ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, August 6, 2010

ರಿಕವರಿ ರೌಡಿಸಂ !

ಕಲ್ಪನೆಗಾಗಿ ಬಳಸಿದ ಚಿತ್ರ ಋಣ : ಅಂತರ್ಜಾಲ

ರಿಕವರಿ ರೌಡಿಸಂ !

[ಈ ಹಾಡಿನಲ್ಲಿ ಛಂದಸ್ಸು ಮತ್ತು ವ್ಯಾಕರಣ ಗಣನೆಗೆ ತರವಲ್ಲ, ಇದು ಕೇವಲ ತಮಾಷೆಗಾಗಿ !]

ಮಲ್ಟಿನ್ಯಾಷನಲ್ ಬ್ಯಾಂಕಿನವರು
ಪಲ್ಟಿಹೊಡೆದು ಗಿರಾಕಿ ಕರೆದು
ಉಲ್ಟಾ ಸೀದಾ ಮಾತನಾಡಿ ಹೆದರಿಸಿದ್ದರು
ಗಿಲ್ಟಿಮನದ ಬಡವನವಗೆ
ಸಿಲ್ಟು ಇರದ ಮನಸಿನವಗೆ
ಅಲ್ಟಿಮೇಟು ಡೇಟುಕೊಟ್ಟು ಕಳಿಸಿಬಿಟ್ಟರು

ಡೇಟು ಮುಗಿದು ಹೋದರವಗೆ
ದಾಟಿಬರಲು ಆಗಲಿಲ್ಲ
ಊಟಕುಂಟು ಆಟಕಿಲ್ಲ ಅವನ ಜನರಿಗೆ
ಪಾಠಮಾಡುತಿದ್ದ ಮೇಷ್ಟ್ರು
ಪಾಟಿಯಲ್ಲಿ ಬರೆಸುತಿದ್ರು
’ಕಾಟಖಚಿತ ಸಾಲವೆಂಬ ಶೂಲ ಪಡೆದಗೆ’ !

ಮ್ಯಾನೇಜರು ಪ್ಲಾನು ಮಾಡಿ
ಟೀನೇಜಿನ ಟೀಮು ಕರೆದು
ನೀವೇ ವಸೂಲಿಮಾಡಿ ತನ್ನಿರೆಂದರು
ನಾವೇ ಜನ ಹೊರಟೆವೀಗ
ಕಾವೇರಿದೆ ಬಿಡುವುದಿಲ್ಲ
ಸಾವಾದರು ಸರಿಯೆ ಬಡಿದು ತರುವೆವೆಂದರು

ಗುಂಡು ತುಂಡು ಸೇರಿಕೊಂಡು
ಚೆಂಡು ಬುಗುರಿಯಾಡುವಾಗ
ಚಂಡ ಭೈರನೆದ್ದು ಒಮ್ಮೆ ಗುಟುರುಹಾಕಿದ
ಮಂಡೆಬಿಸಿ ಮಾಡಿಕೊಂಡ
ಪಾಂಡುರಂಗ ಪರಮ ತಾನು
ಉಂಡು ಉಡದೆ ಉಟ್ಟು ಉಣದೆ ಹಣವ ಕಟ್ಟಿದ !

13 comments:

  1. ಧನ್ಯವಾದ ಶ್ರೀ ವಸಂತ್

    ReplyDelete
  2. ಕವನ ಚೆನ್ನಾಗಿದೆ ಸರ್.

    ReplyDelete
  3. ಧನ್ಯವಾದಗಳು ಸರ್

    ReplyDelete
  4. ಇಂಗ್ಲಿಶ್ ಹಾಗು ಕನ್ನಡ ಸೇರಿಸಿದ ಈ ಭಾಮಿನಿ ಷಟ್ಪದಿ ತುಂಬಾ ಮಜವಾಗಿದೆ.

    ReplyDelete
  5. ಭೋಗ ಷಟ್ಪದಿಯ ಸ್ವಲ್ಪ ವಿರೂಪದಲ್ಲಿರುವ ಇದು ಹಾಡಿಕೊಳ್ಳಲು ಮಜವಾಗಿರುತ್ತದೆ, ಶ್ರೀ ಸುಧೀಂಧ್ರರೇ ತಮಗೆ ಧನ್ಯವಾದಗಳು

    ReplyDelete
  6. ನಿಮ್ಮ ಕ೦ಗ್ಲೀಶ್ ಷಟ್ಪದಿ ಸೂಪರ್ ಆಗಿದೆ. ನನಗೂ ಈ format ನಲ್ಲಿ ಬರೆಯಲು ಹುಮ್ಮಸ್ಸು ತು೦ಬಿದಿರಿ,thanks

    ReplyDelete
  7. cennagide sir hosataranaagi namage neediddeeri thnq

    ReplyDelete
  8. ವಾಸ್ತವತೆ ಚೆನ್ನಾಗಿ ಬಿಂಬಿತವಾಗಿದೆ.

    ReplyDelete
  9. ಹೋ... ಚೆನ್ನಾಗಿದೆ ಬಿಡಿ..

    ReplyDelete
  10. ಕಂಗ್ಲೀಷ್ ಷಟ್ಪದಿ ಸೊಗಸಾಗಿದೆ.
    ಇನ್ನಷ್ಟು ಬರಲಿ...............

    ReplyDelete
  11. ಇಂತಹ ಕಂಗ್ಲೀಷ್ ಹಾಡು ಹಾಕಲು ಅಂದು ತಡಕಾಡುತ್ತಿದ್ದೆ, ಬೇರಾವುದೇ ಮಾಲಿಕೆಗೆ ಇವೆಲ್ಲ ಸರಿಹೊಂದುವುದಿಲ್ಲ, ಹೀಗಾಗಿ ಈ ಮಾಲಿಕೆಯೇ ಬೇರೆ! ಇಲ್ಲಿ ನನಗೆ ಗೊತ್ತಾಗಿದ್ದು ಮಜಾ ಕೊಡುವ ರಿಧಮ್ ಉಳ್ಳ ಯಾವ ಹಾಡನ್ನಾದರೂ ಓದುಗ ಮಿತ್ರರು ಇಷ್ಟಪಡುತ್ತಾರೆ ಎಂಬುದು, ಈ ಮಾಲಿಕೆಯಲ್ಲಿ ತಮಗೆ ಇನ್ನೂ ಹಲವು ಹತ್ತು ವಿಭಿನ್ನ ಕೃತಿಗಳು ಸಿಗಲಿವೆ.

    * ಶ್ರೀ ಪರಾಂಜಪೆ ನನ್ನಿಂದ ಪ್ರೇರಣೆ ಎಂದಿರಿ, ಇದು ನನ್ನ ಪ್ರಯತ್ನವಷ್ಟೇ, ಧನ್ಯವಾದಗಳು

    * ಸುಗುಣ ಮೇಡಂ ತಮಗೂ ಈ ಕವನದಲ್ಲಿ ಹೊಸತನ ಕಂಡಿತಲ್ಲ, ನಮನಗಳು

    * ಶ್ರೀ ನಾಗರಾಜ್ , ವಾಸ್ತವತೆಯನ್ನೇ ನನ್ನ ಹಲವು ಕೃತಿಗಳು ಹೊಂದಿರುತ್ತವೆ, ತಮಗೆ ತುಂಬಾ ಆಭಾರಿ

    * ಕತ್ತಲೆಮನೆಯವರೇ, ಬಂದು ಎಂಜಾಯ್ ಮಾಡಿದಿರಲ್ಲ-ಕೃತಜ್ಞ

    * ಶ್ರೀ ಮಹೇಶ್ ತಾವು ಸೂಪರ್ ಎಂದಿರಿ, ಇನ್ನೂ ಸೂಪರ್ ಗೇ ಪ್ರಯತ್ನಿಸುವ ಜವಾಬ್ದಾರಿ ಕೊಟ್ಟಿರಿ, ಧನ್ಯವಾದಗಳು

    * ಶ್ರೀ ಪ್ರವೀಣ್, ಇನ್ನಷ್ಟು ಬರುತ್ತದೆ, ಸ್ವಲ್ಪ ತಡವಾಗಿ, ಥ್ಯಾಂಕ್ಸ್

    * ಶ್ರೀ ಸೀತಾರಾಮರಾಯರೇ ತಮ್ಮನ್ನು ಕಾಣದೇ ವಾರವಾಯಿತು, ಯಾಕೆ ಮುನಿಸಿಕೊಂಡಿದ್ದಿರೋ ತಿಳಿಯಲಿಲ್ಲ, ಊರಲ್ಲಿ ಇರಲಿಲ್ಲವೇ, ವಿಮರ್ಶಗೆ ತಾವು ಬೇಕೇ ಬೇಕು,ಅಂತೂ ಈಗ ಬಂದಿರಲ್ಲಾ, ಶರಣು

    ಎಲ್ಲಾ ಓದುಗ ಮಿತ್ರರಿಗೂ ನಮನಗಳು

    ReplyDelete