ಚಿಗುರು ಹೂವು ಕಾಯಿ ಹಣ್ಣು ನಗದು ಲೋಕ ಸುಂದರ ! ಬಗೆಬಗೆಯಲಿ ಬದಲುಗೊಳುವ ಸಗ್ಗವೀ ವಸುಂಧರಾ !!
ಜಲದ ಚಿಲುಮೆ ಹರಿದು ಮುಂದೆ ವಲಯ ಮಲಯಗಳಲಿ ಸಾಗಿ ಸಲಿಲ ಜಲಲಧಾರೆಯಾಗಿ ನಲಿದು ಧುಮ್ಮಿಕ್ಕುತಾ | ಒಲಿದ ಮಿಥುನಗಳವು ನಿಂದು ಕಲೆಯುತಲ್ಲಿ ದೇವಳದಲಿ ನಲಿವುದಂತು ದೃಶ್ಯಕಾವ್ಯ ಕಲೆಯು ಹಿಗ್ಗಿ ಸೊಕ್ಕುತಾ ||
ವನದ ತುಂಬ ವೃಕ್ಷರಾಶಿ ದಿನವು ಮೊಲ್ಲೆ ಹುಲ್ಲು ಹಸಿರು ಮನಕೆ ಮುದವ ನೀಡ್ವ ರಂಗು ಘನತರಂಗವೆಬ್ಬಿಸೀ | ಜಿನುಗುತಿರುವ ಜೇನು ಮಿಸರೆ ಗುನುಗು ದುಂಬಿನಾದ ತುಂಬಿ ಸನಿಹ ನವಿಲ ನಾಟ್ಯ ಭಂಗಿ ಬನದಿ ಗುಲ್ಲು ಹಬ್ಬಿಸೀ ||
ಕೆಂಪು ಹಳದಿ ಪಚ್ಚೆ ನೀಲಿ ಗುಂಪಿನ ಬಂಗಾರ ಸೇರಿ ತಂಪು ಸ್ಫಟಿಕ ಮುತ್ತು ಹವಳ ಸೊಂಪಾಗಿಸಿ ಭರಣವ | ಇಂಪಿನ ಸಂಗೀತ ಗಾನ ಮಂಪರಿನಲು ಸುಖದ ಧ್ಯಾನ ನೋಂಪಿ ನಾಂದಿ ಮಂತ್ರ ಘೋಷ ಗಂಪಾಗಿಸಿ ಕರಣವ ||
ಗಿರಿ ಸಾಗರ ನದಿ ಪರ್ವತ ಪುರಿ ದ್ವಾರಕೆ ಹರಿದ್ವಾರ ಮರೆಯಲಪ್ಪುದೇ ಅಜಂತಾ ಕರೆವ ಎಲ್ಲೋರವಾ ? ಬರಿಯದಲ್ಲ ಶಿಲೆಯ ಕಬ್ಬ ಹಿರಿದು ಹಂಪೆ ಹಳೆಬೀಡಲಿ ಬರಿದೇ ಜನ್ಮತಳೆದ ಕಾವ್ಯ ಹರಿದು ಬಂತು ಕಲರವ ||
ವ್ಹಾ ಅದ್ಭುತವಾದ ಕವಿತೆ ಭಟ್ ಸರ್.. ನಿಮ್ಮ ಲೇಖನಗಳನ್ನಷ್ಟೇ ಓದಿ ಆಸ್ವಾದಿಸಿದ್ದ ನನಗೆ ಈ ಕವಿತೆ ನಿಜಕ್ಕೂ ತುಂಬಾ ಇಷ್ಟವಾಯ್ತು.. ಭಾರತೀಯ ಪರಂಪರೆಯನ್ನು ಚೆಂದವಾಗಿ ಕಟ್ಟಿಕೊಟ್ಟಿರುವ ಹಿರಿಮೆ ನಿಮಗೆ ಸಲ್ಲುತ್ತದೆ.. ಪದವೃಷ್ಠಿ ಅದ್ಭುತವೆನಿಸುತ್ತದೆ..:) ಒಂದು ಸುಂದರ ಭಾರತೀಯ ಸಂಸ್ಕೃತಿ ಮತ್ತು ಗತ ವೈಭವಕ್ಕಿಡಿದ ಕನ್ನಡಿ ಈ ಕವಿತೆ.. ಹಿಡಿಸಿತು..:)))
’ನಿಮ್ಮೊಡನೆ ವಿ.ಆರ್.ಭಟ್ ’ ಬ್ಲಾಗಿನ ಬರಹಗಳನ್ನು ನಕಲು ಮಾಡಲು ಯಾವುದೇ ಅನುಮತಿ ಇರುವುದಿಲ್ಲ
’ಉದ್ದಿಮೆ’
ಬೆಣ್ಣೆ ಮುರುಕು
" ದೇವೇಗೌಡರು ಪ್ರಧಾನಿಯಾಗಿದ್ದಾಗ ಹಾಸನ ಉದ್ದಾರವಾಯಿತೇ ? ಅಥವಾ ಅವರ ಮುಖ್ಯಮಂತ್ರಿಯಾದಾಗ ಹಾಸನಕ್ಕೆ ಏನಾದರೂ ಕೊಟ್ಟರೇ? ಇಲ್ಲಿಯವರೆಗೂ ನೆನಪಾಗದ ಹಾಸನ ಈಗ ಅಣ್ಣಾಹಜಾರೆ ಉಪವಾಸ ಕುಳಿತಮೇಲೆ ನೆನಪಾಗಿ ಬಿಟ್ಟಿತೇ ? " ಎಂದು ಹಲಬ್ತಾ ಇದ್ದ ನಮ್ ಲೂಸ ಮಾದ
ಸಮರ್ಥ ಶ್ರೀಧರರ ಕುರಿತ ಮಹಿಮೆಯ ಕಥೆಗಳು ಮತ್ತು ಎಲ್ಲರಿಗಾಗಿ ವೇದ-ಇಲ್ಲಿಂದ ಹೀಗೆ ಬನ್ನಿ, ಸ್ವಾಗತ >>
ಬದುಕಿನಲ್ಲಿ ಬೇಕಾದ್ದನ್ನೆಲ್ಲ ಅನುಭವಿಸಲು ಎಲ್ಲರಿಗೂ ಅವಕಾಶವಿಲ್ಲ, ಪ್ರಾಜ್ಞರು ಹೇಳುತ್ತಾರೆ---'ದುಡಿದಿದ್ದನ್ನ ಉಣ್ಣುವೆಯೋ ಪಡೆದಿದ್ದನ್ನು ಉಣ್ಣುವೆಯೋ' ಅಂತ, ಪಡೆದದ್ದನ್ನ ಅನುಭವಿಸಬೇಕಾದದ್ದು -ಉಪಭೋಗಿಸಬೇಕಾದದ್ದು ನಮ್ಮ ಅನಿವಾರ್ಯತೆ, ಎಲ್ಲಕೊಡುವ ದೈವ ಎಲ್ಲೋ ಒಂದನ್ನು ಕೊಟ್ಟಿರುವುದಿಲ್ಲ, ಆ 'ಕೊಟ್ಟಿರದ ಒಂದೇ' ನಮಗೆ ಬೇಕಾಗಿದ್ದಿರುತ್ತದೆ, ಏನುಮಾಡೋಣ? ಮಿತ್ರರೊಬ್ಬರು ಹೇಳಿದಂತೆ ಜೀವನ ಆಯ್ದುಕೊಳ್ಳುವ ವಿಷಯವಸ್ತುವಲ್ಲ. ಪಾಲಿಗೆ ಬಂದದ್ದನ್ನು ಪಂಚಾಮೃತವಾಗಿ ಸ್ವೀಕರಿಸುವ ಮನೋಭೂಮಿಕೆ ನಮ್ಮದಾಗಿರಬೇಕು,ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವ, ಸವಾಲುಗಳನ್ನು ಎದುರಿಸಿ ಗೆಲ್ಲುವ ಮನೋಧರ್ಮ ಬೆಳೆಯಬೇಕು. ಹೀಗೇ ನನಗೂ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಸಮಯದ ಅಭಾವವನ್ನು ದೇವರು ಇಟ್ಟಿದ್ದಾನೆ, ಸಿಕ್ಕ ಸಮಯದಲ್ಲಿ ನಿಮ್ಮೊಡನೆ ನಾನಿರಲು ಶುರುವಿಟ್ಟ ಜಾಗ 'ನಿಮ್ಮೊಡನೆ ವಿ.ಆರ್.ಭಟ್.'
ಸ್ವಾಗತ ನಿಮಗೆ:ಈಚಾವಡಿಗೆ, ಎಲೆ-ಅಡಿಕೆ ಇದ್ದರೆ ಹಾಕಿಕೊಳ್ಳಿ , ಇಲ್ಲವೇ ಚ್ಯೂಇಂಗ್ ಗಂ, ಬಬಲ್ ಗಂ, ಮಿಂಟು, ಪೋಲೋ ಏನಿದ್ರೂ ಸರಿ-ನಿಧಾನಕ್ಕೆ ಬಾಯಿಗೆ ಬಿಟ್ಟುಕೊಳ್ಳಿ,ಸ್ವಲ್ಪ ಕಾಲ ಇದ್ದು ವಿರಮಿಸಿ, ನಿಮ್ಮ ಮನ ಹಗುರಾದರೆ ನನಗದೇ ಪರಮಖುಷಿ
ಭಾರತದ ಪ್ರಕೃತಿ ಸೌಂದರ್ಯ ಮತ್ತು ಶಿಲ್ಪ ಚಾತುರ್ಯದ ಅಮೋಘ ಚಿತ್ರಣ. ಸುಲಲಿತವಾಗಿ ಹಾಡಿಸಿಕೊಳ್ಳ ಬಲ್ಲ ಶಕ್ತ ಕವನ.
ReplyDeleteಬಹಳ ಸುಂದರವಾದ ರಚನೆ ...
ReplyDeletevasundhareya varnane .. Sundaravaagide sir. Dhanyavaadagalu..
ReplyDeleteವಾಹ್!
ReplyDeleteವ್ಹಾ ಅದ್ಭುತವಾದ ಕವಿತೆ ಭಟ್ ಸರ್.. ನಿಮ್ಮ ಲೇಖನಗಳನ್ನಷ್ಟೇ ಓದಿ ಆಸ್ವಾದಿಸಿದ್ದ ನನಗೆ ಈ ಕವಿತೆ ನಿಜಕ್ಕೂ ತುಂಬಾ ಇಷ್ಟವಾಯ್ತು.. ಭಾರತೀಯ ಪರಂಪರೆಯನ್ನು ಚೆಂದವಾಗಿ ಕಟ್ಟಿಕೊಟ್ಟಿರುವ ಹಿರಿಮೆ ನಿಮಗೆ ಸಲ್ಲುತ್ತದೆ.. ಪದವೃಷ್ಠಿ ಅದ್ಭುತವೆನಿಸುತ್ತದೆ..:) ಒಂದು ಸುಂದರ ಭಾರತೀಯ ಸಂಸ್ಕೃತಿ ಮತ್ತು ಗತ ವೈಭವಕ್ಕಿಡಿದ ಕನ್ನಡಿ ಈ ಕವಿತೆ.. ಹಿಡಿಸಿತು..:)))
ReplyDeleteಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತಾನಂತ ವಂದನೆಗಳು.
ReplyDelete