ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, November 13, 2010

’ನ್ಯೂ ಸಮ್ತಿಂಗ್ ಸ್ಪೆಶಲ್ಲು ’ !!



’ನ್ಯೂ ಸಮ್ತಿಂಗ್ ಸ್ಪೆಶಲ್ಲು ’ !!

ಹಳೆಯ ಮನೆಗೆ ಹೊಸಬಣ್ಣ
ಹಳೆಯ ಸಾಬೂನಿಗೆ ಪೌಡರ್ ಕ್ರೀಮ್
ಇತ್ಯಾದಿಗಳಿಗೆ ’ನ್ಯೂ ಇಂಪ್ರೂವ್ಡ್ ’ ಎನ್ನುವ
ಲೇಬಲ್ ಮಾಡಿಸಿದಾಗ ಅವು
ಮಾರಾಟವಾಗುವ ಜೋಶೇ ಬೇರೆ
ಅದರಲ್ಲಂತೂ ಇನ್ನೊಂದಷ್ಟು ರೇಟು ಜಾಸ್ತಿಮಾಡಿ
ಏನಾದರೂ ’ಫ್ರೀ’ ಎಂದುಬಿಟ್ಟರೆ ಸಾಕು !
ನಮಗೆ ಗೊತ್ತು ಜನರನ್ನು ಹೇಗಾದರೂ ಹಿಡೀಬೇಕು

ವ್ಯಕ್ತಿಯೊಬ್ಬನಿಗೆ ಹೇಳಿ ೧೦ ಕೀ.ಮೀ. ದೂರದಲ್ಲಿ
ದೋಸೆ ಕ್ಯಾಂಪ್ ಶುರುವಾಗಿದೆ ಒಂದಕ್ಕೊಂದು ಫ್ರೀ
ಖರ್ಚು ಹಾಕಿ ಬಸ್ಸಲ್ಲೋ ಗಾಡಿಯಲ್ಲೋ ಓಡುವ
ದಡ್ಡನನ್ಮಗನ್ನ ನೋಡಿ ನಗಬೇಕೋ ಅಳಬೇಕೋ ?

ಯಾರಿಗೋ ತಮಾಷೆಗೆ ಹೇಳಿದ್ದು
ಕಾಂಟೋನ್ಮೆಂಟ್ ಪೆಟ್ರೋಲ್ ಬಂಕಿನಲ್ಲಿ ವಾರ್ಷಿಕೋತ್ಸವ
೨ ಲೀಟರ್ ಪೆಟ್ರೋಲು ಫ್ರೀ ಆಗಿ ಕೊಡ್ತಾರಂತೆ ಅಂತ
ಗಾಡಿ ತೆಗೆದುಕೊಂಡು ಸೀದಾ ದೌಢಾಯಿಸಿದ

ಉದ್ದಿನ ಹಿಟ್ಟನ್ನು ವಡೆಯಾಕಾರದಲ್ಲಿ
ಕರಿದಾಗ ಅದು ಉದ್ದಿನ ವಡೆ ಉರುಟಾಗಿ
ಮುದ್ದೆ ಕಟ್ಟಿ ಕರಿದರೆ ಅದು ಉದ್ದಿನ ಬೋಂಡ
ಅದಕ್ಕೇ ನಿರ್ಧರಿಸಿಬಿಟ್ಟಿದ್ದೇನೆ ಇನ್ನುಮೇಲೆ
ಏನೇ ಬರೆಯಲಿ ಹಾಳೋ ಮೂಳೋ
ಹಲಸೋ ಮಾವೋ ಪೈನಾಪಲ್ಲೋ
ಮೇಲ್ಗಡೆ ಒಂದು ಲೇಬಲ್ ಹಾಕಿಬಿಡುತ್ತೇನೆ
’ನ್ಯೂ ಸಮ್ತಿಂಗ್ ಸ್ಪೆಶಲ್ಲು ’ ಎಂದು
ಹೊಸ ರುಚಿಯವರು ಹಳೆರುಚಿಯವರು
ಮರ್ಯಾದಸ್ತರು ಮಾಮಲೇದಾರರು
ಹೆಣ್ ಹೆಂಗಸ್ರು [ಕ್ಷಮಿಸಿ ಗಂಡ್ ಹೆಂಗಸ್ರು ಇದ್ದಾರೋ ಇಲ್ವೋ ಗೊತ್ತಿಲ್ಲ !]
ಸಣ್ ಮಕ್ಳು ಎಲ್ಲಾ ಮುಕರ್ಕೊಂಡ್ ಕೂತ್ಗೊಂಡು
ಓದಿದ್ದೇ ಓದಿದ್ದು ಓದಿದ್ದೇ ಓದಿದ್ದು !

*
ಒಂದಷ್ಟ್ ಅಂಥದ್ನೆಲ್ಲಾ ಅಚ್ಚಾಕ್ಸಿ
ಪೇಟೇ ಚೌಕದಲ್ಲಿ ಒಬ್ಬನ್ ನಿಲ್ಲಸ್ಬುಡ್ತೀನಿ
’ಅರೇ ಒಂದಕ್ಕೊಂದ್ ಫ್ರೀ ಇಲ್ಲಿ ಒಂದಕ್ಕೊಂದ್ ಫ್ರೀ’ ಅಂತ
ಕೂಗ್ಕೋತ ಮಾರ್ಬುಡು ಒಂದಷ್ಟ್ ದುಡ್ ಬರಲಿ
ರಾಜ್ಕೀಯ ಸೇರ್ಕಂಡು ಹಾಯಾಗಿದ್ಬುಡೋದು
ಈ ಬರ್ಯೋದೆಲ್ಲಾ ಯಾರಿಗ್ಬೇಕು ಅಲ್ವೇ ?

*conditions apply

4 comments:

  1. ಯಾಕೋ ಖರ್ಚು ಆಗೋಲ್ಲಾ ಅನಿಸ್ತಾ ಇದೆ....

    ReplyDelete
  2. ಹ ಹ ಚೆನ್ನಾಗಿದೆ ಭಟ್ರೆ , ಎಲ್ಲದಕ್ಕೂ ಒಂದೊಂದು ಫ್ರೀ ಬಿಗ್ ಬಜಾರ್ ನಲ್ಲಿ ಮೆಗಾ ಮಾರ್ಟ್ ನಲ್ಲಿ ಒಂದಕ್ಕೊಂದು ಫ್ರೀ ,ಕೆಲವರು ಮದ್ವೆ ಆದ್ರೆ ಹೆಂಡತಿಯ ತಾಯಿ (ಅತ್ತೆ ಮಗಳ ಮನೆಯಲ್ಲೇ) ಫ್ರೀ , ನೋಡೋಣ ಅಕ್ಕನ್ನ ಮದುವೆ ಆದರೆ ತಂಗಿ ಫ್ರೀ ಎನ್ನುವ ಕಾಲವು ಬರಬಹುದು .

    ReplyDelete
  3. ಸ್ವಾಮಿ, ನಮಗೆ ಸಂಥಿ೦ಗ್ ಸ್ಪೆಷಲ್ ಬೇಡ, ಭಟ್ರ ಒರಿಜಿನಲ್ ಬ್ರಾ೦ಡ್ ಸಾಹಿತ್ಯ ಬೇಕು. ಒ೦ದಕ್ಕೊ೦ದು ಫ್ರೀ ಇಟ್ರು ನಾವು ತಗೋಳೋದಿಲ್ಲ.

    ReplyDelete
  4. ತಮಾಷೆಯ ಈ ಬರಹಕ್ಕೆ ಪ್ರತಿಕ್ರಿಯಿಸಿದವರಿಗೂ ಓದಿದವರಿಗೂ ಅನಂತ ಧನ್ಯವಾದಗಳು

    ReplyDelete