ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, July 13, 2010



ಧುಮ್ಮಿಕ್ಕುತ ಬಂದಳು ಶರಾವತಿ

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ........

ಧುಮ್ ಧುಮ್ ಧುಮ್ಮಿಕ್ಕಿ ಹರಿದು
ರಿಮ್ ಜಿಮ್ ವಿದ್ಯುತ್ತ ನೀಡಿ
ಬಂ ಬಂ ಬಸೋಲ್ ಸದ್ದಿನಿಂದಾ
ಹರಿದುಬಂದಳು ಶರಾವತಿ
ಭರದಿ ಬೆಳಗುತ್ತ ನಾಡ
ವರದ ದೀಪವು ನೋಡ
ಹರುಷ ಹರಡುತ್ತ ಮನಕೆಲ್ಲಾ
ತೆರೆದುತಂದಳು ಪಂಚಾರತಿ !

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ.......

ರಾಜಾ ರಾಕೆಟ್ಟು ರಾಣಿ
ರೋರರ್ ಮತ್ತಲ್ಲೇ ತ್ರಿವೇಣಿ
ರಾಜಧಾನಿಯ ಜನವೆಲ್ಲ ಕುಣಿದೇಳುವಾ
ಆ ಅಬ್ಬರದ ಸೆಳಕು!
ಭೋಗ ವೈಭೋಗವಲ್ಲಿ
ಯೋಗ ಬೇಕೊಮ್ಮೆ ನೋಡೆ
ರಾಗ ಹಾಕುತ್ತ ತಾಳ ನಾವು
ಕುಣಿಯೋಣ ಏಕಳುಕು?

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ........

ಊರ ಪೋರಗಳೆಲ್ಲ
ನಾರಿಮಣಿಗಳು ತಾವೆಲ್ಲ
ಭಾರೀ ಆಸೆಯ ಹೊತಗೊಂಡು
ಸೇರಿ ಬಂದರು ನೋಡಲಿಕೆ
ಭೂರಿ ಭೋಜನ ಕಣ್ಗೆ
ಸೂರೆ ಹೊಡೆಯುವವರ್ಗೆ
ಜಾರಿ ಬಿದ್ದೀರಿ ಕೆಳಗೆ ಜೋಕೆ!
ಮುಂಗಾರುಮಳೆ ಜಾರ್ಕೆ

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ........

ಸಿನಿಮಾ ಮಂದಿಗಳಷ್ಟು
ಎನಿಮಾ ಹಚ್ಚಿ ಬಿಚ್ಚಿಟ್ಟು
ಹನುಮ ಬಲದಿಂದ ಮೆಟ್ಟಿಲಿಳಿದು
ಎಣಿಸಿ ಸಾವಿರ ಬೇಸಿಗೆಯಲಿ !
ಘನತೆಗೊಂದೇ ಜಲಪಾತ
ಬನತಾಯೀಯ ನಡುವೆ
ಅನತಿದೂರದಿ ಕರೆಯುತಿಹುದು
ಹೋಗೊಮ್ಮೆ ನೋಡಲ್ಲಿ !

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ.....

11 comments:

  1. tumbaa chennagide
    raagakke honduvantide
    jogada vaibhavave bere

    ReplyDelete
  2. Thanks you Sir, I like Jog Falls very much ! after all naanobba nisargapriya!

    ReplyDelete
  3. ನಮ್ಮಲ್ಲಿಗೆ ಯಾವಾಗ ಬರುತ್ತೀರಾ ಭಟ್ ಸರ್?ಹಾಡು ತುಂಬಾ ಚೆನ್ನಾಗಿದೆ.ಇನ್ನೂ ಹೆಚ್ಚು ಮಳೆ ಬಂದು ,ಡ್ಯಾಮಿನಲ್ಲಿ ನೀರು ಬಿಟ್ಟಾಗ ಜಲಪಾತ ತುಂಬಿ ಹರಿಯುತ್ತದೆ.ನಮಸ್ಕಾರ.

    ReplyDelete
  4. ಧನ್ಯವಾದ ಸ್ವಾಮೀ ಕೃಷ್ಣಮೂರ್ತಿಗಳೇ , ಬರಬೇಕು ಜೋಗಕ್ಕೆ, ಬಂದಾಗ ಸಿಗುತ್ತೇನೆ ತಮಗೆ.

    ReplyDelete
  5. ಹಾಡು.. ಹಾಡಿನಲ್ಲಿನ ಜೋಗ ಜಲಪಾತದ ವರ್ಣನೆ ಸಕ್ಕತ್ತಾಗಿದೆ ಸರ್..

    ReplyDelete
  6. ಶರಾವತಿಯ ದುಮ್ಮಿಕ್ಕಿ ಹರಿಸಿಬಿಟ್ಟಿರಿ!
    ಶರಣು ಬಟ್ರೆ.

    ReplyDelete
  7. ಬೆಳಗಿನಜಾವ ಬಂದು ಬ್ಲಾಗ್ ಓದಿದ್ದೀರಿ, ಶ್ರೀ ದಿಲೀಪ್ ಮತ್ತು ಶ್ರೀ ಶ್ರೀಧರ್ ತಮ್ಮ ಕನ್ನಡ ಅಭಿಮಾನಕ್ಕೆ ಮೊದಲಾಗಿ ಶರಣು, ಇನ್ನು ಬಹಳ ದಿನಗಳಿಂದ ನನಗನಿಸುತ್ತಿದ್ದುದು ಜೋಗದ ಬಗ್ಗೆ ಹಾಡಿ ಕುಣಿವಂತ ಹಾಡೊಂದನ್ನು ಬರೆಯಬೇಕು ಎಂಬುದು ಅದನ್ನು ನಿನ್ನೆ ಕಾರ್ಯರೂಪಕ್ಕೆ ಇಳಿಸಿದ್ದೇನೆ, ಕೇವಲ ಹತ್ತುನಿಮಿಷದಲ್ಲಿ ಬರೆದ ಕವನವನ್ನು ಇಂದಿನ ಬೆಳಿಗ್ಗೆಯೇ ಬದಲು ನಿಮಗೆಲ್ಲ ಕೊಡುವ ತವಕದಿಂದ ನಿನ್ನೆಯೇ ಪ್ರಕಟಿಸಿಬಿಟ್ಟಿದ್ದೇನೆ. ಕವನ ಓದಿದ ತಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು, ಸಾಗೋಣ ಬೆಳಕಿನೆಡೆಗೆ- ಸಹಪ್ರಯಾಣಿಕರಾಗಿ, ನಮಸ್ಕಾರಗಳು

    ReplyDelete
  8. ಚೆಂದದ ಕವನ! ಹಾಡಿಕೊಂಡು ಕುನಿಯುವಂತಿದೆ. ಜೋಗದ ಸಿರಿಯನ್ನು ಕಣ್ಣಾರೆ ಸವಿದಂತಾಯಿತು!

    ReplyDelete
  9. ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
    ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ.......
    ಸಖತ್ ಆಗಿದೆ ಸರ್...

    ReplyDelete