ಅಂತರ್ಜಾಲದ ಆತ್ಮಶೋಧಕವೆಂಬ ಆಂಜನೇಯನ ಅಂಶಾವತಾರಿ !
ಅಂತರ್ಜಾಲದ ಮಿತ್ರರೇ, ನಾವು ನೀವುಗಳೆಲ್ಲಾ ಇಂದು ಇಲ್ಲಿ ಸೇರಿದ್ದರೆ ಅದಕ್ಕೆ ಒಂದಲ್ಲಾ ಒಂದು ’ಅಂತರ್ಜಾಲ ಶೋಧಕ’ವೇ ಕಾರಣ ಎನ್ನಬಹುದು. ನಮ್ಮಲ್ಲಿ ನಾವು ಹಲವರು ಆರ್ಕುಟ್, ಫೇಸ್ ಬುಕ್, ಗೂಗಲ್ ಬಜ್ ಹೀಗೇ ಮೊದಲಾದ ಸಾಮಾಜಿಕ ’ನೆಟ್‍ವರ್ಕ್’ [ಜಾಲಬಂಧ]ನಲ್ಲಿ ಮಿತ್ರರುಗಳಾಗಿ ಪರಸ್ಪರ ಪರಿಚಿತರಾಗಲು ಕಾರಣವೇ ಅಂತರ್ಜಾಲ ಶೋಧಕಗಳಾಗಿವೆ. ಅಂತರ್ಜಾಲದಲ್ಲಿ ಕೊಟ್ಟಿರುವ ವಿಳಾಸ ಹುಡುಕುವುದರಿಂದ ಹಿಡಿದು ಯಾವುದೋ ಪದವಿನ್ಯಾಸಕ್ಕೆ ಸಹಾಯ, ವಿಭಿನ್ನ ಭಾಷಾ ಪದಗಳ ಅರ್ಥ, ಯಾವುದೋ ಘಟನೆಗಳ ಕುರಿತು ವಿವರ, ಯಾವುದೋ ಸಂಸ್ಥೆಯ / ವ್ಯಕ್ತಿಯ ಬಗೆಗಿನ ವಿವರ, ಯಾವುದೋ ವಸ್ತುವಿನ ಬಗ್ಗೆ ವಿವರ, ಯಾವುದೋ ತಾಂತ್ರಿಕತೆಯ ಬಗ್ಗೆ ವಿವರ ಹೀಗೇ ಒಂದಲ್ಲಾ ಎರಡಲ್ಲ ಇಲ್ಲಿ ಸಿಗದ ವಿಷಯಗಳೇ ಇಲ್ಲ. [ಕೆಲವೊಮ್ಮೆ ಸಿಗುವ ವಿವರಗಳು ಪಕ್ಕಾ ಇದ್ದರೆ ಇನ್ನು ಕೆಲವೊಮ್ಮೆ ಅವು ’ಟುಸ್’ ಆಗಿಬಿಡುತ್ತವೆ ಯಾಕೆಂದರೆ ಅಂತರ್ಜಾಲದಲ್ಲಿ ಸಿಗಬಹುದಾದ ಮಾಹಿತಿ ಪುಟಗಳಿಗೆ ಯಾರು ಬೇಕಾದರೂ ಮಾಹಿತಿ ಸೇರಿಸಬಹುದಾಗಿದೆ. ಸೇರಿಸುವ ಮಾಹಿತಿ ಸಮರ್ಪಕವಾಗಿದ್ದರೆ ಸರಿ, ಅಸಂಗತ ಅಸಮರ್ಪಕ ಮಾಹಿತಿಯನ್ನೂ ಕೆಲವು ಕಿಡಿಗೇಡಿಗಳು ಸೇರಿಸಿಬಿಡುತ್ತಾರೆ. ಇದೊಂದು ದೋಷವನ್ನುಳಿದು ಮಿಕ್ಕಿದ್ದೆಲ್ಲಾ ಅದ್ಭುತ!]
ನೀವೆಲ್ಲಾ ಈಗೀಗ ನೋಡಿಯೇ ಇರುತ್ತೀರಿ. ಕೆಲವರಂತೂ ’ಗೂಗಲ್ ಮಾಡು’ ಎನ್ನುವುದನ್ನೇ ನಿತ್ಯದ ಮಾತಾಗಿಸಿಕೊಂಡಿದ್ದಾರೆ. ಸರ್ಚ್ ಎಂಜಿನ್ ಅಥವಾ ಜಾಲ ಸಂಶೋಧಕಗಳ ಬಗ್ಗೆ ತುಸು ತಿಳಿಯುವಾ ಅಲ್ಲವೇ? ಸರ್ ಟಿಮ್ ಬರ್ನರ್ಸ್ ಲೀ ಎಂಬವರು ಬ್ರಿಟಿಷ್ ಗಣಕಯಂತ್ರ ವಿಜ್ಞಾನಿ. ಏನೋ ಹುಡುಕ ಹೊರಟ ಅವರಿಗೆ ಯಾವುದೋ ಮಾಹಿತಿಗಾಗಿ ಪರದಾಡಬೇಕಾದ ಸ್ಥಿತಿ ಒಮ್ಮೆ ನಿರ್ಮಾಣವಾಗಿದ್ದೇ ಈ ಸರ್ಚ್ ಎಂಜಿನ್ ವ್ಯವಸ್ಥೆ ರೂಪಿತವಾಗಲು ಪ್ರಮುಖ ಕಾರಣ ! ಒಮ್ಮೆ ನಾನು ಒಬ್ಬರನ್ನು ಭೇಟಿಮಾಡಿದ್ದಾಗ " ಯುವರ್ ಕಂಪ್ಯೂಟರ್ಸ್ ಆರ್ ಗ್ಲೋರಿಫೈದ್ ಟೈಫ್‍ರೈಟರ್ಸ್ " ಎಂದಿದ್ದರು. ಅವರಿಗೆ ತಾಂತ್ರಿಕ ಉತ್ತರವನ್ನು ಕೊಟ್ಟಾಗ ನಿಬ್ಬೆರಗಾಗಿದ್ದರು. ಈಗಲೂ ಆಗಾಗ ನಮ್ಮಿಂದ ಸಲಹೆ ಪಡೆಯುವ ಆತನಿಗೆ ಗಣಕಯಂತ್ರ ಮಾಮೂಲೀ ಬೆರಳಚ್ಚು ಯಂತ್ರಕ್ಕಿಂತ ಹೇಗೆ ಭಿನ್ನ ಎಂಬ ಬಗ್ಗೆ ಒಂದು ಗಂಟೆ ಉಪನ್ಯಾಸ ಕೊರೆದಿದ್ದೆ! ಅದು ಹೇಗೆ ಭಿನ್ನ ಎಂಬುದು ನಿಮಗೆಲ್ಲಾ ತಿಳಿದೇ ಇದೆ, ತಿಳಿದಿಲ್ಲವೆಂದರೆ ನೀವು ಗಣಕಯಂತ್ರಗಳನ್ನು ಬಳಸಲು ನಾಲಾಯ್ಕು!
ಗಣಕಯಂತ್ರಕ್ಕೂ ಗಣೇಶನ ಭುದ್ಧಿಮತ್ತೆಗೊ ಹೋಲಿಸಬಹುದಾಗಿದೆ ಏಕೆಂದರೆ ಬಳಕೆದಾರನ ಅರ್ಹತೆ ಮತ್ತು ಕಾರ್ಯವೈಖರಿಯನ್ನು [ತಪಸ್ಸಿದ್ಧಿಯನ್ನು ] ಅವಲಂಬಿಸಿ ಯಂತ್ರ ಕೆಲಸಮಾಡುತ್ತದೆ. ಈ ಯಂತ್ರಕ್ಕೆ ಕೆಲವು ಮೂಲಭೂತ ಪರಿಕರಗಳ ಸಾಂಗತ್ಯ ಇರದೇ ಹೋದರೆ ಅದು ಪರಿಪೂರ್ಣವಾಗುವುದಿಲ್ಲ. ಹಾಗೆ ಬಳಸುವ ಸುತ್ತಲ ಪರಿಕರಗಳಲ್ಲಿ [ಪೆರಿಫಿರಲ್ಸ್] ಬ್ರಾಡ್ ಬ್ಯಾಂಡ್ ಅಂತರ್ಜಾಲ ಸೌಲಭ್ಯ ಕೂಡ ಒಂದು. ಇವತ್ತಿನ ದಿನಮಾನಕ್ಕೆ ತಕ್ಕುದಾದ ಹೊಸ ಸಾಮಾನ್ಯಗತಿಯ ಗಣಕಯಂತ್ರ ಮತ್ತು ಬ್ರಾಡ್ ಬ್ಯಾಂಡ್ ಸೌಲಭ್ಯ ಇವೆರಡಿದ್ದರೆ ಬಹುತೇಕ ಕೆಲಸ ಸಾಧ್ಯವಾದ ಹಾಗೇ ! ’ಗೂಡಿನಲ್ಲಿರುವ ಪಕ್ಷಿ ನಾಡೆಲ್ಲಾ ನೋಡುತ್ತದೆ’ ಎಂಬ ಒಗಟು/ನಾಣ್ನುಡಿ ನಮ್ಮಲ್ಲಿದೆ. ಅದು ಕಣ್ಣಿಗೆ ಪರೋಕ್ಷವಾಗಿ ಹೇಳಿದ ಮಾತು. ಈಗ ಆ ಒಗಟು ಅಂತರ್ಜಾಲ ಶೋಧಕಕ್ಕೂ ಅನ್ವಯವಾಗುತ್ತದೆ! ಗಣಕಯಂತ್ರವೊಂದು ಚಿಕ್ಕ ಗೂಡು ಎಂದು ಭಾವಿಸಿದರೆ ಅಲ್ಲಿ ಕೂತು ಜಗತ್ತನ್ನೆಲ್ಲಾ ಸುತ್ತಾಡುವ ಈ ಶಕ್ತಿಗೆ ಅಥವಾ ಇ-ಶಕ್ತಿಗೆ ಅದೂ ಕಮ್ಮಿಯೇ.
೧೯೯೦ರ ಸಮಯದ ವರೆಗೆ ಯಾವುದೇ ಇಂತಹ ಶೋಧಕಗಳಿರಲಿಲ್ಲ. ಮೊಟ್ಟ ಮೊದಲ ಶೋಧಕ ’ಆರ್ಕೀ’ Archie ಪ್ರಸ್ತುತಗೊಂಡಿದ್ದೇ ಆಗ-ಇದು ಅಲನ್ ಎಮ್ಟೇಜ್, ಬಿಲ್ ಹೀಲನ್ ಮತ್ತು ಡೂಶ್ಚ್ ಎಂಬ ಮೇ-ಗ್ರಾಹಿಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪ್ರಯತ್ನದಿಂದಾದ ಫಲ. ಸಾರ್ವಜನಿಕ ಹಿತಾಸಕ್ತಿಯಮೇಲೆ ಸ್ಥಾಪಿತವಾದ ’ಫೈಲ್ ಟ್ರಾನ್ಸ್ಫರ್ ಪ್ರೊಟೋಕಾಲ್’ [ಮಾಹಿತಿ ವರ್ಗಾವಣೆ ಶಿಷ್ಟಾಚಾರ]ದಲ್ಲಿ ನಮೂದಾಗಿರುವ ಎಲ್ಲಾ ಮಾಹಿತಿಮೂಲಗಳನ್ನು ಸಂಗ್ರಹಿಸುವಲ್ಲಿ ಈ ವಿದ್ಯಾರ್ಥಿಗಳು ನಿರ್ಮಿಸಿದ ತಂತ್ರಾಂಶ ಮುಂದಾಯಿತು. ಸಿಗಬಹುದಾದ ಮಾಹಿತಿ ಮೂಲಗಳ ವ್ಯಾಪ್ತಿ ವಿಸ್ತೃತವಾಗುತ್ತ ಹೋದುದರಿಂದ ಈ ತಂತ್ರಾಂಶದಲ್ಲಿ ಅವರು ಯಾವುದೇ ಪರಿವಿಡಿಗಳನ್ನು ಅಳವಡಿಸಲಿಲ್ಲ. ಅಗತ್ಯವಿರುವಲ್ಲಿ ಅನಿವಾರ್ಯತೆ ಹುಟ್ಟಿಕೊಳ್ಳುತ್ತದೆ, ಅವಕಾಶದ ಶೋಧನೆಯಾಗುತ್ತದೆ.[ಈ ಸಾಲು ಯಾವ ಮನುಷ್ಯನ ಯಾವುದೇ ಕೆಲಸಕ್ಕೂ ಅನ್ವಯವಾಗುತ್ತದೆ !]ಹಾಗೆ ಶೋಧಿಸಲ್ಪಟ್ಟ ’ಗ್ರೋಫರ್’ ಎಂಬ ಮೇ-ಗ್ರಾಹಿಲ್ ವಿಶ್ವವಿದ್ಯಾನಿಲಯದ ಮುಂದಿನ ಹಂತದ ಸಂಶೋಧಕ ತಂತ್ರಾಂಶ ವೆರೊನಿಕಾ ಮತ್ತು ಜಗ್‍ಹೆಡ್ ಎಂಬೆರಡು ಹೊಸ ತಂತ್ರಾಂಶಗಳ ಜನನಕ್ಕೆ ಕಾರಣವಾಯ್ತು. ಇವು ಸಾಮಾನ್ಯ ಪರಿವಿಡಿಗಳನ್ನು ಹೊಂದಿದ್ದವು. ಏನೇ ಆದ್ರೂ ವೆಬ್ ಪುಟಗಳ ಜೋಡಣೆ ಅಂತರ್ಜಲದ ಸರ್ವರ‍್ ಗಳಲ್ಲಿ ಆಗಿದ್ದರೂ ಅವುಗಳ ತ್ವರಿತಗತಿಯ ಪರಿವಿಡಿಗಳನ್ನು ಒದಗಿಸುವಲ್ಲಿ ಮತ್ತು ಅದನ್ನು ಸಾರ್ವಜನಿಕರಿಗೆ ಕೊಡುವಲ್ಲಿ ಇವು ಯಾವುವೂ ನಿಲ್ಲಲಿಲ್ಲ.
ಜಿನೇವಾ ಯೂನಿವರ್ಸಿಟಿಯ ಆಸ್ಕರ್ ನೀರ್ಸ್ಟ್ರಾಟ್ಜ್ ಎಂಬವರ ಪರಿಶ್ರಮದ ಫಲವಾಗಿ ’ಪರ್ಲ್ಸ್’ ಎಂಬ ತಂತ್ರಾಂಶ ತಯಾರಾಗಿದ್ದು ೧೯೯೩ರಲ್ಲಿ, ಇದು ಸಿಗಬಲ್ಲ ಎಲ್ಲಾ ವೆಬ್ ಪುಟಗಳನ್ನು ಶೋಧಿಸಲು ಮತ್ತು ಪರಿಷ್ಕರಿಸಲು ಅನುಕೂಲಕರವಾದ ಸಾಮರ್ಥ್ಯವನ್ನು ಹೊಂದಿತ್ತು. ಹೀಗೇ ೨ ಸಪ್ಟೆಂಬರ್ ೧೯೯೩ರಲ್ಲಿ ವಿಶ್ವದ ಮೊದಲ ಅಂತರ್ಜಾಲ ಶೋಧಕ ತಂತ್ರಾಂಶವೆಂಬ ಹೆಗ್ಗಳಿಕೆಯನ್ನು ಇದು ಪಡೆಯಿತು. ೧೯೯೩ ಜೂನ್ ತಿಂಗಳಲ್ಲಿ ಮ್ಯಾಥ್ಯೂ ಗ್ರೇ ಎಂಬವರು ಎಂಐಟಿಯಲ್ಲಿ ’ವೆಬ್ ರೂಟ್’ ಮತ್ತು ’ಪರ್ಲ್’ ಎರಡನ್ನೂ ಬಳಸಿಕೊಂಡು ’ವರ್ಲ್ಡ್ ವೈಡ್ ವೆಬ್ ವಾಂಡರರ್’ ಎಂಬ ಪರಿವಿಡಿಯೊಂದನ್ನು ತಯಾರಿಸಿದರು ಅದು ಮುಂದೆ ’ವಾಂಡೆಕ್ಸ್’ ಎಂದು ಕರೆಯಲ್ಪಟ್ಟಿತು. ಇದರ ಮುಖ್ಯ ಉದ್ದೇಶ ಅಂತರ್ಜಾಲದ ಆಳಗಲಗಳನ್ನು ಅಳೆಯುವುದಾಗಿತ್ತು. ಇದು ೧೯೯೫ರ ವರೆಗೂ ಕೆಲಸಮಾಡಿತು. ಜಗತ್ತಿನ ಎರಡನೇ ಅಂತರ್ಜಾಲ ಸಂಶೋಧಕ ಆಲಿವೆಬ್ ನೆವ್ಂಬರ್ ೧೯೯೩ ರಲ್ಲಿ ಹುಟ್ಟಿಕೊಂಡಿತು. ಆಲಿವೆಬ್ ವೆಬ್ ರೂಟ್ ಅನ್ನು ಬಳಸಲಿಲ್ಲ; ಅದು ಜಾಲತಾಣಗಳ ನಿರ್ವಹಣಾಧಿಕಾರಿಗಳಿಂದ ವಿಶಿಷ್ಟ ರೀತಿಯಲ್ಲಿ ಗುರುತಿಸಲ್ಪಟ್ಟು ಬಳಕೆಗೆ ಬಂದಿತು. ಜಂಪ್ ಸ್ಟೇಷನ್ ಎಂಬ ಇನ್ನೊಂದು ಸರ್ಚ್ ಎಂಜಿನ್ ಅಥವಾ ಜಾಲ ಸಂಶೋಧಕ ೧೯೯೩ರ ಡಿಸೆಂಬರ್ ನಲ್ಲಿ ಹುಟ್ಟಿಕೊಂಡಿತು. ಇದು ವೆಬ್ ರೂಟ್ ನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಹಬ್ಬುವ ಅಥವಾ ಪಸರಿರುವ, ಪರಿವಿಡಿಯನ್ನು ಹೊಂದಿರುವ, ಶೋಧಿಸುವ ಈ ಮೂರು ಕೆಲಸಗಳನ್ನು ನಿರ್ವಹಿಸುವ ಸಂಶೋಧಕವಾಗಿ ಇದು ಬೇಡಿಕೆಪಡೆಯಿತು. ಆದಾಗ್ಯೂ ಇವೆಲ್ಲವೂ ಕಾಲಕಾಲಕ್ಕೆ ಮತ್ತೆ ಬದಲಾವಣೆಗೊಳಗಾದೇ ಬೇರೇ ಶೋಧಕಗಳ ಅನಿವಾರ್ಯತೆ ಕಾಣಿಸಿಕೊಂಡಿತು.
೧೯೯೪ರಲ್ಲಿ ಸಂಪೂರ್ಣ ಅಕ್ಷರಮಾಲಿಕೆಗಳ ವೆಬ್‍ಕ್ರಾಲರ್ ಎಂಬ ಜಾಲದಲ್ಲಿ ತೆವಳುವ ತಂತ್ರಾಂಶ ಬಳಕೆಗೆ ಬಂತು. ಸ್ವಸಾಮರ್ಥ್ಯದಿಂದ ಇದು ಜಾಲತಾಣಗಳ ನಿರ್ಮಾತೃಗಳಿಗೊಂದೇ ಅಲ್ಲದೇ ಜನಸಾಮಾನ್ಯರಿಂದಲೂ ಗುರ್ತಿಸಲ್ಪಟ್ಟು ಪ್ರಸಿದ್ಧಿ ಪಡೆದರೂ ೧೯೯೪ರಲ್ಲಿಯೇ ಕಾರ್ನಗೀ ಮೆಲನ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಲೈಕೋಸ್ ಎಂಬ ಶೋಧಕ ವಾಣಿಜ್ಯ ವ್ಯವಹಾರದಲ್ಲಿ ಪ್ರತಿಷ್ಠಿತವಾಗಿಬಿಟ್ಟಿತು. ಇದಾದ ಕೆಲವೇ ದಿನಗಳಲ್ಲಿ ಮೆಲಗನ್, ಇನ್ಫೋಸೀಕ್, ಎಕ್ಸೈಟ್, ಇಂಕ್ಟಾಮಿ, ನಾರ್ದರ್ನ್ ಲೈಟ್, ಅಲ್ಟಾವಿಸ್ಟಾ ಮೊದಲಾದ ಶೋಧಕಗಳು ಹುಟ್ಟಿಕೊಂಡವು. ಅವುಗಳಲ್ಲಿ ಯಾಹೂ ಬಹಳ ಹೆಸರುವಾಸಿಯಾಯ್ತು. ಆದರೆ ಅದರಲ್ಲಿ ಹುಡುಕುವಿಕೆ ನಡೆಯುವುದು ಅದರಲ್ಲೇ ಅಡಕವಾಗಿರುವ ವೆಬ್ ನಿಘಂಟಿನ ಮೇಲೆ ಅವಲಂಬಿಸಿತ್ತು.
೧೯೯೬ರಲ್ಲಿ ನೆಟ್ಸ್ಕೇಪ್ ಎಂಬ ಜಾಲ ನಾವಿಕ ಹಲವು ಅನುಕೂಲತೆಗಳುಳ್ಳ ಒಂದು ಸಂಶೋಧಕವನ್ನು ಅಭಿವೃದ್ಧಿ ಪಡಿಸಲು ಮುಂದಾಗಿತ್ತು. ಆ ಮಧ್ಯೆ ಅದರೊಡನೆ ಯಾಹೂ,ಮೆಲಗನ್, ಇನ್ಫೋಸೀಕ್, ಎಕ್ಸೈಟ್, ಲೈಕೋಸ್ ಈ ಐದು ಸರ್ಚ್ ಎಂಜಿನ್‍ಗಳವರು ನೆಟ್ಸ್ಕೇಪ್ ನೊಂದಿಗೆ ಒಂದು ಒಡಂಬಡಿಕೆ ಮಾಡಿಕೊಂಡು ತಮ್ಮ ಸರ್ಚ್ ಎಂಜಿನ್ ಗಳನ್ನು ಅವರಿಗೆ ನಿಗದಿತ ಅವಧಿಗೆ ಒಬ್ಬೊಬ್ಬರಂತೆ ಕೈಬದಲಾಯಿಸುತ್ತಾ ಸರ್ಚ್ ಕೆಲಸ ನಡೆಸಿಕೊಟ್ಟವು. ಈ ವೇಳೆಗೆ ನಾ ಮುಂದು ತಾ ಮುಂದು ಎಂದು ಹಲವಾರು ಸರ್ಚ್ ಎಂಜಿನ್ ಕಂಪನಿಗಳು ಮಾರುಕಟ್ಟೆಗೆ ನುಗ್ಗಿ ತಮ್ಮ ಕಂಪನಿಗಳ ಬಗ್ಗೆ ಇಲ್ಲದ ಆಸ್ಥೆ ಜನರಲ್ಲಿ ಮೂಡುವಂತೇ ಮಾಡಿದವಲ್ಲದೇ ಹಲವು ಕಂಪನಿಗಳಿಗೆ ’ಡಾಟ್.ಕಾಮ್’ ವಾಣಿಜ್ಯೀಕರಣದ ದಾರಿ ತೋರಿಸಿ ಕೊನೆಗೆ ದಾರಿ ತಪ್ಪಿಸಿದವು. ೧೯೯೯-೨೦೦೧ ರ ವರೆಗೆ ಹುಟ್ಟಿಕೊಂಡ ಡಾಟ್ ಕಾಮ್ ಕಂಪನಿಗಳಲ್ಲಿ ಹಲವು ಪಬ್ಲಿಕ್ ಶೇರ‍್ ಗಳನ್ನು ವಿತರಣೆಮಾಡುವಲ್ಲಿ ಮುಂದಾದವು. ಅಂತರ್ಜಾಲದ ಈ ಹೊಸ ಮಾರುಕಟ್ಟೆಯಲ್ಲಿ ಕೈತುಂಬ ಹಣಗಳಿಸಬಹುದೆಂಬ ಆಸೆಗೆ ಬಲಿಬಿದ್ದು ಅನೇಕರು ಹಣಕಳೆದುಕೊಂಡರು. ಈ ಆಟ ೨೦೦೧ ಕ್ಕೆ ಅಂತ್ಯವಾಯ್ತು.
ಇಸವಿ ೨೦೦೦ದಲ್ಲಿ ಗೂಗಲ್ ಸಂಸ್ಥೆ ಹುಟ್ಟಿಕೊಂಡಿತು ಮತ್ತು ತನ್ನದೇ ಆದ್ ಪೇಜ್‍ರಾಂಕ್ ಎಂಬ ಉತ್ತಮ ಸರ್ಚ್ ಎಂಜಿನ್ ಬಳಸಿತು. ಇದೇ ವೇಳೆಗೆ ಯಾಹೂ ಇಂಕ್ಟಾಮಿ ಮತ್ತು ಇನ್ನಿತರ ಸರ್ಚ್ ಎಂಜಿನ್ ಮೇಲೆ ಅವಲಂಬಿಸಿತ್ತು. ೨೦೦೩ರ ಹೊತ್ತಿಗೆ ಯಾಹೂ ಗೂಗಲ್ ಸರ್ಚ್ ಎಂಜಿನ್ ಅನ್ನೇ ಬಳಸಲು ಆರಂಭಿಸಿತು. ೨೦೦೪ರಲ್ಲಿ ತನ್ನ ಸ್ವಂತ ಸರ್ಚ್ ಎಂಜಿನ್ ತಯಾರಾಗುವರೆಗೂ ಯಾಹೂ ಗೂಗಲ್ ಸರ್ಚ್ ಎಂಜಿನ್‍ನ್ನೇ ಬಳಸಿಕೊಂಡಿತು. ಈ ಮಧ್ಯೆ ಮಕ್ರೋಸಾಫ್ಟ್ ತನ್ನ ಇಂಟರ್ನೇಟ್ ಎಕ್ಸ್‍ಪ್ಲೋರರ್ ಬಳಕೆದಾರರಿಗೆ ಇಂಕ್ಟಾಮಿ ಮತ್ತು ಸರ್ಚ್ ಮತ್ತು ಅಲ್ಟಾವಿಸ್ಟಾ ಸರ್ಚ್ ಎಂಜಿನ್ ಗಳನ್ನು ಬಳಸುತ್ತಿದ್ದು ನಿಧಾನವಾಗಿ ವೆಬ್ ಕ್ರಾಲರ್ ಎಂಬುದನ್ನು ಇನ್ನೂ ಪರಿಷ್ಕರಿಸಿ ಬಿಂಗ್ ಎಂದು ಮರುನಾಮಕರಣಮಾಡಿತಲ್ಲದೇ ಜೂನ್ ೧, ೨೦೦೯ರಂದು ಅದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಜುಲೈ ೨೯, ೨೦೦೯ರಂದು ಯಾಹೂ ಆಡಳಿತಮಂಡಳಿಯವರು ಮೈಕ್ರೋಸಾಫ್ಟ್ ಜೊತೆಗೆ ಒಪ್ಪಂದ ಮಾಡಿಕೊಂಡು ಬಿಂಗ್ ಸರ್ಚ್ ಎಂಜಿನ್ ಅನ್ನು ಯಾಹೂ ಬ್ರೌಸರ್ ನಲ್ಲಿ ಬಳಸತೊಡಗಿದರು.
ಇವತ್ತು ಎಲ್ಲಾ ವೆಬ್ ಸರ್ಚ್ ಎಂಜಿನ್ ಗಳು ವೆಬ್ ಪೋರ್ಟಲ್ ಗಳ ಜೊತೆಗೇ ಸೇರಿವೆ. ಜಾಹೀರಾತುಗಳು ಅವುಗಳಿಗೆ ಆಧಾರಸ್ತಂಭ. ಇವತ್ತು ೨೪/೭ ಎಷ್ಟು ಹೊತ್ತಿಗೆ ಬೇಕಾದರೂ ನಾವು ಇಂಟರ್ನೆಟ್ ಸೌಲಭ್ಯ ಇಟ್ಟುಕೊಳ್ಳಬಹುದಾಗಿದೆ ಮತ್ತು ಸರ್ಚ್ ಮಾಡಬಹುದಾಗಿದೆ. ಇದು ಹೇಗೆ ಸಾಧ್ಯ ? ಗೂಗಲ್, ಯಾಹೂ ಅದೂ ಅಲ್ಲದೇ ಕೆಲವು ಸಾಮಾಜಿಕ ತಾಣಗಳು ನಮಗೆಲ್ಲಾ ನಮ್ಮ ಶುಲ್ಕ ರಹಿತ ಖಾತೆ ತೆರೆಯಲು ಯಾಕೆ ಅನುಕೂಲ ಮಾಡಿಕೊಟ್ಟಿವೆ ? ಅವುಗಳಿಂದ ಆ ಕಂಪನಿಗಳಿಗೆ ಆಗುವ ಪ್ರಯೋಜನವಾದರೂ ಏನು ? ಇದಕ್ಕೆಲ್ಲಾ ಉತ್ತರ ಜಾಹೀರಾತು ಮೊದಲನೆಯದು ಮತ್ತು ಬಳಕೆದಾರರ ಡೇಟಾಬೇಸ್ ತಯಾರಿಸಿಕೊಡುವುದು ಇನ್ನೊಂದು ಉಪಾಯ! ರೀಡಿಫ್ ಮೇಲ್ ನೀವು ಬಳಸುತ್ತಿದ್ದರೆ ಸ್ವಾಗತಿಸಲೇ ಯಾವುದಾದ್ರೂ ಜಾಹೀರಾತು ಬರುತ್ತದೆ! ವಿಶ್ವಾದ್ಯಂತ ಇರುವ ಬಳಕೆದಾರರ್ ಪಟ್ಟಿಯಲ್ಲಿ ಕೆಲವರಾದ್ರೂ ಹಲವು ಕಂಪನಿಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಗಿರಾಕಿಗಳಾಗಿ ದೊರೆಯುತ್ತಾರೆ!
ಇವತ್ತಿನ ಸರ್ಚ್ ಎಂಜಿನ್ ಮರುಕಟ್ಟೆಯಲ್ಲಿ ಯಾರ್ಯಾರಿದ್ದಾರೆ, ಅವರ ಪಾತ್ರವೇನು ಎಂಬುದನ್ನು ಈ ಕೆಳಗಿನ ಚಾರ್ಟ್ ವಿವರಿಸುತ್ತದೆ. ಅಂತೆಯೇ ಸರ್ಚ್ ಎಂಜಿನ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಸ್ಥೂಲರೂಪವನ್ನೂ ಆರಂಭದಲ್ಲಿ ಇರುವ ಇನ್ನೊಂದು ಚಿತ್ರ ತೋರಿಸುತ್ತದೆ, ನೋಡಿ.
ಅಂತರ್ಜಾಲ ತಾಣಗಳಲ್ಲಿ ಇಂದು ಸುರಕ್ಷಿತ ಮತ್ತು ಅಸುರಕ್ಷಿತ ತಾಣಗಳೆಂದು ಘೋಷಣೆಮಾಡಿದ ವ್ಯತ್ಯಾಸಗಳಿದ್ದರೂ ಬಹುತೇಕರು ಅದನ್ನು ಗಮನದಲ್ಲಿಡುತ್ತಿಲ್ಲ. ತಾಣಗಳಲ್ಲಿ ಬಳಕೆದಾರು ಯಾರದೋ ಮೋಸಕ್ಕೆ ಬಲಿಪಶುವಾಗದಂತೇ ಅವರನ್ನು ನಿರ್ಬಂಧಿಸಲು ಜಾಲತಾಣಗಳ ನಿರ್ಮಾತೃಗಳು ಶತಾಯಗತಾಯ ಪ್ರಯತ್ನಿಸುತ್ತಲೇ ಇರುತ್ತಾರೆ. ಪೋಲೀಸರು ಇದ್ದಾರೆ ಎಂದ ಮಾತ್ರಕ್ಕೆ ಕಳ್ಳತನ, ಕೊಲೆ-ಸುಲಿಗೆ-ದರೋಡೆ ಎಲ್ಲಾ ನಿಂತು ಹೋಗುತ್ತದೆಯೇ ? ಆದರೂ ಪೋಲೀಸರು ಅದನ್ನು ನಿಯಂತ್ರಿಸುತ್ತಾರೆ ಎಂಬುದೊಂದು ನಂಬಿಕೆ! ಪೋಲೀಸರು ಅಂತರ್ಜಾಲದಲ್ಲಿ ನಡೆಸುವ ಕಳ್ಳತನದ ಕೃತ್ಯಗಳಿಗೆ ಶಾಮೀಲಾಗಿಲ್ಲ ಯಾಕೆಂದರೆ ಅವರಿಗೆ ತಂತ್ರಜ್ಞಾನದ ಬಗೆಗೆ ಅಷ್ಟೊಂದು ಮಾಹಿತಿ ಇನ್ನೂ ಒದಗಿಲ್ಲ! ಹಾಗಂತ ಎಲ್ಲಾ ಪೋಲೀಸರೂ ಅದೇ ರೀತಿ ಅಂದುಕೊಳ್ಳಬೇಡಿ, ಕರ್ತವ್ಯಕ್ಕೆ ಮೋಸಮಾಡದ ನಿಷ್ಠೆಯಿರುವವರೂ ಬಹಳಮಂದಿ ಇದ್ದಾರೆ ಅವರಲ್ಲಿ ಎಂದು ಅವರೇ ಹೇಳುತ್ತಾರೆ ! ಅಂದಹಾಗೇ ಸೈಬರ್ ಕುಕೃತ್ಯಕ್ಕೆ ಸಂಬಂಧಿಸಿದಂತೇ ಸೈಬರ್ ಪೋಲೀಸ್ ಎಂಬ ಪ್ರತ್ಯೇಕ ಇಲಾಖೆ ತಲೆಯೆತ್ತಿದೆ. ಯಾರೋ ಅಲ್ಲಿ ಇಲ್ಲಿ ಬಾಂಬ್ ಇಟ್ಟಿದ್ದೇವೆ ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ಬೆದರಿಕೆ ಮೇಲ್ ಕಳಿಸಿದಾಗ ಅದನ್ನು ನಿರ್ವಹಿಸುವವರು ಅವರಂತೆ. ನೀವೂ ಕೂಡ " ನಿಮಗೆ ಯಾವುದೋ ಬಹುಮಾನ ಬಂದಿದೆ ಅಥವಾ ಒಂದಷ್ಟು ಫಂಡ್ಸ್ ಇದೆ, ಇದನ್ನು ಪಡೆಯಲು ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಕೊಡಿ " ಎಂದು ಬಂದ/ಬರುವ ಮಿಂಚಂಚೆಗಳನ್ನು ಸುಮ್ನೇ ಅಳಿಸಿಹಾಕಬಹುದು ಅಥವಾ ಸೈಬರ್ ಪೋಲೀಸ್‍ಗೆ ಫಾರ್ವರ್ಡ್ ಮಾಡಬಹುದಾಗಿದೆ. ಸೈಬರ್ ಪೋಲೀಸ್ ವಿವರ ಬೇಕೇ ? ಸರ್ಚ್ ಎಂಜಿನ್ ಬಳಸಿ ದೊರೆಯುತ್ತದೆ !
ಒಟ್ಟಾರೆ ಅಂತರ್ಜಾಲ ಶೋಧಕ ನಮಗಾಗಿ ಬೇಕಾಗುವ ಯಾವುದೇ ಮಾಹಿತಿಯನ್ನೇ ಆಗಲಿ ಎಲ್ಲೆಲ್ಲಿಂದಲೋ ಹುಡುಕಿ ತರುತ್ತದೆ. ಅದರ ಈ ಚಮತ್ಕಾರಿಕ ಚಟುವಟಿಕೆಯನ್ನು ಆಂಜನೇಯನ ಸಂಜೀವಿನಿ ಪರ್ವತದ 'ಹುಡುಕಿ-ತರುವಿಕೆ'ಗೆ ಹೋಲಿಸಿಸಬಹುದಾಗಿದೆ. ಮಾಹಿತಿ ಪುಟಗಳರಾಶಿ ಅದೆಷ್ಟು ಅಗಾಧ! ಅದರ ವ್ಯಾಪ್ತಿಯನ್ನು ನಾವು ಅಳೆದೇವೆಯೇ ? ಇಂತಹ ಮಾಹಿತಿ ಭಂಡಾರವನ್ನು ಅಂತರ್ಜಾಲ ನಮಗಿಂದು ಕೊಡುತ್ತಿದೆ. ಹಿಂದಿನ ಕಾಲದಲ್ಲಿ ಈ ಸೌಲಭ್ಯವಿತ್ತೇ ? ಒಂದು ಯಕ್ಕಶ್ಚಿತ ಅಕ್ಷರಬರೆಯುವ ಪೆಟ್ಟಿಗೆಯಾಗಿ ಹಲವರ ಕಣ್ಣಿಗೆ ಒಂದು ಕಾಲದಲ್ಲಿ ಕಾಣಿಸಿದ್ದ ಕಂಪ್ಯೂಟರ್ ಇಂದು ಯಾವ ಕೆಲಸವನ್ನು ಮಾಡುತ್ತಿಲ್ಲ? ಯಾವ ರಂಗದಲ್ಲಿ ಅದರ ಬಳಕೆಯಿಲ್ಲ? ಮುಂಬೈಯಂತಹ ಮಹಾನಗರಗಳಲ್ಲಿ ನಿಮಗೆ ಬನಾರಸೀ ಪಾನ್ ವಾಲಾಗಳು ಮುಂಗಡ ಬುಕ್ಕಿಂಗ್ ತೆಗೆದುಕೊಂಡು ಪಾನ್ ಬೀಡಾ ವಿತರಿಸಲೂ ಕಂಪ್ಯೂಟರ್ ಬಳಸುತ್ತಾರೆ! ನಾವೇ ಬಹುತೇಕ ನಮ್ಮ ಮಿತ್ರರನ್ನು ಖುದ್ದಾಗಿ ಭೇಟಿಯಾಗದಿದ್ದರೂ ಅಂತರ್ಜಾಲ ಈ ಅವಕಾಶ ಕಲ್ಪಿಸಿದೆ, ನೇರವಾದ ಮಾತುಕತೆಯಿರದಿದ್ದರೂ ಅಕ್ಷರಗಳಿಂದ, ಚಿತ್ರಗಳಿಂದ ಸಂವಹನ ಆರಂಭವಾಗಿ, ಗೂಗಲ್ ಚಾಟ್, ಸ್ಕೈಪ್ ಮುಂತಾದವುಗಳ ಮೂಲಕ ಚಿತ್ರ-ಧ್ವನಿಗಳ ಸಂವಹನಕ್ಕೆ ಅವಕಾಶ ಮುಂದುವರಿದಿದೆ ಅಲ್ಲವೇ? ಇಷ್ಟೆಲ್ಲಾ ಮಾಡಿಕೊಡುವ ಈ ಸರ್ಚ್ ಎಂಜಿನ್ ಗೊಂದು ಸಲಾಮು ಹೇಳುತ್ತಾ ನಿರ್ಗಮಿಸುತ್ತಿದ್ದೇನೆ, ನೀವು ಸರ್ಚ್ ಮಾಡಿ ಮತ್ತೆ ಸಿಗುತ್ತೇನೆ !

ಆನೇಕರು ಕಾಮೆಂಟ್ಸ್ ಹಾಕಲಾಗುತ್ತಿಲ್ಲಾ ಎಂದು ಮೇಲ್ ಮಾಡಿದ್ದಾರೆ, ಗೂಗಲ್ ನವರು ತಮ್ಮ ಸೇವೆಯ ವ್ಯಾಪ್ತಿಯನ್ನೂ ತಮ್ಮ ದಂಧೆಯನ್ನೂ ವಿಸ್ತರಿಸಿಕೊಳ್ಳಲು ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಈ ನಡುವೆ ಅಲ್ಲಲ್ಲಿ ಒಂದು ಸಿಕ್ಕರೆ ಇನ್ನೊಂದು ಸಿಗುತ್ತಿಲ್ಲ, ಕಾಲಾನಂತರದಲ್ಲಿ ಗೂಗಲ್ + ಮತ್ತು ಬ್ಲಾ ಸ್ಪಾಟ್ ಮಾತ್ರ ಉಳಿಸಿ ಮಿಕ್ಕಿದ್ದನ್ನೆಲ್ಲಾ ತೆಗೆದರೂ ವಿಶೇಷವಲ್ಲ. ಹೀಗಾಗಿ ಕಾಮೆಂಟ್ಸ್ ಸ್ವೀಕರಿಸುವಲ್ಲಿ ನಾನು ಏನೂ ಬದಲಾವಣೆ ಮಾಡಲಿಲ್ಲ, ಕಾಮೆಂಟ್ಸ್ ಹಾಕುವವರಿಗೆ ಯಾವುದೇ ನಿರ್ಬಂಧ ಅಪ್ರೂವಲ್ ಇದನ್ನೆಲ್ಲಾ ಇಡದೇ ಆರಂಭದಿಂದಲೂ ಮುಕ್ತವಾಗಿ ಬಿಟ್ಟಿದ್ದೇನೆ; ಅದು ಮತ್ತದೇ ಸರ್ಚ್ ಎಂಜಿನ್ ತೊಂದರೆ ಇರಬೇಕು ! ಧನ್ಯವಾದಗಳು.
ReplyDeleteಒಳ್ಳೇ ಮಾಹಿತಿಯುಕ್ತ ಲೇಖನ ಭಟ್ರೆ. ಅಭಿನಂದನೆಗಳು. ಹನುಮಪ್ಪನಿಗೆ ಹೋಲಿಸಿದ್ದು ಸಮಂಜಸನೇ ಸಂಶಯವಿಲ್ಲ
ReplyDeleteಭಟ್ಟರೆ,
ReplyDeleteಹುಟ್ಟಿನಿಂದ ಇಲ್ಲಿಯವರೆಗೆ, ಈ ಶೋಧಕಗಳ ಉತ್ತಮ ಮಾಹಿತಿ ಕೊಟ್ಟಿದ್ದೀರಿ. ಅಭಿನಂದನೆಗಳು.
ಸ೦ಗ್ರಹಯೋಗ್ಯ ಲೇಖನ, ಭಟ್ ಸರ್. ಅಭಿನ೦ದನೆಗಳು.
ReplyDeleteಅನ೦ತ್
Thanks to all once again !
ReplyDelete