ಜಗದಮಿತ್ರನಿಗೆ ಇಂದೇಕೋ ಮನಸ್ಸಿಗೆ ಬೇಸರವಾಗಿಬಿಟ್ಟಿದೆ ! ತನ್ನ ಕರ್ತವ್ಯವನ್ನು ಮನದಂದು ತನ್ನ ಕೆಲಸದಲ್ಲಿ ತಾನು ತನ್ಮಗ್ನನಾಗಿರುತ್ತಿದ್ದ ಆತ, ಎಂದೂ ಯಾವ ವಿಷಯಗಳಿಗೂ ಬಹಳ ತಲೆಕೆಡಿಸಿಕೊಳ್ಳದ ಆತ ಇಂದು ವಿಮುಖನಾಗಿದ್ದಾನೆ! ಕಾರಣ ಯಾವಜ್ಜೀವಿತದಲ್ಲಿ ಸಮಸ್ತ ತ್ಯಾಗದ ಸಂಕೇತವಾದ ಕಾವಿಯ ಬಣ್ಣಕ್ಕೆ ಬೇರೆ ಬಣ್ಣ ಕೊಡುವ ಕೆಲಸ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಆತನಿಗೆ ಅರ್ಜುನ ಸನ್ಯಾಸಿಯ ಕಥೆ ನೆನಪಿಗೆ ಬರುತ್ತಿದೆಯಂತೆ. ಅಂದರೆ ಹಿಂದೂ ಕೂಡ ಇಂತಹ ಕೆಲವು ಕಾವಿ ಧಾರಿಗಳಿದ್ದರು, ಆದರೆ ಇಷ್ಟೊಂದು ಸಂಖ್ಯೆಯಲ್ಲಿರಲಿಲ್ಲ! ಈಗ ಕಾವಿ ಕೆಲವರಿಗೆ ದುಡ್ಡು ಮಾಡುವ ಸುಲಭ ಉಪಾಯವಾಗಿಬಿಟ್ಟಿದೆ. ಇಂತಹ ಕಾವಿ ವೇಷದವರನ್ನು ಕಂಡಾಗ ಗೌರವಾನ್ವಿತ ಕಾವಿಗೆ ಎಂತಹ ಅಪಚಾರಮಾಡುತ್ತಿದ್ದಾರಲ್ಲ ಎಂಬ ಆಕ್ರೋಶ ಮನದ ತುಂಬೆಲ್ಲ ಭುಗಿಲೆದ್ದು ಜಗದಮಿತ್ರ ಬೊಬ್ಬಿರಿದಿದ್ದಾನೆ ! ಸಿಂಹದಂತೆ ಗರ್ಜಿಸಿದ್ದಾನೆ; ಸಂಸ್ಕೃತಿಗೆ ಹೆಸರಾದ ಭಾರತದಲ್ಲಿ ಯಾವುದು ನಡೆಯಬಾರದಿತ್ತೋ ಅದನ್ನೇ ಜಾಸ್ತಿ ನೋಡುವಂತಾಯ್ತಲ್ಲ ಅಂತ ಮರುಗಿದ್ದಾನೆ.
ಹಿಂದೆ ರಾಜರುಗಳು ಆಳುವಾಗ ಈ ರೀತಿ ಅಪಚಾರವೆಸಗುವ ವ್ಯಕ್ತಿಗಳನ್ನು ಹಿಡಿದು ಕಠಿಣ ಶಿಕ್ಷೆ ವಿಧಿಸುತ್ತಿದ್ದರು,ಮಾತ್ರವಲ್ಲ ಕಿವಿ-ಮೂಗು ಮುಂತಾದ ಅಂಗಗಳಲ್ಲಿ ಒಂದನ್ನು ಊನ ಮಾಡಲು ಆಜ್ಞೆ ಮಾಡುತ್ತಿದ್ದರು. ಶಿಕ್ಷೆ ನೋಡಿಯೇ ಅಂತಹ ಖದೀಮರು ಕೆಟ್ಟ ಕೆಲಸಕ್ಕೆ ಇಳಿಯಲು ಹಿಜರಿಯುತ್ತಿದ್ದರು. ಇಂದಿನ ರಾಜಕೀಯ ವಿಪರ್ಯಾಸ ಎಂದರೆ ಅಂತಹ ಕಳ್ಳ-ಖದೀಮರನ್ನು, ದೇವರ ಹೆಸರಲ್ಲಿ ದುಡ್ಡು ಗಳಿಸಿ ಮೆರೆವ ಬಕಗಳನ್ನು ಪೋಷಿಸುವುದು ಮತ್ತು ಅವರು ಸೋಗಿನಲ್ಲಿ ಮತ್ತಷ್ಟು ಜನರನ್ನು ಕಲೆಹಾಕಲು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಇಂದಿನ ರಾಜಕಾರಣಿಗಳ ವೈಶಿಷ್ಟ್ಯ !
|| ಸಮಾನ ಶೀಲೇಷು ವ್ಯಸನೇಷು ಸಖ್ಯಂ || ಎಂಬ ಉಕ್ತಿಯಂತೆ ಒಂದೇ ಥರದ ಶೀಲ, ಸ್ವಭಾವಗಳುಳ್ಳ ಜನರು ಸ್ನೇಹಿತರಾಗುತ್ತಾರಂತೆ, ಇಲ್ಲೂ ಕೂಡ ರಾಜಕಾರಣಿಗಳೇ ಹಾಗಿದ್ದಾಗ ಅವರ ಸಖ್ಯ ಕೂಡ ಅಂಥಹ ನಿರ್ಲಜ್ಜ ಖೂಳರೊಂದಿಗೇ ಆಗುತ್ತದೆ !
ಕೆರಳಿ ಕೆಂಡಾಮಂಡಲವಾದ ಜಗದಮಿತ್ರನನ್ನು ಮರಳಿ ತಂಪಾಗಿಸಲು ಮುಂಜಾವಿನ ತಂಪಿನ ಹಾಡು ಹಾಡಿದರೂ ಸಾಧ್ಯವಾಗಲಿಲ್ಲ ! ಅಂತೂ ಇಂತೂ ಹೇಗೋ ಕೊನೇ ಸಲ ಅಂತ ಪ್ರಯತ್ನಿಸಿ ಕೊನೆಗೊಮ್ಮೆ ತನಗೆ ಮನದಲ್ಲಿ ಇರುವ ಖಾರವನ್ನೆಲ್ಲ ಹೊರಗೆ ಕಾವ್ಯದ ರೂಪದಲ್ಲಿ ತೂರಿಬಿಟ್ಟಿದ್ದಾನೆ; ಅದಾದಮೇಲೆ ಸ್ವಲ್ಪ ಶಾಂತನಾಗಿದ್ದಾನೆ- ಇದು ನಮ್ಮ ಜಗದಮಿತ್ರನ ನಾರಸಿಂಹಾವತಾರ ! " ಕೈಮುಗಿದು ಬಿಟ್ಟೆನಪ್ಪಾ ನರಸಿಂಹ ಭಕ್ತರನ್ನು ಹೆದರಿಸಬೇಡ " ಅಂತ ಪ್ರಾರ್ಥಿಸಿದರೆ " ಭಕ್ತಿಯ ಹೆಸರಲ್ಲಿ , ಸ್ವಾಮಿಗಳ ಸೋಗಿನಲ್ಲಿ ಅಡ್ಡಾಡುವ ಉಂಡಾಡಿ ಗುಂಡರನ್ನು ಅವರ ಕಾವಿಯನ್ನು,ವೇಷವನ್ನು ಪರಾಮರ್ಶಿಸಿ, ಅದು ನಾಟಕದ ವೇಷವಾದರೆ-ಕಪಟ ವೇಷವಾದರೆ ಹಿಡಿದು ಥಳಿಸುವಂತೆ ಆಜ್ಞೆ " ವಿಧಿಸಿದ್ದಾನೆ, ನಮಿಸಿ ನಾರಸಿಂಹಗೆ ಆತನ ಆಜ್ಞೆಯನ್ನು ಶಿರಸಾವಹಿಸಲು ಒಪ್ಪಿದಮೇಲೆ ಸದ್ಯಕ್ಕೆ ಅವತಾರ ಮುಗಿದಿದೆ, ಅದರ ತಾತ್ಪರ್ಯವನ್ನು ಡೀವೀಜಿ ಶೈಲಿಯಲ್ಲಿ ಓದಿ ---
ಹಿಂದೆ ರಾಜರುಗಳು ಆಳುವಾಗ ಈ ರೀತಿ ಅಪಚಾರವೆಸಗುವ ವ್ಯಕ್ತಿಗಳನ್ನು ಹಿಡಿದು ಕಠಿಣ ಶಿಕ್ಷೆ ವಿಧಿಸುತ್ತಿದ್ದರು,ಮಾತ್ರವಲ್ಲ ಕಿವಿ-ಮೂಗು ಮುಂತಾದ ಅಂಗಗಳಲ್ಲಿ ಒಂದನ್ನು ಊನ ಮಾಡಲು ಆಜ್ಞೆ ಮಾಡುತ್ತಿದ್ದರು. ಶಿಕ್ಷೆ ನೋಡಿಯೇ ಅಂತಹ ಖದೀಮರು ಕೆಟ್ಟ ಕೆಲಸಕ್ಕೆ ಇಳಿಯಲು ಹಿಜರಿಯುತ್ತಿದ್ದರು. ಇಂದಿನ ರಾಜಕೀಯ ವಿಪರ್ಯಾಸ ಎಂದರೆ ಅಂತಹ ಕಳ್ಳ-ಖದೀಮರನ್ನು, ದೇವರ ಹೆಸರಲ್ಲಿ ದುಡ್ಡು ಗಳಿಸಿ ಮೆರೆವ ಬಕಗಳನ್ನು ಪೋಷಿಸುವುದು ಮತ್ತು ಅವರು ಸೋಗಿನಲ್ಲಿ ಮತ್ತಷ್ಟು ಜನರನ್ನು ಕಲೆಹಾಕಲು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಇಂದಿನ ರಾಜಕಾರಣಿಗಳ ವೈಶಿಷ್ಟ್ಯ !
|| ಸಮಾನ ಶೀಲೇಷು ವ್ಯಸನೇಷು ಸಖ್ಯಂ || ಎಂಬ ಉಕ್ತಿಯಂತೆ ಒಂದೇ ಥರದ ಶೀಲ, ಸ್ವಭಾವಗಳುಳ್ಳ ಜನರು ಸ್ನೇಹಿತರಾಗುತ್ತಾರಂತೆ, ಇಲ್ಲೂ ಕೂಡ ರಾಜಕಾರಣಿಗಳೇ ಹಾಗಿದ್ದಾಗ ಅವರ ಸಖ್ಯ ಕೂಡ ಅಂಥಹ ನಿರ್ಲಜ್ಜ ಖೂಳರೊಂದಿಗೇ ಆಗುತ್ತದೆ !
ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ
ಭೋಗೀಂದ್ರಭೋಗಮಣಿರಂಜಿತ -ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ ||
ಭೋಗೀಂದ್ರಭೋಗಮಣಿರಂಜಿತ -ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ ||
ಕೆರಳಿ ಕೆಂಡಾಮಂಡಲವಾದ ಜಗದಮಿತ್ರನನ್ನು ಮರಳಿ ತಂಪಾಗಿಸಲು ಮುಂಜಾವಿನ ತಂಪಿನ ಹಾಡು ಹಾಡಿದರೂ ಸಾಧ್ಯವಾಗಲಿಲ್ಲ ! ಅಂತೂ ಇಂತೂ ಹೇಗೋ ಕೊನೇ ಸಲ ಅಂತ ಪ್ರಯತ್ನಿಸಿ ಕೊನೆಗೊಮ್ಮೆ ತನಗೆ ಮನದಲ್ಲಿ ಇರುವ ಖಾರವನ್ನೆಲ್ಲ ಹೊರಗೆ ಕಾವ್ಯದ ರೂಪದಲ್ಲಿ ತೂರಿಬಿಟ್ಟಿದ್ದಾನೆ; ಅದಾದಮೇಲೆ ಸ್ವಲ್ಪ ಶಾಂತನಾಗಿದ್ದಾನೆ- ಇದು ನಮ್ಮ ಜಗದಮಿತ್ರನ ನಾರಸಿಂಹಾವತಾರ ! " ಕೈಮುಗಿದು ಬಿಟ್ಟೆನಪ್ಪಾ ನರಸಿಂಹ ಭಕ್ತರನ್ನು ಹೆದರಿಸಬೇಡ " ಅಂತ ಪ್ರಾರ್ಥಿಸಿದರೆ " ಭಕ್ತಿಯ ಹೆಸರಲ್ಲಿ , ಸ್ವಾಮಿಗಳ ಸೋಗಿನಲ್ಲಿ ಅಡ್ಡಾಡುವ ಉಂಡಾಡಿ ಗುಂಡರನ್ನು ಅವರ ಕಾವಿಯನ್ನು,ವೇಷವನ್ನು ಪರಾಮರ್ಶಿಸಿ, ಅದು ನಾಟಕದ ವೇಷವಾದರೆ-ಕಪಟ ವೇಷವಾದರೆ ಹಿಡಿದು ಥಳಿಸುವಂತೆ ಆಜ್ಞೆ " ವಿಧಿಸಿದ್ದಾನೆ, ನಮಿಸಿ ನಾರಸಿಂಹಗೆ ಆತನ ಆಜ್ಞೆಯನ್ನು ಶಿರಸಾವಹಿಸಲು ಒಪ್ಪಿದಮೇಲೆ ಸದ್ಯಕ್ಕೆ ಅವತಾರ ಮುಗಿದಿದೆ, ಅದರ ತಾತ್ಪರ್ಯವನ್ನು ಡೀವೀಜಿ ಶೈಲಿಯಲ್ಲಿ ಓದಿ ---
ಪ್ರಾಯದಲಿ ಹುಡುಗರಲಿ 'ರಾಣಿಹುಳಗಳ' ಚಿಂತೆ
'ರಾಯಭಾರವ' ತೋರಿ ಬರಸೆಳೆಯಲವರ
ಕಾಯನಲುಗಿದರೆಷ್ಟು ತಾಯಿ-ತಂದೆಯರಿಂಗೆ
ಮಾಯವಾಗದು ಮನದಿ | ಜಗದಮಿತ್ರ
ಭೂಮಿಯದು ಹಲವು ಕಲೆಗಳ ತವರು ಎನ್ನುವುದು
ಕಾಮಿಗಳಿಗೂ ತಿಳಿದ ಸಾಮಾನ್ಯ ವಿಷಯ
ನೇಮ ನಿಷ್ಠೆಯ ಸೋಗು ತೋರಿಸುತ ಘನತರದಿ
ನಾಮವೆಳೆವರು ನೋಡು | ಜಗದಮಿತ್ರ
ಸುರಪತಿಯು ರಾಜ್ಯಭಾರವ ಹಿತದಿ ತಾ ನಡೆಸಿ
ಪರಸತಿಯ ಪೀಡಕರ ಹಿಡಿದು ಗುರುತಿಸುತ
ದರದರನೆ ಎಳೆದೊಯ್ದು ಕುಳ್ಳಿರಿಸಿ ಸಜೆಯೊಳಗೆ
ಬರೆಯನೆಳೆದನು ನೋಡ | ಜಗದಮಿತ್ರ
ಸನ್ಯಾಸಿ ತಾನೆಂದು ಬಂದ ವ್ಯಕ್ತಿಯ ಹಿಡಿದು
ಅನ್ಯವಿಷಯಂಗಳನು ಅವಲೋಕಿಸುತ
ಮಾನ್ಯಮಾಡಲು ಹಲವು ಮೆಟ್ಟಿಲುಗಳನುಸರಿಸು
ಧನ್ಯನಾಗುತ ಜಗದಿ | ಜಗದಮಿತ್ರ
ಹುಡುಗಿಯರು ದಿರಿಸಿನಲಿ ಸೆಳೆಯುವರು ಕಣ್ಣುಗಳ
ಬೆಡಗು ಬಿನ್ನಾಣಗಳ ನಗೆ ಪ್ರದರ್ಶಿಸುತ
ಹಡಗಿನೋಪಾದಿಯಲಿ ನಡೆದು ಹೋಪರು ಮುಂದೆ
ಗುಡುಗಿಲ್ಲದಾ ಮಳೆಯೂ | ಜಗದಮಿತ್ರ
ಹೆಂಗಸರು ತಮಗೆಲ್ಲ ಮೀಸಲಾತಿಯ ಎಣಿಸಿ
ಭಂಗವಿಲ್ಲದೆ ಪಡೆದು ನುಗ್ಗಲಾಶ್ರಮಕೆ
ಕಂಗೆಟ್ಟು ಕುಲಗೆಟ್ಟ ಕಳ್ಳ ಕಾವಿಯ ಬೆಕ್ಕು
ಚಂಗನೇ ಜಿಗಿಯಿತದೊ | ಜಗದಮಿತ್ರ
ಕಾವಿಯುಟ್ಟರೆ ಜಗಕೆ ಕಾಣದದು ಅನುಕೊಳುತ
ಹಾವಿನಂದದಿ ಹುದುಗಿ ಕಳ್ಳ ಕಿಂಡಿಯಲಿ
ಹೂವಿನಂತಹ ಮುಗ್ಧ ಮನಸುಗಳ ಬಲಿಗೈದ
ಆವಿಚಿತ್ರನ ಥಳಿಸು | ಜಗದಮಿತ್ರ
ಸನ್ಯಾಸಿಗಳು ದೌರ್ಬಲ್ಯಗಳಿ೦ದ ಹೊರತಲ್ಲವೇನೋ?.ಒಟ್ಟಿನಲ್ಲಿ ಒ೦ದು ಸ್ವಸ್ಥ ನ೦ಬಿಕೆಯನ್ನು ಇ೦ತವು ಅಲುಗಾಡಿಸಿಬಿಡುತ್ತದೆ.
ReplyDeleteಹೌದು ಇದೇ ಸರಿ "
ಹೂವಿನಂತಹ ಮುಗ್ಧ ಮನಸುಗಳ ಬಲಿಗೈದ
ಆವಿಚಿತ್ರನ ಥಳಿಸು | ಜಗದಮಿತ್ರ !!
ಸಕಾಲಿಕ...ವಾಗಿದೆ..
ReplyDeleteಯಾಕೋ..
ಇಂಥಹ ಕಳ್ಳ ಸನ್ಯಾಸಿಗಳ ಬಗ್ಗೆ ಬೇಸರವಾಗುತ್ತದೆ...
ಧನ್ಯವಾದಗಳು ಕೂಸು ಮುಳಿಯಾಲ ಮತ್ತು ಪ್ರಕಾಶ್ ಮುಂದೆ ಓದಲಿರುವ ಎಲ್ಲಾ ಓದುಗ ಬಂಧುಗಳಿಗೆ
ReplyDeleteಈ ಘಟನೆ ಮನಸ್ಸಿಗೆ ಆಘಾತ ಮತ್ತು ಬೇಸರ ಮೂಡಿಸಿದೆ .
ReplyDeleteಸ್ವಾಮಿ, ಸಾಧು ಮತ್ತು ಸ೦ತರ ಛದ್ಮವೇಷದಲ್ಲಿ ಮೋಸಗಾರರ ಗು೦ಪೇ ಬೆಳೆಯುತ್ತಿರುವದು ಆತ೦ಕಕಾರಿ ವಿಷಯ. ಹಿ೦ದೂಗಳಲ್ಲಿನ ತೀವ್ರ ನ೦ಬಿಕೆ ಹಾಗೂ ಶ್ರದ್ದೇಯೆ ಇ೦ತ ಮೋಸಗಾರರಿಗೆ ಅವರ ಕಾಮನೆಗಳನ್ನು ಪೂರೈಸಲು ಕಾವಿ ಸುಲಭೋಪಾಯವಾಗಿದೆ.
ReplyDeleteಭೂಕಬಳಿಕೆ, ಹಣ ಸ೦ಗ್ರಹಣೆ, ಬಿಳಿ ಹಣವನ್ನ ರಾಜಕಾರಣಿಗಳಿಗೆ ಕಪ್ಪು ಹಣವನ್ನಾಗಿ ಪರಿವರ್ತಿಸುವದು, ಹೆಣ್ಣು ಮಕ್ಕಳ ಶೀಲ ಹಾಳುಮಾಡುವದು, ರಾಜಕೀಯದಲ್ಲಿ ತೊಡಗಿಸಿಕೊಳ್ಳುವದು, ಜನರ ಸುಲಿಗೆ ಮಾಡುವದು, ಆಕ್ರಮ ಸ೦ಪತ್ತು ಮಾಡಿ ಸ್ವಜನ ಹಿತಾಸಕ್ತಿಗೆ ಉಪಯೋಗಿಸುವದು ಮು೦ತಾದ ಚಟುವಟಿಕೆಗಳು ಹೆಚ್ಚಿನ ಸ್ವಾಮಿಗಳ ಮ೦ತ್ರವಾಗಿದೆ. ನನಗೆ ತಿಳಿದ ಮಟ್ಟಿಗೆ ಇ೦ದಿನ ಹೆಚ್ಚಿನ ಸ್ವಾಮಿಗಳು ದೇವರ ಹೆಸರಲ್ಲಿ ಹೊಟ್ಟೆ ತು೦ಬಿಸಿಕೊಳ್ಳೂವ ಪಕ್ಕಾ ನಾಸ್ತಿಕರು. ಆಸ್ತಿಕರ ನ೦ಬಿಕೆಯನ್ನು ಹಣವನ್ನಾಗಿ ಪರಿವರ್ತಿಸುವ ಮೋಸಗಾರರು. ದೇವರಿಗೆ ಬ೦ಗಾರ ಬೆಳ್ಳಿ ವಜ್ರದ ಕೀರ್‍ಈಟ- ರಥ ಮಾಡಿಸಿ, ಹೊಸ ಹೊಸ ಮೂರ್ತಿಗಳನ್ನು, ಗುಡಿಗಳನ್ನು, ಕಟ್ಟಿಸಿ, ಸುತ್ತಮುತ್ತಲಿನ
ಸರಕಾರೀ ಭೂಮಿ ಕಬಳಿಸಿ, ಕಲ್ಯಾಣಮ೦ತಪ ನಿರ್ಮಿಸಿ, ದುಡ್ಡು ಮಾದುವದು ಮತ್ತು ದೇವಳದ ಸ೦ಪತ್ತು ಹೆಚ್ಚಿಸುವದು ಅವರ ಧ೦ಧೆ ಆಗಿ ಬಿಟ್ಟಿದೆ. ರಾತ್ರೋರಾತ್ರಿ ಈ ದೇವರ ಆಭರಣಗಳು ಎಲ್ಲೋ ಹೋಗಿ ಯಾರದೋ ಒಡವೆಗಳಾಗುವದು ಉ೦ಟು. ಇ೦ತ ಮಠ -ದೇಗುಲಗಳಲ್ಲಿ ಭಕ್ತರನ್ನು ಸುಲಿಯುವದೇ ಕಾಯಕ. ಭಕ್ತರ ಅನುಕೂಲಕ್ಕೇ ಕನಿಷ್ಠ ಸೌಲಭವನ್ನು ಮಾಡಿಕೊಡುವ ಸೌಜನ್ಯತೆ ಇಲ್ಲ. ಕೆಲವು ಆಶ್ರಮಗಳು ಸೌಲಭ್ಯದ ಹೆಸರಲ್ಲಿ ಹೈ-ಟೆಕ್ ಮಠಗಳನ್ನು ಮತ್ತು ಗುಡಿಗಳನ್ನು ಮಾಡಿ ಅ೦ತರರಾಷ್ಟೀಯ ಮಟ್ಟದಲ್ಲಿ ಜನರ ಸುಲಿಗೆ ಮಾಡುತ್ತಿವೆ. ಮಕ್ಕಳ ಬಿಸಿಯೂಟಕ್ಕೆ ಸರಕಾರದಿ೦ದ ದುಡ್ಡಿಗೆ ಗುತ್ತಿಗೆ ಪಡೆದು- (ರಾಜಕೀಯದವರಿಗೆ ಮತ್ತು ಸರಕಾರದವರಿಗೆ ಹೇರಳ ಪ್ರಮಾಣದಲ್ಲಿ ಕಪ್ಪ ಕಾಣಿಕೆ ಒಪ್ಪಿಸಿ) ಭಾರತದಲ್ಲಿ ಬಡತನವಿದೆ-ಮಕ್ಕಳಿಗೆ ಊಟ ನೀಡಿ ವಿಧ್ಯಾಭ್ಯಾಸಕ್ಕೆ ಅನೂಕುಲ ಮಾಡಿದ್ದೆವೆ ಎ೦ದು ಹೊರದೇಶದಲ್ಲಿ ಬಿಕ್ಷೇ ಎತ್ತುವ ಧಾರ್ಮಿಕ ಸ೦ಸ್ಥೇಗಳೂ ನಮ್ಮಲ್ಲಿ ಕಡಿಮೆಯೇನಿಲ್ಲ.
ಒಟ್ಟಿನಲ್ಲಿ ಜಗದಮಿತ್ರನ ಸಿಟ್ಟು ನಮ್ಮದೂ ಆಗಿದೆ. ಅವನು ಉತ್ತಮ ಕವನ ಬರೆದು ತನ್ನ ಮನೋಕ್ಲೇಷೆಯನ್ನು ಹೊರಹಾಕಿ ನಿರಾಳನಾಗಿದ್ದಾನೆ. ಅದನ್ನು ಓದಿ ನಾವೂ ನಮ್ಮಲ್ಲಿದ್ದ ಕ್ಲೇಷೆಯನ್ನ ಈ ಪ್ರತಿಕ್ರಿಯೆ ಮುಖಾ೦ತರ ಹೊರ ಹಾಕಿ ನಿರಾಳರಾಗುತ್ತಿದ್ದೆವೆ.
ಕವಿ, ಖಾದಿ, ಖಾಕಿ ಯಿಂದ ದೇಶ ಉದ್ದಾರ ಆಗುತ್ತದೆ ಎಂಬುದು ಕೇವಲ ನಮ್ಮ ನಂಬಿಕೆ ಮಾತ್ರ
ReplyDeleteಎಲ್ಲಿಯವರೆಗೆ ಇವುಗಳಿಂದ ನಾವು ಹೊರಗೆ ಬರುವುದಿಲ್ಲವೋ ಅಲ್ಲಿಯವರೆಗೆ
ಕಷ್ಟವನ್ನು ಮೈ ಮೇಲೆ ಎಳೆದು ಕೊಳ್ಳಲೇಬೇಕು
ನಮ್ಮ ದುಡ್ಡಿನಲ್ಲಿ ಮಜಾ ಮಾಡುವ ಇವರು ದೇಶದ ಮಹಾನ್ ಗೌರವಾನ್ವಿತರು ಎಂಬುದು ಬೇಸರದ ಸಂಗತಿ
ಇಂತಹ ಸ್ವಾಮಿಗಳನ್ನು ಕಂಡು ಮನಸ್ಸಿಗೆ ಬೇಸರವಾಯಿತು.....
ReplyDeleteಬಹಳ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದೀರಿ ಸೀತಾರಾಮ್ ತಾವು, ತುಂಬಾ ಅನುಭವಜನ್ಯ ಅಭಿಪ್ರಾಯ. ಅಂತೆಯೇ ಡಾ| ಕೃಷ್ಣಮೂರ್ತಿ, ಡಾ|ಗುರುಮೂರ್ತಿ, ಸವಿಗನಸು ಇವರೆಲ್ಲರ ಪ್ರತಿಕ್ರಿಯೆ ಕೂಡ ಬಹಳ ಅಮೂಲ್ಯ, ನೀವೇ ಹೇಳಿದಂತೆ ಬೇಸರ ಮತ್ತು ಸಿಟ್ಟಿನಿಂದ ಮಾತೇ ಬರುತ್ತಿಲ್ಲ, ಎಲ್ಲರಿಗೂ ಧನ್ಯವದಾಗಳು
ReplyDeleteಒಮ್ಮೆ ಮೋಸ ಹೋದರೆ ಅದು ಅವನ ತಪ್ಪು, ಮತ್ತೊಮ್ಮೆ ಮೋಸ ಹೋದರೂ ಅದು ಅವನದೇ ತಪ್ಪು, ಪದೇ ಪದೇ ಮೋಸ ಹೋದರೆ ಅದು ನಮ್ಮ ತಪ್ಪಾಗುತ್ತೆ. ಈಗಾಗಲೇ ಸಾಕಷ್ಟು ಕಳ್ಳ ಸನ್ಯಾಸಿಗಳು ಸಿಕ್ಕಿಬಿದ್ದರೂ ನಮ್ಮ ಜನ ನೀರನ್ನು ಮತ್ತು ಹಾಲನ್ನು ಬೇರ್ಪಡಿಸಲು ಬಹಳ ತಡ ಮಾಡುತ್ತಿದ್ದಾರೆ. ನನಗೆ ಸ್ವಾಮಿಗಳ ಮೇಲೆ ಅಷ್ಟು ನಂಬಿಕೆ ಇಲ್ಲ. ಆದರೆ ನಮ್ಮ ಧರ್ಮವನ್ನು ಎತ್ತಿ ಹಿಡಿಯಲು ಅವರೂ ಸಹಕಾರಿಗಳೆಂದು ಸ್ವಲ್ಪ ಮಟ್ಟಿಗಿನ ಗೌರವ ಇದೆ. ಮುಸ್ಲಿಂ ಮುಲ್ಲಾಗಳು(ಶಬ್ದ ಸರಿಯೇ? ಮುಸ್ಲಿಂ ಗುರುಗಳು), ಕ್ರಿಶ್ಚಿಯನ್ನರು ಪಾದ್ರಿಗಳ ಮಾತಿಗೆ ಎಷ್ಟು ಗೌರವ ಇದೆ ಅವರ ಜನರಲ್ಲಿ. ಮುಲ್ಲಾಗಳು ಫತ್ವಾ ಹೊರಡಿಸಿದರೆ ಅವರಿಗೆ ಅದೇ ವೇದ ವಾಕ್ಯ.. ನಮ್ಮ ಜನರು, ನಮ್ಮ ಗುರುಗಳು ಮಾತ್ರ ಹಾಗಿಲ್ಲ ಯಾಕೆ?????
ReplyDeleteಸಾಗರಿಯವರೇ, ನಿಮ್ಮ ಅಭಿಪ್ರಾಯ ಸರಿಯಾಗೇ ಇದೆ, ಆದ್ರೆ ಹಣ್ಣು ನಮ್ಮದು ಅಂತ ಹುಳಬಿದ್ದ ಹಣ್ಣನ್ನು ತಿನ್ನಲು ಸಾಧ್ಯವೇ ? ಮುಸ್ಲಿಂ,ಕ್ರಿಶ್ಚನ್ ಧರ್ಮಗಳಲ್ಲಿ ಅವರ ಗುರುಗಳಿಗೆ ಬೇರೆ ಬೇರೆ ಮೌಲ್ಯಗಳಿರಬಹುದು ಆ ಬಗ್ಗೆ ನನಗೆ ಜಾಸ್ತಿ ಗೊತ್ತಿಲ್ಲ, ಆದರೆ ಧರ್ಮಾಚರಣೆ ಅಂತ ಸ್ವಘೋಷಿತ ಸನ್ಯಾಸಿಗಳಾಗುವ ಇಂತಹ ಕಳ್ಳ ಬೆಕ್ಕುಗಳು ದೀಕ್ಷೆ ಪಡೆದವರೇ ? ಅವರ ಮೂಲ ಯಾವ ಬೇರಿನದು ? ಅದಕ್ಕೆ ಸಂಸ್ಕಾರವಿತ್ತೆ? ಸನ್ಯಾಸಿ ಅಂತ ಹೇಳಿಬಿಡುವುದು ಸುಲಭ, ಆದರೆ ಆ ಮಾರ್ಗದ ಪ್ರಥಮ ಹಂತವೇ ಇಂದ್ರಿಯ ನಿಗ್ರಹ, ಅದು ಜನಸಾಮಾನ್ಯರಿಗೆ ಆಗದ ಮಾತು, ಅಂದಮೇಲೆ ಜನರ ಮಧ್ಯೆ ಇದ್ದೂ ಅತಿ ಸಹಜ ಸ್ಥಿತಿಯಲ್ಲಿ ಇರುವ ಜೈನ ದಿಗಂಬರರನ್ನು ನೋಡಿದ್ದೀರಿ, ಅವರೂ ಮನುಷ್ಯರಲ್ಲವೇ? ಅವರ ಕಠಿಣ ವೃತ ಅವರನ್ನು ಆ ಮಟ್ಟಕ್ಕೆ ಏರಿಸುತ್ತದೆ ಅಲ್ಲವೇ ? ಹೀಗಾಗಿ ಯಾವನೋ ಬಂದು ಶಹರಕ್ಕೆ ಹತ್ತಿರದ ಒಂದು ಹಳ್ಳಿಯಲ್ಲಿ ೧೫-೨೦ ಎಕರೆ ಜಮೀನು ಆಕ್ರಮಿಸಿ, ಅಲ್ಲಿ ಕೋಟ್ಯಾನುಕೋಟಿ ದುಡ್ಡು ಸುರಿದು ಆಶ್ರಮ [ಅದು 'ಐಶಾರಾಮ' ಎಂದಾಗಬೇಕು !] ಅನ್ನೋ ಬಂಗಲೆ ಕಟ್ಟಿ, ಜನಸಾಮಾನ್ಯರ ತಲೆ ನುಣ್ಣಗೆ ಮಾಡುವ ಇಂತಹ ಕಪಟಿಗಳನ್ನು ಇನ್ನಿಲ್ಲದ ಶಿಕ್ಷೆಗೆ ಗುರಿಪಡಿಸಬೇಕು, ಆದಾದ ಮೇಲೆ ಧರ್ಮದ ಬಗ್ಗೆ ಮಾತಾಡೋಣ ಅಲ್ಲವೇ ? ಧನ್ಯವಾದಗಳು
ReplyDeleteಇಂತಹವರಿಂದ ಕಾವಿಗೆ ಮತ್ತು ಸನ್ಯಾಸತ್ವಕ್ಕೆ ಬೆಲೆ ಕಡಿಮೆಯಾಗತೊಡಗಿದೆ. ಜಗದಮಿತ್ರ ನಾಗಿ ಸದಾಶಯವನ್ನು ವ್ಯಕ್ತಪಡಿಸಿದ್ದೀರಿ. ಧನ್ಯವಾದ
ReplyDeleteಒಳ್ಳೆಯ ಸನ್ಯಾಸಿಗಳು ಬಹಳ ಜನ ಇದ್ದಾರೆ ನಮ್ಮ ವೇದ ಸಂತುಲಿತ ಆರ್ಷೇಯ ಪೀಠಗಳಲ್ಲಿ, ಎಲ್ಲೋ ಮೂಲೆಯಲ್ಲಿ ಮರೆಯಲ್ಲಿ ದೀಕ್ಷಾ ಬದ್ಧರಾಗಿ ಪ್ರಚಾರವಿಲ್ಲದ ಯೋಗಮಾರ್ಗದಲ್ಲಿ, ಅವಧೂತ ಮಾರ್ಗದಲ್ಲಿ ಅವರುಗಳ ಬಗ್ಗೆ ನನಗೆ ಅಪಾರ ಗೌರವ ಇದೆ, ಆದರೆ ಪಟ್ಟಣಗಳಲ್ಲಿ ವೃತ್ತಿಜನ್ಯ. ಸನ್ಯಾಸ ಅಂತ ಒಂದಿದೆ, ಅದಕ್ಕೆ ದೀಕ್ಷೆ ಕೊಡಲು ' ಹೆಣ್ಣು-ಹುಡುಗಿ[ಕಾಮಿನಿ] ಗುರು' ವೇ ಬೇಕು, ಇಂಥವರಿಗೆ ಯಾವುದೇ ದೀಕ್ಷೆಗಳೆಲ್ಲ ಯಾಕೆ ? ಹಾಗೆಂದರೇನೆಂದು ಬೆಕ್ಕುಗಳಿಗೆ ಗೊತ್ತಿದ್ದರೆ ತಾನೇ ? ಹೀಗಾಗಿ ನಮ್ಮ ಜನರಲ್ಲಿ ಸವಿನಯ ಪ್ರಾರ್ಥನೆ - ಕಾವಿಯನ್ನು ಎತ್ತಿ ಪರೀಕ್ಷಿಸಿ ಆಮೇಲೆ ಸ್ವಾಮೀ ಅಂತ ಕರೆಯಿರಿ, ಇಲ್ಲದಿರೆ ಇಂತಹ ತಾಣಗಳನ್ನು ಪಡ್ಡೆ ಡಿಸ್ಕೋ ಹುಡುಗರ ಕಾವಿ ವೇಷದ ಅಡ್ಡೆ ಅಂತ ತಿಳಿಯಬಹುದು!
ReplyDeleteಹೋಯ್,ಎಂತಾ ಬರೀತ್ರೊ ಮಾರಾಯ್ರೇ.very nice.ವರ್ತಮಾನಕ್ಕೆ ಸ್ಪಂದ್ಸುದು ವಾಸ್ತವದಲ್ಲಿ ಬದ್ಕುದು ನಿಮ್ಮ creativity.ಅದನ್ನಾ ಜೀವಂತ ಇಟ್ಕಂಡಿದ್ರಲಿ.ಖುಷೀ ಆತು.ಬರೀತಾ ಇರಿ.
ReplyDeleteಜಗದ ಜೀವರಾಶಿ ಸನ್ಮಾರ್ಗ ಬಯಸಿದ್ದರೆ ಅದನ್ನು ತೋರಲು ಸದ್ಗುರು ಒಬ್ಬ ಬೇಕೇ ಹೊರತು ಇಂತಹ ಸನ್ಯಾಸಿ ವೇಷದಿಂದ ಹಿಂದೂ ಧರ್ಮಕ್ಕೇ ಕಳಂಕ,ಗೋಪಾಲಕೃಷ್ಣರೇ ತಮ್ಮ ಅಭಿಪ್ರಾಯಕ್ಕೆ ತುಂಬಾ ಆಭಾರಿ
ReplyDeleteಬರೆಯುತ್ತ ಮರೆತೆ, ಮೇಲೆ ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯ ಭಟ್ ತಮಗೆ ಧನ್ಯವಾದಗಳು
ReplyDeleteಹಾಗೂ ಇನ್ನೂ ಮುಂದೆ ಓದಲಿರುವ ಎಲ್ಲರಿಗೂ ನಮನಗಳು
ನಿಮ್ಮ ಬರಹಕ್ಕೆ ಬಹಳ ಉದ್ದದ ಒಂದು ಪ್ರತಿಕ್ರಿಯೆ ಬರೆದೆ. ಪೋಸ್ಟ್ ಮಾಡುವಾಗ ಏನೋ ತಾಂತ್ರಿಕ ತೊಂದರೆಯಾಯ್ತು. ಪೋಸ್ಟ್ ಆಗಲಿಲ್ಲ. ಅಳಿಸಿಹೋಯ್ತು. ಈ ಘಟನೆಯನ್ನು ಬೇರೆಯ ಕನ್ನಡಕ ಹಾಕಿಕೊಂಡು ನೋಡಬಾರದೇಕೆ? ಎಂಬುದು ನನ್ನ ಬರಹದ ಜಿಸ್ಟ್ ಆಗಿತ್ತು.ಇಲ್ಲೇನಾದರೂ ಶಡ್ಯಂತ್ರ ವಿರಬಹುದೇ? ಎಂದು ಕೂಡ ಚಿಂತಿಸ ಬೇಕಾಗುತ್ತದೆ, ಜೊತೆಗೆ ಇಲ್ಲಿ ಒಬ್ಬ ಮಹಿಳೆಯ ಮಾನಾಪಮಾನದ ಪ್ರಶ್ನೆ ಕೂಡ ಇದೆ. ಒಂದು ವೇಳೆ ಈ ಘಟನೆಯಿಂದ ನೊಂದು ಆ ನಟಿ ತನ್ನ ಜೀವಕ್ಕೆ ಅಪಾಯ ತಂದು ಕೊಂಡರೆ!ಅಂತೂ ಇದೊಂದು ಸೆನ್ಸಿಟೀವ್ ಇಶ್ಯೂ. ಜೊತೆಗೆ ಒಬ್ಬ ಸನ್ಯಾಸಿಗಿಂತಲೂ ಒಂದು ಹೆಣ್ಣಿನ ಭವಿಷ್ಯ! ವಿಜ್ಞಾನದ ದೆಸೆಯಿಂದ ಏನು ಬೇಕಾದರೂ ಸೃಷ್ಟಿಸಬಹುದು. ಈ ಬಗ್ಗೆಯೂ ಚಿಂತನ-ಮಂಥನ ನಡೆಯುವುದು ಒಳ್ಳೆಯದಲ್ಲವೇ?
ReplyDeleteಸ್ವಾಮಿ, ತಮ್ಮಲ್ಲಿ ನನ್ನ ಒಂದೇ ವಿನಂತಿ, ವ್ಯಕ್ತಿಯ ಮುಖಭಾವದಿಂದ ಆತ ಯಾರು ಎಂಬುದನ್ನು ಅಳೆಯುವ ಒಂದು ವಿಶಿಷ್ಟ ಚಿತನ್ಯವನ್ನು ಭಗವಂತ ನನ್ನಗೆ ಕರುಣಿಸಿದ್ದಾನೆ, ಇಲ್ಲಿ ಈತ, ದೆಹಲಿಯಲ್ಲಿ ಇನ್ನೊಬ್ಬಾತ! ಇದು ಒಂಥರಾ ಹೇಗಾಗಿದೆ ಅಂದರೆ ನಂಬಬೇಕೋ ಬೇಡವೋ ಅನ್ನುವಷ್ಟು ರೋಸಿಹೋಗಿದೆ, ಆದರೆ ಒಬ್ಬ ನಿಷ್ಠಾವಂತ ಸನ್ಯಾಸಿಯನ್ನು ಯಾರೂ ಈ ಮಟ್ಟಕ್ಕೆ ಅಲುಗಾಡಿಸಲು ಸಾಧ್ಯವಿಲ್ಲ, ಅಲ್ಲದೇ ಈ ಪ್ರಸಂಗದಲ್ಲಿ ನಟಿಯ ಜೀವನ ಆಮೇಲೆ, ಸಮಾಜದ ದುಗುಡ ಮೊದಲು, ನೀವು ತಿಳಿದೇ ಇದ್ದೀರಿ ವ್ಯಕ್ತಿಗಿಂತ ಮನೆ- ಮನೆಗಿಂತ ಊರು-ಊರಿಗಿಂತ ತಾಲೂಕು-ತಾಲೂಕಿಗಿಂತ ಜಿಲ್ಲೆ ಹೀಗೇ ಇಲ್ಲೂ ಕೂಡ ಓರ್ವ ಮಹಿಳೆಯ ಹಿತಾಸಕ್ತಿಗಿಂತ ಸರ್ವೇಷಾಂ ಮಹಾಜನಾನಾಂ ಎಂಬಂತೆ ಸಮಾಜಮುಖಿಯಾಗಿ ನೋಡಬೇಕು, ಇಲ್ಲ ಇಲ್ಲಿ ಷಡ್ಯಂತ್ರವಿಲ್ಲ, ಇದು ನಿತ್ಯ ಆಚರಿತ ನಿತ್ಯ ಕಾಮಾಂಧನ ಚರಿತ್ರೆ, ಹಾಗಾಗಿ ಬರೆಯಲು ನೀವೂ ನಾನೂ ಹೆದರುವ ಅವಶ್ಯಕತೆಯಿಲ್ಲ, ಅಷ್ಟಕ್ಕೂ ಈ ಬೆಕ್ಕಿಗೆ ದೀಕ್ಷೆಯನ್ನು ಕೊಟ್ಟ ಗುರು ಯಾರು ? ತಮ್ಮ ಪ್ರತಿಕ್ರಿಯೆಗೆ ಧನ್ಯವಾದ
ReplyDeleteBhatre...
ReplyDeleteKhavi...khadi...haagu khakhi ivattina dinamaanadalli kakaara kaledukondive!
purandara daasara pada nenapaaguttide
"hennu...honnu...manninaasheyoliddu anyaayavaayitu idakenu maddu? baarayya ranga baaraya krishna...."
Sogasaagi hrudayangamavaagi barediddeeri
ದಾಸರು ಅನುಭವದಿಂದ ಬರೆದಿದ್ದಾರೆ, ಸುಮ್ಮನೇ ತಲೆ ಇಲ್ಲದೇ ಕಾಲಹರಣಕ್ಕೆ ಬರೆದ ಬರಹಗಳಲ್ಲ ದಾಸರ ಪದಗಳು, ಅದನ್ನು ಇಲ್ಲಿ ಹೋಲಿಸಿ ಪ್ರತಿಕ್ರಿಯಿಸಿದ ವಸಂತ್ ನಿಮಗೆ ಧನ್ಯವಾದ
ReplyDeleteಸಾಂಧರ್ಭಿಕ ಲೇಖನ..ಚೆನ್ನಾಗಿದೆ.
ReplyDeleteಧನ್ಯವಾದಗಳು ನಾರಾಯಣರೇ, ನೀವೆಲ್ಲ ಓದಿ ಅಭಿಪ್ರಾಯದಿಂದ ನನ್ನ ನಿಲುವನ್ನ ಅರ್ಥೈಸಿದ್ದೀರಲ್ಲ ಅದು ಬಹಳ ಸಂತಸದ ವಿಷಯ
ReplyDeleteಕಾಮ, ಕ್ರೋಧ, ಮದ, ಮತ್ಸರ ಮೋಹ, ಲೋಭ ಇವೆಲ್ಲವುಗಲ್ಲನ್ನು ಮೆಟ್ಟಿ ನಿಂತವನೆ ನಿಜವಾದ ಸನ್ಯಾಸಿ. ಆದರೆ ಇವರಿಗೆಲ್ಲ ಕಾವಿಯೇತಕೆ? ಸಂಯಸಿಯೆಂಬ ಪಟ್ಟವೆತಕೆ?
ReplyDeleteಸನ್ಯಾಸಿ ಪಟ್ಟ ಬಲು ಕಷ್ಟದ್ದು, ಮಿಕ್ಕಿದ ಯಾವುದೇ ಕೆಲಸವನ್ನಾದ್ರೂ ಮಾಡಬಹುದು ಆದ್ರೆ ಈ ಪಟ್ಟ ತ್ಯಾಗದ ಪಟ್ಟ, ಎಲ್ಲದರ ಮಧ್ಯೆ ಇದ್ದೂ ಯಾವುದನ್ನೂ ಬಯಸದ, ಸಮಾಜವೇ-ವಿಶ್ವವೇ ತನ್ನ ಕುಟುಂಬವೆಂದು ಬಗೆದು ನಿರ್ವ್ಯಾಜ ಪ್ರೀತಿ ತೋರುವ ನಿಜವಾದ ಸನ್ಯಾಸಿ ಆತ ಜಗನ್ಮಾನ್ಯ, ಇದು ಅಂತಹ ಅದ್ಬುತ ಪಟ್ಟ ಕೂಡ, ನಮ್ಮೆದುರು ಅಂತಹ ಪೂಜ್ಯರುಗಳು ಇನ್ನೂ ಇದ್ದಾರೆ, ಆದ್ರೆ ಬೂಟಾಟಿಕೆಯ ಬೆಕ್ಕುಗಳಿಂದ ಉಳಿದ ನಿಜವಾದ ಸನ್ಯಾಸಿ ಸಂಕುಲಕ್ಕೆ ತೊಂದರೆ-ಕಳಂಕ,ಅದರ ಕುರಿತು ಈ ಕಥನ-ಕವನ, ಧನ್ಯವಾದ ಪ್ರವೀಣ್ .
ReplyDeleteಭಟ್ಟರೆ,
ReplyDeleteನಮಸ್ತೆ. ಘಟನೆಯ ಬಗ್ಗೆ ನಾನು ಟಿ.ವಿ.ಯಲ್ಲೂ ವಿವರ ನೋಡಿಲ್ಲ.ಇಂದು ಹೀಗಾಗುವ [ಸೃಸ್ಟಿಸುವ] ಛಾನ್ಸ್ ಇದೆಯಾದ್ದರಿಂದ ಹೀಗೂ ಪ್ರಾಜ್ಞರು ಚಿಂತಿಸ ಬಾರದೇಕೆ ಎಂಬುದಷ್ಟೇ ನನ್ನ ಅನಿಸಿಕೆಯಾಗಿತ್ತು.ಆದರೆ ಕಾವಿತೊಟ್ಟು ಮಾಡತ್ತಿರುವ ಅಪರಾಧಗಳಿಗೇನೂ ಕಮ್ಮಿ ಇಲ್ಲ.ಕಾವಿ ಪ್ರಂಚಕ್ಕೇ ಕಳಂಕವಾಗಿರುವ ಕಳ್ಳ ಕಾವಿಧಾರಿಗಳನ್ನು ಕಂಡು ರೋಸಿಹೋಗಿರುವೆ.ಘಟನೆಯ ಬಗ್ಗೆ ನಿಮಗೆ ಸಾಕಷ್ಟು ಮಾಹತಿ ಇದ್ದಂತಿದೆ. ಸಾಮಾಜಿಕ ಜಾಗೃತಿಗಾಗಿ ಬರೆದಿರುವ ನಿಮ್ಮ ಬರಹ ಸಕಾಲಿಕವಾಗಿದೆ.ಜನರು ಯಾವಾಗ ಜಾಗೃತಾಗುತ್ತಾರೋ ಕಾಣೆ.
"ಹುಚ್ಚರ ಸಂತೆ" ಎಂಬ ನನ್ನದೊಂದು ಕವನದಲ್ಲಿ ಒಂದು ನುಡಿ ಹೀಗಿದೆ...
ಜಗವೊಂದು ನೂರಾರು ಜಗದ್ಗುರುಳಂತೆ
ಉಳ್ಳವರು ದರುಶನವ ಮಾಡುವರಂತೆ
ಹಲವರಿಗೆ ಹಗಲಿರುಳು ಹೊಟ್ಟೆಗಿಲ್ಲದ ಚಿಂತೆ
ಧರ್ಮವೆಂಬುದು ಇಲ್ಲಿ ವ್ಯಾಪಾರವಂತೆ|
ಏನಾದರೇನಂತೆ ಇದು ಹುಚ್ಚರಾ ಸಂತೆ|
ಇದೊಂದು ನುಡಿ ಹಲವರ ಆಕ್ಷೇಪಕ್ಕೆ ಕಾರಣವಾಯ್ತು. ಆದರೇನಂತೆ ನನಗನಿಸಿದ್ದನ್ನು ನಾನು ಬರೆದಿದ್ದೆ. ಅದರಲ್ಲಿ ನಾನು ಸತ್ಯ ಕಂಡುಕೊಂಡಿದ್ದೆ.ನಿಮ್ಮ ನೇರನುಡಿಗಳಿಂದ ಆ ಕಳ್ಳ ಸ್ವಾಜಿಯ ಮೇಲಿನ ಆಕ್ರೋಶ ಇನ್ನೂ ಆರಿಲ್ಲವೆಂಬುದು ಅರ್ಥವಾಯ್ತು. ಸತ್ಯಪ್ರತಿಪಾದಕರಿಗೆ ಸಾತ್ವಿಕಸಿಟ್ಟು ಇರುತ್ತೆ. ನಮಸ್ತೆ.ಪರಮಹಂಸ ಬರಹವನ್ನು ನಾಳೆ ರಾತ್ರಿ ಓದುವೆ.ಇನ್ನೆರಡು ದಿನ ಹಳ್ಳಿವಾಸ.
ನಾನು ಮತ್ತೆ ಈ ಕಥನ-ಕವನದ ಕಡೆ ತಲೆ ಹಾಕಿರಲಿಲ್ಲ, ಕಾರಣ ಮನಸ್ಸು ಸರಿ ಇರಲಿಲ್ಲ, ಕಾವಿಧಾರಿಗಳಿಗೆ ಹಲವಾರು ಎಕರೆಯ ಜಮೀನೇಕೆ ? ಕೃತ್ರಿಮ ತೀರ್ಥ ಸರೋವರವೇಕೆ ? ಹೀಗೆಲ್ಲ, ನನ್ನ ಅತೀ ಮಿತ್ರರೊಬ್ಬರು ಕಾವಿ ಮಳ್ಳರಾಗಿದ್ದಾರೆ, ಕಾವಿ ಕಂಡರೆ ಸಾಕು ಅಡ್ಡ ಬೀಳೋದು, ನಾನು ಹೇಳಿದ್ದು ಇಂತಹ ಕಾವಿಗಳಿರುವಾಗ ಅವರ ಸನ್ಯಾಸವನ್ನು ಸತ್ಯಾಸತ್ಯತೆಯ ಒರೆಗಲ್ಲಿಗೆ ಹಚ್ಚಿ ಆಮೇಲೆ ನಿರ್ಣಯ ಮಾಡೋಣ ಅಲ್ಲವೇ ? ಇದಲ್ಲದೇ ಸನ್ಯಾಸಿಯ ಆಶ್ರಮದಲ್ಲಿ ಎಳೆವಯಸ್ಸಿನ [೫೦ ರ ಒಳಗಿನ] ಹೆಂಗಳೆಯರು ಇರಬಾರದು, ಹಲವರ ಜೊತೆಗೇ ಇದ್ದಾಗ ಇರಬಹುದೇ ವಿನಃ ಏಕಾಂಗಿಯಾಗಿರುವ ಅಥವಾ ತನ್ನ ಅಂತರಂಗದ ಒಬ್ಬರೋ ಇಬ್ಬರೋ ಇರುವಾಗ ಸನ್ಯಾಸಿಯ ಜೊತೆಗೆ ಇದ್ದರೆ ಇಬ್ಬರ ಮನಸ್ಸಿಗೂ ಅದು ಕೆಲಸ ಕೊಡುತ್ತದೆ, ಅದರಲ್ಲಿ ನಿಗ್ರಹಿಸಿ ಜಯಸಾಧಿಸುವವರು ಕೇವಲ ಕೆಲವು ಸನ್ಯಾಸಿಗಳು. ಹೀಗಾಗಿ ಇದು ಕಳ್ಳ ಕಾವಿ ಎಂದು ಮನಸ್ಸು ಹೇಳಿದೆ ,ಬರೆದಿದ್ದೇನೆ, ಆಮೇಲೆ ನಿತ್ಯಾನಂದ ಬಂದು ರಾಜಕೀಯ ಬಲದಿಂದ ಮುಚ್ಚಿಹಾಕುತ್ತಾನೆ ನೋಡುತ್ತಾ ಇರಿ! ನಮಸ್ಕಾರ
ReplyDeleteಸಹೃದಯರೇ, ಮೊನ್ನೆ ಜಗದಮಿತ್ರ ತನ್ನ ಭಾರವಾದ-ಖಾರವಾದ ಮನಸ್ಸಿನಿಂದ ' ಕಾವಿಯ ಕಳ್ಳ ಬೆಕ್ಕು ' ಎಂಬ ಕವನ ಬರೆದಿದ್ದನಷ್ಟೇ, ಗೂಗಲ್ ಬಜ್ ನಲ್ಲಿ ನಮ್ಮ ಓದುಗ ಮಿತ್ರರಾದ ಶ್ರೀಕಾಂತ್ ಹೆಗಡೆಯವರು ಈ ಬಗ್ಗೆ ತಮ್ಮ ಅತೀವ ವಿರೋಧವನ್ನು ವ್ಯಕ್ತಪಡಿಸಿದ್ದರು, ಇವತ್ತು ಕಳ್ಳ ಬೆಕ್ಕೇ ಸ್ವತಹ ತಾನೇ ಹಾಳು ಕುಡಿದಿದ್ದು ಅಂತ ಒಪ್ಪಿಕೊಂಡಿದೆ ಮಾಧ್ಯಮಗಳಲ್ಲಿ ಅರ್ಥಾತ್ ಈ ತರ್ಕದಲಿ ಕುತರ್ಕ ಮಾಡಹೊರಟ ನಮ್ಮ ಮಿತ್ರರಿಗೆ ಹೇಳುತ್ತಿದ್ದೇನೆ- ಜಗದಮಿತ್ರ ಬರೆಯುವಾಗ ದೇಹದ
ReplyDelete' ಒಳಗಿನ ಬಲ' [ಆತ್ಮ ಬಲ] ಇದ್ದರೆ ಮಾತ್ರ ಜಗದಮಿತ್ರನಿಗೆ ಆ ಕಾವ್ಯ ಬರೆಯಲು ಸಾಧ್ಯ, ಇಲ್ಲದಿದ್ದರೆ ಸಾಧ್ಯವೇ ಇಲ್ಲ, ನಿಜವಾಗಿಯೂ ಹೇಳುತ್ತಿದ್ದೇನೆ ಅಂದು ಮನಸ್ಸು ತುಂಬಾ 'ನಾರಸಿಂಹಾವತಾರ'ವಿತ್ತು . ಅದು ಇದ್ದಾಗಲೇ ಬರೆದಿದ್ದು ಬಿಟ್ಟರೆ ನಂತರ ಅದು ಸಾಧ್ಯವಿರಲಿಲ್ಲ. ಕವಿಮನಕ್ಕೆ ಸಾತ್ವಿಕತೆಗೆ ಒಂದು ಅದ್ಬುತ ಶಕ್ತಿಯಿರುತ್ತದೆ, ಅದರ ಅನುಭವ ಪಡೆದು ನಾನು ನಾನಲ್ಲದಾಗ ಬರೆಯುವುದೇ 'ಜಗದಮಿತ್ರನ ಕಗ್ಗ'. ತರ್ಕದಲ್ಲಿ ಯಾರು ಗೆದ್ದರು ಅನ್ನುವುದಕ್ಕಿಂತ ಇದು ಧರ್ಮಕ್ಕೆ ಸಂದ ಜಯ, ಅಂತೂ ನಾರಸಿಂಹ ಬಂದು ಹೇಳಿದ್ದು ನಿಜವೇ ಆಯಿತು, ತಮಗೆಲ್ಲ ಧನ್ಯವಾದಗಳು.