ನೋವ ಭಾವಗಳು
ನನ್ನಾಳದಲ್ಲಿರುವ ನೋವ ಭಾವಗಳಲ್ಲಿ
ಬಿನ್ನಹವು ನೀವಲ್ಲೇ ಕರಗಿ ನೀರಾಗಿ
ಚೆನ್ನಾಗಿರಲಿ ಎನ್ನ ಸುತ್ತಲಿನ ಜನಮನವು
ಹೊನ್ನು ಬೆಳೆದುಂಡುಟ್ಟು ಸುಖವವರದಾಗಿ
ಬೆನ್ನುಬಿಡದಲೆ ಹಿಡಿದು ಎಳೆದಾಡಿ ಕೇಳಿದಿರಿ
ಸನ್ನೆಯಲೇ ತಾವೆಂದು ಹೊರಬರುವುದೆಂದು !
ನನ್ನಿನುಡಿದವಗಿಲ್ಲಿ ಬದುಕು ಮುಳ್ಳಿನಮಂಚ
ಬೆನ್ನುಹಾಕುವೆ ನಿಮಗೆ ದಮ್ಮಯ್ಯ ಬೇಡ
ಅನ್ನ ನೀರಿನ ಋಣಕೆ ಭುವಿಗೆ ಬಂದಿದ್ದಾಯ್ತು
ಕನ್ನಹಾಕುವ ಬುದ್ಧಿ ಬಾರದಿರಲೆನಗೆ
ಮುನ್ನ ಎಲ್ಲರ ಮೊಗದಿ ನಗುವನ್ನು ಕಾಣುವೊಲು
ನನ್ನಿಷ್ಟಗಳನೆಲ್ಲ ಬಲಿಹಾಕುವುದಕೆ !!
ತನ್ನ ಜೀವಿತ ಸವೆಸಿ ಅಣ್ಣ ಹಜಾರದಲಿ
ಮೊನ್ನೆ ನಿನ್ನೆಯು ಇಂದು ಕುಳಿತನುಪವಾಸ
ತಿನ್ನುವುದೆ ಮಂತ್ರವೆನುವಾ ಖೂಳರುಗಳೆಲ್ಲ
ಗುನ್ನೆಗಳ ಗುರುತಳಿಸಿ ಮೆರೆದಟ್ಟಹಾಸ !!
ಭಟ್ ಸರ್;ಸಮಯೋಚಿತ ಕವನ .ಇಷ್ಟವಾಯ್ತು.ನನ್ನ ಮನೆಗೂ ಬನ್ನಿ.ನಮಸ್ಕಾರ.
ReplyDeleteಸಮಯೋಚಿತ ಕವನ .
ReplyDeleteಸಕಾಲಿಕ ಕವನ
ReplyDelete...ಚೆನ್ನಾಗಿರಲಿ ಎನ್ನ ಸುತ್ತಲಿನ ಜನಮನವು....... ಅದ್ಬುತ ಕವನ .
ReplyDeleteಸರಿಯಾಗಿದೆ, ಚೆನ್ನಾಗಿದೆ.
ReplyDeleteಅಣ್ಣಾ ಹಜಾರೆಯವರ ಮನದಳಲನ್ನು ಚೆನ್ನಾಗಿ ಬಿಂಬಿಸಿದ್ದೀರಿ.
ReplyDeleteಅಣ್ಣನಂಥವರು ದೇಶಕ್ಕೆ ಒಬ್ಬರೋ ಇಬ್ಬರೋ ಅಷ್ಟೇ! ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಮಸ್ಕಾರಗಳು.
ReplyDelete