ಸೂತ್ರಧಾರಗೊಂದನೆ
ಇಗೋ ನಿನಗೆ ವಂದನೇ
ತಗೋ ಸದಾಭಿನಂದನೇ
ಮುನ್ನ ನೋವನೆಲ್ಲ ಮರೆತು
ನನ್ನ ಮನದಿ ಭಾವತಳೆದು
ಚೆನ್ನಾಗಿಹ ಶಬ್ದಗಳನು
ತಿನ್ನಬಡಿಸುವಾತನೇ
ರನ್ನ ಪಂಪ ಹರಿಹರಾದಿ
ಚಿನ್ನದಂಥ ಕವಿಗಳಿಂದ
ಕನ್ನವಿಟ್ಟು ಜನರಹೃದಯ
ಜೊನ್ನ ಸಮಯದೊಯ್ದನೇ !
ಅನ್ನನೀರು ಬಿಟ್ಟು ಅಳುವ
ಸೊನ್ನೆಯಾದ ಹಲವು ಮನಕೆ
ಕೆನ್ನೆ ಚಿವುಟಿ ಮುದವನೀಡಿ
ಪನ್ನದಲ್ಲಿ ಅಳೆದನೇ
ಹೊನ್ನು ಹೆಣ್ಣು ಮಣ್ಣಿಗೆಲ್ಲಾ
ಮನ್ನಣೆಯನು ನೀಡದಂತೇ
ಬೆನ್ನು ತಟ್ಟಿ ಬುದ್ಧಿಹೇಳಿ
ಚೆನ್ನುಡಿಯಲಿ ನಗುವನೇ
ಹುನ್ನಾರದ ಹುಳುಕು ಮನಕೆ
ನಿನ್ನೆ ಮೊನ್ನೆ ಗಳನು ತಿಳಿಸಿ
ಸನ್ನೆಯಲೇ ತಿದ್ದಿ ತೀಡ್ವ
ನನ್ನೊಡೆಯನೇ ವಂದನೇ
valle kavana sir :)
ReplyDeleteಅಂತರಂಗದ ಒಡೆಯ ಹಾಗು ಗೆಳೆಯನಿಗೆ ಹೊಸ ವರ್ಷದ ಆದಿಯಲ್ಲಿ ವಂದನೆ ಸಲ್ಲಿಸುವ ಈ ಕವನ ನಮಗೆಲ್ಲರಿಗೂ ಮಾದರಿಯಾಗಿದೆ. ಸದಾಭಿನಂದನೆ ಎಂದು ಹೇಳುವಾಗ ‘ಸತ್+ಅಭಿನಂದನೆ’ ಹಾಗು ‘ಸದಾ+ಅಭಿನಂದನೆ’ ಎನ್ನುವ ನಿಮ್ಮ ಚಾತುರ್ಯ ಪ್ರಶಂಸನೀಯ. ನಿಮಗೆ ಹೊಸ ವರ್ಷದ ಶುಭಾಶಯಗಳು. ನಮ್ಮೆಲ್ಲರ ಒಡೆಯನಿಗೆ, ನಿಮ್ಮ ಜೊತೆಗೇ ಪ್ರಣಾಮಗಳು.
ReplyDeleteಭಟ್ಟರೇ, ಹೊಸ ವರುಷದ ಶುಭಾಶಯಗಳು.
ReplyDeleteಅನ್ನನೀರು ಬಿಟ್ಟು ಅಳುವ
ReplyDeleteಸೊನ್ನೆಯಾದ ಹಲವು ಮನಕೆ
ಕೆನ್ನೆ ಚಿವುಟಿ ಮುದವನೀಡಿ
ಪನ್ನದಲ್ಲಿ ಅಳೆದನೇ"
ಚೆನ್ನಾಗಿದೆ...
tumba chennagide sir
ReplyDeleteooru kade bhajane maaduvante ide
ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು, ಧನ್ಯವಾದಗಳು.
ReplyDeleteಹೊಪದಾಗಿ ಬ್ಲಾಗಿಗೆ ಲಿಂಕಿಸಿಕೊಂಡ ಸುರೇಶ ಬಾಗಲ್ ಮತ್ತು ರತ್ನಾ ಅವರಿಗೆ ಸ್ವಾಗತ ಹಾಗೂ ನಮನ.