ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, November 28, 2011

ಹಸಿರು ಪರಿಸರದಲ್ಲಿ


ಹಸಿರು ಪರಿಸರದಲ್ಲಿ

ಹಸಿರು ಪರಿಸರದಲ್ಲಿ ಮಾಮರದ ಕೊಂಬೆಯಲಿ
ಪಿಸುಮಾತನುಲಿದಿತ್ತು ಗಿಳಿಯ ಮರಿಯೊಂದು
ಹಸಿವು ಬಾಧಿಸುತಿಹುದು ತಾರೆನುತ ಊಟವನು
ಕೊಸರಾಟ ನಡೆಸಿತ್ತು ತಾಯ ಬಳಿನಿಂದು

ಗೊರವಂಕ ಕೆಂಬೂತ ಗುಟುರುತಿರಲಲ್ಲಲ್ಲಿ
ತೆರೆದಿತ್ತು ಬೆಳ್ಮುಗಿಲು ದಿನದ ಅಂಗಡಿಯ
ಹೊರಹೊರಟ ಕಾಗೆಗಳು ಕೋಗಿಲೆಗಳಂದದಲಿ
ಕರೆಕರೆದು ಸಾರಿದವು ಇರಿಸಿ ದಾಂಗುಡಿಯ

ಹರೆವ ಬಳ್ಳಿಯು ಬೆಳೆದು ಚಿಗುರುತ್ತ ಸಾಗಿತ್ತು
ಹರೆಯದುತ್ಸುಕದಲ್ಲಿ ಹಿರಿಮರವನಾತು
ಗೆರೆಗೆರೆಯ ಚಿತ್ತಾರ ಬಾನ ಬಾಂದಳದಲ್ಲಿ
ಅರೆರೆ ಅದ್ಭುತ ರಮ್ಯ ಕಂಡೆ ಮನಸೋತು !

ಮಾಗಿ ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ತೂಗಿನಲಿದಾಡ್ವ ಗುಲಾಬಿದಳಗಳಲಿ
ಮಾಗಿಮಂಜಿನ ಹನಿಯು ಮುತ್ತು ಮಣಿ ಪೋಣಿಸಿದೆ
ಸಾಗುತಿದೆ ಭ್ರಮರದೋಂಕಾರ ಗಿಡಗಳಲಿ

ದೂರ ಬೆಟ್ಟಗಳಾಚೆ ಭಾನು ಹೊಳೆಯುತಲಿದ್ದ
ಹೀರಿ ತಣ್ಣನೆ ಹೊಗೆಯ ಕಿರಣನೇಯುತಲಿ
ಊರು ಕೇರಿಗಳಲ್ಲಿ ಜನವೆದ್ದು ಗಡಬಡಿಸಿ
ಬೀರಿದರು ರಂಗೋಲಿ ಹೂಗಳಾಯುತಲಿ

3 comments:

  1. ಭಟ್ಟರೆ,
    ಇದು ಅತ್ಯಂತ ಸುಂದರ ಕಲ್ಪನೆ. ಪರಿಸರದ ಜೊತೆಗೆ ಸಮರಸವಾದ ಜೀವಸಂಕುಲವೇ ಧನ್ಯ. ನಿಮಗೆ ಅಭಿನಂದನೆಗಳು.

    ReplyDelete
  2. oLLeya raagakke haaDabahudu sir...

    tumbaa chennaagide sir...

    ReplyDelete
  3. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು.

    ReplyDelete