ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, September 7, 2010

ಒಗಟು !!

ಚಿತ್ರಋಣ : ಅಂತರ್ಜಾಲ
ಒಗಟು !!

ನಾನೆಣಿಸಿದಂತಿಲ್ಲ ನನ್ನ ಹಲ ಕೆಲಸಗಳು
ನೀನಾಡುವಾ ಆಟ ನನ್ನ ಬದುಕು
ಯಾನದಲಿ ಸಹವರ್ತಿ ನೀನು ಕಣ್ಣಿಗೆ ಕಾಣೆ
ಮೌನದಲಿ ಧ್ಯಾನಿಸಲು ಕಲಿಯಬೇಕು

ಗಾಣದೆತ್ತಿನ ರೀತಿ ನನ್ನ ಈ ಜೀವನದಿ
ಮೇಣಹಚ್ಚುತ ಗಟ್ಟಿಗೊಳಿಸಿ ಜಂಜಡದಿ
ಕಾಣೆಯಾದೆನು ಇಲ್ಲಿ ನನ್ನೊಳಗಿನಾ ನಾನು
ಪ್ರಾಣಹೋದರು ಒಮ್ಮೆ ಕಾಣೆಯೇನು ?

ನನ್ನತನ ನನಗಿಲ್ಲ ಇನ್ನಿತರ ಕಾಡುವೆನು
ಸಣ್ಣತನ ಮುಂಗೋಪ ತಡೆಯದೇ ಹರಿದು
ನಿನ್ನತನದಲಿ ನನ್ನ ಹುದುಗಿಸುತ ಮುಕ್ತಿಯನು
ಮನ್ನಿಸುತ ನೀಡೆನಗೆ ದೊರೆವ ಯುಕ್ತಿಯನು

ನಿನ್ನ ಭಾಗವು ನಾನು ಎಂದರದೋ ಮುನಿಜನರು
ನನ್ನ ದೂಡುತ ದೂರ ಉಳಿವೆಯೇನು ?
ಇನ್ನೆನಗೆ ಕೊಡಬೇಡ ಇಹದ ಸಂಕಷ್ಟಗಳ
ಚೆನ್ನಾಗಿ ತಿಳಿಹೇಳು ಕರ್ಮಬಾಧೆಯನು

ಯಾಕೆ ಒಂಥರಾ ಒಗಟು ಜಗದಿ ಸಾರಾಸಗಟು ?
ಸಾಕು ಬಾ ರೂಪದಲಿ ನಿಲ್ಲೆದುರು ಒಮ್ಮೆ
ನಾಕು ನಾಕೇ ನಿಮಿಷ ನೀ ನೀಡೆ ದರುಶನವ
ಬೇಕಾದ ಭೂರಿ ಭೋಜನವನ್ನು ಪಡೆವೆ !

ತಂದೆ ನೀನು ಎನಲೇ ತಾಯ ಮಡಿಲನು ನೆನೆದು
ಒಂದಿನಿತು ಕರುಣೆ ಇಲ್ಲದ ಕೃಪಣ ನೀನು
ಸಂದೇಹವಿಲ್ಲೆನಗೆ ದೋಷವೆನ್ನಲೆ ಇಹುದು !
ಮುಂದೆ ದಾರಿಯ ತೋರಿ ಹರಿದು ಋಣಬಾಧೆ


9 comments:

  1. ಭಟ್ಟರೆ,
    ಆಧ್ಯಾತ್ಮಿಕ ಚಿಂತನೆಯನ್ನು ಮಾಡುವ ಈ ಕವನ ತುಂಬ ಸೊಗಸಾಗಿದೆ.

    ReplyDelete
  2. ಸದಾ ಪಾರಮಾರ್ಥಿಕ ಚಿಂತನೆಯನ್ನೇ ಮಾಡುವ ನಿಮ್ಮ ಮನಸ್ಸು, ಅದನ್ನೆ ಇಲ್ಲಿಯೂ ಹರಿಯಬಿಟ್ಟಿದೆ. ಅಹ್ಲಾದಕರವಾಗಿತ್ತು...

    ReplyDelete
  3. Bhatre,

    Tumbaa sundara kavana, arthapurnavaagide...dhanyavadagalu...

    ReplyDelete
  4. ಭಟ್ ಸರ್;ನನ್ನೊಳಗೆ ಕಾಣದೆ ಕುಳಿತ ಆ ಕಾಣದ ನನ್ನ ಹುಡುಕಾಟ ನಿರಂತರ ಸಾಗಲಿ.ಧನ್ಯವಾದಗಳು.

    ReplyDelete
  5. ಭಟ್ ಸರ್,

    ತುಂಬಾ ಚೆನ್ನಾಗಿದೆ...

    ReplyDelete
  6. ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೂ ಅನಂತ ನಮಸ್ಕಾರಗಳು, ಸ್ವಲ್ಪ ಅವಸರವಿದೆ-ಹೀಗಾಗಿ ಪ್ರತ್ಯೇಕವಾಗಿ ಬರೆಯಲಾಗುತ್ತಿಲ್ಲ , ಎಲ್ಲರಿಗೂ ಅಡ್ವಾನ್ಸ್ ಆಗಿ ಶುಭಾಶಯಗಳೂ ಕೂಡ

    ReplyDelete
  7. ಚೆನ್ನಾದ ಕವಿತೆ. ಭಟ್ರೇ

    ReplyDelete
  8. ಹೌದು ನಾವೆಣಿಸಿದಂತಿಲ್ಲ..

    ReplyDelete