ಪಂಚ ಭೂತಗಳ ನೆನಕೆ
ಆಸರೆಯನು ನೀಡಿ ನಿಂತ
ಭುವಿಯೆ ನಿನಗೆ ನಮಿಸುವೆ
ಹಾಸಲು ವಿಧಿಸದ ಆಗಸ
ನಿನ್ನ ನೆನೆದು ಎರಗುವೆ
ಬೀಸಿ ಬಂದು ಕೋಶಪೊರೆವ
ಗಾಳಿ ನಿನ್ನ ಮರೆಯೆನೂ
ರಾಶಿ ಅನ್ನ ಬೇಯಿಸುವೊಲು
ಬೆಂಕಿ ನಿನ್ನ ಕರೆವೆನು
ದೋಷಗಳನು ನೀಗಿ ಹೊರಗೆ
ಒಳಗೆ ಇರುವ ಜಲವನೂ
ಆಸರಿಗೆ ಕುಡಿಯುವಾಗ
ಬಾಗುತಾ ವಂದಿಸುವೆನು
ಮಲಿನವಾಗೆ ಮತ್ತೆ ಶುದ್ಧ
ಕಲಿ ಕಲ್ಮಷ ತೊಳೆವೊಲು
ಹುಲುಮಾನವ ಜಾತಿ ಪೆದ್ದ
ಒಲಿದ ನಿಮ್ಮ ಕಾಣದು !
ನಿಮ್ಮೈವರ ಘನಕಾರ್ಯವು
ಹೆಮ್ಮೆಯ ತರುವಂಥದು
ನಮ್ಮ ಸುತ್ತ ನೀವಿರದಿರೆ
ಎಮ್ಮ ಪಾಡದೆಂಥದು ?
Bhatre,
ReplyDeleteSundara kavana, nela,jala, gaali, benki ivellavu namma jeevanadalli avibhajya...ondu irade iddaru badukuvudu kasta....
pancha bhootagaLalli yaarobbaru illade iddaru jeevana durbhara
ReplyDeleteಪಂಚಭೂತಗಳ ಬಣ್ಣನೆ ಸರಳವಾಗಿ ಮೂಡಿಸಿದ್ದೀರಿ.ಕವನ ಚೆನ್ನಾಗಿದೆ
ReplyDeleteಭಟ್ಟರೇ;ಮೊದಲಿಗೆ ಕೆಲಸದ ಒತ್ತಡದಿಂದ ಬಹಳ ದಿನಗಳಿಂದ ಬ್ಲಾಗಿಗೆ ಬರಲಾಗದೆ ಇದ್ದದ್ದಕ್ಕೆ ಕ್ಷಮೆ ಇರಲಿ.ಪಂಚಭೂತಗಳ ಮಹತ್ವದ ಬಗ್ಗೆ ಸುಂದರ ಕವನ.
ReplyDeleteಪಂಚ ಭೂತಗಳಿಗೆ ನಾನು ನಮಿಸುವೆ.. ಅವುಗಳ ಋಣ ನೆನಪಿಸಿದ್ದಕ್ಕೆ ಧನ್ಯವಾದಗಳು.
ReplyDeleteಭಟ್ಟರೆ,
ReplyDeleteಪಂಚಮಹಾಭೂತಗಳ ಆಸರೆ ಇರದಿದ್ದರೆ, ಯಾವ ಜೀವಿಗೂ ಜೀವಿಸಲು ಸಾಧ್ಯವೆ? ಅವುಗಳನ್ನು ಕೃತಜ್ಞತೆಯಿಂದ ನೆನೆಯಲೇ ಬೇಕು. ಉಪಕಾರದ ಋಣವನ್ನು ನಮ್ರತೆಯಿಂದ ಸ್ಮರಿಸುವ ಶೈಲಿ ಹಾಗು ಛಂದಸ್ಸು ಕವದ ಮೆರಗನ್ನು ಹೆಚ್ಚಿಸಿದೆ.
ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ.
ReplyDeleteಸಾರ್ ನನ್ನ ಹೆಸ್ರು ವಿಶನಾಥ ಮಣಿವಾಲ
Deleteನನ್ನ ಮೊಬೈಲ್ ನಂ.೯೭೪೦೪೪೬೪೦೫
ನಿಮ್ಮೊಡನೆ ಮಾತಾಡುವುದಿದೆ ದಯವಿಟ್ಟು ಕರೆ ಮಾಡುವಿರಾ??
ಅದ್ಭುತವಾದ ಕವನ, ನಿಮ್ಮೊಡನೆ ಸಂಬಾಷಿಸಬೇಕೆಂಬ ಹಂಬಲ, ಅವಕಾಶಕ್ಕಾಗಿ ಕಾಯುವೆ.
ReplyDelete