ಕುರಿ ಕೋಳೀನ ಸೋಮ್ವಾರ ಶನ್ವಾರ ಕುಯ್ಯಂಗಿಲ್ಲ !
ಹೌದ್ರೀ ಮನುಷ್ಯರನ್ನ ಬೇಕಾರೆ ಕುಯ್ಕೊಳಿ ಕೋಳಿ-ಕುರಿ ಮಾತ್ರ ಕುಯ್ಬೇಡಿ ಅನ್ನೋದು ಮಚ್ಚಣ್ಣಗಳ ಹಾಡು. ಅಂದಹಾಗೆ ಇದು ಜೋಗಯ್ಯ ಸಿನಿಮಾದ ಹಾಡಲ್ವೇ ? ಹೌದು ಮಾಸಾಮೀ ಇಲ್ಲಾ ಯಾರು ಇಲ್ಲಾ ಅಂಬೋದು, ಇತ್ತಿತ್ಲಾಗೆ ಇಂಥಾ ಮಚ್ಚಿನ ಹಾಡು ಇಸ್ಯಗಳೇ ಜನ[ಅ]ಪ್ರಿಯ ಅಂತಾರೆ ಕೆಲ್ವು ನಿರ್ದೇಸಕ್ರು. ನಿರ್ದೇಸ್ನ ಮಾಡಕಂತೂ ಯಾವುದೇ ಇಸ್ಕೂಲು ಕಾಲೇಜಿನ ದರ್ದಿಲ್ಲ ಬುಡಿ. ವೈನಾಗಿ ಹರ್ದ ಜೀನ್ಸು ನಾರ್ತಾ ಇರೋ ಟೀ ಸಲ್ಟು ಯೆಗಲ್ಮೇಲೊಂದು ಟರ್ಕಿ ಟವಲ್ಲು ಅಣೇಮೇಲೆ ಒಂದಷ್ಟ್ ನಾಮ ಇವಿದ್ರೆ ಸಾಕು! ಪುಟ್ಟಣ್ಣ ಕಣಗಾಲು ಎಂಬೊಬ್ಬ ’ಅಡ್ಡಕಸಬಿ’ ನಿರ್ದೇಸಕ ಇದ್ದಾ ನೋಡಿ ಆ ವಯ್ಯ ಹದೂ ಇದೂ ಅಂತೆಲ್ಲಾ ರಾಗಾ ಯೆಳಿತಾ ಇರ್ತಿದ್ದ. ಅದ್ಯಾರೋ ಕಾದಂಬ್ರಿಯಂತೆ ಕಥ್ಯಂತೆ....ಒಂದೆರಡಾ ಆ ವಯ್ಯಂಗೆ ಬೋ ವಯ್ಯಾರ ಸಿನ್ಮಾ ಮಾಡಕೆ. ರಾಮನವಮಿ ದಿನ ಕುರೀಕೋಳಿ ಕುಯ್ಯದ್ ವಸಿ ನಿಲ್ಸಿ ಕೋಸಂಬ್ರಿ ತಿಂದ್ಕಬುಟ್ಟು ಬೀಡೀ ಎಳೀತಿದ್ದ ನಮ್ ಹನೇಕ್ ನಿರ್ದೇಸಕ್ರುಗಳೆಲ್ಲಾ ಹೇನಾಗ್ಬೇಕು ಯೋಳಿ ನೀವೇಯ.
ಥೂ...ನಾವಿತ್ಲಾಗೆ ಕುರಿಕೋಳಿ ಸುದ್ದೀ ಯೋಳೂತ್ಲೂವೆ ಅವನ್ಯಾರೋ ಯೋಗರಾಜ್ ಭಟ್ನಂತೆ ಬಂದವ್ನೆ ಕರಡೀ ಕುಣೀಸ್ಕತಾವ ! ಹಾದೀ ಬೀದಿಲೆಲ್ಲಾ ಗಣೇಸ್ನ ಕುಂಡರ್ಸ್ಬುಟ್ಟು ’ಕುರಿಕೋಳಿ ಕುಯ್ಬೇಡಿ’ ಹಾಡು ಹಾಕಾವ ಅಂದ್ಕಂಡ್ರೆ ಈ ಜನೀಕ್ಕು ವಸಿ ತಲೆ ಇರ್ಬಾರ್ದ ? ಅದೆಂಥದೋ ಕತ್ಲಂತೆ ಕರಡ್ಯಂತೆ ಜಾಮೂನಂತೆ ! ನಾನೂ ಸುಮ್ನೇ ನಿಂತು ಕೇಳಿಸ್ಕತಾ ಇದ್ದೆ. ಇದೆಲ್ಲಾ ನಿಂಗೆ ಯಾರು ಯೋಳ್ಕೊಟ್ಟಿರಾದು ಅಂತಾ ಕೇಳ್ಕೋಬೇಕು ಅನ್ಕೊಳೋಸ್ಟ್ರಗೆ ’ಯಾವಾನಿಗ್ಗೊತ್ತು ? ’ ಅಂದ್ಬುಟ್ನೇ ಸಾಕತ್ಲಗೆ ಅಂತ ಮನೆಕಡೆ ಹೊಂಟೆ. ಸಿನ್ಮಾ ಮಂದಿಗೆ ಗಣೇಸ್ನ ಕಂಡ್ರೆ ಮಾಪ್ರೀತಿ ಅನ್ನುಸ್ತದೆ...ಯಾಕೆಂದ್ರೆ ನೀವೆಲ್ಲಾನಾ ನೋಡಿ ಗಣೇಸ್ ಯಾವ ಆಡು ಆಕದ್ರು ಬ್ಯಾಡ ಅನ್ನಂಗಿಲ್ಲ ! ಕೂತ್ಗಂಡು ಅಷ್ಟೂ ಹಾಡು ಕೇಳಿಶ್ಕತಾನೆ.
ಹೋಕ್ಕಳಿ ಬುಡಿ, ನಮ್ಮಲ್ಲಿ ಕಲಾಸಾಮ್ರಾಟ್ರು ಪ್ರೀತಿ ಯಾಕಾರು ಈ ಬೂಮಿಮೇಲದೆ ಅಂತೆಲ್ಲಾ ಕೇಳೋ ಒಳ್ಳೊಳ್ಳೆ ನಿರ್ದೇಸಕರವ್ರೆ. ಒಂದ್ ಕಿತಾ ಹೀರೋ ಮಚ್ ಇಡ್ಕಂಡ ಅಂದ್ರೆ ಅಂಗೆ ಎಲ್ರನೂ ಅಡ್ಡಡ್ಡ ಕತ್ತುರ್ಸಿ ಪೀಸ್ ಪೀಸ್ ಮಾಡೋವರ್ಗೂ ತೋರುಸ್ತಾರೆ. ನೆತ್ರು ಹರೀತದೆ ಯಂಗೆ ಅಂತೀರಾ ! ಅಂತದ್ನೆಲ್ಲಾ ಜನ ನೋಡ್ಬಕು. ಸಮಾಜ ಸುದಾರ್ಸ್ಬೋಕು ಅಂತಾನೆ ಅಸ್ಟೆಲ್ಲಾ ಖರ್ಚ್ ಮಾಅಡಿ ತೆಗೀತರೆ! ಕೆಲವ್ರಂತೂ ಕೋಟಿ ಕೋಟಿ ಸುರೀತರೆ ಅದೇನ್ ಸುಮ್ಕೇನಾ? ಕಾನಡಾ ಬಾಸೆ ಹುಳ್ಕಬೇಕು ಅಂದ್ರೆ ಕಾನಡಾ ಸಿನ್ಮಾ ಜನ ನೋಡ್ಬಕು ಹದ್ರಲ್ಲೂ ಮಚ್ಚು ಲಾಂಗು ಇರೋ ಸಿನ್ಮಾನೇ ನೋಡ್ಬಕು. ಈ ನಡ್ವೆ ಮಾದ್ಯಮದೋರು ರಾತ್ರಿ ರಕ್ತದ ಕಥೆ ಯೋಳೋದ್ನ ಸಲ್ಪ ಕಮ್ಮಿ ಮಡಗವ್ರೆ...ತಲೆಯಿಲ್ಲ ನನ್ಮಕ್ಳೂಗೆ. ಇಡೀ ದಿನ ದುಡ್ದ ರೈತಾಬಿ ಜನಿಕ್ಕೂ ಸೇರ್ದಂತೆಯ ಎಲ್ಲರ್ಗೂ ವಸಿ ಮಜಾತಗೊಳಕಾಯ್ತಿತು. ಬೋ ಒಳ್ಳೆ ಕಾರ್ಯಕ್ರಮಗೋಳ್ನ ಎತ್ಬುಟ್ಟು ಈಗೀಗ ಬರೀ ಹೆಂಡ್ತೀಗ್ ಹೊಡ್ದ ಕತೆ ಆಕ್ತರೆ. ಆ ದರ್ಸನ ಪಾಪ ಮಾಡಿದ್ದಾರು ಏನಪಾ ? ಹಿದೆಲ್ಲಾ ಮಾಮೂಲು. ಹೇಂಡ್ತಿದೀರು ಮಾತ್ ಕೇಳ್ದೇ ಇದ್ರೆ ಯೇನ್ ಮಾಡ್ಬೇಕೋ ಹದನ್ನೇ ಮಾಡವ್ನೆ. ಅಪ್ಪಂಗ ಹುಟ್ಟದ್ ಮಗ ಹವನು ಹದ್ಕೇಯ ಇಂದೆಮುಂದೆ ನೋಡ್ಡಲೆ ಇಕ್ಕವ್ನೆ. ಕಿವಿ ಹರದವ್ನೆ...ಅವನಾಗೋಕಾಗಿ ಅಸ್ಟಕ್ಕೇ ಬಿಟ್ಟ ಜರ್ ನಾನಾಗಿದ್ರೆ ಕತೆ ಬೇರೇನೇ ಆಯ್ತಿತ್ತು ಹೇನಂತೀರಾ ?
ಹೆಣ್ಮಕ್ಳು ಹಂದ್ರೇನು ವೈನಾಗಿ ಮನೆಗಿನೆ ಕಿಲೀನ್ ಮಾಡಿ, ಪಾತ್ರೆ-ಪಗಡೆ ಬೆಳಗ್ ಮಡೀಕಬುಟ್ಟು, ಒತ್ತೊತ್ಗೆ ಅನ್ನಾ-ಸಾರು ಮಾಡ್ಕೋತಾ ದೇವ್ರು ದಿಂಡ್ರು ಇವರ್ನೆಲ್ಲಾ ಮಾತಾಡ್ಸ್ಕೆಂಡು ಸುಮ್ಕೇರ್ಬೇಕು. ಅವರ್ಗೇನ್ ಖರ್ಚೀಗ್ ಕಮ್ಮೀ ಆಗ್ದಂಗೆ ಗಂಡ ಹಂಬೋನು ತಂದ ಆಕ್ತನಲ್ವಾ ? ಮುಗೀತು. ಮಿಕ್ದಂತೆ ಅವನೇನಾನಾ ಮಾಡ್ಕಂಡೋಗ್ಲಿ ಬುಡಿ. ಗಂಡ್‍ಗೆ ಚಟ ಯೆಣ್‍ಗೆ ಹಠ ಹಂತಾರಲ್ಲ ಅಂಗೇಯ ಆವಯ್ಯ ಆಚೆ ಓದ್ಮ್ಯಾಕೆ ಅವನ ಉಸಾಬರಿ ಎಲ್ಲಾ ಇವ್ರೂಗ್ಯಾಕೆ ಹಂತೀನಿ ? ತಿಂದು ಕೊಬ್ಬಿ ಸುಮ್ಕಿರೋಕಾಗ್ದೆ ಕ್ಯಾತೆ ತಗುದ್ರೆ ದರ್ಸನ ಮಾಡಿತ್ತರ ಅಲ್ಲ ಮತ್ತೂ ಬೇರೇನೆ ತರ ಆಯ್ತದೆ. ನೀವ್ ಯೋಳೂತ್ಲೂವೆ ನೆಪ್ಪಾಯ್ತು ಈ ಕಾರ್ಪೋರೇಟ್ರಗಳು ಅವ್ರಲ್ಲ ಅವರಂತಾ ಖದೀಮ್ರು ಬೇರೇ ಇಲ್ಲ. ಮೊನ್ನೆ ಮಲ್ಲೇಸ್ವರ್ದಗೆ ಆಡಹಗಲೇ ಜೋಗಯ್ಯನ ತರ್ದೋರು ಬಂದು ನಟರಾಜ ಅನ್ನೋನ ಮೇಲಕ್ಕಳುಸ್ಬುಟ್ರು. ಆವಯ್ಯ ಒಂದಿಬ್ರು ಉಡ್ಗೀರ್ನ ಬಾಳ ಪಿರೂತಿ ಮಾಡ್ತಿತ್ತಂತೆ. ಪೂರ್ವಾಸ್ರಮದಾಗೆ ಜೋಗಯ್ಯನೇ ಹಾಗಿದ್ದ ಪಾಲ್ಟಿ ಹದು! ಇಲೆಕ್ಸನ್ನಾಗೆ ಗೆದ್‍ಮೇಲೆ ಸಲ್ಪ ದೊಡ್ ಕುಳ ಅಂದ್ಕಬುಟ್ಟಿತ್ತು. ತನ್ನ ಜೊತೀಗೆ ಮಾಮೂಲಿ ವಸೂಲಿಗೆ ಓಡಾಡ್ತಾ ಇದ್ದ ಮನೀಷನ್ನ ತನ್ ಮನೆ ಕಕ್ಸ ಬಾತ್ರೂಮು ತೊಳ್ಯಕೆ ಮಡಗಿತ್ತು. ಆವಯ್ಯಂಗೆ ಬಾಳ ಕೋಪಬಂದಿತ್ತಾ ಹದು ಹೀ ರೀತಿ ತೀರಿಸ್ಕೋತು ಹಂತವ್ರೆ ಹಲ್ಲೀ ಜನ. ಹಿನ್ ಕೆಲವೇ ದಿನ್ದಲ್ಲಿ ಈ ಕತೆ ಸಿನ್ಮಾ ಆತದೆ. ನಮ್ ಕ್ಯಾತ ನಿರ್ದೇಸಕರೊಬ್ರು ಹೀಗ್ಲೇ ಸ್ಕೆಚ್ ಆಕ್ಯವ್ರೆ! ’ಹೊಡಿಮಗ ಹೊಡಿಮಗ ಹೊಡಿಮಗ ಬಿಡಬೇಡ ಅವನ್ನಾ’ ಆಡು ಇದಕ್ಕೇ ಕರೆಕ್ಟಾಗಿ ಮ್ಯಾಚಾಯ್ತಿತು ಹಾದ್ರೆ ಹಾಗ್ಲೇ ಬಳಸ್ಬುಟ್ಟವ್ರೆ. ಅದರಪ್ಪನಂತಾ ಬೇರೇ ಆಡು ಬರೀತರೆ ಬುಡಿ.
ಪ್ರೇಕ್ಸಕ್ರು ನೀವಾರ ವಸಿ ಯೋಳ್ಬಾರ್ದಾ ? ’ಬೆಟ್ಟದ ಜೀವ’ ’ಮುಂಗಾರು ಮಳೆ’ ಈ ತರಾ ಡಬ್ಬಾ ಸಿನ್ಮಾ ಮಾಡ್ತರೆ ನಮ್ ಕೆಲು ನಿರ್ದೇಸಕ್ರು...ಥೂ ....ನೋಡಕೆ ಬೇಜಾರಪ್ಪ. ೫೦ ರೂಪಾಯಿ ಕೊಟ್ಟೋದ್ರೆ ಬರೀ ವೇಶ್ಟು. ಸಿನ್ಮಾ ಹಂದ್ಮೇಲೆ ಒಂದಸ್ಟ್ ಪೈಟಿಂಗು ಹದೂ ಇದೂ ಹಿರ್ಲೇಬೇಕು. ಬೆಳ್ಬೆಳಿಗ್ಗೆ ಯೆದ್ದು ರಡಿಯೋ ಆಕುದ್ರೆ ಕುರೀಕೋಳೀನ ಸೋಮ್ವಾರ ಶನ್ವಾರ ಕುಯ್ಯಂಗಿಲ್ಲ ಅಂದೇಟ್ಗೆ ನೆಪ್ಪಾಗೋತದೆ --ಓ ಹಿವತ್ತು ಕುಯ್ಬಾರ್ದು ಹಂತವ! ಅದೊಂತರ ಅಲಾರಾಮು ಕಣ್ರಪ್ಪ. ನೀವೊಪ್ಕಳಿ ಬಿಡಿ ಹಿನ್ಮುಂದೆಲ್ಲಾ ಇಂತದ್ಕೇ ಡಿಮೇಂಡು ಜಾಸ್ತಿ ಆತದೆ! ಜನ ಬೋ ಪ್ರೀತಿಯಿಟ್ಟು ನೋಡ್ತರೆ. ಒಂದ್ಸಲ ಟೀವಿನಾಗೆ ಒಬ್ಬಾತ ನಾಕಾರು ಮದ್ವೆ ಎಂಗಾದ ಅಂಬೋ ಕತೆ ತೋರ್ಸುದ್ರಾ ಅದರ್ನಂತ್ರ ಒಂದೆರಡೇ ತಿಂಗ್ಳಾಗೆ ಹಿನ್ನೊಬ್ಬ ಸಿಕ್ಕಾಕಬಿದ್ದ. ಕೇಳುದ್ರೆ ನಾನು ಆ ದಿನ ಟೀವಿನಾಗೆ ಇಂಗ್ ಮಾಡ್ಬೌದು ಅಂತ ಕಂಡಿದ್ದೆ...ಯೇನೋ ಮಾಡನ ಅನ್ನುಸ್ತು ಮಾಡ್ಬುಟ್ಟೆ.....ತಪ್ಪಾಗ್ಬುಟ್ಟದೆ ಕ್ಸಮ್ಸಿ ಹಂತಾವ ಎಸ್ಟ್ ಒಳ್ಳೆ ರೀತಿನಾಗೆ ಕೇಳ್ದ ಅಂತೀರಿ ! ಇಂಗೇ ಮಾದ್ಯಮದೋರು ಸಿನ್ಮಾದೋರು ಇಂತಿಂತಾ ಕಥೆಗೋಳ್ನ ತೋರುಸ್ತಾ ಇದ್ರೆ ಮನ್ಸ್ರು ಪಾಟ ಕಲೀತರೆ.
ಹದ್ಯಾರೋ ಬತ್ತವ್ರಲ್ಲ .......... ಓ ಅಂತಾದ್ದೇನಿಲ್ಲ ಬುಡಿ....ನನ್ ಬದ್ಕೇಯ. ಹದೇಯ ನಿಮಗ್ಗೊತ್ತಾಯಾಕಿಲ್ಲ ನನ್ನೆಂಡ್ರ ಪಿರುತಿ ಅಸ್ಟ ಸಾಕಾಯ್ತಿರಲಿಲ್ಲ...ಹದ್ಕೇ ಹಿಲ್ಲೇ ಬೂದಿಪಾಳ್ಯದಾಗೆ ಈ ನನ್ನ್ ಬದ್ಕೀಗೆ ಮನೆಮಾಡ್ಕೊಟ್ಟಿವ್ನಿ. ಆಗೀಗ ಅಂಗ ಬಂದ್ ಬ್ಯಾಟ್ರಿ ಚಾರ್ಜ್ ಮಾಡ್ಕೆಂಡು ಇಂಗ ಒಂಟೋಯ್ತಿನಿ. ಇವಳ್ಗೂ ನನ್ಕಂಡ್ರೆ ಬೋ ಆಸೆ ಬುಡಿ. ನಾ ಯೋಳಿದ್ದೆಲ್ಲಾ ಮಾಡ್ತದೆ ಕಣ್ರಪ್ಪ. ಇನ್ನೊಂದ ಹತ್ ವರ್ಸ ಯೇನ್ ತೊಂದ್ರೆ ಇರಾಂಗಿಲ್ಲ. ಆಮೇಲಿದ್ಯಾವೋನಗ್‍ಬೇಕು ? ಇನ್ನೂ ಒಂದ್ ಎಳಸು ಮಾಡ್ಬೇಕಾಗಿತು ಯಾವ್ದೂ ಸೆಟ್ಟಾಗ್ಲಿಲ್ಲ ! ಶಾನೆ ಸಮ್ಯ ಆಗೋಯ್ತು. ಹಿನ್ಮುಂದೆ ಸೋಮ್ವಾರ ಶನ್ವಾರ ಯಾವ್ದೇ ಪಾಲ್ಟಿ ಗೀಲ್ಟಿ ಇರಂಗಿಲ್ಲ...ನೆಪ್ಪಿಟ್ಗಳಿ...ಬರ್ಲಾ? ಇಂಗೇ ಸಮ್ಯ ಸಿಕ್ದಾಗ ಸಿಗುಮು.

ಭಟ್ಟರೇ;ಇದೆ ಕತೆ ಆಕಿ ನೀವ್ಯಾಕೆ ಒಂದ್ ಸಿನೀಮಾ ತಗೀ ಬಾರ್ದು?ಹಂಡ್ರೆಡ್ ಡೇ ಗ್ಯಾರೆಂtಈ ಕನ್ರಪಾ.ಬೋ ಪಸಂದಾಗದೆ ಸ್ಟೋರಿ!
ReplyDeleteಇತ್ತಿತ್ಲಾಗೆ ಈ ಸರ್ಕಾರ್ದೊವ್ರು ಇಂಥ ಸಿನ್ಮಾಗ್ಲ್ಗೆ ಸಬ್ಬುಸಿಡಿ ಬೇರೆ ಕೊಡ್ತಾರಂತೆ .... ರಕುತ ರಾತ್ರಿ ಎಲ್ಲಾ ನೋಡನ ಅಂತ ರಾತ್ರಿ ಕುಂತ್ರೆ ಈ ಸರ್ಕಾರ್ದೊವ್ರು
ReplyDeleteಕರೆಂಟೇ ಕಿತ್ತುಬುತಾರೆ ಸಾ ..... ಚೆನ್ನಾಗೈತೆ ನಿಮ್ಮ ಲೆಕ್ಹನ....
ಭಟ್ಟರೆ,
ReplyDeleteಚಲನಚಿತ್ರಕ್ಕೆ ಹೇಳಿದಂತಹ ಕತೆ. Box office hit ಆಗೋದರಲ್ಲಿ ಸಂಶಯ ಇಲ್ಲ!
ಸ್ವಾಮೇರಾ!!! ಬಾಳ ಚಂದಾಗೆ ಅಲಂಕಾರ ಮಾಡೇರ್ರೀ! ಹೇಳ್ ಮಾಡಸ್ದಂಗ ಐತಿ.... :) ( ತುಂಬಾ ಚೆನ್ನಾಗಿದೆ. ನಿಮ್ಮ ಅಲ್ಪಕಾಲದ ಬಿಡುವನ್ನ... ನನ್ನಂಗಳಕ್ಕೂ ಸ್ವಲ್ಪ ಮೀಸಲೀಡಿ... http://gopalkrishnab.blogspot.com/ :)
ReplyDeleteಭಟ್ರೆ , ಸೂಪರ್ ಬರ್ದಿದೀರ ಬಿಡಿ,, ಚುಚ್ಚುವುದಕ್ಕೂ ಲಿಮಿಟ್ ಬೇಕು .. ಪಾಪ
ReplyDeleteಅಲ್ಕಾಣ್ರೀ ಬಟ್ರೇ, ಈ ಕೊಚ್ಚೋ ಕಾಲ್ದಾಗೆ ಬೊರೀ ಚುಚ್ತಾಇದೀರಲ್ಲ ಅದ್ಯಂಗೇಂತ... ಬರುದ್ರೆ ಒಂದೇಡ್ ತಲೆನಾದ್ರು ಕಚ್ಚಕ್ ಅಂದೋಗ್ಬೇಕಪಾ...
ReplyDeleteಅದಿರ್ಲಿ ಮನ್ನೆ ಮೈಸೂರು ಎಜ್ಜಾಮಿಸನ್ಗೋಗಿದ್ನಾ... ಯಂಡ್ರು ಮಕ್ಳುನ್ನೆಲ್ಲಾ ಕರ್ಕಂಡೂ... ವಾಪಸ್ ಬರೋವತ್ಗೆ ಅಲ್ಲೇ ಗೇಟಾಚೆ ಯಾವ್ದೋ ಪುಟ್ ಪಾತ್ ಅಂಗ್ಡೀ ಇತ್ತಪ್ಪ.. ಅಲ್ಲೇ ದಾರೀನಾಗೆ ಟೌಲಾಸ್ಬುಟ್ಟು ಸಾಲಾಗಿ ಒಂದಸ್ಟು ಮಚ್ಚು ಲಾಂಗು ಎಲ್ಲಾ ಇಟ್ಕಮಾರ್ತಾ ಕುಂತಿದ್ದ ಒಬ್ಬೊಯ್ಯ... ಅದ್ಯಾವ್ದೋ ರಟ್ಟಿಂದು ಗಿಲೀಟಿಂದು ಅಂತಾ ನೋಡುದ್ರೇ... ಇಲ್ಕಣ್ಬುದ್ಯೋ... ಅಸ್ಲೀ ಜೋಗಯ್ಯುನ್ ಮಚ್ಚು ಜೋಗಯ್ಯುನ್ ಲಾಂಗು... ಯಲಾ ಇವುನಾ ಇದುನ್ ಯಾಕ್ಲಾ ಇಲ್ಲಿ ಮಾರ್ತಾವುನೇ, ಇವುನ್ ಯಾರ್ಲಾ ಇಲ್ಲಿ ಇದ ಮಾರಾಕ್ ಬುಟ್ಟೋರು ಅಂದ್ರೆ, ಅಲ್ಲೇ ಪಕ್ದಲ್ಲೇ ಪೋಲೀಸಪ್ಪ ನಿಂತದೆ, ಅದುಕ್ಕೋ ಲೈನ್ ಮ್ಯಾಲ್ ಸೀಟಿವಡ್ಯದೇ ಚಿಂತೆ... ಅಕ್ಕಳಪ್ಪಾ... ಇವುನ್ನೆಲ್ಲಾ ಇಲ್ ಯಾರ್ಲಾ ತಗತರೇ, ಯಂಗ್ಸ್ರು ಮಕ್ಳು ಓಡಾಡಾ ತಾವ್ನಾಗೆ ಅಂದ್ರೆ, ಅದ್ಕೂ ಮಂದಿ ಅದಾರೆ... ಸುತ್ತಾ ಐದಾರ್ ಗಿರಾಕಿ ನಿಂತ್ಕಂಡು ಯಾಪಾರ ಮಾಡ್ತಾ ಅದೆ... ಸಿವುನೇ ಕಾಪಾಡಪ್ಪಾ ಅನ್ಕಂಡು, ಅಂಗೇ ಮಗೀನ್ ಕಣ್ಣ್ ಮ್ಯಾಗ್ ಒಸಿ ಕೈ ಮರೆ ಮಾಡ್ಕಂಡು ಅಲ್ಲಿಂದ ಜಾಗ ಕಾಲಿ ಮಾಡ್ದೆ... ಕಾಲ ಕ್ಯಟ್ಟೋಯ್ತುಕ ಬುದ್ದೇ...
ಸಿನ್ಮಾ ಮಾಡಿ ಯಕ್ಕುಟ್ಸಿದ್ದು ಸಾಲ್ದು ಅಂತ ಇವುಕ್ಕೆ ಡಬ್ಬಿಂಗ್ ಬ್ಯಾರೆ ಬೇಕಂತೆ...
ಯಪ್ಪಾ !! ರಕ್ತಪಾತದ ವಂಸ ಬುಡಿ ಬುದ್ದಿ !. ಏನ್ ಕತೆ ಯೋಳ್ ಬುಟ್ರೀ ?
ReplyDeleteಬಹಳ ಮಜಮಜವಾಗಿ ಪ್ರತಿಕ್ರಿಯಿಸಿದ್ದೀರಿ, ಎಲ್ಲರಿಗೂ ಧನ್ಯವಾದಗಳು.
ReplyDeleteಭಟ್ರೇ,
ReplyDeleteನಿಮಗೆ ಇತ್ತೀಚಿಗೆ ತೆರೆಕಂಡ ಅಧ್ಬುತ ಕನ್ನಡ ಸಿನಿಮಾ ದ ಹಾಡಿನ ಒಳ ಅರ್ಥ ಗಳನ್ನೂ ನಿಮಗೆ ತಿಳಿಯ ಬಯಸುವೆ. (ಬಹಳಷ್ಟು ಜನಕ್ಕೆ ಇದು ತಿಳಿದಿಲ್ಲದೆ ಇರೋದ್ರಿಂದ ನನ್ನ ಕಡೆ ಇಂದ ಇಂತಾ ಸಾಹಸ.)
ಸೋಮವಾರ ಶನಿವಾರ ಕುರಿ ಕೋಳಿನ ಕುಯ್ಯ ಬಾರದು ಅಂತ ನಿದ್ರೆಶಕ ಪ್ರೇಂ ಹೇಳಿದ್ದರೆ (ಅದೂಉ ೩ ಡಿ ನಲ್ಲಿ ), ಮುಂದಿನ ಸಿನಿಮಾ ದಲ್ಲಿ ಯಾವತ್ತು ಬೇಯಿಸ ಬಾರದು, ಯಾವತ್ತು ತಿನ್ನಬಾರದು ಅಂತೆಲ್ಲ ವಿವರಿಸಲಿದ್ದಾರೆ. (ಜೋಬದ್ರ, ಜೊಲ್ಲು, ಜೋಗತಿ... ಮುಂತಾದ ಸೀರೀಸ್ ಗಳಲ್ಲಿ) ಅಲ್ಲಿ ತನಕ ಪ್ರೇಕ್ಷಕ ಮಹಾ ಪ್ರಭುಗಳು ತಾಳ್ಮೆ ವಹಿಸಬೇಕು.
ಮತ್ತೊಂದು ಗೀತೆ ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸಬಾರದು ರೀ .. ಹೌದು, ಕತ್ತಲಲ್ಲಿ ಕರಡಿಗೆ ಜಾಮೂನು ಯಾವತ್ತೂ ತಿನಿಸಬಾರದು. ಕರಡಿ ಜಿಲೇಬಿ ನಿರೀಕ್ಷೆ ಮಾಡಿರಬಹುದು, ನಾವುಗಳು ಜಿಲೇಬಿ ಬದಲು, ಕರೆಂಟು ಹೋಗಿದೆ, ಕತ್ತಲು ಆಗಿದೆ ಅಂತ ಜಾಮೂನು ತಿನ್ನಿಸಿದರೆ ಅದು ನಂಬಿಕೆ ದ್ರೋಹ ಆಗುತ್ತೆ! ಮನೇಕಾ ಗಾಂದಿ ಶ್ಯಾನೆ ದುಖ ಆಗುತ್ತೆ.
ಇತ್ತೀಚಿಗೆ ನಮ್ಮ ನಿದ್ರೆಶಕರು ಸಿಕ್ಕಾಪಟ್ಟೆ ಚೆನ್ನಾಗಿರೋ ಪಿಚ್ಚರ್ ಮಾಡ್ತಾ ಇದ್ದಾರೆ. ವೀರ ಕೇಸರಿ, ಮಯೂರ, ಹುಲಿಯ ಹಾಲಿನ ಮೇಲು ಮುಂತಾದ ಅನೇಕ ಸಿನಿಮಾ ಗಳಲ್ಲಿ ರಾಜ ಕುಮಾರ್ ಖಡ್ಗ ಹಿಡಿದು ಹೋರಾಡಿದರು. ಈಗ ಅವನ ಮಕ್ಳು ಮಚ್ಚು ಹಿಡಿದು ಬಡಿದಾಡ್ತಾ ಇದಾರೆ.
ಧನ್ಯವಾದ ಬಾಲು ಶಾಸ್ತ್ರಿಗಳೇ, ನಿಮ್ಮ ಶಾಸ್ತ್ರ ಬಹಳ ಚೆನ್ನಾಗಿದೆ!
ReplyDelete