ನಾವು ತುಂಬಾ ಚಿಕ್ಕವರಿದ್ದೆವು. ನಮ್ಮ ಅಜ್ಜನ ಹತ್ತಿರ ಕತೆಗಾಗಿ ಬಹಳ ಪೀಡಿಸುತ್ತಿದ್ದೆವು. ದಿನವಿಡೀ ಕೆಲಸದಲ್ಲಿ ದಣಿದಿರುವ ಅವರು ಸಾಯಂಕಾಲ ಸುಸ್ತಾಗಿ ಮಲಗುತ್ತಿದ್ದರು. ಆದರೂ ನಮ್ಮಕೋರಿಕೆಯನ್ನು ಎಂದೂ ತಿರಸ್ಕರಿಸಿದವರಲ್ಲ. ಮಳೆಗಾಲದಲ್ಲಿ ಅವರು ಮಲಗಿರುವಾಗ ಅವರಕಾಲುಗಳ ಮಧ್ಯೆ ಮಲಗಿಕೊಂಡು ಆಟವಾಡುವುದು ನನ್ನ ಪರಮ ಖುಷಿಯ ವಿಷಯವಾಗಿತ್ತು. ಹೀಗೇಒಂದುದಿನ ನನ್ನ ಒತ್ತಾಯಕ್ಕೆ ಕುತೂಹಲಕ್ಕೆ ’ಲಾಟೀನು ಮಹಾತ್ಮೆ’ ಯನ್ನು ಹೇಳತೊಡಗಿದರು....
ಆಗ ಬ್ರಿಟಿಷರ ಆಳ್ವಿಕೆಯಿತ್ತು. ಎಲ್ಲರಮನೆಯಲ್ಲೂ ರಾತ್ರಿ ಹರಳೆಣ್ಣೆ ದೀಪ. ಇಡೀ ಊರಿನಲ್ಲಿ ಎಲ್ಲೆಲ್ಲೂ ಸೀಮೆ ಎಣ್ಣೆ ದೀಪ ಕೂಡಇರಲಿಲ್ಲ. ಸ್ವಲ್ಪ ವರುಷ ಕಳೆದಮೇಲೆ ಪಟೇಲರ ಮನೆಯಲ್ಲಿ ಬುಡ್ಡಿ ದೀಪ ಬಂತು. ಆಗ ಅದು ಅಷ್ಟೇನೂ ಸುದ್ದಿಯಾಗಲಿಲ್ಲ. ಊರಲ್ಲಿಎಲ್ಲದರಲ್ಲೂ ಪ್ರಥಮ ಪಟೇಲರ ಮನೆಯಾಗಿತ್ತು.ಏನಾದರೂ ಹೊಸ ಬದಲಾವಣೆ ಬಂದರೆ ಅದು ಪಟೆಲರಮನೆಯಿಂದಲೇಎಂಬುದು ಎಲ್ಲರಿಗೂ ಗೊತ್ತು. ಇಂತಹ ಒಂದುದಿನ ’ಲಾಟೀನು’ ಎಂಬ ಹೊಸ ದೀಪ ಬಂದಿರುವುದಾಗಿಯೂ, ಅದನ್ನುನೋಡಬಯಸುವವರು ಒಟ್ಟಾಗಿ ಬಂದರೆ ಆಗ ತೋರಿಸಲಾಗುವುದು ಎಂಬ ಸುದ್ದಿ ಬಂತು. ನಾವೆಲ್ಲ ೮-೧೦ವಯಸ್ಸಿನ ಮಕ್ಕಳು, ನಮಗೆ ಮೈಯೆಲ್ಲ ಪುಳಕ ! ಸುದ್ದಿ ಬಂದ ಸ್ವಲ್ಪ ಹೊತ್ತಿನಲ್ಲೇ ಅನೇಕರು ಒಟ್ಟಾದೆವು. ಎಲ್ಲರೂ ಪಟೇಲರ ಮನೆಗೆ ಹೋದೆವು. ಅಲ್ಲಿಮೊದಲು ಆಥರದ ಹೊಸವಸ್ತು ಯವುದೂ ಕಣ್ಣಿಗೆ ಕಾಣಿಸಲಿಲ್ಲ. ಹಾಗೇ ಕಾಯುತ್ತ ಕುಳಿತೆವು. ಮಾತನಾಡುವಹಾಗಿಲ್ಲ-ಪಟೇಲರಮನೆ! ಹಾಗೂ ಹೀಗೂ ಆ ಹೊತ್ತಿಗೆ ಊರು-ಪರವೂರು ಎಂದು ಸುಮಾರು ೫೦೦ ಜನ ಸೇರಿದ್ದರು ! ಪಟೇಲರ ಮಗಹೊರಗೆ ಬಂದರು.ಬಂದವರೇ ವಿಷಯ ತಿಳಿದು ಎಲ್ಲ ಸಾಲಾಗಿ ಕುಳಿತುಕೊಳ್ಳಬೇಕೆಂದೂ, ’ಲಾಟೀನು’ ಬಹಳ ನಾಜೂಕಿನ ಮತ್ತುದುಬಾರಿಯ ವಸ್ತುವಾಗಿರುವುದರಿಂದ ಅದು ಬಿದ್ದುಹೋದರೆ ಅದರಲ್ಲಿರುವ ಗಾಜು ಒಡೆದುಹೋಗುತ್ತದೆಂದೂ ತಿಳಿಸಿ ತಾಕೀತುಮಾಡಿದರು. ಎಲ್ಲರೂ ಗಪ್ ಚುಪ್! ಬಾಯ್ ಮುಚ್ಚಿ ಸಾಲಾಗಿ ಕುಳಿತುಕೊಂಡೆವು. ಮೊದಲನೋಟಕ್ಕೆ ತೇರಿನಾಕಾರದಲ್ಲಿರುವಒಂದು ಸ್ಪುರದ್ರೂಪಿ ವಸ್ತು ಕಂಡಿತು. ಅದು ಮೈತುಂಬಾ ಗಾಜನ್ನು ಹೊದ್ದಿತ್ತು. ಅದನ್ನು ಹಗಲುಹೊತ್ತು ಬಿದ್ದುಹೋಗದಿರಲೆಂದುಒಂದು ಮರದ ಪೆಟ್ಟಿಗೆಯಲ್ಲಿ ಹಾಕಿಡುತ್ತಿದ್ದರು.
’ದೂರ ಕೂತ್ಗೊಳಿ, ಇಲ್ಲಾಂದ್ರೆ ಒಳ್ಗಡೆ ಇಟ್ಟುಬಿಡ್ತೇನೆ’--ಪಟೇಲರ ಮಗ ಗುಡುಗಿದರು. ತುಂಬಾ ದೂರ ಕುಳಿತರೆ ನಮಗೆ ಅದುಸರಿಇಯಾಗಿ ಕಾಣುತ್ತಿರಲಿಲ್ಲ. ಆದರೂ ಪಾಪ ಪಟೇಲರ ಮಗ ನಮಗೆ ಅದನ್ನು ಬಳಸುವ ಬಗೆ ಹೇಗೆ ಎಂದೆಲ್ಲತೋರಿಸತೊದಗಿದರು. ’ಇಲ್ಲಿ ದೀಪ ಹಚ್ಚಿದರೆ ಬಗ್ಗನೆ ಉರೀತದೆ, ಗಾಜನ್ನು ಮೇಲಿಂದ ಇಳಿಬಿಡುವುದರಿಂದ ಗಾಳಿಬಂದರೂ ದೀಪಆರುವುದಿಲ್ಲ.’ ದೀಪ ಸಣ್ಣ ದೊಡ್ಡ ಮಾಡಲು ಇರುವ ಕಡ್ಡಿಯಥರದ್ದನ್ನು ತೋರಿಸಿದರು. ದೀಪ ಹಚ್ಚಿ ತೋರಿಸುವಂತೆ ಪಟೇಲರಅಪ್ಪಣೆ ಬಂತು. ಅತ್ಯಂತ ಶ್ರೀಮಂತರ ವಸ್ತುವಾದ ’ಲಾಟೀನು’ ತಮ್ಮ ಮನೆಯಲ್ಲೂ ಇದೆ ಎಂಬುದೇ ಪಟೇಲರ ಹೆಗ್ಗಳಿಕೆಯಾಗಿತ್ತು. ಹೀಗಾಗಿ ತಮ್ಮ ಗತ್ತಿಗೆ ತಕ್ಕದಾಗಿ ಅದನ್ನು ಬೆಳಗಿಸಿ ತೋರಿಸಿ ಎಂದು ಆಜ್ಞೆಬಂತು.
ಆಗ ನಮಗೆ ಅದಕ್ಕೆ ಸೀಮೆ ಎಣ್ಣೆ ತುಂಬುವ ದ್ವಾರ ಹಾಗೂ ಪದ್ದತಿಯನ್ನು ತೋರಿಸಿದರು. ಇನ್ನೇನು ಬೆಂಕಿ ಹಚ್ಚಬೇಕು. ಅಷ್ಟರಲ್ಲಿಮಕ್ಕಳೆಲ್ಲ ದೂರ ಸರಿದೆವು. ಬೆಂಕಿ ಹಚ್ಚಿದಾಗ ಶುರುವಿನಲ್ಲಿ ಯಾವುದೋರೀತಿ ಟುಸ್ ಪುಸ್ ಎಂಬ ಶಬ್ಢ ಬರಬಹುದೆಂಬ ಹೆದರಿಕೆನಮ್ಮನ್ನಾವರಿಸಿತ್ತು. ಅಂತೂ ಹರಳೆಣ್ಣೆ ದೀಪದಿಂದ ಹಚ್ಚಿಸಿಕೊಂಡ ಇನ್ನೊಂದು ಬತ್ತಿಯ ಸಹಾಯಪಡೆದು ಲಾಟೀನನ್ನು ಹಚ್ಚಿದರು. ನಮಗೆ ಸಖತ್ ಆಶ್ಚರ್ಯ ! ಎಂತ ಅದ್ಬುತ ದೀಪ ಅದು ! ಅಲ್ಲಿಯವರೆಗೆ ಎಲ್ಲೂ ನೋಡಿರದ ವಿಚಿತ್ರ. ಅದಾದ ಕಾಲುಘಂಟೆಲಾಟೀನನ್ನು ನೋಡುತ್ತಲೇ ಇದ್ದೆವು. ನಮಗೂ ನಮ್ಮ ಮನೆಗಳಿಗೆ ಒಂದೊಂದು ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಆಸೆ. ಪಟೇಲರಮನೆಯಲ್ಲಿ ಮಾತ್ರ ಇದೆಯಲ್ಲ ಎಂಬ ಹೊಟ್ಟೆ ಕಿಚ್ಚು! ನಂತರವೂ ಅನೇಕದಿನ ಪಟೇಲರ ಮನೆಯ ಮಾರ್ಗವಾಗಿಹೋಗುತ್ತ ಬರುತ್ತ ಇದ್ದೆವು. ಕಣ್ಣಿಗೆ ಹಬ್ಬ ಉಂಟು ಮಾಡಿದ ಆ ಅದ್ಬುತ ದೀಪವನ್ನು ನೋಡಲು ಎಲ್ಲಾದರೂ ಅವಕಾಶ ಸಿಕ್ಕೀತೆಎಂಬುದೇ ಅದಕ್ಕೆ ಕಾರಣ.
ಹಲವು ದಿನಗಳ ಕಾಲ ಪಟೇಲರ ಮನೆಯಲ್ಲಿ ಜನವೋ ಜನ, ಪಟೇಲರಿಗೆ ತೋರಿಸಲು ಕೂತರೆ ಬೇರೆ ಕೆಲಸವೆಲ್ಲ ಹಾಳು, ತೋರಿಸದಿದ್ದರೆ ಪಟೇಲ ಅಂತಸ್ತಿಗೆ/ಘನತೆಗೆ ಏನಾಗಬೇಡ ! ಅಂತೂ ಜನರ ದಂಡು ದಂಡೇ ಸಾಲಾಗಿ ಈಗ ಚುನಾವಣೆಯಲ್ಲಿ ಮತಚಲಾಯಿಸಲು ಬರುವಂತೆ ಬರುತ್ತಿದ್ದರು. ಪಟೇಲರ ಮನೆಯವರು ಒಳಗೊಳಗೇ ಬೈದುಕೊಳ್ಳುತ್ತಿದ್ದರೂ ಪಟೇಲರು ಮಾತ್ರ ತಮ್ಮ ಪೊದೆಮೀಸೆ ತಿರುಗಿಸುತ್ತ ’ಲಾಟೀನಿನ ಮಹತ್ವ’ವನ್ನು ಕೊಂಡಾಡುತ್ತಿದ್ದರು.
ಲಾಟೀನಿನ ಬಗ್ಗೆ ತುಂಬಾ ಚನಾಗಿ ವರ್ಣಿಸಿದ್ದೀರಾ! ಆಗಿನ ಕಾಲದಲ್ಲಿ ಪಟೇಲರ ಗತ್ತು ಜೋರಾಗಿಯೇ ಇತ್ತು ಎಂಬುದನ್ನು
ReplyDeleteಲಾಟೀನಿನ ಉದಾಹರಣೆಯೊಂದಿಗೆ ಚನ್ನಾಗಿ ವಿವರಿಸಿದ್ದೀರಾ.
keep writing ಭಟ್ರೇ!
ಲಾಟೀನು ಹಾಗೂ ಪಟೇಲರು....ಇಬ್ಬರ ಗತ್ತನ್ನೂ ಸ್ವಾರಸ್ಯಕರವಾಗಿ ತಿಳಿಸಿದ್ದೀರಿ....ಧನ್ಯವಾದಗಳು
ReplyDeleteThis comment has been removed by the author.
ReplyDeletethanks
ReplyDeleteಅಜ್ಜ ಅಜ್ಜಿಯರ ಬಾಯಿಂದ ಇಂತಹ ಕಥೆಗಳನ್ನು ಹೇಳುವಾ ಉಂಟಾಗುವ ಸಂತೋಷ ಬೇರೆಲ್ಲೂ ಸಿಗದು. ಸದಾ ನೆನಪಲ್ಲುಳಿಯುವಂತಹ ಕಥೆಗಳು ಇವಾಗಿರುತ್ತವೆ. ಚೆನ್ನಾಗಿದೆ "ಲಾಟೀನು" ಕಥೆ
ReplyDeleteTHANKS
ReplyDelete