ಚಪ್ಪರದ ಸಿಹಿ ನೆನಪು
ಮೊದಲ ದಿನ ಬರಿನೊಟ ಕಣ್ಣುಗಳ ಮಿಲನವದು
ಮನವ ತುಂಬಿತು ಹಸಿಹಸಿ ಸಿಹಿಯ ನೆನಪು
ಚಪ್ಪರದಿ ಕಂಡಿರುವ ಮುಗುಳು ನಗುವಿನ ಪಾತ್ರ
ಹೊತ್ತಿಸುತ ಸಾವಿರದ ದೀಪಗಳ ಹೊಳಪು
ಊಟ ಬಡಿಸುವ ನೆಪದಿ ಪಂಕ್ತಿಯಲಿ ನಡೆಯುತ್ತ
ಕಿಣಿಕಿಣಿರ ಸಣ್ಣ ಗೆಜ್ಜೆಯ ನಾದ ಮೆರೆದೂ
ಬಾಳೆಲೆಗೆ ಬಡಿಸಿದ್ದು ಏನಂತ ತಿಳಿದಿಲ್ಲ !
ಹೊಳೆವ ಆ ಚಂದ್ರಮನ ಮೊಗದ ನಗುವಿನೊಳು
ರಾಣಿಜೇನಿನ ಹಾಗೇ ಸುಯ್ಯನೇ ಸುಳಿಸುಳಿದು
ಅಲ್ಲಲ್ಲಿ ಕಂಡು ಕಾಣದೆ ಕಾಂಬ ಪರಿಯು
ಹೃದಯದಲಿ ನೂರೆಂಟು ವಾದ್ಯಗಳು ದನಿಮಾಡಿ
ತನದೆಂಬ ಹಕ್ಕು ಸ್ಥಾಪಿಸಲು ಹೊರಡುವೊಲು !
ಅದನೆನೆದು ಹಲವುದಿನ ನೂರಾರು ಕನಸುಗಳು
ತನ್ನ ಕೈಬೆರಳುಗಳ ಜೊತೆಜೊತೆಗೇ ಆಟ
ಮದುವೆ ಮುಗಿದರೂ ಅಲ್ಲಿ ಮುಗಿದಿಲ್ಲ ಮನದಲ್ಲಿ
ದಿನವೂ ಬಯಸುತ ಮತ್ತೆ ಚಪ್ಪರದ ನೋಟ !
sundara kavite.k.s.na.avara geetegalannu nenapisuttave.namaskaara.
ReplyDeleteits really good sir.and thanks for relighting emotions in me.
ReplyDeleteಉತ್ತಮ ಕಲ್ಪನೆ; ಉತ್ತಮ ಕವಿತೆ. ಅಭಿನಂದನೆಗಳು
ReplyDeleteರಾಣಿ ಜೇನಿನ ಜೇನು ನಿಮಗೆ ಸಿಗುತ್ತಲೇ ಇರಲಿ, ನಿಮ್ಮ ನೆನಪುಗಳು ಹಸಿರಾಗಿ ಉಳಿಯಲಿ!
ReplyDeletesir mysore malligeya nenapu banditu nimma kavite
ReplyDeleteಗುರುಗಳೆ,
ReplyDeleteರಾಜ ರವಿವರ್ಮನ ಚಿತ್ರದಂತೆ ನಿಮ್ಮ ಕವನದ ಸವಿಜೇನು ಸವಿದು ಮಧುರಾನುಭವವಾಯಿತು.
ಧನ್ಯವಾದಗಳು...
ಓದಿದ, ಪ್ರತಿಕ್ರಯಿಸಿದ ಎಲ್ಲರಿಗೂ ವಂದನೆಗಳು
ReplyDelete