ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, November 12, 2010

ಹಾಲುಗೆನ್ನೆ ಸುಂದರಿ

ರಾಜಾರವಿವರ್ಮ ಕೃತ ಚಿತ್ರಕೃಪೆ: ಅಂತರ್ಜಾಲ

ಹಾಲುಗೆನ್ನೆ ಸುಂದರಿ

ಹಾಲುಕೊಡಲು ಬಂದ ಅವಳು
ಬಹಳ ಹೊತ್ತು ಇರಲಿ ಎಂಬ
ಬಯಕೆಯಿಂದ ಬೊಗಸೆಕಂಗಳನ್ನೇ
ನೋಡುತಿದ್ದೆನು !

ಗಾಳಹಾಕಿ ಎಳೆದಳಲ್ಲ
ಮಾಯದಲ್ಲಿ ಅರಿವಗೊಡದೇ
ಗಾಯವಾಯ್ತು ಎದೆಯಲೆಲ್ಲೋ
ಕಾಣದಾಗಿದೆ !

ಎಂಥನಗುವಿನಪ್ಸರೆಯು
ಮಿಂಚಿ ಹಲ್ಲು ತುಸುವೇ ಸಮಯ
ಹೊಂಚುಹಾಕಿ ಎಸೆದಳೇನು

ತನ್ನ ಬಾಣವೆನ್ನೆಡೆ ?

ಜಕಣ ಶಿಲ್ಪಿ ಕಡೆದ ಮೂರ್ತಿ !
ಜತನಮಾಡಿಕೊಳಲು ನನಗೆ
ಅತಿಶಯದಾನಂದ ತರಲು
ಆಕೆ ಬರುವಳೇ ?

ಬೇಕು’ ’ಬೇಕುಎಂಬ
ಒಳಗಿನಾಸೆ
ಹೊರಟು ಜಾಸ್ತಿಯಾಗಿ
ಹೇಳಿಬಿಡುವೆನೆಂದು ನಡೆಸಿ
ತಾಲೀಮು ಪುನರಪಿ

ಕಾಲ ಕೂಡಿ ಬರುವುದಿತ್ತು
ಹಾಲು-ಮೊಸರು ಉಂಡುಬೆಳೆದ
ಹಾಲಗೆನ್ನೆಯಂಥ ಚಲುವೆ
ಪಡೆಯಲವಳನು

ನಾನು ಧೈರ್ಯ ಮಾಡಲಿಲ್ಲ
ಆಕೆಯಾಗಿ ಹೇಳಲಿಲ್ಲ
ಆಡದೆಯೇ ಹೋದ ಮಾತು
ಕಣ್ಣೊಳಿದ್ದವು !

ಬಾಳನೌಕೆಯಲ್ಲಿ ನಾನು
ಅವಳ ಜತೆಗೆ ಕೂತುಕೊಂಡು
ಭಾವಯಾನ ಮೌನದಲ್ಲಿ
ನಡೆಯುತಿದ್ದಿತು

ಹಾಲು ಚೆಲ್ಲಿ ನೆಲಕೆ ಅರ್ಧ
ಕಾಲು ತುಳಿದೆನೆಂದು ಹೆದರಿ
ನೀಲಿಕಣ್ಣ ಬೆಡಗಿ ಜಾರಿ
ತೋಳ ತೆಕ್ಕೆಗೆ

’ಏಳು ಮಗನೇ ತಾಯ ಕರೆಗೆ
ಧಿಮ್ಮನಿಳಿದು ಕನಸಹೊರಗೆ
ಆಲಿಕಲ್ಲ ಮಳೆಯ ನೆನೆದು
ಮನವು ನಲಿಯಿತು !

6 comments:

  1. ಭಟ್ರೇ, ಏನು ಸ್ವಾಮಿ ನಿಮ್ಮ ಕಥೆ? ರಸಿಕತೆ ಜಾಸ್ತಿ ಆಗ್ತಾ ಇದೆ. ಚೆನ್ನಾಗಿದೆ.

    ReplyDelete
  2. ಸುಂದರವಾದ ವರ್ಣನೆ . ಕವಿತೆಯಲ್ಲಿ ರಸಿಕತೆ ಧುಮ್ಮಿಕ್ಕುತಿದೆ

    ಬನ್ನಿ ನನ್ನವಳಲೋಕಕ್ಕೆ ಒಮ್ಮೆ .......
    SATISH N GOWDA

    ReplyDelete
  3. ಕನಸು ಭಂಗವಾದದ್ದು ಬಹಳ ಬೇಸರವಾಗಿರಬಹುದು. ಕಲ್ಪನೆ ಮತ್ತು ವರ್ಣನೆ ಚೆನ್ನಾಗಿದೆ.

    ReplyDelete
  4. ಭಟ್ ಸರ್;ಅದ್ಭುತ ಶೃಂಗಾರ ಕಾವ್ಯ!'ಹಾಲು ಕೊಡುವವಳಿಗೆ ಕನಸಿನಲ್ಲೇ ನೀವು ಮನಸ ಕೊಟ್ಟಿರಿ!ಹಾಲಿನೊಡನೆ ಜೇನು ಬೆರೆತ ಕವನ ಕೊಟ್ಟಿರಿ!'.

    ReplyDelete
  5. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು

    ಹೊಸದಾಗಿ ಬ್ಲಾಗಿಗೆ ಲಿಂಕಿಸಿಕೊಂಡ ಪ್ರಕಾಶ್ ಶೆಟ್ಟಿಯವರಿಗೆ ಸ್ವಾಗತ ಹಾಗೂ ನಮನ

    ReplyDelete
  6. ಸ್ವಲ್ಪ ಗೊಂದಲವೆನಿಸಿತು.
    ಎರೆಡೆರಡು ಸಲ ಓದಿದೆ.
    ಆದರೂ ರಸಿಕತೆ ತುಂಬಿದ್ದರಿಂದ ಮುದವೆನಿಸಿತು.

    ReplyDelete