ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, March 9, 2010

ಬೆಡಗಿನ ಮುಂಜಾವು

ಬೆಡಗಿನ ಮಂಜಿನ ಮುಂಜಾವನ್ನು ಅನುಭವಿಸಬೇಕೆ ಹೊರತು ಅದನ್ನು ಹಾಡಿನಲ್ಲಿ, ಪದಗಳಲ್ಲಿ ಬಣ್ಣಿಸಲು ಸ್ವಲ್ಪ ಕಷ್ಟ, ಒಂದೊಂದು ಕೆಡೆಗೆ ನಮ್ಮ ನಿಸರ್ಗದ ಬೆಳಗು ಮತ್ತು ಬೆಡಗು ಒಂದೊಂದು ಥರ ! ಇಡೀ ದಿನದಲ್ಲಿ ತಂಪಾದ ವಾತಾವರಣ ಇರುವುದು ಮುಂಜಾವಿನಲ್ಲಿ ಮಾತ್ರ. ಬೆಳಗಿನ ೫ ಗಂಟೆ ಅತೀ ತಣ್ಣಗಿನ ಕಾಲ ವೆಂದು ವಿಜ್ಞಾನ ಹೇಳುತ್ತದೆ. ನಮಗೆ ಅತ್ಯುಪಯುಕ್ತವಾದ ozone ಪದರಕೂಡ ಈ ಹೊತ್ತಿನಲ್ಲೇ ಭೂಮಿಯ ಹತ್ತಿರಕ್ಕೆ ಇಳಿದಿರುತ್ತದೆ.


ಈ ಸಮಯ ಆನಂದಮಯ. ಸ್ವಲ್ಪ ಮಂಜು ಇದ್ದರೆ, ಥರಥರದ ಹೂವುಗಳು ಅರಳಿ ಪರಿಮಳ ಬೀರಿದ್ದರೆ, ಗಿಡ-ಮರಗಳು ಮಂದ ಮಾರುತಕ್ಕೆ ತಲೆಯಲ್ಲಾಡಿಸಿ ತೊನೆಯುತ್ತಿದ್ದರೆ, ಹಕ್ಕಿಗಳು ತಮ್ಮ ವಿವಿಧ ಧ್ವನಿಗಳಲ್ಲಿ ಕಲರವ ಎಬ್ಬಿಸಿದರೆ, ದುಂಬಿಗಳು ಹಾರಡಿದರೆ, ಚಿಟ್ಟೆಗಳೂ ಕೈ ಜೋಡಿಸಿದರೆ, ಆಕಳ ಎಳೆಗರುಗಳು ಅಂಬೆ ಎಂದು ಕೂಗಿದರೆ, ಮಾವು ತನ್ನ ನಳಿದೋಳುಗಳಿಂದ ತೋರಣ ಕಟ್ಟಿದ್ದರೆ, ಸಣ್ಣ ಕಾಮನ ಬಿಲ್ಲು ಹುಟ್ಟಿಕೊಂಡರೆ ಯಾರಿಗೆ ಬೇಕು ಇಂದ್ರನ ನಂದನವನ, ಇದೇ ಭುವಿಯ ನಂದನವನವಲ್ಲವೇ ? ಇದನ್ನು ನೀವೂ ಹಾಡಿನ ಮೂಲಕ ಅನುಭವಿಸಿ ಬನ್ನಿ --------



ಬೆಡಗಿನ ಮುಂಜಾವು


ಎಷ್ಟು ಚಂದವೀ ಸೃಷ್ಟಿಯ ಸೊಬಗಿದು
ಇಂಪಿನ
ತಂಪಿನ ಮುಂಜಾವು
ಇಷ್ಟವಾಯ್ತೆನಗೆ ನಿಸರ್ಗ ನೋಂಪಿಯು
ಬೆಡಗಿನ
ನಿತ್ಯೋತ್ಸವದರಿವು


ಚೆಂಗುಲಾಬಿಯ ತುಂಬ ಮುತ್ತು ಪೋಣಿಸಿ ಇಟ್ಟು
ಮತ್ತೆ
ದಿನಕರನು ಬರಲು
ಬೃಂಗಕುಂತಳೆ ಹೇಳು ಯಾರಿಗಿದು ಔತಣವು
ಪ್ರತಿದಿನವು ನಡೆಯುತಿರಲು


ಮಂದಮಾರುತ ಬೀಸಿ ಮುಂಗುರಳ ನೇವರಿಸೆ
ಗಿಡ
-ಮರಗಳವು ನಲಿಯುತಾ
ಬಂದಜನತೆಗೆ ಹಸಿರ ಹುಲ್ಲ ಚಾಪೆಯ ಹಾಸಿ
ಕರೆ
ವಳದೋ ತಾಯಿ ಸತತ


ಜಾಜಿ ಮಲ್ಲಿಗೆ ಕೇದಗೆ ಸಂಪಿಗೆಯ
ಕಂಪು
ಬನದ ತುಂಬೆಲ್ಲ ಹರಡಿ
ರಾಜದುಂಬಿಯ ಕರೆಯೆ ನಡೆಸಿಹವು ಪೈಪೋಟಿ
ರಾಜಿಸುತ
ತನುವನೀಡಿ


ಮಾವು ತೂಗುತ ತೋರಣವ ಕಟ್ಟಿ ಬಾಂದಳದಿ
ಜಾವದಲೆ ಶುಭವಕೋರಿ
ಆವು ಕರುಗಳು ಕೊರಳ ಗಂಟೆಯಾಡಿಸಿ ತಾವು
ಜೀವನೋತ್ಸವದಿ ಹಾರಿ


ಹೊಗೆಯ ನಗುವಿನ ಮಂಜು ಮುಸುಕಿಹುದು
ಬಯಲಿನಲಿ
ತಣ್ಣನೆಯ ಚಳಿಯ ಬೀರಿ
ಬಗೆಯ ಚಿಟ್ಟೆಗಳೆಲ್ಲ ಹಾರಾಡಿ ನಲಿದಿಹವು
ಸಿಹಿಯ
ಮಕರಂದ ಹೀರಿ

17 comments:

  1. ಚಿತ್ರ ಮತ್ತು ಹಾಡು ಎರಡೂ ತುಂಬಾ ಚೆನ್ನಾಗಿವೆ ಸಾರ್.......

    ReplyDelete
  2. ಬೆಳಗ್ಬೆಳಗ್ಗೆ ಮನಸ್ಸು ತಂಪಾಯಿತು ಇದನ್ನು ಓದಿ.
    ಧನ್ಯವಾದಗಳು.

    ReplyDelete
  3. Nice song, easy to sing & to enjoy !

    ReplyDelete
  4. ಭಟ್ರೇ .
    ನಿಜ ಬೆಳಗಿನ ಬೆಡಗಿನ ಮುಂಜಾವನ್ನು ಅನುಭವಿಸಬೇಕೆ ಹೊರತು ಪದ,ಪದ್ಯಗಳಲ್ಲಿ ಅಲ್ಲ .ಅದರಲ್ಲೂ ನೀವು ಬರೆದ ಆನಂದಮಯ ಸಮಯವನ್ನು ನಗರಪ್ರದೇಶದಲ್ಲಿ ಅನುಭವಿಸಲು ಸಾಧ್ಯವಾಗದ ಮಾತಲ್ವಾ?ಮರಗಳ ಎಡೆಯಲ್ಲಿ ಇಣುಕುವ ಸೂರ್ಯಕಿರಣ ನೋಡುವುದೇ ಆನಂದಕರ.ನನ್ನ ಮನಸ್ಸನ್ನು ಊರಿನ ಕಡೆ ಒಯ್ದದ್ದಕ್ಕೆ ಧನ್ಯವಾದಗಳು

    ಚಿತ್ರ ಮತ್ತು ಪದ್ಯ ಎರಡು ಸೊಗಸಾಗಿದೆ.

    ReplyDelete
  5. ಭಟ್ರೇ,ಚಿತ್ರ ಮತ್ತು ಕವನ ಎರಡೂ ತುಂಬಾ ಚೆನ್ನಾಗಿವೆ

    ReplyDelete
  6. ಇದುವರೆಗೆ ಓದಿ ಹಾಗೇ ನೇಪಥ್ಯ ಸೇರಿದ ಮತ್ತು ಭಾವನಾತ್ಮಕವಾಗಿ ಪ್ರಿತಿಕ್ರಿಯಿಸಿದ ಅಂತರಂಗದ ಮಾತುಗಳು, ರಾಜೀವ್, ರಶ್ಮಿ ಹಾಗೂ ಶಶಿ ಈ ಎಲ್ಲರಿಗೂ, ಮುಂದೆ ಓದಲಿರುವ ಎಲ್ಲಾ ಓದುಗ ಮಿತ್ರರಿಗೂ ಧನ್ಯವಾದಗಳು

    ReplyDelete
  7. ಇನ್ನೇನು ನಾನು ನಮನ ಸಲ್ಲಿಸುವಾಗ ಮಧ್ಯೆ ಬಂದು ಸಂದೇಶಿಸಿದವರು 'ಕೂಸು ಮುಳಿಯ' ಅವರಿಗೂ ನಮನಗಳು

    ReplyDelete
  8. ಬೆಳಗಿನಿಂದ ಇದ್ದ ಒತ್ತಡಗಳು ಇಲ್ಲಿ ಚಿತ್ರ ನೋಡಿದೊಡನೆ ಹಗುರವಾಯ್ತೆಂದರೆ ಅತಿಶಯೋಕ್ತಿ ಎನಿಸಬಹುದು. ಆದರೂ ಅದು ಸತ್ಯ. ಪ್ರಕೃತಿಯೇ ಹಾಗೆ. ಪಟ್ಟಣಗಳ ಕಾಂಕ್ರೀಟ್ ಕಾಡನ್ನು ಕಂಡು ರೋಸಿಹೋಗಿದೆ. ಪಟ್ಣಣದಿಂದ ಹಳ್ಳಿಯೆಡೆಗೆ ಹೋಗುವ ಕಾತುರ.ಹಗಲು ಒಂದಿಷ್ಟು ಅಡೆತಡೆಗಳಿರುವುದೇ ಬೇಸರ.
    ನಿತ್ಯವೂ ಹೀಗೆಯೇ ಮನಕೆ ಹಿತಕೊಡುವ ಚಿತ್ರಗಳು, ಅದಕ್ಕೆ ಪೂರಕ ಕವನಗಳು, ಸೊಕ್ತವಾದ ಮಾತುಗಳು ಪ್ರಕಟಾಗುತ್ತಿರಲೆಂದು ಆಶಿಸುವೆ.

    ReplyDelete
  9. ವಿ ಅರ ಭಟ್ ಸರ್
    ತುಂಬಾ ಚೆಂದನೆಯ ಕವನ
    ಬೆಳಗಿನ ಜಾವದ ವರ್ಣನೆ ಬಹಳ ಸೊಗಸಾಗಿದೆ

    ReplyDelete
  10. ನಿಜ ಸರ್,, ನೀವು ಹೇಳ್ತಾ ಇರೋದು,,, ಬೆಳಗಿನ ಮುಂಜಾನೆಯ ಸೊಬಗನ್ನು ಅನುಭವಿಸಿಯೇ ಸವಿಯಬೇಕು....
    ನಿಮ್ಮ ಚಿತ್ರ ಹಾಗೆ ಕವನ ಎರಡು ತುಂಬಾ ಚೆನ್ನಾಗಿ ಇದೆ.....
    ಗುರು

    ReplyDelete
  11. ಸ್ನೇಹಿತರೇ, ಊರಲ್ಲಿ, ಹಳ್ಳಿಯಲ್ಲಿ ಸಿಗುವ ವಾತಾವರಣ ಪಟ್ಟಣ,ಶಹರಗಳಲ್ಲಿ ಎಂದೂ ಸಿಗಲು ಸಾಧ್ಯವಿಲ್ಲ. ಅಲ್ಲಿನ ಪರಿಸರ ನಿಸರ್ಗ ನಿರ್ಮಿತ, ಇಲ್ಲಿಯದು ಮಾನವ ನಿರ್ಮಿತ, ಅದಕ್ಕೇ ಅದು ಅದೇ ಇಡಿ ಇದೇ -ಅದು ಎಂದಿಗೂ ಇದಾಗಲು ಸಾಧ್ಯವೇ ಇಲ್ಲ! ನನ್ನ ಬಾಲ್ಯದಲ್ಲಿ ನಾನು ಸಹಜವಾಗಿ ನಿಸರ್ಗಮುಖಿಯಾಗಿದ್ದೆ, ಯಾವಾಗಲೂ ಹಸಿರು ಗಿಡಮರಗಳು,ಪಶು ಪಕ್ಷಿಗಳು, ಬಣ್ಣದ ಚಿಟ್ಟೆ -ದುಂಬಿಗಳು, ಎಳೆಯ ಕರುಗಳು, ಎಲ್ಲಾದ್ರೂ ಸಿಕ್ಕಿದ್ರೆ ಸಣ್ಣ ಕುರಿ ಮರಿಗಳು, ಅಳಿಲು, ಗಿಳಿ ಹೀಗೇ ಎಲ್ಲವುಗಳ ಮಧ್ಯೆಯೇ ಬೆಳೆದೆ. ನಮ್ಮನೆಯ ಪರಿಸರ ಮಲೆನಾಡ ತೊಟ್ಟಿ ಮನೆಯ ಪರಿಸರಕ್ಕೆ ತೀರಾ ಭಿನ್ನವಿರಲಿಲ್ಲ, ಹೀಗಾಗಿ ಇಂದು ಅದೆಲ್ಲಾ ಅನುಭವಿಸಲು ಸಿಗದ ನೆನೆಪು ಅಷ್ಟೇ, ಆ ನೆನೆಪನ್ನೇ ಮೆಲುಕುವುದು, ಅದರ ಹಂಬಲದಲ್ಲೇ ಗುಟುರುವುದು ಕವಿಯ ಆದ್ಯತೆ, ಅನುಕೂಲ. ಕಲಾವಿದನೊಬ್ಬ ತನ್ನ ಚಿತ್ರಗಳಿಂದ ಹಲವು ಜನರನ್ನು ರಂಜಿಸಿದಂತೆ, ಹಾಡುಗಾರ ತನ್ನ ಹಾಡುಗಾರಿಕೆಯಿಂದ ಹಲವರ ಮನವನ್ನು ಮುದಗೊಳಿಸಿದಂತೆ, ಕವಿ ತನ್ನ ಕಲ್ಪನೆಯ ಸಾಕಾರದಿಂದ ಕಾವ್ಯದಲ್ಲಿ ತನ್ನ ಮನೋಭೂಮಿಕೆ ಏನಿತ್ತು ಅನ್ನುವುದನ್ನು ಚಿತ್ರಿಸುತ್ತಾನೆ, ಅದೇ ಕವಿಯೋರ್ವನ ನಿಜದ ನೆಲೆ.

    ನಿಮ್ಮೆಲ್ಲರ ಪರಿಸರ ಪ್ರೇಮ, ಹಸಿರು ಗಿಡ-ಮರಗಳ ಮೇಲಿನ ಪ್ರೀತಿ ನೋಡಿದರೆ ಅದು ಪುನಃ ವರ್ಣಿಸಲು ಕಷ್ಟಸಾಧ್ಯವೇ ಸರಿ. ಪ್ರತಿಕ್ರಿಯಿಸಿದ ಶ್ರೀಧರ್, ಡಾ|ಗುರುಮೂರ್ತಿ ಮತ್ತು ಗುರು --ತಮಗೆಲ್ಲರಿಗೂ ಹಾಗೂ ಇನ್ನೂ ಓದಲಿರುವ ಎಲ್ಲರಿಗೂ ನನ್ನ ನೆನಕೆಗಳು, ಸವಿನೆನಪುಗಳು,ಧನ್ಯವಾದಗಳು.

    ReplyDelete
  12. "ಒಂದಿಷ್ಟು ಅಡೆತಡೆಗಳಿರುವುದೇ ಬೇಸರ" ಎಂದು ಬರೆದ ನೆನಪು, ಆದರೆ "ಹಗಲು ಒಂದಿಷ್ಟು ಅಡೆತಡೆಗಳಿರುವುದೇ ಬೇಸರ".ಎಂದು ಪ್ರಕಟವಾಗಿದೆ.ತಪ್ಪು ತಿದ್ದಲು ಅವಕಾಶವದ್ದಿದ್ದರೆ ಚೆನ್ನಾಗಿತ್ತು. ವರ್ಡ್ ವೇರಿಫಿಕೇಶನ್ ಆಪ್ಶನ್ ಬೇಕೆ?

    ReplyDelete
  13. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ನಡೆಯುವರೆಡಹದೆ ಕುಳಿತವರೆಡಹುವರೇ ?

    ReplyDelete
  14. ಚೆ೦ದದಾ ಕವನ. ಇದು ಬರೀ ಬೆಳಗಲ್ಲೋ ಅಣ್ಣಾ ಬೆಡಗು೧ ಎ೦ಬ ಕವಿ ಮಾತಿನ೦ತಿದೆ!

    ReplyDelete
  15. ಧನ್ಯವಾದಗಳು ಸೀತಾರಾಮ್ ತಮಗೆ

    ReplyDelete