ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, October 31, 2010

ನಗೆಯಲೂ ಬಯಸುವ ಕನ್ನಡವ !

ಮೊದಲ ಚಿತ್ರ ಋಣ : ಶ್ರೀ ಬಿ.ಕೆ.ಎಸ್ ವರ್ಮಾ

ನಗೆಯಲೂ ಬಯಸುವ ಕನ್ನಡವ !

ಜೀವನ ಕಡಲಿನ ಸ್ನೇಹದ ನೌಕೆಯ
ಪಾವನ ಓ ಸಹಯಾತ್ರಿಗಳೇ
ನಾವಿರುವರೆಗೂ ಒಳಿತನು ಬಯಸುವ
ಭಾವದಿ ನಮಿಸುತ ಕನ್ನಡಕೆ

ಎಂದಿಗೂ ದೂರದ ಕಂದನ ಮರೆಯದ
ಬಂಧು ನಮ್ಮ ಕನ್ನಡಮಾತೆ
ಚಂದದ ಛಂದಸ್ಸುಗಳಿಹ ಭಾಷೆಯು
ಸುಂದರ ಲಕ್ಷಣಗಳ ವನಿತೆ

ಸಿರಿವಂತೆಯು ನಮ್ಮಮ್ಮನು ಶಬ್ದದಿ
ವರಕವಿ ನಟರನು ಹಡೆದಿಹಳು
ಬರವಿರದಾ ನೀರಿನ ಸೆಲೆ ಹರಿದಿದೆ
ನೆರವೀಯುತ ನೀಡುತ ನೆರಳು

ನೂರು ವಿಧಂಗಳು ಮುನ್ನೂರು ತರಂಗಳು
ನೀರೆಯವಳು ಬಹು ಮೋದದಲಿ
ಆರುಕೋಟಿ ಮಕ್ಕಳ ಬೆಳೆಸುವ ಪರಿ
ಯಾರಿಗೂ ಮತ್ಸರ ತರದಿರಲಿ !

ಜಯಸಿರಿಯು ನಮ್ಮಮ್ಮನ ಸೋದರಿ
ಭಯವಿಲ್ಲಾ ಅವಳಿರುವಿಕೆಗೆ
ವಯವನು ವ್ಯಯಿಸುವ ಕೆಲಮಟ್ಟಿಗೆ ನಾವ್
ನಯನಮನೋಹರ ಮಾಳ್ಪುದಕೆ

ಹೆಗಲಲಿ ಕನ್ನಡ ಬಗಲಲಿ ಕನ್ನಡ
ಮುಗಿಲಲೂ ಕಾಣುವ ಕನ್ನಡವ
ಹಗಲಲಿ ಕನ್ನಡ ತೊಗಲಲಿ ಕನ್ನಡ
ನಗೆಯಲೂ ಬಯಸುವ ಕನ್ನಡವ !

9 comments:

  1. ಭಟ್ ಸರ್, ನಿಮಗೂ ಕನ್ನಡಮ್ಮನ ಹಬ್ಬದ ಶುಭಾಶಯಗಳು..:)

    ReplyDelete
  2. ಸರ್,
    'ಕನ್ನಡ'ದ ಚೆಂದದ ವರ್ಣನೆ.
    ಖಂಡಿತ ನಗೆಯಲು ಬಯಸುವ ಕನ್ನಡವ, ಉಸಿರುಸಿರಲೂ ಬಯಸುವ ಕನ್ನಡವ

    ರಾಜರತ್ನಂ ಹೇಳಿದ ಹಾಗೆ "ಪರ್ಪಂಚ ಇರೋ ತನ್ಕ ಕನ್ನಡ ಪದಗಳ್ ನುಗ್ಲಿ "

    ReplyDelete
  3. 'ಕನ್ನಡವೇ ಸತ್ಯ,ಕನ್ನಡವೇ ನಿತ್ಯ'.ತಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

    ReplyDelete
  4. ಭಟ್ಟರೆ,
    ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಕನ್ನಡವು ಕನ್ನಡಿಗರ ತೊಗಲಿನಲ್ಲಿ ಸೇರಿಕೊಳ್ಳುವವರೆಗೆ, ಆಷ್ಟು ಅಭಿಮಾನ ನಮ್ಮಲ್ಲಿ ಹುಟ್ಟುವವರೆಗೆ, ಭಾಷೆ ಬೆಳೆಯಲಾರದು. ಕನ್ನಡದ ಪ್ರೀತಿಯಿಂದ ಕೂಡಿದ ಕವನವು ಸೊಗಸಾಗಿದೆ.

    ReplyDelete
  5. ಕನ್ನಡ ರಾಜ್ಯೋತ್ಸವದ ಶುಭಾಶಯಗಳು :)

    ReplyDelete
  6. ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

    ReplyDelete
  7. ಎಲ್ಲರಿಗೊ ಮತ್ತೊಮ್ಮೆ, ಮಗುದೊಮ್ಮೆ ರಾಜ್ಯೋತ್ಸವದ ಶುಭಾಶಯಗಳು ಮತ್ತು ಧನ್ಯವಾದಗಳು

    ReplyDelete
  8. ರಾಜ್ಯೋತ್ಸವದ ಶುಭಾಶಯಗಳು. ಚೆಂದದ ಕವನ.

    ReplyDelete