ಹಸಿರ ಅರಮನೆ
ಹಸಿರು ಕಾನನದ ನಡುವಿರುವ ಹಳೆ ಮನೆಯಲ್ಲಿ
ನಸುಬೆಳಕಿನಲಿ ಕುಳಿತು ಚಹ ಕುಡಿವ ಮನಕೆ
ಪಿಸುಮಾತನರಗಿಣಿಯು ಪಂಜರದಿ ಕೂಗಿರಲು
ಹೊಸ ಆಸೆ ಗರಿಗೆದರಿ ಹಾರತೊಡಗಿದೆನು
ಅಲ್ಲಿ ಜಂಜಡವಿಲ್ಲ ಜಡಹಿಡಿದ ಬದುಕಲ್ಲ
ನಲ್ಲಿ ನೀರಿಗೆ ಕಾಯ್ವ ನ್ಯೂನತೆಯು ಇಲ್ಲ
ಬಲ್ಲವರು ಬಹಳಿಹರು ಬದುಕ ತೋರಿಸುವುದಕೆ
ಸಲ್ಲದಾಮಿಷಗಳಾ ಗೊಡವೆ ಬಹದಲ್ಲ
ನೀರವದ ಇಳೆಯಲ್ಲಿ ಜುಳುಜುಳು ನಿನಾದಿಸುತ
ಆರೂರ ಸುತ್ತರಿವ ಬೆಳ್ನೊರೆಯ ತೊರೆಗಳ್
ಮೇರೆ ಮೀರಿದ ಸುಖದ ನೋಂಪಿಯದ ಭುಂಜಿಸಲು
ನೂರೆಂಟು ಸಂಗ್ತಿಗಳು ಕಣ್ಣ ತುಂಬುವವು
ಒತ್ತಡದ ದಿನವಿಲ್ಲ ಹತ್ತಿರದ ಒಡನಾಟ
ನೆತ್ತಿಯಲೆ ತುಂಬಿ ತೊನೆಯುವ ಹಣ್ಣು ಗಿಡಗಳ್
ಮತ್ತೆ ನೇಸರನ ಕಿರು ಕಿರು ನೋಟ ಕೆಲದಿನದಿ
ಒತ್ತಟ್ಟಿಗಿರುವರಲಿ ಹಬ್ಬದಾಚರಣೆ
ವಿದ್ಯುತ್ತು ಬೇಡೆಮಗೆ ನಾವೇ ತಯಾರಿಪೆವು
ಗದ್ಯ-ಪದ್ಯವನೋದೆ ಸಮಯ ಬಹಳಿಹುದು
ವಿದ್ಯೆಗಳ ಆಗರವು ಬದುಕನಾಲಂಗಿಸುತ
ಸಾದ್ಯಂತ ಸಂಸ್ಕೃತಿಯ ತವರು ನಮದಿಹುದು
ಬೆಳಗು ಬೈಗಿನ ವೇಳೆ ನಿತ್ಯವೂ ನಮಿಸುತ್ತ
ಉಳುಮೆಮಾಡುತ ಭೂಮಿ ಫಲವ ಪಡೆಯುವೆವು
ನಳನಳಿಸಿ ಬೆಳೆದಿರುವ ಹೂ ಗಿಡಗಳಂದದಲಿ
ಒಳಗೊಳಗೆ ಸಂತಸವು ತುಂಬಿ ಹರಿದಿಹುದು
ಹಸಿರ ಅರಮನೆಯ ನವಿರಾದ ವರ್ಣನೆ..ಪಿಸುಮಾತನರಗಿಣಿಯು ಪಂಜರದಿ ಕೂಗಿರಲು
ReplyDeleteಹೊಸ ಆಸೆ ಗರಿಗೆದರಿ ಹಾರತೊಡಗಿದೆನು..ಅಧ್ಭುತ ಕಲ್ಪನೆ..ಭಟ್ ಸರ್.
ಅನ೦ತ್
ಚಂದದ ಚಿತ್ರಕೊಂದು ಅಂದದ ಕವಿತೆಯ ಶೃಂಗಾರ.ಇನ್ನು ಕವಿತೆಗೋ ಸುಂದರ ಪದಗಳ ಅಲಂಕಾರ ಓದುವ ಮನಸ್ಸಿಗೆ ಹಾಗು ನೋಡುವ ಕಣ್ಣುಗಳಿಗೆ ಸಂತಸ ಸಂಭ್ರಮದ ಸುಂದರ ಹಾರ.
ReplyDeleteಆದಿಪ್ರಾಸದ ಕವನ ಅದ್ಭುತವಾಗಿ ಮೂಡಿ ಬಂದಿದೆ ವಿ. ಆರ್. ಭಟ್ ಸರ್..
ReplyDeleteಚೆ೦ದದ ಪರಿಸರದ(ಹಸಿರ ಅರಮನೆ) ಮೇಲಿನ ಕವನ.
ReplyDeleteಹಸಿರು ಕಾನನದ ನಡುವೆ ಸುಂದರ ಹಸಿರು ಅರಮನೆಯ ದೃಶ್ಯ... ಮನಸೆಳೆಯುವ ಪದ ಪುಂಜಗಳ ವಿವರಣೆ... ಭಟ್ ಸಾರ್ ತುಂಬಾ ಚೆನ್ನಾಗಿದೆ... ಖುಷಿಯಾಯ್ತು ಓದಿ.... ನಾ ಕಲ್ಪನಾ ಲೋಕಕ್ಕೂ ಹೋಗಿ ಬಂದೆ... ಆ ಹಸಿರರಮನೆಯಲ್ಲಿ ಕುಳಿತು ಶುಭ್ರ ಮುಂಜಾನೆಯಲ್ಲಿ ಚಹಾ ಹೀರಲು.... ಅದ್ಭುತ ಸಾರ್....
ReplyDeleteಶ್ಯಾಮಲ
ಭಟ್ ಸರ್;ಆದಿ ಪ್ರಾಸದ ಅದ್ಭುತ ಕವನ.ನೀವು ಅಷ್ಟಾವಧಾನ ಶುರು ಮಾಡಬಹುದು.
ReplyDeleteandada chitrake chandada kavana.......
ReplyDeleteಹಸಿರ ಅರಮನೆಯ ಕಾವ್ಯಮಯ ವರ್ಣನೆ ಬಹು ಚೆನ್ನಾಗಿದೆ.
ReplyDeleteಭಟ್ ಸರ್, ಹಸಿರ ಕಾಡಿನ ನಡುವಿನ ಅರಮನೆಯ ಕಲ್ಪನಾಲೋಕದಲ್ಲಿ ವಿಹರಿಸುವಂತೆ ಮಾಡಿದ ಕಾವ್ಯ ಚೆನ್ನಾಗಿದೆ.
ReplyDeleteಸ್ನೇಹದಿಂದ,
ಪ್ರಕೃತಿಯ ಮಡಿಲಲ್ಲಿ ಬದುಕುವ ಕನಸು ಸೊಗಸಾಗಿದೆ. ಇದು ಸಾಧ್ಯವಾಗಬಹುದೆ?
ReplyDeleteಚೆನ್ನಾಗಿದೆ...
ReplyDelete(ನಾನೂ ಆಗೊಮ್ಮೆ ಹೀಗೊಮ್ಮೆ ಬ್ಲಾಗ್ ಕಡೆ ಬಂದರೂ ನಿಮ್ಮ ಎಲ್ಲ ಬರಹಗಳನ್ನು ಓದಿ ಕಾಮೆಂಟ್ ನೀಡಿರುತ್ತೇನೆ..)
ನೆಟ್ ಪ್ರಾಬ್ಲೆಮ್ ಇರುವ ಕಾರಣ ಒಂದೇ ಉತ್ತರದಲ್ಲಿ ಮುಗಿಸುತ್ತಿದ್ದೇನೆ, ನಿಮ್ಮೆಲ್ಲರ ಪ್ರತಿಕ್ರಿಯೆಗಳೂ ಬಹಳ ಮುದ ನೀಡಿವೆ, ಎಲ್ಲರಿಗೂ ಅನಂತ ಧನ್ಯವಾದಗಳು
ReplyDeleteಭಟ್ ಸರ್,
ReplyDeleteಸುಂದರ ಮನೆಯ ವಾತಾವರಣಕ್ಕೆ ತಕ್ಕಂತೆ ಸೊಗಸಾದ ಕವನವನ್ನು ಬರೆದಿದ್ದೀರಿ..
Thanks you Shivu Sir
ReplyDeleteBhatre,
ReplyDeleteenu helbeku anta gottagta illa....erade shabdhadalli helbeku andre Simplyyyyy Superbbbbb Sir...
Thank you Sri Ashok
ReplyDelete