ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, February 8, 2011

ಗರ್ಮಜ್ಞನ ನವ ನೀತಿ ದಶಕಗಳು !


ಗರ್ಮಜ್ಞನ ನವ ನೀತಿ ದಶಕಗಳು !

ರಾಗಿ ಮುದ್ದೆಯ ಮುಖವಾದೊಡೇನು ?
ಯೋಗವಿದ್ದೊಡೆ ಚಲನಚಿತ್ರ ನಟಿಯನ್ನೂ
ಭೋಗಿಸಿ ಮಕ್ಕಳ ಪಡೆವನೆಂದನಾ |
ಗರ್ಮಜ್ಞ

ಮಾಜಿಯಾದರೇನು ಹಾಲಿಯಾದರೇನು ?
ರಾಜಿಮಾಡಿಕೊಳ್ಳದೇ ಖುರ್ಚಿಯಬಗ್ಗೆ ಆ
ಯೋಜಿಸಿ ಕಸರತ್ತು ನಡೆಸೆಂದನಾ | ಗರ್ಮಜ್ಞ

ಮಾರುವುದ-ಕೊಳ್ಳುವುದ ಕಲಿತರದು ಒಳ್ಳೆಯದು
ತೇರುಜಾತ್ರೆಗಳಲ್ಲಿ ಬೆಂಡುಬತ್ತಾಸುಕೊಂಡಂತೇ ಕೊಳ್ಳಬಹುದು
ಕಾರಿನಲ್ಲೋಡಾಡುವ ’ಕುದುರೆಗಳ’ನೆಂದನಾ |
ಗರ್ಮಜ್ಞ

ಹನ್ನೊಂದು ಎಕರೆ ಜಮೀನಿನ ’ಮಣ್ಣಿನಮಗ’
ಹನ್ನೊಂದು ನೂರು ಕೋಟಿ ಆಸ್ತಿಗೆ ಒಡೆಯನಪ್ಪುದು !
ನಿನ್ನಿಂದವೂ ಸಾಧ್ಯ ನೀತಿಮರೆತರೆಂದನಾ |
ಗರ್ಮಜ್ಞ

ಮಾವನ ಆಸ್ತಿ ಪಡೆದುದನೇ ತೋರುತ್ತ
ಬಾವ-ಅಕ್ಕ ಬಂಧು ಮಿತ್ರರಿಗೆಲ್ಲಾ ಹಂಚಲು ಕನ್ನಡ ಜನ
ನಾವು ಆಳ್ವರಿಗೆ ಸಹಕರಿಸುವೆವೆಂದನಾ |
ಗರ್ಮಜ್ಞ

ಪಾಲಿಸುವೆನೆಂಬುದನೇ ಹಿರಿದಾಗಿ ಹೇಳುತ್ತ
ಕಾಲಿಹಾಳೆಗಾದರೂ ಸಹಿಮಾಳ್ಪೆ ಗೌರವ ಡಾಕ್ಟರೇಟ್ ಮಾತ್ರ
ಕೀಲುಮುರಿದರೂ ಕೊಡಲು ಸಮ್ಮತಿಸೆನೆಂದನ ಕಂಡು ನಕ್ಕನಾ |
ಗರ್ಮಜ್ಞ

ಸಮಪಾಲು ಸಮಬಾಳು ಭಾಷಣದಿ ಬಲುಚಂದ
ಘಮಘಮಿಸುತಿದೆ ಕುರುಡು ಕಾಂಚಾಣವದನುಂಡು
ನಮಗೆ ಅರಿವಾಗುವಾ ಮೊದಲೇ ಕೈತೊಳೆದ ಕಂಡನಾ |
ಗರ್ಮಜ್ಞ

ಅಧಿಕಾರ ಬರುವುದು ಹಣದ ಆ ಘಮಲಿನಲಿ
ಒದೆಯುವುದು ಮಿಕ್ಕವರ ದೂರ ಕ್ಷೇತ್ರದಲಿ ಸಮಾಜದ
ಹದತಪ್ಪಿದ ಗತಿಕಂಡು ಮಮ್ಮಲ ಮರುಗಿದನಾ |
ಗರ್ಮಜ್ಞ

’ಚರಿಗೆ’ಗಳ ಹೊರೆಹೊತ್ತ ಭೂಪಾಲರಿವರಯ್ಯ
ಖರಿಗೆ ಕಾಂತಣ್ಣ ಸುಲಿಗೆಯೇ ಸಂಪ್ರದಾಯ! ಕೋಟಿಭಕ್ಷಣೆ
ತೆರಿಗೆ ವಂಚನೆ ಕಂಡೂಮಾತಾಡದಾದನಾ |
ಗರ್ಮಜ್ಞ

ನಮ್ಮದೇ ಸಂವಿಧಾನ ತಿನ್ನುವರೆಲ್ಲಾ ನಮ್ಮವರೇ
ಹೆಮ್ಮೆ ನಮಗೆ-ಅವರನಾಯ್ದುದಕೆ ’ಮನೆ’ಯಾವುದಾದರೂ ’ಅವರೂಟ’
ಗಮ್ಮತ್ತಿನದು ಯೋಚಿಸಿನೋಡೆಂದನಾ |
ಗರ್ಮಜ್ಞ

7 comments:

  1. ಭಟ್ಟರೇ.. ಚೆನ್ನಾಗಿದೆ..
    ತಮ್ಮ ಮಾಹಿತಿಗೆ.. "ಮರ್ಮಜ್ಞ" ಎನ್ನುವ ಅಂಕಿತದಿಂದ ಪ್ರಖ್ಯಾತ ವ್ಯಂಗ್ಯಚಿತ್ರಕಾರರಾದ ಶ್ರೀಯುತ ನೀರ್ನಳ್ಳಿ ಗಣಪತಿ ಅವರು ಅದಾಗಲೇ ಸಾವಿರಕ್ಕೂ ಅಧಿಕ ವಿಡಂಭನಾತ್ಮಕ ವಚನಗಳನ್ನು ಬರೆದಿದ್ದಾರೆ.. ಅವುಗಳಿಗೆ ಸರಿಹೊಂದುವ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ ಹಾಗೂ ಅವು ರಾಜ್ಯದ ಹತ್ತಾರು ನಿಯತ ಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.. ಹಾಗೆಯೇ ಅವರು "ಮರ್ಮಜ್ಣನ ವಚನಗಳು" ಅಂತ ಪುಸ್ತಕವನ್ನೂ ಹೊರತಂದಿದ್ದಾರೆ.. ಎಲ್ಲಾದರೂ ಸಿಕ್ಕರೆ ಓದಿ ನೋಡಿ..

    ReplyDelete
  2. ದಿಲೀಪ್ ಸಾಹೇಬರೇ, ಅದು ನನ್ನ ನಜರಿಗೆ ಬಂದಿರಲಿಲ್ಲ: ಬದಲಾಯಿಸಿದ್ದೇನೆ, ಸ್ವಲ್ಪ ಗರಮ್ಮಾಗಿರಲಿ ಎಂದು ’ಗರ್ಮಜ್ಞ’ ಎಂದಿದ್ದೇನೆ, ನಿಮ್ಮ ಮಾಹಿತಿಗೂ ಓದಿಗೂ ಪ್ರತಿಕ್ರಿಯೆಗೂ ಧನ್ಯವಾದಗಳು.

    ReplyDelete
  3. ನಿಮ್ಮ ಗರ್ಮಜ್ಞ ನೀತಿ ದಶಕ ಚೆನ್ನಾಗಿದೆ. ನಿಮ್ಮ ದಶಕಕ್ಕೆ ಇನ್ನೊ೦ದು ಸೇರಿಸಿ ಏಕಾದಶ ಮಾಡಿದೆ.

    ಭುವನೇಶ್ವರಿ ಪ್ರತಿಮೆಗೆ ಇಪ್ಪತ್ತೈದು ಕೋಟಿ
    ಜನರ ಬೆವರಿನ ದುಡ್ಡು ಹರಿದು ಹ೦ಚಿ ಲೂಟಿ
    ಭೂಪಾಲ ಯೆಡ್ಡಿಯ ಘೋಷಣೆ ಕೇಳಿ ಖುಷಿ
    ಗೊ೦ಡ ಜನರಿಗೇನೆ೦ಬೆ ಗರ್ಮಜ್ಞ

    ReplyDelete
  4. ಭಟ್ಟರೆ,
    ಗರ್ಮಜ್ಞನ ಜೋಕು-ಮಾರ್ ಸಖತ್ತಾಗಿದೆ. ರಿನ್ ಹಾಕಿ ತೊಳೆದು ಬಿಟ್ಟಿದ್ದೀರಿ. ಆದರೂ ಮಣ್ಣಿನ ಮಗನ ಮೈ ಸ್ವಚ್ಛ ಆದೀತಾ?

    ReplyDelete
  5. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಹಲವು ನಮನಗಳು.

    ಹೊಸದಾಗಿ ಬ್ಲಾಗಿದೆ ಲಿಂಕಿಸಿಕೊಂಡ ಹೆಗಡೆಯವರಿಗೆ ಸ್ವಾಗತ ಹಾಗೂ ನಮನ.

    ReplyDelete