ಚಿತ್ರಋಣ: ಅಂತರ್ಜಾಲ
ಗೊಲ್ಲನಾಗಿ ಮೆಲ್ಲನಿಳಿದೆ
[ಲೋಕದ ಸಮಸ್ತರಿಗೂ ಜಗದ್ಗುರು ಶ್ರೀಕೃಷ್ಣನ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ಶ್ರೀಕೃಷ್ಣ ಸಕಲರಿಗೂ ಸನ್ಮಂಗಳವನ್ನುಂಟುಮಾಡಲಿ. ಕಳೆದ ವರ್ಷ ಬರೆದ ಕೃಷ್ಣಕಥೆಯ [ವಿಠೋಬನ ಕಥೆಯ] ಮತ್ತು ಕೃಷ್ಣಗೀತೆಯ ಕೊಂಡಿಗಳ ಜೊತೆಗೆ ಇಂದು ಬರೆದ ಈ ಗೀತೆಯನ್ನು ತಮೆಗೆಲ್ಲಾ ಓದಿಸುವುದರ ಮೂಲಕ ಕೃಷ್ಣಾರ್ಪಣಗೈಯ್ಯುತ್ತಿದ್ದೇನೆ: ]
ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ !
ಎಂದೂ ಮುಗಿಯದು ಹರಿಕಥೆಯು !
ಗೊಲ್ಲನಾಗಿ ಮೆಲ್ಲನಿಳಿದೆ ಗೋಪಿಕೆಯರ ಎದೆಯೊಳು |
ನಿಲ್ಲುತಲ್ಲಿ ಅವರ ಸೆಳೆದೆ ಗೋಕುಲದಾ ಧರೆಯೊಳು ||
ಎಲ್ಲಿನೋಡಲಲ್ಲಿ ನೀನೆ ಎಲ್ಲರಲ್ಲು ಕಾಣಿಸಿ |
ಚೆಲ್ಲುಚೆಲ್ಲು ನಾಟ್ಯವಾಡಿ ಎಲ್ಲರನ್ನು ಸೋಲಿಸಿ ||
ಹುಲ್ಲು ಕಡ್ಡಿಯಲ್ಲು ನಿನ್ನ ಲೀಲೆಯನ್ನು ತೋರಿಸಿ |
ಕಲ್ಲುಬೆಟ್ಟ ಎತ್ತಿಹಿಡಿದು ಇಂದ್ರನನ್ನೆ ಮೀರಿಸಿ ||
ಬಲ್ಲ ವಿದುರ ಅಕ್ರೂರಗೆ ದಿವ್ಯತೆಯನು ಕರುಣಿಸಿ |
ಎಲ್ಲಕೊಟ್ಟೆ ಅವಲಕ್ಕಿಯ ಕುಚೇಲನಿಗೆ ಹವಣಿಸಿ ||
ಗೆಲ್ಲಿಸುತ್ತ ಧರ್ಮವನ್ನು ಕೌರವರನು ವಧಿಸುತ |
ಸಲ್ಲುವಂತ ಗೀತೆ ನೀಡಿ ಕರ್ಮಬಂಧ ಬಿಡಿಸುತ ||
ಉತ್ತಮ ಕವಿತೆ ಶುಭಾಶಯಗಳು |
ReplyDelete