ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, July 5, 2010

ರಸಿಕನ ಹುಡುಗಿ

[ರಾಜಾ ರವಿವರ್ಮ ರಚಿತ ಚಿತ್ರ ಕೃಪೆ -ಅಂತರ್ಜಾಲ ]

ರಸಿಕನ ಹುಡುಗಿ


ಏನಿದು ಅಹಾ ಈ ಬಳುಕು
ಏನೋ ಥಳುಕು ಥಳುಕು
ನವನವೀನ ಒರಸೆ ನಿನ್ನಾ ನಡುವಿನಲ್ಲೀ

ಸಂಚೊಂದು ಸಲಿಗೆಯಲ್ಲಿ
ಹೊಂಚಿದ್ದು ಸೆಳವಿನಲ್ಲಿ
ಮಿಂಚಗೊಂಚಲ ಹರಿಬಿಟ್ಟ ಚಳುಕು ಎದೆಯಾಳದಲ್ಲೀ

ಮಲ್ಲಿಗೆಯ ನಗೆಯ ಒನಪು
ಗಲ್ಲದ ಗುಳಿಯ ಹಾಸ್ಯ
ಅಲ್ಲೊಮ್ಮೆ ಮೂಗು ಕೊಂಕಿ ನನ್ನೆದೆಯ ನವಿಲ ಲಾಸ್ಯ!

ಅಟಕಾಯ್ಸೊ ಕಣ್ಣ ಕಾವ್ಯ
ತುಟಿಯಲ್ಲಿ ಭಾಷೆ ನವ್ಯ
ಕುಟುಕಿತ್ತು ನನ್ನ ಹೃದಯ ಹಗಲಿರುಳು ಬರೆದು ಭಾಷ್ಯ!

ಕೈಯಲ್ಲಿ ನೂರು ತಿರುವಿ
ಮೈಮನವ ಹೊರಳಿ ಬರುವಿ
ಸೈ ಸರಿಯು ಎಂಬ ಮನಸು ನಿನ್ನ ನೋಡಿ ಹೆಣೆದು ಕನಸು!

ಬಳ್ಳಿಯದು ಆ ಶರೀರ
ಬೆಳ್ಳಗಿನ ಎದೆಯ ಭಾರ
ಅಳ್ಳೆದೆಯೆ ಅಳೆದು ನುಂಗಿ ಕಳ್ಳನಾಮಾಡಿತಿಲ್ಲಿ!

ಎಳೆ ಬೆಂಡೆಕಾಯಿ ಬೆರಳು
ಸುಳಿಸುಳಿದು ಬರುವ ಕುರುಳು
ಕುಳಿತಲ್ಲೇ ಬಿಟ್ಟು ಬಾಯ ನಾನಲ್ಲಿ ಮಂಗಮಾಯ !

ನೀನ್ಯಾಕೋ ನನಗೆ ಇಷ್ಟ
ನೀನಿದ್ರೆ ಇಲ್ಲ ಕಷ್ಟ
ನೀನಿರದ ಬಾಳು ಶೂನ್ಯ ನೀ ಕೂಡಿ ಮಾಡು ಧನ್ಯ!

11 comments:

  1. ಏನಾಯಿತು ಮನ ಏನಾಯಿತು
    ಏಕಾಯಿತು ಮರ್ಕಟನ ಹಾಗಾಯಿತು?
    ತಳುಕು ಬಳಕಿನ ನೋಟಕೆ
    ವಯ್ಯಾರದ ಮೈಮಾಟಕೆ
    ಮನಸೋತು ಅಂಧವಾಯಿತು!

    ಏನು ಭಟ್ರೇ,
    ಅಧ್ಯಾತ್ಮದ ನಡುವೆ ಇದೇಕೋ ಕಾಣೆ!
    ಏನೇ ಇರಲಿ, ಕವನ ಚನ್ನಾಗಿದೆ.

    ReplyDelete
  2. ಭಟ್ ಸರ್...
    ಸೂಪರ್ .... ಆಹಾ ... ಓಹೋ........ ತುಂಬಾ ಚೆನ್ನಾಗಿದೆ.... ಹೊಸ ಥರದ ಕವನ..... ಹೊಗಳಿದ್ದೇ ಹೊಗಳಿದ್ದು..... ನಿಜಕ್ಕೂ ಚೆನ್ನಾಗಿದೆ..... ಎಲ್ಲಾ ಸಾಲುಗಳು ಹೊಸ ಅರ್ಥ ಹೇಳಿದೆ....

    ReplyDelete
  3. ಭಟ್ರೆ,
    ನಿಮ್ಮಂತಿರುವುದು ಬಲು ಕಷ್ಟ.
    ಒಂದೊಂದಿನ ಒಂದೊಂದ್ ತರಾ.
    ಆಡು ಮುಟ್ಟರುದ ಸೊಪ್ಪಿಲ್ಲ...ಬಟ್ಟರು.....
    ಏನೇ ಆಗಲಿ, ಚೆನ್ನಾಗಿದೆ. ಛಳಿ ಬಿಟ್ಟು ಬರೆಯುವ ನಿಮ್ಮ ಪ್ರಯತ್ನ ಸ್ತುತ್ಯಾರ್ಹ.

    ReplyDelete
  4. ಭಟ್ಟರೇ;ನಮಗೆಲ್ಲಾ ಕೊಟ್ಟಿರಿ ಒಂದು ಸರ್ಪ್ರೈಸ್!ಉಪನ್ಯಾಸಗಳ ಮಧ್ಯೆ ಒಂದು ಪ್ರೇಮಗೀತೆ!ನಿಮ್ಮ ಬತ್ತಳಿಕೆಯಲ್ಲಿ ಇನ್ನೂ ಏನೇನು ಬ್ರಹ್ಮ್ಮಾಸ್ತ್ರ ಇಟ್ಟಿದ್ದೀರೋ ಕಾದು ನೋಡಬೇಕು.

    ReplyDelete
  5. ಭಟ್ಟರೇ;ಎಲ್ಲರಿಗೂ ಒಂದು ಒಳ್ಳೆಯ ಸರ್ಪ್ರೈಸ್ ಕೊಟ್ಟಿರಿ!ಉಪನ್ಯಾಸಗಳ ಮಧ್ಯೆ ಒಂದು ಪ್ರೇಮಗೀತೆ!ನಿಮ್ಮ ಬತ್ತಳಿಕೆಯಲ್ಲಿ ಇನ್ನೂ ಏನೇನು ಭ್ರ್ಹಮ್ಮಾಸ್ತ್ರ ಇಟ್ಟಿದ್ದೀರೋ ಕಾದು ನೋಡಬೇಕು.ಧನ್ಯವಾದಗಳು.

    ReplyDelete
  6. ತುಂಬಾ ಚೆನ್ನಾಗಿದೆ.... ಹೊಸ ಥರದ ಕವನ.
    ನಿಜಕ್ಕೂ ಚೆನ್ನಾಗಿದೆ.

    ReplyDelete
  7. ರಸಮಯ ಕಾವ್ಯವನ್ನು ಕೇಳಿ ಅದರ ಸ್ಫೂರ್ತಿದಾಯಕ ರಸ ಕನ್ನಿಕೆಯು ನಾಚಿ ನಿಂದಿಹಳು!
    ಚೆ೦ದದ ಕವನ ಭಟ್ಟರೇ!

    ReplyDelete
  8. ಸ್ವಾಮೀ ನಾನೂ ನಿಮ್ಮಂತೆಯೇ ಒಬ್ಬ, ನಾನು ಧರೆಗಿಳಿದ ಆಧ್ಯಾತ್ಮಿಯೋ, ಸನ್ಯಾಸಿಯೋ ಅಲ್ಲ. ಮೇಲಾಗಿ 'ನಿಮ್ಮೊಡನೆ' ಥರಾವರಿ ವಿಷಯಗಳನ್ನು ಹೇಳಿಕೊಳ್ಳಲೆಂದೇ ಇಲ್ಲಿ ಬರೆಯುವುದಲ್ಲವೇ? ಇನ್ನೊಂದು ಬರೆಯುವುದೆಲ್ಲಾ ನನ್ನ ವೈಯಕ್ತಿಕತೆಯದಲ್ಲ,ಕೆಲವು ಹೊರನೋಟಗಳು, ಕೆಲವು ಮೋಜು-ಮಜಾ ಸಂಭ್ರಮಿಸುವ ಆಟಗಳು,ಕೆಲವು ತಿಂಡಿ- ತೀರ್ಥಗಳು, ಕೆಲವು ಮಾಧ್ಯಮಗಳಲ್ಲಿ ಸಂವಹನಗಳು, ಕೆಲವು ತಾಪತ್ರಯಗಳು, ಕೆಲವು ಘಾತ-ಆಘಾತ-ಉಪೋದ್ಘಾತಗಳು ಇವೆಲ್ಲ ಸೇರಿದರೇ ಜೀವನ ಅಲ್ಲವೇ? ಹೀಗಾಗಿ ಎಲ್ಲರಿಗೂ ಬೇಕಾಗಿ, ಯಾರಿಗೂ ಅನಾನುಕೂಲವಾಗದಂತೆ ಮೂಡುವುದೇ 'ನಿಮ್ಮೊಡನೆ' ಬ್ಲಾಗ್.
    ಯಾರಿಗಾದರೂ ಆಭಾಸವಾಗಿದ್ದರೆ, ಇದೇನು ಅಂತ ತಮಾಷೆಯೆನಿಸಿದರೆ ಅದಕ್ಕಾಗಿ ನಾನೇನು ಮಾಡಬೇಕು ಹೇಳಿ ? ನನಗೆ ಯಾವುದೋ ಮುಚ್ಚಿಟ್ಟು ಬಚ್ಚಿಟ್ಟು ಗುಟ್ಟಾಗಿ ಇದುವ ಅಭ್ಯಾಸವಿಲ್ಲ! ಏನಿದ್ದರೂ ನೇರ >>ನಿಮ್ಮೊಡನೆ! ಈ ಕಾವ್ಯ್ವಂತೂ ಶೃಂಗಾರ ರಸದಲ್ಲಿ ಬರೆದಿದ್ದು, ಇದು ಕಲ್ಪನೆಯಷ್ಟೇ! ನನ್ನ ಮನಸ್ಸು ಎಲ್ಲೂ ಹೋಗಿಲ್ಲ, ನನ್ನ ಕೈಯ್ಯಲ್ಲೇ ಇದೆ, ಬರೇ ಆಧ್ಯಾತ್ಮ ಬರೆದರೆ ಅದರ ಗಂಧವಾಗಲೀ ಗಾಳಿಯಾಗಲೀ ಗೊತ್ತಿಲ್ಲದವರಿಗೆ ಏನುಕೊಡೋಣ? ಹೀಗಾಗಿ ಎಲ್ಲ ಥರದ ಕೃತಿಗಳು-ಜೀವನದ ಮಜಲುಗಳು- ಸ್ನೇಹಲ ಮನದ ಪಲುಕುಗಳು ಇಲ್ಲಿ ಪ್ರಸ್ತುತ, ಅಶ್ಲೀಲಕ್ಕೆ ಅವಕಾಶವಿಲ್ಲ.

    ಪ್ರತಿಕ್ರಿಯಿಸಿದ ಸರ್ವಶ್ರೀ ಪ್ರವೀಣ್, ದಿನಕರ್, ಶ್ರೀಧರ್ ಹಾಗೂ ಓದಿದ ಎಲ್ಲಾ ಮಿತ್ರರಿಗೂ ನಮನಗಳು

    ReplyDelete
  9. ಸರ್ ಏನ್ ಇಷ್ಟು ಹೊಗಳುತ್ತಿದ್ದಿರಿ..?
    ತುಂಬಾ ಚೆನ್ನಾಗಿದೆ.
    ನಿಮ್ಮವ,
    ರಾಘು.

    ReplyDelete
  10. There is some google error I can't find all comments, thanks to all who have commented & also to all others who read this

    ReplyDelete