ಚೋರ ಬುದ್ಧಿ
ಸಾವಿರಾರು ಆಸೆಗಳವು
ಬೇರುಬಿಟ್ಟು ಮನದತುಂಬ
ನೇರ ಒಮ್ಮೆ ಬೆಳೆಯಗೊಡದ
ಚೋರ ಬುದ್ಧಿ ಜನಿಸಿತು
ಹಾರ ಬೇಕು ತಿನ್ನೆಮೊದಲು
ದಾರಬೇಕು ಮೈಮುಚ್ಚಲು
ಧಾರಿಣಿಯಲಿ ಮಲಗೆ ಜಾಗ
ಮೂರು ವಿಷಯ ತೋರಿತು
ನಾರಿ ಬಯಸಿ ನರನ ಸಂಗ
ಜಾರಿಬಿದ್ದು ಜೀವಸೃಷ್ಟಿ
ಊರುತುಂಬ ಜನರು ತುಂಬಿ
ಆರು ಅದಕೆ ಸೇರಿತು
ಹಾರಲು ವಿಮಾನವಿರಲಿ
ಏರಬಯಸೆ ನೆಗವದಿರಲಿ
ಭಾರೀ ಮಹಲು ಸ್ವಂತಕಿರಲಿ
ಮೂರು ಮತ್ತೆ ಕೂಡಿತು
ಊರಹೊರಗೆ ತೋಟವಿರಲಿ
ತೇರೆತ್ತರ ಲಾಭಬರಲಿ
ಕೂರುವಲ್ಲೇ ಮುಗಿವಕೆಲಸ
ಕೋರಿಕೆಗಳು ಕೂಡುತ
ಮೇರೆಮೀರುವಷ್ಟು ಬಯಕೆ
ತೋರುತಿತ್ತು ಧ್ಯಾನದಲ್ಲಿ
ಯಾರುಕರೆದರವುಗಳನ್ನು ?
ಸೇರಿಬಂದವೆಲ್ಲವು !
ಮಾರುದ್ದದ ಬೀಳಲುಗಳ
ನೀರಹೀರೆ ಆಳಕಿಳಿಸಿ
ಸಾರಹೀನವಾಯ್ತು ಬದುಕು
ದಾರಿಕಾಣದೊಮ್ಮೆಲೇ !
ವಿ ಆರ್.ಬಿ ಸರ್..ಮನದ ಬಯಕೆಗಳ ಹುಚ್ಚುಕುದುರೆಯ ಮೇಲೆ ಮದಿರೋನ್ಮತ್ತು ಸವಾರಿ ಮಾಡುವುದನು ನೆನಪಿಸುತ್ತೆ ನಿಮ್ಮ ವಾಸ್ತವಕ್ಕೆ ಕನ್ನಡಿ-ಕವನ...ಸರಳ ಆದರೂ ಗಹನ ವಿಚಾರ ಹುದುಗಿಸಿ ಮೂಡಿಸಿದ ಸಾಲುಗಳು...
ReplyDeleteಬದುಕೆಂದರೆ ಅದೆ ಅಸ್ಟೆ ಅಲ್ವಾ ! ಚಂದದ ಕವನ ಸಾರ್ .
ReplyDeleteಮಾರುದ್ದದ ಬೀಳಲುಗಳ
ನೀರಹೀರೆ ಆಳಕಿಳಿಸಿ
ಸಾರಹೀನವಾಯ್ತು ಬದುಕು
ದಾರಿಕಾಣದೊಮ್ಮೆಲೇ !
ವಾಹ್ ಎಂತ ಸಾಲುಗಳು ! :)
ಚೆನ್ನಾಗಿದೆ, ಮನವೆ೦ಬ ಮರ್ಕಟ ಯಾವಾಗ ಹೇಗೆ ಇರುತ್ತದೆ ಎ೦ದು ಹೇಳಲಾಗದು.
ReplyDeleteಭಟ್ಟರೆ,
ReplyDeleteಸಂಕೀರ್ಣ ತತ್ವವನ್ನು ಸರಳ ಭಾಷೆಯಲ್ಲಿ ಹೇಳುವ ಕಲೆ ನಿಮ್ಮಲ್ಲಿ ಮೈಗೂಡಿದೆ. ಈ ಪದ್ಯ ಓದುತ್ತಿದ್ದಂತೆ ಮುಪ್ಪಿನ ಷಡಕ್ಷರಿಯವರು ರಚಿಸಿದ ‘ತಿರುಕನ ಕನಸು’ ನೆನಪಾಯಿತು!
chenagide sir.. :)
ReplyDeleteಎಲ್ಲರಿಗೂ ವಂದನೆಗಳು
ReplyDeleteನಿಜವಾಗಿಯು ಸುನಾಥರು ಹೇಳಿದ ಹಾಗೆ ಸ೦ಕೀರ್ಣ ತತ್ವವನ್ನ ಸರಳವಾಗಿ ಹೇಳಿದ್ದಿರಾ... ವ೦ದನೆಗಳು.
ReplyDeleteTHANKS
ReplyDelete