ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, June 7, 2010

ಸಹಾಯ ’ಹಸ್ತ’!


ಸಹಾಯ ’ಹಸ್ತ’!

ಭಳಿರೇ ಪರಾಕ್ರಮ ಕಂಠೀರವ ! ನಮೋನ್ನಮಃ !

"ಇತ್ತ ಕಾಂಗ್ರೆಸ್ ಪಾಳೆಯದಲ್ಲಿ ಬಹುದಿನಗಳಿಂದ ಯಾವುದೇ ಕಜ್ಜಾಯದ ತಿನಿಸು ಸಿಕ್ಕಿರಲಿಲ್ಲ, ಇದನ್ನೇ ಯೋಚಿಸುತ್ತ ಬರುತ್ತಿರಲಾಗಿ ಏನದು ಯಾರದದು ಕೂಗು? ಓಹೋ ಮಾಧ್ಯಮದವರೇ ? ಕೆಲವಾದರೂ ಒಳ್ಳೆಯ ಕೆಲಸ ನಿಮ್ಮಿಂದ ಆಗುತ್ತಿದೆಯಲ್ಲಾ, ಬಹಳ ಸಂತೋಷ, ಬಹಳ ಸಂತೋಷ!

ಅದೇನು ಟೈಲ್ಸ್ ವ್ಯವಹಾರ ಅಂತೆಲ್ಲಾ ಕೇಳುತ್ತಿರುವಿರಲ್ಲ ಯಾಕೆ? ಟೈಲ್ಸ್ ದುಬಾರಿಯಾಯಿತೇ?
ಅದಲ್ಲವೇ? ಇನ್ನೇನು ವಿಷಯ? ಏನೂ ನೆರೆಪರಿಹಾರ ಕಾಮಗಾರಿ ಜೋರಾಗಿದೆಯೇ? ಅಲ್ಲಲ್ಲ ಹಾಗಾದ್ರೆ ? ನೆರೆಪರಿಹಾರಕ್ಕೆ ಸಂಗ್ರಹಿಸಿದ ಹಣ ಹೆಗ್ಗಣದ ಜರುವಿಗೆ ಬಿದ್ದು ಕಾಣದಾಯಿತೇ? ಅದೂ ಅಲ್ಲ? ಏನ್ ಹೇಳ್ತಿದೀರಾ ನೀವು ನನಗೊಂದೂ ಅರ್ಥವಾಗ್ತಾ ಇಲ್ಲ. ಇರಲಿ ಸ್ವಲ್ಪ ನೀವೇ ಹೇಳೊದನ್ನ ಓದಿ/ನೋಡಿ ತಿಳಿದು ಆಮೇಲೆ ಮಾತಾಡುತ್ತೇನೆ."

" ಸ್ವಾಮೀ ಗುಪ್ತಚಿತ್ರರೇ ನಿಮ್ಮಿಂದ ಸುಧಾರಿಸಲು ಆಗದ ಕೆಲಸ ಇದು, ತಾವು ತಮ್ಮ ರಾಜ್ಯಕ್ಕೆ ಮರಳಬಹುದು"

" ಯಾರೂ ಯಾರದೂ ಮತ್ತೆ ಬಡಬಡಿಸುತ್ತಿರುವುದು ? "

ಮನುಜ ಲೋಕದ ಮಾರಿಹಬ್ಬವನ್ನು ನೋಡಬೇಕು ಎಂದರೆ ಕಾಂಗ್ರೆಸ್ ಪಾಳೆಯಕ್ಕೆ ಬರಬೇಕು. ಇಡೀ ಉತ್ತರ ಕರ್ನಾಟಕದ ಬಹುಭಾಗ ಜಲಾವೃತವಾಗಿರಲು ಒಬ್ಬ ವಿಮಾನದಲ್ಲಿ ಕುಳಿತು ಸಂಚರಿಸಿ ಮಜಾ ತೆಗೆದುಕೊಳ್ಳುತ್ತಾನೆ, ಇನ್ನೊಬ್ಬ ಏಸಿ ಕಾರಿನ ಒಳಗೆ ವೀಡಿಯೋ ನೋಡುತ್ತ ಹರಟುತ್ತಾನೆ, ಮತ್ತೊಬ್ಬ ಮೊಬೈಲ್ ನಲ್ಲಿ ತಾಸುಗಟ್ಟಲೇ ಯಾವುದೋ ರಾಂಗ್ ಕನೆಕ್ಷನ್ ನವಳೊಂದಿಗೆ ಸರಸಸಲ್ಲಾಪದಲ್ಲಿ ತೊಡಗಿರುತ್ತಾನೆ, ಇನ್ಯಾರೋ ಒಬ್ಬ ಕಮಲಕ್ಕೆ ಕೆಸರು ತುಂಬುವುದನ್ನಷ್ಟೇ ಕಾಣುತ್ತಾನೆ! ಇದೆಲ್ಲ ಇಲ್ಲಿನ ’ಕೈ’ಗುಣ! ಹಿಂದೊಮ್ಮೆ ನನಗೆ ನಗುತರಿಸಿದ್ದು ಭಸ್ಮಾಸುರ ಮೋಹಿನಿಯ ಪ್ರಸಂಗ. ಮತ್ತದೇ ಪ್ರಸಂಗ ಮರುಕಳಿಸುತ್ತಿದೆಯೇ ಎಂಬಂತೇ ಕೈಯ ಜನ ತಮ್ಮ ಕೈಯ್ಯನ್ನೇ ತಮ್ಮ ತಲೆಯಮೇಲೆ ಇಟ್ಟು ಕುಣಿಯತೊಡಗಿದ್ದಾರೆ!ಸ್ವಾಮೀ, ಮನುಷ್ಯಮಾತ್ರರು ಸರಿಯಾಗಿ ತಿಂದುಣ್ಣಲೂ ಬೇಸರಪಟ್ಟ ದಿನಗಳು ಆ ಕರಾಳ ನೆರೆಯ ದಿನಗಳು. ಅಂತಹ ಘಟನೆಗಳನ್ನು ಟಿ.ವಿ.ಯಲ್ಲಿ ನೋಡಿದ ಇನ್ನೇನು ಸಾಯುವ ಕಾಲ ಸಮೀಪಿಸಿದ, ಯಾವುದೇ ಆರ್ಥಿಕ ಆದಾಯವಿಲ್ಲದ ಹಣ್ಣು ಹಣ್ಣು ಮುದುಕಿಯರು, ಮುದುಕರು, ಏನೂ ಅರಿಯದ ಮಕ್ಕಳು-ಮರಿಗಳಾದಿಯಾಗಿ ಹಲವು-ಹತ್ತು ಕೈಲಾಗದ ನಮ್ಮ ಜನ ನಮ್ಮದೇ ಬಾಂಧವರನೇಕರು ಕಷ್ಟದಲ್ಲಿದ್ದಾರೆಂದು ಅನ್ನಿಸಿದ ಕ್ಷಣದಿಂದ ತಮ್ಮಿಂದಾದ ರೀತಿಯಲ್ಲಿ ಮೊಗೆದು ಮೊಗೆದು ದಾನಮಾಡಿದಾಗ ಮಧ್ಯದಲ್ಲೇ ತಾವೂ ಅದನ್ನು ತಲ್ಪಿಸುತ್ತೇವೆ ಅಂತ ’ಕೈ’ಯ್ಯೊಡ್ಡಿ ಬೇಡಿದ ಈ ಮಂದಿ ಹಂದಿಗಿಂತ ಕೀಳಾದ ಬದುಕನ್ನು ಬದುಕಬೇಕೆ? ಹಂದಿ ಹೊಲಸನ್ನು ತಿನ್ನುತ್ತದೆ, ಆದರೆ ಅದಕ್ಕಾದರೂ ಒಂದು ನ್ಯಾಯ ನೀತಿ ಧರ್ಮ ಇರಬಹುದು, ಆದರೆ ಈ ’ಕೈ’ಯ್ಯೊಡ್ಡುವ ಜನರಿಗಿಲ್ಲ.

ಗಾದೆ ಹೀಗಿದೆ- ಪರರ ಕಾಲ್ಕೆಳಗೆ ಕೊಳೆಯುವುದನ್ನು ನಾತಬರುತ್ತಿದೆ ಎನ್ನುವ ಜನ ತಮ್ಮ ಕಾಲ ಬುಡದಲ್ಲೇ ಕುಂಬಳಕಾಯಿ ಕೊಳೆತಿದ್ದರೂ ನೋಡುತ್ತಿಲ್ಲ !

ಹೌದೌದು, ಕುಂಬಳಕಾಯಿ ಕೊಳೆತರೆ ಮಾತ್ರ ಅದರಂತ ಕೆಟ್ಟ ನಾತ ಬೇರೆ ಯಾವುದೂ ಇಲ್ಲ ಎನ್ನಬೇಕೇನೋ. ಅದೇ ಮಾತನ್ನು ಜನಪದರು ನಾಣ್ಣುಡಿಯಾಗಿ ಬಳಸಿದರು.


ಏನೇ ಇರಲಿ ರಾಜಕಾರಣದಲ್ಲಿ ಏನೆಲ್ಲಾ ನಡೆಯಬ್ನಹುದು ಎಂಬುದಕ್ಕೆ ಇವತ್ತಿನ ನೆರೆಪರಿಹಾರದ ನಿಧಿಯನ್ನು ಖೊಳ್ಳೆ ಹೊಡೆದಿದ್ದೇ ಅತ್ಯಂತ ಸಕಾಲಿಕ ಉದಾಹರಣೆ. ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದರೂ ಮುಖವಡಿಯಾಗಿ ಬಿದ್ದರೂ ಮೂಗಿಗೆ ಏನೂ ಆಗಿಲ್ಲವೆಂಬಂತೆ ಒರೆಸಿಕೊಳ್ಳುತ್ತಿರುವ ’ಕೈ’ಗಳು ಮತ್ತೆ ಯಾವ ಹೊಸ ಮಾರ್ಗದಿಂದ ಇಲ್ಲಿಂದ ಪಾರಾಗಬಹುದು ಎಂದು ಯೋಚಿಸುತ್ತಿರಬಹುದೇ ? ಅಷ್ಟಾಗಿ ಯಾವ ರೀತಿ, ನೀತಿ,ರಿವಾಜು ಇಲ್ಲದ ಜನರಿಗೆ ತಪ್ಪಿಸಿಕೊಳ್ಳಲು ಮಾರ್ಗ ಬೇರೆ ಬೇಕೆ? ಏನನ್ನೂ ಮಾಡಲು ಹೇಸದ, ಅಧಮರನ್ನು ನಮ್ಮ ಮುಂದಾಳುಗಳೆಂದು ನಾವು ಭಾವಚಿತ್ರ.ಭಿತ್ತಿಚಿತ್ರ ರೂಪದಲ್ಲಿ ಅಂಟಿಸುತ್ತ ಜೈಕಾರ ಹಾಕುವಾಗ ಕಾಣದ ’ಕೈ’ಗಳು ಯಾವ್ಯಾವ ಕೆಲಸಮಾಡುತ್ತವೆ ಎಂಬ ಒಂದೇ ಒಂದು ಸುಳಿವಾದರೂ ನಮಗೆ ಸಿಕ್ಕೀತೆ? ಅಥವಾ ಜನತಂತ್ರದಲ್ಲಿ ತಂತ್ರಗಾರಿಕೆಯ ಅರ್ಥವೇ ಆಗದ ಮುಗ್ಧ,ಸ್ನಿಗ್ಧ, ನಿಷ್ಕಪಟ ಮನೋಭಾವದ ಜನ ನಾವು ಅತಂತ್ರರಾಗಲು ಇಂತಹ ಕೆಲವೇ ಕೆಲವು ’ಕೈ’ಗಳು ಸಾಕಲ್ಲವೇ? ಜೀವನದಲ್ಲೇ ಸುಳ್ಳು ಎಂಬ ಪದವನ್ನು ಹೊಡೆದುಹಾಕಿ ಅದರ ಬದಲಿಗೆ ಅದರಮೇಲೆ ಬಿಳಿಯ ಬಣ್ಣ ಹಚ್ಚಿ ಅದರ ಮೇಲೆ ಸತ್ಯ ಎಂಬ ಶಬ್ಧವನ್ನು ಬಳಸಿಕೊಳ್ಳುವ ’ಕೈ’ಗಳು ಎಲ್ಲವೂ ಸತ್ಯ ಎಂಬ ಧೋರಣೆಯಿದ್ದವರಗಿದ್ದರೆ ಈಗ ಅದೇ ಸತ್ಯ ಎಂಬ ಶಬ್ಧವನ್ನು ನೆರೆಪರಿಹಾರ ನಿಧಿಯವಿಷಯದಲ್ಲಿ ಯಾವ ರೀತಿ ಬಳಸಿಯಾರು ?

ಸರಿಯಾದ ನಾಥರಿಲ್ಲದೇ ಆನಾಥವಾಗಿದೆ ದೇಶ್ ಅಂದರೆ ತಪ್ಪೆ? ಇದಕ್ಕೆಲ್ಲ ನಮ್ಮ ಅಸಮರ್ಪಕ ಹಳೆಯ ತಿದ್ದುಪಡಿಯಾಗದ ಸಂವಿಧಾನವೇ ಕಾರಣವಲ್ಲವೇ ? ಬುದ್ದುಗಳು ನಾವು! ಲಬೋ ಲಬೋ ಎಂದು ಬಾಯಿ ಬಡಿದುಕೊಳ್ಳುವುದಷ್ಟೇ ಗೊತ್ತು ನಮಗೆ ಬಿಟ್ಟರೆ, ಧೂರ್ತರಾಜಕರಣಿಗಳನ್ನು, ಬ್ರಷ್ಟರನ್ನು ಮಟ್ಟಹಾಕುವ ತಾಕತ್ತು, ಆಡ್ಯತೆ, ಸಾಮರ್ಥ್ಯ ನಮ್ಮಲ್ಲಿದೆಯೇ ? ನೆತ್ತಿಯ ಮೇಲೆ ಕೂತ ಕಾಗೆ ಕಿವಿಯ ಉಣ್ಣಿಯನ್ನು ಕಚ್ಚಿ ತಿನ್ನುವ ನೆಪದಲ್ಲಿ ನಮ್ಮದೇ ನೆತ್ತರು ಹೀರುವಾಗ ಕಣ್ಮುಚ್ಚಿ ಮಲಗುವ ನನ್ನ ದೇಶ ಬಾಂಧವಏ ಇನ್ನಾದರೂ ನಾವು ಎಚ್ಚೆತ್ತುಕೊಂಡು ಬಾಳ್ವೆ ನಡೆಸಲು ಸಾಧ್ಯವೇ? ಹಗಲುಗಳ್ಳರನ್ನು, ಅಸಾಧ್ಯ ಹೊಟ್ಟೆಯ ಹೆಗ್ಗಣಗಳನ್ನು ಹಿಡಿದು ಹೊಡೆಯಲು ಸಾಧ್ಯವೇ ?

ಹೋಗಲಿ ಬಿಡಿ ಹಾಡಾದರೊ ಹಾಡೋಣ--

[ಈ ದೇಹದಿಂದ ದೂರವಾದೆ ಏಕೆ ಆತ್ಮನೆ ಹಾಡಿನ ರಾಗದಲ್ಲಿ]


ಸಹಾಯ ’ಹಸ್ತ’!

ಈ ಡಬ್ಬಿಯಿಂದ ದೂರಹೋದೆ ಕಾಂಚಾಣವೇ
ಈ ಮಾಯ ನ್ಯಾಯವೇ ? ಈ ಮಾಯ ನ್ಯಾಯವೇ?

ಬೆಂಗಳೂರು ಮಂಗಳೂರಲೆಲ್ಲ ಸುತ್ತುತಾ
ತಿಂಗಳಾರು ದಿನದಿ ನಿನ್ನ ಹೊತ್ತುನಡೆದೆವು
ಅಂಗಳದಲಿ ನೆರೆಯು ಸೋಕಿ ಮಲಗಿದವರಿಗೆ
ಸಂಘ-ಸಂಸ್ಥೆಗಳೂ ಸೇರಿ ಕೊಟ್ಟ ಕಾಣಿಕೆ
ಈ ಮಾಯ ನ್ಯಾಯವೇ ? ಈ ಮಾಯ ನ್ಯಾಯವೇ?

ಡೀಕೇಸೀ ದೇಸುಪಾಂಡೆ ಸಿದ್ಧರೆಲ್ಲರು
ಹೂಕೋಸು ಕುಯ್ದು ತಂದ ಹಾಗೆ ತಂದರು
ಆಕಾಸು ನಾಕುಜನರ ಮನೆಯದಲ್ಲವೇ?
ಪಿರಕಾಸು ನಮ್ಮ ಜನಕೆ ಬುದ್ಧಿಯಿಲ್ಲವೇ?
ಈ ಮಾಯ ನ್ಯಾಯವೇ? ಈ ಮಾಯ ನ್ಯಾಯವೇ?

ಬಡವರ ಉದ್ಧಾರಕಾಗಿ ಜನಿಸಿ ಬಂದೆವು!
ಗಿಡವನೆಟ್ಟು ಜಗದ ತುಂಬ ಕಾಡ ಬೆಳೆದೆವು!
ಕೊಡಲಿ ಪೆಟ್ಟು ಕೊಡಲು ಸುಮ್ಕೆ ಸುಳ್ಳು ಸುದ್ದಿಯಾ
ಬಿಡುತ ಗಾಳಿಯಲ್ಲಿ ಹಬ್ಬಿಸಿಹರು ಮೂರ್ಖರು
ಈ ಮಾಯ ನ್ಯಾಯವೇ? ಈ ಮಾಯ ನ್ಯಾಯವೇ?

ಕಮಲದಲ್ಲಿ ಕೆಸರು ಕಂಡು ಮೈಯ ಝಾಡಿಸಿ
ವಿಮಲ ವಾದ ಬಾಯಿಗಳಲಿ ಪಾಠಹೇಳಿಸಿ
ಅಮಲಿನಲ್ಲಿ ಹಗಲು ಕಂಡ ಪಾಳು ಬಾವಿಗೆ
ಸುಮಲರೂಪದಲ್ಲಿ ಬೀಳಿಸುತಲಿ ಹೋದೆಯಾ?
ಈ ಮಾಯ ನ್ಯಾಯವೇ? ಈ ಮಾಯ ನ್ಯಾಯವೇ ?

ನೆರೆಯ ಜನರು ಪರಿಪರಿಯಲಿ ಅಳುತ ಕೂತಿರೆ
ಮೊರೆಯ ಹೊಕ್ಕು ಜನತೆಯಲ್ಲಿ ’ಕೈ’ಯ್ಯ ಒಡ್ಡುತ
ಸರಿಯ ಬದುಕು ಕಟ್ಟಿಕೊಡಲು ಸೂರೆ ಹೊಡೆದೆವು
ಮರೆಯ ಕತ್ತಲಲ್ಲಿ ಭರನೆ ಜರುಗಿಸಿಟ್ಟೆವು
ಈ ಮಾಯ ನ್ಯಾಯವೇ ? ಈ ಮಾಯ ನ್ಯಾಯವೇ ?

ಬ್ಯಾಂಕಿನಲ್ಲಿ ಠೇವು ಇಟ್ಟು ಮರಿಯಬೆಳೆಸಲು
ಸಾಂಖ್ಯಯೋಗ ನ್ಯಾಯವನ್ನೇ ಒತ್ತೆ ಇಟ್ಟೆವು
ಟ್ಯಾಂಕು ತುಂಬ ತುಂಬುತಿರಲು ಕುಹಕಮಕ್ಕಳು
ಟ್ಯಾಂಕು ಒಡೆದು ಬೀದಿರಂಪ ಮಾಡಿಬಿಟ್ಟರು
ಈ ಮಾಯ ನ್ಯಾಯವೇ ? ಈ ಮಾಯ ನ್ಯಾಯವೇ ?

7 comments:

  1. ಕವನ ಚೆನ್ನಾಗಿದೆ ಭಟ್ಟರೇ .ನಾವು ಕೊಟ್ಟ ಕಾಸು ನಮೋನ್ನಮಃ !ಯಾರದೋ ದುಡ್ಡು ಎಲ್ಲಮ್ಮನ ಜಾತ್ತ್ರೆ !ಅಂದ ಹಾಗೆ ನನ್ನ ಬ್ಲಾಗಿನಲ್ಲಿ ನೀವೇಕೆ ಕಾಣಿಸಿಕೊಳ್ಳುತ್ತಿಲ್ಲ?
    ಅಪರಾಧಂಗಳ ಮನ್ನಿಸಿ ಬ್ಲಾಗಿಗೆ ಬನ್ನಿ ಪ್ರಭುಗಳೇ.ಧನ್ಯವಾದಗಳು.

    ReplyDelete
  2. Marmikavaada lekhana raajakeeya jana bhuddhi kalitaareye?

    ReplyDelete
  3. ತಮಾಷೆಯೆಂದರೆ, ಕೆಪಿಸಿಸಿ ಯಿಂದ ಯಾರೋ ಆಗದವರು ಈ ವಿಷಯವನ್ನು ಲೀಕ್ ಮಾಡಿದ್ದಾರೆ ಎನ್ನುವುದು ಮನ್ಯ ಪಾಂಡೇಶರ ಬೇಜಾರು. ನನಗೇಕೋ ನಿಮ್ಮ ಮೇಲೆಯೆ ಸಂದೇಹ !:D.

    ಸಕಾಲಿಕವಾಗಿ ಚುಚ್ಚಿದ್ದೀರಿ,ಅದೂ ದಬಾಯಿಸಿಯೇ ಚುಚ್ಚಿದ್ದೀರಿ !.

    ReplyDelete
  4. ಕೆಪಿಸಿಸಿಗೆ ಕವನಪ್ರಹಾರ ಮಾಡಿಬಿಟ್ಟಿದ್ದೀರಿ!

    ReplyDelete
  5. ಹ್ಹ ಹ್ಹ ಹ್ಹಾ.........
    ಎಷ್ಟಾದರೂ ಮರ್ಯಾದೆ ಬಿಟ್ಟವರಲ್ಲವೇ? ಗಾಧೆಯೇ ಇಲ್ಲವೇ "ಮೂರು ಬಿಟ್ಟವ ಊರಿಗೆ ದೊಡ್ಡವ" ಅಂತ!
    ಎಲ್ಲಾ ತಿಂದು ತೇಗಿದ ಮೇಲೆ ಏನೇನೋ ಕಕ್ಕುತ್ತಿದ್ದಾರೆ ನಮ್ಮ 'ಕೈ'ಗಣ್ಯರು!
    ಉತ್ತಮ ಲೇಖನ......

    ReplyDelete
  6. ಹ ಹ ಹ
    ಸರ್, ತುಂಬಾ ಚೆನ್ನಾಗಿ ಬರೆದಿದ್ದಿರಾ

    ReplyDelete
  7. ಸಕಾಲಿಕ ಅಭಿಪ್ರಾಯಗಳನ್ನು ಕೊಟ್ಟ ಸರ್ವಶ್ರೀ ಡಾ.ಕೃಷ್ಣಮೂರ್ತಿ, ಸೀತಾರಾಮ್, ಸುಬ್ರಹ್ಮಣ್ಯ, ಸುಧೀಂಧ್ರ ದೇಶಪಾಂಡೆ, ಪ್ರವೀಣ್, ಡಾ| ಗುರುಮೂರ್ತಿ ತಮಗೆಲ್ಲರಿಗೂ ಧನ್ಯವಾದಗಳು, ಡಾ| ಕೃಷ್ಣಮೂರ್ತಿಯವರೇ ನಾನು ಕೆಲಸದ ಒತ್ತಡದಲ್ಲಿ ಇತ್ತೇಚೆಗೆ ಬಹಳ ಸಮಯ ಕಳೆದುಕೊಳ್ಳುತ್ತಿರುವುದರಿಂದ ನನಗೆ ಎಲ್ಲರ ಬ್ಲಾಗ್ ಗಳಿಗೆ ಬರಲಾಗಲಿಲ್ಲ, ಖಂಡಿತ ಬರುತ್ತೇನೆ, ನಮಸ್ಕಾರಗಳು

    ReplyDelete