’ಕಾಲಹರಣ’
[ಇಂತಹ ಭಾಷಣಕಾರರು ಕಾಲವನ್ನಲ್ಲ ಕಾಲನನ್ನೂ ಹರಣಮಾಡಬಲ್ಲ ಹುರುಳಿಲ್ಲದ ಭಾಷಣಕಲೆಯನ್ನು ಸಿದ್ಧಿಸಿಕೊಂಡ ಭಾಷಣಕಲಾ ಭೂಷಣರು!: ನೋಡಿ ನಿಮಗೂ ಇವರು ಸಿಕ್ಕಿರಬಹುದು ]
ಎಲ್ಲರ ಒತ್ತಾಯಕ್ಕೆ ಮಣಿದು
ಈ ಭಾಷಣವನ್ನು ಮಂಡಿಸುತ್ತಿದ್ದೇನೆ
ಅಷ್ಟಕ್ಕೂ ನಾನು ಮಾತಾಡುವುದೇನೂ ಉಳಿದಿಲ್ಲ !
ನಾನು ಹೇಳಬೇಕಾದುದನ್ನೆಲ್ಲ ಅವರೇ ಹೇಳಿದ್ದಾರೆ
ಅವರು ಹೇಳಿದ್ದಕ್ಕೆ ಇವರು ಒತ್ತು ಕೊಟ್ಟಿದ್ದಾರೆ
ಅವರೆಲ್ಲಾ ಹೇಳಿದ್ದನ್ನೇ ನಾನು ಮತ್ತೆ ಹೇಳಿದರೆ ಚಂದವೇ?
ಅದಕ್ಕೇ ನಾನು ಜಾಸ್ತಿ ಮಾತನಾಡುವುದಿಲ್ಲ
ಒಂದರ್ಥದಲ್ಲಿ ಅವರು ಹೇಳಿದ್ದನ್ನು ನೋಡಿದರೆ
ಅದರಲ್ಲಿ ಸತ್ಯವೇ ಅಡಗಿದೆ
ಹಾಗಂತ ಸತ್ಯವನ್ನೂ ಕೂಡ
ಪರಾಮರ್ಶಿಸಬೇಕಾದ ಕಾಲ ಇದು
ಅದರಲ್ಲೂ ಇವರು ಅವರ ಮಾತಿಗೆ ಒತ್ತುಕೊಟ್ಟಾಗ
ಅವರ ಮಾತಿಗೆ ಎಲ್ಲಿಲ್ಲದ
ಜಾವಾಬ್ದಾರಿ ಬರುತ್ತದೆ
ತೂಕ ಹೆಚ್ಚುತ್ತದೆ
ತೂಕವನ್ನು ಉಳಿಸಿಕೊಳ್ಳಬೇಕಾದರೆ
ನಾನು ಮಾತನಾಡಲೇಬೇಕಾಯ್ತು
ಅವರ ಅನಿಸಿಕೆಯಲ್ಲಿ ತಪ್ಪೇನೂ ಕಾಣುವುದಿಲ್ಲ
ಇವರ ಪುಷ್ಟೀಕರಣವೂ ಸಮರ್ಪಕವಾಗಿಯೇ ಇದೆ
ಅಂದಮೇಲೆ ಮತ್ತೆ ಕಾಣದ ತಪ್ಪನ್ನು
ಹುಡುಕುವ ವ್ರಥಾ ಪ್ರಯತ್ನವನ್ನು ಮಾಡಬೇಕೆ?
-ಎಂಬುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆ!
ಆದರೂ ಅವರೆಲ್ಲಾ ಹೇಳಿದ್ದಕ್ಕೆ
ನಾನು ಕೋಲೇ ಬಸವನ ರೀತಿ
ತಲೆಯಲ್ಲಾಡಿಸಿಬಿಟ್ಟರೆ
ಎದುರಿಗೆ ಕುಳಿತ ನೀವೆಲ್ಲಾ ತಪ್ಪು ತಿಳಿಯುತ್ತೀರಿ !
ಈ ಕಾರಣಕ್ಕಾಗಿ ವಿಷಯವನ್ನು
ಕೂಲಂಕಷವಾಗಿ ಪರಿಶೀಲಿಸಲೇಬೇಕಾಗಿದೆ
ಎಂಬುದನ್ನು ಮೇಜು ಗುದ್ದಿ ಹೇಳುತ್ತಿದ್ದೇನೆ
ನಿಮಗೂ ಭಾಷಣಗಳನ್ನು ಕೇಳೀ ಕೇಳೀ
ಇಷ್ಟುಹೊತ್ತಿಗೆ ಸುಸ್ತಾಗಿ ಹೋಗಿರುತ್ತದೆ
ಎಷ್ಟೋ ಭಾಷಣಗಳು ನಿದ್ರೆ ಮಾತ್ರೆಗಿಂತಾ ಮೇಲು!
ಇದನ್ನು ನಾನು ಹೇಳುತ್ತಿಲ್ಲ
ನನ್ನಂತಹ ಅನೇಕರು ಹೇಳುತ್ತಿದ್ದಾರೆ
ಹಾಗಂತ ಭಾಷಣಕಾರರ ಎದುರಿಗೇ
ಡಣಾಡಂಗುರವಾಗಿ ಇದನ್ನು ಸಾರಲು ಸಾಧ್ಯವೇ ?
ಅನಿವಾರ್ಯತೆ ಹಲವು ಸರ್ತಿ ಹೀಗೇ ಕಾಡುತ್ತದೆ
ಈಗ ತಮಗೆಲ್ಲಾ ಇದರ ಅರಿವಾಗಿರಬಹುದು
ಪ್ರತಿಯೊಂದು ಭಾಷಣದ ಹಿಂದೆಯೂ
ಹಲವುದಿನಗಳ ತಯಾರಿ ನಡೆದಿರುತ್ತದೆ
ಹಾಗಿದ್ದರೇನೇ ಭಾಷಣ ಕಳೆಕಟ್ಟುವುದು
ಇಷ್ಟು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ
ಭಟ್ಟರೆ..
ReplyDeleteಹ್ಹಾ...ಹ್ಹಾ.. !
ಇಂಥವರನ್ನು ನಾನು ಬಲ್ಲೆ...!
ನಮ್ಮನ್ನು ನಗಿಸಿದ್ದಕ್ಕೆ ಧನ್ಯವಾದಗಳು...
ಹ್ಹ ಹ್ಹ ಹ್ಹಾ......
ReplyDeleteಗುರೂಜೀ..........
ಭಾಷಣ ಮಾಡುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ........
ಇಂತಹ ಭಾಷಣ ಒಂದರ್ಥದಲ್ಲಿ ಕೊನೆಯ ಭಾಷಣವಾದರೆ ಒಳ್ಳೆಯದೇ ಅಲ್ಲವೆ???
ಚೆನ್ನಾಗಿದೆ.
ಭಟ್ ಸರ್;ಕಾಲ ಹರಣ ಮಾಡುವ ಭಾಷಣ ಸೂಪರ್!
ReplyDeleteಸದ್ಯ ಮುಗೀತಲ್ಲ... ಭಾಷಣ!
ReplyDeleteಚೆನ್ನಾಗಿದೆ ಸಾರ್ ನಿಮ್ಮ ವ್ಯಂಗ್ಯ.
kosaru bhashana chennagide.....!
ReplyDeleteananth
ಭಟ್ಟರೆ,
ReplyDeleteಕಾಲಾಂತಕ ಭಾಷಣಕಾರರ ಅಂತ್ಯಕ್ರಿಯೆಯನ್ನೇ ಮಾಡಿದ್ದೀರಿ!
haahaaaaaaaaa :)
ReplyDeleteಭಟ್ರೇ ಭಾಷಣ ಸೂಪರ್ ಆಗಿತ್ತು ... :D
ReplyDelete:):) avaru heliddakkagi.. ivaru heluttare.. avru heliddu satya.. ivaru heliddu katu satya... :):)
ReplyDeleteಭಲೇ ರುಚಿಕಟ್ಟಾಗಿ ಬರೀತಿರಿ ಭಟ್ಟರೇ, ಹ್ಹಾ...ಹ್ಹಾ..
ReplyDeleteಹೇಳ ಬೇಕಾದದ್ದನ್ನೆಲ್ಲಾ ಮಾನ್ಯ ಭಟ್ಟರೇ ಹೇಳಿ ಮುಗಿಸಿರೋದ್ರಿಂದ...
ನಾನು ನನ್ನ ಮಾತು ಮುಗಿಸುತ್ತಿದ್ದೇನೆ...
ಧನ್ಯವಾದಗಳು ;-)
ನನ್ನ ಬ್ಲಾಗಿಗೆ ಒಮ್ಮೆ ಬನ್ನಿ.
www.badari-poems.blogspot.com
www.badari-notes.blogspot.com
facebook profile: Badarinath Palavalli
[ಸರ್, ದಯಮಾಡಿ ನೀವು ಹೊಸ ಪೆಜ್ ಡಿಸೈನ್ ಅನ್ನು Template Designer ಮೂಲಕ ಮಾಡಿ ಸರ್. ನಿಮ್ಮ ಬ್ಲಾಗ್ ಅನ್ನು ನಾವು ಆಗ ಮೊಬೈಲಿನಲ್ಲೇ ಓದಬಹುದು. ಅದಕ್ಕಾಗಿಯೇ ನಿಮ್ಮ ಬ್ಲಾಗ್ ಅನ್ನು ಈ ನಡುವೆ ಫಾಲೋ ಮಾಡಲು ಆಗಿರಲಿಲ್ಲ. ಕ್ಷಮಿಸಿಕೊಳ್ಳಿ!]
ಓದಿದ ಪ್ರತಿಕ್ರಿಯಿಸಿದ ಎಲ್ಲರಿಗೂ ನಮಸ್ಕಾರಗಳು, ಕಾರಣಾಂತರಗಳಿಂದ ಬ್ಲಾಗ್ ಟೆಂಪ್ಲೇಟ್ ಬದಲಾಯಿಸಲು ಆಗುತ್ತಿಲ್ಲ, ದಯವಿಟ್ಟು ಸಹಕರಿಸಿ.
ReplyDelete