಬಗೆ
ಚರಿತೆಗಳನು ದಾಖಲಿಸುವ
ಅರಿವುಗೊಡದ ಶಕ್ತಿಯೇ
ಎಲುವಗೂಡು ಗೂಡಿನಲ್ಲಿ
ಚೆಲುವಿಗಾಗಿ ಚರ್ಮಮೆತ್ತಿ
ಒಲವೆನ್ನುವ ಭಾವಬೆಸೆದು
ನಲಿವು ತರುವ ಯುಕ್ತಿಯೇ ?
ಜಗದ ಜಾಗದಲ್ಲಿ ನಿಲಿಸಿ
ಯುಗದ ಧರ್ಮ ಅದಕೆ ಮಿಳಿಸಿ
ಹಗೆ ಅಹಂಕಾರ ಲೋಭ
ಹಗುರ ತೂರ್ವ ರೀತಿಯೇ ?
ಹಲವ ಕೊಟ್ಟು ಕೆಲವುಜನಕೆ
ಕೆಲವೂ ಕೊಡದೆ ಹಲವು ಜನಕೆ
ಅಲೆಯುವಂತೆ ಆಡಿಸುತ್ತ
ಬಲವ ಹರಿವ ಸೂಕ್ತಿಯೇ ?
ಪ್ರೀತಿಯೆಂಬ ಬೀಜನೆಟ್ಟು
ನೀತಿಯಿಂದ ಬಳ್ಳಿ ಬೆಳೆದು
ಆತುಕೊಂಡು ಬದುಕ ಮರವ
ಸೋತು ಬಿಡುವ ವ್ಯಾಪ್ತಿಯೇ ?
ಪರಮಾತ್ಮನನ್ನೇ ವ್ಯಾಖ್ಯಾನಕ್ಕೆ ಒಳಪಡಿಸುವ ಈ ಕವನ, ಪ್ರಪಂಚದ ರಹಸ್ಯವನ್ನೂ ವೀಕ್ಷಿಸುವ ಪ್ರಯತ್ನದಂತಿದೆ. ಸಂಕೀರ್ಣ ಭಾವವನ್ನು ಸರಳವಾದ ಸಾಲುಗಳಲ್ಲಿ ವ್ಯಕ್ತಪಡಿಸಿದ್ದೀರಿ.
ReplyDeleteಸುಂದರ ಸರಳ ಆಧ್ಯಾತ್ಮಿಕ ಕವನ.ನಮಸ್ಕಾರ.
ReplyDeleteನಿಮ್ಮ ಈ ಕವನದಲ್ಲಿ ವಾಸ್ತವಿಕತೆಯ touch ಇದೆ. ಚೆನ್ನಾಗಿದೆ.
ReplyDeleteಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು
ReplyDelete