ಸ್ವಯಂ ಚಾಲಿತ
ಗಾಳಿ ಕೇಳಿ ಬೀಸಲಿಲ್ಲ
ನನ್ನ ನಿನ್ನ ಅವರನು
ವೇಳೆ ನಿಂತು ಕಾಯಲಿಲ್ಲ
ನಿನ್ನ ನನ್ನ ಬರವನು
ಮಳೆಯು ಹನಿದು ಬೀಳಲಿಲ್ಲ
ನಮ್ಮ ಇಚ್ಛೆ ಮೇರೆಗೆ
ಇಳೆಯು ಕುಸಿದು ಕಟ್ಟಲಿಲ್ಲ
ನಿಮ್ಮ ಆಜ್ಞೆ ಯಾರಿಗೆ ?
ಸೂರ್ಯ ಬೆಳಕ ಹರಿಸಲಿಲ್ಲ
ಕತ್ತಲಲ್ಲಿ ಬಾ ಎನೆ
ಚಂದ್ರ ಗುರುತು ಮರೆಸಿಕೊಂಡ
ಹಗಲು ನೋಡಬೇಕೆನೆ !
ನೀರ ಮಟ್ಟ ಏರಲಿಲ್ಲ
ಯಾರಿಗೋ ಬಾಯಾರಿಕೆ
ಬೆಂಕಿ ಕಸುವ ಕಳಚಲಿಲ್ಲ
ಉರಿಯಬೇಡ ಅನಲಿಕೆ !
ಬಾನು ಹೊಳೆಯದಿರದು ನಿತ್ಯ
ನಾನು ನೀನು ಮಲಗಿರೆ
ಏನು ನಿನ್ನ ಕೊಡುಗೆ ನೋಡು
ಇವುಗಳೆಲ್ಲ ನಡೆದಿರೆ !
sir, well said.
ReplyDeleteall are true statements.
thank u
ಹೌದು.........
ReplyDeleteಇವರಿಗೆಲ್ಲ ಯಾರ ಅಪ್ಪಣೆ,
ನಾವಿಲ್ಲಿ ತೃಣ ಸಮಾನ.
ಆದರೂ ನಾವು ಕೊಡುವುದಿಲ್ಲ ಮನ್ನಣೆ........
ಸುಂದರ ಕವನ........
ಪ್ರಾಸಬಧ್ಧ "ಸ್ವಯ೦ಚಾಲಿತ" ವಿಚಾರಪೂರಿತ ಕವನ..ಸೊಗಸಾಗಿ ಮೂಡಿ ಬ೦ದಿದೆ.
ReplyDeleteಶುಭಾಶಯಗಳು
ಅನ೦ತ್
ಭಟ್ ಸರ್,
ReplyDeleteಎಂದಿನಂತೆ ತುಂಬಾ ಚೆನ್ನಾಗಿದೆ.... ಪ್ರಕ್ರತಿ ತಮ್ಮ ತಮ್ಮ ಕೆಲಸವನ್ನು ಸರಿಯಾಗಿ ನಡೆಸುತ್ತಿದೆ ... ನಾವು ಮಾತ್ರ ಸುಮ್ಮನಿದ್ದೇವೆ....
chenaagi.. super agide sir...
ReplyDeleteಭಟ್ ಸರ್;ನಮ್ಮೊಳಗಿನ ಎಲ್ಲಾ ಕೆಲಸಗಳೂ ತಾನಾಗಿಯೇ ನಡೆಯುತ್ತಿವೆ.ಕವನದ ಭಾವಾರ್ಥ ಚೆನ್ನಾಗಿದೆ.ನಿಮ್ಮ ಜ್ಞಾನ ಗಂಗೆ ಹೀಗೇ ಹರಿಯುತಿರಲಿ.ನಮಸ್ಕಾರ.
ReplyDeleteಅರ್ಥಪೂರ್ಣ ಕವನ, ಚೆನ್ನಾಗಿದೆ
ReplyDeleteಪ್ರತಿಕ್ರಿಯಿಸಿದ ಎಲ್ಲಾ ಒದುಗ ಮಿತ್ರರಿಗೆ ಹಲವು ನೆನಕೆಗಳು, ಕಾರಣಾಂತರಗಳಿಂದ ಪ್ರತ್ಯೇಕ ಉತ್ತರಿಸಲು ಸಾಧ್ಯವಾಗುತ್ತಿಲ್ಲ, ದಿನವೊಂದೆರಡರಲ್ಲಿ ಮತ್ತೆ ನಿಮಗೆಲ್ಲ ಪ್ರತ್ಯೇಕವಾಗಿ ಸ್ಪಂದಿಸುತ್ತೇನೆ, ದಯವಿಟ್ಟು ಈ ಬಗ್ಗೆ ಕ್ಷಮೆಯಿರಲಿ.
ReplyDeleteನಿಸರ್ಗದ ಚೈತನ್ಯಗಳು ಸ್ವಯಂಚಾಲಿತ ಶಕ್ತಿಗಳೇ. ಇವುಗಳ ಎದುರಿಗೆ ಮಾನವನ ಕ್ಷುದ್ರತೆ ಅರಿವಾಗದಿರದು. ಉತ್ತಮ ಕವನವನ್ನು ಕೊಟ್ಟಿದ್ದೀರಿ.
ReplyDeleteಬಾನು ಹೊಳೆಯದಿರದು ನಿತ್ಯ
ReplyDeleteನಾನು ನೀನು ಮಲಗಿರೆ
ಏನು ನಿನ್ನ ಕೊಡುಗೆ ನೋಡು
ಇವುಗಳೆಲ್ಲ ನಡೆದಿರೆ !
chennagide sir,
ಸುಂದರ, ಸರಳ, ಅರ್ಥಪೂರ್ಣ... ನಿಮ್ಮೊಳಗಿನ ಕವಿ ಶಕ್ತಿ ಅದ್ಭುತ..
ReplyDeleteBhatre,
ReplyDeletetumbaa praasapurna, arthapurna kavana. Very Nice sir..
ತಮಗೆಲ್ಲರಿಗೂ ನಮಸ್ಕಾರಗಳು, ಮತ್ತೆ ಸಿಗುತ್ತೇನೆ.
ReplyDeleteನಿಸರ್ಗದ ಸ್ವಯಂಚಾಲಿತವನ್ನು ವಿವರಿಸಿ, ಬದುಕು ನೋಡಬೇಕಾದ ಪರಿ ಹೇಳಿದ್ದಿರಾ
ReplyDelete