ಮುಸಲಧಾರೆ
ಏನಿದೀ ಅಬ್ಬರದ ಕಾರ್ಮೋಡ ಕರಗಿರಲು
ಲಕ್ಷಣವ ತೋರ್ಗೊಡದ ಮುಸಲಧಾರೆ ?
ಭೂಮಿಯಾಕಾಶಗಳ ಬೆಸೆದಂತೆ ನೆಟ್ಟಿರುವ
ತಂತಿ ರೂಪದ ಮಳೆಯ ಧಾರೆ ಧಾರೆ
ಸೃಷ್ಟಿ ಕಟ್ಟಳೆಯಂತೆ ವರುಣ ಭೋರ್ಗರೆದಂತ
ಪ್ರಕೃತಿ ವಿಸ್ಮಯ ರೂಪ ಜಲಲಧಾರೆ !
ಅಷ್ಟದಿಕ್ಕುಗಳಲ್ಲು ಮೋಡಗಳು ಮೇಳೈಸಿ
ಒತ್ತಟ್ಟಿಗೇ ಸುರಿದ ತಂಪುಧಾರೆ
ಇಂದ್ರಸಭೆಯಲಿ ಕೋಪಗೊಂಡ ದೇವೇಂದ್ರನ
ಶಾಪಕೀಡಾದ ಅಪ್ಸರೆಯರತ್ತರೇ?
ಚಂದ್ರಲೋಕದ ಕಾಣದಾ ಜೀವರಾಶಿಗಳು
ಕೂಪಗಳ ಮಡಿಲಿಂದ ಹರಿಬಿಟ್ಟರೇ ?
ಗುಡುಗಿನಬ್ಬರ ಕೇಳಿದಾಗೊಮ್ಮೆ ಅನಿಸುತಿದೆ
ಗಡಬಡಿಸಿ ಮೇಲ್ಯಾರೋ ಓಡಿದಂತೆ !
ಬಡಗುದಿಕ್ಕಲಿ ಸೆಳೆ ಮಿಂಚೊಮ್ಮೆ ಮಿಂಚಿರಲು
ಬೆಳಗೋ ಬೈಗೋ ಸಮಯ ಅರಿಯದಂತೆ !
ಭುವಿಯ ಲಿಂಗವಮಾಡಿ ಆಗಸದ ಪಾತ್ರೆಯಿಂ
ಅಭಿಷೇಚಿಸಿದ ದೇವತೆಗಳದಾರು ?
ಭವದ ಜಗಗುಡಿಯಲ್ಲಿ ಭಕ್ತಿಯರ್ಪಿಸಬಂದ
ಮಹಶೇಷ ರೊಪಿಗಳೇ ಅವರಿದ್ದಾರು !
ಯಾವ ಕೆಲಸಕೊ ತೃಪ್ತಿಗೊಂಡಿರುವ ದೇವತೆಗಳ್
ಭಾವಪೂರಿತವಾಗಿ ಭಾಷ್ಪವಿಳಿಸಿದರೇ ?
ಹಾವಭಾವಗಳನ್ನು ತೋರ್ಗೊಡಿಸಲೀಜಗಕೆ
ಜಾವದಲೇ ದನಿಮಾಡಿ ಮಿಂಚುತಿಹರೇ ?
ಭಟ್ ಜೀ,
ReplyDeleteನಿಮ್ಮ ಕಾವ್ಯ ಸೃಷ್ಟಿ ವರ್ಷಧಾರೆಯ೦ತೆಯೇ ಭೋರ್ಗರೆಯುತ್ತಾ ಸುರಿದಿದೆ. ಬಳಕೆಯಾದ ಉಪಮೆಗಳು ಚೆನ್ನಾಗಿವೆ. ನಾನು ಕೂಡ ಮಳೆಯ ಬಗೆಯಲ್ಲಿಯೇ ಒ೦ದು ಕವನ ಬರೆಯುವವನಿದ್ದೆ. ಒ೦ದಷ್ಟು ಬರೆದೆ, ಆಷ್ಟರಲ್ಲಿ ಬೇರೇನೋ ಕೆಲಸದ ಒತ್ತಡದಿ೦ದ ಹೊರ ಹೋಗಬೇಕಾಯ್ತು, ಹಾಗಾಗಿ ಅದು ಅಲ್ಲಿಗೆ ನಿ೦ತಿತು. ಅದು ಹೀಗಿದೆ ನೋಡಿ.
ಹಗಲಲಿ ಬಿಸಿಲ ಧಗೆಗೆ ಕಿತ್ತು ಬರುವ ನೊಸಲಧಾರೆ
ಸಂಜೆ ಮುಗಿಲು ಹರಿದು ಸುರಿವ ಮುಸಲಧಾರೆ
ರಸ್ತೆ,ಚರ೦ಡಿ ತಗ್ಗು ಜಾಗಗಳೆಲ್ಲ ಜಲಾವೃತ
ದೃಶ್ಯ-ಶ್ರವ್ಯ ಮಾಧ್ಯಮಗಳಲಿ ಮಳೆಯದೇ ಕಥಾಮೃತ
ಭಟ್ರೆ ತುಂಬ ಸೊಗಸಾದ ಉಪಮೆಗಳ ಆದರೆ ಉಪಮಾತೀತ ಕವಿತೆ
ReplyDeleteನಾ ಮನೆಗೆ ಬಂದಮೇಲೆ (ನಿನ್ನೆ) ಮಳೆ ಜೋರಾಯಿತು ಟಿವಿ ಯಲ್ಲಿ ನೋಡುತ್ತಿದ್ದೆ ಅದೇಕೋ ಮಳೆರಾಯ ಮುನಿದಿದ್ದ
ಬಹಳ ಮುತವರ್ಜಿಯಿಂದ ಹೆಣೆದ ಕವನ ಭಟ್ಟರೇ. ರಾತ್ರಿ ಬೆಂಗಳೂರು ಕಂಡ ಮಳೆ ಅತೀ ಘೋರ. ನಿನ್ನೆ ರಾತ್ರಿ ನನಗೂ ಕಾರು ಗುದ್ದಿ ಚಿಕ್ಕ ಆಕ್ಸಿಡೆಂಟ್ ಆಯಿತು.
ReplyDeleteಕನ್ನಡ ಕವನದ ಎಲ್ಲ ರೂಪಗಳಲ್ಲೂ ಎಷ್ಟು ಚೆನ್ನಾಗಿ ಬರೆಯುತ್ತೀರಿ, ಭಟ್ಟರೆ! ಇದು ನಿಜವಾಗಿಯೂ ಕಾವ್ಯಧಾರೆ.
ReplyDeleteಗುರುಗಳೆ,
ReplyDeleteನಿಮ್ಮ ಕಾವ್ಯದ ವರ್ಷಧಾರೆಯ ಸೋನೆಮಳೆಯಲ್ಲಿ
ನೆನೆಯುವುದೇ ಒಂದು ಸೊಬಗು
ಬೇರೆ ಇನ್ನೆನು ಬೇಕು ಸುಖ ಸಂತೋಷ
ನೆಮ್ಮದಿಯ ಬಿನ್ನಾಣ ಬೆಡಗು?
ಹೇಳಲು ಪದಗಳೇ ಇಲ್ಲ. ಸೂಪರ್........
Very nice..
ReplyDeleteಶ್ರೀ ಪರಾಂಜಪೆ, ತಾವು ಬರೆದ ಹಾಡಿನ ಭಾಗ ಕೂಡ ಬಹಳ ಹಿಡಿಸಿತು.ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೂ ಅಭಿನಂದನೆಗಳು ಮತ್ತು ಅಭಿವಂದನೆಗಳು
ReplyDeleteWelcome to Sunil, thanks for following.
ReplyDeletesuper kavana...
ReplyDeleteThanks Magesh Sir.
ReplyDelete,ಮಳೆಯನ್ನೂ ಹೀಗೂ ವರ್ಣನೆ ಮಾಡಬಹುದೇ..
ReplyDeleteಬರಿದ್ರ ಬರೀಬೇಕು ನಿಮ್ಹಾಂಗ..
ನಿಮ್ಮನ್ನು ಹೊಗಳಲು ನನಗೆ ಶಬ್ಧದಾರಿದ್ರ್ಯ ಇದೆ..
Thanks, hogala bedi Guruprasad !
ReplyDeleteಅದ್ಭುತ ವಿನೂತನ ಹೋಲಿಕೆ ಮತ್ತು ಕಲ್ಪನೆ. ಜೈ ಹೋ!
ReplyDeleteTHANKS
ReplyDeleteBhatre,
ReplyDeleteTumbaa chennagide...