ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, August 20, 2010

ಚಮ್ ಚಮ್!

ಚಿತ್ರ ಋಣ :ಅಂತರ್ಜಾಲ

ಚಮ್ ಚಮ್!

[ ಸುಖಕರ್ತಾ ದುಃಖ ಹರ್ತಾ ವಾರ್ತಾ ವಿಘ್ನಾಚಿ ಅನ್ನೋ
ಮರಾಠಿ ಹಾಡಿನ ದಾಟಿಯಲ್ಲಿ ಹಾಡ್ಕೊಳಿ !]

ಪದ್ಯಕ್ಕೂ ಗದ್ಯಕ್ಕೂ ಸಂಬಂಧವಿಲ್ಲ
ಗದ್ಯ ಮಿಕ್ಸಿಗೆ ಹಾಕಿ ಪದ್ಯವಾಯ್ತಲ್ಲ !
ಸದ್ಯಕ್ಕಂತೂ ನೀವು ಮೂಸ್ನೋಡುದಿಲ್ಲ
ವಾದ್ಯ ಊದಿ ಕರೆದ್ರು ನೀವ್ ಬರಲೇ ಇಲ್ಲ ! ಬರೆಯಯ್ಯ ಬರೆಯೋ

ಇಡ್ಲಿ-ಸಾಂಬಾರ್ ದೋಸೆ ಚೌಚೌ ಚೌ ಬಾತು
ಸಡ್ಲಿಸಿ ಹೊಟ್ಟೆಯ ತಿನ್ನಿರಿ ಕೂತು
ಮಡ್ಲೊಳಗೆ ಮಗುವನ್ನು ಹೊತ್ತ ತಾಯಂದ್ರೆ
ಕಡ್ಲೆ ಉಸ್ಲಿ ಸಾಕೆ ಖಾರಾನೇ ಬೇಕೇ ? ಬರೆಯಯ್ಯ ಬರೆಯೋ

ಆಚೆಮನೆ ಗೋವಿಂದ ಸಣ್ಣಕ್ ಕಣ್ಣೊಡ್ದ
ಪಾಚೋ ಪಾಪಾಪಂಡು ಬಂದಿದ್ದು ತೋರ್ದ
ಮಾಚಕ್ಕ್ನ ಮಗನಿಗೆ ಆ ಹೆಸ್ರು ಕಾಯಂ
ಸಾಚಾ ಆಗ್ಬುಟ್ರೆಲ್ಲ ಜನರ್ಬಾಯ್ಗೆ ಚಮ್ ಚಮ್! ಬರೆಯಯ್ಯ ಬರೆಯೋ

ನಿಮ್ಮಲ್ಲೇ ಇರ್ಲೆಂದು ಮಂಜಜ್ಜ ಹೇಳ್ದ
ಮೊಮ್ಮಗ್ಳು ಬಸುರೆಂದು ಕಣ್ಣೀರು ಮಿಡ್ದ
ಒಮ್ಮೆ ಮದ್ವೆಯಾದ್ರೆ ಚಿಂತಿರ್ಲಾ ಎನುತ
ಎಮ್ಮನೆ ಕೂಸಿಗೇ ಲವ್ವಾಗ್ ಸಾಯ್ಬೇಕಾ ? ಬರೆಯಯ್ಯ ಬರೆಯೋ

ಬಚ್ಚಣ್ಣ ಹಾಸ್ನದಲ್ಲಿ ಬಾವ್ಟ ಹಾರ್ಸ್ಬುಟ್ಟು
ಕೊಚ್ಚೆ ಇರದಾ ರಸ್ತೆ ಹಿಡಿದು ಹೊರಟಿದ್ದ
ಅಚ್ಚ ಸಂಸ್ಕೃತದಲ್ಲಿ ಮಂತ್ರವ ಹೇಳಿ
ಬಿಚ್ಚಿ ಕೈ ಎರಡಿಟ್ಟ ಭರತನೆಂಬವಗೇ ! ಬರೆಯಯ್ಯ ಬರೆಯೋ

ಸಿನೆಮಾದವರ ಕೇಳಿ ಹೇಳುವರಿದು ಬೇರೆ
ಎನಿಮಾ ಹಚ್ಚಿದ ಹಾಗೇ ಹಳೆ ಅನ್ನಸಾರೇ !
ಅನುಮಾನ ಬಂದರೆ ಖಂಡಿತ ಗೋತಾ
ಜನುಮಕ್ಕೂ ಗುಟ್ಟು ಬಿಡಲಾರರೋ ತಾತಾ! ಬರೆಯಯ್ಯ ಬರೆಯೋ

ಹುಡುಗೀರು ಲೋ ಜೀನ್ಸು ಮಿನಿ ಟಾಪು ಹಾಕಿ
ಬಡಪಾಯಿ ಪಡ್ಡೆಗಳ ಬುಡಮೇಲೆತ್ತಾಕಿ
ತಡಕಾಡಿ ಅಪ್ಪನ ಜೇಬಿಗೆ ಕೈಹಾಕಿ
ಕಡತಂದ ಹಣವನ್ನು ಕೊಟ್ಟ ಗಿರಾಕಿ ! ಬರೆಯಯ್ಯ ಬರೆಯೋ

ಎಡಬಿಡದೆ ಮಳಿಗೆಯ ಸುತ್ತುತ ಜನರು
ಗಡಬಡಿಸಿ ಅದುಇದು ತುಂಬಿ ತರುತಿಹರು
ಕಡೆಗಳಿಗೆಲಿ ಖಾಲಿ ಆದ್ರೆಂಬಾತಂಕ
ಬಿಡದಂತೆ ಊದಿದರು ಸ್ಕೀಮಿನ ಶಂಖ ! ಬರೆಯಯ್ಯ ಬರೆಯೋ


16 comments:

  1. ಭಟ್ ಸರ್,
    ಹ್ಹ ಹ್ಹಾ ಹ್ಹ ಹ್ಹಾ.... ನೀವು ಹೇಳಿದ ಧಾಟಿಯಲ್ಲೆ ಹಾಡಿಕೊಂಡೆ.... ಸಕ್ಕತ್ ಇಷ್ಟ ಆಯ್ತು......

    ReplyDelete
  2. ಥ್ಯಾಂಕ್ಸ್ ದಿನಕರಜೀ

    ReplyDelete
  3. ನಿಮ್ಮ ಹಾಡೇ ಈಗ ಬಾಯಲ್ಲಿ ಕೂತು ಬಿಟ್ಟಿದೆ. ಗಣೇಶಚವತಿಯ ದಿನ ಆರತಿ ಎತ್ತುವಾಗ, ಬಾಯಲ್ಲಿ ಇದೇ ಹಾಡೇ ಬರಬಹುದು ಎನ್ನುವ ಭಯ ನನಗೆ!

    ReplyDelete
  4. ಹಹಹಾ ... ತುಂಬಾ ಚೆನ್ನಾಗಿದೆ... ತಾಳ ಹಾಕ್ತ ಹೇಳ್ಬೌದು... :-)

    ReplyDelete
  5. ಚೆನ್ನಾಗಿದೆ ಕವನ! ಚಂ ಚಂ ಅಲ್ಲಾ ಚೌ ಚೌ

    ReplyDelete
  6. ಹಹ್ಹಹ್ಹಹ್ಹ
    ಈಗ್ಲೂ ಇದನ್ನೇ ಹಾಡಿಕೊಳ್ತಾ ಇದ್ದೇನೆ ವಿ. ಆರ್. ಭಟ್ರೇ... ನಕ್ಕೂ ನಕ್ಕೂ ಸುಸ್ತು..

    ReplyDelete
  7. ಇದು ನಮ್ಮ ರಾಜಕಾರಣಿಗಳ ಬಗ್ಗೆ

    ಭೂರಿ ಭೋಜನ ಹೊಡೆದು ತಿಂತಾರ್ ತಾಂಬೂಲ
    ಕೋತಿಗಳೇ ಹೌದಾದ್ರೂ ಇಲ್ಲಾ ಲಾಂಗೂಲ
    ವೋಟಿಗೆ ನೋಡ್ ಕೊಡ್ತಾರೆ ಸೀರೆ ಹುಳಿ ಹೆಂಡ
    ನಂಬಿದರೆ ಕೈಗ್ ಚಿಪ್ಪು ಬಾಳೂ ಬರಿ ದಂಡ ||ಬರೆಯಯ್ಯ ಬರೆಯೋ||

    ReplyDelete
  8. ಭಟ್ ಸರ್;ಸೂಪರ್ ಕವನ,ಸೂಪರ್ ಕಾಮೆಂಟ್ಸ್.

    ReplyDelete
  9. @Bhat: Saar, nice poem. Its Vighnachi (not vidrachi). I had not heard the song. I found it on you tube.

    @Others: to hear the song http://www.youtube.com/watch?v=wo-2pz5QySc

    ReplyDelete
  10. ವಿಆರ್,ಬಿ,...
    ಬಲ್ ನನ್ ಮಗ ಸುಮ್ಕೇ ಅಲ್ಲ ನೋಡ್
    ಎಂಗಯ್ಯಾ ಒಡ್ದಿಯಾ ಮಿನಿಸ್ತ್ರಿಗೆ ಸೈಡ್
    ನನ್ದು ಅಲ್ದೇ ಇದ್ರೂ ನಿಮ್ಮಪ್ಪಂದೂ ಅಲ್ಲ ರೋಡ್
    ಇಟ್ಟಾದ್ರೂ ನನ್ ಬಗ್ಗೇ ಬರೀತೀಯಾ..ಬರಿ ಬರಿ.....
    ಅಳ್ಳಿ ಭಾಷೆ ಒಳ್ಗೆ ಸಕ್ಕತ್...ಮಸ್ತ್ ಪೋಸ್ತು

    ReplyDelete
  11. ಭಟ್ರೇ ಗಮ್ಮತ್ತಿತ್ತಲ್ಲ ನಿಮ್ಮ ಪದ್ಯ .ನಗಾಡಿ ನಗಾಡಿ ಇಟ್ಟೆ.ಹ್ಹಾ ಹ್ಹಾ ಹ್ಹ

    ReplyDelete
  12. ಭಟ್ ಸರ್...

    ಈ ಸುಖ್ ಕರ್ತಾ ದುಖ್ ಮರಾಥಿ ಹಾಡು ನನಗೆ ಚೆನ್ನಾಗಿ ಬಾಯಿಪಾಠ ಬರುತ್ತೆ.. ಆದ್ದರಿಂದ ನಿಮ್ಮ ಪದ್ಯ ಓದೋಕೆ ತುಂಬಾನೇ ಮಜಾ ಬಂತು ನೋಡಿ.. ತುಂಬಾ ತುಂಬಾ ಚೆನ್ನಾಗಿದೆ,....

    ReplyDelete
  13. * ಸ್ವಾಮೀ ಸುನಾಥರೇ ತಮಗೆ ಕವನ ಬಾಯಲ್ಲೇ ಕೂತು ಬಿಟ್ಟಿತೇ, ಧನ್ಯವಾದಗಳು

    * ಪ್ರಗತಿ ಮೇಡಂ ತಮಗೆ ಅಭಿವಂದನೆಗಳು

    * ಶ್ರೀ ಸೀತಾರಾಮ್, ತಮ್ಮ ಅನಿಸಿಕೆಗೆ ಅನಂತ ವಂದನೆಗಳು

    * ಶ್ರೀ ದಿಲೀಪ್ ಹೆಗಡೆ, ನಿಮ್ಮ ಕಾವ್ಯಸ್ಪೂರ್ತಿ ನೋಡಿ ನನಗೆ ಮತ್ತಷ್ಟು ಬರೆಯುವ ಮನಸ್ಸಾಗುತ್ತಿದೆ, ಬಹಳ ಚೆನ್ನಾಗಿ ಬರೆದಿದ್ದೀರಿ, ನೋಡಿ ಇದೆ ರೀತಿ ಒಂದು ಹಾಡು ಬರೆದು ನಿಮ್ಮ ಬ್ಲಾಗ್ ನಲ್ಲಿ ಹಾಕಿಬಿಡಿ, ಬಹಳ ಸಂತೋಷ, ಕೃತಜ್ಞತೆಗಳು

    * ಡಾ| ಕೃಷ್ಣಮೂರ್ತಿ ಸರ್, ತಮಗೆ ಕವನದ ಜೊತೆಗೆ ಕಾಮೆಂಟ್ಸ್ ಕೂಡ ಇಷ್ಟವಾಗಿದೆ, ನಮಸ್ಕಾರಗಳು.

    * ಶ್ರೀ ಚಂದ್ರ, ತಾವು ಹೇಳಿದೂ ನಿಜ, ಗೂಗಲ್ ನಲ್ಲಿ ಕನ್ನಡ ಟೈಪ್ ಮಾಡುವಾಗ ಎಷ್ಟೋ ಸಲ ಕೆಲವೊಂದು ಶಬ್ದಗಳನ್ನು ಅದೇ ಹಾಕಿಕೊಳ್ಳುತ್ತದೆ, ಉದಾಹರಣೆಗೆ ಎಂ ಅಂತ ಇಂಗ್ಲೀಷಿನಲ್ಲಿ ಬರೆದರೆ ಸಾಕು ಮುನ್ನ ಎಂತ ಬರೆದುಬಿಡುತ್ತದೆ, ಹೀಗೇ ಈ ಒಂದು ಕಾರಣದಿಂದ ಪರಾಂಬರಿಸದೇ ಆದ ತಪ್ಪಿಗಾಗಿ ವಿಷಾದಿಸುತ್ತೇನೆ, ಮತ್ತು ಸರಿಪಡಿಸಿದ್ದೇನೆ ಕೂಡ, ನಿಮ್ಮ ಸಲಹಗೆ ಮತ್ತು ಪ್ರತಿಕ್ರಿಯೆಗೆ ಕೃತಜ್ಞತೆಗಳು.

    * ಶ್ರೀ ವೆಂಕಟೇಶ್ ಹೆಗಡೆ ತಮಗೆ ವಂದನೆಗಳು

    * ಶ್ರೀ ಆಜಾದ್, ಪುಸ್ತಕ ಬಿಡುಗಡೆಯ ತಮ್ಮ ಅವಸರದ ಒತ್ತಡಗಳ ನಡುವೆಯೂ ಓದಿ, ಹಾಡು ಬರೆದು ಪ್ರತಿಕ್ರಿಯಿಸಿದಿರಿ, ಹಳ್ಳಿಯ ಭಾಷೆಯ ಸೊಗಡು ಬೇರೇನೆ ಇದೆ ಬಿಡಿ, ಅದರ ರುಚಿಯನ್ನು ಆಗಾಗ ಅಸ್ವಾದಿಸಿದರೆ ಚೆನ್ನ ಅಲ್ಲವೇ ? ನಿಮ್ಮ ಪ್ರತಿಕ್ರಿಯೆಗೆ ತುಂಬಾ ಆಭಾರಿ.

    * ಶಶಿ ಮೇಡಂ, ನೀವು ನಗಾಡಿ ನಗಾಡಿ ಇಟ್ರಿ ನಾವು ಇವತ್ತು ಮಳೇಲಿ ನೆಂದು ಕೆಟ್ಟೆವು! ನಿಮ್ಮ ಪ್ರತಿಕ್ರಿಯೆಗೆ ಹಲವು ನೆನಕೆಗಳು

    * ಶ್ರೀ ಕಡ್ಲಾಡಿ ಅಶೋಕ್, ಅಂತೂ ನೀವು ಮಜಾ ಪಡೆದಿರಿ, ನಿಮ್ಮ ಅಭಿವ್ಯಕ್ತಿಯೇ ಹೇಳುತ್ತದೆ ಅದನ್ನ ಅಲ್ಲವೇ ? ನಮಸ್ಕಾರ.

    ಓದಿದ ಎಲ್ಲಾ ಮಿತ್ರರಿಗೂ ನಮನಗಳು

    ReplyDelete
  14. ಆಹಾಹಾ.. ಬಲು ಚೆನ್ನಾಗಿದೆ ಭಾಷೆ!!

    ReplyDelete