ಗದ್ದೆಯಲಿ ಹೀಗೊಮ್ಮೆ
ಕಟ್ಟ ಕದಿರಿನ ಸೊಂಪಾದ ಗದ್ದೆಯಲ್ಲಿ
ಮಟ್ಟ ಮೀರದ ಮಾರುತ ನಗುವ ಚೆಲ್ಲಿ
ಸದ್ಯ ಏನಾಯ್ತು ನೋಡುವಾ ಘಳಿಗೆಯಲ್ಲಿ
ಮಧ್ಯ ಮಿಂಚುಳ್ಳಿ ಮೀನಿಗಾಗಿ ಹುಡುಕಿತಲ್ಲಿ
ಬಿಳಿಯ ಬೆಳ್ಳಕ್ಕಿ ಬಣ್ಣದ ರಾಶಿಯಲ್ಲಿ
ಎಳೆಯ ಮೀನುಗಳ ತಾವೆಳೆದು ಕೊಕ್ಕಿನಲ್ಲಿ
ದೂರ ಮರದಲ್ಲಿ ಮುದ್ದು ಗಿಣಿ ಸಾಲಿನಲ್ಲಿ
ಹಾರುತಲ್ಲಲ್ಲಿ ನಲಿನಲಿವ ಹರುಷದಲ್ಲಿ
ಒಂಟಿ ಮಾಮರದ ಟೊಂಗೆಗಳ ಸಂದಿನಲ್ಲಿ
ಕಂಠದಿಂಪಿನಲಿ ಕೋಗಿಲೆಯು ಹಾಡಿತಲ್ಲಿ
ಯಾರೂ ತರದಿರಲಿ ಅಡಚಣೆಯ ನಡುವಿನಲ್ಲಿ
ಸಾರು ಅನ್ನಕ್ಕೆ ರಜಹಾಕಿ ಕೂರ್ವೆನಿಲ್ಲಿ
ಕಟ್ಟ ಕದಿರಿನ ಸೊಂಪಾದ ಗದ್ದೆಯಲ್ಲಿ
ಮಟ್ಟ ಮೀರದ ಮಾರುತ ನಗುವ ಚೆಲ್ಲಿ
ಸದ್ಯ ಏನಾಯ್ತು ನೋಡುವಾ ಘಳಿಗೆಯಲ್ಲಿ
ಮಧ್ಯ ಮಿಂಚುಳ್ಳಿ ಮೀನಿಗಾಗಿ ಹುಡುಕಿತಲ್ಲಿ
ಬಿಳಿಯ ಬೆಳ್ಳಕ್ಕಿ ಬಣ್ಣದ ರಾಶಿಯಲ್ಲಿ
ಎಳೆಯ ಮೀನುಗಳ ತಾವೆಳೆದು ಕೊಕ್ಕಿನಲ್ಲಿ
ದೂರ ಮರದಲ್ಲಿ ಮುದ್ದು ಗಿಣಿ ಸಾಲಿನಲ್ಲಿ
ಹಾರುತಲ್ಲಲ್ಲಿ ನಲಿನಲಿವ ಹರುಷದಲ್ಲಿ
ಒಂಟಿ ಮಾಮರದ ಟೊಂಗೆಗಳ ಸಂದಿನಲ್ಲಿ
ಕಂಠದಿಂಪಿನಲಿ ಕೋಗಿಲೆಯು ಹಾಡಿತಲ್ಲಿ
ಯಾರೂ ತರದಿರಲಿ ಅಡಚಣೆಯ ನಡುವಿನಲ್ಲಿ
ಸಾರು ಅನ್ನಕ್ಕೆ ರಜಹಾಕಿ ಕೂರ್ವೆನಿಲ್ಲಿ
ಚಂದದ ಚಿತ್ರಗಳು ,ಅಂದದ ಬರಹ.
ReplyDeleteಅಂದದ ಬರಹ.
ReplyDeletenice pictures and nice poem..........
ReplyDeleteಹಾಡಿಕೊಂಡು ಕೈತಟ್ಟಿ ಕುಣಿಯಬಹುದಾದ ಗೀತೆ, ಎಂಜಾಯ್ ಮಾಡಿದಿರಲ್ಲ ! ಸರ್ವಶ್ರೀ ಡಾ|ಕೃಷ್ಣಮೂರ್ತಿ, ಕುಸು ಮುಳಿಲಾಯ, ಪ್ರವೀಣ್ ತಮಗೆಲ್ಲರಿಗೂ ಮತ್ತು ನೇಪಥ್ಯದ ಎಲ್ಲಾ ಓದುಗರಿಗೂ ನಮನಗಳು.
ReplyDeleteತು೦ಬಾ ಚೆ೦ದದ ಕವನ. ಅನ್ನ-ಸಾರನು ಮರೆತು ಹಾಡುತ್ತಾ ಕುಣಿಬೇಕೆನಿಸಿತು.
ReplyDelete