ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, August 16, 2010

ದೈವದೊಡನೆ ವಾಗ್ವಾದ !


ರಾಜಾ ರವಿವರ್ಮ ರಚಿತ ಚಿತ್ರ ಕೃಪೆ : ಅಂತರ್ಜಾಲ

ದೈವದೊಡನೆ ವಾಗ್ವಾದ !


ನೀನು ಮೋಹಿನಿಯಾಗು ಮೋಹಿಸುವೆ ನಿನ್ನನ್ನೇ
ಜಗವನಾಳುವ ಶಕ್ತಿಯೇ
ನಾನು ಭಸ್ಮಾಸುರನೇ ಆದರೂ ನೋವಿಲ್ಲ
ಕಾಣಲು ನಿನ್ನನೊಮ್ಮೆ !

ಕಾಮ ಕ್ರೋಧ ಲೋಭ ಮದಮತ್ಸರಗಳಿಟ್ಟು
ಭುವಿಯ ಗೂಡಿಗೆ ದೂಡಿದೇ
ನಾಮಬಲದಿಂದಲೇ ನಿನ್ನನ್ನು ಸೋಲಿಸುವೆ
ರವಿಯಾಣೆ ತಡಮಾಡದೇ

ಕಾಮಿನಿಯು ನೀನಾಗು ಕಾಮಾಂಧ ನಾನಾಗಿ
ಕಾಮಿಸುತ ಮುಕ್ತಿ ಪಡೆವೆ
ನೇಮನಿಷ್ಠೆಗಳೆಲ್ಲ ಅನುಸರಿಸಲವು ಕಷ್ಟ
ಪ್ರೇಮಿಸುತ ಇದ್ದು ಬಿಡುವೆ !

ಲೋಭಿಯು ನೀನಾಗೆ ಮಗನಾಗಿ ನಾ ಜನಿಸಿ
ಮದವೇರಿ ಮದ್ದರೆಯುವೆ !
ಲಾಭನನಗದು ಖಾತ್ರಿ ನಿನಗೇಕೆ ಮತ್ಸರವು ?
ನಾಭಿಯಿಂದಲೆ ಕೋಪವೇ ?

ತಂಪು ಗಾಳಿಯು ನಿನ್ನ ಮೈಯ ಕಂಪನು ತಂತು
ಸೊಂಪಾಯ್ತು ಮನವು ಹಿಗ್ಗಿ
ಕೆಂಪಾಯ್ತು ಈ ಕಣ್ಣು ಭಾರವಾಗುತ ಎದೆಯು
ನೀ ಕಾಣದಿರಲು ಕುಗ್ಗಿ !

14 comments:

  1. ತುಂಬಾ ಚೆನ್ನಾಗಿದೆ ಭಟ್ಟರೆ
    ಕಾಮ ಕ್ರೋಧ ಲೋಭ ಮದಮತ್ಸರಗಳಿಟ್ಟು
    ಭುವಿಯ ಗೂಡಿಗೆ ದೂಡಿದೇ
    ನಾಮಬಲದಿಂದಲೇ ನಿನ್ನನ್ನು ಸೋಲಿಸುವೆ
    ರವಿಯಾಣೆ ತಡಮಾಡದೇ

    ಕಾಮಿನಿಯು ನೀನಾಗು ಕಾಮಾಂಧ ನಾನಾಗಿ
    ಕಾಮಿಸುತ ಮುಕ್ತಿ ಪಡೆವೆ
    ನೇಮನಿಷ್ಠೆಗಳೆಲ್ಲ ಅನುಸರಿಸಲವು ಕಷ್ಟ
    ಪ್ರೇಮಿಸುತ ಇದ್ದು ಬಿಡುವೆ !

    ಖಂಡಿತ ಈ ತರಹದ ವಾಕ್ಯ ರಚನೆ , ಆಲೋಚನೆ , ನನಗೆ ಯೋಚಿಸಲೂ ಬರುವುದಿಲ್ಲ .

    ReplyDelete
  2. ha... chennagide sir... entaha alochanegaLu nimmali saalugaLu tumba chennagive

    ReplyDelete
  3. ಚಿತ್ರದೊಳಿರ್ಪ ಭಾವುಕತೆಯನ್ನು ನಿಮ್ಮ ಕವನದಲ್ಲಿ ಹೀಗೂ ಹಿಡಿದಿಡುವ ನಿಮ್ಮ ಸಾಹಿತ್ಯ ಶಕ್ತಿಗೆ ನಮೋನಮಃ.

    ReplyDelete
  4. ಪ್ರತೀ ಸಾಲೂ ಮತ್ತೆ ಮತ್ತೆ ಓದುವ೦ತಿದೆ. ತು೦ಬ ಚೆಂದ ಇದೆ ಮಾರಾಯ್ರೇ.

    ReplyDelete
  5. ರವಿವರ್ಮನ ಚಿತ್ರಗಳು ನಿಮ್ಮ ಮಧುರ ಕಾವ್ಯಕ್ಕೆ ಪ್ರೇರಣೆಯಾಗಿರುವದರಿಂದ,ಆ ರವಿವರ್ಮನಿಗೇ ನಾವು ಥ್ಯಾಂಕ್ಸ ಹೇಳಬೇಕು!

    ReplyDelete
  6. ಸರ್

    ಎಂಥಹ ಒಳ್ಳೆಯ ಯೋಚನೆ

    ದೇವಿ ಯೊಡನೆ ವಾಗ್ವಾದ

    ಎಲ್ಲ ಸಾಲುಗಳಿಗೂ ಬಹಳಷ್ಟು ಅರ್ಥ ಇದೆ

    ReplyDelete
  7. ವಿ.ಆರ್.ಭಟ್ ಅವರೇ,
    ಅದ್ಭುತವಾಗಿದೆ ಕವನ. "ಕಾಮಿಸುತ ಇದ್ದುಬಿಡುವೆ" ಎಂದರೆ ಕಾಮದಲ್ಲೂ ಭಗವಂತನನ್ನು ಕಾಣುವ ಹಂಬಲ ಎಂದು ಅರ್ಥೈಸಿಕೊಂಡೆ. ಶಿವ ಶಿವೆಯರ ಸಂಗಮದಷ್ಟೇ ಪವಿತ್ರ ಸಂಗಮದಿಂದ ಭಗವಂತನನ್ನು ತಲುಪಬಹುದಲ್ಲ್ಲವೇ,, ತಮ್ಮ ಸಾಲುಗಳನ್ನು ನಾನು ಅರ್ಥೈಸಿಕೊಂಡಿದ್ದು ಸರಿಯಾ?

    ReplyDelete
  8. Bhatre.....

    nimma Blog ge modala baari barta irodu...ella haleya postgalannu odta iddini...tumbaa adbhuta kavana....Thank u.....

    ReplyDelete
  9. ಲೋಭಿಯು ನೀನಾಗೆ ಮಗನಾಗಿ ನಾ ಜನಿಸಿ
    ಮದವೇರಿ ಮದ್ದರೆಯುವೆ !
    ಲಾಭನನಗದು ಖಾತ್ರಿ ನಿನಗೇಕೆ ಮತ್ಸರವು ?
    ನಾಭಿಯಿಂದಲೆ ಕೋಪವೇ ?
    ಸುಂದರ ಸಿಟ್ಟು ಸರ್ ಇದು..... ತುಂಬಾ ಚೆನ್ನಾಗಿದೆ....

    ReplyDelete
  10. * ಶ್ರೀ ವೆಂಕಟೇಶ್, ತಾವು ಪ್ರತೀ ಸಾಲು ಚೆನ್ನಾಗಿದೆ ಅಂದಿರಿ, ಕವನದಲ್ಲಿ ಸ್ವಾರಸ್ಯ ಇರಲೇಬೇಕಲ್ಲ ? ತಮಗೆ ನಮನಗಳು

    * ಸುಗುಣ ಮೇಡಂ ತಮ್ಮ ಅಭಿಪ್ರಾಯ ಕೂಡ ಹಾಗೆ ಇದೆ, ನಮಸ್ಕಾರಗಳು

    * ಮಾನಸ ಮೇಡಂ, ತಮಗೆ ಸ್ವಾಗತ ಮತ್ತು ನಮನಗಳು

    * ಶ್ರೀ ಸುಬ್ರಹ್ಮಣ್ಯ, ತಮ್ಮ ಅನಿಸಿಕೆಗೆ ಬಹಳ ಆಭಾರಿ

    * ಶ್ರೀ ಪ್ರತೀ ಸಾಲನ್ನೂ ಮತ್ತೆ ಓದುವಷ್ಟು ಚೆಂದ ಇದೆ ಅಂದು ನನ್ನ ಜವಾಬ್ದಾರಿ ಇನ್ನೂ ಸ್ವಲ್ಪ ಜಾಸ್ತಿ ಮಾಡ್ದ್ರಿ, ಕೃತಜ್ಞತೆಗಳು

    * ಶ್ರೀ ಸುಧೀಂಧ್ರರೇ, ಅಸಲಿಗೆ ನಾನು ಕಾವ್ಯ ಮೊದಲು ಬರೆದು ಆಮೇಲೆ ಚಿತ್ರ ಹುಡುಕುತ್ತೇನೆ [ಗುಟ್ಟು ನಿಮ್ಮಲ್ಲೇ ಇರ್ಲಿ! ] ಹಲವು ನೆನಕೆಗಳು

    * ಶ್ರೀ ಗುರುಮೂರ್ತಿ, ದೆವಿಯೋದನೆ ಅಂತ ಅಲ್ಲ, ದೆವಿಯೋ ದೇವನೋ ಗೊತ್ತಿಲ್ಲ! ನೀ ದೇವಿ ಮೋಹಿನಿಯಾಗಿ ಬಾ ಎಂಬ ಸಂದೇಶ, ಧನ್ಯವಾದಗಳು

    * ಸಾಗರಿ ಮೇಡಂ, ತಮಗೆ 'ಕಾಮ' ಎಂಬ ಶಬ್ಧ ಉಪಯೋಗಿಸಿದ್ದಕ್ಕೆ ಕೋಪವೇಕೆ ? ಅದನ್ನು ಸಾದಸೀದಾ ಆಗಿ ತೆಗೆದುಕೊಳ್ಳಿ, ಎಲ್ಲರೂ ಕಾಮುಕರಾಗಿ ಇರುವುದಿಲ್ಲವಲ್ಲ, ಶ್ರೀಕೃಷ್ಣನನ್ನು ಹಲವು ಗೋಪಿಕೆಯರು ಕಾಮಿಸಿದರಂತೆ, ಭಕ್ತಿಯಿಂದ ಆಟ ದೇವರೆಂದು ತಮ್ಮನ್ನೇ ಅರ್ಪಿಸಿಕೊಂಡರಂತೆ, ಅದೇ ರೀತಿ ಭಕ್ತಿಯಿಂದ ನಾವು ಕಾಮದ ಪ್ರಕ್ರಿಯೆಯನ್ನೇ ನಡೆಸಿದರೂ ಅದು ನಮ್ಮ ಮನಸ್ಸಲ್ಲಿ ಕಾಮ ತುಂಬಿರದೆ ಭಕ್ತಿ ತುಂಬಿದ್ದಾಗ ಉತ್ಕೃಷ್ಟವಾಗಿ ಕಾಣುತ್ತದೆ, ಆ ಭಕ್ತಿಯ ಪರಾಕಾಷ್ಟೆಯಲ್ಲೂ ದೇವರನ್ನು ಕಾಣಬಹುದಾಗಿದೆ, ಹೀಗಾಗಿ ಕಾಮಿಸುತ ನಿನ್ನ ಪಡೆವೆ ಎಂದಿದ್ದೇನೆ, ತಮಗೆ ನಮನಗಳು

    * ಶ್ರೀ ಕೊಡ್ಲಾಡಿ ಅಶೋಕ ಶೆಟ್ಟರೇ, ತಮಗೆ ಸ್ವಾಗತ, ತಮ್ಮ ಪ್ರತಿಕ್ರಿಯೆಗೆ ಬಹಳ ಆಭಾರಿ

    * ಶ್ರೀ ದಿನಕರ್, ದೇವರಲ್ಲಿ ಇನ್ಯಾವ ರೀತಿ ಸಿಟ್ಟು ತೋರಲು ಸಾಧ್ಯ ಹೇಳಿ, ತಮಗೆ ಆ ಸಿಟ್ಟು ಹಿಡಿಸಿತಲ್ಲ, ಧನ್ಯವಾದಗಳು

    ಓದಿದ ಎಲ್ಲಾ ಮಿತ್ರರಿಗೂ ಅಭಿವಂದನೆಗಳು

    ReplyDelete