ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, June 2, 2011


ಸಾಹಸವಿಲ್ಲದ ಜೀವನ ಉಪ್ಪಿಲ್ಲದ ಊಟದಂತೇ

ರಾಯ್ಪುರದ ಕುರುದ್ ಊರಿನ ಬಡ ರೈತನೊಬ್ಬನ ಮಗ ಮಧುಸೂದನ್ ಕೇಳಗೆ ಹಳ್ಳಿಯ ಮನೆಯಲ್ಲಿ ಕಲಿಕೆಗೆ ಅಷ್ಟೇನೂ ಸೌಲಭ್ಯಗಳಿರಲಿಲ್ಲ. ಒಟ್ಟಾರೆ ಏನಾದರೂ ಒಂದಷ್ಟು ಓದಿದರಾಯಿತು-ಬದುಕಲು ಅದು ಸಹಕಾರಿಯಾಗಬಹುದು ಎಂಬುದು ಮಧು ಕೇಳಅಪ್ಪ-ಅಮ್ಮನ ಅನಿಸಿಕೆಯಾಗಿತ್ತು. ಕಷ್ಟಾರ್ಜಿತದಲ್ಲೇ ಮಗನನ್ನು ಪದವಿಯವರೆಗೆ ಓದಿಸಿದರು. ಸುಮ್ಮನೇ ಊರು ನೋಡಲಾಗಿ ಮಿತ್ರ ರಾಹುಲ್ ಮಹಾವರನೊಂದಿಗೆ ೧೯೯೮ರಲ್ಲಿ ಮುಂಬೈಗೆ ಒಂದೆರಡು ದಿನಗಳ ಮಟ್ಟಿಗೆ ಬಂದಿದ್ದ ಮಧುಕೇಳ. ಯಾಕೋ ಆತನಿಗೆ ತನ್ನ ಮುಂದಿನ ಜೀವಿತಕ್ಕಾಗಿ ಎಂ.ಬಿ. ಮಾಡುವ ಕನಸು ಹುಟ್ಟಿತು. ಊರಿಗೆ ಮರಳಿದ ಮಧು ಕೆಲವುದಿನಗಳ ತರುವಾಯ ಮತ್ತೆ ಸ್ನೇಹಿತ ರಾಹುಲ್ ಜೊತೆಗೆ ಮುಂಬೈಗೆ ಬಂದಿಳಿದ. ಹೇಳಿಕೇಳಿ ಅದು ಮುಂಬೈ ಶಹರ. ತನ್ನವರು ಎಂಬವರು ಯಾರೂ ಇರಲಿಲ್ಲ. ಪರಿಚಿತರಾಗಲೀ, ಸ್ನೇಹಿತರಾಗಲೀ, ನೆಂಟರಿಷ್ಟರಾಗಲೀ ಯಾರೂ ಅಲ್ಲಿರಲಿಲ್ಲ. ಇದ್ದಾತ ಒಬ್ಬನೇ ಒಬ್ಬ ಊರಕಡೆ ಮನುಷ್ಯ. ಆತ ಜುಹು ಸಮುದ್ರತೀರದಲ್ಲಿ ಪಾನೀಪೂರಿ ಮಾರಾಟಮಾಡುವ ಅತಿ ಚಿಕ್ಕ ವ್ಯಾಪಾರಿ. ಅದು ಬಿಟ್ಟರೆ ಬೇರಾವ ಸಂಪರ್ಕವೂ ಇರಲಿಲ್ಲ.

ಮನಸ್ಸಿನಲ್ಲಿ ದೃಢ ನಿರ್ಧಾರಕ್ಕೆ ಬಂದಿದ್ದ ಮಧು ಕೇಳ ಸ್ನೇಹಿತ ರಾಹುಲ ಜೊತೆಗೆ ಸೋಮೈಯ್ಯಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸಂಸ್ಥೆಯ ಬಾಗಿಲು ತಟ್ಟಿದ. ಅಲ್ಲಿ ಅವರು ಎಲ್ಲರಿಗೂ ಅವಕಾಶ ನೀಡುತ್ತಿರಲಿಲ್ಲ. ಪ್ರವೇಶ ಪರೀಕ್ಷೆಯಲ್ಲಿ ಸಂದರ್ಶಕರೊಟ್ಟಿಗೆ ಮಾತನಾಡುತ್ತಾ ಪ್ರತೀ ಕಾಲುವರ್ಷದ [ ತಿಂಗಳ]ಪರೀಕ್ಷೆಯಲ್ಲೂ ತನ್ನ ಅಭಿವೃದ್ಧಿ ಪಥವನ್ನು ತೋರಿಸುವೆನೆಂಬ ಛಲವನ್ನು ಒತ್ತಿಒತ್ತಿ ಹೇಳಿದ ಹುಡುಗನಿಗೆ ಅಲ್ಲಿ ಅವಕಾಶ ಸಿಕ್ಕಿತು. ಆದರೆ ಅದೇ ಸ್ನೇಹಿತನಿಗೆ ಸಿಗಲಿಲ್ಲ. ಸ್ನೇಹಿತ ರಾಹುಲ್ ಕುರುದ್ಗೆ ಮರಳಿದ. ಮುಂಬೈಯ್ಯಲ್ಲಿ ಎಂ.ಬಿ. ಮಾಡತೊಡಗಿದ ಮಧು ಕೇಳ ಪ್ರತೀ ದಿನವನ್ನು ತನ್ನ ವ್ಯಾಸಂಗದ ಮಹತ್ವದ ದಿನವೆಂದೇ ಪರಿಗಣಿಸಿ ಅಭ್ಯಸಿಸಿದ. ಅವನ ಮುಂದೆ ಎರಡೇ ಆಯ್ಕೆಗಳಿದ್ದವು. ಒಂದೋ ಆತ ಗೆಲುವು ಸಾಧಿಸಬೇಕು ಅಥವಾ ಅಂತೂ ಇಂತೂ ಏನೋ ಮಾಡಿದೆ ಎಂದು ಮುಗಿಸಿ ಊರಿಗೆ ಮರಳಬೇಕು. ಗೆದ್ದರೆ ಹಾರ-ತುರಾಯಿ-ಸನ್ಮಾನ; ಸೋತರೆ ಬದುಕಲು ಅನರ್ಹನೆಂಬ ಅಪಮಾನ ! ಹಿಮಾಲಯದ ಪರ್ವತರೋಹಿಗಳಿಗೆ ಇರುವ ಕಡಿದಾದ ಮಾರ್ಗಗಳಲ್ಲಿ ಮೊನಚಾದ ಶಿಖರಗಳನ್ನೇರುವ ದುಸ್ಸಾಹಸದ ರೀತಿ, ಹುರಿದು ಮುಕ್ಕುವ ಪ್ರಬಲ ವಿರೋಧಿ ಬಣದ ಸೇನಾನಿಗಳ ಮುಂದೆ ಸೆಣಸಿ ಗೆಲ್ಲಬೇಕಾದ ಸೈನಿಕನ ರೀತಿಯ ಸವಾಲುಗಳು ಅಲ್ಲಿದ್ದವು!

ಮಧು ತನ್ನ ಹಠ ಬಿಡಲಿಲ್ಲ. ಸಾಧನೆಯೊಂದೇ ತನಗಿರುವ ಹಾದಿ ಎಂಬುದನ್ನು ಆತ ಮೊದಲೇ ನಿರ್ಧರಿಸಿದ್ದನಲ್ಲಾ ಬಾಧಕಗಳು ಕಣ್ಣಿಗೆ ಕಂಡರೂ ಅವುಗಳನ್ನು ದಮನಿಸಿ ಮುನ್ನುಗ್ಗಿದ. ವಿಜಯಿಯಾದ ಮಧುವಿಗೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ಅದೇ ಸಂದರ್ಭದಲ್ಲಿ ರಿಲಾಯನ್ಸ್ ಮ್ಯೂಚ್ವಲ್ ಫಂಡ್ ಆಗತಾನೇ ಆರಂಭಗೊಂಡಿತ್ತು. ಅಲ್ಲಿನ ಕೆಲವು ವ್ಯವಹಾರಗಳು ಪಾರಾದರ್ಶಕವಾಗಿರಲಿಲ್ಲ. ಕುರಿತು ಅನಿಲ್ ಅಂಬಾನಿಗೆ ನೇರವಾಗಿ ಒಂದು ಸಲಹಾಪತ್ರವನ್ನು ಬರೆದ. ಪತ್ರವನ್ನು ಓದಿದ ಅನಿಲ್ ಮಧುವನ್ನು ತನ್ನಲ್ಲಿಗೆ ಕರೆಸಿಕೊಂಡನಲ್ಲದೇ ಕೆಲವೇದಿನಗಳಲ್ಲಿ ಅವನನ್ನು ರಿಲಾಯನ್ಸ್ ಮ್ಯೂಚ್ವಲ್ ಫಂಡ್ ಸಂಸ್ಥೆಯ ನಿರ್ದೇಶಕರ ಸಮಿತಿಗೆ ಸೇರಿಸಿಕೊಂಡ. ಅದಾದ ಕೆಲವೇ ದಿನಗಳಲ್ಲಿ ಮಧು ತನ್ನ ಹಲವು ದೀರ್ಘಾಲೋಚನೆಗಳಿಂದ ಅನೇಕ ಮಾರ್ಪಾಟುಮಾಡಿದ್ದರಿಂದ ಏನೂ ಇಲ್ಲದ ಆರ್.ಎಂ.ಎಫ್ ಮಾರುಕಟ್ಟೆಯಲ್ಲಿ ನಂ. ಸ್ಥಾನಕ್ಕೆ ಬಂದು ನಿಂತಿತು.

ವ್ಯಾಸಂಗದ ದಿನಗಳಲ್ಲಿ ಅತಿ ಚಿಕ್ಕ ಖೋಲಿಯಲ್ಲಿ ಇನ್ನೊಬ್ಬ ಮಿತ್ರನೊಡನೆ ದಿನಕಳೆದ ಮಧುವಿಗೆ ಖೋಲಿಯ ಬಾಗಿಲನ್ನು ತೆರೆಯಲೂ ಅವಕಾಶವಿರಲಿಲ್ಲ. ಬಾಗಿಲು ತೆರೆದರೆ ಸಾಮೂಹಿಕ ಬಳಕೆಗೆಂದು ಇರುವ ಚಾಳಿನ ವಾಸಿಗರ ಶೌಚಾಲಯದ ಗಬ್ಬು ವಾಸನೆ ಮೂಗನ್ನು ಒಡೆಯುವಷ್ಟು ರಾಚುತ್ತಿತ್ತು. ಆದರೆ ಈಗ ಮುಂಬೈನ ಅತಿ ಉತ್ತಮ ವಸತಿ ಸಮುಚ್ಚಯವೊಂದರಲ್ಲಿ ೪೦೦೦ ಚದರಡಿಗಳ ಮನೆಯಲ್ಲಿ ವಾಸ. ಮುದ್ದಾದ ಎರಡು ಹೆಣ್ಣುಮಕ್ಕಳು ಮತ್ತು ಹೆಂಡತಿಯೊಂದಿಗೆ ಸುಖದ ಸಂಸಾರ. ೪೩ ವರ್ಷದ ಮಧು ಕೇಳ ದೇಶದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ೯೦,೦೦೦ ಕೋಟಿ ವಹಿವಾಟಿನ ಅನಿಲ್ ಧೀರೂಬಾಯ್ ಅಂಬಾನಿ ಗ್ರೂಪ್ಗೆ ಆರ್ಥಿಕ ವ್ಯವಹಾರ ನಿರ್ವಹಣೆಯ ಪರಿಕಲ್ಪನೆಗಾರ. ತನಗೆ ಒದಗುವ ಯಾವುದೇ ಸವಾಲನ್ನೂ ಅತ್ಯಂತ ಆಸಕ್ತಿಯಿಂದ ನಿಭಾಯಿಸುವ ಮಧು ಕೇಳ ಮೊನ್ನೆ ಒಂದು ವಿಶೇಷ ಕಾದಿತ್ತು! ಅದೆಂದರೆ ಆತನನ್ನು ಆರ್.ಎಂ. ಎಫ್ ನಿಂದ ರಿಲಾಯನ್ಸ್ ಕೆಪಿಟಲ್ಗೆ ಸ್ಥಾನ ಬಲಾಯಿಸಿ ನಿಯಮಿಸಲಾಗಿದೆ. ಈಗಿರುವ ಅತಿ ದೊಡ್ಡ ಸವಾಲು ಮತ್ತದೇ ಏನೂ ಅಲ್ಲದ ರಿಲಾಯನ್ಸ್ ಕೆಪಿಟಲ್ ಸಂಸ್ಥೆಯನ್ನು ಮತ್ತೆ ಉನ್ನತ ದರ್ಜೆಗೆ ಏರುವಂತೇ ಬೆಳೆಸುವುದು!

ಮಧು ಕೇಳ ಸಾಧಿಸುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ ಬಿಡಿ. ಯಾಕೆಂದರೆ ಆತನಲ್ಲಿ ಇನ್ನಿಲ್ಲದ ಆತ್ಮವಿಶ್ವಾಸ, ಧೈರ್ಯ,ಸ್ಥೈರ್ಯ ಎಲ್ಲವೂ ಮೇಳೈಸಿವೆ. ಶೇರು ಮಾರುಕಟ್ಟೆಯನ್ನು ಆಮೂಲಾಗ್ರ ಅರೆದು ಕುಡಿದಿರುವ ಮಧು ಎಲ್ಲಿ ಯಾರು ಯಾವುದನ್ನು ಕೊಳ್ಳುತ್ತಾರೆ ಮತ್ತು ಎಲ್ಲಿ ಯಾರು ಯಾವುದನ್ನು ಮಾರಾಟಮಾಡುತ್ತಾರೆ ಎಂಬುದನ್ನು ನಿಕೃಷ್ಟವಾಗಿ ಗುರುತಿಸಬಲ್ಲ ಚಾಣಾಕ್ಷ. ಒಮ್ಮೆ ಗಿರಾಕಿಯೊಬ್ಬರಿಗೆ ಗಾದ್ರೆಜ್ ಕಂಪನಿಯ ೧೦೦,೦೦೦ ಶೇರುಗಳು ಬೇಕಾಗಿದ್ದವು. ಅಂತಹ ಕಂಪನಿಯ ಅಷ್ಟೊಂದು ಶೇರುಗಳು ಮಾರುಕಟ್ಟೆಯಲ್ಲಿ ನೇರವಾಗಿ ಒಮ್ಮೆಲೇ ಸಿಗುವುದು ದುರ್ಲಭವಾಗಿತ್ತು. ಮಧು ತಡಮಾಡಲಿಲ್ಲ. ಗಾದ್ರೆಜ್ ಕಂಪನಿಯ ಮಾಲೀಕರಾದ ಆದಿ ಗಾದ್ರೆಜ್ ರವರನ್ನೇ ದೂರ್ವಾಣಿಯಲ್ಲಿ ಸಂಪರ್ಕಿಸಿಬಿಟ್ಟ. ಅವರಿಗೇ ಶಾಕು! ಯಾಕೆಂದರೆ ಮೊದಲು ಯಾರೂ ಹಾಗೆ ಮಾಡಿದ್ದಿಲ್ಲ. ಮೊದಲೇ ಪರಿಚಯ ಬೇರೇ ಇಲ್ಲ, ಕೇಳುವ ವಿಷಯ ತಮ್ಮಲ್ಲಿರುವ ತಮ್ಮಕಂಪನಿಯ ಕೆಲವು ಶೇರುಗಳನ್ನು ಮಾರಲು ತಯಾರಿದ್ದೀರಾ ಎಂಬುದು ! ಮಧು ಬೇಕಾದ ಶೇರುಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸು ಪಡೆದುಬಿಟ್ಟ!

ಮಾರುಕಟ್ಟೆಯಲ್ಲಿ ಅತ್ಯಂತ ಪರಿಶ್ರಮದಿಂದ ತನ್ನ ಕೆಲಸದಲ್ಲಿ ನಿರತನಾಗುವ ಮಧುವಿಗೆಗೋ ಗೆಟರ್‍’ ಎನ್ನುವ ಅನ್ವರ್ಥಕವಿದೆ. ಪ್ರಮುಖ ಕಂಪನಿಗಳ ಮುಖ್ಯ ವ್ಯಕ್ತಿಗಳನ್ನು ಮತ್ತು ನಿರ್ದೇಶಕರುಗಳನ್ನು ಭೇಟಿಮಾಡಲು ಅವರುಗಳು ಪ್ರಯಾಣಿಸುವ ವರ್ಷದ ವೇಳಾಪಟ್ಟಿಯನ್ನು ಹೇಗಾದರೂ ಪಡೆದುಕೊಂಡು ಮೂಲಕ ಅವರ ಬೆನ್ನು ಹತ್ತಿ ಅಲ್ಲಿ ಭೇಟಿಯಾಗುತ್ತಿದ್ದ. ಇದೇ ರೀತಿ ಒಮ್ಮೆ ಡಿವಿಸ್ ಫಾರ್ಮಾಸ್ಯೂಟಿಕಲ್ಸ್ ನಿರ್ದೇಶಕರನ್ನು ಭೇಟಿಯಾಗಲು ಅಮೇರಿಕಾಗೆ ಅವರು ಹೋಗುವ ಸುದ್ದಿ ತಿಳಿದು ತಾನೂ ವಿಮಾನ ಹತ್ತಿ ಅಲ್ಲಿಗೇ ತೆರಳಿ ಅಲ್ಲೇ ಭೇಟಿಯಾಗಿ ತನ್ನ ಕೆಲಸದ ಬಗ್ಗೆ ಮಾತನಾಡಿದ್ದ! ಸದಾ ಒಂದಿಲ್ಲೊಂದು ಇಂತಹ ಮಾತುಕತೆಯಲ್ಲೇ ತೊಡಗಿಕೊಂಡು ಮಾರುಕಟ್ಟೆಯಲ್ಲಿ ತಾನು ನಿರ್ವಹಿಸುವ ಕಂಪನಿಯ ವಹಿವಾಟು ಸರಾಗವಾಗಿ ಮುಂಚೂಣಿಯಲ್ಲಿರುವಂತೇ ನೋಡಿಕೊಳ್ಳುವಲ್ಲಿ ಮಧು ಸಫಲನಾಗಿದ್ದಾನೆ.

ಬರುವ ೨೦೧೨ರ ಬಗ್ಗೆ ಕೇಳಿದಾಗ ಆತನ ಮನದಲ್ಲಿ ಸಾಕಷ್ಟು ತಯಾರಿ ಈಗಲೇ ನಡೆದಿದೆ. ಈಗಿನ ಹೊಸ ಕಛೇರಿ ಸರಿಸುಮಾರು ,೦೦೦ ಚದರಡಿಗಳಷ್ಟು ದೊಡ್ಡದಾಗಿದೆ. ಮಧು ಜೊತೆಗೆ ಇನ್ನೂ ನಾಲ್ವರು ಅಲ್ಲಿ ಕೆಲಸಮಾಡುತ್ತಾರೆ. ಎಲ್ಲರೂ ಅವರವರ ಕ್ಷೇತ್ರಗಳಲ್ಲಿ ನಿಪುಣರೇ ಆಗಿದ್ದಾರೆ. ಮಾರುಕಟ್ಟೆಯಲ್ಲಿಕ್ರೂಡ್ಜಾಗತಿಕ ಮಾರುಕಟ್ಟೆಯ ಬಹುಪಾಲು ತೊಡಗಿಸುವಿಕೆಯನ್ನು ನಿರ್ಧರಿಸುವುದರಿಂದ ಒಬ್ಬರನ್ನು ಕ್ರೂಡ್ಬಗ್ಗೆ ಸೂಕ್ಷ್ಮ ಗಮನವಿಡಲು ಹೇಳಿದ್ದಾನೆ. ಇನ್ನುಳಿದಂತೇ ಹೆಲ್ತ್ಕೇರ್ [ಆರೋಗ್ಯ] ಮತ್ತು ಎಜುಕೇಶನ್ [ವಿದ್ಯೆ] ಎರಡು ರಂಗಗಳಲ್ಲಿ ಆತ ಕಣ್ಣಿರಿಸಿದ್ದಾನೆ. ಸದ್ಯಕ್ಕೆ ಹಲವು ಕಂಪನಿಗಳು ರಂಗಗಳಲ್ಲಿ ತೊಡಗಿಕೊಂಡಿಲ್ಲ. ಯಾವಾಗ ವಿದ್ಯಾರಂಗ ಸರಕಾರೀ ಸ್ವಾಮ್ಯದಿಂದ ಹೊರದೂಡಲ್ಪಟ್ಟು ಖಾಸಗಿಯವರಿಗೆ ಅವಕಾಶ ನೀಡಲಾಗುತ್ತದೋ ಆಗ ಇಂದು ದೂರಸಂಪರ್ಕ ಮತ್ತು ಅಂತರ್ಜಾಲ, ಪೆಟ್ರೋಕೆಮಿಕಲ್ ರಿಫೈನರಿಗಳ ವ್ಯವಹಾರದಲ್ಲಿ ನಡೆದಂತೇ ಆದಂತೇ ಮಹತ್ತರ ಬದಲಾವಣೆ ಸಾಧ್ಯ ಎಂಬುದು ಮಧುವಿನ ಅಂಬೋಣ.

ಏನೂ ಗೊತ್ತಿಲ್ಲದ ನಗಣ್ಯ ವ್ಯಕ್ತಿಯೊಬ್ಬ ಸಾಧನೆಮಾಡಿ ದೇಶವೇ ಬೆರಳುಮಾಡಿ ತೋರಿಸುವ ಎತ್ತರಕ್ಕೆ ಏರಿದಾಗ ವ್ಯಕ್ತಿಯ ಸಾಧನೆ ಸಾಧನಾಪಥವನ್ನು ತುಳಿಯಬಯಸುವವರಿಗೆ ಆದರ್ಶವಾಗುತ್ತದೆ. ಅದೂ ಆರ್ಥಿಕತೆ ಮಾನವ ಜೀವನದ ಅತೀ ಪ್ರಮುಖ ಅಂಗ. ಯಾವುದೇ ವ್ಯಕ್ತಿಯನ್ನೋ ಸಂಸ್ಥೆಯನ್ನೋ ಇಂದು ನಾವು ಗಣಿಸುವುದು ವ್ಯಕ್ತಿಯ/ಸಂಸ್ಥೆಯ ಆದಾಯ, ವ್ಯವಹಾರ, ಆಸ್ತಿ ಇವುಗಳ ಮೇಲೆ. ಹೀಗಾಗಿ ದೇಶದಲ್ಲೇ ದೊಡ್ಡ ಕಂಪನಿಗಳಲ್ಲಿ ಒಂದಾದ ರಿಲಾಯನ್ಸ್ ಗ್ರೂಪ್ ಸಂಸ್ಥೆಯೊಂದರ ಆರ್ಥಿಕ ವ್ಯವಹಾರಗಳ ನಿರ್ದೇಶಕನಾಗಿ ಮಧು ಏರಿದ ಎತ್ತರ ನಿಜಕ್ಕೂ ಶ್ಲಾಘನೀಯ. ನಾವು ಹಲವು ಪುಸ್ತಕಗಳನ್ನು ಓದುತ್ತೇವೆ, ಹಲವು ಸಿರಿವಂತರ ಕಥೆಗಳನ್ನು ಕೇಳುತ್ತೇವೆ. ತಿಪ್ಪೆ ಎತ್ತುವ ಹುಡುಗ ಅತ್ಯಂತ ಶ್ರೀಮಂತನಾದ ಘಟನೆಯ ಥರದ ಸಂಗತಿಗಳು ನಮ್ಮೆದುರು ಕಾಣಸಿಗುತ್ತವೆ. ಶಾಲೆಯಲ್ಲಿ ಅನುತ್ತೀರ್ಣನಾದ ಬಿಲ್ ಗೇಟ್ಸ್ ತಾನುಮೈಕ್ರೋ ಸಾಫ್ಟ್ಕಟ್ಟಿದ; ಬೆಳೆದ. ಅಪ್ರತಿಮ ಸಾಹಸಿಯಾದ ರಿಚರ್ಡ್ ಬ್ರಾನ್ಸನ್ವರ್ಜಿನ್ಎಂಬ ಬ್ರಾಂಡನ್ನು ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನದಲ್ಲಿ ನಿಲ್ಲಿಸಿದ; ಜನಸಾಮಾನ್ಯರು ಎಂದೂ ಮರೆಯಲಾಗದಂತಹ ತನ್ನ ಹಲವು ದುಸ್ಸಾಹಸಗಳಿಂದ ಸಾಧನೆಗೈದಿದ್ದಾನೆ, ಹೆಸರುವಾಸಿಯಾಗಿದ್ದಾನೆ. ಜೀವನದಲ್ಲಿ ಸಾಹಸ ಬೇಕು. ಸಾಹಸವಿಲ್ಲದ ಜೀವನ ಉಪ್ಪಿಲ್ಲದ ಊಟದಂತೇ. ಆದರೆ ಸಾಹಸವನ್ನು ನಡೆಸುವಾಗ ಅದನ್ನು ಯಶಸ್ವಿಯಾಗಿ ನಡೆಸುವ ಯಾ ಗೆಲ್ಲುವ ಚಿತ್ರಣ ನಮ್ಮ ಮನದಲ್ಲಿ ಮೊದಲೇ ಮೂಡಿರಬೇಕು. ಹೇಗೆ ಮೂರ್ತಿಯ ಸ್ವರೂಪ ಶಿಲ್ಪಿಯ ಮನದಲ್ಲಿ ಮೊದಲೇ ಚಿತ್ರಿತವಾಗುವುದೋ, ಹೇಗೆ ರಾಗದ ಲಯಬದ್ಧ ಗತಿ ಸಂಗೀತಗಾರನ ಮನದಲ್ಲಿ ಮೊದಲೇ ಆವಿರ್ಭವಿಸುವುದೋ, ಹೇಗೆ ವಿಜ್ಞಾನಿಯ ಮನದಂಗಳದಲ್ಲಿ ಕ್ಷಿಪಣಿ ಮೊದಲೇ ಹಾರಿ ಕಕ್ಷೆಗೆ ಸೇರಿರುವುದೋ ಹಾಗೇ ನಾವು ಕೈಗೊಳ್ಳುವ ಸಾಹಸದ ಪಶ್ಚಾತ್ ಸಿಗುವ ಯಶಸ್ಸು ನಮ್ಮ ಮನದಲ್ಲಿ ಮೊದಲೇ ನಿಖರವಾಗಿ ಚಿತ್ರಿತವಾಗಿರಬೇಕು. ಕನಸು ಸಾಹಸ ನಮ್ಮ ಯುವಪೀಳಿಗೆಯ ಎಲ್ಲರದಾಗಲಿ, ಎಲ್ಲರೂ ಹಲವು ಮಾರ್ಗಗಳಲ್ಲಿ ಸಾಧನೆಮಾಡಲಿ ಎಂದು ಹಾರೈಸುತ್ತೇನೆ.

Wednesday, June 1, 2011

ಉರಿಮೂತ್ರದ ಮಹಿಮೆ!



ಉರಿಮೂತ್ರದ ಮಹಿಮೆ!

ಕ್ಷಮಿಸಿ ಉರಿಮೂತ್ರವಾದಾಗ ಬರೆಯ ಹೊರಟೆ
ಬಂದಿದ್ದು ಒಂದೊಂದೇ ಹನಿ ! ಅದೂ ಉರಿಯುತ್ತಾ ಉರಿಸುತ್ತಾ
ಏನೂ ಮಾಡಗೊಡದ ಸ್ಥಿತಿಗೆ ತಳ್ಳುವಂತೇ

ಆಗೊಮ್ಮೆ ನೋವಲ್ಲೂ ದೇಶದ ನಕಾಶೆಯ ನೆನಪಾಗಿ
ನಡುವೆ ಕಾವೇರಿಯ ಹರವು ಹರಿವೂ ನೆರವಾಗಿ
ಕಂಡೆ ತಮಿಳುರಾಜ್ಯವ ಬಿರುಬೇಸಿಗೆಯಲ್ಲಿ ಬತ್ತಿಹೋಗಿ
ನನ್ನಂತೇ ಅಲ್ಲಿ ಉಂಟುಮಾಡಿರಬಹುದೇ ಹಲವರಿಗೆ ಉರಿಮೂತ್ರವ ?

ಕತ್ತುಮೇಲೆತ್ತಿದರೆ ರಾಜಸ್ಥಾನದಿ ಕಣ್ಣು
ಎಡಕ್ಕೆ ಚಲಿಸಿದರೆ ಆಂಧ್ರದಲ್ಲೂ ಅದೇ ಹುಣ್ಣು!
ಗುಜರಾತಿನಲ್ಲೂ ಬಹುತೇಕ ನನ್ನ ಪಂಗಡವೇ !
ನೀರಿಲ್ಲದೂರಿನಲಿ ದೂರುವುದು ಯಾರಲ್ಲಿ ?
ಮತ್ತೆ ಭಗೀರಥ ಹುಟ್ಟಿಬರನೇ ?

ಗಾದೆ ಬದಲಾಗಿದೆ!
ಸಮುದ್ರದ ನಂಟು ಸಿಹಿನೀರಿಗೆ ಬಡತನ !
ನಗಬೇಕಾಗಿದೆ ಮಾನವನ ತಾಕತ್ತಿಗೆ
ಕೋಟಿ ಕೋಟಿ ಮುಂಗಡಪತ್ರ ಘೋಷಿಸಿದರೂ
ನೀರನ್ನು ಕೊಂಡು ತರಲಾಗದ ವಿಪತ್ತಿಗೆ !

ಮುಂಗಾರು ಬಂದಿದೆ ಎಂದು ಕೇಳಿದೆ
ಅದಾಗಲೇ ನೋವಿರುವ ಮೂತ್ರನಾಳದಲ್ಲೋ
ಕೋಶದಲ್ಲೋ ತಂಪಿನ ಅನುಭವ !
ಸುರಿಯಲಿ ಮುಂಗಾರು ಭೋರ್ಗರೆದು ಹದದಲಿ
ಹರಿಯಲಿ ನದಿ-ಕೊಳ್ಳ ಸರೋವರಗಳು ತುಂಬಿತುಳುಕಲಿ
ತಣಿಯಲಿ ದಾಹಗೊಂಡ ನೆಲ
ತಣಿಸಲಿ ಜನಗಳ ಮನ-ಹೊಲ
ನೀಗಲಿ ಉರಿಮೂತ್ರದಿ ಹನಿಯುವ ಉರಿಯುರಿ ಜಲ

Sunday, May 29, 2011

ದೊಡ್ಡಮ್ಮ ಬರಲೀ..... ಹೋಯ್ ದೊಡ್ಡಮ್ಮ ಬರಲೀ.....





ದೊಡ್ಡಮ್ಮ ಬರಲೀ..... ಹೋಯ್ ದೊಡ್ಡಮ್ಮ ಬರಲೀ.....


ಬೇಸಿಗೆಯನ್ನು ಹಳ್ಳಿಗಳಲ್ಲಿ ಕಳೆಯುವುದೇ ಒಂದು ಮಜಾ. ಅಲ್ಲಿನ ಹಲವು ಸಂಗತಿಗಳು ನೆನಪಾದಾಗೆಲ್ಲಾ ನಗುತರಿಸುವುದರಜೊತೆಜೊತೆಗೇ ಹಳ್ಳಿಯ ಜನರ ನಿಸ್ಪೃಹ ಮನೋಭಾವವನ್ನೂ ಮುಗ್ಧತೆಯನ್ನೂ ಮನಸ್ಸಿನ ಕೆರೆಯಾಳದಿಂದ ಹೊರಗೆಳೆದುತರುತ್ತವೆ. ಅಲ್ಲಿ ಹಲವಾರು ವಿಶಿಷ್ಟ ಸಂಗತಿಗಳೂ ಘಟನೆಗಳೂ ಮತ್ತೆ ಪುನರ್ಸೃಷ್ಟಿಗೊಂಡು ಆಯಾ ವ್ಯಕ್ತಿಗಳು ಆಯಾಯಮೂಲರೂಪದಲ್ಲೇ ಹಾಯಾಗಿ ಮಾತನಾಡಸಿಗುತ್ತಾರೆ.

ಕಾಡ್ಯನ ಕುಣಿತದ ನಂತರ ನಮ್ಮ ಹಳ್ಳಿ ಬೇಸಿಗೆಯನ್ನು ಕರೆದು ಚಿಗಿತುಕೊಳ್ಳುತ್ತಿತ್ತು. ಹಾಂ .. ಕಾಡ್ಯನ ಕುಣಿತವೆಂದರೆ ಇದು ಬರಿದೇನಾಕಾರು ಜನ ಕೂಲಿ ಕೆಲಸದವರು ಚಳಿಗಾಲ ಮುಗಿಯುವ ಹಂತದಲ್ಲಿ ಗುಮಟೆ ಬಾರಿಸಿಕೊಂಡು ಕುಣಿಯುವುದು. ಅವರಿಗೆತಿಳಿದಿರುವ ಯಾವುದೋ ಒಂದೆರಡು ಜಾನಪದ ಗೀತೆಗಳನ್ನು ಹಾಡಿಕೊಂಡು ಕೆಲವರು ಹೆಜ್ಜೆಹಾಕಿದರೆ ಒಬ್ಬಾತ ಗುಮಟೆ[ವಿಶಿಷ್ಟಆಕಾರದ ಮಡಿಕೆಯ ಬಾಯಿಗೆ ಉಡದ ಚರ್ಮವನ್ನು ಕಟ್ಟಿ ತಯಾರಿಸಿದ ಒಂದು ವಾದ್ಯ]ಬಾರಿಸುತ್ತಿದ್ದ. ಆಗಾಗ ಅಲ್ಲಲ್ಲಿ ಸಿನಿಮಾಹಾಡುಗಳ ತುಣುಕುಗಳನ್ನೂ ತಮಾಷೆಗೆ ಸೇರಿಸಿ ಹಾಡುವ ಪ್ರಾಯದ ಹುಡುಗರ ಗುಂಪೂ ಇರುತ್ತಿತ್ತು. ತಲೆಗೆ ಟವೆಲ್ ಸುತ್ತಿಕೊಂಡುಕುಣಿದು ದಣಿದ ಹುಡುಗರು ಅಕ್ಕಿ, ಭತ್ತ, ತೆಂಗಿನಕಾಯಿ, ಕಾಂಚಾಣ ವಗೈರೆ ಕೊಡುವುದನ್ನು ತೆಗೆದುಕೊಂಡು ಹೋಗುತ್ತಿದ್ದರು. ಇದುಮನೆಮನೆಗೂ ಸಾಗಿ ನಡೆಸುವ ಸಂತಸದ ಕುಣಿತವಾಗಿತ್ತು.

ಬಯಲು ಸೀಮೆಯ ಪ್ರಭಾವದಿಂದ ಆಗಾಗ ಸಂಗ್ಯಾ ಬಾಳ್ಯಾ ಆಡುವ ಹರಿಜನರಿದ್ದರು. ಅದು ಎಲ್ಲರ ಮನೆಗಳೆದುರು ಆಡುವಆಟವಾಗಿರಲಿಲ್ಲ. ಹರಿಜನರು ಅವರ ಹಟ್ಟಿಯ ಗೊತ್ತಾದ ಜಾಗವೊಂದರಲ್ಲಿ ಸಣ್ಣ ವೇದಿಕೆ ನಿರ್ಮಿಸಿ ಪೂರ್ಣರಾತ್ರಿ ಚಿಮಣಿಎಣ್ಣೆಯಗ್ಯಾಸ್ ಲೈಟ್ ಬೆಳಕಿನಲ್ಲಿ ಸಂಗ್ಯಾಬಾಳ್ಯಾ ನಡೆಸುತ್ತಿದ್ದರು. ಅಲ್ಲಿ ಎಷ್ಟು ಜನರಿಗೆ ಅದರ ಕಥೆ ಗೊತ್ತಿತ್ತು ಎನ್ನುವುದು ನಮಗಂತೂಅರಿವಿಗಿಲ್ಲ. ಅಸಲಿಗೆ ಸಂಗ್ಯಾಬಾಳ್ಯಾ ಕಥೆ ಸಿನಿಮಾ ಆದಾಗಲೇ ನಮಗೂ ಸರಿಯಾಗಿ ಅರ್ಥವಾಗಿದ್ದು.

" ಇದು ಸಂಗ್ಯನ ಮುಂಡಾಸು ಅಲ್ವನೇ ಕಣೆ ಗಂಗಣೆ .........
ಇದು ಸಂಗ್ಯನ ಮುಂಡಾಸು ಅಲ್ವನೇ ಕಣೆ ಗಂಗಣೆ .........
ಇದು ಸಂಗ್ಯನ ಮುಂಡಾಸು ಅಲ್ವನೇ ಕಣೆ ಗಂಗಣೆ .........
..................................................."

ದೂರದಲ್ಲಿ ನಿಂತು ನಾವು ನೋಡಿದರೆ ಆಗಾಗ ಅಲ್ಪಸ್ವಲ್ಪ ಇಂತಹ ಹಾಡುಗಳು ಕೇಳುತ್ತಿದ್ದವು..ಆದರೂ ಅರ್ಥಮತ್ರಅಸ್ಪಷ್ಟವಾಗಿರುತ್ತಿತ್ತು. ಏನೇ ಇರಲಿ ಬೆಟ್ಟದ ತಳದಲ್ಲಿ ಅವರು ಸ್ವಸಂತೋಷಕ್ಕೆ ನಡೆಸುವ ಕಾರ್ಯಕ್ರಮ ಅದಾಗಿದ್ದುದರಿಂದನಮಗೆಲ್ಲಾ ಅರ್ಥವಾಯ್ತೋ ಬಿಡ್ತೋ ಅದು ಮುಖ್ಯವಲ್ಲ. ಮಜವೆಂದರೆ ಅಂತಹ ಸಂದರ್ಭದಲ್ಲಿ ತಮ್ಮ ಬದುಕಿನ ನೋವುದುಃಖ-ದುಮ್ಮಾನಗಳನ್ನು ಅವರೆಲ್ಲಾ ಪರಸ್ಪರ ಹಂಚಿಕೊಂಡು ಮಾತನಾಡುತ್ತಾ ಕಳೆಯುವ ಆ ರಾತ್ರಿಗಳಲ್ಲಿ ಅವರೇತಯಾರಿಸಿಕೊಂಡ ಸಾರಾಯಿ ಸಮಾರಾಧನೆಯೂ ನಡೆಯುತ್ತಿತ್ತು. ಕುಡಿದು ಚಿತ್ತಾದ ಕೆಲವು ಜನ ತಮ್ಮ ಸರದಿ ಬಂದಾಗ ಏನೇನೋಹಾಡುವುದೂ ಇರುತ್ತಿತ್ತು. ಬೆಳ್ಯನ ಗಣಪ, ಜಟ್ಟಿ, ಕ್ಯಾಸ, ಬಕ್ಕ, ನಾಗು, ಸಂಕ್ರು, ಮಂಜು, ಸಾತ ಇವೇ ಮೊದಲಾದ ಹರಿಜನಅತಿರಥ ಮಹಾರಥಿಗಳು ಸಂಗ್ಯಾಬಾಳ್ಯಾದಲ್ಲಿ ಹಾಡಿ ಕುಣಿಯುವುದನ್ನು ಅವರ ಹೆಂಗಸರು ಕಣ್ಣೆವೆಮುಚ್ಚದೇ ನೋಡುವಾಗಅವರುಗಳಿಗೆ ಅದಕ್ಕಿಂತಾ ಬೇರೇ ಮಾನ ಸನ್ಮಾನ ಬೇಕಾಗಿರಲಿಲ್ಲ. ವಾಡಿಕೆಯಲ್ಲಿ " ಸಿಂಗಿಬಾಳ " ಎಂದು ಅವರದನ್ನುಹೆಸರಿಸುತ್ತಿದ್ದರು. ಸಿಂಗಿಬಾಳದ ಮರುದಿನ ಎಲ್ಲರಿಗೂ ಗಾಢನಿದ್ರೆ, ವಿಶ್ರಾಂತಿ. ಆ ದಿನ ಎಲ್ಲೂ ಕೆಲಸಕ್ಕೆ ಹೋಗುವುದುಸಾಧ್ಯವಾಗುತ್ತಿರಲಿಲ್ಲ.

ಇನ್ನು ಹೋಳಿ ಹುಣ್ಣಿವೆಗೂ ಮುಂಚೆ ೧೦-೧೨ ದಿನಗಳಕಾಲ ಸುಗ್ಗಿ ಕುಣಿತ ನಡೆಯುತ್ತಿತ್ತು. ಇದಕ್ಕೂ ಪೂರ್ವಭಾವಿಯಾಗಿತಿಂಗಳುಗಟ್ಟಲೆ ಅವರು ಆ ಕುರಿತು ದಿನಾ ಸಂಜೆ ತಾಲೀಮು ನಡೆಸುತ್ತಿದ್ದರು. ಹರೆಯದ ಹುಡುಗರು ನಾ ಮುಂದು ತಾ ಮುಂದುಎಂದು ಸುಗ್ಗಿ ಕಟ್ಟಲು ಹವಣಿಸುತ್ತಿದ್ದರು. ಹರಿಜನರು ಮತ್ತು ನಾಮಧಾರಿ ಜನಾಂಗದವರೂ ಕೂಡ ಸುಗ್ಗಿ ಕುಣಿತದಲ್ಲಿಪಾಲ್ಗೊಳ್ಳುತ್ತಿದ್ದರು. ಮರದಲ್ಲಿ ಸಿಗುವ ಬೆಂಡಿನ ಸಹಾಯದಿಂದ ಗಿಳಿಗಳು, ಹಕ್ಕಿಗಳು ಮತ್ತು ಇನ್ನಿತರ ಕೆಲವು ಚಿಕ್ಕ ಆಕೃತಿಗಳುಳ್ಳತುರಾಯಿ ತಯಾರಾಗುತ್ತಿತ್ತು. ಗುಡಿಗಾರ ಜನಾಂಗ ಮುಂಗಡ ತೆಗೆದುಕೊಂಡು ಇದನ್ನು ತಯಾರಿಸಿ ಮಾರುತ್ತಿತ್ತು. ಬಣ್ಣ ಬಣ್ಣದಬೇಡಗೆಗಳನ್ನೂ ಚಿತ್ತಾರಗಳನ್ನೂ ಹೊದಿಸಿದ ಕಡ್ಡಿಗಳ ಪುಂಜವನ್ನು ತುರಾಯಿ ಎನ್ನುತ್ತಿದ್ದರು. ಮುಂಡಾಸಿನಮೇಲೆ ಅದನ್ನು ಕಟ್ಟಿಹಿಂದಲೆ ಮಲ್ಲಿಗೆಯಂತಹ [ಬೆಂಡಿನಿಂದ ತಯಾರಿಸಿದ] ಹೂವುಗಳ ಮಾಲೆಗಳನ್ನು ಇಳಿಯಬಿಡುತ್ತಿದ್ದರು. ಬಿಳಿಯ ಪೈಜಾಮ ಮತ್ತುಹಳದಿ ಅಥವಾ ಬಿಳಿಯ ತುಂಬುತೋಳಂಗಿ ಧರಿಸಿ ಮದುಮಗನಿಗೆ ಶಲ್ಯವನ್ನು ಕತ್ತರೀ ಆಕಾರದಲ್ಲಿ ಹೊದಿಸಿದಂತೇ ಧರಿಸುತ್ತಿದ್ದರು. ಕಣ್ಣಿಗೆ ಕಾಡಿಗೆ ಮತ್ತು ಹಣೆಗೆ ಕೆಂಪು-ಹಳದಿ ನಾಮಗಳನ್ನು ಧರಿಸುತ್ತಿದ್ದರು. ಸಂಪೂರ್ಣ ತಯಾರಾಗಿ ನಿಂತ ಸುಗ್ಗಿ ವೇಷದಹುಡುಗನನ್ನು ಆ ಯಾ ಜನಾಂಗದ ಹರೆಯದ ಹುಡುಗಿಯರು ನೋಡಿ ಸಂಭ್ರಮಿಸುವಂತೇ ಕಾಣುತ್ತಿದ್ದರು. ಬಹುಶಃ ಹುಡುಗರಿಗೂಇದೇ ಒಂದು ಅನಿಸಿಕೆ ಒಡಲಾಳದಲ್ಲಿದ್ದು ಅವರು ಸುಗ್ಗಿ ಕಟ್ಟುವಲ್ಲಿ ಹಾತೊರೆಯುತ್ತಿದ್ದರೋ ಏನೋ.

ದೇವರ ಹಾಡುಗಳಲ್ಲದೇ ಜಾನಪದ ಹಾಡುಗಳೂ ಮತ್ತು ಕೆಲವು ಭಾವಗೀತೆಗಳಿಗೂ ಅವರು ತಾಳಹಾಕಿ ಕುಣಿಯುತ್ತಿದ್ದರು. ಸುಗ್ಗಿಕಟ್ಟಿದವರು ಕೋಲಾಟವನ್ನೂ ಆಡುತ್ತಿದ್ದರು. ಗುಮಟೆ, ಜಾಗಟೆ, ತಾಳ, ತಾಸ್ಮಾರು[ ಅಗಲದ ಚಂಡೆಯಂತಹ ಒಂದುಚರ್ಮವಾದ್ಯ] ಮೊದಲಾದ ವಾದ್ಯಗಳನ್ನು ಇಲ್ಲಿ ಬಳಸಲಾಗುತ್ತಿತ್ತು. ಸುಗ್ಗಿಮನೆ ಎಂದು ಅವರವರ ಮನೆಗಳಲ್ಲಿ ಒಂದು ಮನೆಯನ್ನುಆ ದಿನಗಳಲ್ಲಿ ಅದಕ್ಕೇ ಮೀಸಲಿಟ್ಟು ಸುಗ್ಗಿ ಕಟ್ಟಿದ ಜನರೆಲ್ಲಾ ಅಲ್ಲೇ ವೃತನಿಷ್ಠರಂತೇ ಇರುತ್ತಿದ್ದರು. ಬೆಳಿಗ್ಗೆ ೯ ಗಂಟೆಗೆ ಸಾಮೂಹಿಕತಿಂಡಿತಿಂದು ಮತ್ತು ಸುಗ್ಗಿಮನೆಯ ದೇವರಲ್ಲಿ ಪ್ರಾರ್ಥಿಸಿ ಹೊರಟರೆ ಊರು ಪರವೂರು ಅಂತ ಮನೆಮನೆಗೆ ತಿರುಗಿ ಕುಣಿಯುತ್ತಾಕಾಯಿ-ಹಣ ಪಡೆದು ತೆರಳುತ್ತಿದ್ದರು. ಹಂದಿ ಕುಣಿತ, ನವಿಲು ಕುಣಿತ, ಕಾಡುಪ್ರಾಣಿಗಳ ಕೂಗಿನ ಅನುಕರಣೆ ಇವೇ ಮೊದಲಾದಹಲವು ಉಪಜೋಡಣೆಗಳು ಇರುತ್ತಿದ್ದವು. ಆಗಾಗ ಚೆನ್ನಾಗಿ ಕುಣಿಯುವ ಎರಡು ಪಂಗಡಗಳ ನಡುವೆ ಸ್ಪರ್ಧೆಯೂ ಇರುತ್ತಿತ್ತು. ಮಕರಗುಮ್ಮ ಅಥವಾ ಮಕ್ಕಳಗುಮ್ಮ ಎನ್ನುವ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಮಾತುಬಾರದವರ ರೀತಿ ನಟಿಸುತ್ತಾ ಬಂದೂಕುಹಿಡಿಸು ಮಕ್ಕಳನ್ನು ಅಟ್ಟಿಸುವಂತೇ ಮಾಡುವುದು, ಕುಣಿತಬಾರದವರ ರೀತಿ ಹೇಗ್ಹೇಗೋ ಕುಣಿದು ಅಡ್ಡಾದಿಡ್ಡಿ ಓಡಾಡಿ ಜನರನ್ನುರಂಜಿಸುವುದು ಮಾಡುತ್ತಿದ್ದ. ಎಳೆಯ ಮಕ್ಕಳ ಕಣ್ಣು ಮಕರಗುಮ್ಮನ ಮೇಲೇ ನೆಟ್ಟಿರುತ್ತಿತ್ತು.

" ಮೋಹನ್ನ ಮುರಲೀ ವಾಲರೇ ಸಖಿ ಮೋಹನ್ನ ಮುರಲೀ ವಾಲರೆ....." ಏಕಕಾಲಕ್ಕೆ ಮಿಡಿಯುವ ಗುಮಟೆ, ತಾಳ, ಜಾಗಟೆ, ತಾಸ್ಮಾರುಗಳ ಹದವಾದ ಶಬ್ದಕ್ಕೆ ಕಾಲಿಗೆ ಕಟ್ಟಿದ ಗೆಜ್ಜೆಯ ಸದ್ದು ಮೇಳೈಸಿ ಇಡೀವಾತಾವರಣ ಸುಗ್ಗಿಯ ಹಿಗ್ಗಿನಿಂದತುಂಬಿಹೋಗುತ್ತಿತ್ತು. ಊರಜನ ಒಂದೆರಡು ಹಾಡುಗಳನ್ನು ಹೆಚ್ಚಿಗೆ ಕುಣಿಸಿ ಆಮೇಲೆ ಯಥಾಯೋಗ್ಯ ಪುರಸ್ಕಾರಗಳನ್ನುನೀಡುತ್ತಿದ್ದರು. ಕಲಸಿದ ಅವಲಕ್ಕಿ-ಬೆಲ್ಲ-ನೀರು, ಚಹ ಇತ್ಯಾದಿ ಉಪಚಾರವಗುತ್ತಿತ್ತು. ಮತ್ತೆ ಕುಣಿದ ಮನೆಗೆ ಮುಂದಿನ ವರುಷಬರುವುದಾಗಿ ಶುಭಕೋರಿ ಸುಗ್ಗಿ ಮುಂದಿನಮನೆಗೆ ಸಾಗುತ್ತಿತ್ತು. ಹಾದಿಯಲ್ಲಿ ಸಿಗುವ ದೇವಸ್ಥಾನಗಳ ಎದುರಲ್ಲಿ ಕನಿಷ್ಠ ೧೫-೨೦ನಿಮಿಷವಾದರೂ ಕುಣಿಯುತ್ತಾ ದೇವರನ್ನು ಸಂತೋಷಪಡಿಸುತ್ತಿದ್ದರು. ಹೋಳಿ ಹುಣ್ಣಿಮೆಯದಿನ ಸುಗ್ಗಿಮನೆಯಲ್ಲಿ ವಿಶೇಷಪೂಜೆಯಾಗಿ ಆ ರಾತ್ರಿ ಅಲ್ಲೇ ಎದುರಲ್ಲಿ ನಿಲ್ಲಿಸಿದ್ದ [ಬೇಡದ/ಉಪಯೋಗಿಸಿಬಿಟ್ಟ ಮರದ ವಸ್ತುಗಳು ಇತ್ಯಾದಿ ರಾಶಿಹಾಕಿ ಪೇರಿಸಿತಯಾರಿಸಿದ ಒಂದು ಆಕಾರವನ್ನು ಕಾಮನೆಂದು ಕರೆಯುತ್ತಿದ್ದರು]ಕಾಮನ ದಹನ ನಡೆಯುತ್ತಿತ್ತು. ಅಲ್ಲಿಗೆ ಆ ಸಲದ ಸುಗ್ಗಿಯಕುಣಿತದ ದಿನಗಳು ಮುಗಿದವು ಅಂತ ಲೆಕ್ಕ. ಬಂದ ಗಳಿಕೆಯನ್ನು ಎಲ್ಲರೂ ಹಂಚಿಕೊಂಡು, ಸಾಮೂಹಿಕವಾಗಿ ಒಂದು ಔತಣವನ್ನೂನಡೆಸಿ ಆಮೇಲೆ ತಂತಮ್ಮ ಮನೆಗಳಿಗೆ ತೆರಳುತ್ತಿದ್ದರು. ಬಳಸಿದ ಪರಿಕರಗಳು ಅವರವರ ಮನೆಗಳಲ್ಲಿ ಗೋಡೆಯಮೇಲೆ ಜಾಗಪಡೆದು ಅವರಿಗೆ ಸುಗ್ಗಿನ ಹಿಗ್ಗಿನ ಆನಂದವನ್ನು ತಂದುಕೊಡುತ್ತಿದ್ದವು.

ಕಾಮದಹನವಾದ ಮಾರನೇದಿನ ’ದುಮ್ಸಾಲೆ’ ಕಾರ್ಯಕ್ರಮ. ಮತ್ತೆ ಸುಗ್ಗಿ ಕಟ್ಟಿದ ಜನರೊಂದಿಗೆ ಸಹಕರಿಸಿದ ಕೆಲಜನಸೇರಿಕೊಂಡು ಮೃದಂಗ ತಾಳ ಬಡಿಯುತ್ತಾ ಮನೆಮನೆಗೆ ಬರುತ್ತಿದ್ದರು.

" ಕಾಮ್ನೋ ಭೀಮ್ನೋ ಕಾಮ್ನಸುಟ್ಟ ಬೆಳಗಾಗೆ ಕಾಯಿ-ಬೆಲ್ಲ ತಿನ್ಬೇಕೂ ದುಮ್ಸಾಲ್ಯೋ ....
ಕಾಯ್ ಕೊಡಿ-ದುಡ್ ಕೊಡಿ ದುಮ್ಸಾಲ್ಯೋ ......ವರ್ಸ್ಕೊಂದ್ ಹಬ್ಬ ದುಮ್ಸಾಲ್ಯೋ "

ಪ್ರತೀ ಮನೆಯಲ್ಲೂ ಕುಣಿದು ಮತ್ತೆ ಕಾಯಿ-ಹಣವನ್ನು ಪಡೆದು ತೆರಳುತ್ತಿದ್ದರು. ಅಲ್ಲಿಗೆ ಆ ವರ್ಷದ ಕುಣಿತದ ಹಬ್ಬಗಳುಮುಗಿದಹಾಗೇ.


ಬೇಸಿಗೆಯಲ್ಲಿ ಜಾತ್ರೆ, ವನಭೋಜನ ಅಂತ ದೇವರುಗಳೆಲ್ಲಾ ಹೊರಟುಬಿಡುತ್ತಿದ್ದವು. ದೇವರಲ್ಲಿ ಎರಡು ಗುಂಪು. ಕೆಲವು ಆಗಮಶಾಸ್ತ್ರ ರೀತ್ಯಾ ಪೂಜೆಗೊಳ್ಳುವ ಸಾತ್ವಿಕ ದೇವರುಗಳಾದರೆ ಕೆಲವು ಹಾಗೇ ಮನಸೋ ಇಚ್ಛೆ ಬೇಕುಬೇಕಾದ ಪೂಜೆಗೊಳ್ಳುವಉಗ್ರದೇವತೆಗಳು. ಈ ಉಗ್ರದೇವತೆಗಳು ಪಾರ್ವತಿಯ ಪ್ರತಿರೂಪಗಳಾಗಿದ್ದು ಅವುಗಳಿಗೆ ಅಲ್ಲಲ್ಲಿ ಕುರಿ-ಕೋಳಿಗಳ ಬಲಿಯೂನಡೆಯುತ್ತಿತ್ತು. ಸಾತ್ವಿಕ ದೇವರುಗಳಿಗೆ ಕುಂಬಳಕಾಯಿ-ಅನ್ನ-ತೆಂಗಿನಕಾಯಿ ಇತ್ಯಾದಿ ಸಾತ್ವಿಕಬಲಿ ಮತ್ತು ಸಾತ್ವಿಕಪೂಜೆಶಾಸ್ತ್ರೋಕ್ತವಾಗಿ ನಡೆಯುತ್ತಿತ್ತು. ಕೆಲವು ದೇವರುಗಳಿಗೆ ಹಲವಾರು ಊರುಗಳನ್ನು ಸುತ್ತುವ ಪರಿಪಾಟವಿತ್ತು. ಪಲ್ಲಕ್ಕಿಯಲ್ಲಿ ಪವಡಿಸಿಹೊರಟುಬಿಟ್ಟರೆ ತಿಂಗಳುಗಟ್ಟಲೆ ಅವು ಮತ್ತೆ ಗುಡಿಗೆ ಮರಳುತ್ತಿರಲಿಲ್ಲ. ಸಾವಿರಾರು ಪೂಜೆಗಳು ನಡೆದು ಆಮೇಲೆ ಮರಳಿ ಆಯಾದೇವಸ್ಥಾನಗಳಿಗೆ ಮರಳುವುದು ಅಲ್ಲಿನ ರಿವಾಜು. ಅಂತಹ ದೇವರುಗಳ ಪೈಕಿ ಗೇರುಸೊಪ್ಪೆಯ ಹನುಮಂತದೇವರು, ಚಂದಾವರಹನುಮಂತದೇವರು ಸಾತ್ವಿಕ ರೂಪದ ದೇವರಾದರೆ ಜಲವಳ್ ಕರ್ಕಿ ಅಮ್ಮನವರು ಉಗ್ರರೂಪದ ದೇವರು. ತಾಮಸಾಹಾರಭಕ್ಷಿಸುವ ಉಗ್ರರೂಪದ ದೇವರುಗಳನ್ನು ಬ್ರಾಹ್ಮಣ ಅರ್ಚಕರು ನಿತ್ಯವೂ ಆರಾಧಿಸುವ ಅಭ್ಯಾಸವಿರುವುದಿಲ್ಲ. ಆ ದೇವರುಗಳನ್ನುಹೆಚ್ಚಾಗಿ ಮಾಂಸಾಹಾರ ಭುಂಜಿಸುವ ಜನರುಗಳಲ್ಲೇ ಕೆಲವರು ನಿತ್ಯವೂ ಪೂಜಿಸುತ್ತಾರೆ. ಆದರೆ ಅಲ್ಲಲ್ಲಿ ವಿಶೇಷ ಪೂಜೆಗೆ ಬ್ರಾಹ್ಮಣಅರ್ಚಕರನ್ನು ಕರೆಯುವ ಪದ್ಧತಿ ಇತ್ತು; ಈಗಲೂ ಇದೆ.

ನಮ್ಮೂರ ಗದ್ದೆಯಲ್ಲಿ ಒಂದು ಜಾಗವನ್ನು ’ಅಮ್ಮ ಕೂರುವ ಕೊಡಗಿ’ ಎಂದೇ ಖಾತೆಗಳಲ್ಲಿ ನಮೂದಿಸಿದ್ದಾರೆ. ಗದ್ದೆಯ ಪೈರನ್ನೆಲ್ಲಾಕತ್ತರಿಸಿ ಮುಗಿದ ಕಾಲೀ ಗದ್ದೆಯನ್ನು ಸಮತಟ್ಟುಮಾಡಿ ಅಲ್ಲಿ ಚಪ್ಪರ ನಿರ್ಮಿಸಿ, ತಳಿರುತೋರಣಗಳಿಂದ ಅಲಂಕರಿಸಿಮಂಚವೊಂದನ್ನು ಇರಿಸಿ ದೀಪಮುಡಿಸಿರುತ್ತಾರೆ. ಅಲ್ಲಿಗೆ ಆಗಮಿಸುವ ಜಲವಳ್ ಕರ್ಕಿ ಅಮ್ಮನವರ ಪಲ್ಲಕ್ಕಿಯನ್ನು ಮಂಚದಮೇಲೆಕೂಡ್ರಿಸಿ ಮತ್ತೆ ಮೇಲಿನಿಂದ ಅಲಂಕರಿಸುತ್ತಾರೆ. ಬಂದ ಅಮ್ಮನಿಗೆ ಎಲ್ಲರೂ ವರ್ಗಿಣಿಹಾಕಿ ಊರ ಹತ್ತುಸಮಸ್ತರ ಪೂಜೆ ಬಹಳಗೌರವಯುತವಾಗಿ ನಡೆಯುತ್ತದೆ. ಹತ್ತು ಸಮಸ್ತರ ಪೂಒಜೆಯಲ್ಲಿ ಬ್ರಾಹ್ಮಣರೂ ಸೇರಿರುವುದರಿಂದ ಅವತ್ತು ಕುರಿ-ಕೋಳಿಗಳ ಬಲಿನಿಷಿದ್ಧ. ಅಮ್ಮನಿಗೆ ಸಾತ್ವಿಕ ಪೂಜೆ ನಡೆಯುತ್ತದೆ. ಅಡಿಕೆ ಶಿಂಗಾರ[ಹೊಂಬಾಳೆ]ಗಳಿಂದಲೂ ಬಗೆಬಗೆಯ ದಾಸವಾಳಗಳಿಂದಲೂಇನ್ನಿತರ ಘಮಘಮಿಸುವ ಮಲ್ಲಿಗೆ,ಜಾಜಿ, ಕರವೀರ, ಪುನ್ನಾಗ, ಇತ್ಯೇತ್ಯಾದಿ ಎಲ್ಲಾ ಬಗೆಯ ಹೂವುಗಳನ್ನು ಅಮ್ಮನಿಗೆ ಭಕ್ತಿಯಿಂದಅಲಂಕರಿಸುತ್ತಿದ್ದರು. ಎಳೆನೀರು, ಬಾಳೆಗೊನೆ, ಹಲಸಿನಹಣ್ಣು, ಅನಾನಸು, ಮಾವಿನಹಣ್ಣು, ಬಾಳೇಹಣ್ಣು ಇತ್ಯಾದಿ ಹಲವು ಹಣ್ಣು-ಕಾಯಿಗಳ ರಾಶಿರಾಶಿ ನೈವೇದ್ಯ ಇರುತ್ತಿತು. ಬ್ರಾಹ್ಮಣ ಅರ್ಚಕರೊಬ್ಬರು ಪಂಚಕಜ್ಜಾಯವನ್ನೂ ಮಾಡಿ ತರುತ್ತಿದ್ದರು. ಆದರೆ ಅಲ್ಲಿನಪೂಜೆ ಮಾತ್ರ ’ಗುನಗ’ ಎನ್ನುವ ಜನಾಂಗದಿಂದಲೇ ನಡೆಯುತ್ತಿತ್ತು.

ಗದ್ದೆಯ ಬದುವಿನ ಪಕ್ಕದಲ್ಲಿರುವ ನೀರಗುಂಡಿಯಲ್ಲಿ ಮಿಂದುಬರುವ ಗುನಗರು ಕೆಂಪು ಮಡಿಯುಟ್ಟು ಸಾಲಂಕೃತ ಅಮ್ಮನನ್ನು ಮತ್ತೆಹೊಸದಾಗಿ ಪೂಜಿಸುತ್ತಿದ್ದರು. ಧೂಪ,ದೀಪಗಳು, ಮಂಗಳವಾದ್ಯಗಳು, ಶಂಖ-ಜಗಟೆಗಳು, ಥರಥರದ ಮಂಗಳಾರತಿ, ನೈವೇದ್ಯ, ಕಾಣಿಕೆ ಎಲ್ಲವೂ ಸಮರ್ಪಣೆಯಾದಮೇಲೆ ಅಮ್ಮನಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಆಗ ಪೂಜಾರಿಯಮೇಲೆ ಅಮ್ಮ ಬಂದು ಎಲ್ಲರಿಗೂಅಭಯನೀಡುವ ಕಾರ್ಯಕ್ರಮ ನಡೆಯುತ್ತಿತ್ತು. ಸೇರಿದ ಹತ್ತುಸಮಸ್ತರು ಭಯಭಕ್ತಿಗಳಿಂದ ಅಮ್ಮನ ದರ್ಶನಾಕಾಂಕ್ಷಿಗಳಾಗಿ ಬಿಟ್ಟಕಣ್ಣು ಬಿಟ್ಟಹಾಗೇ ನೋಡುತ್ತಿದ್ದರು. ಮುಖ್ಯ ಪೂಜಾರಿಯ ಮೈಮೇಲೆ ಬಂದ ಅಮ್ಮ ಪೂಜೆಯಿಂದ ಸಂತೃಪ್ತಳಾದಳೋ ಇಲ್ಲವೋಎಂಬುದು ಪೂಜಾರಿಯ ಬಾಯಿಂದ ಒಕ್ಕಣೆಯಾಗುತ್ತಿತ್ತು. ಮೈಮೇಲೆ ಬಂದ ಅಮನಲ್ಲಿ ಮೊದಲು ಬರುವವಳು ಸಣ್ಣಮ್ಮನಂತೆ! ಸಣ್ಣಮ ತೀರಾ ತಕರಾರೀ ಕುಳವಲ್ಲ. ಆಕೆ ಪರದೇಶಿ; ಕೊಟ್ಟ ಪೂಜೆ ಹೇಗಿದ್ದರೂ ಒಪ್ಪಿ ಕ್ಷಮಿಸಿ ನಡೆಯುವವಳು. ನಂತರ ಬರುವದೊಡ್ಡಮ್ಮ ಮಾತ್ರ ಬಹಳ ಹಠಮಾರಿ. ಎಷ್ಟೆಂದರೂ ಮಾರಿಕಾಂಬೆ ತಾನೇ ? ಅಪ್ಪೀ ತಪ್ಪೀ ಅವಳಿಗೆ ಪೂಜೆ ಸರಿಯಾಗಿನಡೆಯದಿದ್ದರೆ ಆ ವರ್ಷ ಊರಲ್ಲಿ ಮಾರಿಕಾ ಉಪದ್ರವಗಳೆನಿಸಿದ ಸಿಡುಬು,ಗೋಣಿ, ದಡಾರ, ಚಾಪೆ ಇವೆಲ್ಲಾಕಾಣಿಸಿಕೊಳ್ಳುತ್ತವೆಯಂತೆ. ಹೀಗಾಗಿ ಸಣ್ಣಮ್ಮ ಬಂದು ಹೋದ ಮರುಕ್ಷಣ ಅದೇ ಪೂಜಾರಿಯಲ್ಲಿ ದೊಡ್ಡಮ್ಮ ಆಗಮಿಸಿತ್ತಿದ್ದಳು. ಹಾಗೆದೊಡ್ಡಮ್ಮ ಬರುವುದು ಗೊತ್ತಾಗಬೇಕಲ್ಲಾ ? ಆಗ ಪಕ್ಕದಲ್ಲಿ ನಿಂತ ಸಹಾಯಕ ಪೂಜಾರಿ

" ದೊಡ್ಡಮ್ಮ ಬರಲೀ.....ಹೋಯ್ ದೊಡ್ಡಮ್ಮ ಬರಲೀ...." ಎಂದು ಬಡಬಡಿಸುತ್ತಿದ್ದ. ಶಂಖ-ಜಾಗಟೆ, ವಾದ್ಯಗಳು ತಾರಕಸ್ವರದಲ್ಲಿಮೊಳಗುತ್ತಿದ್ದವು. ಕೈಯ್ಯಲ್ಲಿ ಶಿಂಗಾರ ಹಿಡಿದ ಪೂಜಾರಿ ಶರೀರದ ಗಡಗಡ ಅತಿಯಾದಾಗ ಅಲ್ಲಿ ದೊಡ್ಡಮ್ಮ ಬಂದಳೆಂದೇ ಅರ್ಥ. ಅಷ್ಟಾಗುವಾಗ ರಾತ್ರಿ ಹತ್ತುಗಂಟೆಯ ಸಮಯವಾಗುತ್ತಿತ್ತು. ಚಿಮಣಿಎಣ್ಣೆಯ ಗ್ಯಾಸ್ ಲೈಟ್ನಲ್ಲಿ ಕಾಣುವ ದೃಶ್ಯಾವಳಿಗಳು ನಿಜಕ್ಕೂಭಯದ ವಾತಾವರಣವನ್ನೇ ನಿರ್ಮಾಣಮಾಡುತ್ತಿದ್ದವು. ಇದ್ದಕ್ಕಿದ್ದಂತೇ ದೊಡ್ಡಮ್ಮ ಬರುವಾಗ ಪಲ್ಲಕ್ಕಿಯಲ್ಲಿ ಕುಳಿತ ವಿಗ್ರಹದ ಕಣ್ಣುಕೆಂಪಗೆ ದೊಡ್ಡಗೆ ಇರುವ ಹಾಗೇ ಕಾಣಿಸುತ್ತಿದ್ದವು. ಇನ್ನೇನು ನಾಲಿಗೆ ಚಾಚಿಬಿಡುತ್ತಾಳೇನೋ ಅನ್ನಿಸುತ್ತಿತ್ತು. ದೊಡ್ಡಮ್ಮನ ಭಾಷೆಕೆಲವೊಮ್ಮೆ ಎಲ್ಲರಿಗೂ ಅರ್ಥವಾಗುತ್ತಿರಲಿಲ್ಲ! ಇನ್ನೂ ಕೆಲವೊಮ್ಮೆ ಕೇಳುವಷ್ಟು ದೊಡ್ಡದಾಗಿ ಅಮ್ಮ ಉಲಿಯುತ್ತಿರಲಿಲ್ಲ! ಆದರೂನಮ್ಮೂರನ್ನು ಕಂಡರೆ ಅಮ್ಮನಿಗೆ ಬಹಳ ಪ್ರೀತಿಯಿರುವುದರಿಂದಲೂ ಶತಮಾನಗಳಿಂದಲೂ ಅಕೆ ನಮ್ಮೂರಿಗೆ ಬಂದು ಪೂಜೆಗೊಂಡುಬಿಜಯಂಗೈಯ್ಯುತ್ತಿರುವುದರಿಂದಲೂ ಪೂಜೆ ಸಾಕಾಗಲಿಲ್ಲಾ ಎಂದಿದ್ದು ಹೇಳಿದ್ದು ಕಮ್ಮಿಯಂತೆ ಅಂತ ಕೆಲವರುಮಾತಾಡಿಕೊಳ್ಳುತ್ತಿದ್ದರು. ಅಂತೂ ಸುಮಾರು ೧೫ ನಿಮಿಷಗಳ ನಂತರ ಅಮ್ಮ " ಊರಿಗೆಲ್ಲಾ ಕ್ಷೇಮವಾಗಲಿ " ಎಂದುಸಾರಿದಮೇಲೆ ಮತ್ತೆ ಜಾಗಟೆ ವಾದ್ಯಗಳು ಜೋರಾಗಿ ಬಾರಿಸಲ್ಪಟ್ಟು ಪೂಜಾರಿಯ ಮೈಮೇಲೆ ಬಂದ ಅಮ್ಮ ಸ್ವಸ್ಥಾನಕ್ಕೆಹೊರಟುಹೋಗುತ್ತಿದ್ದಳು. ಇಡೀ ಮಡಿ ಒದ್ದೆಯಾಗಿ ಬೆವರಿ ಬಸವಳಿದ ಪೂಜಾರಿಗೆ ಸುಧಾರಿಸಿಕೊಳ್ಳಲು ಜನ ಗಾಳಿ ಬೀಸುತ್ತಿದ್ದರು. ನಂತರ ಎಲ್ಲರಿಗೂ ಪ್ರಸಾದ, ತಿನ್ನಲು ಪಂಚಕಜ್ಜಾಯ, ಬಾಳೇಹಣ್ಣುಗಳು ವಿತರಣೆಯಾಗಿ ಜನ ತಮ್ಮಪಾಲಿಗೆ ಬಂದ ಹಣ್ಣು-ಕಾಯಿಪ್ರಸಾದವನ್ನು ತೆಗೆದುಕೊಂಡು ಮನೆಗೆ ತೆರಳುತ್ತಿದ್ದರು. ಆ ರಾತ್ರಿ ಅಲ್ಲೇ ಚಪ್ಪರದಲ್ಲಿ ಉಳಿಯಲು ಅಮ್ಮನಿಗೆ ವ್ಯವಸ್ಥೆಯಿರುತ್ತಿತ್ತು. ಮಾರನೇ ಬೆಳಗಾಗಿ ಅಮ್ಮ ಕೆಲವುಜನರೊಟ್ಟಿಗೆ ಮತ್ತೆ ಮುಂದೆ ಸಾಗಬೇಕಾದ ಜಾಗಕ್ಕೆ ತೆರಳುತ್ತಿದ್ದಳು.

ಅಂದಹಾಗೇ ಊರಲ್ಲಿರುವ ಸಾತ್ವಿಕ ದೇವರುಗಳಲ್ಲಿ ವಿಷ್ಣುಮೂರ್ತಿ ಕೂಡಾ ಒಂದು. ನಿತ್ಯನೈಮಿತ್ತಿಕ ಪೂಜಾವಿಧಾನಗಳುಶತಶತಮಾನಗಳಿಂದಲೂ ನಡೆದುಬರುತ್ತಿರುವ ಆ ದೇವಾಲಯದಲ್ಲಿ ಯಾವುದೋ ಕಾಲದಲ್ಲಿ ಕಳ್ಳರು ನುಗ್ಗಿ ಬಹಳ ಪ್ರಚೀನವಾದವಿಗ್ರಹದ ಶಿಲೆಯ ಪ್ರಭಾವಳಿಯನ್ನು ತುಂಡರಿಸಿದ್ದರು. ಭಗ್ನವಾದ ವಿಗ್ರಹ ಎಂಬ ಅಪಕೀರ್ತಿಹೊತ್ತ ಬಹುಸುಂದರ ವಿಗ್ರಹವನ್ನುವಿಸರ್ಜಿಸಿ ಆ ಜಾಗದಲ್ಲಿ ಹೊಸವಿಗ್ರಹವನ್ನು ಪ್ರತಿಷ್ಠಾಪಿಸಿದ್ದೂ ಆಯಿತು. ಆವೇಳೆ ಮೆರವಣಿಗೆಹೊರಟ ಪಂಚಲೋಹದ ಅಜಮಾಸುಒಂದೂವರೆ ಅಡಿ ಎತ್ತರದ ಅತ್ಯಂತ ಸುಂದರವಾಗಿದ್ದ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿ ಕುಳಿತಾಗ ಯಾರೋ ಅದರಮೇಲೆಕಣ್ಣುಹಾಕಿದ್ದಿರಬೇಕು. ಪ್ರತಿಷ್ಠಾಪನಾ ಮಹೋತ್ಸವ ಮುಗಿದ ಒಂದೆರಡು ವರ್ಷಗಳಲ್ಲೇ ಒಂದು ರಾತ್ರಿ ಆ ಉತ್ಸವ ಮೂರ್ತಿಯನ್ನುಕಳ್ಳರು ಕದ್ದುಬಿಟ್ಟರು. ಮಾರನೇದಿನ ಪೂಜೆಗೆ ಬಂದ ಅರ್ಚಕರಿಗೆ ಕಂಡಿದ್ದು ಮುರಿದ ಬೀಗ-ತೆರೆದ ಬಾಗಿಲು. ವರದಹಸ್ತನಾದ ವಿಷ್ಣುಮೂರ್ತಿಯ ಶಿಲಾವಿಗ್ರಹದ ಕೈಮೇಲೆ ತುಳಸೀದಳವೊಂದು ಕಾಣುತ್ತಿತ್ತು. ಭಟ್ಟರು [ಅರ್ಚಕರು] ಹೆದರಿ ಊರಮಧ್ಯೆ ಓಡಿಬಂದರು. ಊರಜನ ಸೇರಿದರು. ತಲೆಗೊಂದರಂತೇ ಸಲಹೆಕೊಟ್ಟರು; ಮಾತನಾಡಿದರು. ಪೋಲೀಸರಿಗೆ ತಿಳಿಸಿ ಅವರೂ ಬಂದು ಹೋದರು. ಆಗೆಲ್ಲಾ ಪೋಲೀಸ್ ನಾಯಿಯ ಬಳಕೆ ಅಷ್ಟಾಗಿ ಇರಲಿಲ್ಲ!

ರಕ್ಷಿಸುವ ದೇವರನ್ನೇ ರಕ್ಷಿಸಬೇಕಾದ ಪ್ರಸಂಗಬಂದಾಗ ನಿಜಕ್ಕೂ ಬೇಸರವಾಗಿತ್ತು. ಕಳ್ಳರಂತೂ ಬಹಳ ದೂರದ ಜನವಾಗಿರಲುಸಾಧ್ಯವೇ ಇರಲಿಲ್ಲ. ಕಲಿಯ ಪ್ರಭಾವ ಆಗಲೇ ಜಾಸ್ತಿಯಾಗುತ್ತಾ ನಡೆದಿತ್ತಾದ್ದರಿಂದ ಪಕ್ಕದ ಊರವರೋ ಯಾರೋ ಅಂತೂ ತಮ್ಮಆಸಕ್ತಿಗೆ ಅನುಗುಣವಾಗಿ ವಿದೇಶಕ್ಕೆ ಮಾರಿ ಕೋಟಿಗಟ್ಟಲೆ ಗಳಿಸಲು ಆ ಕಾರ್ಯ ನಡೆಸಿದ್ದರು. ದಿನಗಳು ಉರುಳುತ್ತಲೇ ಇದ್ದರೂಕಳುವಾದ ವಿಗ್ರಹ ಮಾತ್ರ ಸಿಗಲೇ ಇಲ್ಲ. ಬಾಗಿಲುತಡೆದು ಹೇಳಿಕೊಳ್ಳಬೇಕು ಎಂಬ ಅಭಿಪ್ರಾಯ ಬಂತು. ಹಾಗೆಂದರೇನು ಎಂದುನಾನು ನನ್ನ ಹಿರಿಯರಲ್ಲಿ ಕೇಳಿದಾಗ ಅವರು ಹೇಳಿದ್ದು " ಊರಿಗೆ ಏನಾದರೂ ತೊಂದರೆ, ವಿಪತ್ತು ಬಂದರೆ, ಅನಾನುಕೂಲಉಂಟಾದರೆ, ಅವಘಡ ಸಂಭವಿಸಿದರೆ ಊರಜನರೆಲ್ಲಾ ಸೇರಿ ಅದೇ ದೇವಸ್ಥಾನದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿ ಎಲ್ಲರೂ ಒಟ್ಟಾಗಿಪ್ರಧಾನದ್ವಾರದೆದುರು ಕೈಮುಗಿದು ನಿಂತು ಬಂದ ಸಂಕಷ್ಟವನ್ನು ಪರಿಹರಿಸು ಎಂದು ಪ್ರಾರ್ಥಿಸುವುದು. " ವಾರದಲ್ಲೇಬಾಗಿಲುತಡೆದು ಹೇಳಿಕೊಂಡಿದ್ದೂ ಆಯಿತು.

ಬಂಗಾರಿ ಗೌಡ ಕೂಡ ಬಾಗಿಲು ತಡೆದು ಹೇಳಿಕೊಳುವ ಕಾರ್ಯದಲ್ಲಿ ಭಾಗವಹಿಸಿದ್ದ. ಪೂಜೆಮುಗಿಯುತ್ತಿದ್ದಂತೇ ಅದೆಲ್ಲಿಂದಆವೇಶಬಂತೋ ತಿಳಿಯಲಿಲ್ಲ. ಬಂಗಾರಿ ಹಾರಿ ಹಾರಿ ಬೀಳುತ್ತಿದ್ದ! " ಓಹೋ ನನ್ನಿಷ್ಣು ಮೂರ್ತಿ ನನ್ನಿಷ್ಣುಮೂರ್ತಿ....ನಾಸುಮ್ನಿರುದಿಲ್ಲ....ಬೇಕೇ ಬೇಕೂ ನನ್ನಿಷ್ಣುಮೂರ್ತಿ " ಆವೇಶದಲ್ಲಿ ಎದೆ ಎದೆ ಬಡಿದುಕೊಂಡು ಹಾರುತ್ತಿದ್ದ. ಬಂದವ ’ಬಾಗಿಲಜಟಕ’ ನಂತೆ! ಮಹಾವಿಷ್ಣುವಿನ ಬಾಗಿಲನ್ನು ಕಾಯಲು ಜಯ-ವಿಜಯರು ಬಾಗಿಲಭಟರಲ್ಲವೇ? ಅವರನ್ನೇ ಸಾಂಕೇತಿಕವಾಗಿ ಬಾಗಿಲಜಟ್ಗಅಥವಾ ಬಾಗಿಲಜಟಕ ಎಂಬ ಹೆಸರಲ್ಲಿ ಪ್ರಧಾನದ್ವಾರದ ಹೊರವಲಯದಲ್ಲಿ ಎಲ್ಲಾದರೂ ಪ್ರತಿಷ್ಠಾಪಿಸಿ ಅವರನ್ನೂ ಪೂಜಿಸುತ್ತಾರೆ. ಆಬಾಗಿಲುಜಟ್ಗ ಬಂಗಾರಿಯ ಮೈಮೇಲೆ ಬಂದಿದ್ದ ಎಂದು ಯಾರೋ ಹೇಳಿದರು. ಅರ್ಧಗಂಟೆಯಕಾಲ ಜಿಗಿದಾಡಿದ ಬಂಗಾರಿಕೊನೆಗೊಮ್ಮೆ ಸುಸ್ತಾಗಿ ಸ್ತಬ್ಧವಾಗಿ ಮಲಗಿಬಿಟ್ಟ. ಅದಾಗಿ ದಶಕಗಳೇ ಕಳೆದರೂ ಸುಂದರವಾದ ಆ ಉತ್ಸವಮೂರ್ತಿ ಸಿಗಲೇ ಇಲ್ಲ. ಅಷ್ಟಾಗಿ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಕಾಣದ ಕಾರಣ ಆರಕ್ಷಕರು ತಮ್ಮನ್ನೇ ರಕ್ಷಿಸಿಕೊಳ್ಳುತ್ತಾ ಕುಳಿತುಕೊಂಡುಬಿಟ್ಟರು! ಯಾರೋ ಪೂರ್ವಜರು ಮಕ್ಕಳಾಗದಿದ್ದುದಕ್ಕೆ ಹೇಳಿಕೊಂಡು ಸಂತಾನಪ್ರಾಪ್ತಿಯಾದ ಹಿನ್ನೆಲೆಯಲ್ಲಿ ಹರಕೆ ತೀರಿಸಲಾಗಿ ಆವಿಗ್ರಹವನ್ನು ಎರಕದಲ್ಲಿ ಮಾಡಿಸಿ, ಅದಕ್ಕೆ ತಕ್ಕನಾದ ಹಾಲುಕಂಚಿನ ಪ್ರಭಾವಳಿ, ಬಂಗಾರದ ಬಣ್ಣಲೇಪಿಸಿದ ಮೆತ್ತನೆಯಸುಖಾಸನಗಳನ್ನೂ ಮಿರುಗುವ ಮೇಲುಹೊದಿಕೆಯನ್ನೂ ಹೊಂದಿದ್ದ ಪಲ್ಲಕ್ಕಿಎಲ್ಲವನ್ನೂ ಸಜ್ಜುಗೊಳಿಸಿ ವರ್ಷಾವರ್ಷಾ ಉತ್ಸವವನ್ನುನಡೆಸಿಬಂದರು. ಮೂರ್ತಿ ಕಳುವಾದ ವರ್ಷ ಆ ಮನೆತನದವರು ಮೂರ್ತಿಯ ಬದಲಾಗಿ ಕಾಯಿ ಅಭಿಮಂತ್ರಿಸಿ ಪಲ್ಲಕ್ಕಿಯಲ್ಲಿಟ್ಟು ಸೇವೆಸಲ್ಲಿಸಿದರು. ಸರಿಸುಮಾರು ೭-೮ ವರ್ಷಗಳು ಗತಿಸಿದಮೇಲೆ ಇನ್ನು ಮತ್ತೆ ಆ ಮೂರ್ತಿಯನ್ನು ಮರಳಿ ಪಡೆಯುವ ಆಸೆ ಕಮರಿಹೋಗಿಹೊಸದಾದ ವಿಗ್ರಹವೊಂದನ್ನು ಖರೀದಿಸಿ ತಂದರು. ಈಗಿರುವ ವಿಗ್ರಹ ಆ ವಿಗ್ರಹಕ್ಕೆ ಸೌಂದರ್ಯದಲ್ಲಿ ಯಾವಮೂಲೆಗೂತಾಗುವುದಿಲ್ಲ. ಕಳೆದುಹೋದ ಆ ವಿಗ್ರಹವನ್ನು ನಮ್ಮ ಊರಿನಲ್ಲೇ ಊರವರೇ ಆದ ಆಚಾರಿಯೊಬ್ಬರು ತಮ್ಮ ಕಲಾಪ್ರೌಢಿಮೆಯಿಂದತಯಾರಿಸಿದ್ದರಂತೆ. ಅದು ಕೇವಲ ಕಲೆಗಾಗಿ ಮತ್ತು ಸೇವೆಗಾಗಿ ಮಾಡಿದ ವಿಗ್ರಹವಾಗಿತ್ತು. ಇಂದು ವಿಗ್ರಹಗಳು ಮಾರಾಟದವಸ್ತುಗಳಾಗಿರುವುದರಿಂದ ಕೆಲವೊಮ್ಮೆ ಕಲಾಹೀನವಾಗಿಯೂ ಕಳಾಹೀನವಾಗಿಯೂ ಇರುತ್ತವೆ. ಇಂದಿಗೂ ನನ್ನ ಮನಸ್ಸಲ್ಲಿಅಚ್ಚಳಿಯದ ಹಲವು ಮೊಗಗಳಲ್ಲಿ ಆ ಸುಂದರ ವಿಗ್ರಹದ ಮುಗುಳ್ನಗೆಯೂ ಅಡಗಿದೆ. ಆಗಾಗ ಮಾನವನ ದುಷ್ಟತನವನ್ನು ಅಣಕಿಸಿಮತ್ತೆ ನಕ್ಕಂತಾಗುತ್ತದೆ.

Saturday, May 28, 2011

ಐ ಲವ್ ಯೂ ಎಂಬ ಅಪಾಯಕಾರೀ ಅಣ್ವಸ್ತ್ರ


ಐ ಲವ್ ಯೂ ಎಂಬ ಅಪಾಯಕಾರೀ ಅಣ್ವಸ್ತ್ರ

ಆಶಾ ಉತ್ತಮ ಮನೆತನದ ಹುಡುಗಿ, ಹಳ್ಳಿಯಲ್ಲಿ ಕಾಲೇಜು ಇಲ್ಲದ್ದರಿಂದ ತಾಲೂಕು ಪಟ್ಟಣದ ಕಾಲೇಜಿಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದಳು. ದಿನವೂ ಹೆಚ್ಚುಕಮ್ಮಿ ಅದೇವೇಳೆಗೆ ಬಸ್ ಏರುತ್ತಿದ್ದು ಅದೇ ಮಾರ್ಗವಾಗಿ ಚಲಿಸುವ ಪ್ರಮೇಯವಿತ್ತು. ದಿನಗಳ ನಂತರ ಮಳೆಗಾಲದಲ್ಲಿ ಕೆಲವೊಮ್ಮೆ ಬಸ್ ಕಾಲಿ ಇದ್ದ ಸಮಯದಲ್ಲಿ ಕಂಡಕ್ಟರ್ ಜೊತೆ ಮಾತುಕತೆ ನಡೆಯಹತ್ತಿತ್ತು. ಮಾತು ಆಕೆಗೆ ಬಹಳ ಇಂಪಾಗಿ ನಿಧಾನವಾಗಿ ಆಕೆ ಕಂಡಕ್ಟರ್ ಹೇಳಿದ್ದನ್ನೆಲ್ಲಾ ಮಾಡಲು ಆರಂಭಿಸಿದಳು. ಮದುವೆಯಾಗಿ ಮಕ್ಕಳ ಅಪ್ಪನಾದ ಆತನಿಗೋ ಹೆಣ್ಣುಗಳ ಗೀಳು! ಹೇಗಾದರೂ ಮಾಡಿ ಆಶಾ ತನಗೆ ದಕ್ಕಬೇಕೆಂಬುದು ಆತನ ಬಯಕೆಯಾಗಿತ್ತು. ಅದಕ್ಕಾಗಿ ಆತ ಎಲ್ಲಾರೀತಿಯಲ್ಲೂ ಪ್ರಯತ್ನ ನಡೆಸಿಯೇ ನಡೆಸಿದ; ಅಶಾಳನ್ನು ಮರುಳುಮಾಡಿಬಿಟ್ಟ. ತನ್ನ ಮತ್ತು ಕಂಡಕ್ಟರ್ ವಯಸ್ಸಿನ ಅಂತರವನ್ನೂ ಆಕೆ ಲೆಕ್ಕಿಸಲಿಲ್ಲ, ಆತ ಬಿಟ್ಟ’ಅಪ್ಪಟ ಬ್ರಹ್ಮಚಾರಿ’ ಎಂಬ ಹೇಳಿಯನ್ನಾಧರಿಸಿ ನಿಧಾನವಾಗಿ ಆಕೆ ಆತನೆಡೆಗೆ ವಾಲಿದಳು. ಕಾಲೇಜಿನ ಯಾವ ಹುಡುಗನೂ ಮಾಡದ ಕಿಡಿಗೇಡಿತನದ ಕೆಲಸವನ್ನು ಆ ಕಂಡಕ್ಟರ್ ಮಾಡಿದ್ದ. ಕೆಲವೇದಿನಗಳಲ್ಲಿ ಆಶಾ ಆತನನ್ನು ಗುಪ್ತವಾಗಿ ಮದುವೆಯಾದಳು! ವ್ಯಾಸಂಗಕ್ಕಿಂತ ಈ ವ್ಯಸನದಲ್ಲೇ ಹೊತ್ತುಕಳೆದ ಆಕೆಯ ದಿನಚರಿ ಪಾಲಕರಿಗೆ ತಿಳಿಯಲೇ ಇಲ್ಲ. ಯಾವಾಗ ಆಶಾ ಬಸುರಿಯಾದಳೋ ಆಗ ಕಂಡಕ್ಟರ್ ’ರೂಟ್’ ಬದಲಿಸಲು ಆರಂಭಿಸಿದ. ಅಲ್ಲೆಲ್ಲೋ ಆಸ್ಪತ್ರೆಯೊಂದರಲ್ಲಿ ಅಬಾರ್ಷನ್ ಮಾಡಿಸಿದ. ಕೊನೆಗೊಮ್ಮೆ ಆಕೆಯನ್ನು ಮತ್ತಷ್ಟು ಭೋಗಿಸುವ ಹಂಬಲದಲ್ಲಿ ಎಲ್ಲಿಗೋ ಕರೆದುಕೊಂಡು ಒಂದೆರಡು ದಿನ ನಾಪತ್ತೆಯಾಗಿಬಿಟ್ಟ. ಆಮೇಲೆ ಪಟ್ಟಣದ ಬೇರೇ ಕಡೆ ಒಂದು ಖೋಲಿ ಕೊಡಿಸಿದ. ಆ ಖೋಲಿಯಲ್ಲಿ ಅವಳಜೊತೆಗೆ ಚೆಲ್ಲಾಟದ ದಿನಗಳು ಮುಂದುವರಿದವು. ಇತ್ತ ಹೆತ್ತವರು ಕಂಗಾಲಾಗಿ ಎಲ್ಲೆಡೆಗೂ ಹುಡುಕುತ್ತಾ ಆರಕ್ಷಕರಿಗೆ ದೂರು ನೀಡಿದರು. ಹಲವುದಿನಗಳ ನಂತರ ಹೇಗೋ ಪತ್ತೆಹಚ್ಚಿದ ಪೋಲೀಸರೆದುರು ಆಕೆ ಹೇಳಿದ್ದು ತಾನು ಕಂಡಕ್ಟರ್ ನನ್ನೇ ಮದುವೆಯಾಗುತ್ತೇನೆ ಎಂದು. ಹದಿನೆಂಟು ತುಂಬಿದ ಹುಡುಗಿಯಾದ್ದರಿಂದ ಅಪ್ಪ-ಅಮ್ಮ ಕಣ್ಣೀರು ಹಾಕುವುದನ್ನು ಬಿಟ್ಟರೆ ಏನೂಮಾಡುವ ಹಾಗಿರಲಿಲ್ಲ. ’ಎಂಥಾಗತಿ ಬಂತಪ್ಪಾ’ ಎಂದು ಮನದಲ್ಲಿ ಮರುಗಿದರು. ಹಾಗೂ ಹೀಗೂ ವರ್ಷದೂಡಿದ ಕಂಡಕ್ಟರ್ ಮಗುವನ್ನು ಕರುಣಿಸಿದ. ಸಿಗುವ ಸಂಬಳದಲ್ಲಿ ಆತನಿಗೆ ಆಶಾಳನ್ನೂ ಮತ್ತು ಮೊದಲ ಕುಟುಂಬವನ್ನೂ ಸಲಹಲು ಆಗುತ್ತಿರಲಿಲ್ಲ. ಅಷ್ಟರಲ್ಲಿ ಆತನ ಮೊದಲ ಪತ್ನಿಗೂ ವಿಷಯ ತಿಳಿದು ಆಕೆಯ ಗಲಾಟೆ ಆರಂಭವಾಯಿತು. ಕಂಡಕ್ಟರ್ ಕೈ ಬಿಟ್ಟ; ಖೋಲಿಗೆ ಬರುವುದನ್ನೇ ಬಿಟ್ಟ. ಮಗುವಿನೊಂದಿಗೆ ಆಕೆ ಸಾವರಿಸಿಕೊಂಡು ತವರುಮನೆಗೆ ಬಂದಳು.

ಅಕ್ಷರ ಜಾತ್ರೆಗೆ ಬಂದ ಚಿಕ್ಕವಯಸಿಇನ ಚೇತನ್ ಎಂಬ ಹುಡುಗನನ್ನು ಶಿರಸಿ ಶರಣರ ಮಠದ ಸಾಧ್ವಿ ಕಾವಿಯ ಸೆರಗಿನಲ್ಲೇ ಅವಿತು ಪ್ರೀತಿಸಿದಳು. ಆತನಿಗೂ ಅವಳೇ ಸರ್ವಸ್ವವಾಗಿಬಿಟ್ಟಳು. ವಯಸ್ಸಿನಲ್ಲೂ ಹಿರಿಯಳುಬೇರೆ. ಆದರೂ ಅಗಲಿರಲಾರದ ಅದಮ್ಯ ಅನಿಸಿಕೆ! ಅವಳಲ್ಲಿರುವ ಏನೋ ಅವನಿಗೂ ಆತನಲ್ಲಿರುವ ಏನೋ ಅವಳಿಗೂ ಬೇಕಿತ್ತು. ಶರಣೆ ಏಕ್‍ದಂ ಆತನ ಜೊತೆಗೆ ಮಾಧ್ಯಮಗಳ ಮುಂದೆ ಮದುವೆಯ ಪ್ರಸ್ತಾಪವಿಟ್ಟಳು. ಪೋಲೀಸ್ ಸಹಭಾಗಿತ್ವದಲ್ಲಿ ಮದುವೆಯೂ ನಡೆದುಹೋಯಿತು. ಹುಡುಗನ ಅಮ್ಮನ ಅಳಲನ್ನು ಯಾರೂ ಕೇಳಲಿಲ್ಲ; ಕೇಳಿ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮನದ ಹಸಿ ಹಸಿ ಬಯಕೆಗಳನ್ನು ಪೂರೈಸಿಕೊಳ್ಳಲು ೬-೭ ತಿಂಗಳು ಸಾಕಾಯಿತು. ಅವಳಲ್ಲಿರುವ ’ಅದನ್ನು’ ಅವನೂ ಅವನಲ್ಲಿರುವ ’ಅದನ್ನು’ ಅವಳೂ ಯಥೇಚ್ಛ ಪಡೆದಿದ್ದೂ ಆಯಿತು. ಪತಿ ಮತ್ತು ಆತನ ಅಮ್ಮನ ಕಾಟ ತಾಳಲಾರದೇ ಶರಣೆ ತವರಿಗೆ ನಿರ್ಗಮಿಸಿದ್ದೂ ಸುದ್ದಿಯಾಯಿತು!

ಜೋಸೆಫ್ ಮತ್ತು ಸ್ಮಿತಾ ಕಾಲೇಜಿನಲ್ಲಿ ಓದುವಾಗ ಜೋಸೆಫ್ ಎರಡು ತರಗತಿ ಮುಂದಿದ್ದ. ಬಹಳ ಸುಂದರಿಯೆನಿಸಿದ ಸ್ಮಿತಾ ನಕ್ಕರೆ ಅಪ್ಸರೆಯನ್ನೂ ನಾಚಿಸುತ್ತಿದ್ದಳು! ಮಾತನಾಡಿದರೆ ಮುತ್ತು ಉದುರುತ್ತಿತ್ತು. ದಾಳಿಂಬೆಯ ಬೀಜಗಳ ದಂತಪಂಕ್ತಿ ಸಾಕ್ಷಾತ್ ಧರೆಗಿಳಿದ ರತಿದೇವಿ! ಜೋಸೆಫ್ ತೀರಾ ಸುಂದರನಲ್ಲದಿದ್ದರೂ ಕಾಲೇಜಿನ ಚುನಾವಣೆಯಲ್ಲಿ ಗೆದ್ದು ಸ್ಟೂಡೆಂಟ್ ಯೂನಿಯನ್ ಲೀಡರ್ ಆಗಿದ್ದ. ಅವನ ಮಾತುಗಳು ನಡವಳಿಕೆ ಆ ವಯಸ್ಸಿನಲ್ಲಿ ಅವಳಿಗೆ ತುಂಬಾ ಹಿಡಿಸಿದವು. ಅವಳಿಗಾಗಿಯೇ ಆತ ಚುನಾವಣೆಗೂ ನಿಂತಿದ್ದನೆಂದರೂ ತಪ್ಪಾಗಲಿಕ್ಕಿಲ್ಲ. ಅವಳನ್ನು ಪಡೆದೇ ತೀರುವುದು ಅವನ ಹಠ, ಅವನೇ ತಕ್ಕವನೆನ್ನುವುದೂ ಅವಳ ಮನಸ್ಸಿಗೆ ಬಂದಿರುವುದು ದಿಟ. ಅವಳಲ್ಲಿ ’ಏನೋ ಅಂತಹ’ದಿತ್ತು ಅವನಲ್ಲಿಯೂ ’ಏನೋ ಅಂತಹುದಿತ್ತು.’ ಆ ಏನೋ ಅಂಥದ್ದನ್ನು ಪರಸ್ಪರ ಪಡೆಯದೇ ಇರಲು ಸಾಧ್ಯವಾಗುತ್ತಿರಲಿಲ್ಲ. ಆ ’ಏನೋ ಅಂಥದ್ದು’ ದೈಹಿಕವಾಗಿ ಹತ್ತಿರವಿದ್ದರೆ ಮಾತ್ರ ಪಡೆಯಲು ಸಾಧ್ಯವಿತ್ತು. ಅದಕ್ಕೇ ಅವರು ಪರಸ್ಪರ ಪ್ರೀತಿಸಿದರು. ಕಾಲೇಜಿನಿಂದ ಟ್ರಿಪ್ ಹೋಗಿದ್ದ ವೇಳೆ ರಾತ್ರಿ ಬಸ್‍ನಲ್ಲಿ ಅಪ್ಪಿಕುಳಿತರು. ಆಗ ಆ ’ಏನೋ ಅಂಥದ್ದು’ ಸ್ವಲ್ಪ ಹತ್ತಿರವಾಯಿತೇನೋ! ಮತ್ತೂ ಹತ್ತಿರಬರಲಿ ಎಂದುಕೊಂಡ ಅವರು ಪ್ರಯಾಣಕಾಲದಲ್ಲಿ ತಂಗಿದ್ದ ಜಾಗದ ಕೊಠಡಿಯಲ್ಲಿ ಏನೋ ಅಂಥದ್ದನ್ನು ಇನ್ನೂ ಸ್ವಲ್ಪ ಜಾಸ್ತಿ ಪಡೆದರು! ಬರುಬರುತ್ತಾ ಅಗಲಿರಲಾರದ ಹಕ್ಕಿಗಳು ಎಂದರು. ಕಾಲೇಜಿನ ಗೋಡೆಗಳಮೇಲೆ ಎಲ್ಲಿ ನೋಡಿದರೂ ಅವರ ಹೆಸರುಗಳೇ ಬರೆಯಲ್ಪಟ್ಟವು. ಅಪ್ಪ-ಅಮ್ಮನಿಗೆ ಹೇಳದೇಕೇಳದೇ ಕಾಲೇಜು ಮುಗಿಯುವ ಮುನ್ನವೇ ಮದುವೆ ಮಾಡಿಕೊಂಡರು. ಬೆಂಗಳೂರಿಗೆ ಬಂದರು. ಹಲವುದಿನಗಳವರೆಗೆ ’ಏನೋ ಅಂಥದ್ದನ್ನು’ ಪಡೆಯುತ್ತಲೇ ಇದ್ದರು! ಆಮೇಲೆ ಒಂದುದಿನ ಪೂರ್ವ-ಪಶ್ಚಿಮವಾಗಿ ನಿಂತಾಗ ಸ್ಮಿತಾಗೆ ಕೈಲೊಂದು ಮಗು ಹೊಟ್ಟೆಯಲ್ಲೊಂದು ಮಗು ಇದ್ದಿತ್ತು ಎಂಬುದು ಸುದ್ದಿಯಾಯಿತು.

ಬೆಂಗಳೂರಿನ ಶುಭಾ ಎಂಬ ಹುಡುಗಿ ಗಿರೀಶ್ ಎಂಬ ತಂತ್ರಾಂಶ ತಂತ್ರಜ್ಞನನ್ನು ಮದುವೆಯಾಗಲು ಒಪ್ಪಿ ಎಂಗೇಜ್‍ಮೆಂಟ್ ಕೂಡ ನಡೆದುಹೋಯಿತು. ಆ ನಂತರ ಸರಿಯಾಗಿ ೧೦+ ಕೂಡ ಓದಿರದ ಅದ್ಯಾವುದೋ ತಮಿಳು ಹುಡುಗನನ್ನು ಆಕೆ ಪ್ರೀತಿಸುತ್ತಿದ್ದಳಂತೆ. ಎಂಥಾ ಹುಚ್ಚು ಪ್ರೀತಿ ಎಂದರೆ ಆತನನ್ನು ಜಂಗಮವಾಣಿಯಲ್ಲಿ ಸಂದೇಶದಿಂದ ಕರೆದು ಪಾಪದ ಹುಡುಗ ಗಿರೀಶ್‍ನನ್ನು ಕೊಲೆಮಾಡಿಸಿಬಿಟ್ಟಳು. ಆಮೇಲೆ ಈಗ ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ರೂಪದಲ್ಲಾಗಲೀ ವಿದ್ಯೆಯಲ್ಲಾಗಲೀ ದುಡಿಮೆಯಲ್ಲಾಗಲೀ ಹೋಲಿಸಲಾಗದ ತಮಿಳು ಹುಡುಗನಲ್ಲಿ ಆಕೆ ಅದೇನು ಕಂಡಳು? ಅವನಲ್ಲಿರುವ ’ಏನೋ ಅಂಥದ್ದು’ ಅವಳಿಗೆ ಬೇಕಾಗಿತ್ತು! ಅಲ್ಲವೇ ?

ಸ್ನೇಹಿತರೇ, ಕೆಲವು ದಿನಗಳಿಂದ ಬರೆಯಲು ಸಮಯವಾಗಿರಲಿಲ್ಲ. ಮತ್ತೆ ಶುರುಮಾಡಿದ್ದೇನೆ. ಬರುಬರುತ್ತಾ ಮಾಧ್ಯಮಗಳಲ್ಲಿ ಲವ್ವೀ ಡವ್ವಿಯ ಕೇಸುಗಳು ತೀರಾ ಸಾಮಾನ್ಯವಾಗಿ ಮುಖಕ್ಕೆ ಅಪ್ಪಳಿಸ ಹತ್ತಿವೆ. ’ಮಾನವಕುಲ ತಾನೊಂದೆವಲಮ್’ ಎನ್ನುವುದು ಅಗತ್ಯವಾದರೂ ಅದನ್ನು ಸಾಧಿಸಹೊರಡುತ್ತೇವೆ ಎನ್ನುವ ಹಾದಿಯಲ್ಲಿ ಹಲವು ಕಾರೆ ಮುಳ್ಳುಗಳನ್ನು ಕಾಣಬೇಕಾಗಿದೆ. ನಿಜ ಜೀವನದ ಕೆಲವು ವಾಸ್ತವಿಕ ಮುಖಗಳನ್ನು ಅವಲೋಕಿಸಿದರೆ ಅದು ಅರಿವಿಗೆ ಬರುತ್ತದೆ. ಈ ಮೇಲಿನ ಎಲ್ಲಾ ಕಥೆಗಳೂ ಅದಕ್ಕೆ ಜ್ವಲಂತ ಉದಾಹರಣೆಗಳು. ಇನ್ನೂ ಸಾವಿರಾರು ಕಥೆಗಳನ್ನು ತೆಗೆದುಕೊಳ್ಳಬಹುದು. ಬಹುತೇಕ ಎಲ್ಲವೂ ದುಖಾಂತ್ಯದ ಕಥೆಗಳೇ ಆಗಿರುತ್ತವೆ. ಮಾನವೀಯ ಮೌಲ್ಯಗಳು ಕುಸಿಯುತ್ತಾ ನಡೆಯುತ್ತಿರುವ ಈ ದಿನಗಳಲ್ಲಿ ಎಗ್ಗಿಲ್ಲದ ಹಣದ ದಾಹ ಒಂದೆಡೆಗಾದರೆ, ಸ್ವೇಚ್ಛಾಚಾರ ಇನ್ನೊಂದೆಡೆಗೆ ಗಹಗಹಿಸಿ ನಗುತ್ತದೆ! ಅದರಲ್ಲಂತೂ ಹೆಣ್ಣುಮಕ್ಕಳು ತಾವೇ ದುಡಿಯುವ ಮಾರ್ಗಗಳನ್ನು ಅರಸಿ ಬದುಕುತ್ತಿರುವುದರಿಂದ ಅಲ್ಲಲ್ಲಿ ಅಲ್ಲಲ್ಲಿ ಅವರಿಗೆ ಏನೇನು ಬೇಕೋ ಆಯಾ ದಾಹಗಳನ್ನು ಪೂರೈಸಿಕೊಳ್ಳಲು ಅವರು ಮುಂದಾಗುತ್ತಾರೆ. ಝಣ ಝಣ ಕಾಂಚಾಣ ಕೈಗೆ ಬಂದಾಗ ಅವರಿಗೆ ಏನುಮಾಡಬೇಕೆಂಬುದು ತಿಳಿಯುವುದಿಲ್ಲ.

ಇನ್ನೊಂದು ಹಂತವೆಂದರೆ ಓದುವಾಗಿನ ಸಖ್ಯ. ಹದಗೆಟ್ಟ ಮಾಧ್ಯಮಗಳಲ್ಲಿ ಹಗಲಿರುಳೂ ಕಾಮಧ್ಯಾನ ನಡೆದರೆ ಚಿಕ್ಕಹುಡುಗರಿಗೆ ಅದರ ಗೀಳು ಹತ್ತದೇ ಇರಲು ಅವರೂ ಮನುಷ್ಯರಲ್ಲವೇ? ಅಂತಹ ಗೀಳು ಹತ್ತಿಸಿಕೊಂಡ ಹರೆಯದ ಹುಡುಗಿಯರು ಸುಮ್ನೇ ಒಮ್ಮೆ ರುಚಿ ನೋಡುವ ತೆವಲಿನಿಂದ ಯಾರದೋ ಕರೆಯನ್ನು ಮನ್ನಿಸಿ ಅವರೊಟ್ಟಿಗೆ ಗುಪ್ತವಾಗಿ ಮಲಗಿದರೆ, ಓಡಾಡಿದರೆ ಅದರಲ್ಲಿ ಮಾರ್ಗದರ್ಶಿಸಬೇಕಾದ ಹಿರಿಯರ ಹಲವರ ತಪ್ಪೂ ಇದೆ ಎಂಬುದನ್ನು ಮರೆಯುವ ಹಾಗಿಲ್ಲ. ಸಾಮಾನ್ಯವಾಗಿ ೧೦ರಿಂದ ಆರಭ್ಯ ೩೦ ರ ವರೆಗೂ ಇರುವ ಈ ಕಾಲ ಹುಡುಗ-ಹುಡುಗಿಯರಲ್ಲಿ ಹೊಸ ಹೊಸ ಕಲ್ಪನೆ, ಆಕರ್ಷಣೆಗಳನ್ನು ಸೃಜಿಸುವ ಕಾಲವಾಗಿರುತ್ತದೆ. ಸಿನಿಮಾದಲ್ಲಿ ಹೀರೋ ಹೀರೋಯಿನ್ ಯುಗಳಗೀತೆ ಹಾಡುವುದು, ಅಪ್ಪುವುದು, ಚುಂಬಿಸುವುದು, ಹಾಗೂ ಇನ್ನಿತರ ತರಹೇವಾರಿ ದೃಶ್ಯಗಳು ಹದಿಮನಸ್ಸಿನ ಒಳಗೆ ತೂರಿ ಕಾಮಾಂಧರಾಗುವಂತೇ ಪ್ರೇರೇಪಿಸುತ್ತದೆ. ತಾವಿರುವ ಸುತ್ತಲ ಪರಿಸರದಲ್ಲಿಯೇ ಹುಡುಗ ಹುಡುಗಿ ತಮಗೆ ಸಿಗಬಹುದಾದ ಅಥವಾ ತಾವು ಇಷ್ಟಪಡಬಹುದಾದವರನ್ನು ಗುರುತಿಸಿ ಅವರಲ್ಲಿ ಹೀರೋ ಹೀರೋಯಿನ್‍ಗಳನ್ನು ಕಾಣತೊಡಗುತ್ತಾರೆ. ಅಪ್ಪ-ಅಮ್ಮನ ಕಷ್ಟದ ಅರಿವು ಆಗ ಸುತರಾಂ ಬರುವುದಿಲ್ಲ. ದೂರದರ್ಶಕದ ಕೊಳವೆಯಲ್ಲಿ ನೋಡುವಾಗ ಹೇಗೆ ಆ ನಿಗದಿತ ಪ್ರದೇಶಮಾತ್ರ ಕಾಣುತ್ತದೋ ಹಾಗೇ ಕೇವಲ ’ಪ್ರೇಮಿ’ ಎಂಬ ವ್ಯಕ್ತಿಯ ಚಿತ್ರಮಾತ್ರ ಅವರ ಚಿತ್ತಭಿತ್ತಿಯಲ್ಲಿ ಮೂಡುತ್ತದೆ;ಕುಳಿತು ಲಾಸ್ಯವಾಡುತ್ತದೆ. ಮುಂದಿನ ಆಗುಹೋಗುಗಳು, ಜೀವನ ಇವೆಲ್ಲವುಗಳ ಪರಿಜ್ಞಾನ ಆಗ ಇರುವುದೇ ಇಲ್ಲ! " ಬೇಕೆಂದರೆ ಬೇಕು ಅಷ್ಟೇ " !

ಈ ’ಬೇಕೆಂದರೆ ಬೇಕೇ ಬೇಕು’ ಶುರುವಾದಾಗ ಅವರು ಪರಸ್ಪರ ’ಐ ಲವ್ ಯೂ ’ ಎನ್ನಲು ಹಾತೊರೆಯುತ್ತಾರೆ. ಕಾಲೇಜಿನಲ್ಲೋ ಬಸ್‍ಸ್ಟಾಪಿನಲ್ಲೋ ಯಾವುದೋ ಸಭೆ-ಸಮಾರಂಭದಲ್ಲೋ ಸಿಕ್ಕು ಮೌಖಿಕವಾಗಿ ನೇರವಾಗಿ ಅದನ್ನು ಹೇಳಿಕೊಳ್ಳುವ ಆಸೆ ಅತಿಯಾಗಿಬಿಡುತ್ತದೆ. ಅಲ್ಲಲ್ಲಿ ಅವಕಾಶ ಸಿಕ್ಕಾಗ ಮೈ ಹೊಸೆದು ಹೋಗುವುದು ಅಥವಾ ಛೇಡಿಸುವುದು ಆರಂಭವಾಗುತ್ತದೆ. ಇದಕ್ಕೆ ಅವರು ಕರೆದುಕೊಳ್ಳುವುದು ’ಪ್ರೀತಿ’ ಎಂದು. ಆದರೆ ಇದು ನಿಜವಾಗಿಯೂ ಪ್ರೀತಿಯೇ ಎನ್ನುವುದು ಯಕ್ಷಪ್ರಶ್ನೆ. ಇಲ್ಲಿಯೇ ಕೆಲವೊಮ್ಮೆ ತ್ರಿಕೋನ ಚತುಷ್ಕೋನ ಪಂಚಕೋನ ಮುಂತಾದರೀತಿಯ ’ಪ್ರೀತಿ’ ಆರಂಭಗೊಂಡು ಹುಡುಗರು ಕಾಡುಪ್ರಾಣಿಗಳ ರೀತಿ ಕಾದಾಡುತ್ತಾರೆ. ’ಕೈಕೊಟ್ಟಳು ಹುಡುಗಿ’ ಎಂದು ಬಗೆದಾಗ ಆ ’ಪ್ರೀತಿ’ ಎನ್ನಿಸಿಕೊಂಡ ಪ್ರೀತಿ ಕ್ಷಣಾರ್ಧದಲ್ಲಿ ದ್ವೇಷವಾಗಿ ಬದಲಾಗುತ್ತದೆ. ಆ ದ್ವೇಷ ಎಸಿಡ್ ದಾಳಿಗೋ ಕಿಡ್ನಾಪ್ ಮರ್ಡರ್‍ ಗೋ ಕಾರಣವಾಗುತ್ತದೆ. ಇದರಲ್ಲಿ ಇಂದಿನ ಹಲವು ಸಿನಿಮಾಗಳೂ ಪ್ರಮುಖ ಪಾತ್ರವಹಿಸುತ್ತವೆ. ಮನೋರಂಜನೆಗೆ ಸಿನಿಮಾಗಳು ಬೇಕು ನಿಜ, ಆದರೆ ಸಿನಿಮಾಗಳೆಲ್ಲಾ ಉಪೇಂದ್ರನ ಹುಚ್ಚಾಟಗಳನ್ನು ತೋರಿಸಿದರೆ ಅವು ಹಲವು ಅಪಘಾತಗಳಿಗೆ ದಾರಿಮಾಡಿಕೊಡುತ್ತವೆ.

ಇನ್ನು ವಯಸ್ಕರ ದಿಕ್ಕಿಗೆ ಮರಳೋಣ. ಮಾಧ್ಯಮವೊಂದರಲ್ಲಿ ಅಪರಾಧಿಯೊಂದನ್ನು ತೋರಿಸಿದರು. ಆತ ೫-೬ ಮದುವೆಯಾಗಿದ್ದ. ಮದುವೆಯಾಗುತ್ತೇನೆ ಎಂದು ಸ್ವಲ್ಪ ಜಾಸ್ತಿ ವಯಸ್ಕ ಹುಡುಗಿಯರ ಹಿಂದೆ ಬೀಳುವುದು, ಅವರಿಂದ ಹಣ-ಒಡವೆಗಳನ್ನು ಪಡೆಯುವುದು ಆಮೇಲೆ ನಾಪತ್ತೆಯಾಗುವುದು! ಆತನಿಗೂ ಆಕೆಗೂ ಪರಿಚಯವಾಗಿದ್ದು ದಿನಪತ್ರಿಕೆಯೊಂದರಲ್ಲಿ ಆತ ನೀಡಿದ ಜಾಹೀರಾತಿನಿಂದ. ಜಾಹೀರಾತುಗಳಿಗೆ ಮೊದಲೇ ಕಡಿವಾಣವಿಲ್ಲ. ಜಾಹೀರಾತಿನಿಂದ ಆಗುವ ಅಪರಧಗಳನ್ನು ಇನ್ನೊಮ್ಮೆ ನೋಡೋಣ. ಆತ ಕೊಟ್ಟ ಜಾಹೀರಾತಿಗೆ ಆಕೆ ಪ್ರತಿಕ್ರಿಯಿಸಿದಳು. ಆತನೂ ಮುಂದುವರಿದು ಎಲ್ಲೋ ಒಂದು ಪ್ರದೇಶದಲ್ಲಿ ಸಿಕ್ಕರು. ಅಮೇಲೆ ಯಥಾವತ್ ಅದೇಕಥೆ! ಮೊದಲ ಪರಿಚಯದಲ್ಲೇ ಅಗಲಿರಲಾರದಷ್ಟು ’ಪ್ರೀತಿ’! ಕೆಲವೇದಿನಗಳಲ್ಲಿ ಆತನಿಂದ ಹಣಸಹಾಯ ಮಾಡುತ್ತೀಯಾ ಎಂಬ ಪ್ರಸ್ತಾಪ. ಹಣನೀಡಿದ ಆಕೆಯೊಂದಿಗೆ ದೇಹಸುಖವನ್ನೂ ಪಡೆದು ಆಮೇಲೆ ನಾಪತ್ತೆ. ಆತನ ಜಂಗಮದೂರವಾಣಿ ನಿಷ್ಕ್ರ್‍ಇಯ ಅಥವಾ ಬದಲು!

ಇನ್ನೂ ಒಂದು ಹೆಜ್ಜೆ ಮುಂದುವರಿದರೆ ಅನೈತಿಕತೆ. ಗಂಡಸೂ ಹೆಂಗಸೂ ತಮ್ಮತಮ್ಮ ಇತಿಮಿತಿಗಳನ್ನು ಮರೆತು ವಿವಾಹೇತರ ಸಂಪರ್ಕಕ್ಕೆ ಮುಂದಾಗುವುದು. ’ಕದ್ದು ತಿಂದ ಹಣ್ಣಿನ ರುಚಿ ಜಾಸ್ತಿ ಇರುತ್ತದಂತೆ’ ಎಂದುಕೊಂಡ ಅವರ ಮನಸ್ಸಿನಲ್ಲಿ ’ಏನೋ ಅಂಥದ್ದು’ ಬೇಕಾಗಿರುತ್ತದೆ. ತನ್ನ ಗಂಡನಲ್ಲಿ/ಹೆಂಡತಿಯಲ್ಲಿ ಸಿಕ್ಕಿದರೂ ತೃಪ್ತಿಕರವಾಗಿರದ ಆ ’ಏನೋ ಅಂಥದ್ದು’ ಪರರ ಗಂಡ/ಹೆಂಡಿರಲ್ಲಿ ಸಿಗುತ್ತದೆ. ೨-೩ ದೊಡ್ಡ ಮಕ್ಕಳನ್ನು ಹೊಂದಿರುವ ಅನೇಕ ಹೆಂಗಸರು ಅಥವಾ ಗಂಡಸರೂ ಅದನ್ನೆಲ್ಲಾ ಮರೆತು ಎಲ್ಲೋ ಈ ರೀತಿಯ ಸಂಬಂಧಕ್ಕೆ ಮುಂದಾಗುತ್ತಾರೆ. ಕೆಲವೊಮ್ಮೆ ಇಂತಹ ಹಲವು ಸಂಬಂಧಗಳು ಒಂದಾದಮೇಲೆ ಒಂದರಂತೇ ಮುಂದುವರಿಯುತ್ತವೆ! ಕಾರಣವಿಷ್ಟೇ : ಆರ್ಥಿಕ ಸ್ವಾತಂತ್ರ್ಯ. ಗಳಿಸುವ ಅವರಿಗೆ ಮಜಾ ತೆಗೆದುಕೊಳ್ಳಲು ಬೇಡಾ ಎನ್ನಲು ಆಗುವುದೇ? ಅವರಿಗೆ ಯಾವ್ಯಾವ ರೀತಿಯ ಮಜಾ ಎಲ್ಲೆಲ್ಲಿ ಸಿಗುತ್ತದೋ ಅದ್ನ್ನು ಹುಡುಕಿ/ಹಿಂಬಾಲಿಸಿ ಪಡೆಯುತ್ತಾರೆ. ಇಂತಹ ಎಷ್ಟೋ ಕುಟುಂಬಗಳು ಒಡೆದುಹೋಗಿವೆ, ಕೆಲವು ಹಾಗೇ ಇದ್ದರೂ ಆಗಾಗ ಹೊಗೆಯಾಡುವ ಚಿಮಣಿಗಳಂತಿರುತ್ತವೆ!

ಇತ್ತೀಚೆಗಂತೂ ಡೈವೋರ್ಸ್ ಅನ್ನುವುದು ತೀರಾ ಸಾಮನ್ಯವಾಗಿಬಿಟ್ಟಿದೆ. ವಿನಾಕಾರಣ ಡೈವೋರ್ಸ್! ಇಂದು ಮದುವೆ, ಸಾಯಂಕಾಲ ಆರತಕ್ಷತೆ, ಮಾರನೇದಿನ ಬೀಗರ ಊಟ, ವಾರದಲ್ಲೇ ಮಧುಚಂದ್ರ, ಅದುಮುಗಿದ ವಾರದಲ್ಲೇ ವಿಚ್ಛೇದನ! ಇದರಲ್ಲಿ ಹೆಣ್ಣುಗಳ ಪಾತ್ರ ತೀರಾ ದೊಡ್ಡದು. ಹೆಣ್ಣೊಬ್ಬಳು ಗಂಡನ್ನು " ಆತ ಗಂಡಸೇ ಅಲ್ಲಾ " ಎಂದು ವಿಚ್ಛೇದಿಸಿದಾಗ ಹಾಗನ್ನಿಸಿಕೊಂಡ ಆತನಿಗೆ ಎಷ್ಟು ರೋಷ ಉಕ್ಕಿರಬೇಡ? ಮತ್ತೊಂದು ಮದುವೆಯಾಗಿ ಮಗು ಜನಿಸುವವರೆಗೂ ಗೊತ್ತಿರುವ ಹತ್ತಿರದ ಸಮಾಜಕೂಡ ಆತನನ್ನು ಅನುಮಾನಾಸ್ಪದ ರೀತಿಯಲ್ಲಿ ನೋಡುತ್ತಿತ್ತು! ಕೇವಲ ಆರ್ಥಿಕತೆಯನ್ನು ಅವಲಂಬಿಸಿ ಸಂಬಂಧ ಇನ್ನೊಂದು ತೆರನಾದದ್ದು. ಗಂಡನಾದವನು ಕಾರು, ಬಂಗಲೆ, ಸಾಕಷ್ಟು ಧಾರಾಕಾರವಗಿ ಹರಿಯುವ ಬ್ಯಾಂಕ್ ಬ್ಯಾಲೆನ್ಸ್ ಉಳ್ಳವನಾಗಿರಬೇಕು. ಇಲ್ಲದಿದ್ದರೆ ಮದುವೆಯಾದ ಕೆಲವೇ ದಿನಗಳು ಆ ಮದುವೆಯ ಭಾಗ್ಯ! ವಿಚ್ಛೇದಿತ ಮಹಿಳೆಯರಿಗೆ ಇನ್ನೂ ಮದುವೆಯಾಗದಿರುವ ಕನ್ಯೆಯರಿಗಿಂತಾ ಹೆಚ್ಚಿನ ಡಿಮಾಂಡು. ಹೀಗಾಗಿ ವಿಚ್ಛೇದನ ಸುಲಭ ಸೂತ್ರವಾಗಿಬಿಟ್ಟಿದೆ. ಕೆಲವರಂತೂ ಸುಖಾಸುಮ್ಮನೆ ಗಂಡನೆನಿಸಿಕೊಳ್ಳುವ ವ್ಯಕ್ತಿಯಿಂದ ಪರಿಹಾರ ಗಿಟ್ಟಿಸಲು ಮದುವೆಯಾಗುತ್ತಾರೆ. ಅದೇ ಒಂದು ದಂಧೆ! ಇನ್ನು ಕೆಲವರದು ಅನೈತಿಕ ಸಂಬಂಧದ ಹಿನ್ನೆಲೆಯುಳ್ಳದ್ದಾಗಿದ್ದು ಮದುವೆಯಾಗುವವರೆಗೂ ತೋರಬರುವುದಿಲ್ಲ, ಸಮಾಜದ ಕಣ್ಣಿಗೆ ಬೆಣ್ಣೆ ಹಚ್ಚುವ ತಂತ್ರ ಅದು! ಮದುವೆ ಎಂಬುದೊಂದು ಶಾಸ್ತ್ರಕ್ಕೆ. ಮಿಕ್ಕಿದ ಕೆಲಸಕ್ಕೆ ಬೇರೇ ಜನ ಇದ್ದಾರೆ ಎಂಬುದು ಅವರ ಅನಿಸಿಕೆ. ಇಂತಹ ಮದುವೆಗಳೂ ಕೂಡ ವಿಚ್ಛೇದನದಲ್ಲಿ ಪರ್ಯವಸಾನಗೊಳ್ಳುತ್ತವೆ.

ದಿನವೂ ಆಂಗ್ಲ ನಿಯತಕಾಲಿಕಗಳಲ್ಲಿ ಒನ್ ನೈಟ್ ಸ್ಟೇ, ಒನ್ ಡೇ ಫ್ಲಿಂಗ್, ಲಿವಿಂಗ್ ಟುಗೆದರ್ ಮತ್ತಿತರ ವಿದೇಶೀ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೆಲಸ ನಡೆಯುತ್ತಿದೆ. ಧರಿಸುವ ಬಟ್ಟೆಗಳಂತೂ ಎಲ್ಲವನ್ನೂ ಎತ್ತಿ ತೋರುವ ’ಅಪಾರ’ ದರ್ಶಕಗಳಾಗಿವೆ. ಹುಡುಗಿ ಯಾರು ಹೆಂಗಸು ಯಾರು ಎಂಬ ಭೇದವನ್ನೇ ಹೇಳದ ದಿರಿಸುಗಳು! ಯಾವಾಗ ನೋಡಿದರೂ ಆರ್ಕುಟ್ಟು, ಫೇಸ್ ಬುಕ್ಕು ಇದರಲ್ಲೇ ವ್ಯವಹಾರ! ಇದನ್ನೆಲ್ಲಾ ನೋಡಿದಾಗ ಅನ್ನಿಸುವುದು " ಐ ಲವ್ ಯೂ " ಎಂಬ ಹೇಳಿಕೆಗೆ ಅರ್ಥವಿದೆಯಾ? ಅದು ಕೇವಲ ದೈಹಿಕವಾಗಿ ತೆವಲನ್ನು ತೀರಿಸಿಕೊಳ್ಳುವ ಆಸೆಯಿಂದ ಹೇಳುವ ಮಾತಲ್ಲವಾ ? ಭಾರತದ ಸಾಮಾಜಿಕ ಮೌಲ್ಯ ಯಾಕೆ ಹೀಗಾಗುತ್ತಿದೆ? ಹಿಂದೆ ಹೀಗಿತ್ತಾ ? ಇಷ್ಟೊಂದು ಗರಿಷ್ಠಪ್ರಮಾಣದಲ್ಲಿ ವಿಚ್ಛೇದನ, ಲವ್ವಿ-ಡವ್ವಿ ನಡೆಯುತ್ತಿತ್ತಾ ? ಹಾಗಾದ್ರೆ ಈಗ ಮಾತ್ರ ಯಾಕೆ ಹೀಗಾಗ್ತಾ ಇದೆ? ಆಂಗ್ಲರ ಬೇಡದ ಸಂಸ್ಕೃತಿ ನಮ್ಮ ಸಮಾಜದಮೇಲೆ ಪರಿಣಾಮ ಬೀರಿದೆ ಎಂದರೆ ತಪ್ಪಾ? ವಿಧವಾ ಅಥವಾ ವಿಚ್ಛೇದಿತ ಮಹಿಳೆಯ ಮದುವೆ ನಿಷೇಧವಿತ್ತಲ್ಲವಾ? ಮಹಿಳೆಯರು ಸಾಂಕೇತಿಕವಾಗಿ ತನ್ನ ಶೀಲವನ್ನು ಮಾರಬಾರದೆಂಬ ಅಥವಾ ಪರಭಾರೆಮಾಡಬಾರದೆಂಬ ಕಾರಣಕ್ಕೆ ಕಿವಿ,ಮೂಗು,ಕೈ, ಕೊರಳು, ಕಾಲು ಈ ಅಂಗಗಳಲ್ಲಿ ಆಯಾ ಆಭರಣಗಳನ್ನು ಧರಿಸುತ್ತಿದ್ದರಲ್ಲವಾ? ಇವತ್ತು ಈ ಕಟ್ಟಳೆಗಳು ಕೇವಲ ಹಿಂದುಳಿತ ಸಂಸ್ಕೃತಿ ಎಂದು ನೋಡುವ ನಾವು ಮುಂದೆ ಸಹಜವಾಗಿ ಅನುಭವಿಸಬೇಕಾದ ಹಲವು ಸಮಾಜಿಕ ಪಿಡುಗುಗಳು ಈಗಲೇ ಗೋಚರಿಸಲ್ಪಡುತ್ತಿವೆಯಲ್ಲವೇ? ಅಂದರೆ ’ಐ ಲವ್ ಯೂ " ಎಂಬುದು ಅಣ್ವಸ್ತ್ರಕ್ಕಿಂತಾ ದೊಡ್ಡ ಅಸ್ತ್ರವೆಂದರೆ ತಪ್ಪೇ ? ಈ ಕುರಿತು ಚಿಂತಕರು ಕುಳಿತು ಮಂಥನಮಾಡಬೇಕಾಗಿದೆ. ’ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೇ’ ಎನ್ನುವ ನಾಣ್ನುಡಿ ಇದೆಯಲ್ಲಾ ಅದನ್ನು ಸರಿಯಾಗಿ ಅರ್ಥೈಸಿನೋಡಿ. ಇಂದಿನ ಕಲಿತ ಹೆಣ್ಣು ಹಲವು ಶಾಲೆಗಳನ್ನು ಅಲ್ಲಲ್ಲಿ ತೆರೆಯುತ್ತಾಳೆ! ಯಾಕೆಂದರೆ ಅವಳಿಂದ ಸಮಾಜಕ್ಕೆ ಆಗುವ ಅಪಚಾರ ಕಮ್ಮಿಯೇ? ಕಲಿಕೆ ಬೇರೆ ಮತ್ತು ಸಂಸ್ಕಾರ ಬೇರೆ. ಕೇವಲ ಪದವಿ ಓದಿದ ಹೆಣ್ಣುಮಕ್ಕಳು ಸಂಸ್ಕಾರವಂತರು ಎನ್ನಲು ಸಾಧ್ಯವೇ? ಹಾಗಂತ ಹೆಚ್ಚಿನ ಓದಿರದ ನಮ್ಮ ಹಳ್ಳಿಯ ಹೆಂಗಳೆಯರಲ್ಲಿ ಸಂಸ್ಕಾರದ ಕೊರತೆ ಇದೆಯೇ? ಸ್ವಸ್ಥಸಮಾಜ ಮುನ್ನಡೆಯಬೇಕೆಂದಿದ್ದರೆ ಮಹಿಳೆಯರಿಗೆ ಮಾರ್ಗದರ್ಶನ ಅಗತ್ಯ ಎಂಬುದು ಹಲವರ ಅಂಬೋಣವಾಗಿದೆ. ಅಂದಹಾಗೇ ಮಾಧ್ಯಮಗಳು ತಮ್ಮ ಟಿ.ಆರ್.ಪಿ ರೇಟಿಗಾಗಿ ಕಂಡಿದ್ದನ್ನೆಲ್ಲಾ ದೊಡ್ಡಸುದ್ದಿಮಾಡಿ ಅನೈತಿಕತೆಯನ್ನೇ ವಿಜೃಂಭಿಸಿ ಹುಯಿಲೆಬ್ಬಿಸುವುದನ್ನು ನಿರ್ಬಂಧಿಸಲು ಸಮಾಜಕಲ್ಯಾಣ ಇಲಾಖೆ ತಲೆಹಾಕಬೇಕಾಗಿದೆ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ.

Wednesday, May 18, 2011

ಮಲಯಾಳೀ ಕುಟ್ಟಿಚ್ಚಾತ್ತನ್, ಎಂ.ಜಿ.ಎಲ್ ಟೆಕ್ನಾಲಜಿ ಮತ್ತು ಚಿಲ್ಲರೆ


ಮಲಯಾಳೀ ಕುಟ್ಟಿಚ್ಚಾತ್ತನ್, ಎಂ.ಜಿ.ಎಲ್ ಟೆಕ್ನಾಲಜಿ ಮತ್ತು ಚಿಲ್ಲರೆ

" ಸಂಭೋ ಮಹಾದೇವ ! ಯುಗಧರ್ಮಗ್ಗೆ ತಗ್ಗಂತೇ ಎಲ್ಲವೂ ನಡೆಯಬೇಗಲ್ಲವೇ ? ಅದಗ್ಗೇ ನಿಮ್ಮ ಮನೆಯಲ್ಲಿ ಮಣಿಪ್ರಾಬ್ಲಂ, ಅನಾರೋಕ್ಯ, ಹಿಡಿದ ಗೆಲಸಗಳು ಆಕದೇ ಇರುವಂತದು, ಪೆಣ್ಣು-ಗಂಡು ಸಮಸ್ಯಾ, ಸಂತಾನಹೀನ ಸಮಸ್ಯಾ, ಸ್ತ್ರೀ ವಶೀಗರಣಂ, ಬ್ಯುಸಿನೆಸ್ಸಲ್ಲು ಧನಾಗಮಂ, ಜನವಶೀಗರಣಂ, ವಾಸ್ತುದೋಸ ನಿವಾರಣಂ ಹೀಗೇ ಹಲವು ಸಮಸ್ಯಾ ತಕ್ಕೊಂಡು ನಮ್ಮಲ್ಲಿ ಪರಿಯಾರವಕ್ಕುಂ.....ಇದು ಮಳಯಾಳೀ ಕುಟ್ಟಿಚ್ಚಾತ್ತನ್ ಸಗಾಯದಿಂದ ಪರಂಪರಾ ವಂದಿದ್ದು "

ನಗಲಿಕ್ಕೆ ಏನಿದೆ ಹೇಳಿ? ಎದುರು ಕುಳಿತ ಪ್ರಶ್ನಾರ್ಥಿ ದಂಗು ಬೀಳಬೇಕು! ಅಷ್ಟು ಅಚ್ಚ ಕನ್ನಡದಲ್ಲಿ ನಮ್ಮ ಕೇರಳದ ಲ್ಯಾಪ್ ಟಾಪ್ ಜ್ಯೋತಿಷಿಗಳು ಮಾತನಾಡುತ್ತಾರೆ. ಅವರು ಆರಾಧಿಸದೇ ಬಿಟ್ಟ ದೇವರು ಯಾವುದೋ ಇರಲಿಕ್ಕಿಲ್ಲ. ಬೇಕಾದರೆ ಅವರನ್ನೇ ಕೇಳಿ :

" ಹೌದು ಹೌದು ಪಚ್ಚವಳ್ಳ ಕುಳಕಿ ಗುರುವಾಯೂರಪ್ಪನ್ ಸಬರಿಮಲೈ ಅಯ್ಯಪ್ಪ ಸ್ವಾಮಿಗಳ್ ಬಾಲಾಂಜನೇಯ ದೇವಿ ಕಾಳಿಕಾ ದುರ್ಗಾ ಮೂಕಾಂಬಾ ಸತಕೋಟಿ ದೇವರುಗಳ್ ಯಂಗಳ ಆರಾಧನೆ ........."

ಓಹೊಹೊಹೋ ಸಾಕು ಸ್ವಾಮೀ ಸಾಕು, ಗೊತ್ತಾಯ್ತು ಬಿಡಿ, ನಿಮ್ಮಷ್ಟು ಭಾಗ್ಯವಂತರು ಯಾರು ಹೇಳಿ. ಎದುರಿಗೆ ಕುಳಿತಾಗ ನೀವು ದೂಸರಾ ಮಾತೇ ಆಡೋಹಾಗಿಲ್ಲ! ಎಲ್ಲವೂ ಮಂತ್ರಮಯ. ನಿಮಗೆ ಏನಾಗಬೇಕು ಹೇಳಿ, ಎಲ್ಲವೂ ಆಗುತ್ತದೆ. ಯಾರಾದ್ರೂ ಹೋದವರನ್ನು ಬದುಕಿಸಿಕೊಡಿ ಎಂದರೆ ಮಾತ್ರ ಸಾಧ್ಯವಾಗಲಿಕ್ಕಿಲ್ಲ, ಮಿಕ್ಕಿದ್ದೆಲ್ಲಾ ಸಾಧ್ಯ ಎನ್ನುತ್ತಾರೆ ಈ ಜ್ಯೋತಿಷಿಗಳು. ಅವರು ದಿನವೂ ದೇವರುಗಳ ಜೊತೆ ಮಾತನಾಡಬಲ್ಲ ಮಹಾಮಹಿಮರು. ಅದರಲ್ಲೂ ಮಳಯಾಳೀ ಕುಟ್ಟಿಚ್ಚಾತ್ತನ್ ಅವರ ಕೈಗೊಂಬೆಯ ಥರ ಆಗಿಬಿಟ್ಟಿದ್ದಾನೆ !

" ಗುರುಕ್ಕಳೇ ಯಂಗಳ್ ಗರ್ಣಾಟಗ ಬಿಜೇಪಿ ಸರಗಾರ ಉಳಿಯುತ್ತದೆಯೋ ? ಹೇಳಿ "

" ಆಯ್ಯಯ್ಯೋ ನಿಲ್ಲಿ ನಿಲ್ಲಿ ನಮ್ಮ ಕುಟ್ಟಿಚ್ಚಾತ್ತನ್ ಎಲ್ಲೋ ಹೋಗಿದ್ದಾರೆ [ಆಫ್ ಲೈನ್ ? ] ಅವರು ವಂದಮೇಲೆ ಉತ್ತರ ಗೇಳುತ್ತಾರೆ. ಕೊರ್ಚ ಸಮಯಂ ...................."

" ಸಮಯವೇ ಅದು ಮಾತ್ರ ಸಾಧ್ಯವೇ ಇಲ್ಲ, ನಮಗೆ ಅದೇ ಕುತೂಹಲ ಗುರುಕ್ಕಳೇ .... ಕೊರ್ಚ ಬೇಗಂ "

" ಎಂದು ಮಾರಾಯರೆ ನಿಂಗಳ್ ಅರ್ಜೆಂಟು ಮಾಡವೇಂಡ ... ಕುಟ್ಟಿಚ್ಚಾತ್ತನ್ ಕೋಪ ಬರ್ತಾರೆ "

" ನಮ್ಮ ಪುಟ್ಸಾಮಿಗೆ ಮಕ್ಳಿಲ್ಲ ಏನಾದ್ರೂ ಮಾಡ್ಕೊಡ್ತೀರಾ ? "

" ಹೋ ಹೋ ....ನಮ್ಮಿಂದ ಎಷ್ಟು ಮಗು ಹುಟ್ಟಿಲ್ಲ .....ಎಂತೆಂತಾ ಪೀಪಳ್ಗೆಲ್ಲಾ ಮಕ್ಕಳು ಮಾಡಿತ್ತು ನಾವು ..ನಿಮಕ್ಕೆ ಇಲ್ಲಾ ಎನ್ನುವುದೋ ? ಆದರೆ ಒಂದು ವಿಷಯಂ .....ಕೊರ್ಚ ಹೈ ಎಕ್ಸ್‍ಪೆಂಡಿಚರ್ ......ಮೂರು ದಿನ ೭೨ ಹವರು ಏಗಾಂತ ಪೂಜಾ....೧೦೧ ತೆಂಗಿನಗಾಯಿ ಗಳಸಂ, ವಸ್ತ್ರಂ, ಪಂಚಕಾಳೀ ಪೂಜಾ, ಭೋಜನಂ, ಕುಟ್ಟಿಚ್ಚಾತ್ತನ್ ಪೂಜಾ ...ಎರ್ಲಿ ಮಾರ್ನಿಂಗು ಪಚ್ಚವಳ್ಳ ಕುಳಿಕಿ ಆಯಿ ತದನಂತರಂ ಪೂಜಾ ....ಮನಸಿಲಾಯೋ ? "


" ಆಗ್ಲಿ ಬಿಡಿ ಅಷ್ಟೇ ತಾನೇ ಆತ ಕೊಡ್ತಾನೆ. ಖರ್ಚಿಗೆಲ್ಲಾ ತೊಂದರೆ ಇಲ್ಲಬಿಡಿ ಗುರುಕ್ಕಳೇ .... ಹಾಂ ಇನ್ನೊಂದು ನಾನು ಒಂದು ಪಕ್ಷ ಕಟ್ಟಬೇಕೆಂದಿದ್ದೇನೆ. ಅದಕ್ಕೆ ನಾನು ರಾಷ್ಟ್ರಾಧ್ಯಕ್ಷ ಮತ್ತು ನನ್ನ ಮಗ [ ಇನ್ನೂ ೪-೫ ವರ್ಷ ವಯಸ್ಸು ಈಗಲೇ ತಯಾರುಮಾಡಿದರೆ ಮುಂದೆ ಸರ್ ಹೋಗ್ತದೆ ಅದಕ್ಕೇ] ರಾಜ್ಯಾಧ್ಯಕ್ಷ .....ಹೇಗೆ ನಮ್ಮ ರಾಜಕೀಯ ಭವಿಷ್ಯ ಚೆನ್ನಾಗಿದೆಯಾ ? "

" ಕುಟ್ಟಿಚ್ಚಾತ್ತನ್ ಒಂದು ಸಲ ಒಂದೇ ಸಮಸ್ಯಾಗೆ ಪರಿಗಾರ ಹೇಳುತ್ತಾನೆ.....ತಮ್ಮ ಈ ಸಮಸ್ಯಾ ನಾಳೆ ಗೇಳುತ್ತೇನೆ"

ಆಯ್ತು ಸ್ವಾಮೀ ನಿಮ್ಮ ಕುಟ್ಟಿಚ್ಚಾತ್ತನ್ ಅದ್ಯಾವಾಗ ಆನ್‍ಲೈನ್ ಬರುತ್ತಾನೋ ಆಗ್ಲೇ ಹೇಳಿ ಪರವಾ ಇಲ್ಲ. ಸದ್ಯ ಇಲ್ಲಿಗೆ ಬಿಟ್ಟಿರಲ್ಲ ಎಂದು ಎದ್ದುಬರಬೇಕಾಗುತ್ತದೆ. ಇಂತಹ ಹಲವು ಕುಟ್ಟಿಚ್ಚಾತ್ತನ್‍ಗಳು ನಗರದ ತುಂಬ ಅಲ್ಲಲ್ಲಿ ಠಿಕಾಣಿಹೂಡಿ ಹಲವು ರೀತಿಯಲ್ಲಿ ತಮ್ಮ ಬೇಳೇ ಬೇಯಿಸಿಕೊಳ್ಳುತ್ತಿರುತ್ತಾರೆ. ಅಸಲಿಗೆ ಅವರ ಸಮಸ್ಯೆಗಳಿಗೇ ಅವರಲ್ಲಿ ಉತ್ತರವಿರುವುದಿಲ್ಲ! ಆದರೂ ಹಲವರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಕೂತಿರುತ್ತಾರೆ.

ಮೊದಲೇ ರಮಲಜ್ಯೋತಿಷ್ಯ, ಕಮಲಜ್ಯೋತಿಷ್ಯ, ಫಲಜ್ಯೋತಿಷ್ಯ, ವೈಜ್ಞಾನಿಕ ಜ್ಯೋತಿಷ್ಯ, ಅಷ್ಟಮಂಗಲ ಭವಿಷ್ಯ, ಹಕ್ಕಿಶಕುನ, ಹಸ್ತಸಾಮುದ್ರಿಕ, ನಾಡೀ ಜ್ಯೋತಿಷ್ಯ, ಸಂಖ್ಯಾ ಶಾಸ್ತ್ರ, ಕುಡಿದ ಕಾಫೀ ಕಪ್ಪು ನೋಡಿ ಭವಿಷ್ಯ, ದರ್ಪಣಶಾಸ್ತ್ರ, ಟೆರೋಟ್ ಕಾರ್ಡ್ ರೀಡಿಂಗ್ ಒಂದೇ ಎರಡೇ ಇನ್ನೂ ಹಲವಾರು ನಮ್ಮ ಹುಚ್ಚಿಗೆ ತಕ್ಕಂತೇ ಲಭ್ಯವಿವೆ. ಜೇಬುಗಟ್ಟಿ ಇದ್ದರೆ ಮಜಾತೆಗೆದುಕೊಳ್ಳಬಹುದು!ಈ ಎಲ್ಲರಲ್ಲೂ ಬಹುತೇಕವಾಗಿ ಸರ್ವೇ ಸಾಮಾನ್ಯವಾಗಿ ಸಿಗುವ ಒಂದು ವಸ್ತುವೆಂದರೆ ಲ್ಯಾಪ್ ಟಾಪ್! ವಿಪರ್ಯಾಸವೆಂದರೆ [ ಇದಿಷ್ಟೂ ಜನ ಕುಳಿತಲ್ಲೇ ಕಾಸುಮಾಡುವ ಕಲೆಯನ್ನು ಕಲಿತ ನಿಪುಣರಾಗಿರುತ್ತಾರೆಯೇ ವಿನಃ ಯಾವುದೂ ಪ್ರಯೋಜನಕ್ಕೆ ಬರುವಂತಹುದಲ್ಲ. ] ಅಸಹಾಯಕತೆಯಲ್ಲಿ ತೊಳಲಾಡುತ್ತಿರುವವರೇ ಇವರ ಗಿರಾಕಿಗಳಾಗಿದ್ದು ತಿಗಣೆ ರಕ್ತಹೀರುವಹಾಗೇ ತೊಂದರೆಯೆಂದು ಬಂದ ಜನರ ಮಾನಸಿಕ ಸ್ಥಿತಿ ಮತ್ತು ಅವರ ಆರ್ಥಿಕಸ್ಥಿತಿಯನ್ನು ಆಮೂಲಾಗ್ರ ಒಂದೇ ಸಿಟ್ಟಿಂಗ್‍ನಲ್ಲಿ ಅಳೆಯುವ ಅವರು ಯಾರಿಂದ ಹೇಗೆ, ಯಾವಾಗ, ಎಲ್ಲಿ, ಎಷ್ಟುದುಡ್ಡು ಪೀಕಬೇಕೆಂಬುದನ್ನು ಗುರುತಿಸಬಲ್ಲವರಾಗಿರುತ್ತಾರೆ. ಇತ್ತೀಚೆಗೆ ಇಂತಹ ಲಕ್ಷಾಂತರ ಭೋಗಸ್ ಜ್ಯೋತಿಷಿಗಳಿಂದ,ವಾಸ್ತು ತಜ್ಞರಿಂದ ಮಧ್ಯಮವರ್ಗದವರ ಸಮಸ್ಯೆಗಳು ಇನ್ನೂ ಬಿಗಡಾಯಿಸುತ್ತಿವೆ, ಹಲವು ಪ್ರದೇಶ ಹಡಾಲೆದ್ದು ಮೂಢವಾಗಿಹೋಗಿದೆ.

-----------

ಪಕ್ಕದ ಮನೆಯ ಪಾರ್ವತಿ ಮೆನನ್ ಹೊಸದಾಗಿ ಕನ್ನಡ ಕಲಿಯುತ್ತಿದ್ದರು. ಬೆಳಿಗ್ಗೆ ಎದುರಾದವರನ್ನು ಮಾದಕ್ಕ ಕೇಳಿದಳು " ಅಕ್ಕಾ ತಿಂಡಿ ಆಯ್ತಾ ? "

ಪಾರ್ವತಿ ಮೆನನ್ ಉತ್ತರ " ಇಲ್ಲ ಇಲ್ಲ ನಿನ್ನೆ ರಾತ್ರಿ ಮಲಗುವಾಗ ಒಂದುಗಂಡ ಬೆಳಿಗ್ಗೆ ಏಳುವಾಗ ಎಂಟುಗಂಡ, ಅದಕ್ಕೇ ಲೇಟು "


------------

ಇನ್ನು ಎಂ.ಜಿ.ಎಲ್ ಟೆಕ್ನಾಲಜಿ ! ಇದೊಂದು ಪ್ರಪಂಚದಲ್ಲೇ ಹೊಸದಾಗಿ ಸಂಶೋಧಿಸಲ್ಪಟ್ಟ ಟೆಕ್ನಾಲಜಿ! ಎಂ.ಜಿ.ಎಲ್ ಎಂದರೆ ’ ಮೆಕಾನಿಕಲ್ ಗ್ರಾಸ್ ಲಾಕ್’ ಎಂದು ಅದರ ವಿಸ್ತಾರರೂಪ. ಈ ಟೆಕ್ನಾಲಜಿಯನ್ನು ಪೊರಕೆಯೊಂದರಲ್ಲಿ ಬಳಸಲಾಗಿದೆ! ಅಬ್ಬಬ್ಬ ಅದೇನು ಅಂತೀರೋ ನಿಧಾನವಾಗಿ ಕೇಳಿ: ಸ್ವಾತಂತ್ರ್ಯ ಪೂರ್ವದಲ್ಲಿ ಪೊರಕೆ [ಹಿಡಿಕಟ್ಟು] ಅಥವಾ ಕಸಪೊರಕೆಗಳಿಗೆಲ್ಲಾ ಯಾವುದೇ ಬ್ರಾಂಡ್ ಇರಲಿಲ್ಲ. ಇದನ್ನು ಸ್ವಾತಂತ್ರ್ಯ ಬಂದ ೪೦-೪೫ ವರ್ಷಗಳ ವರೆಗೂ ಯಾರೂ ಲೆಕ್ಕಿಸಲೇ ಇಲ್ಲ. ಮುಂದೆ ಹೀಗೇ ಬಿಟ್ಟರೆ ಪೊರಕೆಗಳ ಘನತೆಗೆ ಕುಂದುಂಟಾಗುತ್ತದೆಂದೂ ಹಿಂದುಳಿದ ತರಗತಿಯಲ್ಲಿರುವ ಪೊರಕೆಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಒಂದೆರಡು ಜನ ಪಂಡಿತರು ಅವುಗಳಿಗೆ ಬ್ರಾಂಡ್ ನೀಡಿದರು.

ದಿನಗಳೆದಂತೇ ಅವುಗಳ ಮರ್ಯಾದೆಗೆ ತಕ್ಕನಾಗಿ ಅವುಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿ ಪ್ಯಾಕಿಂಗ್ ಮಾಡಲಾಯಿತು. ಹಾಗೆ ಪ್ಯಾಕ್ ಮಾಡಲ್ಪಟ್ಟ ಪೊರಕೆಗಳು ರಾಜ್ಯಾದ್ಯಂತ ತಿರುಗಾಡ ಹತ್ತಿದವು! ಮಾರಾಟ ಭರಾಟೆ ಜಾಸ್ತಿಯಾದಾಗ ಮೂಲವಸ್ತುಗಳಲ್ಲಿ ಒಂದನೆಯದು ಹುಲ್ಲಿನಥರದ ಮರದ ಟೊಂಗೆಗಳು ಮತ್ತೊಂದು ಉತ್ತಮ ಪ್ಲಾಸ್ಟಿಕ್ ಹಿಡಿಕೆ ಇವೆರಡರ ಗುಣಮಟ್ಟದಲ್ಲೂ ಕಳಪೆ ದರ್ಜೆ ಕಾಣಹತ್ತಿತ್ತು. ಬಲಿಯದ ಮರಗಳ ಎಳೆಯ ಟೊಂಗೆಗಳನ್ನು ಕತ್ತರಿಸಿ ಹಸಿಯಿರುವಾಗಲೇ ಅವುಗಳನ್ನು ಕಟ್ಟಿ ಒಂದೊಂದು ಹಿಡಿಕೆಯಲ್ಲಿ ಅವುಗಳನ್ನು ತೂರಿಸಿ ಆಮೇಲೆ ಅವುಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿಪ್ಯಾಕ್ ಮಾಡಿ ಸರಬರಾಜು ಮಾಡಲಾಯಿತು. ಮಾಧ್ಯಮಗಳಲ್ಲಿ ಜೋರಾಗಿ ಜಾಹೀರಾತು ನೀಡಲಾಯಿತು! ಜನ ಕೊಂಡೇ ಕೊಂಡರು!

ಕೊಂಡುತಂದ ಪೊರಕೆ ಕಾಸಿಗೆ ಸರಿಯಾದ ಮೌಲ್ಯವನ್ನು ಒದಗಿಸದಾಗ ಜನ ಅದನ್ನು ದೂರಹತ್ತಿದರು. ನಿಜಕ್ಕೂ ಹೇಳಲೋ ನಮ್ಮ ಹಳ್ಳಿಗಳಿಂದ ತಯಾರಾಗಿ ಬರುವ ತೆಂಗಿನಕಡ್ಡಿ ಪೊರಕೆ, ಅಡಿಕೆಸೋಗೆ ಕಡ್ಡಿ ಪೊರಕೆ, ಅಂಚಿಕಡ್ಡಿ ಪೊರಕೆ ಇವೆಲ್ಲಾ ಸಾಕಷ್ಟು ಇದ್ದರೂ ಜನರಿಗೆ ಈ ಹೊಸರೂಪದ ಪೊರಕೆ ಕ್ರಾಂತಿಕಾರಿಯಾಗಿ ಕಂಡಿತು! ಕಸದಮೇಲೆ ಎಷ್ಟೇಸಲ ಕ್ರಾಂತಿಯ ಕಹಳೆ ಮೊಳಗಿದರೂ ಕಸಮಾತ್ರ ಹಾಗೇ ಉಳಿಯ ಹತ್ತಿತು. ಜೊತೆಗೆ ಬ್ರಾಂಡೆಡ್ ಪೊರಕೆಯೇ [ಆರಂಭದಲ್ಲಿ ಚೆನ್ನಾಗಿ ಝಾಡಿಸಿ ಆಮೇಲೆ ಬಳಸಿದರೂ ಸಹ] ಸ್ವಯಂ ಧೂಳನ್ನು ಉಗುಳಹತ್ತಿತು. ಎಷ್ಟೋ ಕಡ್ಡಿಗಳು ಮಧ್ಯೆ ಮಧ್ಯೆ ತುಂಡಾಗುತ್ತಿದ್ದವು. ಕೆಲವೊಮ್ಮೆ ಹಿಡಿಕೆ ಕಳಚಿ ಪೊರಕೆಯ ಬುಡ ಹೊರಗೆಬಂದು ಕ್ಯಾಬರೇ ಡ್ಯಾನ್ಸ್ ಮಾಡಹತ್ತಿತು! ಕೂದಲು ಉದುರಿ ಕೆಲವಷ್ಟೇ ಉಳಿದಮೇಲೆ ನವಿಲುಕೋಸಿನ ಥರಾ ಕಾಣೋ ತಲೆಯಂತೇ ಕಡ್ಡಿಗಳ ತುದಿ ಮುರಿಮುರಿದು ಮೊಂಡಾಗಿ ಖರೀದಿಸಿದ ಮೂರೇ ದಿನದಲ್ಲಿ ಪೊರಕೆಗಳು ಬಿಕನಿ ತೊಟ್ಟವು!

ಇಷ್ಟರಲ್ಲೇ ಬೇಸತ್ತ ಯಾವನೋ ಒಬ್ಬ ಹೊಸದೊಂದು ಅಚ್ಚುತಯಾರಿಸಿಕೊಂಡು ಸಂಪೂರ್ಣ ಪ್ಲಾಸ್ಟಿಕ್ ಪೊರಕೆಯನ್ನು ಮಾರುಕಟ್ಟೆಗೆ ತಂದ. ಆರಂಭದಲ್ಲಿ ಕೆಲವು ನ್ಯೂನತೆಗಳಿದ್ದರೂ ಕ್ರಮೇಣ ತಿದ್ದುಪಡಿಗೊಂಡ ಆವಿಷ್ಕಾರಗಳಲ್ಲಿ ಆ ಪ್ಲಾಸ್ಟಿಕ್ ಪೊರಕೆಗಳು ಬರಹತ್ತಿದವು. ಜನ ಈಗ ಅವುಗಳನ್ನೇ ಕೊಳ್ಳ ಹತ್ತಿದರು. ಬ್ರಾಂಡೆಡ್ ಗ್ರಾಸ್ ಬ್ರೂಮ್ ಗಳಿಗಿಂತ ಪ್ಲಾಸ್ಟಿಕ್ ಬ್ರೂಮ್ ಗಳ ತಾಳಿಕೆಬಾಳಿಕೆ ಜಾಸ್ತಿಯಾಗಿ ತೋರಿತು. ಕೊಟ್ಟ ಹಣಕ್ಕೆ ಯಾವುದೇ ಕಾರಣಕ್ಕೂ ಮೋಸವಿಲ್ಲದ ರೀತಿಯಲ್ಲಿ ಈ ಪೊರಕೆಗಳು ಡ್ಯೂಟಿಮಾಡಿದವು.

ಇದನ್ನೆಲ್ಲಾ ಮನಗಂಡ ಬ್ರಾಂಡೆಡ್ ಗ್ರಾಸ್ ಬ್ರೂಮ್ ತಯಾರಕರು ಬ್ರೂಮ್ ಜೊತೆಗೆ ಒಂದು ಮೊರವನ್ನೂ ಮುಕ್ತವಾಗಿ ಕೊಟ್ಟರೂ ಪೊರಕೆಗಳ ದರವನ್ನು ಹೆಚ್ಚಿಸಿದರು. ಆದರೂ ಮಾರುಕಟ್ಟೆ ಯಾಕೋ ಪಿಕ್-ಅಪ್ ಆದಹಾಗೇ ಕಾಣಲಿಲ್ಲ. ಆಗ ತಯಾರಕರ ’ಆರ್ ಎಂಡ್ ಡಿ’ಯಲ್ಲಿ ಕಂಡುಕೊಂಡ ಹೊಸ ಟೆಕ್ನಾಲಜಿಯೇ ’ಎಂ.ಜಿ.ಎಲ್’ ! ಸಪಾಟಾದ ಬಾಯುಳ್ಳ ಪ್ಲಾಸ್ಟಿಕ್ ಹಿಡಿಕೆಯಲ್ಲಿ ಹಿಂಬಾಗಿದ ರಿಬ್ಸ್ ಗಳಿವೆಯೆಂತೆ. ಹುಲ್ಲನ್ನು ಜಾರದಂತೇ ಅವು ಬಂಧಿಸುತ್ತವಂತೆ. ಮತ್ತು ಯಂತ್ರಗಳ ಸಹಾಯದಿಂದ ಒಂದು ಮೊಳೆಯನ್ನು ಕೂರಿಸಿರುವುದರಿಂದ ಯಾವುದೇ ಕಾರಣಕ್ಕೂ ಕಡ್ಡಿಗಳು ಜಾರಿಬರುವುದಿಲ್ಲವಂತೆ. ಹಿಡಿಕೆಯು ಹಿಂಭಾಗದಲ್ಲಿ ಉರುಟಾಗಿದ್ದು ಅಲ್ಲೂ ಒಳಗಡೆ ಹಿಂಭಾಗಿದ ರಿಬ್ಸ್ ಗಳಿರುವುದರಿಂದ ಕಡ್ಡಿಗಳು ಏನೇನೇಮಾಡಿದರೂ ಆಚೆ ಬರುವುದಿಲ್ಲವಂತೆ. ಹಿಡಿಕೆಯನ್ನು ಹಿಡಿಯುವ ಭಾಗ ಮೆತ್ತಗಿದ್ದು ಕೈಗಳಿಗೆ ಗಾಯವಾಗುವುದಿಲ್ಲಾ ಎನ್ನುತ್ತಾರೆ. ಜಾಹೀರಾತನ್ನು ಓದಿದವರಿಗೆ ಪ್ರತಿ ಸಾಲಿನಲ್ಲೂ ಕಾಣಸಿಗುವುದು ’ಹುಲ್ಲಿನ ಕಡ್ಡಿಗಳನ್ನು ಬಂಧಿಸುವಲ್ಲಿ ಸಹಕಾರಿಯಾಗಿದೆ’ ಎಂಬ ವಿಷಯ. ಈ ಜಾಹೀರಾತನ್ನು ನೋಡಿದಾಗ ನನಗೆ ನೆನಪಾದದ್ದು ತಿಗಣೆ ಹೊಡೆಯುವ ಮಶಿನ್ನು [ಬಿ.ಕೆ.ಟಿ--ಬೆಡ್‍ಬಗ್ ಕಿಲ್ಲಿಂಗ್ ಟೆಕ್ನಾಲಜಿ]! ಯಾರೋ ಒಬ್ಬಾತ ಅದನ್ನು ವಿ.ಪಿ.ಪಿ ಮೂಲಕ ತರಿಸಿದ್ದನಂತೆ, ಬಾಕ್ಸ್ ಬಿಚ್ಚಿದಾಗ ಉರುಟಾದ ಎರಡು ಕಲ್ಲುಗಳು ಮತ್ತು ಒಂದು ಸಣ್ಣ ಪುಸ್ತಿಕೆ ಇದ್ದವು. ಒಂದು ಕಲ್ಲನ್ನು ನೆಲದಮೇಲೆ ಜಾಗರೂಕತೆಯಿಂದ ಇಟ್ಟು ಅದರಮೇಲೆ ತಿಗಣೆಯನ್ನು ಮಲಗಿಸಿ ಇನ್ನೊಂದು ಕಲ್ಲಿನಿಂದ ಮಸಾಜ್ ಮಾಡಿದರೆ ಸಾಕು ಎಂದು ಜೊತೆಗಿರುವ ಪುಸ್ತಿಕೆ ಹೇಳುತ್ತಿತ್ತು! ಇದಕ್ಕೂ ಎಮ್.ಜಿ.ಎಲ್. ಟೆಕ್ನಾಲಜಿಗೂ ಬಹಳ ವ್ಯತ್ಯಾಸವೇನೂ ಕಾಣಿಸುವುದಿಲ್ಲ ಅಲ್ಲವೇ ? ಬ..ಬಾಯ್