ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, December 9, 2010

ಹನುಮನ ಸ್ವಗತ


ಹನುಮನ ಸ್ವಗತ

[ಈ ಕಾವ್ಯ ರಾಮಾಂಜನೇಯ ಯುದ್ಧದ ಸನ್ನಿವೇಶಕ್ಕೆ ಸಂಬಂಧಿಸಿದ್ದು. ವಿವರಣೆ ಬೇಕಾದರೆ ಬಲಭಾಗದಲ್ಲಿರುವ ಮಾಲಿಕೆಗಳ ಪೈಕಿ ’ಪುರಾಣದಲ್ಲಿಯ ಪೇಚಿನ ಪ್ರಸಂಗಗಳು’ ಮಾಲಿಕೆಯಲ್ಲಿರುವ ’ರಾಮಾಂಜನೇಯ ಯುದ್ಧ’ ಕೃತಿಯನ್ನು ಓದುವುದು]


ರಾಘವನ ನೋಯಿಸಲು ಮನಬಾರದೆಂದೂ ನಿಜ
ಆಗಲೀ ಹನುಮ ರಕ್ಷೆಗೆ ಒಪ್ಪಿ ನಡೆದು !
ಭೋಗಬಯಸದ ನನ್ನ ರಣದೊಳಗೆ ಕೆಡವಿದರೆ
ಯೋಗವದು ರಾಮಪಾದದಲಿ ಸಾಯುವುದು

ಯಾಗಯಜ್ಞವನರಿಯೆ ಪದವೊಂದೇ ತಿಳಿದಿಹುದು
ಕೂಗಿ ಕರೆದರೆ ಓಡಿ ಬರುವ ಶ್ರೀರಾಮ
ಆಘಳಿಗೆಯಲೆ ಕಳೆವ ಇಹದ ನನ್ನೆಲ್ಲ ದುಃಖ
ರಾಗದಲಿ ಭಜಿಸುವೆನು ಜಯರಾಮರಾಮ

ಆಗದದು ಶಕುಂತನನು ಬಿಡಲು ಈ ಕ್ಷಣದಿ
ಆಗಲೇ ಕೊಟ್ಟೆ ವಚನವನು ಅಮ್ಮನಿಗೆ
ಸಾಗಿಬಂದಾತನನು ಕರುಣೆಯಲಿ ಪೊರೆಯದಿರೆ
ಹಾಗೊಮ್ಮೆ ಬದುಕೇನುಫಲವು ಭವದೊಳಗೆ ?

ಬೇಗವೇ ನಡೆದಂಥ ಕಥೆಯೆನಗೆ ತಿಳಿದಿಹರೆ
ಸಾಗಹಾಕುತಲಿದ್ದೆ ಆ ಶಕುಂತನನು
ಮಾಗಿನಿಂತಾಮನದಿ ಕೈಮುಗಿದು ಬೇಡಿದನು
ಮಾಗಿಮಲ್ಲಿಗೆಯಿರಿಸಿ ಜೀವದಾನವನು

ಈಗ ಬರುವನು ರಾಮಚಂದ್ರ ಈ ಜಾಗದಲಿ
ತೂಗಿ ಬಿಡುವನು ಚಾಪವೆಳೆಯುತ್ತ ಬಾಣ
ಹೇಗಾದರೂ ಪ್ರಭುವೆ ನನ್ನೊಡೆಯ ರಕ್ಷಿಪುದು
ಹೋಗದಂತಿರಲಿ ಶಕುಂತನಾ ಪ್ರಾಣ


8 comments:

  1. tumbaa ollleya information

    naanu idannu odilla

    nimma blog galinda intha olleya vichaaragalu labhisuttave

    ReplyDelete
  2. ಶಕುಂತ ಪ್ರಾಣರಕ್ಷಣೆಗಾಗಿ ಹನುಮನಿತ್ತ ವಚನದ ಹಿನ್ನೆಲೆಯನ್ನು ಸ್ವಲ್ಪ ತಿಳಿಯಬೇಕಾಗಿತ್ತು.

    ReplyDelete
  3. ಸ್ವಾಮೀ ಸುನಾಥರೇ, ಅದು ಎಲ್ಲಿದೆಯೆಂದು ಮೇಲೆ ಬರೆದಿದ್ದೇನೆ, ಸ್ವಲ್ಪ ಹೊತ್ತಿನಲ್ಲಿ ಧ್ವನಿ ಹಾಕುತ್ತಿದ್ದೇನೆ, ತಾವು ಇನ್ನೊಮ್ಮೆ ಅದನ್ನು ಧ್ವನಿಯಲ್ಲಿ ಆಲಿಸುವಿರೇ ?

    ReplyDelete
  4. sir,
    dhvanimaalike wonderful...

    sir,
    nimma barevaNige shaktige salaam....

    ReplyDelete
  5. ಚೆನ್ನಾಗಿದೆ, ಭಟ್ಟರೇ

    ReplyDelete
  6. ಈ ಕಾವ್ಯದ ಸನ್ನಿವೇಶದ ಬಗ್ಗೆ ನನಗೆ ತಿಳಿದಿಲ್ಲ.. ಶಕುಂತ ಯಾರೆಂದೂ ನನಗೆ ತಿಳಿದಿಲ್ಲ.. ಇದರಿಂದ ತಿಳಿದುಕೊಳ್ಳಬೇಕೆನಿಸಿತು.. ಧನ್ಯವಾದಗಳು..

    ReplyDelete
  7. ಪ್ರದೀಪ್ ರಾವ್, ಈ ಕಾವ್ಯ ರಾಮಾಂಜನೇಯ ಯುದ್ಧದ ಸನ್ನಿವೇಶಕ್ಕೆ ಸಂಬಂಧಿಸಿದ್ದು. ವಿವರಣೆ ಬೇಕಾದರೆ ಬಲಭಾಗದಲ್ಲಿರುವ ಮಾಲಿಕೆಗಳ ಪೈಕಿ ’ಪುರಾಣದಲ್ಲಿಯ ಪೇಚಿನ ಪ್ರಸಂಗಗಳು’ ಮಾಲಿಕೆಯಲ್ಲಿರುವ ’ರಾಮಾಂಜನೇಯ ಯುದ್ಧ’ ಕೃತಿಯನ್ನು ಓದಿ ತಿಳಿದುಕೊಳ್ಳಿ, ಬರೆದಿದ್ದನ್ನೇ ಮತ್ತೆ ಬರೆದರೆ ಅದು ’ಸೈಬರ್ ಕ್ಲಾಗಿಂಗ್ ’ ರೀತಿ ಆಗಿ ಅನವಶ್ಯಕವಾಗಿ ಸರ್ವರ್ ಜಾಗ ತುಂಬುತ್ತದೆ ಎನಿಸಿ ಮತ್ತೆ ಹೊಸದಾಗಿ ಬರೆಯಲಿಲ್ಲ,

    ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು

    ReplyDelete