ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, September 28, 2010

ಆಧ್ಯಾತ್ಮ-ವಿಜ್ಞಾನ

ಚಿತ್ರ ಋಣ : ಅಂತರ್ಜಾಲ
ಆಧ್ಯಾತ್ಮ-ವಿಜ್ಞಾನ

ಹಾರುವ ಮೊಲವನ್ನು ಕಂಡು
ಮೂರೇ ಕಾಲು ಎಂದರು !
ಬಾರಿ ಬಾರಿ ಸಾರಿ ಹೇಳೆ
ಯಾರೂ ಅರಿಯದಾದರು !

ಜಾರುವ ಬಂಡೆಯಮೇಲೆ
ಏರಬೇಡಿರೆಂದರೂ
ನೀರಪಸೆಯ ಕಂಡೂ ಕಂಡೂ
ದಾರಿತುಳಿದು ಬಿದ್ದರು !

ಊರ ಜನರ ಅಂಬೋಣಕೆ
ಮಾರಿಕೊಳ್ಳಬೇಡೆನೆ
ಖಾರವಾದ ಮಾತನಾಡಿ
ಹಾರಿ ಹಾಯ್ದುಬಂದರು

ಹಾರಿದಾ ವಿಮಾನವಿಳಿಯೆ
ಮಾರಜನಕ ದಯೆಯದು
ನೀರಿಗಿಳಿದ ಹಡಗು ಮರಳಿ
ದೂರದಡವ ಸೇರ್ವುದು !

ದಾರಿಕಂಡ ಋಷಿಮುನಿಗಳು
ಧಾರೆಯೆರೆದ ಜ್ಞಾನಕೇ
ಖಾರ-ಉಪ್ಪು-ಹುಳಿಯ ಹುಡುಕಿ
ತೋರಿಸೆಂಬ ನಿಲುವೇಕೆ ?

ಬೇರೆಯದೇ ಲೋಕವಿಹುದು
ತೂರಿಕೊಳ್ಳಲದರಲಿ
ಮೇರೆ ಮೀರಿದಂತ ಸುಖವು
ಭೂರಿಭೋಜನವಲಿ

14 comments:

  1. ನಿಮ್ಮ ಈ ಕವನದಲ್ಲಿ ಆಧ್ಯಾತ್ಮ ಜ್ಞಾನದ ಬಗ್ಗೆ ಸೊಗಸಾಗಿ ಹೇಳಿದ್ದೀರಿ.ಧನ್ಯವಾದಗಳು.

    ReplyDelete
  2. ಚೆನ್ನಾಗಿದೆ ಗುರುಗಳೇ !!!

    ReplyDelete
  3. ಬೇರೆಯದೇ ಲೋಕವಿಹುದು ತೂರಿಕೊಳ್ಳಲದರಲಿ.. ಮೇರೆ ಮೀರಿದಂತ ಸುಖವು.... ಎಂಬ ಮಾತುಗಳು ಅದೆಷ್ಟು ಚೆನ್ನಾಗಿವೆ ಮತ್ತು ಸತ್ಯವಾದವು. ನಿಜಕ್ಕೂ ನಮಗೆಲ್ಲರಿಗೂ ಬೇಕಾಗಿರುವುದೇ ಈಗ ಆಧ್ಯಾತ್ಮ ಚಿಂತನೆ, ಒತ್ತಡ ರಹಿತ ಬದುಕಿಗೆ ಅದು ಅತ್ಯಂತ ಪರಿಣಾಮಕಾರಿ ಔಷಧಿ.... ಧನ್ಯವಾದಗಳು ಭಟ್ ಸಾರ್.. ಚೆನ್ನಾಗಿದೆ....


    ಶ್ಯಾಮಲ

    ReplyDelete
  4. ಸಕಲ ಭಾವನೆಗಳನ್ನು ಕವನರೂಪದಲ್ಲಿ ವ್ಯಕ್ತಪಡಿಸಬಲ್ಲ ನಿಮ್ಮ ಸಾಮರ್ಥ್ಯಕ್ಕೆ ಬೆರಗಾಗುತ್ತಿದ್ದೇನೆ. ವಿಜ್ಞಾನದಲ್ಲಿ ಅಡಗಿರುವ ಅಜ್ಞಾನದ ಅಂಶವನ್ನು ಸುಜ್ಞಾನದ ಮೂಲಕ ಹೇಗೆ ಅಳಿಸಬಹುದೆಂದು ಚೆನ್ನಾಗಿ ತಿಳಿಸಿರುವಿರಿ.

    ReplyDelete
  5. bhat sir,
    nimage hosa prayatnadante kanDaru, namage tumbaa chennaagi kanDitu sir..... tumbaa chennaagide....

    ReplyDelete
  6. ವಿ.ಆರ್ಬಿ ಸರ್, ಆಧ್ಯಾತ್ಮ ತನ್ನದೇ ರೀತಿಯಲ್ಲಿ ತಿಳಿ ಹೇಳುತ್ತೆ ..ಒತ್ತಾಯ ಇರೊಲ್ಲ ಅದೇ ಸಿದ್ಧವಾದದುದನ್ನು ಸಾರುತ್ತೆ ಮತ್ತೆ ಅಲ್ಲಗಳೆಯುತ್ತೆ ಮತ್ತೆ ಸಾಧಿಸುತ್ತೆ ಎಲ್ಲಾ ಗೊಂದಲ ಅಂತ ಅನಿಸುತ್ತೆ ಆದ್ರೆ ಅದು ನಮ್ಮ ತಿಳುವಳಿಕೆ ಆಗ ಗಹನವಾಗಿರಲಿಲ್ಲವಾದ್ದರಿಂದ ಎನಿಸುತ್ತೆ...ಬಹಳ ಸೂಕ್ಷ್ಮ ವಿಷಯಗಳನ್ನು ತೂಗಿ ಹೇಳಿದ್ದೀರಿ...

    ReplyDelete
  7. [ದಾರಿಕಂಡ ಋಷಿಮುನಿಗಳು
    ಧಾರೆಯೆರೆದ ಜ್ಞಾನಕೇ]

    ಇಂತಹ ಋಷಿಮುನಿಗಳು ಹುಟ್ಟಿದ ಭೂಮಿಯಲ್ಲಿ ನಮ್ಮ ಜನ್ಮವಾಗಿದೆಯಲ್ಲಾ! ಭಗವಂತನು ಇದಕ್ಕಿಂತ ಇನ್ನೇನು ಕೊಡಬೇಕು!

    ReplyDelete
  8. ಭಟ್ ಸರ್‍, ಸರಳವಾಗಿ ಅಧ್ಯಾತ್ಮ ಮತ್ತು ವಿಜ್ಞಾನವನ್ನು ಪರಿಚಯಿಸಿದ್ದೀರಿ. ಇಂದಿನ ಬದುಕಿಗೆ ಬೇಕಿರುವುದು ಕೇವಿಲ ಭೌತಿಕ ಜ್ಞಾನವಲ್ಲ ಅದರ ಜೊತೆಗೆ ಇರುವ ಬೇರೊಂದು ಲೋಕದ ಜ್ಞಾನ ಎಂಬುದನ್ನು ಸರಳವಾಗಿ ಈ ಕವನದ ಕೊನೆಯ ಸಾಲುಗಳಲ್ಲಿ ತಿಳಿಸಿದ್ದೀರಿ.
    ಧನ್ಯವಾದಗಳು.

    ReplyDelete
  9. ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು

    ReplyDelete
  10. ಆಧ್ಯಾತ್ಮಿಕ -ವೈಜ್ಞಾನಿಕ ತುಲನೆ ಚೆನ್ನಾಗಿ ಮಾಡಿದ್ದಿರಾ....

    ReplyDelete
  11. ಋಷಿ-ಮುನಿಗಳು ಹಾಕಿಕೊಟ್ಟ ದಾರಿ ಅರ್ಥ ಮಾಡಿಕೊಳ್ಳುವ ಸಹನೆ ನಮಗಿಲ್ಲ. ಜ್ಞಾನ ಕೊರತೆಯಿದ್ದರೂ ಅದನ್ನು ಹೀಗಳೆಯುವವರೇ ಬಹುಮಂದಿ. ವಿಷಯ ಪರೀಕ್ಷೆಗೆ ಸ್ವತ: ಜ್ಞಾನ ಅಥವಾ ಸಮಯವಿಲ್ಲದಿದ್ದಲ್ಲಿ, ಹಿರಿಯರು (ಅನುಭವಸ್ಥರು) ತೋರಿದ ದಾರಿಯಲ್ಲಿಯೇ ನಡೆಯುವುದು ಸಜ್ಜನನ ಲಕ್ಷಣ. ಅಂತೆಯೇ "ದಾರಿಕಂಡ ಋಷಿಮುನಿಗಳು
    ಧಾರೆಯೆರೆದ ಜ್ಞಾನಕೇ
    ಖಾರ-ಉಪ್ಪು-ಹುಳಿಯ ಹುಡುಕಿ
    ತೋರಿಸೆಂಬ ನಿಲುವೇಕೆ ?" ಸಾಲುಗಳು ಅರ್ಥಪೂರ್ಣವಾಗಿವೆ. ಅಭಿನಂದನೆಗಳು.

    ReplyDelete