ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 24, 2010

ಮನದ ರಶ್ಮಿ

ಕಲ್ಪನಾ ಚಿತ್ರ : ರಾಜಾ ರವಿವರ್ಮ ವಿರಚಿತ , ಚಿತ್ರ ಕೃಪೆ : ಅಂತರ್ಜಾಲ

ಜೀವನದಲ್ಲಿ ಹಲವಾರು ಪಾತ್ರಗಳು ಬಂದು ಹೋಗುತ್ತವೆ. ಆದರೆ ನಮ್ಮ ಜೊತೆ ತಮ್ಮನ್ನು ಅರ್ಧಭಾಗವಾಗಿ ಹಂಚಿಕೊಳ್ಳುವ ಅರ್ಧಾಂಗಿಯನ್ನು ನಾವು ಕೃತಜ್ಞತೆಯಿಂದ ಕಂಡರಷ್ಟೇ ನಮ್ಮ ಪಾತ್ರ ತುಂಬಿಬರುತ್ತದೆ. ನಮಗಾಗಿ ಹುಟ್ಟಿದ ಮನೆಯನ್ನು ಬಿಟ್ಟು, ನಮ್ಮ ಬದುಕಿನ ಕಷ್ಟಕೋಟಲೆಗಳಲ್ಲಿ ನಮ್ಮನುವರ್ತಿಯಾಗಿ, ನಮ್ಮ ನೋವು-ನಲಿವನ್ನು ಹಂಚಿಕೊಂಡು, ನಮ್ಮ ಕೆಲಸಗಳನೇಕವನ್ನು ಮಾಡಿಕೊಟ್ಟು, ನಮಗೆ ಬೇಕುಬೇಕಾದ ತಿಂಡಿತಿನಿಸು ಮಾಡಿಬಡಿಸಿ, ನಮ್ಮ ಮುಂದಿನ ಕುಡಿಗಳಿಗೆ ಅಮ್ಮನಾಗಿ-ಹೊತ್ತು, ಹೆತ್ತು, ಸಲಹಿ, ಬೆಳೆಸಿ, ಅವರ ಬೇಕು-ಬೇಡಗಳನ್ನೂ ಗಣನೆಗೆ ತೆಗೆದುಕೊಂಡು ಹೀಗೇ ಹಲವು ಹತ್ತು ಕಾರ್ಯಗಳಲ್ಲಿ ಜೋಡಿ ಎತ್ತಿನಂತೇ ನಮಗೆ ಹೆಗಲುಗೊಡುವ ಹೆಂಡತಿಯ ಪಾತ್ರ ನಿಜಕ್ಕೂ ಬಹಳ ದೊಡ್ಡದು.


ಇಚ್ಛೆಯನರಿತು ನಡೆವ ಸತಿಯಾಗೆ
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ | ಸರ್ವಜ್ಞ

----ಇದು ಸರ್ವಜ್ಞ ಹೇಳಿದ್ದು. ಅದರಂತೇ ಈ ವಿಷಯದಲ್ಲಿ ನನಗೆ ನನ್ನ ಇಚ್ಛೆಯನ್ನರಿತು ನಡೆಯುವ ಸತಿ ಸಿಕ್ಕಿದ್ದಾಳೆ ಎಂದು ಹೆಮ್ಮೆಯಿಂದ ನಿಮ್ಮೆದುರಲ್ಲಿ ಬೀಗಲು ನಾಚಿಕೆಯೇನಿಲ್ಲ! ದಿನಾಲೂ ಓದುಗ ಮಿತ್ರರಿಗೆ ನಾನು ಉಣಬಡಿಸುವ ಬರಹಗಳ ಹಿಂದೆ ಅವಳ ತ್ಯಾಗ ಬಹಳವಿದೆ. ಅವಳಜೊತೆಗೆ ಕಳೆಯಬಹುದಾದ ಸಮಯವನ್ನು ಮೊಟಕುಗೊಳಿಸಿ ಸರಿರಾತ್ರಿ ೧ ಘಂಟೆಯವರೆಗೆ ಬರೆಯುತ್ತ ಕೂರುವ ನನಗೆ ಏನೊಂದೂ ಕಮಕ್ ಕಿಮಕ್ ಎನ್ನದೇ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾಳೆ ನನ್ನ ರಶ್ಮಿ. ಅವಳು ನನ್ನ ಬಾಳಿಗೆ, ನನ್ನ ಪಾಲಿಗೆ ’ರಶ್ಮಿ’ಯೇ ಸರಿ.

ಕರ್ನಾಟಕ ಸಂಗೀತವನ್ನು ಅಭ್ಯಸಿಸಿ ತನ್ನ ಇಂಪಾದ ಕಂಠದಿಂದ ಹಿರಿಯ ಕವಿಗಳಾದ ಬೇಂದ್ರೆ, ಪು.ತಿ.ನ.,ಲಕ್ಷ್ಮೀನಾರಾಯಣ ಭಟ್ಟ, ಎಚ್.ಎಸ್.ವಿ., ಕುವೆಂಪು, ನಿಸಾರ್ ಅಹಮ್ಮದ್ ಮೊದಲಾದವರ ಕವನಗಳ ಜೊತೆ ನನ್ನ ಹಲವು ಹಾಡುಗಳನ್ನೂ ನನಗಾಗಿ ನಾನು ಕೇಳಿದಾಗ ಹಾಡಿ ರಂಜಿಸುವ ಆಕೆಗೆ ಈ ದಿನ ಹುಟ್ಟಿದ ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಎಂಟುವರ್ಷಗಳಿಂದ ನನ್ನ ಬಿಡಿಸಲಾರದ ಭಾಗವಾದ ಆಕೆಯ ಹಾಗೂ ನನ್ನ ಮದುವೆಯ ಕಾಲದ ಕೆಲವು ನೆನಪಿನ ತುಣುಕುಗಳನ್ನು ಮತ್ತು ಮಗ ’ಶುಭಾಂಗ’ನ ಬಗೆಗೂ ಸೇರಿದಂತೆ ಇದೊಂದು ದಾಂಪತ್ಯ ಗೀತೆಯನ್ನು ಬರೆದಿದ್ದೇನೆ. ಇದನ್ನು ನನ್ನ ವಿಶಾಲ ಕುಟುಂಬದವರಾದ ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತದೆ. ಬನ್ನಿ ಅನುಭವಿಸಿ, ನಮ್ಮ ಜೀವನದ ಸವಿನೆನಪುಗಳನ್ನು--

ಮನದ ರಶ್ಮಿ

ನೆನಪಿನಂಗಳದಲ್ಲಿ ಮನವನ್ನು ಆಡಬಿಡೆ
ಬನಸಿರಿಯ ಸೊಬಗಂತೆ ಮೆರೆವ ಪುಟಗಳನು
ಅನಿತರೋಳ್ ಎನ್ನೊಡತಿ ಸೂರ್ಯ’ರಶ್ಮಿ’ಯ ತೆರದಿ
ಘನತರಂಗಗಳೆಬ್ಬಿ ನಗುವ ಚಿಮ್ಮಿದಳು

ಎಂಟುವರ್ಷಕು ಮುನ್ನ ನಾನ್ಯಾರೋ ಅವಳ್ಯಾರೋ
ಗಂಟುಬೀಳುವ ಕನಸು ನಮ್ಮಲಿರಲಿಲ್ಲ!
ನಂಟಾಯ್ತು ಆ ಜೀವ ನನ್ನೊಡನೆ ತಾ ನಡೆದು
ಕುಂಟು ನೆಪವದು ಸಾಕು ಒಮ್ಮೆ ಮುದ್ದಿಸಲು

" ಹೋಗಿ, ನಾ ಬರಲಾರೆ ಇದೇ ಮೊದಲು ಇದೇ ಕೊನೆಯು "
ಆಗ ನಾ ಗದರಿಸಿದೆ ನನ್ನ ಪಾಲಕರ
" ಬೇಗ ನೀ ಬಂದೊಮ್ಮೆ ನೋಡಿ ಹೋಗಿಬಿಡೆನುತ "
ರಾಗದಲಿ ಮೆದುಗೊಳಿಸಿ ನಡೆತಂದರೆನ್ನ !

ಸಾಗರದ ಈ ಹುಡುಗಿ ವೇಗದಲಿ ಮನಕದ್ದು
ಜಾಗರಣೆ ಕೂರಿಸಿದಳೆನ್ನ ಹಲವುದಿನ !
’ಜಾಗ’ ತುಂಬುವ ಮುಗುದೆ ಇವಳೇ ಸರಿಯೆಂದೆನಿಸಿ
ಬೀಗ ರವಾನಿಸಿದೆ ಹೃದಯದಿಂ ಸುದಿನ

ಬೀಗರೊಪ್ಪುತ ಹೊತ್ತಗೆಯ ತೆಗೆದು ದಿನಗುಣಿಸಿ
’ಮೇ’ಗಾಯ್ತು ತಿಥಿಮಿತಿಯ ತಾರಾನುಕೂಲ
ಸಾಗಾಟ ನಡೆದಿತ್ತು ನಡುವಲ್ಲಿ ನಮ್ಮೊಳಗೆ:
’ಮೇಘ ಸಂದೇಶ’ವಿಹ ಪ್ರೇಮ ಪತ್ರಗಳ !

ಪೆಪೆಪೆಪೆ ಮಂಗಳದ ವಾದ್ಯಗಳು ಮೊಳಗಿರಲು
ತಪಪಪಪ ಸಾವಿರದ ಚಪ್ಪಾಳೆ ತಟ್ಟಿ
ಹಿಪಿಪಿಪಿಪಿ ನಗೆಗಡಲ ಗದ್ದಲದ ಮಂಟಪದಿ
ಟಪಪಪಪ ಅಕ್ಷತೆಗಳುದುರಿ ಹರಸಿದವು

ಗಣಪ ಈಶ್ವರ ’ವಿಷ್ಣು’ ಎಲ್ಲ ದೈವಗಳನ್ನು
ಗಣನೆಯಲಿ ತಂದು ಶೋಧಿಸುತಿಟ್ಟ ಹೆಸರು
ಕೆಣಕುವನು ಆಗಾಗ ಕೈಕಾಲು ಮೈ ಹತ್ತಿ
ಅಣಕಿಸುತ ನಾಲ್ಕುವರೆ ವಯದ ’ಶುಭಾಂಗ’

23 comments:

  1. ಭಟ್ ಸರ್;ನಿಮ್ಮ ಮನೆಯವರಿಗೆ ನಮ್ಮೆಲ್ಲರ ಹಾರ್ದಿಕ ಶುಭಾಶಯಗಳು.ನಿಮ್ಮ ದಾಂಪತ್ಯ ಸದಾ ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ.ನಿಮ್ಮ ಮನೆಯವರೆಲ್ಲರ ಆದರಾಥಿತ್ಯಕ್ಕೆ ಧನ್ಯವಾದಗಳು ಸರ್.ನಮಸ್ಕಾರ.

    ReplyDelete
  2. nice:))..Happy Birthday to your Rashmi..

    Sir..avara B'day dina 1 gante varege computer kutta byaadri..:))

    ReplyDelete
  3. chenagide sir... nimma ardhangi rashmiyavarige huttu habbada shubhashayagalu.. :)

    ReplyDelete
  4. ನಿಮ್ಮ ಬಾಳ ಗೆಳತಿ "ಮನದ ರಶ್ಮಿ ಮೇಡ೦" ಅವರಿಗೆ ಜನ್ಮ ದಿನದ ಶುಭಾಶಯಗಳು ಭಟ್ ಸರ್. ಮನದನ್ನೆಗೆ ಮುದದಿ೦ದ ಬರೆದ ಕವನವು ಬಲು ಚೆ೦ದ.

    ಶುಭಾಶಯಗಳು
    ಅನ೦ತ್

    ReplyDelete
  5. ನಿಮ್ಮ ಸಹಧರ್ಮಿಣಿ ಶ್ರೀಮತಿ ರಶ್ಮಿ ಅವರಿಗೆ ಜನ್ಮದಿನದ ಶುಭಾಶಯಗಳು...ನಿಮ್ಮ ಮನೆ ಎಂದೆಂದಿಗೂ ಸಂತಸದ ನೆಲೆಯಾಗಿರಲಿ.

    ReplyDelete
  6. ನಿಮ್ಮ "ಶ್ರೀಮತಿಯವರಿಗೆ" ನಮ್ಮೆಲ್ಲರ ಶುಭ ಹಾರೈಕೆಗಳು..

    ಸೊಗಸಾದ... ಪ್ರೇಮ..ಕವನ !

    ReplyDelete
  7. ಎಂಟು ವರ್ಷ ತುಂಬಿದ ನಿಮ್ಮ ದಾಂಪತ್ಯಜೀವನಕ್ಕೆ ಶುಭಾಶಯಗಳು. ದಂಪತಿಗಳು ನೂರ್ಕಾಲ ಸುಖವಾಗಿ ಬಾಳಿರಿ.

    ReplyDelete
  8. huttuhabbada subhaashaya rashmi madam ge.... nimma daampatya jeevana shataka baarisali...

    ReplyDelete
  9. ನಮ್ಮ ವಿಶಾಲ ಕುಟು೦ಬದ ಸದಸ್ಯರಲ್ಲಿ ಒಬ್ಬರಾಗಿರುವ ನಿಮ್ಮ ಸ೦ಭ್ರಮ ನೂರ್ಮಡಿಯಾಗಲಿ. ನಿಮ್ಮ ಅರ್ಧಾ೦ಗಿ ರಶ್ಮಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಮಗ ಶುಭಾ೦ಗನಿಗೆ ಶುಭ ಹಾರೈಕೆ ಗಳು.

    ReplyDelete
  10. ಆ ಭಗವಂತನು ನಿಮಗೆಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.

    ReplyDelete
  11. ನಮಸ್ಕಾರ......... ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ......
    ನಿಮ್ಮ ಬ್ಲಾಗ್.ನಲ್ಲಿ ತಲೆಬರಹದ ಕೆಳಗೆ ಇರುವ "ಚಲಿಸುತ್ತಿರುವ ಅಕ್ಷರ"ಗಳನ್ನು ಹೇಗೆ ರೂಪಿಸಿದಿರಿ ಎಂಬ ಬಗ್ಗೆ ಮಾಹಿತಿ ಕೊಡುವಿರಾ.......?

    ದಯವಿಟ್ಟು ನನ್ನ ಈಮೈಲ್ ವಿಳಾಸ keshava.gn@gmail.com ಗೆ ಉತ್ತರ ಕಳಿಸಿರಿ.....

    ReplyDelete
  12. wish you happy birthday ರಶ್ಮಿ ಅತ್ತಿಗೆ , ನಿಮ್ಮ ಕುಟುಂಬಕ್ಕೆ ಎಲ್ಲ ಸುಖ ಸಂತೋಷಗಳನ್ನು ಕೊಡಲೆಂದು ದೇವರಲ್ಲಿ ಒಂದು ಕೇಸನ್ನು ಧಾಖಲಿಸುತ್ತೇನೆ. ( ಮತ್ತು v R ಭಟ್ಟರಂತ ಪತಿ ಸಿಕ್ಕಿದ್ದಕ್ಕೆ ನಿಮಗೆ ಅಬಿನಂದನೆಗಳು )

    ReplyDelete
  13. ಕುಟುಂಬದ ಸದಸ್ಯರಲ್ಲಿ ಬಹಳ ಜನ ಬಂದು ಹರಸಿದ್ದು ತುಂಬಾ ಸಂತೋಷ ತಂದಿದೆ. ರಶ್ಮಿ ತಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳುವಂತೆ ತಿಳಿಸಿದ್ದಾಳೆ, ಅದನ್ನು ಮೊದಲಾಗಿ ಒಪ್ಪಿಸಿಕೊಳ್ಳಿ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದ ನಡುವೆ ನಾವೇ ಸಣ್ಣಗಾಗಿ ಬಿಟ್ಟಿದ್ದೇವೆ--ಯಾಕೆಂದರೆ ನಿಮ್ಮೆಲ್ಲರನ್ನೂ ನಮ್ಮನೆಗೆ ಕರೆಯಲಾಗಲಿಲ್ಲ ಎಂಬ ಅನಿಸಿಕೆ ಕಾಡುತ್ತಿದೆ.

    * ಡಾ| ಶ್ರೀ ಕೃಷ್ಣಮೂರ್ತಿ ತಮ್ಮ ಆಗಮನದಿಂದ ನನ್ನ ಹೆಂಡತಿಗೆ ಕೂಡ ತಮ್ಮ ಪರಿಚಯ ಮುಖತಃ ಮಾಡಿಸಲು ಅನುಕೂಲವಾಯಿತು, ನಮ್ಗೆಲ್ಲರಿಗ್ಗಾಗಿ ಹಾಡಿದ 'ಆಡ
    ಪೋಗೋಣ ಬಾರೋ ರಂಗ' ಹಾಡು ಪ್ರತೀಕ್ಷಣ ಗುನುಗುನಿಸುತ್ತಿರುತ್ತದೆ, ಹಿರಿಯರಾದ ನಿಮ್ಮ ಆಶೀರ್ವಾದವಿರಲಿ, ನಮಸ್ಕಾರಗಳು.

    * ವನಿತಾ ಮೇಡಂ, ತಮಗೆ ತುಂಬಾ ಆಭಾರಿಯಾಗಿದ್ದೇವೆ, ಇಲ್ಲ ನಿನ್ನೆ ರಾತ್ರಿ ಮೊದಲೇ ಬರೆದು ಪ್ರಕಟಿಸಿದ್ದೆನಲ್ಲ, ಹೀಗಾಗಿ ನೀವು ಹೇಳಿದಂತೆ ರಜಾ ಹಾಕಿದ್ದೆ!

    * ಪ್ರಗತಿ ಮೇಡಂ, ತಮ್ಮ ಹಾರೈಕೆಗೆ ನಮನಗಳು

    * ಶ್ರೀ ತರುಣ್, ನಿಮ್ಮ ಅನಿಸಿಕೆಗೆ ಅನಂತ ಧನ್ಯವಾದಗಳು.

    * ಶ್ರೀ ಅನಂತ್ ರಾಜ್, ಮನಸ್ಸನ್ನೆಲ್ಲಾ ಅವಳೇ ನಿನ್ನೆ ತುಂಬಿಕೊಂಡಿದ್ದರೆ ಸಹಜವಾಗಿ ಕವನ ಹುಟ್ಟಬೇಕಲ್ಲವೇ ? ತಮ್ಮ ಅಭಿಪ್ರಾಯಕ್ಕೆ ಹಾಗೂ ಹಾರೈಕೆಗೆ, ಹಿರಿಯರಾದ ನೀವು ಹೀಗೇ ಹರಸುತ್ತಲೇ ಇರಿ, ಹಲವು ನೆನಕೆಗಳು.

    * ಶ್ರೀ ನಾರಾಯಣ ಭಟ್, ನಿಮ್ಮನೆಯ ಆತಿಥ್ಯ ಸ್ವೀಕರಿಸಿ ನಿಮ್ಮ ಪ್ರೀತಿ ಅನುಭವಿಸಿದ್ದೇನೆ, ನಿಮಗೂ ನಿಮ್ಮ ಮನೆಯವರಿಗೂ ನಮ್ಮ ನಮಸ್ಕಾರಗಳು, ಹಿರಿಯರಾದ ನಿಮ್ಮೆಲ್ಲರ ಆಶೀರ್ವಾದವಿರಲಿ, ವಂದನೆಗಳು.

    * ಶ್ರೀ ಪ್ರಕಾಶಣ್ಣ, ನಿಮ್ಮನ್ನು ಎಲ್ಲೋ ದೂರದಿಂದ ನೋಡಿದ್ದೆ, 8 ತಿಂಗಳ ಹಿಂದೆ ನಿಮ್ಮ ಪುಸ್ತಕ ಬಿಡುಗಡೆಯಾದ ಸುದ್ದಿ ಕೇಳಿ ಸಂತಸಗೊಂಡೆ, ಆಗಿನ್ನೂ ಬ್ಲಾಗಿನಲ್ಲಿ ನಾನು ಬರೆಯುತ್ತಿರಲಿಲ್ಲ, ನಂತರ ಶುರುಮಾಡಿದವನು ಹೇಗೆ ನಡೆಸುತ್ತಿರುವೆನೆಂದು ನಿಮಗೇ ತಿಳಿದಿದೆ. ಅನಿರೀಕ್ಷಿತವಾಗಿ ನಿಮ್ಮ ಸ್ನೇಹದ ಅನುಭೂತಿ ನನಗಾಯ್ತು. ಆತ್ಮೀಯವಾಗಿ ಬೆಳೆದ ಪ್ರೀತಿ ಹೆಮ್ಮರವಾಯ್ತು, ಬ್ಲಾಗಿಗ ಮಿತ್ರರೆಲ್ಲರನ್ನೂ ಕರೆಕರೆದು ಪರಿಚಯಿಸಿದಿರಿ, ನಿಮ್ಮ ಹಾರೈಕೆಗೆ ಹಲವು ನಮನಗಳು.

    * ಶ್ರೀ ಸುಧೀಂಧ್ರರೇ, ಹಿರಿಯರಾದ ತಾವು ಬಹಳ ದಿನಗಳಿಂದ ಬ್ಲಾಗಿಸುತ್ತೀರೆಂದು ಕೇಳಿದ್ದೆ, ಬ್ಲಾಗಿಗೆ ಬಂದು ಸದಾ ಹರಸುವ ನಿಮ್ಮ ಸರಳ ಸಜ್ಜನಿಕೆಗೆ ಮಾರುಹೋಗಿದ್ದೇನೆ, ನಿಮ್ಮ ಆಶೀರ್ವಾದ ಸದಾ ಇರ್ಲಿ, ನಿಮಗೆ ಅನಂತ ನಮಸ್ಕಾರಗಳು.

    * ಶ್ರೀ ದಿನಕರ್, ನಿಮ್ಮ ಜೋಡಿಯನ್ನು ನೋಡಿ ಬಹಳ ಖುಷಿ ಪಟ್ಟೆ, ನಿಮಗೂ ದೇವರು ಹರಸಲಿ, ನಿಮ್ಮೆಲ್ಲರ ಪ್ರೀತಿ ಸದಾ ಹಸಿರಾಗಿರಲಿ, ನಿಮಗೆ ಅನಂತ ಕೃತಜ್ಞತೆಗಳು.

    * ಶ್ರೀ ಪರಾಂಜಪೆ, ಮೊದಲಾಗಿ ಆಗಸ್ಟ ೧೫ ರಂದು ನಿಮ್ಮನ್ನು ಕಂಡಾಗಿನಿಂದ ಒಂಥರಾ ಅಣ್ಣನ ಬಾಂಧವ್ಯ ಮನದಲ್ಲಿ ಇಣುಕುತ್ತಿದೆ, ಬಹುಶಃ ನಿಮ್ಮ ಸರಳತನ ಮತ್ತು ಮುಗ್ಧ ನಗು ಅದಕ್ಕೆ ಕಾರಣವಿರಬಹುದು, ಮಗನ ಪರವಾಗಿ ಹಾಗೂ ಮಡದಿಯ ಪರವಾಗಿ ತಮಗೆ ನಮನ ಸಲ್ಲಿಸುತ್ತಿದ್ದೇನೆ, ನಿಮ್ಮ ಈ ಆತ್ಮೀಯತೆ 'ನಿಮ್ಮೊಡನೆ ವಿ.ಆರ್.ಭಟ್ ' ಜೊತೆ ಸತತವೂ ಇರ್ಲಿ ಮತ್ತು ನಿಮ್ಮ ಹೃದಯ ವೈಶಾಲ್ಯತೆ ತೋರಿದ ' ನಮ್ಮ ವಿಶಾಲ ಕುಟುಂಬದಲ್ಲಿ ನೀವೂ ಒಬ್ಬ ಸದಸ್ಯ'ರೆಂದ ನಿಮ್ಮ ಭಾವನೆಗೆ ಅತ್ಯಂತ ಕೃತಜ್ಞ, ಧನ್ಯವಾದಗಳು.

    * ಶ್ರೀ ಗುಬ್ಬಚ್ಚಿ ಸತೀಶ್, ನಿಮಗೆ ಹೃತ್ಪೂರ್ವಕ ಸ್ವಾಗತ ಮತ್ತು ನಿಮ್ಮ ಹಾರೈಕೆಗೆ ಅನಂತ ಅಭಿವಂದನೆಗಳು.

    * ಶ್ರೀ ಕೇಶವ ನಿಮಗೂ ಸಹ ಹೃತ್ಪೂರ್ವಕ ಸ್ವಾಗತ ಮತ್ತು ನಿಮ್ಮ ಅನಿಸಿಕೆಗೆ ಬಹಳ ಅಭಾರಿಯಾಗಿದ್ದೇನೆ, ನಿಮಗೆ ಮೇಲ್ ಕಳಿಸುತ್ತೇನೆ, ನಮಸ್ಕಾರಗಳು

    * ಶ್ರೀ ವೆಂಕಟೇಶ್ ಹೆಗಡೆ, ಸ್ವಲ್ಪ ನನ್ನನ್ನು ಹೊಗಳಿದ್ದು ಜಾಸ್ತಿ ಯಾಯಿತೇನೋ ಅನಿಸಿತು, ಇರ್ಲಿ, ನಿಮ್ಮ ಮನಕ್ಕೆ ಹಾಗನಿಸಿದರೆ ನೀವು ಹೇಳಿದ್ದೀರಿ, ನಿಮ್ಮ ಅಭಿವ್ಯಕ್ತಿಯನ್ನು ನೇರವಾಗಿ ಬ್ಲಾಗಿನ ಬಲಭಾಗದಲ್ಲಿ ಮೇಲೆಕುಳಿತ ಗಣಪನಿಗೆ ಅರ್ಪಿಸಿದ್ದೇನೆ, ರಶ್ಮಿ ಅತ್ತಿಗೆ ನಿಮಗೆ ಥ್ಯಾಂಕ್ಸ್ ಹೇಳಿದ್ದಾಳೆ, ನಮಸ್ಕಾರ.

    ಓದಿದ ಎಲ್ಲಾ ಮಿತ್ರರಿಗೂ ನಮಸ್ಕಾರಗಳು, ನಿಮ್ಮೆಲ್ಲರ ಪ್ರೀತಿ-ವಿಶ್ವಾಸ ಸದಾ ಇರ್ಲಿ ಎಂದು ಪ್ರಾರ್ಥಿಸುತ್ತೇವೆ.

    ReplyDelete
  14. ಹೊಸದಾಗಿ ಬ್ಲಾಗಿಗೆ ಬಂದು ಕೊಂಡಿ ಸಿಕ್ಕಿಕೊಂಡು ಹಿಂಬಾಲಿಸಿದ ಸ್ನೇಹಿತರೆಲ್ಲರಿಗೂ ಸ್ವಾಗತ ಮತ್ತು ವಂದನೆಗಳು

    ReplyDelete
  15. channagidae sir ... ee salugalu tumba ishtavaytu
    ಎಂಟುವರ್ಷಕು ಮುನ್ನ ನಾನ್ಯಾರೋ ಅವಳ್ಯಾರೋ
    ಗಂಟುಬೀಳುವ ಕನಸು ನಮ್ಮಲಿರಲಿಲ್ಲ!
    ನಂಟಾಯ್ತು ಆ ಜೀವ ನನ್ನೊಡನೆ ತಾ ನಡೆದು
    ಕುಂಟು ನೆಪವದು ಸಾಕು ಒಮ್ಮೆ ಮುದ್ದಿಸಲು

    ReplyDelete
  16. ಧನ್ಯವಾದಗಳು ಶ್ರೀಕಾಂತ್ ತಮಗೆ

    ReplyDelete
  17. Bhat sir...Nimma sahaDharmini Rashmi avrige Shubhashayagalu...nimma daamptya jeevana sadaa hasanaagirali....

    ReplyDelete
  18. ತಮ್ಮ ಶ್ರೀಮತಿಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮತ್ತು ಸಂತಸದ ದಿನ ನೂರಾರಾಗಿ ಮರಳಲಿ.ತಮ್ಮ ದಾಂಪತ್ಯ ಕವನ ಓದುತ್ತಿದ್ದ ಹಾಗೇ ನಮ್ಮ ದಾಂಪತ್ಯದ ಫ್ಲಾಶ್-ಬ್ಯಾಕ್ ಕಣ್ಣ ಮುಂದೆ ಹರಿಯಿತು- ಮದುವೆ ಒಲ್ಲೇನೋಲ್ಲೆನೆಂದು ಒತ್ತಾಯದಲಿ ನೋಡಿ, ಮಾರ್ಹೋಗಿ ಹೂಗುಟ್ಟಿ, ವಾರಕ್ಕೆ ನಾಲ್ಕರಂತೆ ಹತ್ತು ಪುಟಗಳ ಪತ್ರಪ್ರೇಮವ ನಡೆಸಿದ್ದು ಎಲ್ಲಾ ತೇಲಿದವು.
    ತಮ್ಮ ದಾಂಪತ್ಯ ಜೀವನ ಸದಾ ಹಸಿರಾಗಿರಲಿ ಶುಭಾ೦ಗನಿಗೆ ಶುಭ ಹಾರೈಕೆಗಳು.
    ಚೆಂದದ ಕವನ.

    ReplyDelete
  19. ಶ್ರೀ ಸೀತಾರಾಮ್ ಸರ್, ನಿಮ್ಮಜೊತೆ ಇನ್ನೂ ಬಹಳ ಮಾತನಾಡಬೇಕಿತ್ತು ಎನ್ನುವಾಗಲೇ ನಿಮ್ಮನ್ನೆಲ್ಲ ಕಳುಹಿಸಬೇಕೆಂದು ಕೇಳಿ ಹೊರಟಿರಿ, ನಿಮ್ಮ ಸಹಜತೆ ಮತ್ತು ಮುಕ್ತ ಮನಸ್ಸು ನಮಗೆಲ್ಲಾ ಬಹಳ ಹಿಡಿಸಿದೆ, ನಿಮ್ಮ ಸ್ನೇಹಪರತೆಗೆ ಅನಂತ ನಮಸ್ಕಾರಗಳು ಮತ್ತು ಇಂದಿನ ನಿಮ್ಮ ಪ್ರತಿಕ್ರಿಯೆಗೆ ಶರಣು, ನಿಮ್ಮ ಆಶೀರ್ವಾದ ಕೂಡ ನಮಗೆಲ್ಲ ಸತತ ಲಭಿಸಲಿ.

    ReplyDelete
  20. ನಿಮ್ಮಾಕೆಗೆ ನನ್ನದೊಂದು ಪುಟ್ಟ ಶುಭಾಷಯ..

    ReplyDelete
  21. ಧನ್ಯವಾದಗಳು, ನಿಮ್ಮ ಹೆಸರು ದಯವಿಟ್ಟು ತಿಳಿಸಿ, ಕತ್ತಲೆಮನೆ ಎಂದರೆ ಯಾಕೋ ಸರಿಬಾರದು

    ReplyDelete