ಕಾವ್ಯನಯನ
[ಕಾವ್ಯದಲ್ಲಿ ಜಲನಯನ-ಗುಬ್ಬಿ ಎಂಜಲು ಕೃತಿಗಳ ಬಿಡುಗಡೆ ಸಮಾರಂಭದ ನೆನೆಪು ; ಇಲ್ಲಿ ಶ್ರೀ ಡುಂಢಿರಾಜ್ ಮತ್ತು ಹಾಲ್ದೊಡ್ಡೇರಿ ಸುಧೀಂಧ್ರರು ಪರಸ್ಪರ ಎರಡೂ ಕೃತಿಗಳ ಬಗ್ಗೆ ಹೇಳಿದ್ದನ್ನ ಬಿಂಬಿಸಿದ್ದೇನೆ !]
[ಕಾವ್ಯದಲ್ಲಿ ಜಲನಯನ-ಗುಬ್ಬಿ ಎಂಜಲು ಕೃತಿಗಳ ಬಿಡುಗಡೆ ಸಮಾರಂಭದ ನೆನೆಪು ; ಇಲ್ಲಿ ಶ್ರೀ ಡುಂಢಿರಾಜ್ ಮತ್ತು ಹಾಲ್ದೊಡ್ಡೇರಿ ಸುಧೀಂಧ್ರರು ಪರಸ್ಪರ ಎರಡೂ ಕೃತಿಗಳ ಬಗ್ಗೆ ಹೇಳಿದ್ದನ್ನ ಬಿಂಬಿಸಿದ್ದೇನೆ !]
ದೀಪಿಕಾ ಹಾಡುತ ದೇವರ ನೆನೆದಿರೆ
ವ್ಯಾಪಿಸಿ ಕೊಂಡರು ಆಸನದಿ
ರೂಪವ ತೋರುವ ಮೊದಲಿಗೆ ಗಣ್ಯರು
ದೀಪವ ಬೆಳಗುತ ಸ್ಟೇಜಿನಲಿ
ಸುಗುಣ ಮಹೇಶರು ಮುಗುದಮನದಿಂದ
ನಗುನಗುತಲಿ ಮುನ್ನಡೆಸಿದರು
ಬಗೆಬಗೆ ಜನಗಳ ಪರಿಚಯ ಹೇಳುತ
ಲಗುಬಗೆಯಲಿ ಓಡಾಡಿದರು !
’ಗುಬ್ಬಿ ಎಂಜಲು’ ಬಿಡಿಸುತ ರಂಜಿಸಿ
ಅಬ್ಬರದುಕ್ಕಿಸಿ ಜೋಕುಗಳ
ತಬ್ಬಿಬ್ಬಾಗುವ ಹನಿಗವನಂಗಳ
ಹಬ್ಬಿಸಿ ನಲಿದರು ಡುಂಢಿಗಳು
ಹಾಲ್ದೊಡ್ಡೇರಿಯ ಸುಧೀಂಧ್ರ ನುಡಿದರು
ಜಾಲತಾಣಗಳು ಬಲು ವಿಹಿತ
ಸಾಲಂಕೃತ ವೇದಿಕೆಯಲಿ ಅರಳಿಸಿ
ಓಲೆಯತಿರುವುತ ’ಜಲನಯನ’
ಭೀಷಣವಲ್ಲದ ಮುಖ್ಯ ಭಾಷಣಗಳ್
ಆಶಯಗಳ ತಾವ್ ತೆರೆದಿಡುತ
ರಾಶಿ ಅನುಭವದ ಪಾಕವ ಇಳಿಸುತ
ಶೈಶವ ನೆನೆದರು ಶಾಸ್ತ್ರಿಗಳು
ಪಾಕುಮಾಮ ಸಹ ಮಿತ್ರರ ಸೇರಿಸಿ
ಚಾಕಚಕ್ಯತೆಯ ಮೆರೆದಿಹರು
ಬೇಕಾಗಿಲ್ಲದ ವಸ್ತುವ ನೀಡುತ
ಪೀಕಲಾಟದಲಿ ನಗಿಸಿಹರು !
ಜೋಗದ ಸಿರಿಯನು ತಂದು ಬಡಿಸಿದರು
ರಾಗದಿ ಹಾಡುತ ’ಕೊಳಲ’ಜನ !
ವೇಗದಿ ಈ ಕಥೆ ಬ್ಲಾಗಲಿ ಹಾಕುತ
ಭೋಗಿಸಲಿಟ್ಟರು ಪರಾಂಜಪೆ !
ಇಂತೀಪರಿಯಲಿ ನಡೆಯಿತು ಸಂಭ್ರಮ
’ತುಂತುರು’ ಹನಿಗಳ ಸೇಚಿಸುತ
ಕುಂತರು ನಿಂತರು ಮರೆಯಲಸಾಧ್ಯವು
ಎಂತಹ ಸ್ವರ್ಗವು ಬ್ಲಾಗಿನದು !
ವಾವ್,,ತುಂಬಾ ಚೆನ್ನಾಗಿ ಕಾವ್ಯದ ಮೂಲಕ ಇಂದಿನ ಸಮಾರಂಭವನ್ನು ತಿಳಿಸಿದ್ದೀರ.... ತುಂಬಾ ಧನ್ಯವಾದಗಳು...
ReplyDeleteMarvellous sir
ReplyDeletewe missed it
This comment has been removed by the author.
ReplyDeleteFunction super agi mudibantu sir.... adare nimma kavyadalli ultra deluxe mudi bandide sir :)
ReplyDeleteen saar!!!! innoo nam gaadi start aage illa aagle bardubitra!!!! santhosha tumabaa chennagi nenapina saramaale moodibandide.nimma sneha lokadalli kaleda aa sundara bhaanuvaara chennagittu.
ReplyDeleteexcellent and superfast also congrats sir
ReplyDeleteಭಟ್ ಸರ್;ನಿಮ್ಮ ಪ್ರೀತಿಗೆ,ನಿಮ್ಮ ನೀತಿಗೆ,ನಿಮ್ಮ ಸ್ನೇಹಕ್ಕೆ,ನೀವೇ ಸಾಟಿ.ಜೋಗಕ್ಕೆ ಬಂದು ಸೇರಿದರೂ ಮನಸ್ಸು ಇನ್ನೂ ನೆನ್ನೆಯ ಸಮಾರಂಭದ ಗುಂಗಿನಲ್ಲೇ ಇದೆ.ಬ್ಲಾಗಿಗರ ಸ್ನೇಹಕ್ಕೆ ಜೈ ಹೋ!
ReplyDeleteಕಾರ್ಯಕ್ರಮ ತುಂಬಾ ಚೆನಾಗಿತ್ತು.
ReplyDeleteನೀವು ಸುಂದರವಾಗಿ ವರ್ಣಿಸಿದ್ದೀರ ಸರ್.
ಆದರು ನಿಮಗೆ ಸಿಕ್ಕಂತಹ ಗಿಫ್ಟ್ ಯಾರಿಗೂ ಸಿಕ್ಕಿಲ್ಲ ಹ್ಹ ಹ್ಹ ಹ್ಹ . . . .
ಸರ್, ನಿಮ್ಮನ್ನು ಮುಖತ: ಭೇಟಿಮಾಡಿದ್ದು ಖುಷಿಕೊಟ್ಟಿತು. ಸರಳಸುಂದರವಾದ ಕವನದ ಮೂಲಕ ನಿನ್ನೆಯ ಪುಸ್ತಕಗಳ, ಬ್ಲಾಗಿಗರ ಚಿತ್ರಣ ಕೊಟ್ಟಿದ್ದೀರಿ. ಧನ್ಯವಾದಗಳು.
ReplyDeleteನನಗೆ ಅನಿಸಿತ್ತು ಭಟ್ಟರೇ ನಾಳೆ ಬ್ಲಾಗ್ ನಲ್ಲಿ ಏನಾದರೂ ವಿಶೇಷ ಇರುತ್ತದೆ ಎಂದು , ತುಂಬಾ ಚೆನ್ನಾಗಿದೆ , ನಿನ್ನೆಯೂ ಅಷ್ಟೇ ನಿಮ್ಮೆಲ್ಲರ ಭೇಟಿಯಾಗಿ ತುಂಬಾ ಸಂತೋಷವಾಯಿತು
ReplyDeleteಭಟ್ಟರ ಕವನವ ಓದಿದ ಮರುಕ್ಷಣ
ReplyDeleteಓಡಿತು ಮನವದು "ನಯನ" ದೆಡೆ
ಬರುತಲಿ ಇರಲಿ ನಿರತವು ಖುಷಿಯು
ಅದುವೇ ನನ್ನಯ ಆಶಯವು
ಆಹಾ,ವರದಿಯನ್ನೂ ಕಾವ್ಯದಲ್ಲಿಯೇ ಹೇಳುತ್ತೀರಲ್ಲ!
ReplyDeleteಹೌದು ಸರ್, ಅದೊಂದು ಅವಿಸ್ಮರಣೀಯ ಸಮಯ..... :-)
ReplyDeleteಕವನದ ರೂಪದಲ್ಲೇ ಸರಿ... ಕಾರ್ಯಕ್ರಮದ ಅಂದವನ್ನು ಕಾಣಿಸಿದಿರಿ. ಧನ್ಯವಾದಗಳು.
ReplyDeleteಕಾರ್ಯಕ್ರಮ ಬಹಳ ಅದ್ಬುತವಾಗಿ ಸಂಪನ್ನಗೊಂಡಿತು, ಬಹಳ ಖುಷಿ ತಂದಿತು. ಸಮಾನ ಶೀಲೇಶು ವ್ಯಸನೇಶು ಸಖ್ಯಂ ಎಂಬುದು ಸಂಸ್ಕೃತ ಗಾದೆ, ಅದರಂತೆ ನಾವೆಲ್ಲಾ ಸಮಾನ ಮನಸ್ಕರು ಸೇರಿದೆವು, ಪುಸ್ತಕ ಬಿಡುಗಡೆಯ ಅಂಚಂಚಿನಲ್ಲೇ ನಮ್ಮ ಬ್ಲಾಗ್ ಮಿತ್ರರೆಲ್ಲರ ಸ್ನೇಹವನ್ನೂ ಹೊಂಚಿದ್ದೆವು! ಅದು ಸಾಧ್ಯವಾಯಿತು. ನಿಮ್ಮೆಲ್ಲರ ಜೊತೆಗೆ ಕಳೆದ ಕ್ಷಣಗಳು ಮನದ ಪಟಲದಲ್ಲಿ ಹಸಿಗೋಡೆಗೆ ಒತ್ತಿದ ಹರಳುಗಳಾದವು, ಮತ್ತೂ ಇರಲಿ ಇನ್ನೂ ಇರಲಿ ಎಂದುಕೊಳ್ಳುತ್ತಿರುವಂತೆಯೇ ಹೊರಟು ನಮ್ನಮ್ಮ ಜಾಗ ಸೇರುವ ಅನಿವಾರ್ಯತೆ ಇತ್ತು, ಆ ಅವಸರದಲ್ಲಿ ಮತ್ತೆ ಹಾಗೆ ಹೊರಬಂದೆವು. ಮತ್ತೆ ಒಂದಷ್ಟು ಖುಷಿ ಪಡೆಯಬೇಕೆನ್ನುವ ಆ ತಹತಹ ಮತ್ತೊಂದು ಕಾರಯಕ್ರಮ ಎಂದಾಗುವುದೋ ಎಂಬ ನಿರೀಕ್ಷಣೆಗೆ ತೊಡಗಿದೆ, ಓದಿ ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೂ ಸಲಾಂ[ನಿನ್ನೆ ಬರಲಾಗದ ಬ್ಲಾಗ್ ಮಿತ್ರರು ಮುಂದಿನ ಸರ್ತಿ ಆದಷ್ಟೂ ತಪ್ಪಿಸಿಕೊಳ್ಳಬೇಡಿ, ಫಿರ್ ಮಿಲೇಂಗೇ ಹಮ್ , ಜೈ ಹೋ !
ReplyDeleteಹೊಸದಾಗಿ ಬ್ಲಾಗಿಗೆ ಆಗಮಿಸಿದ ಶ್ರೀ ಬಾಲು ಮತ್ತಿತರ ಮಿತ್ರರಿಗೆ ಸ್ವಾಗತ ಹಾಗೂ ನಮನಗಳು
ReplyDeleteಕವನ ರೂಪದಲ್ಲಿಯೇ ಕಾರ್ಯಕ್ರಮವನ್ನು ಸ೦ಪನ್ನಗೊಳಿಸಿದ ಭಟ್ ಸರ್ ಗೆ ಧನ್ಯವಾದಗಳು. "ಕುಂತರು ನಿಂತರು ಮರೆಯಲಸಾಧ್ಯವು
ReplyDeleteಎಂತಹ ಸ್ವರ್ಗವು ಬ್ಲಾಗಿನದು!"..ತು೦ಬಾ ಮಿಸ್ ಮಾಡಿಕೊ೦ಡೆ ಎನಿಸುತ್ತಿದೆ..!
ಶುಭಶಯಗಳು
ಅನ೦ತ್
ನಿಜ ಅನಂತ್ ಸರ್, ಅದರ ಪ್ರಭಾವವೇ ಹಾಗಿತ್ತು, ಅದೊಂದು ಮಹಾಮನೆ, ನಾವೆಲ್ಲಾ ಒಂದೇ ಎಂಬ ಭಾವ, ಯಾವ ಸ್ಕೂಲು-ಕಾಲೇಜು, ವೃತ್ತಿ ಯಾವ ಅಡೆತಡೆಯೂ ಅಲ್ಲಿರುವುದಿಲ್ಲ, ಅಲ್ಲಿರುವುದು ನಮ್ಮ ದೈನಂದಿನ ಬದುಕಿನ ಜಂಜಡಗಳನ್ನು ಬದಿಗೊತ್ತಿ, ನಿರುಮ್ಮಳವಾಗಿ ಕಳೆಯುವ ಕಾಲ, ಬಹಳ ಮಜವಾಗಿತ್ತು-ತುಂಬಾ ಹಿತವಾಗಿತ್ತು, ಮುಂದಿನ ಸಲ ತಪ್ಪದೇ ಬನ್ನಿ , ನಮಸ್ಕಾರ.
ReplyDeleteಭಟ್ ಸಾರ್....
ReplyDeleteನಿಮ್ಮನ್ನೂ ಇತರ ಬ್ಲಾಗ್ ಮಿತ್ರರನ್ನೂ ಭೇಟಿಯಾಗಿದ್ದು ಸಂತೋಷವಾಯಿತು. ಎಲ್ಲರ ಮನದಲ್ಲಿ ಉಳಿಯಿತು ನೆನಪುಗಳು. ಕವನದಲ್ಲಿ ಸುಂದರವಾಗಿ ಕಾರ್ಯಕ್ರಮವನ್ನು ವಿವರಿಸಿದ್ದೀರಿ. ಧನ್ಯವಾದಗಳು....
ಶ್ಯಾಮಲ
ಧನ್ಯವಾದಗಳು ಶ್ಯಾಮಲ ಮೇಡಂ, ಬಹಳ ಹೊತ್ತು ತಮ್ಮೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ, ಕ್ಷಮೆಯಿರಲಿ
ReplyDeleteಭಟ್ ಸರ್,
ReplyDeleteನೀವು ಕಾರ್ಯಕ್ರಮವನ್ನು ಕವನದಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ. ನಿಮ್ಮೆಲ್ಲರ ಬೇಟಿ ನನಗೆ ಖುಷಿತಂದಿದೆ. ನಾನು ಕೆಲವು ದಿನ ಬ್ಯುಸಿಯಾಗಿದ್ದರಿಂದ ಬ್ಲಾಗುಗಳಿಗೆ ಸರಿಯಾಗಿ ಬರಲಾಗಲಿಲ್ಲ. ಇನ್ನು ಒಂದೆರಡು ದಿನದಲ್ಲಿ ಮತ್ತೆ ಎಂದಿನಂತೆ ಬ್ಲಾಗಾಟ ಶುರುವಾಗುತ್ತದೆ. ನಾನು ನಿಮ್ಮ ಬ್ಲಾಗನ್ನು ಲಿಂಕಿಸಿಕೊಂಡು ಹಿಂಬಾಲಿಸುತ್ತೇನೆ.
ಧನ್ಯವಾದಗಳು ಸರ್.
Shivu,blaagigara koota mattomme nadeyali, Tamage tumba dhanyavadagalu
ReplyDeleteತುಂಬಾ ಮಧುರವಾಗಿ ಸಮಾರಂಭದ ಕ್ಷಣಗಳನ್ನು ಕಾವ್ಯಾತ್ಮಕವಾಗಿ ಹಿಡಿದಿಟ್ಟಿದ್ದಿರಾ. ಅದಂದು ಅತ್ತ್ಮೀಯ ಸಮಾರಂಭ. ಯಾವ ಬೇರ್ಚಪ್ಪನ ಟೀಕೆ ಟಿಪ್ಪಣೆಗಳು ನಗಣ್ಯ.
ReplyDeleteತಮ್ಮ ಮತ್ತು ಭಟ್ ದಂಪತಿಯರ ಆತ್ಮೀಯ ಆದರಕ್ಕೆ ಮನಸ್ಸು ಪ್ರಫುಲ್ಲಿತವಾಯಿತು. ತಮಗೆ ಧನ್ಯವಾದಗಳು.
ಧನ್ಯವಾದಗಳು ಸರ್, ನಮ್ಮಲ್ಲೇನಿದೆ ಎಲ್ಲಾ ಭಗವಂತನ ಕೊಡುಗೆ, ಕೊಡುವುದೇನು ಕೊಂಬುದೇನು ಸ್ನೇಹ ಪ್ರೀತಿ ಒಲವು!
ReplyDeleteಹೌದೆ..?
ReplyDeleteThanks
ReplyDelete