ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, June 11, 2011

ರಮ್ಯ ಚಿತ್ತಾರ !


ಛಾಯಾಚಿತ್ರ
ಕಲಾವಿದ ದಿಗ್ವಾಸ ಹೆಗಡೆಯವರ ಚಿತ್ರಕ್ಕೆ ಅಕ್ಷರ ಪೋಣಿಸುವ ಪ್ರಯತ್ನ ಕೆಳಗಿನ ಕವನ :
ರಮ್ಯ ಚಿತ್ತಾರ !

ಓಹೋ ಎಂಥ ರಮ್ಯ ಚಿತ್ತಾರ ನಿನ್ನ ಮೈಯೊಳು !
ನೋಡುವಾತ ಅಲ್ಲೇ ಸೋತ ಕಣ್ಣನೆಟ್ಟು ಅದರೊಳು

ಕಂಬದಂತೆ ನಿಂತ ಕಾಲ್ಗೆ ಗರಿಯ ಸೂರು ಬಣ್ಣದಿ
ಸಣ್ಣ ಕಣ್ಣೊಳಿರುವ ಭಾವ ಇರಿದು ಕರೆದು ವರ್ಣದಿ

ಕೊಕ್ಕು ಉದ್ದವಾದರೇನು ? ತಕ್ಕದಾಶರೀರಕೆ
ಸೊಕ್ಕಿನಿಂತ ಕೆಂಪು ಆಂಗ್ಲನಂತೆ ತೋರುವುದಕೆ !

ಉದ್ದ ಕತ್ತು ಕಾಣುತಿಹುದು ಶಿಖರ ಕಳಸದಾ ಥರ
ಎದ್ದುನಿಂತು ಮೈಯ ಸೆಟೆದು ಕಾಣುವಾಗ ಹೊಸತರ

ರಥದ ಮೇಲೆ ಹಚ್ಚಿದಂಥ ಪತಾಕೆಗಳ ಸಂಭ್ರಮ
ಪಥಗಳಲ್ಲಿ ಕಪ್ಪು ಬಿಳಿ ಕೆಂಪು ಅಹ ಮನೋರಮ

5 comments:

  1. ಸಾಲುಗಳು ತು೦ಬಾ ಚೆನ್ನಾಗಿವೆ.ಮೂಲ ಚಿತ್ರವನ್ನೆ ನಿಮಗೆ ಕಳಿಸುವೆ.ಅದನ್ನ ಹಾಕಿ.

    ReplyDelete
  2. ಚೆಂದದ ಸಾಲುಗಳು ಸಾರ್.. ನಿಮ್ಮ ಬರಹಗಳಲ್ಲಿ ಅತ್ಯಂತ ಚಿಕ್ಕದಿದು ಅನಿಸುತ್ತಿದೆ! :)

    ReplyDelete
  3. ಚಿತ್ರದಷ್ಟೇ ಸುಂದರವಾದ ಕವನ.

    ReplyDelete
  4. ವಿಷಯದ ವ್ಯಾಪ್ತಿಯಮೇಲೆ ಅವಲಂಬಿಸಿ ಬರಹ ದೊಡ್ಡದೋ ಚಿಕ್ಕದೋ ಆಗುತ್ತದೆ. ಗದ್ಯದಲ್ಲಿ ಸಾವಿರ ಪದಗಳು ಹೇಳುವುದನ್ನು ಪದ್ಯದಲ್ಲಿ ಹತ್ತೇ ಶಬ್ದಗಳು ಹೇಳುವುದು ಸಾಧ್ಯವಾಗುತ್ತದೆ. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಕೃತಜ್ಞತೆಗಳು.

    ReplyDelete